Subscribe to Updates
Get the latest creative news from FooBar about art, design and business.
- ಹನೂರು ಶೂಟೌಟ್ ಪ್ರಕರಣ: ಸಿಬ್ಬಂದಿ ಕಾರ್ಯಾಚರಣೆಯನ್ನು ವಿಧಾನಸಭೆಯಲ್ಲಿ ಸಮರ್ಥಿಸಿಕೊಂಡ ಸಚಿವ ರಾಮಲಿಂಗಾರೆಡ್ಡಿ!
- ಟ್ರಾಫಿಕ್ ಪೊಲೀಸ್ ಮೇಲೆ ಹಲ್ಲೆ ನಡೆಸಿದ್ದ ಜೆಡಿಎಸ್ ನಾಯಕನ ಬಂಧನ!
- ಚಿತ್ರದುರ್ಗ: ಬಾವಿಯಲ್ಲಿ ನವವಿವಾಹಿತೆ ಶವ ಪತ್ತೆ – ಕೊಲೆ ಆರೋಪ
- ಖರ್ಗೆ ಭಾಷಣ ಮಾಡಿದ್ದ ಸ್ಥಳದಲ್ಲಿ ಶುದ್ಧೀಕರಣ ಹೋಮ: ವಿಧಾನ ಪರಿಷತ್ ನಲ್ಲಿ ಖಂಡನಾ ನಿರ್ಣಯ ಅಂಗೀಕಾರ
- ಆರ್ ಎಸ್ ಎಸ್ ಜಾತಿವಾದ, ಕೋಮುವಾದದ ‘ಸಾವಿರ ತಲೆಯ ವಿಷಪೂರಿತ ಹಾವು’: ಸಚಿವ ಯತೀಂದ್ರ ಸಿದ್ದರಾಮಯ್ಯ ವಾಗ್ದಾಳಿ
- ಹನೂರು ಶೂಟೌಟ್ ಪ್ರಕರಣ: ರಾಜ್ಯ ಸರ್ಕಾರದ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ತೀವ್ರ ಆಕ್ರೋಶ
- ಜೈಲಿನಲ್ಲೇ ಪ್ರಜ್ವಲ್ ರೇವಣ್ಣಗೆ ಡಿಜಿಪಿ ಅಲೋಕ್ ಕುಮಾರ್ ‘ಸ್ಪೆಷಲ್ ಕ್ಲಾಸ್’!
- ಬೆಳಕುಣಿ ಚೌದ್ರಿ ಗ್ರಾಮದಲ್ಲಿ ಸಾಹಿತ್ಯ ರತ್ನ ಅಣ್ಣಾಭಾವು ಸಾಠೆ 106ನೇ ಜಯಂತಿ ಆಚರಣೆ
Author: admin
ಮಧುಗಿರಿ : ತಾಲ್ಲೂಕಿನಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಅಧಿಕಾರಿಗಳ ನಿರ್ಲಕ್ಷಕ್ಕೆ ಬೇಸತ್ತಿರುವ ಶಾಸಕ ಕೆ.ಎನ್.ರಾಜಣ್ಣ ಕೆಡಿಪಿ ಸಭೆಯಲ್ಲಿ ಡಿಸಿ ಶುಭ ಕಲ್ಯಾಣ್ ಎದುರೇ ಹರಿ ಹಾಯ್ದಿದ್ದು ನಮ್ಮಲಿರುವ ಅಧಿಕಾರಿಗಳು ಯುಸ್ ಲೆಸ್ ಅಧಿಕಾರಿಗಳು. ನಿಮ್ಮ ನಡವಳಿಕೆ ಹೀಗೆ ಮುಂದುವರೆದರೇ ಎಲ್ಲರನ್ನು ಮಾರ್ಚ್ ನಲ್ಲಿ ವರ್ಗಾವಣೆ ಮಾಡಿಸುತ್ತೇನೆ ಎಂದು ಗುಡುಗಿದರು. ಅಧಿಕಾರಿಗಳ ಉದಾಸೀನ ವರ್ತನೆ: ಪಟ್ಟಣದ ತಾ.ಪಂ. ಕಛೇರಿಯಲ್ಲಿ ನಡೆದ ಕೆ.ಡಿ.ಪಿ ಸಭೆಯಲ್ಲಿ ಅಧಿಕಾರಿಗಳ ಉದಾಸೀನ ವರ್ತನೆಗೆ ಆಕ್ರೋಶಗೊಂಡು, ಒಬ್ಬ ರೈತ ಲಂಚವಿಲ್ಲ ಎಂದು ಮೂಲಂಗಿ ತಂದು ಪ್ರತಿಭಟನೆ ಮಾಡುತ್ತಾನೆ ಎಂದರೆ ಯಾರಿಗೆ ಅಪಮಾನ. ಇಂತಹ ವರ್ತನೆ ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಧಿಕಾರಿಗಳು ಕೇವಲ ಪತ್ರ ವ್ಯವಹಾರದಲ್ಲೇ ವರ್ಷಾನುಗಟ್ಟಲೆ ಸಮಯವನ್ನು ಹಾಳು ಮಾಡುತ್ತಾ ಹಣವಿದ್ದರೂ ಕೆಲಸ ಮಾಡಲು ಉದಾಸೀನ ಮಾಡುತ್ತಿದ್ದೀರಾ, ಅಂತಹವರನ್ನು ಕ್ಷೇತ್ರದಿಂದ ಆಚೆ ಕಳಿಸುವುದಾಗಿ ಎಚ್ಚರಿಸಿ, ಲೋಕೋಪಯೋಗಿ ಇಲಾಖೆಯ ರಸ್ತೆಯಲ್ಲಿ ಅಕ್ರಮವಾಗಿ ಇಟ್ಟುಕೊಂಡಿರುವ ಗೂಡಂಗಡಿಗಳನ್ನು ಕಡ್ಡಾಯವಾಗಿ ತೆರವುಗೊಳಿಸಬೇಕು. ಅವರಗಲ್ಲು ರಸ್ತೆಯ ಅಭಿವೃದ್ಧಿ ಕಾರ್ಯಕ್ಕೆ ಇನ್ನು ಮೀನಾ ಮೇಷ…
ಕೊರಟಗೆರೆ: ಕಳೆದ ಕೆಲವು ತಿಂಗಳಿಂದ ಕಾವಲುಬೀಳು ಗ್ರಾಮಸ್ಥರಿಗೆ ನಿದ್ದೆಗೆಡಿಸಿದ ಚಿರತೆ ಅರಣ್ಯ ಅಧಿಕಾರಿಗಳು ಇಟ್ಟ ಬೋನಿಗೆ ಸೋಮವಾರ ಬಿದ್ದಿದೆ. ಕೊರಟಗೆರೆ ಪಟ್ಟಣದ ಹೊರವಲಯದ ಕಾವಲುಬೀಳು ಗ್ರಾಮದ ಜನತೆಗೆ ಬೆಚ್ಚಿಬೀಳುಸುತ್ತಿದ್ದ ಚಿರತೆಗಳ ಹಾವಳಿಂದಾಗಿ ಅಲ್ಲಿನ ರೈತರು ಹಾಗೂ ಸಾರ್ವಜನಿಕರ ಭಯದ ವಾತಾವರಣ ನಿರ್ಮಾಣವಾಗಿತ್ತು. ಕಳೆದ ಕೆಲವು ದಿನಗಳ ಹಿಂದೆ ಮನೆ ಮುಂದೆ ಇದ್ದ ಸಾಕು ನಾಯಿನ ಹೋತ್ತುಕೊಂಡು ಹೋಗಲು ಬಂದಿದ್ದ ಎರಡು ಚಿರತೆಯನ್ನ ಕಂಡ ಮನೆಯವರು ಜೋರಾಗಿ ಶಬ್ದ ಮಾಡಿದ ಕಾರಣ ಓಡಿ ಹೋಗಿತ್ತು. ನಂತರ ಅರಣ್ಯ ಅಧಿಕಾರಿಗಳು ಬೋನನ್ನ ಇಟ್ಟು ಒಂದು ಚಿರತೆಯನ್ನ ಹಿಡಿದು ಹೊರಗಡೆ ಬಿಡಲಾಗಿತ್ತು. ಮತ್ತೆ ಇನ್ನೊಂದು ಚಿರತೆಯ ಸೆರೆಗಾಗಿ ಬೋನ್ ಇಡಲಾಗಿತ್ತು. ಮತ್ತೆ ಸುಮಾರು 4 ವರ್ಷದ ಚಿರತೆ ಅರಣ್ಯ ಅಧಿಕಾರಿಗಳು ಇಟ್ಟ ಬೋನಿಗೆ ಬಿದ್ದಿದ್ದು, ಇಲ್ಲಿನ ರೈತರ ಹಾಗೂ ಸಾರ್ವಜನಿಕರಿಗೆ ಸಂತಸ ತಂದಿದೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳ ಬೇಟಿ ನೀಡಿ ಚಿರತೆಯನ್ನ ಬೇರೆಡೆ ಅರಣ್ಯಕ್ಕೆ ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಕೊರಟಗೆರೆ ಪಟ್ಟಣದ ಹೊರವಲಯದ ಕಾವಲುಬೀಳು…
ಕೊರಟಗೆರೆ: ಕೇಂದ್ರ ಸರ್ಕಾರ ನರೇಗಾ ಯೋಜನೆ, ವಿಕಸಿತ್ ಭಾರತ್ ರೋಜಗಾರ್ ಮತ್ತು ಅಜೀವಕಾ ಮಿಷನ್ ಕಾಯ್ದೆ 2025 ಎಂದು ಬದಲಾಯಿಸಿ ಹೊಸ ಕಾಯ್ದೆಗಳನ್ನ ಜಾರಿಗೆ ತಂದಿರುವುದರ ವಿರುದ್ದ ಫೆ.12 ರಂದು ಅಖಿಲ ಭಾರತ ಸಾರ್ವತ್ರಿಕ ಮುಷ್ಕರವನ್ನ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ರಂಗಹನುಮಯ್ಯ ತಿಳಿಸಿದರು. ಕೊರಟಗೆರೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ರೈತ ಸಂಘ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಕುರಿತಾಗಿ ಸಭೆ ನಡೆಸಿ ನಂತರ ಸುದ್ದಿಗೋಷ್ಠಿಯನ್ನ ಉದ್ದೇಶಿಸಿ ಮಾತನಾಡಿದರು. ಕೇಂದ್ರದಲ್ಲಿ ಮೂರು ಬಾರಿ ಅಧಿಕಾರ ಹಿಡಿದಿರುವ ನರೇಂದ್ರ ಮೋದಿ ಸರ್ಕಾರ ೨೦೨೫ರಲ್ಲಿ ನವಂಬರ್‌ನಲ್ಲಿ ೪ ಕಾರ್ಮಿಕ ವಿರೋಧಿ ಕಾಯ್ದೆಗಳನ್ನ ಜಾರಿಗೆ ತಂದಿದ್ದು, ಇದರ ಜೊತೆಗೆ ನರೇಗಾ ಯೋಜನೆ ಮತ್ತೆ ಚಾಲನೆ ನೀಡುವುದು, ಭೂ ಸ್ವಾಧೀನ ಕಾಯ್ದೆಯನ್ನ ಹಿಂಪಡೆಯಬೇಕು, ಎಪಿಎಂಸಿ ಕಾಯ್ದೆ, ಜಾನುವಾರು ಸಂರಕ್ಷಣಾ ತಿದ್ದುಪಡಿ, ವಿದ್ಯುತ್ ಖಾಸಗಿಕರಣ ಕೈ ಬಿಡಬೇಕು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಮುಷ್ಕರ ಹಮ್ಮಿಕೊಂಡಿದ್ದು ಸಾರ್ವಜನಿಕರ…
ಗುಬ್ಬಿ: ಸಿಎಂ ಬದಲಾವಣೆ ಮಾಡೋದು ಬಿಡೋದು ಹೈಕಮಾಂಡ್ ಬಿಟ್ಟ ವಿಚಾರ ಆದರೆ ಸಿಎಂ ಬದಲಾವಣೆ ವಿಚಾರ ನನಗಂತೂ ಗೊತ್ತಿಲ್ಲ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ತಿಳಿಸಿದರು. ಗುಬ್ಬಿ ತಾಲೂಕಿನ ಬಿದರೆ, ಕಾಶಿ ಮಠ ನಿಂಬೆ ಕಟ್ಟೆ ಹಾಗೂ ಮಾರನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಪಕ್ಷದಲ್ಲಿ ಸಿಎಂ ಬದಲಾವಣೆ ವಿಚಾರವಾಗಿ ಹುಸೇನ್ ಇಕ್ಬಾಲ್ ಹಾಗೂ ಯತೀಂದ್ರ ಅವರ ವೈಯಕ್ತಿಕವಾಗಿ ಹೇಳಿದಾರೆ. ಆದರೆ ಯಾರು ಏನೇ ಹೇಳಿದರೂ ಸಿಎಂ ಬದಲಾವಣೆ ಮಾಡೋದು ಬಿಡೋದು ಹೈಕಮಾಂಡ್ ಬಿಟ್ಟ ವಿಚಾರ, ಆದರೆ ಅವರ ಹೇಳಿಕೆಗಳನ್ನು ಅವರು ಹೇಳಿಕೊಂಡಿದ್ದಾರೆ ಎಂದು ಯತೀಂದ್ರ ಹಾಗೂ ಹುಸೇನ್ ಇಕ್ಬಾಲ್ ಅವರನ್ನು ಸಮರ್ಥಿಸಿಕೊಂಡರು. ಅಧಿವೇಶನದಲ್ಲಿ ಶಿವಲಿಂಗೇಗೌಡರು ಹಿರಿಯ ರಾಜಕಾರಣಿ, ಆದರೆ ಒಂದು ವರ್ಷದಿಂದಲೂ ಶಿವಲಿಂಗೇಗೌಡರ ಬಗ್ಗೆ ಅಧಿವೇಶದಲ್ಲಿ ಕೊಬ್ಬರಿ ಕಳ್ಳ ಅಂತ ಹೇಳಿದ್ದರು. ಮಂಗಳೂರು ಕಡೆಯವರು ಮೂರು ನಾಲ್ಕು ಜನ ಶಾಸಕರು ಹೊಸದಾಗಿ ಗೆದ್ದಿದ್ದಾರೆ ಅವರು ಶಿವಲಿಂಗೇಗೌಡರನ್ನು ಟಾರ್ಗೆಟ್ ಮಾಡಿ ಮಾತನಾಡುತ್ತಿದ್ದಾರೆ . ಅದಕ್ಕೆ ಶಿವಗಂಗೆ…
ಕೊರಟಗೆರೆ: ಹಿಂದೂ ಎನ್ನುವುದು ಕೇವಲ ಒಂದು ಧರ್ಮವಲ್ಲ; ಅದು ಜೀವನ ದರ್ಶನ, ಬದುಕುವ ಸಂಸ್ಕೃತಿ ಎಂದು ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಪಟ್ಟಣದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಹಿಂದೂ ಸಮಾಜೋತ್ಸವದ ಭವ್ಯ ಮೆರವಣಿಗೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಮಾನವೀಯತೆ, ಸಹಜತೆ, ಸಹಬಾಳ್ವೆ, ಧರ್ಮಪಾಲನೆ ಈ ಎಲ್ಲವೂ ಹಿಂದೂ ಜೀವನ ಪದ್ಧತಿಯ ಮೂಲಭೂತ ಮೌಲ್ಯಗಳು. ಧರ್ಮವನ್ನು ನಾವು ರಕ್ಷಿಸಿದರೆ, ಧರ್ಮವು ನಮ್ಮನ್ನು ರಕ್ಷಿಸುತ್ತದೆ ಎಂಬ ಸನಾತನ ಸತ್ಯವನ್ನು ಹಿಂದೂ ಧರ್ಮ ಸಾರುತ್ತದೆ. ಇಂದಿನ ಕಾಲಘಟ್ಟದಲ್ಲಿ ಹಿಂದೂ ಸಮಾಜವು ಒಗ್ಗಟ್ಟಾಗಿ ನಿಲ್ಲುವ ಅಗತ್ಯ ಬಹಳವಾಗಿದೆ. ಜಾತಿ ಪಂಥಗಳ ಭೇದ ಮರೆತು, ಹಿಂದೂಗಳೆಲ್ಲೂ ಒಂದೇ ಕುಟುಂಬ ಎಂಬ ಭಾವನೆಯೊಂದಿಗೆ ಧರ್ಮರಕ್ಷಣೆಗಾಗಿ ಪಣತೊಟ್ಟು ನಿಲ್ಲಬೇಕು. ಧರ್ಮರಕ್ಷಣೆ ನಮ್ಮ ಉಸಿರಾಗಬೇಕು, ನಮ್ಮ ದೇಹದ ಭಾಗವಾಗಬೇಕು ಎಂದು ಅವರು ಹೇಳಿದರು. ಹಿರಿಯ ಪ್ರಾಧ್ಯಾಪಕ ಕೊಟ್ಟೇಶ್ ಮಾತನಾಡಿ, ಹಿಂದೂ ಧರ್ಮವು ಸಾವಿರಾರು ವರ್ಷಗಳಿಂದ ಮಾನವ ಬದುಕಿಗೆ ದಿಕ್ಕು ದೆಶೆ ತೋರಿದೆ. ಸಂಸ್ಕೃತಿ, ಸಹಿಷ್ಣುತೆ, ಸಮನ್ವಯ, ಸರ್ವಧರ್ಮ ಸಮಭಾವನೆ ಹಿಂದೂ ಧರ್ಮದ ಆತ್ಮ.…
ತುಮಕೂರು: ಈಗ ಭೂಮಿಯ ಬೆಲೆ ಚಿನ್ನದ ಬೆಲೆಯಾಗಿದೆ. ರೈತರು ತಮ್ಮ ಜಮೀನು ಮಾರಾಟ ಮಾಡಿಕೊಳ್ಳಬೇಡಿ, ಮಕ್ಕಳ ಮದುವೆ ಅಥವಾ ಸಂಸಾರದ ಸಮಸ್ಯೆಗಳಿಗೆಂದು ಜಮೀನು ಮಾರಿಕೊಂಡರೆ ಮತ್ತೆ ಗಳಿಸುವುದು ಕಷ್ಟವಾಗುತ್ತದೆ ಎಂದು ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ಸುರೇಶ್ ಗೌಡ ರೈತರಿಗೆ ಕಿವಿಮಾತು ಹೇಳಿದರು. ಕ್ಷೇತ್ರದ ನಾಗವಲ್ಲಿಯಲ್ಲಿ ಕೊಳವೆ ಬಾವಿ ಕೊರೆಸಿರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಫಲಾನುಭವಿಗಳಿಗೆ ಸಣ್ಣ ನೀರಾವರಿ ಇಲಾಖೆಯಿಂದ ಪಂಪು, ಮೋಟಾರ್ ವಿತರಣೆ ಮಾಡಿ ಮಾತನಾಡಿದ ಶಾಸಕರು, ಈ ಭಾಗದಲ್ಲಿ ಬಹುತೇಕ ಕೆರೆಗಳು ತುಂಬಿ ಅಂತರ್ಜಲ ಮಟ್ಟದ ಹೆಚ್ಚಾಗಿದೆ. ರೈತರು ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ. ಯಾವುದೇ ಕಾರಣಕ್ಕೂ ತಮ್ಮ ಜಮೀನು ಮಾರದೆ ಉಳಿಸಿಕೊಂಡು ವ್ಯವಸಾಯ ಮುಂದುವರೆಸಿ ಎಂದು ಹೇಳಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದರೂ ತಮ್ಮ ಕ್ಷೇತ್ರಕ್ಕೆ ಬೇಕಾದ ಅನುದಾನ ತರಲು ಪರಿಶ್ರಮ ಪಡುತ್ತಿದ್ದೇನೆ. ಕೇಂದ್ರ ಸಚಿವ ವಿ.ಸೋಮಣ್ಣ, ರಾಜ್ಯದ ಸಣ್ಣ ನೀರಾವರಿ ಖಾತೆ ಸಚಿವ ಬೋಸರಾಜು ಅವರು ಸಹಕಾರದಿಂದ ಕ್ಷೇತ್ರದ ಫಲಾನುಭವಿಗಳಿಗೆ ಪಂಪು, ಮೋಟಾರ್ ಮಂಜೂರು…
ತುರುವೇಕೆರೆ: ಸಮಾಜ ಸೇವೆಗೆ ಜಾತಿ ಮುಖ್ಯವಾಗಬಾರದು, ನಾವು ಮಾಡುವ ಸೇವೆ ಮುಖ್ಯವಾಗಬೇಕು ಎಂದು ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು. ಗುರು ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ನೋಳಂಬ ಲಿಂಗಾಯತ ಉಪ ಸಮಿತಿ ವತಿಯಿಂದ ಹಾಗೂ ಶಾಸಕ ಅನುದಾನ ಸುಮಾರು 35 ಲಕ್ಷ ರೂ. ವೆಚ್ಚದಲ್ಲಿ ನೂತನ ಗಣಪತಿ ಆಲಯ ಮತ್ತು ಶೌಚಾಲಯ ನಿರ್ಮಾಣಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು. ಸಮುದಾಯ ಭವನಗಳಲ್ಲಿ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಉತ್ತಮವಾದ ಹೈಟೆಕ್ ಶೌಚಾಲಯ ನಿರ್ಮಾಣ ಮಾಡಿ. ದಂಡಿನಶಿವಪ್ಪ ರಸ್ತೆಯ ಸಾರಿಗೆಹಳ್ಳಿ ಕೆರೆಕೋಡಿಗೆ ಸುಮಾರು 4 ಕೋಟಿ 50 ಲಕ್ಷ ರೂ. ವೆಚ್ಚದಲ್ಲಿ ಬ್ರಿಡ್ಜ್ ನಿರ್ಮಾಣ ಮಾಡಲು ಅನುದಾನ ನೀಡಲಾಗಿದೆ. ಆದರೆ ಕೆಲವು ತಾಂತ್ರಿಕ ತೊಡಕುಗಳಿಂದ ಕಾಮಗಾರಿ ತಡವಾಗಿದ್ದು, ಸದ್ಯದಲ್ಲಿಯೇ ಪ್ರಾರಂಭವಾಗಲಿದೆ ಎಂದರು. ಈ ಸಂದರ್ಭದಲ್ಲಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಬಿ.ಧರಣೇಶ್ ಹಾಗೂ ಪಿಎಲ್.ಡಿ ಬ್ಯಾಂಕ್ ನಿರ್ದೇಶಕ ಮಾಚೇನಹಳ್ಳಿ ಲೋಕೇಶ್ ರನ್ನು ಸಂಘದ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು. ಅಧ್ಯಕ್ಷತೆಯನ್ನು ನೋಳಂಬ ಲಿಂಗಾಯತ…
ತುಮಕೂರು: ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ನವಜಾತ ಶಿಶುಗಳ ಆರೈಕೆ ವ್ಯವಸ್ಥೆ ಬಲಪಡಿಸುವ ಸಂಬಂಧ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಡಾ.ಕೆ.ಟಿ.ತಿಪ್ಪೇಸ್ವಾಮಿ ಅವರು ಕೆಲವೊಂದು ಶಿಫಾರಸ್ಸುಗಳನ್ನು ಸಲ್ಲಿಸಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಈ ಶಿಫಾರಸ್ಸು ಅಂಶಗಳನ್ನೊಳಗೊಂಡ ಪತ್ರ ರವಾನಿಸಿರುವ ಅವರು, ಜನನದ ಮೊದಲ 28 ದಿನಗಳು ಮಗುವಿನ ಬದುಕಿಗೆ ಅತ್ಯಂತ ಸಂವೇದನಾಶೀಲ ಅವಧಿಯಾಗಿದ್ದು, ಈ ಹಂತದಲ್ಲಿ ಸಮರ್ಪಕ ಚಿಕಿತ್ಸೆ ಮತ್ತು ಸುರಕ್ಷಿತ ಆರೈಕೆ ಲಭ್ಯವಾಗದಿದ್ದಲ್ಲಿ ಜೀವ ಅಪಾಯದ ಸಾಧ್ಯತೆ ಇರುತ್ತದೆ. ನವಜಾತ ಶಿಶುಗಳ ಆರೋಗ್ಯ ರಕ್ಷಣೆ ಮಕ್ಕಳ ಬದುಕುವ, ಬೆಳೆಯುವ ಹಾಗೂ ಗೌರವಪೂರ್ಣ ಬದುಕಿನ ಹಕ್ಕಿಗೆ ಸವಾಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಎನ್.ಐ.ಸಿ.ಯು., ಎಸ್.ಎನ್.ಸಿ.ಯು. ಹಾಗೂ ಎನ್.ಬಿ.ಎಸ್.ಯು. ಗಳಲ್ಲಿ ನವಜಾತ ಶಿಶುಗಳ ಆರೈಕೆ ಬಲವರ್ಧನೆಗೆ ಕೆಲವು ಕ್ರಮ ಜರುಗಿಸುವ ಅಗತ್ಯತೆಯ ಬಗ್ಗೆ ಪ್ರತಿಪಾದಿಸಿದ್ದಾರೆ. ಮೂಲ ಸೌಕರ್ಯ ಮತ್ತು ವೈದ್ಯಕೀಯ ಉಪಕರಣಗಳ ತುರ್ತು ಒದಗಿಸುವಿಕೆ, ಅಗತ್ಯ ಪ್ರಮಾಣದ ತಜ್ಞ ವೈದ್ಯರು ಮತ್ತು ತರಬೇತಿ ಪಡೆದ…
ಮೈಸೂರು: ಜೆಡಿಎಸ್ ಹಿರಿಯ ನಾಯಕ ಜಿ.ಟಿ. ದೇವೇಗೌಡರು ಹಾಗೂ ಪಕ್ಷದ ನಾಯಕತ್ವದ ನಡುವಿನ ಮುನಿಸು ಈಗ ಬಹಿರಂಗವಾಗಿದ್ದು, “ಜಿ.ಟಿ. ದೇವೇಗೌಡರು ಈಗ ನಮ್ಮ ಜೊತೆಯಲ್ಲಿಲ್ಲ” ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಸೋಮವಾರ ಮೈಸೂರಿನಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಪಕ್ಷದ ಬಗ್ಗೆ ನಿಯತ್ತು ಮತ್ತು ನಿಷ್ಠೆ ಇಲ್ಲದವರನ್ನು ಜೊತೆಯಲ್ಲಿ ಇಟ್ಟುಕೊಳ್ಳುವ ಅವಶ್ಯಕತೆ ಇಲ್ಲ ಎಂದು ಗುಡುಗಿದ್ದಾರೆ. “ನನ್ನ ಮುಂದೆ ಪದೇಪದೆ ಅವರ ಹೆಸರು ಪ್ರಸ್ತಾಪ ಮಾಡಬೇಡಿ. ಮುಖ್ಯಮಂತ್ರಿಗಳಿಗೆ ಪ್ರಮಾಣಪತ್ರ ನೀಡುವ ಅವರು, ನಮ್ಮ ವಿರುದ್ಧವೇ ಮಾತನಾಡುತ್ತಾರೆ. ಇಂತಹ ವರ್ತನೆ ತೋರುವವರನ್ನು ನಾವು ಹೇಗೆ ಸಹಿಸಲು ಸಾಧ್ಯ?” ಎಂದು ಪ್ರಶ್ನಿಸಿದರು. ಇದೇ ವೇಳೆ ರಾಜ್ಯ ಸರ್ಕಾರದ ವಿರುದ್ಧವೂ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, ಮೆಟ್ರೋ ದರ ಏರಿಕೆಗೆ ಕೇಂದ್ರವನ್ನು ಹೊಣೆ ಮಾಡುವುದು ಸರಿಯಲ್ಲ ಎಂದರು. ಮಂಡ್ಯದಲ್ಲಿ 500 ಕೋಟಿ ರೂ. ವೆಚ್ಚದ ಆಟೋಮೋಟಿವ್ ಸಂಶೋಧನಾ ಕೇಂದ್ರ ಸ್ಥಾಪನೆಗೆ ಭೂಮಿ ನೀಡುವಂತೆ ಸಿಎಂಗೆ ಪತ್ರ ಬರೆದಿರುವುದಾಗಿ ತಿಳಿಸಿದ ಅವರು, ಸಮಯ ಬಂದಾಗ ತಾವು…
ಬೀದರ್: ವೇಶ್ಯಾವಾಟಿಕೆ ಮಾಡುವಂತೆ ಗಂಡನ ಮನೆಯವರು ನೀಡುತ್ತಿದ್ದ ಮಾನಸಿಕ ಕಿರುಕುಳಕ್ಕೆ ಬೇಸತ್ತು ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಧಾರುಣ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣ ನಗರದಲ್ಲಿ ನಡೆದಿದೆ. ೨೨ ವರ್ಷದ ಅಂಜನಾಬಾಯಿ ಶೇಖರ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಮೃತಳ ತಂದೆ ವಿಜಯ್ ಕುಮಾರ್ ಅವರು ನೀಡಿದ ದೂರಿನ ಪ್ರಕಾರ, ಅಂಜನಾಬಾಯಿಗೆ ಕಳೆದ ಮೂರು ವರ್ಷಗಳ ಹಿಂದೆ ಶೇಖರ್ ಎಂಬುವವರ ಜೊತೆ ವಿವಾಹವಾಗಿತ್ತು. ಆದರೆ ಮದುವೆಯಾದ ಕೆಲವೇ ದಿನಗಳಲ್ಲಿ ಅತ್ತೆ ಅರುಣಾಬಾಯಿ ಮತ್ತು ಮಾವ ಚಂದ್ರಕಾಂತ ಅವರು ಅಂಜನಾಬಾಯಿಗೆ ವೇಶ್ಯಾವಾಟಿಕೆಯಲ್ಲಿ ತೊಡಗುವಂತೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಪೀಡಿಸುತ್ತಿದ್ದರು ಎನ್ನಲಾಗಿದೆ. ಗಂಡನ ಮನೆಯವರ ನಿರಂತರ ಕಿರುಕುಳವನ್ನು ಸಹಿಸಲಾರದೆ ಅಂಜನಾಬಾಯಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಬಸವಕಲ್ಯಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮೃತಳ ಪತಿ ಶೇಖರ್ ಪಾಟೀಲ್ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಸದ್ಯ ಪೊಲೀಸರು ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಮಹಿಳೆಯರ ಸುರಕ್ಷತೆಯ…