Subscribe to Updates
Get the latest creative news from FooBar about art, design and business.
- ಅಶ್ಲೀಲ ವಿಡಿಯೋ ನೋಡಿ ಅದೇ ರೀತಿ ಮಾಡಲು ಪೀಡಿಸುತ್ತಿದ್ದ ‘ಸೈಕೋ’ ಪತಿ; ಪೊಲೀಸ್ ಮೆಟ್ಟಿಲೇರಿದ ಪತ್ನಿ!
- ಬೆಂಗಳೂರು: ಬಯೋಕಾನ್ ಕಂಪನಿಯ 5ನೇ ಮಹಡಿಯಿಂದ ಬಿದ್ದು ಉದ್ಯೋಗಿ ಸಾವು
- ತುಮಕೂರು ಮಹಾನಗರ ಪಾಲಿಕೆಗೆ 14 ಗ್ರಾಮ ಪಂಚಾಯಿತಿಗಳ ಸೇರ್ಪಡೆ: ಸಚಿವ ಸಂಪುಟದಿಂದ ಅನುಮೋದನೆ
- ಬೀದರ್: ಸಂತಪುರ ಸರ್ಕಾರಿ ಆಸ್ಪತ್ರೆಯಲ್ಲಿ ಯಶಸ್ವಿ ರಕ್ತದಾನ ಶಿಬಿರ — ಜೀವ ಉಳಿಸುವ ಕಾರ್ಯಕ್ಕೆ ಚಾಲನೆ
- ಕನ್ನಡ ಸಾಹಿತ್ಯ ಸಮ್ಮೇಳನ ಕರುನಾಡ ಬೆಳವಣಿಗೆಗೆ ದಿಕ್ಸೂಚಿ: ಸಚಿವ ಡಾ.ಜಿ. ಪರಮೇಶ್ವರ್
- ಹೊಸ ವರ್ಷಾಚರಣೆ: ಮಹಿಳೆಯರ ಸುರಕ್ಷತೆ ಮತ್ತು ಭದ್ರತೆಗೆ ಸಿಎಂ ಸಿದ್ದರಾಮಯ್ಯ ಕಟ್ಟುನಿಟ್ಟಿನ ಸೂಚನೆ
- ಎತ್ತಿನಹೊಳೆ ಯೋಜನೆ ಬಗ್ಗೆ ಅಸೂಯೆ: ಕೇಂದ್ರ ಸರ್ಕಾರದಿಂದ ಅಡ್ಡಿ: ಮುರಳೀಧರ ಹಾಲಪ್ಪ ಕಿಡಿ
- ತುರುವೇಕೆರೆ | ಕುಡಿಯುವ ನೀರಿಗಾಗಿ ಗ್ರಾಪಂ ಎದುರು ಪ್ರತಿಭಟನೆ
Author: admin
ಶಿವಮೊಗ್ಗ: ಸಿದ್ದರಾಮಯ್ಯ ಅವರ ಆಡಳಿತ ವೈಖರಿಯ ಬಗ್ಗೆ ಆಡಳಿತ ಪಕ್ಷದ ಶಾಸಕರಿಗೇ ವಿಶ್ವಾಸವಿಲ್ಲದಂತಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಟೀಕಿಸಿದ್ದಾರೆ. ಶಿವಮೊಗ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ 15 ಬಾರಿ ಬಜೆಟ್ ಮಂಡಿಸಿದ ಅನುಭವವಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತದಲ್ಲಿ ಹಣಕಾಸು ವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ಅಭಿವೃದ್ಧಿ ಮಾತು ದೂರವಾಗಿದೆ. ಜೊತೆಗೆ ಮುಖ್ಯಮಂತ್ರಿ ಬದಲಾವಣೆಯ ಮಾತುಗಳೂ ಕೇಳಿ ಬಂದಿವೆ ಎಂದಿದ್ದಾರೆ. ಕಾನೂನು ಸುವ್ಯವಸ್ಥೆ ಕುಸಿದಿದೆ. ಮಂಗಳೂರು, ಶಿವಮೊಗ್ಗ ಸೇರಿದಂತೆ ಹಲವು ಕಡೆ ಅಹಿತಕರ ಘಟನೆಗಳು ನಡೆಯುತ್ತಿದ್ದರೂ, ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ರಾಜ್ಯ ಸರ್ಕಾರದ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸುವುದಾಗಿ ಅವರು ಹೇಳಿದ್ದಾರೆ. ಹಾಸನ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಹೃದಯಾಘಾತದಿಂದ ಸಾವು ಸಂಭವಿಸುತ್ತಿದ್ದರೂ, ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗೆ ಭೇಟಿ ನೀಡದಿರುವುದು ಖಂಡನಾರ್ಹ. ಇಂತಹ ಸೂಕ್ಷ್ಮ ಪ್ರಕರಣಗಳಲ್ಲಿ ರಾಜ್ಯ ಸರ್ಕಾರ ಜವಾಬ್ದಾರಿಯುತವಾಗಿ ವರ್ತಿಸಬೇಕಾಗಿದೆ ಎಂದು ತಿಳಿಸಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ…
ಬೀದರ್ : ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶದಂತೆ ಎಲ್ಲಾ ನ್ಯಾಯಾಲಯಗಳಲ್ಲಿ ಡಾ.ಅಂಬೇಡ್ಕರ್ ಅವರ ಫೋಟೋ ಅಳವಡಿಸಬೇಕು ಎಂದು ಭಾರತೀಯ ದಲಿತ್ ಪ್ಯಾಂಥರ್ ಮನವಿ ಮಾಡಿದೆ. ಹುಮನಾಬಾದ್ ತಹಶೀಲ್ದಾರ್ ಅವರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಕರ್ನಾಟಕ ಉಚ್ಚ ನ್ಯಾಯಾಲಯವು ಡಾ.ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸುವುದಕ್ಕಾಗಿ ಎಲ್ಲಾ ನ್ಯಾಯಾಲಯಗಳಲ್ಲಿ ಡಾ.ಅಂಬೇಡ್ಕರ್ ಅವರ ಫೋಟೋ ಅಳವಡಿಸಬೇಕು ಎಂದು ಆದೇಶ ಹೊರಡಿಸಿದೆ. ಆದರೆ ಕೆಲವೊಂದು ನ್ಯಾಯಾಲಯಗಳಲ್ಲಿ ಡಾ.ಅಂಬೇಡ್ಕರ್ ಅವರ ಫೋಟೋ ಹಾಕಿರುವುದಿಲ್ಲ ಎಂದು ಆರೋಪಿಸಲಾಗಿದೆ. ಉಚ್ಚ ನ್ಯಾಯಾಲಯದ ಆದೇಶದಂತೆ ಡಾ.ಅಂಬೇಡ್ಕರ್ ಅವರ ಫೋಟೋ ಎಲ್ಲಾ ನ್ಯಾಯಾಲಯಗಳ ಜೊತೆಗೆ ಹುಮನಾಬಾದ್ ನ್ಯಾಯಾಲಯದಲ್ಲಿಯೂ ಕೂಡ ಹಾಕುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ. ಈ ಸಂದರ್ಭದಲ್ಲಿ ಭಾರತೀಯ ದಲಿತ್ ಪ್ಯಾಂಥರ್ ನ ತಾಲೂಕು ಅಧ್ಯಕ್ಷ ಗಣಪತಿ ಅಷ್ಟೂರೆ, ಉಪಾಧ್ಯಕ್ಷ ಸಿದ್ದಾರ್ಥ್ ಜಾನವೀರ್, ಸುನಿಲಕುಮಾರ್ ಭೋಲಾ, ವಿಶಾಲ್ ಸಿಂಧನಕೇರಾ, ಗೌತಮ್ ಜಾನವೀರ್, ಅನಂತ್ ಮಾಳಗೆ, ವಿಠಲ್ ಶಿವನಾಯಕ್, ಆಕಾಶ್, ದಶರಥ್ ದಾಂಡೇಕರ್, ರಾಹುಲ್, ಗೌತಮ್ ಮೊಳಕೇರಾ, ಮಾಣಿಕ್ ಮೇಟಿ ಹಾಗೂ ಸಾಗರ್ ಸೇರಿದಂತೆ…
ರಾಯಚೂರು: ಮೊಹರಂ ಆಚರಣೆ ವೇಳೆ ಅಗ್ನಿ ಕುಂಡದಲ್ಲಿ ಬಿದ್ದ ಯುವಕನೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಲಿಂಗಸೂಗೂರು ತಾಲ್ಲೂಕಿನಲ್ಲಿ ನಡೆದಿದೆ. ಹನುಮಂತ ಯರಗಂಟಿ (33) ಗಾಯಗೊಂಡ ಯುವಕನಾಗಿದ್ದು, ದರ್ಗಾದ ಮುಂದೆ ಕೆಂಡ ಹಾಯಲು ಸಿದ್ಧಪಡಿಸಲಾದ ಅಗ್ನಿ ಕುಂಡದಲ್ಲಿ ಕಟ್ಟಿಗೆಗಳನ್ನು ಹಾಕಿ ಬೆಂಕಿ ಹಚ್ಚಲಾಗಿತ್ತು. ಈ ವೇಳೆ ಹನುಮಂತ ಬೆಂಕಿಗೆ ಬಿದ್ದಿದ್ದಾನೆ. ಪರಿಣಾಮವಾಗಿ ಬೆಂಕಿಯಿಂದ ದೇಹ ಸುಟ್ಟು ಹೋಗಿದೆ. ತಕ್ಷಣ ಸ್ಥಳದಲ್ಲಿದ್ದವರು ಆತನ ನೆರವಿಗೆ ಧಾವಿಸಿದ್ದು, ರಕ್ಷಿಸಲು ಹರಸಾಹಸ ಪಟ್ಟಿದ್ದಾರೆ. ಬಳಿಕ ಗಾಯಾಳುವನ್ನು ಲಿಂಗಸೂಗೂರು ತಾಲೂಕ್ ಆಸ್ಪತ್ರೆಗೆ, ತದನಂತರ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆತ ಸಾವು- ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ ಎಂದು ತಿಳಿದುಬಂದಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
ಮಂಡ್ಯ: ವಿಶ್ವೇಶ್ವರಯ್ಯ ಕಾಲುವೆಯ ಸೇತುವೆಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿದ್ದ ಇಬ್ಬರು ವ್ಯಕ್ತಿಗಳು ಸಾವಿಗೀಡಾಗಿದ್ದಾರೆ. ಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ಮಧ್ಯಾಹ್ನ 2.30ರ ಸುಮಾರಿಗೆ ಈ ಘಟನೆ ನಡೆದಿದೆ. ಪೊಲೀಸರ ಪ್ರಕಾರ, ಬೈಕ್ ನಲ್ಲಿ ಇಬ್ಬರು ತಮ್ಮ ಗ್ರಾಮಕ್ಕೆ ಹಿಂತಿರುಗುತ್ತಿದ್ದರು. ಸೇತುವೆ ದಾಟುವಾಗ ಸವಾರನ ನಿಯಂತ್ರಣ ತಪ್ಪಿ ಬೈಕ್ ರೇಲಿಂಗ್ ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಇಬ್ಬರೂ ಕಾಲುವೆಗೆ ಬಿದ್ದಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಮರಣೋತ್ತರ ಪರೀಕ್ಷೆಯ ನಂತರ ಶವಗಳನ್ನು ಅವರ ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
ಬೆಂಗಳೂರು: ಹೃದಯಾಘಾತಕ್ಕೆ ಕೋವಿಡ್ ಲಸಿಕೆ ನೇರ ಕಾರಣ ಅಲ್ಲ ಅಂತ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಹೃದಯಾಘಾತ ಕುರಿತು ಸಮೀಕ್ಷೆ ನಡೆಸಿದ ತಾಂತ್ರಿಕ ಸಲಹಾ ಸಮಿತಿಯಿಂದ ವರದಿ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ಕೋವಿಸ್ ಲಸಿಕೆಯಿಂದ ಹೃದಯಾಘಾತ ಎನ್ನುವ ಆರೋಪವನ್ನು ತಳ್ಳಿಹಾಕಿದ್ದಾರೆ. ಕೋವಿಡ್ ಲಸಿಕೆ ಹೃದಯಾಘಾತಕ್ಕೆ ನೇರ ಕಾರಣ ಅಲ್ಲ. ಮಧುಮೇಹ, ಕೊಬ್ಬು ಸೇರಿದಂತೆ ಅನೇಕ ಅಡ್ಡ ಪರಿಣಾಮಗಳು ಹೃದಯಾಘಾತಕ್ಕೆ ಕಾರಣ ಆಗಿವೆ ಎಂದಿದ್ದಾರೆ. ರಕ್ತದೊತ್ತಡ, ಶುಗರ್, ದಪ್ಪ ಆಗಿರೋದು, ದೈಹಿಕ ಚಟುವಟಿಕೆ ಇಲ್ಲದೇ ಇರೋದು. ಹೃದಯಾಘಾತ ಹೆಚ್ಚಾಗೋದಕ್ಕೆ ಕಾರಣ ಆಗಿದೆ. ಜನರ ಜೀವನ ಶೈಲಿ ಕೂಡ ಹೃದಯಾಘಾತಕ್ಕೆ ಕಾರಣ ಆಗಿದೆ. ಕೊವಿಡ್ ಲಸಿಕೆಯಿಂದ ನೇರವಾಗಿ ಕಾರಣ ಅಲ್ಲ ಎಂದು ಹೇಳಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
ಬೆಂಗಳೂರು: ಕಾಂಗ್ರೆಸ್ ಹೈಕಮಾಂಡ್ ನಮಗೆ ದೇವಸ್ಥಾನ ಇದ್ದ ಹಾಗೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ. ಎರಡು ದಿನಗಳ ದೆಹಲಿ ಪ್ರವಾಸದ ಹಿನ್ನೆಲೆ ವಿಧಾನಸೌಧದಲ್ಲಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ಹೈಕಮಾಂಡ್ ನಮಗೆ ದೇವಸ್ಥಾನ ಇದ್ದ ಹಾಗೆ, ಸಮಯ ಸಿಕ್ಕರೆ ಹೈಕಮಾಂಡ್ ಭೇಟಿಯಾಗಿ ಅವರಿಗೆ ಕೈ ಮುಗಿದು ಬರುತ್ತೇನೆ ಎಂದರು. ಇನ್ನೂ ಎತ್ತಿನಹೊಳೆ ಯೋಜನೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಅವರು, ಕೇಂದ್ರ ಅರಣ್ಯ ಸಚಿವರನ್ನು ಭೇಟಿಯಾಗಬೇಕು. ತುಮಕೂರು ಮತ್ತು ಹಾಸನ ವಿಚಾರದಲ್ಲಿ ಕೇಂದ್ರ ಅನುಮತಿ ಕೊಡಬೇಕಿದೆ. ಈ ವಿಷಯದ ಕುರಿತು ಚರ್ಚೆಗೆ ಅವಕಾಶ ಕೊಟ್ಟಿದ್ದಾರೆ. ಅರಣ್ಯ ಸಚಿವರ ಜೊತೆ ಕೇಂದ್ರ ಜಲ ಸಂಪನ್ಮೂಲ ಸಚಿವರು ಸಮಯ ಕೊಟ್ಟಿದ್ದಾರೆ. ಅವರ ಜೊತೆಗೂ ಚರ್ಚೆ ಮಾಡುತ್ತೇನೆ ಎಂದು ತಿಳಿಸಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
ತುಮಕೂರು: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿಯಿಂದಲೇ ಪತ್ನಿ ಬರ್ಬರವಾಗಿ ಕೊಲೆಯಾಗಿರೋ ಘಟನೆ ತುಮಕೂರಿನ ಹೊರವಲಯದ ಅಂತರಸನಹಳ್ಳಿ ಬಳಿ ನಡೆದಿದೆ. ಮಂಡ್ಯ ಜಿಲ್ಲೆಯ ಗಣನೂರು ಗ್ರಾಮದ ಗೀತಾ (20) ಕೊಲೆಯಾದ ಮಹಿಳೆಯಾಗಿದ್ದಾರೆ. ಪತಿ ನವೀನ್ ಪತ್ನಿ ಗೀತಾಳನ್ನ ಕೊಲೆ ಮಾಡಿದ್ದಾನೆ. ಕುತ್ತಿಗೆ, ಮುಖ ಹಾಗೂ ಇತರೆ ಭಾಗಗಳಿಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ನಿನ್ನೆ ರಾತ್ರಿ ಕೌಟುಂಬಿಕ ಕಲಹದ ಕಾರಣ ಕೊಲೆಯಾಗಿದೆ ಎನ್ನಲಾಗಿದೆ. ನವೀನ್, ತುಮಕೂರು ತಾಲ್ಲೂಕಿನ ಅಮೃತಗಿರಿಯ ವಾಸಿಯಾಗಿದ್ದಾನೆ. ಅಂತರಸನಹಳ್ಳಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ಇಬ್ಬರು ವಾಸ ಮಾಡ್ತಿದ್ರು. ನವೀನ್ ಅಂತರಸನಹಳ್ಳಿ ತರಕಾರಿ ಮಾರುಕಟ್ಟೆಯಲ್ಲಿ ಕೆಲಸ ಮಾಡ್ತಿದ್ದನು. 2 ವರ್ಷದ ಹಿಂದೆ ಇಬ್ಬರಿಗೂ ಅಂತರ್ಜಾಲದಲ್ಲಿ ಪರಿಚಯ ಆಗಿ ಮದುವೆ ಆಗಿದ್ರು. ಪತಿ–ಪತ್ನಿ ನಡುವೆ ಆಗಾಗ ಗಲಾಟೆ ನಡೆಯುತ್ತಿತ್ತು. ಕಳೆದ ರಾತ್ರಿ ಗಲಾಟೆ ತಾರಕಕ್ಕೇರಿ ಮನೆಯಲ್ಲೇ ಕೊಲೆಯಾಗಿದೆ. ಈ ಸಂಬಂಧ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ…
ತುಮಕೂರು: ಕಳೆದ ನಾಲ್ಕು ತಿಂಗಳಿನಿಂದ ಗ್ರಾಮಸ್ಥರಲ್ಲಿ ಭಯಭೀತಿಗೊಳಿಸಿದ್ದ ಚಿರತೆ ಬೆಳಗಿನ ಜಾವ ಅರಣ್ಯ ಇಲಾಖೆ ಇರಿಸಿದ್ದ ಬೋನಿನಲ್ಲಿ ಸೆರೆಯಾಗಿರುವ ಘಟನೆ ತುಮಕೂರು ಜಿಲ್ಲೆಯ ತಿಪಟೂರು ತಾಲೂಕು ಕರಿಕೆರೆ ಮಜುರೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸುತ್ತಮುತ್ತಲು ಜನಜಾನುವಾರುಗಳ ಮೇಲೆ ದಾಳಿ ನಡೆಸುತ್ತಿದ್ದ ಮೂರು ಚಿರತೆಗಳ ಪೈಕಿ ಒಂದು ಚಿರತೆ, ಬೋನಿಗೆ ಬಿದ್ದಿದೆ. ಗ್ರಾಮಸ್ಥರ ಮನವಿ ಮೇರೆಗೆ ಅರಣ್ಯ ಇಲಾಖೆಯು ಅಂಚೆಕೊಪ್ಪಲು ಗ್ರಾಮದ ತೋಟದ ಸಾಲಿನಲ್ಲಿ ಬೋನನ್ನು ಇಡಲಾಗಿತ್ತು. ಆದರೆ ಸುಮಾರು ನಾಲ್ಕೈದು ದಿನ ಆದರೂ ಚಿರತೆಯ ಬೋನಿಗೆ ಬಿದ್ದಿರಲಿಲ್ಲ. ಇದರಿಂದಾಗಿ ಗ್ರಾಮಸ್ಥರು ಬೊನನ್ನು ಗ್ರಾಮದೊಳಗೆ ತಂದು ಇಟ್ಟಿದ್ದರು. ಮೂರು ದಿನಗಳ ನಂತರ ಇಂದು ಬೆಳಗಿನ ಜಾವ ಚಿರತೆ ಸೆರೆಯಾಗಿದೆ. ಚಿರತೆ ಬಿದ್ದ ಬೋನಿಗೆ ಸುತ್ತಮುತ್ತಲಿನ ಗ್ರಾಮದ ಗ್ರಾಮಸ್ಥರು ಬೆಳಗ್ಗೆಯಿಂದಲೇ ಚಿರತೆಯನ್ನು ನೋಡಲು ಸಾಗರೋಪಾದಿಯಲ್ಲಿಆಗಮಿಸಿದ್ದರು. ಇನ್ನೂ ಎರಡು ಚಿರತೆಗಳು ಜನರ ಕಣ್ಣಿಗೆ ಕಂಡಿದ್ದು ಹಾಗಾಗಿ ಭಯದ ವಾತಾವರಣವು ಸಹ ಮೂಡಿದೆ. ಟಗರು ಕುರಿ ಬಾತುಕೋಳಿ ಕೋಳಿಯನ್ನು ತಿಂದಿದ್ದ ಚಿರತೆ ದಾಳಿಯಿಂದ ಗ್ರಾಮಸ್ಥ ಮಂಜುನಾಥ್ ಎಂಬವರಿಗೆ…
ಕೊಪ್ಪಳ: ‘ನಿಮಗೆ ಗ್ಯಾರಂಟಿ ಯೋಜನೆಯ ಅಕ್ಕಿ ಬ್ಯಾಡ ಅಂದರೆ ಆ ಹಣದಲ್ಲಿ ರಸ್ತೆ ಅಭಿವೃದ್ಧಿ ಮಾಡೋಣ. ನಿಂಗೆ ಉತ್ತಮ ರಸ್ತೆಗಳು ಬೇಕು ಅಂದರೆ ಅಕ್ಕಿ ಸೇರಿದಂತೆ ಎಲ್ಲವೂ ನಿಲ್ಲುತ್ತವೆ ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಹೇಳಿಕೆ ನೀಡಿದ್ದಾರೆ. ಕೊಪ್ಪಳದ ಕುಕನೂರು ತಾಲೂಕಿನ ರ್ಯಾವಣಿಕದಲ್ಲಿ ಪ್ರೌಢಶಾಲಾ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಈ ಹೇಳಿಕೆ ನೀಡಿರುವುದಾಗಿ ವರದಿಯಾಗಿದೆ. ನಮ್ಮ ಹೊಲಕ್ಕೆ ಹೋಗುವ ರಸ್ತೆ ಮಾಡಿಕೊಡಿ ಎಂಬ ಮನವಿಯೊಂದಕ್ಕೆ ಬಸವರಾಜ ರಾಯರೆಡ್ಡಿ ಈ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಇದೀಗ ಬಸವರಾಜ ರಾಯರೆಡ್ಡಿ ಅವರ ಮಾತುಗಳು ವಿಪಕ್ಷಗಳು ಸರ್ಕಾರದ ಮೇಲೆ ಮುಗಿಬೀಳಲು ದಾರಿ ಮಾಡಿಕೊಟ್ಟಿದೆ. ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿ ತಂದ ನಂತರ ರಾಜ್ಯದಲ್ಲಿ ಅಭಿವೃದ್ಧಿ ಎಂಬುದು ಮರೀಚಿಕೆಯಾಗಿದೆ. ಅಲ್ಲದೆ ಹಲವು ಬಾರಿ ಹಲವು ಶಾಸಕರು ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವ ಮಾತುಗಳನ್ನು ಆಡಿದ್ದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್…
ಸರಗೂರು: ರಾಜ್ಯದಲ್ಲಿ ಜಾತಿಗಣತಿ ಸಮೀಕ್ಷೆ ಮಾಡುತ್ತಾ ಬಂದಿದ್ದಾರೆ. ಆದ್ದರಿಂದ ನಾವುಗಳು ಶಿವಾರ್ಚಕ ಎಂದು ಜಾತಿ ಗಣತಿಯಲ್ಲಿ ಬರೆಸಬೇಕು ಎಂದು ಶಿವಾರ್ಚಕ ಸಂಘದ ರಾಜ್ಯ ಅಧ್ಯಕ್ಷ ಹಾಗೂ ಸಂಸ್ಕೃತ ಪಾಠಶಾಲೆ ಶೈವಾಗಮ ನಿವೃತ್ತ ಪ್ರಾಧ್ಯಾಪಕ ವಿದ್ವಾನ್ ಎಂ. ಮಲ್ಲಣ್ಣ ಸಮಾಜದವರಿಗೆ ಮನವರಿಕೆ ನೀಡಿದರು. ಪಟ್ಟಣದ ಜೈನ ಭವನದಲ್ಲಿ ಶನಿವಾರದಂದು ಎಚ್.ಡಿ.ಕೋಟೆ ಮತ್ತು ಸರಗೂರು ತಾಲೂಕು ಶಿವಾರ್ಚಕ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಸಂಘದ 2024–25 ನೇ ಸಾಲಿನ 10 ನೇ ವರ್ಷದ ವಾರ್ಷಿಕ ಸಭೆಯಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸಮೀಕ್ಷೆ ಮಾಡುವ ಸಮಯದಲ್ಲಿ ವೀರಶೈವ, ಲಿಂಗಾಯತ ಎಂದು ಬರಿಸಿ ಎಂದು ಹೇಳುತ್ತಾರೆ. ಆದರೆ ನಾವುಗಳು ಅದನ್ನು ಬದಿಗೆ ಸರಿಸಿ ಶಿವಾರ್ಚಕ ಎಂದು ಅವರವರ ಮಾತಿಗೆ ಕಡೆಗೆ ಹೋಗದೆ ಶಿವಾರ್ಚಕ ಎಂದು ಹೇಳಿ ಬರೆಸಬೇಕು ತಿಳಿಸಿದರು. ಈ ಸಮಾಜ ಅಸ್ತಿತ್ವಕ್ಕೆ ಬರಲು ಸುಮಾರು ವರ್ಷಗಳ ಕಾದಿದೆ. ಶಿವಾರ್ಚಕ ಸಮಾಜ ಏಳು ಜಿಲ್ಲೆಯಲ್ಲಿ ಮಾತ್ರ ಇದೆ. ಈ ಸಮಾಜ 1915 ರಲ್ಲಿ ಪ್ರಾರಂಭವಾಗಿದ್ದು, 35 ವರ್ಷದವರೆಗೆ ಸಮಾಜ…