Author: admin

ಸರಗೂರು:  ಪಟ್ಟಣ ತಹಶೀಲ್ದಾರ್ ಕಚೇರಿ ಮುಂಭಾಗದಲ್ಲಿ  ಕರ್ನಾಟಕ ಜೀತದಾಳು ಮತ್ತು ಕೃಷಿ ಕಾರ್ಮಿಕರ ಒಕ್ಕೂಟ ಸರ್ಕಾರ ಫೆ.9 ರಿಂದ 18ರ ತನಕ ಆಚರಿಸುತ್ತಿರುವ ಜೀತಕಾರ್ಮಿಕ ಪದ್ಧತಿ ನಿರ್ಮುಲನಾ ದಿನಾಚರಣೆ ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತಪಡಿಸಿತು. ಇದೇ ವೇಳೆ ಗೇಟ್ 2 ತಹಶೀಲ್ದಾರ್ ಪರಶಿವಮೂರ್ತಿ ಅವರಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು.  ಒಕ್ಕೂಟದ ತಾಲೂಕು ಅಧ್ಯಕ್ಷ ಬಸವರಾಜು ತೆಲುಗು ಮಸಹಳ್ಳಿ ಮಾತನಾಡಿ, ಸಂಘಟನೆಯು ಕರ್ನಾಟಕ ರಾಜ್ಯಾಧ್ಯಂತ ಸುಮಾರು 35 ವರ್ಷಗಳಿಂದ ಸಾಮಾಜಿಕ, ಪಿಡುಗಾದ ಜೀತ ನಿರ್ಮೂಲನೆಗಾಗಿ ಹಗಲಿರುಳು ನಿರಂತರವಾಗಿ ಜಾಗೃತಿ ಮತ್ತು ಸಂಘಟನೆ ಕೆಲಸ ಮಾಡುತ್ತಾ ಬರುತ್ತಿದೆ, ಸಂಘಟನೆಯ ಅವಿರತ ಹೋರಾಟದ ಫಲವಾಗಿ ಮತ್ತು ಸಂಘಟನೆಯ ಪ್ರೇರಣೆಯಿಂದ ಸಾವಿರಾರು ಮಂದಿ ತಾವೇ ಸ್ವತಂತ್ರವಾಗಿ ಜೀತವಿಮುಕ್ತರಾಗಿ ಇಂದು ಸಮಾಜದ ಮುಖ್ಯವಾಹಿನಿಗೆ ಬಂದಿದ್ದಾರೆ.   ಕರ್ನಾಟಕ ಸರ್ಕಾರದ ಜನಪರ ನಿಲುವುಗಳಲ್ಲಿ ಒಂದಾದ ಮತ್ತು ಸಂವಿಧಾನದ ಆಶಯವಾದ 1976 ರ ಜೀತ ಪದ್ಧತಿ ನಿರ್ಮೂಲನೆ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವ ನಿಟ್ಟಿನಲ್ಲಿ ತೆಗೆದುಕೊಂಡ ನಿಲುವುಗಳು ಶ್ಲಾಘನೀಯ ಎಂದರು. ಒಕ್ಕೂಟದ ಉಪಾಧ್ಯಕ್ಷ ಸವಿತಾ…

Read More

ತುಮಕೂರು: ಸಬ್ಸಿಡಿ ರೂಪದಲ್ಲಿ ಸಾಲ ನೀಡುವುದಾಗಿ ಜನರನ್ನು ನಂಬಿಸಿ ಲಕ್ಷಾಂತರ ರೂಪಾಯಿ ವಂಚಿಸುತ್ತಿದ್ದ ದೊಡ್ಡ ಜಾಲವೊಂದನ್ನು ತುಮಕೂರು ನಗರದ ಸೈಬರ್ ಕ್ರೈಂ ಪೊಲೀಸರು ಭೇದಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ ಮಹತ್ವದ ಮಾಹಿತಿಗಳನ್ನು ಕಲೆಹಾಕಲಾಗಿದೆ. ಏನಿದು ಪ್ರಕರಣ? ಬಂಧಿತ ಆರೋಪಿಗಳು ಎಕ್ಸಿಸ್ ಬ್ಯಾಂಕ್ ಹಾಗೂ ಐಸಿಐಸಿಐ ಬ್ಯಾಂಕ್‌ಗಳ ಹೆಸರಿನಲ್ಲಿ ಜನರನ್ನು ಸಂಪರ್ಕಿಸುತ್ತಿದ್ದರು. ತುಮಕೂರಿನ ಒಬ್ಬ ಆರೋಪಿ ಹಾಗೂ ಬೆಂಗಳೂರಿನ ಮತ್ತೊಬ್ಬ ವ್ಯಕ್ತಿ ಸೇರಿ ಈ ಕೃತ್ಯ ಎಸಗುತ್ತಿದ್ದರು. ಬೆಂಗಳೂರಿನ ಆರೋಪಿಯು ಸಾವಿರಾರು ಜನರ ಮೊಬೈಲ್ ಸಂಖ್ಯೆಗಳನ್ನು ಒದಗಿಸುತ್ತಿದ್ದನು. ಈ ಸಂಖ್ಯೆಗಳಿಗೆ ಕರೆ ಮಾಡುತ್ತಿದ್ದ ತುಮಕೂರಿನ ಆರೋಪಿಯು, “ನಿಮಗೆ ಸಬ್ಸಿಡಿ ದರದಲ್ಲಿ ಸಾಲ ಮಂಜೂರಾಗಿದೆ” ಎಂದು ಆಮಿಷ ಒಡ್ಡುತ್ತಿದ್ದನು. ಟೆಲಿ ಕಾಲರ್ ಗಳ ಬಳಕೆ: ಸಾಲದ ಬಗ್ಗೆ ವಿವರಿಸಲು ಆರೋಪಿಗಳು ಮಹಿಳೆಯರನ್ನು ಟೆಲಿ ಕಾಲರ್ ಗಳಾಗಿ ನೇಮಿಸಿಕೊಂಡಿದ್ದರು. ಅವರು ಬ್ಯಾಂಕ್ ಅಧಿಕಾರಿಗಳಂತೆ ಮಾತನಾಡಿ ಜನರನ್ನು ನಂಬಿಸುತ್ತಿದ್ದರು. ಪ್ರಕ್ರಿಯೆ ಶುಲ್ಕದ ಹೆಸರಲ್ಲಿ ಹಣ: ಸಾಲ ಪಡೆಯಲು ಒಪ್ಪಿದವರಿಂದ ಫೈಲ್ ಚಾರ್ಜ್,…

Read More

ತುಮಕೂರು: ರಾಜ್ಯ ರಾಜಕಾರಣದಲ್ಲಿ ಕುತೂಹಲ ಮೂಡಿಸಿರುವ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಕುರಿತಂತೆ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಅವರು ಪ್ರಮುಖ ಹೇಳಿಕೆ ನೀಡಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲೂ ಜೆಡಿಎಸ್ ಜೊತೆಗಿನ ಮೈತ್ರಿ ಮುಂದುವರಿಯಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಶುಕ್ರವಾರ ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ರಾಜ್ಯದ ಹಿತದೃಷ್ಟಿಯಿಂದ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅನಿವಾರ್ಯವಾಗಿದೆ. ಈ ಸಂಬಂಧ ಈಗಾಗಲೇ ನವದೆಹಲಿಯಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಮಾತುಕತೆ ನಡೆಸಲಾಗಿದೆ,” ಎಂದು ತಿಳಿಸಿದರು. ಮೆಟ್ರೊ ದರ ಏರಿಕೆಗೆ ಆಕ್ರೋಶ: ಇದೇ ಸಂದರ್ಭದಲ್ಲಿ ಬೆಂಗಳೂರಿನ ಮೆಟ್ರೊ ಪ್ರಯಾಣ ದರ ಹೆಚ್ಚಳದ ಕುರಿತು ರಾಜ್ಯ ಸರ್ಕಾರದ ವಿರುದ್ಧ ಯಡಿಯೂರಪ್ಪ ವಾಗ್ದಾಳಿ ನಡೆಸಿದರು. “ಈಗಾಗಲೇ ಜನಸಾಮಾನ್ಯರು ಜೀವನ ನಡೆಸಲು ಕಷ್ಟಪಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಮೆಟ್ರೊ ದರ ಏರಿಕೆ ಮಾಡಿರುವುದು ಸರಿಯಲ್ಲ. ಸರ್ಕಾರ ಕೂಡಲೇ ಹೆಚ್ಚಿಸಿರುವ ದರವನ್ನು ವಾಪಸ್ ಪಡೆಯಬೇಕು,” ಎಂದು ಅವರು ಆಗ್ರಹಿಸಿದರು.…

Read More

ಗುಬ್ಬಿ (ತುಮಕೂರು): ತಾಲೂಕಿನ ನಿಟ್ಟೂರು ಹೋಬಳಿಯ ಹಾರನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಚಿರತೆಯೊಂದು ತೆಂಗಿನ ಮರ ಏರಿ ಕುಳಿತು ರೈತರಲ್ಲಿ ತೀವ್ರ ಆತಂಕ ಮೂಡಿಸಿದೆ. ಘಟನೆಯ ವಿವರ: ಶುಕ್ರವಾರ ಬೆಳಿಗ್ಗೆ ಜಮೀನಿನ ಮಾಲೀಕರು ತಮ್ಮ ತೋಟಕ್ಕೆ ಕೆಲಸಕ್ಕೆ ಹೋದ ಸಂದರ್ಭದಲ್ಲಿ ತೆಂಗಿನ ಮರದ ಮೇಲಿದ್ದ ಚಿರತೆಯನ್ನು ಗಮನಿಸಿದ್ದಾರೆ. ತಕ್ಷಣ ಅವರು ಗ್ರಾಮಸ್ಥರಿಗೆ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ತೆಂಗಿನ ಮರದ ಮೇಲೆ ಚಿರತೆ ಕುಳಿತಿರುವ ಸುದ್ದಿ ತಿಳಿಯುತ್ತಿದ್ದಂತೆ ಅಕ್ಕಪಕ್ಕದ ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಲು ಆರಂಭಿಸಿದರು. ಆದರೆ, ಜನರು ಹೆಚ್ಚಿನ ಸಂಖ್ಯೆಯಲ್ಲಿ ಗುಂಪು ಸೇರುವುದರೊಳಗೆ ಚಿರತೆಯು ಮರದಿಂದ ಕೆಳಕ್ಕೆ ಜಿಗಿದು ಪೊದೆಗಳ ಕಡೆಗೆ ಓಡಿ ನಾಪತ್ತೆಯಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಗ್ರಾಮದ ಸುತ್ತಮುತ್ತ ಚಿರತೆ ಸಂಚರಿಸುತ್ತಿರುವುದರಿಂದ ಸ್ಥಳೀಯರಲ್ಲಿ ಭೀತಿ ಮನೆಮಾಡಿದೆ. ಈ ಹಿನ್ನೆಲೆಯಲ್ಲಿ ಚಿರತೆಯನ್ನು ಸೆರೆಹಿಡಿಯಲು ಗ್ರಾಮದ ಆಯಕಟ್ಟಿನ ಜಾಗದಲ್ಲಿ ಅರಣ್ಯ ಇಲಾಖೆಯು ಬೋನು ಇರಿಸಿದೆ. ಗ್ರಾಮಸ್ಥರು ಎಚ್ಚರಿಕೆಯಿಂದ ಇರುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ನಮ್ಮತುಮಕೂರಿನ…

Read More

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆಗಳು ಮತ್ತೆ ಮುನ್ನೆಲೆಗೆ ಬಂದಿದ್ದು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆಗೆ ಮಾರ್ಮಿಕವಾಗಿ ಪ್ರತಿಕ್ರಿಯಿಸಿದ್ದಾರೆ. “ಯತೀಂದ್ರ ಅವರೇ ನಮ್ಮ ಹೈಕಮಾಂಡ್, ಅವರು ಹೇಳಿದ ಮೇಲೆ ಇನ್ನೇನಿದೆ?” ಎಂದು ಶಿವಕುಮಾರ್ ವ್ಯಂಗ್ಯವಾಡಿದ್ದಾರೆ. ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ವದಂತಿಗಳ ನಡುವೆ ಇತ್ತೀಚೆಗೆ ಮಾತನಾಡಿದ್ದ ಯತೀಂದ್ರ ಸಿದ್ದರಾಮಯ್ಯ, “ನಾಯಕತ್ವ ಬದಲಾವಣೆ ಇಲ್ಲವೆಂದು ಹೈಕಮಾಂಡ್ ಈಗಾಗಲೇ ಸ್ಪಷ್ಟಪಡಿಸಿದೆ. ಸದ್ಯಕ್ಕಂತೂ ಮುಖ್ಯಮಂತ್ರಿ ಬದಲಾವಣೆಯ ಯಾವುದೇ ಗೊಂದಲವಿಲ್ಲ,” ಎಂದು ಪ್ರತಿಪಾದಿಸಿದ್ದರು. ಅಲ್ಲದೆ, ಬಿಜೆಪಿ ನಾಯಕರು ವಿನಾಕಾರಣ ತಮ್ಮ ಹೆಸರನ್ನು ರಾಜಕೀಯಕ್ಕೆ ಎಳೆದು ತರುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಯತೀಂದ್ರ ಅವರ ಈ ಹೇಳಿಕೆಯ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, “ಅವರು (ಯತೀಂದ್ರ) ಹೇಳಿರುವುದು ಸರಿಯಿರಬಹುದು. ಅವರೇ ನಮ್ಮ ಪಾಲಿನ ಹೈಕಮಾಂಡ್ ಇದ್ದಂತೆ. ಅವರ ತೀರ್ಮಾನದ ಮೇಲೆ ನಾನು ಮಾತನಾಡುವುದು ಏನೂ ಇಲ್ಲ,” ಎಂದು ಟಾಂಗ್ ನೀಡಿದರು. ಇಕ್ಬಾಲ್ ಹುಸೇನ್ ಬೆಂಬಲ: ಇದೇ ವೇಳೆ…

Read More

ನಾಲಂದಾ/ತುಮಕೂರು: ಕರ್ನಾಟಕದ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಒಂದೇ ಕುಟುಂಬದ ನಾಲ್ವರು ಸದಸ್ಯರು ಬಿಹಾರದ ನಾಲಂದಾ ಜಿಲ್ಲೆಯ ರಾಜಗೀರ್‌ನಲ್ಲಿರುವ ಧರ್ಮಶಾಲೆಯೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಈ ಘಟನೆ ಸ್ಥಳೀಯವಾಗಿ ಮತ್ತು ಕರ್ನಾಟಕದಲ್ಲಿ ತೀವ್ರ ಆಘಾತ ಮೂಡಿಸಿದೆ. ಮೃತರ ವಿವರ: ಮೃತರನ್ನು ಜಿ.ಆರ್. ಸುಮಂಗಲಾ (78), ಅವರ ಮಗ ಜಿ.ಆರ್. ನಾಗಪ್ರಸಾದ್ (50), ಮತ್ತು ಪುತ್ರಿಯರಾದ ಜಿ.ಆರ್. ಶಿಲ್ಪಾ (48) ಹಾಗೂ ಜಿ.ಆರ್. ಶ್ರುತಾ (43) ಎಂದು ಗುರುತಿಸಲಾಗಿದೆ. ಇವರು ಮೂಲತಃ ತುಮಕೂರಿನ ಗುಬ್ಬಿ ತಾಲೂಕಿನವರು ಎಂದು ತಿಳಿದುಬಂದಿದೆ. ಘಟನೆಯ ಹಿನ್ನೆಲೆ: ಈ ಕುಟುಂಬವು ಜನವರಿ 30ರಂದು ನೇಪಾಳ ಪ್ರವಾಸ ಮುಗಿಸಿ ಬಿಹಾರದ ಪವಿತ್ರ ಯಾತ್ರಾ ಸ್ಥಳವಾದ ರಾಜಗೀರ್‌ಗೆ ಆಗಮಿಸಿತ್ತು. ಅಲ್ಲಿನ ಧರ್ಮಶಾಲೆಯೊಂದರಲ್ಲಿ ಕೊಠಡಿ ಬುಕ್ ಮಾಡಿದ್ದರು. ಆದರೆ, ಕಳೆದ ಮೂರು ದಿನಗಳಿಂದ ಕೊಠಡಿಯ ಬಾಗಿಲು ತೆರೆಯದ ಕಾರಣ ಹಾಗೂ ಅಲ್ಲಿಂದ ದುರ್ವಾಸನೆ ಬರಲಾರಂಭಿಸಿದಾಗ ಸಂಶಯಗೊಂಡ ಧರ್ಮಶಾಲೆಯ ವ್ಯವಸ್ಥಾಪಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಶುಕ್ರವಾರ ಬೆಳಿಗ್ಗೆ ಪೊಲೀಸರು ಬಾಗಿಲು ಮುರಿದು ಒಳಹೋದಾಗ…

Read More

ಒಮ್ಮೆ ಏನಾಯಿತೆಂದರೆ, ಒಬ್ಬ ಸನ್ಯಾಸಿ ಜೀವನದಲ್ಲಿ ಸಾಕಷ್ಟು ನೊಂದು ಬೆಂದು ಬೇಸತ್ತು ಹೋಗಿದ್ದನು. ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದನು. ಅವನಿಗೆ ತನ್ನ ಬಂಧು ಬಾಂದವರು ಯಾರೆಂಬುದೇ ಗೊತ್ತಿರಲಿಲ್ಲ. ಆರಕ್ಕೂ ಏರದೇ ಮೂರಕ್ಕೂ ಇಳಿಯದೇ ನೆಲೆ ಇಲ್ಲದೇ ಎಲ್ಲೆಂದರಲ್ಲಿ ಕುಳಿತು ಭಿಕ್ಷಾ ಊಟ ಮಾಡುತ್ತಿದ್ದ ನೆಲೆಯೇ ನೆಲೆಯಾಗಿತ್ತು. ಹೀಗಿರುವಾಗ ಒಂದು ದಿನ ರಾತ್ರಿ ಪಾಳುಬಿದ್ದ ದೇವಸ್ಥಾನದ ಜಗುಲಿ ಮೇಲೆ ಮಲಗಿಕೊಂಡು, ಎರಡೂ ಕೈ ತಲೆಗೆ ಒರಗಿಕೊಂಡು,  ನಾನು ಇನ್ನು ಜೀವನದಲ್ಲಿ ಏನನ್ನೂ ಸಾಧಿಸಲಿಲ್ಲ, ಇನ್ನು ಭಿಕ್ಷಾಟನೆಯಲ್ಲಿಯೇ ಬದುಕುತ್ತಿದ್ದೇನೆ, ಬೇರೆ ಸಾಧು ಸತ್ಪರುಷರು ಹೆಸರು, ಹಣ ಮಾಡುತ್ತಾರೆ ಅದು ಅವರು ಪಡೆದಿರುವ ಅದೃಷ್ಟ ಆಗಿರುತ್ತದೆ, ನನಗೆ ಇಷ್ಟು ವರುಷವಾದರೂ ಅದೃಷ್ಟ ಬಂದಿಲ್ಲವೆಂದರೆ ನನ್ನ ಹಣೆ ಬರಹದ ಪಾಡು ಇಷ್ಟೇ ಆಗಿರುತ್ತದೆ ಎಂದು ಯೋಚಿಸಿ ಇನ್ನು ನಾನು ಬದುಕಿರಬಾರದು ಯಾವುದಾದರೂ ಕೆರೆಗೆ ಬಿದ್ದು ಸಾಯಬೇಕು, ಎಂದು ಯೋಚಿಸಿ ಸೂರ್ಯೋದಯವಾಗುತ್ತಿದ್ದಂತೆ ಅತ್ಯಂತ ಕಠೋರ ಮನಸ್ಸಿನಿಂದ ಕಾಡಿನ ಒಂದು ಕೆರೆಯ ದಂಡೆಯ ಮೇಲೆ ನಡೆಯುತ್ತಾ, ಕೆರೆಗೆ ಹಾರಿ ಬಿಡೋಣ…

Read More

ಶಿರಾ: ಈಡಿಗ ಸಮುದಾಯದ ಕುಲಕಸುಬಾದ ಸೇಂದಿ ಮಾರಾಟವನ್ನು ಈ ಸಮುದಾಯದ ಜೀವನಕ್ಕೆ ಮಾರ್ಗೋಪಾಯಕ್ಕಾಗಿ ಪರ್ಯಾಯ ವ್ಯವಸ್ಥೆ ಮಾಡದೆ ನಿಷೇಧಿಸಿದ್ದು, ಪುನಃ ಈ ಸಮುದಾಯದ ಕುಲಕಸುಬಾದ ಸೇಂದಿ ಮಾರಾಟವನ್ನು ಮುಂದುವರೆಸಲು ಅವಕಾಶ ನೀಡುವಂತೆ ಒತ್ತಾಯಿಸಿ ಕಾನೂನು ಹೋರಾಟ ನಡೆಸುವುದು ಖಚಿತ ಎಂದು ಬ್ರಹ್ಮಶ್ರೀ ನಾರಾಯಣಗುರು ಶಕ್ತಿ ಪೀಠದ ಪ್ರಣವಾನಂದ ಸ್ವಾಮೀಜಿ ಹೇಳಿದರು. ಈಡಿಗ ಜನಾಂಗದ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಚಿತ್ತಾಪುರ ತಾಲ್ಲೂಕಿನ ಕರಗಲ್ಲು ಗ್ರಾಮದ ಬ್ರಹ್ಮಶ್ರೀ ನಾರಾಯಣಗುರು ಶಕ್ತಿ ಪೀಠದಿಂದ ಬೆಂಗಳೂರಿನವರೆಗೆ ಸುಮಾರು 700 ಕಿಮೀ ಪಾದಯಾತ್ರೆಯು ಗುರುವಾರ ಶಿರಾಕ್ಕೆ ಆಗಮಿಸಿತು. ಸಮುದಾಯದ ಮುಖಂಡರು ಹಾಗೂ ಮಾತೆಯರು ಪೂರ್ಣಕುಂಭದೊಂದಿಗೆ ಸ್ವಾಗತಿಸಿದ ನಂತರ ಅವರು ಈಡಿಗ ಜನಾಂಗದ ಜಾಗೃತಿ ಸಭೆಯಲ್ಲಿ ಮಾತನಾಡಿದರು. ಶಿರಾದಿಂದ ಪ್ರಾರಂಭವಾದ ಪಾದಯಾತ್ರೆಯಲ್ಲಿ ಸುಮಂಗಲಿಯರು ಪೂರ್ಣಕುಂಭ ಕಲಶಗಳನ್ನು ಹೊತ್ತು ಸಾಗಿದರು. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಶಿರಾ ಭಾಗದ ಅನೇಕ ಮಂದಿ ಪಾದಯಾತ್ರೆಯಲ್ಲಿ ಪಾಲ್ಗೊಂಡರು. ಗುರುವಾರ ರಾತ್ರಿ ದೊಡ್ಡ ಆಲದಮರದಲ್ಲಿ ತಂಗಿ, ಪಾದಯಾತ್ರೆ ಇಂದು (ಶುಕ್ರವಾರ) ತುಮಕೂರು ತಾಲ್ಲೂಕು ಪ್ರವೇಶಿಸಲಿದೆ. ಪ್ರಣವಾನಂದ…

Read More

ಕೊರಟಗೆರೆ: ರಾಜಕೀಯದ ಸುದೀರ್ಘ ಇತಿಹಾಸದಲ್ಲಿ ಈ ಹಿಂದೆ ಕೋಳಾಲ ಹೋಬಳಿ ಜಿ.ಪಂ. ಸದಸ್ಯನಾಗಿದ್ದ ವೇಳೆಯಿಂದಲೂ ಕೊರಟಗೆರೆ ಕ್ಷೇತ್ರದ ಜನತೆಯ ಪರವಾಗಿ ಕೆಲಸ ಮಾಡಿದ್ದೇನೆ ಎಂದು ಮಾಜಿ ಜಿ.ಪಂ.ಸದಸ್ಯ ಪಿ.ಎನ್. ಕೃಷ್ಣಮೂರ್ತಿ ತಿಳಿಸಿದರು. ತಾಲ್ಲೂಕಿನ ಹೊಳವನಹಳ್ಳಿ ಹೋಬಳಿ ಮಾವತ್ತೂರು ಗ್ರಾ.ಪಂ. ವ್ಯಾಪ್ತಿಯ ಲಿಂಗಾಪುರ ಗ್ರಾಮದಲ್ಲಿ ಶ್ರೀಮಾರಮ್ಮ ದೇವಾಲಯ ಸಮಿತಿಯಿಂದ ಆಯೋಜಿಸದ್ದ ಮಾರಮ್ಮ ದೇವಿ ಉತ್ಸವ ಮೂರ್ತಿ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಬುಧವಾರ ಸಂಜೆ ಪಾಲ್ಗೊಂಡು ದೇವಿಗೆ ಪೂಜೆ ಸಲ್ಲಿಸಿ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು. ನಮ್ಮ ಹಿರಿಯರ ಕಾಲದಿಂದಲೂ ಕ್ಷೇತ್ರದ ಜನತೆ ಪ್ರೀತಿ, ವಿಶ್ವಾಸ ತೋರಿ ಕೈ ಹಿಡಿದು ನಡೆಸಿದ್ದಾರೆ. 2028ಕ್ಕೆ ಕೊರಟಗೆರೆ ಕ್ಷೇತ್ರ ಸಾಮಾನ್ಯ ಮೀಸಲು ಕ್ಷೇತ್ರವಾದರೆ ಇಲ್ಲಿಂದಲೇ ಸ್ಪರ್ಧಿಸಲ್ಲಿದ್ದೇನೆ, ಸೋತರೂ ಗೆದ್ದರು ಎಂದಿಗೂ ನಿಮ್ಮವನೇ, ಇದೇ ಪ್ರೀತಿ ವಿಶ್ವಾಸ ಕೊನೆವರೆಗೂ ಕಾಪಾಡಿಕೊಂಡು ನಿಮ್ಮೆಲ್ಲರ ಸೇವೆಯನ್ನು ಮಾಡುತ್ತೇನೆ ಎಂದರು. ಕರವೇ ಅಧ್ಯಕ್ಷ ನರಸಿಂಹರಾಜು ಮತ್ತು ಸ್ನೇಹಿತರು ಗ್ರಾಮದೇವತೆ ಉತ್ಸವ ಮೂರ್ತಿಯ ಪ್ರತಿಷ್ಠಾಪನೆಗೆ ವಿಶೇಷ ಆಸಕ್ತಿ ತೋರಿ ಶ್ರಮವಹಿಸಿ ಕೆಲಸ ಮಾಡಿರುವುದು ಹೆಮ್ಮೆಯ ಸಂಗತಿ. ಇಂತಹ…

Read More

ತಿಪಟೂರು: ಕೇಂದ್ರ ಸರ್ಕಾರದ ಜನವಿರೋಧಿ, ರೈತ ವಿರೋಧಿ, ಕಾರ್ಮಿಕ ವಿರೋಧಿ ಹಾಗೂ ಮಹಿಳಾ ವಿರೋಧಿ ನೀತಿಗಳ ವಿರುದ್ಧ ಫೆಬ್ರವರಿ 12 ರಂದು ಅಖಿಲ ಭಾರತ ಮುಷ್ಕರ ಹಾಗೂ ಸ್ವಯಂಪ್ರೇರಿತ ಬಂದ್‌ ಗೆ ಕರೆ ನೀಡಲಾಗಿದ್ದು, ತಿಪಟೂರಿನಲ್ಲಿ ಅದನ್ನು ಯಶಸ್ವಿಗೊಳಿಸಲು ಕಾರ್ಮಿಕ ಹಾಗೂ ರೈತ ಸಂಘಟನೆಗಳ ಒಕ್ಕೂಟ ಪ್ರದರ್ಶನದ ನಡೆದ ಜಂಟಿ ಸಮಾವೇಶ ನಗರದ ಖಾಸಗಿ ಸಭಾಂಗಣದಲ್ಲಿ ನಡೆಸಲಾಯಿತು. ಕಾಂಗ್ರೆಸ್ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಬಿ.ಶಶಿಧರ್ ಮಾತನಾಡಿ, ನರೇಗಾ ಯೋಜನೆಯನ್ನು ಕೇಂದ್ರ ಸರ್ಕಾರ ಸಂಪೂರ್ಣ ನಾಶ ಮಾಡಲು ಹೊರಟಿದ್ದು ಕೃಷಿ ಕೂಲಿಕಾರರ ಕೈಯಿಂದ ಕೆಲಸ ಕಿತ್ತುಕೊಳ್ಳುತ್ತಿದೆ. ಕಟಾವಿನ ಮಹತ್ತರ ಸಮಯದಲ್ಲಿ ಕೆಲಸ ಇಲ್ಲ ಎಂಬುದು, ತಮ್ಮ ಜಮೀನನ್ನು ಅಭಿವೃದ್ಧಿಪಡಿಸಿಕೊಳ್ಳಲು, ರೈತರು ಕನಿಷ್ಠ ಬದುಕು ಬದುಕಲಿದ್ದ ನರೇಗಾ ಯೋಜನೆಯನ್ನು ಮಣ್ಣು ಪಾಲು ಮಾಡುತ್ತಿರುವ ಸರ್ಕಾರಗಳ ನೀತಿಗಳ ವಿರುದ್ಧ ಫೆಬ್ರವರಿ 12ರ ಹೋರಾಟವನ್ನು ನಾವು ನೀವುಗಳೆಲ್ಲರೂ ಯಶಸ್ವಿ ಮಾಡಬೇಕಿದೆ ಎಂದರು. ಸಭೆಯಲ್ಲಿ ಡಿಎಸ್‌ಎಸ್ ಜಿಲ್ಲಾಧ್ಯಕ್ಷ ಕುಂದೂರು ತಿಮ್ಮಯ್ಯ, ಎಐಕೆಎಂಎಸ್ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ…

Read More