Author: admin

ಕುಣಿಗಲ್: ನನ್ನ ಗಂಡ ನನ್ನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ, ತಲೆ ಬುರುಡೆಗೆ ಗಾಯವಾಗಿ ವೈದ್ಯರು ನಾಲ್ಕು ಹೊಲಿಗೆ ಹಾಕಿದ್ದಾರೆ, ಆದರೆ ನನಗೆ ಪೊಲೀಸ್ ಠಾಣೆಯಲ್ಲಿ ನ್ಯಾಯ ಸಿಗುತ್ತಿಲ್ಲ ಎಂದು ಮಹಿಳೆಯೊಬ್ಬರು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಕಾಲಿಗೆ ಬಿದ್ದು ನ್ಯಾಯ ಕೇಳಿದ ಘಟನೆ ಕುಣಿಗಲ್ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆಯಿತು. ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ, ಮಂಗಳವಾರ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ವೇಳೆ ಕುಣಿಗಲ್ ಬಿಬಿಎಂಪಿ ನೌಕರನ ಪತ್ನಿ ಸುಧಾ ಹಾಗೂ ಸಂತೆ ಮಾವತ್ತೂರು ಗ್ರಾಮದ ಸುಮಿತ್ರಾ ನಮಗೆ ನಮ್ಮ ಗಂಡಂದಿರು ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ನೀಡುತ್ತಿದ್ದಾರೆ. ಮಾರಣಾಂತಿಕ ಹಲ್ಲೆ ಮಾಡಿ ತಲೆ ಬುರುಡೆ ಗಾಯವಾಗಿ ಹಲವು ಬಾರಿ ವೈದ್ಯರು ಬುರುಡೆಗೆ ಹೊಲಿಗೆ ಹಾಕಿದ್ದಾರೆ. ನಾನು ಪೊಲೀಸ್ ಠಾಣೆಗೆ ದೂರು ನೀಡಿದರೆ ನನಗೆ ಪೊಲೀಸರು ನ್ಯಾಯ ಕೊಡುತ್ತಿಲ್ಲ. ನನ್ನ ಗಂಡನ ವಿರುದ್ಧ ಕ್ರಮಕೈಗೊಂಡಿಲ್ಲ. ನಾವು ಯಾರ ಬಳಿ ಹೋಗಿ ನ್ಯಾಯ ಕೇಳಬೇಕು…

Read More

ತುಮಕೂರು: ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷ ಡಾ.ಮೂರ್ತಿ ಎಲ್. ಅವರು ಫೆಬ್ರವರಿ 17 ಮತ್ತು 18, ರಂದು ತುಮಕೂರು ಜಿಲ್ಲೆಗೆ ಭೇಟಿ ನೀಡಿ, ವಿವಿಧ ಇಲಾಖಾವಾರು ಪರಿಶೀಲನೆ ಹಾಗೂ ಸಂವಾದ ಕಾರ್ಯಕ್ರಮಗಳನ್ನು ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧ ಇಲಾಖೆಗಳಿಂದ ಸಂಬಂಧಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಿದ್ಧತೆ ಕೈಗೊಳ್ಳುವಂತೆ ಸೂಚಿಸಲಾಗಿದೆ. ತುಮಕೂರು ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಸಿಟಿ ಕಾರ್ಪೊರೇಷನ್, ನಗರಸಭೆ, ಪುರಸಭೆಗಳಲ್ಲಿ ಕೈಗೊಳ್ಳಲಾಗುತ್ತಿರುವ ವಿವಿಧ ಯೋಜನೆಗಳ ವಿವರ ಮತ್ತು ತೆರಿಗೆ ಹಣದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನಾಂಗದ ಅಭಿವೃದ್ಧಿಗೆ ವಿನಿಯೋಗಿಸುತ್ತಿರುವ ವಿವರಗಳ ಮಾಹಿತಿ ಕುರಿತು 18 ರಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಯಲಿರುವ ಸಭೆಯಲ್ಲಿ ಪರಿಶೀಲನೆ ನಡೆಸಲಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

Read More

ತುಮಕೂರು: ಜಿಲ್ಲಾ ದಲಿತ–ಪ್ರಗತಿಪರ ಸಂಘಟನೆಗಳ ಒಕ್ಕೂಟ ಮತ್ತು ಸಾರ್ವತ್ರಿಕ ಆರೋಗ್ಯ ಆಂದೋಲನ–ಕರ್ನಾಟಕ ವತಿಯಿಂದ ರಾಜ್ಯದಲ್ಲಿ 8 ಸರ್ಕಾರಿ ಆಸ್ಪತ್ರೆಗಳನ್ನು ಸರ್ಕಾರ ಪಿಪಿಪಿ ಮಾದರಿಯಲ್ಲಿ ಕೇಂದ್ರದ ನೀತಿ ಆಯೋಗದ ಅವೈಜ್ಞಾನಿಕ ಧೋರಣೆಯಿಂದ ಕಾರ್ಪೊರೇಟ್ ಕಂಪನಿಗಳಿಗೆ ಸರ್ಕಾರಿ ಒಡೆತನದ ಸಾರ್ವಜನಿಕ ಆಸ್ಪತ್ರೆಗಳನ್ನು ಗುತ್ತಿಗೆ ನೀಡುವ ಸಂವಿಧಾನ ವಿರೋಧಿ ನಡೆಯನ್ನು ಖಂಡಿಸಿ, ರಾಜ್ಯದ 28 ಜಿಲ್ಲೆಗಳಲ್ಲಿ ಜಾಥಾ ಅಂಗವಾಗಿ ತುಮಕೂರು ಜಿಲ್ಲಾಧಿಕಾರಿಗಳ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಪ್ರತಿಭಟನೆ ಮೂಲಕ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯನ್ನು ಉದ್ದೇಶಿಸಿ ಸಂಚಾಲಕರಾದ ಡಾ.ಕೆ.ಬಿ. ಓಬಳೇಶ್ ಮಾತನಾಡಿ ರಾಜ್ಯ ಸರ್ಕಾರ ಬಡವರ ಪರ, ದಲಿತರ ಪರ, ಅಲ್ಪಸಂಖ್ಯಾತರ ಪರ ಎಂದು 5 ಗ್ಯಾರಂಟಿಗಳನ್ನು ಕೊಟ್ಟು ಮತ್ತೊಂದು ಕಡೆ ಬಡವರ ಮೇಲೆ ದುಬಾರಿ ಬೆಲೆಗಳ ಭಾರಿ ಬರೆಯನ್ನು ಹಾಕುವುದು ಒಂದು ಕಡೆಯಾದರೆ ರಾಜ್ಯದಲ್ಲಿ 8 ಜಿಲ್ಲೆಗಳ ಸರ್ಕಾರಿ ಆಸ್ಪತ್ರೆಗಳನ್ನು ಖಾಸಗಿ ಕಂಪನಿಗಳ ಮಾಲೀಕತ್ವಕ್ಕೆ ನೀಡಲು ಮುಂದಾಗಿರುವುದು ಜನವಿರೋಧಿ ನಡೆಯಾಗಿದೆ. ಕೂಡಲೇ ಪಿಪಿಪಿ ಮಾದರಿಯ ಖಾಸಗೀಕರಣವನ್ನು ಸರ್ಕಾರ ಕೈಬಿಡಬೇಕು. ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಉಚಿತ ಹಾಗೂ…

Read More

ತುಮಕೂರು: ಹಿರೇಹಳ್ಳಿ ಎಸ್.ಬಿ.ಐ. ಗ್ರಾಮೀಣ ಸ್ವ–ಉದ್ಯೋಗ ತರಬೇತಿ ಸಂಸ್ಥೆಯು ಫೆಬ್ರವರಿ 16ರಿಂದ ಗ್ರಾಮೀಣ ಭಾಗದ ನಿರುದ್ಯೋಗಿ ಯುವತಿಯರಿಗಾಗಿ ಉಚಿತ ಊಟ ವಸತಿಯೊಂದಿಗೆ 30 ದಿನಗಳ ಮಹಿಳಾ ಟೈಲರಿಂಗ್ ತರಬೇತಿ ನೀಡಲು ಉದ್ದೇಶಿಸಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ. ತುಮಕೂರು ಜಿಲ್ಲಾ ವ್ಯಾಪ್ತಿಯ ಗ್ರಾಮೀಣ ಭಾಗದ ಕನ್ನಡ ಓದಲು ಹಾಗೂ ಬರೆಯಲು ಬರುವ 18 ರಿಂದ 50 ವರ್ಷದೊಳಗಿನ ಮಹಿಳಾ ಅಭ್ಯರ್ಥಿಗಳು ಅರ್ಜಿಯನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ, ಸಿಂಗನಹಳ್ಳಿ ಕಾಲೋನಿ, ಹಿರೇಹಳ್ಳಿ ಕೈಗಾರಿಕಾ ಪ್ರದೇಶ(ತುಮಕೂರು ನಿರ್ಮಿತಿ ಕೇಂದ್ರದ ಹತ್ತಿರ), ತುಮಕೂರು-572104 ಇವರಿಗೆ ಮುದ್ದಾಗಿ ಅಥವಾ ಅಂಚೆ ಮೂಲಕ ಫೆಬ್ರವರಿ 15ರೊಳಗಾಗಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂ.ವಾ.ಸಂ. 9738351048, 9663680001ನ್ನು ಸಂಪರ್ಕಿಸಬೇಕೆಂದು ಸಂಸ್ಥೆಯ ನಿರ್ದೇಶಕ ವಾದಿರಾಜ ಕೆ.ಎನ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

Read More

ತುರುವೇಕೆರೆ: ಜೆಡಿಎಸ್ ಪಕ್ಷದಿಂದ ದೊಡ್ಡಘಟ್ಟ ಚಂದ್ರೇಶ್ ಟಿಕೆಟ್ ಕೇಳಲಿ ಅಭ್ಯಂತರವಿಲ್ಲ, ಅದನ್ನು ಬಿಟ್ಟು ಕಾರ್ಯಕ್ರಮದ ನೆಪದಲ್ಲಿ ಕಾರ್ಯಕರ್ತರ ನಡುವೆ ಜೆಡಿಎಸ್‌ ನಲ್ಲಿ ಗುಂಪುಗಾರಿಕೆ ಮಾಡಬಾರದು ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಎಚ್ಚರಿಕೆ ನೀಡಿದ್ದಾರೆ. ಪಟ್ಟಣದ  ಪ್ರವಾಸಿ ಮಂದಿರದಲ್ಲಿ ಜೆಡಿಎಸ್ ಪಕ್ಷದಿಂದ ಆಯೋಜಿಸಿದ್ದ ಜೆ.ಡಿ.ಎಸ್ ಕಾರ್ಯಕರ್ತರ ಸಭೆ ಹಾಗೂ ಎಸ್‌ ಬಿಆರ್ ಬಗ್ಗೆ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ನಾನು ಜೆಡಿಎಸ್ ಪಕ್ಷಕ್ಕೆ ಬಂದಾಗ ತಾಲೂಕಿನಲ್ಲಿ 7 ಸಾವಿರ ಮತಗಳು ಪಕ್ಷಕ್ಕೆ ಬಂದಿದ್ದವು. ಸುಮಾರು ವರ್ಷಗಳ ಕಾಲ ಪಕ್ಷ ಸಂಘಟನೆ ಮಾಡಿ ಈಗ 70 ಸಾವಿರಕ್ಕೂ ಹೆಚ್ಚು ಮತಗಳು ಬರುವ ಹಾಗೆ ಸಂಘಟನೆ ಮಾಡಿದ್ದೇನೆ. ಜೆಡಿಎಸ್ ಪಕ್ಷದಿಂದ ನಾಲ್ಕು ಬಾರಿ ಶಾಸಕನಾಗಿ, ಮೂರು ಬಾರಿ ಸೋತಿದ್ದೇನೆ. ಈಗಾಗಲೇ ಬಿಜೆಪಿ ಹಾಗೂ ಜೆಡಿಎಸ್ ಹಾಲಿ ಶಾಸಕರಿಗೆ ಮುಂದಿನ ವಿಧಾನ ಸಭಾ ಚುನಾವಣೆಗೆ ಟಿಕೆಟ್ ನೀಡುವಂತೆ ಮಾತುಕತೆಯಾಗಿದೆ. ಚುನಾವಣೆ ಇನ್ನೂ 2 ವರ್ಷ ಇದೆ, ಅಭ್ಯರ್ಥಿ ವಿಚಾರ ಅಪ್ರಸ್ತುತ. ಆದರೂ ತಾಲೂಕಿನಲ್ಲಿ ಚಂದ್ರೇಶ್ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ ಎಂಬ…

Read More

ತುಮಕೂರು: ಜನಸಂಖ್ಯೆ ಆಧಾರದಲ್ಲಿ ಪರಿಶಿಷ್ಟ ಜಾತಿಗೆ ಇದ್ದ ಶೇ.15 ಮೀಸಲನ್ನು ಶೇ.17ಕ್ಕೆ ಹಾಗೂ ಪ.ಪಂಗಡಗಳಿಗೆ ಇದ್ದ ಶೇ.3ರ ಮೀಸಲು ಪ್ರಮಾಣವನ್ನು ಶೇ.7ಕ್ಕೆ ಏರಿಕೆ ಮಾಡಿ ಮೂರುವರೆ ವರ್ಷಗಳೇ ಕಳೆದಿದ್ದರೂ, ಕೇಂದ್ರ ಸರ್ಕಾರ ಸಂವಿಧಾನದ ಷೆಡ್ಯೂಲ್ ಗೆ ಸೇರಿಸದ ಪರಿಣಾಮ ಈವರೆಗೆ ಜಾರಿಯಾಗಿಲ್ಲ. ಹಾಗಾಗಿ ಸಿಎಂ, ಕೇಂದ್ರ ಸಚಿವರು, ಸಂಸದರು ಈ ವಿಷಯವಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕುವ ಪ್ರಯತ್ನವನ್ನು ಗಂಭೀರವಾಗಿ ಮಾಡಬೇಕು ಎಂದು ರಾಜ್ಯ ವಾಲ್ಮೀಕಿ ಸಮಾಜದ ಸಮಾನ ಮನಸ್ಕರ ವೇದಿಕೆಯ ಅಧ್ಯಕ್ಷ ಹಾಗೂ ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಒತ್ತಾಯಿಸಿದ್ದಾರೆ. ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2022ರಲ್ಲಿ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ನ್ಯಾ. ನಾಗಮೋಹನ್ ದಾಸ್ ಅವರ ವರದಿಯನ್ವಯ ಮೀಸಲು ಪ್ರಮಾಣವನ್ನು ಹೆಚ್ಚಳ ಮಾಡಿ ಆದೇಶ ಮಾಡಿದ್ದರು. ಇದರ ಜಾರಿ ಸಂಬಂಧ 2023ರಲ್ಲಿ ಸಿಎಂ ಸಿದ್ದರಾಮಯ್ಯ ಅವರು ಕೇಂದ್ರಕ್ಕೆ ಪತ್ರ ಬರೆದಿದ್ದು, ಈಗ ಮೀಸಲು ಪ್ರಮಾಣ ಹೆಚ್ಚಳದ ಚೆಂಡು ಕೇಂದ್ರದ ಅಂಗಳದಲ್ಲಿದೆ. ಸಂವಿಧಾನದ ಷೆಡ್ಯೂಲ್ 9ಕ್ಕೆ ಮೀಸಲು ಹೆಚ್ಚಳವನ್ನು ಸೇರಿಸದ…

Read More

ಕಾರವಾರ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ಮಾಧ್ಯಮ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ತಾಲ್ಲೂಕು ಮಟ್ಟದ ಪತ್ರಕರ್ತರು ತಮ್ಮ ವೃತ್ತಿ ನಿರತ ಚಟುವಟಿಕೆಗಳ ಸಂಬಂಧ ತಮ್ಮ ಜಿಲ್ಲಾದ್ಯಂತ ಉಚಿತವಾಗಿ ಸಂಚರಿಸಲು ಅನುಕೂಲವಾಗುವಂತೆ ಉಚಿತ ಬಸ್ ಪಾಸ್ ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಪತ್ರಕರ್ತರು ತಾವು ಕಾರ್ಯನಿರ್ವಹಿಸುತ್ತಿರುವ ಮಾಧ್ಯಮ ಸಂಸ್ಥೆಗಳಿಂದ ಸೇವಾ ಪ್ರಮಾಣ ಪತ್ರ, ಶಿಫಾರಸ್ಸು ಪತ್ರ ಮತ್ತು 11 ತಿಂಗಳುಗಳ ವೇತನ ಪತ್ರ (ಲೈನೇಜ್/ಸಂಭಾವನೆ/ಕಮಿಷನ್ ಪಡೆದಿರುವ ದಾಖಲೆ) ಗಳನ್ನು ಅಥವಾ ವೇತನ ಜಮಾ ಆಗಿರುವ ಮಾಹಿತಿ ಇರುವಂತಹ ಬ್ಯಾಂಕ್ ಸ್ಟೇಟ್ ಮೆಂಟ್ ಲಗತ್ತಿಸಿ “ಸೇವಾಸಿಂಧು” ಪೋರ್ಟಲ್ (https://sevasindhu.karnataka.gov.in) ಮೂಲಕ ಆನ್ ಲೈನ್ ನಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು. ಆನ್‌ ಲೈನ್ ನಲ್ಲಿ ಸಲ್ಲಿಸಲಾದ ಅರ್ಜಿ ಮತ್ತು ಲಗತ್ತಿಸಲಾಗಿರುವ ದಾಖಲೆಗಳ ಒಂದು ಪ್ರತಿಯನ್ನು ಆಯಾ ಜಿಲ್ಲೆಯ ವಾರ್ತಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು. ಸ್ವೀಕೃತ ಅರ್ಜಿಗಳನ್ನು ಆಯ್ಕೆ ಸಮಿತಿಯ ಸಭೆಯಲ್ಲಿ ಪರಿಶೀಲಿಸಿ ಬಸ್‌ಪಾಸ್ ಮಂಜೂರು ಮಾಡಲಾಗುತ್ತದೆ. ರಾಜ್ಯದ ಎಲ್ಲ ತಾಲ್ಲೂಕುಗಳ ಅರ್ಹ ಪತ್ರಕರ್ತರು ಕೂಡಲೇ “ಸೇವಾಸಿಂಧು”…

Read More

ಬೆಂಗಳೂರು: ಹಿರಿಯ ಪತ್ರಕರ್ತ ಹಾಗು ವಿಧಾನ ಪರಿಷತ್ತಿನ ಮಾಜಿ ಸದಸ್ಯ ಪಿ.ರಾಮಯ್ಯ (93)ಅವರು ಇಂದು ನಿಧನರಾಗಿದ್ದಾರೆ . ಬೆಂಗಳೂರಿನ ಮಲ್ಲಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪಿ.ರಾಮಯ್ಯ ಅವರು ವಿವಿಧ ಅಂಗಾಂಗ ವೈಫಲ್ಯದಿಂದಾಗಿ ಇಂದು ರಾತ್ರಿ 9 ಗಂಟೆ ಸುಮಾರಿಗೆ ಆಸ್ಪತ್ರೆಯಲ್ಲಿ ಅಸುನೀಗಿದರು ಎಂದು ಅವರ ಪುತ್ರ ಡಾ.ಬಾಲಜಿ ತಿಳಿಸಿದ್ದಾರೆ . 1933 ಸೆಪ್ಟೆಂಬರ್ 12 ರಂದು ಜನಿಸಿದ ರಾಮಯ್ಯ ಅವರು ಇಬ್ಬರು ಪುತ್ರರು , ಓರ್ವ ಪುತ್ರಿ ಹಾಗು ಸೊಸೆಯಂದಿರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ. “ದಿ ಹಿಂದೂ ” ಪತ್ರಿಕೆಯಲ್ಲಿ ಐದು ದಶಕಗಳ ಕಾಲ ವಿವಿಧ ಹುದ್ದೆಗಳಲ್ಲಿ ಪತ್ರಕರ್ತರಾಗಿ ಕರ್ತವ್ಯ ನಿರ್ವಹಿಸಿದ್ದ ರಾಮಯ್ಯ ಅವರು ವಿಧಾನ ಪರಿಷತ್ತಿನ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಮಾಧ್ಯಮ ಅಕಾಡೆಮಿ ಪ್ರಶಸ್ತಿ , ಕೆಯುಡಬ್ಲ್ಯೂಜೆ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿಗೆ ಪಾತ್ರರಾಗಿದ್ದ ರಾಮಯ್ಯ ಅವರು ಪತ್ರಿಕಾ ಅಕಾಡೆಮಿ ಹಾಗು ವಿವಿಧ ಪತ್ರಕರ್ತ ಕಲ್ಯಾಣ ಸಮಿತಿ ಸದಸ್ಯರಾಗಿದ್ದರು. ಸಣ್ಣ ಪತ್ರಿಕೆಗಳ ಸಮಸ್ಯೆಗಳ ಅಧ್ಯಯನಕ್ಕಾಗಿ ರಚಿಸಲಾಗಿದ್ದ ಸಮಿತಿಯ…

Read More

ಕೊರಟಗೆರೆ : ಸಿದ್ದರಬೆಟ್ಟದಲ್ಲಿ ಈ ಇದೇ ಮೊದಲ ಬಾರಿಗೆ ಶಿವರಾತ್ರಿ ಹಬ್ಬದ ಜಾಗರಣೆಯನ್ನ ಧರ್ಮ ಪ್ರಚಾರ, ಧರ್ಮದ ಜಾಗೃತಿ, ಹಾಗೂ ಜನರಿಗೆ ಆಧ್ಯಾತ್ಮಿಕ ಚಿಂತನೆಯನ್ನ ಮೂಡಿಸಬೇಕು ಎಂದು ಸಿದ್ದರಬೆಟ್ಟದಲ್ಲಿ ಅದ್ದೂರಿ ಜಾಗರಣೆ ಮಹೋತ್ಸವ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಕ್ಷೇತ್ರ ಸಿದ್ದರಬೆಟ್ಟದ ಬಾಳೆ ಹೊನ್ನೂರು ಖಾಸಾಶಾಖಾ ಮಠದ ಪೀಠಾಧ್ಯಕ್ಷರಾದ ಶ್ರೀ ವೀರಭದ್ರ ಶಿವಾಚಾರ್ಯ ಮಹಾ ಸ್ವಾಮೀಜಿ ತಿಳಿಸಿದರು. ತಾಲ್ಲೂಕಿನ ಸಿ.ಎನ್.ದುರ್ಗ ಹೋಬಳಿಯ ಸಿದ್ದರಬೆಟ್ಟ ಶ್ರೀ ಕ್ಷೇತ್ರದ ಬಾಳೆ ಹೊನ್ನೂರು ಖಾಸಾ ಶಾಖಾ ಮಠದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ನಮ್ಮ ಗ್ರಾಮೀಣ ಭಾಗದಲ್ಲಿ ಇದೇ ಪ್ರಥಮ ಬಾರಿಗೆ ಶ್ರೀ ಮಠದಲ್ಲಿ ಶಿವರಾತ್ರಿ ಹಬ್ಬದಂದು ಜಾಗರಣೆ ಮಾಡುವ ವಿಶೇಷ ಕಾರ್ಯಕ್ರಮಗಳನ್ನ ಎಲೆರಾಂಪುರ ಶ್ರೀಗಳು ಮಾರ್ಗದರ್ಶನ ಹಾಗೂ ಯುವ ಉದ್ಯಮಿ ಹಾಗೂ ಪರ್ವ ಗ್ರೂಪ್ ನ ಅಧ್ಯಕ್ಷರಾದ ನಿಲೇಶ್ ಅವರ ನೇತೃತ್ವದಲ್ಲಿ ಈ ಜಾಗರಣಾ ಮಹೋತ್ಸವವನ್ನ ಏರ್ಪಡಿಸಲಾಗಿದ್ದು, ಹಬ್ಬದ ದಿನದಂದು ಸಂಜೆ 6 ಗಂಟೆಗೆ ಪ್ರಾರಂಭವಾದ ಕಾರ್ಯಕ್ರಮ ಬೆಳಗಿನ ಜಾವದವರೆಗೂ ನಡೆಯಲಿದೆ. ಶಿವರಾತ್ರಿ ಹಬ್ಬದಂದು ಜಾಗರಣೆಗೆ…

Read More

ತಿಪಟೂರು: ಸಮಾಜದ ಕಟ್ಟಕಡೆಯ ನಿರ್ಗತಿಕರಿಗೂ ನೆರವಾಗುವ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಮಹತ್ವದ ಹೆಜ್ಜೆ ಇರಿಸಿದೆ. ತಿಪಟೂರು ನಗರ ಹಾಗೂ ಗ್ರಾಮಾಂತರ ತಾಲೂಕಿನ ಒಟ್ಟು 201 ನಿರ್ಗತಿಕ ಫಲಾನುಭವಿಗಳಿಗೆ ಪ್ರತಿ ತಿಂಗಳು 1000 ರೂ.ಗಳಂತೆ ಜೀವನ ನಿರ್ವಹಣಾ ಮಾಶಾಸನ ನೀಡಲಾಗುತ್ತಿದೆ. ಇದರೊಂದಿಗೆ, ಯೋಜನೆಯಡಿ ಈಗಾಗಲೇ ಈ ಎರಡು ತಾಲೂಕುಗಳಲ್ಲಿ 10 ‘ವಾತ್ಸಲ್ಯ ಮನೆ’ಗಳನ್ನು ನಿರ್ಮಿಸಲಾಗಿದ್ದು, 2 ಮನೆಗಳ ದುರಸ್ತಿ ಕಾರ್ಯ ಪೂರ್ಣಗೊಂಡಿದೆ. ಅಲ್ಲದೆ, ಮೂವರು ಫಲಾನುಭವಿಗಳಿಗೆ ಸೋಲಾರ್ ಸೌಲಭ್ಯ ಹಾಗೂ ಒಬ್ಬರಿಗೆ ಶೌಚಾಲಯ ನಿರ್ಮಾಣ ಮಾಡಿಕೊಡುವ ಮೂಲಕ ಮೂಲಸೌಕರ್ಯ ಒದಗಿಸಲಾಗಿದೆ. ವಾತ್ಸಲ್ಯ ಕಿಟ್ ವಿತರಣೆ: ಇಂದು ನಡೆದ ವಿಶೇಷ ಕಾರ್ಯಕ್ರಮದಲ್ಲಿ, ಶ್ರೀ ಕ್ಷೇತ್ರದ ಧರ್ಮಾಧಿಕಾರಿಗಳಾದ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆ ಹಾಗೂ ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆ ಅವರು ಮಂಜೂರು ಮಾಡಿರುವ ‘ವಾತ್ಸಲ್ಯ ಕಿಟ್’ಗಳನ್ನು 40 ಮಂದಿ ಮಾಶಾಸನ ಫಲಾನುಭವಿಗಳಿಗೆ ವಿತರಿಸಲಾಯಿತು. ಕಿಟ್‌ ನಲ್ಲಿರುವ ಸಾಮಗ್ರಿಗಳು: ದಿನಬಳಕೆಗೆ ಅಗತ್ಯವಾದ ಪಾತ್ರೆಗಳು, ಸೀರೆ, ಲಂಗ, ಹೊದಿಕೆ, ದಿಂಬು, ಚಾಪೆ,…

Read More