Subscribe to Updates
Get the latest creative news from FooBar about art, design and business.
- ತಿಪಟೂರು: ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್, ಲೇಖನಿ ಸಾಮಗ್ರಿ ವಿತರಣೆ
- ರದ್ದಾದ ಪತ್ರಿಕೆಗಳ ಶೀರ್ಷಿಕೆಗಳ ಮರುಸ್ಥಾಪನೆಗೆ ದಂಡ ಪಾವತಿಸಲು ಜೂನ್ 30 ಕೊನೆಯ ದಿನ
- ಕುರುಗೋಡಿನಲ್ಲಿ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ: ಜಾಗೃತಿ ಜಾಥಾ, ಉದ್ದಿಮೆಗಳ ಮೇಲೆ ದಾಳಿ: ಬಾಲಕನ ರಕ್ಷಣೆ
- ಬಳ್ಳಾರಿಯಲ್ಲಿ ಜೂನ್ 19ರಂದು ಪಿಎಂ: ವಿಬಿಆರ್ ವೈ ಸಾರ್ವಜನಿಕ ಸಂಪರ್ಕ ಕಾರ್ಯಕ್ರಮ
- ವಿವಿಧೆಡೆ ಕಳ್ಳರ ಅಟ್ಟಹಾಸ: 25 ಲಕ್ಷದ ಚಿನ್ನ ಮತ್ತು ನಗದು ಕಳ್ಳತನ
- ತೋಟದಿಂದ ಮನೆಗೆ ಬರುತ್ತಿದ್ದ ವೃದ್ದೆಯ ಬರ್ಬರ ಹತ್ಯೆ: ಚಿನ್ನಕ್ಕಾಗಿ ವೃದ್ದೆಯ ಕೊಲೆ ಶಂಕೆ
- ಕೊರಟಗೆರೆ: ಕುಬೇರ ಗಣಪತಿ ಭವನಕ್ಕೆ 5 ಲಕ್ಷ ಧನ ಸಹಾಯ
- ಇ–ಪೌತಿ ಖಾತಾ ಆಂದೋಲನ–2 : ರೈತರಿಂದ ಅರ್ಜಿಗಳ ಸ್ವೀಕಾರ — ಬಾಕಿ ಆರ್ ಆರ್ ಟಿ ಅರ್ಜಿಗಳ ಶೀಘ್ರ ವಿಲೇವಾರಿಗೆ ಸೂಚನೆ
Author: admin
ತುಮಕೂರು: ಇಂದಿನ ವೇಗದ ಬದುಕಿನಲ್ಲಿ ಮರೆಯಾಗುತ್ತಿರುವ ಪೌಷ್ಟಿಕ ಆಹಾರಗಳನ್ನು ಮರಳಿ ನೆನಪಿಸಲು ತುಮಕೂರಿನ ಗಾಜಿನ ಮನೆಯಲ್ಲಿ ಜಿಲ್ಲಾಮಟ್ಟದ ಸಿರಿಧಾನ್ಯ ಮೇಳ ಮತ್ತು ಪಾಕ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಜನವರಿ 7 ಮತ್ತು 8ರಂದು ನಡೆಯುತ್ತಿರುವ ಈ ಮೇಳವನ್ನು ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಡಾ.ಲಕ್ಷ್ಮಣ್ ಎಸ್.ಕೆ. ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಔಷಧವೇ ಆಹಾರವಾಗುವ ಮುನ್ನ, ಪೌಷ್ಟಿಕ ಆಹಾರವನ್ನೇ ಔಷಧಿಯಂತೆ ಸೇವಿಸಬೇಕು. ಸಮತೋಲಿತ ಆಹಾರ ಸೇವನೆಯಿಂದ ಮಾತ್ರ ಆರೋಗ್ಯವಂತ ಜೀವನ ಸಾಧ್ಯ,” ಎಂದು ತಿಳಿಸಿದರು. ಸಿರಿಧಾನ್ಯಗಳು ಜೀರ್ಣಕ್ರಿಯೆಗೆ ಸಹಕಾರಿಯಾಗಿದ್ದು, ರೋಗಮುಕ್ತ ಸಮಾಜ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಎಂದು ಅವರು ಒತ್ತಿ ಹೇಳಿದರು. ಜಿಲ್ಲೆಯ 10 ತಾಲೂಕುಗಳಿಂದ ಆಗಮಿಸಿದ 106ಕ್ಕೂ ಹೆಚ್ಚು ಮಹಿಳೆಯರು ಸ್ಪರ್ಧೆಯಲ್ಲಿ ಪಾಲ್ಗೊಂಡು 40ಕ್ಕೂ ಹೆಚ್ಚು ಬಗೆಯ ಸಿರಿಧಾನ್ಯ ಖಾದ್ಯಗಳನ್ನು ಸಿದ್ಧಪಡಿಸಿದ್ದರು. ಮಿಲ್ಲೆಟ್ ಪಾಯಸ, ರೊಟ್ಟಿ ಹಾಗೂ ವಿವಿಧ ನವಣೆ ಖಾದ್ಯಗಳು ಜನರ ಗಮನ ಸೆಳೆದವು. ಪತ್ರಕರ್ತ ಎಸ್. ನಾಗಣ್ಣ ಮಾತನಾಡಿ, ಬಾಯಿರುಚಿಗೆ ಮಾರುಹೋಗಿ ಪೌಷ್ಟಿಕಾಂಶಯುಕ್ತ ಸಿರಿಧಾನ್ಯಗಳನ್ನು ಜನರು ಕಡೆಗಣಿಸುತ್ತಿರುವುದು ಆತಂಕಕಾರಿ…
ಬೆಂಗಳೂರು: ರಾಜ್ಯಾದ್ಯಂತ 48 ಐಪಿಎಸ್ ಅಧಿಕಾರಿಗಳಿಗೆ ಮುಂಬಡ್ತಿ ನೀಡಿ ಮತ್ತು ವಿವಿಧ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳು (ಎಸ್ಪಿ) ಹಾಗೂ ಬೆಂಗಳೂರು ನಗರದ ಡಿಸಿಪಿಗಳ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ತುಮಕೂರು ಎಸ್ಪಿ ಕೆ.ವಿ.ಅಶೋಕ್ ಅವರಿಗೂ ಹೊಸ ವರ್ಷದ ಸಂದರ್ಭದಲ್ಲಿ ಜೂನಿಯರ್ ಅಡ್ಮಿನಿಸ್ಟ್ರೇಟಿವ್ ಶ್ರೇಣಿಯಲ್ಲಿ ಮುಂಬಡ್ತಿ ದೊರೆತಿದ್ದು, ತುಮಕೂರು ಎಸ್ಪಿ ಸ್ಥಾನದಲ್ಲಿ ಮುಂದುವರಿಸಲಾಗಿದೆ. ಈ ಮೂಲಕ ಹೊಸ ವರ್ಷದ ಸಂಭ್ರಮದ ನಡುವೆಯೇ ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯಲ್ಲಿ ಮಹತ್ತದ ಬದಲಾವಣೆಗಳನ್ನು ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಪಟ್ಟಿಗೆ ಅನುಮೋದನೆ ನೀಡಿದ್ದಾರೆ. ಈ ಪ್ರಮುಖ ಆಡಳಿತಾತ್ಮಕ ಬದಲಾವಣೆಯಲ್ಲಿ ಒಟ್ಟು 23 ಅಧಿಕಾರಿಗಳಿಗೆ ಡಿಐಜಿಪಿ ಹುದ್ದೆಗೆ ಮುಂಬಡ್ತಿ ಮತ್ತು ನೇಮಕಾತಿ ನೀಡಲಾಗಿದ್ದರೆ, ಇಬ್ಬರು ಅಧಿಕಾರಿಗಳಿಗೆ ಐಜಿಪಿ ಹುದ್ದೆಗೆ ಪದೋನ್ನತಿ ನೀಡಲಾಗಿದೆ. ಇದಲ್ಲದೆ, ಬೆಂಗಳೂರು ನಗರ, ಬೆಳಗಾವಿ, ಮೈಸೂರು, ಶಿವಮೊಗ್ಗ, ಕೊಡಗು ಸೇರಿದಂತೆ ಪ್ರಮುಖ ಜಿಲ್ಲೆಗಳ ಎಸ್ಪಿ ಮತ್ತು ಡಿಸಿಪಿಗಳನ್ನು ಬದಲಾಯಿಸಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್…
ತುಮಕೂರು: ಜಿಲ್ಲಾ ಪಂಚಾಯತ್ ಸಿಇಒ ಜಿ.ಪ್ರಭು ಅವರು ಜಿಲ್ಲಾಧಿಕಾರಿಯಾಗಿ ಪದೋನ್ನತಿ ಹೊಂದಿದ್ದು, ಚಿಕ್ಕಬಳ್ಳಾಪುರಕ್ಕೆ ವರ್ಗಾವಣೆಗೊಂಡಿದ್ದಾರೆ. ಸಿಇಒ ಜಿ.ಪ್ರಭು ವರ್ಗಾವಣೆ ಹಿನ್ನೆಲೆ ತುಮಕೂರು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರಿಗೆ ತುಮಕೂರು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಹೆಚ್ಚುವರಿ ಜವಾಬ್ದಾರಿ ವಹಿಸಲಾಗಿದೆ. ಹೊಸ ವರ್ಷಕ್ಕೆ ಮುನ್ನಾ ದಿನವೇ ಜಿಲ್ಲೆಯ ಇಬ್ಬರು ಐಎಎಸ್ ಅಧಿಕಾರಿಗಳಿಗೆ ಮಹತ್ವದ ಹೊಣೆಗಾರಿಕೆ ದೊರೆತಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
ಹರಿಹರೇಶ್ವರ ತತ್ತ್ವವೇ ಇಂದಿನ ಸಮಾಜಕ್ಕೆ ಅಗತ್ಯ ಮಧುಗಿರಿಯಿಂದ ಕೇಳಿಬರುವ ಏಕತೆಯ ಮೌನ ಸಂದೇಶ ಧರ್ಮವು ಮಾನವನನ್ನು ಒಗ್ಗೂಡಿಸಬೇಕಾದ ಶಕ್ತಿಯಾಗಬೇಕಾದರೆ, ಅದು ಭೇದಗಳನ್ನು ಮೀರಿ ಸಾಗಬೇಕು. ಆದರೆ ಇಂದಿನ ಸಮಾಜದಲ್ಲಿ ಧರ್ಮದ ಅರ್ಥವು ಕೆಲವೊಮ್ಮೆ ವಿಭಜನೆಯ ದಾರಿಯಲ್ಲಿ ಸಾಗುತ್ತಿರುವುದು ವಿಷಾದಕರ. ಇಂತಹ ಸಂದರ್ಭದಲ್ಲೇ ಶತಮಾನಗಳಿಂದ ಯಾವುದೇ ಘೋಷಣೆ ಇಲ್ಲದೆ ಏಕತೆಯ ಸಂದೇಶವನ್ನು ಸಾರುತ್ತಾ ಬಂದಿರುವ ಪವಿತ್ರ ಕ್ಷೇತ್ರವೇ ಮಧುಗಿರಿಯ ಹರಿಹರೇಶ್ವರ ದೇವಸ್ಥಾನ. “ಹರಿ” ಮತ್ತು “ಹರ” ಎಂಬ ಎರಡು ಮಹಾತತ್ತ್ವಗಳು ಒಂದೇ ಸ್ವರೂಪದಲ್ಲಿ ಅಡಗಿರುವ ಹರಿಹರೇಶ್ವರ, ಶೈವ–ವೈಷ್ಣವ ಭೇದಗಳಿಗೆ ತತ್ತ್ವಶಾಸ್ತ್ರೀಯ ಉತ್ತರವಾಗಿದೆ. ಇಲ್ಲಿ ದೇವರು ವಿಭಿನ್ನನಲ್ಲ; ದರ್ಶನದ ಮಾರ್ಗಗಳು ಮಾತ್ರ ವಿಭಿನ್ನ. ಆದರೆ ಗುರಿ ಒಂದೇ — ಮಾನವನ ಒಳಿತಿಗೆ. ಮಧುಗಿರಿ ಕೇವಲ ಕೋಟೆಗಳ ನಗರವಲ್ಲ; ಅದು ಸಹಬಾಳ್ವೆಯ ಸಂಸ್ಕೃತಿಯನ್ನು ಬೆಳೆಸಿದ ನೆಲ. ಹರಿಹರೇಶ್ವರ ದೇವಸ್ಥಾನವು ಧರ್ಮವನ್ನು ಸಂಘರ್ಷದ ಸಾಧನವಾಗಿ ಬಳಸದೆ, ಸಮನ್ವಯ, ಸಹಿಷ್ಣುತೆ ಮತ್ತು ಸಾಮಾಜಿಕ ಸೌಹಾರ್ದತೆಯ ಮಾರ್ಗವಾಗಿ ರೂಪಿಸಿಕೊಂಡ ಸಮಾಜದ ಪ್ರತೀಕವಾಗಿದೆ. ಇಂದಿನ ದಿನಗಳಲ್ಲಿ ಧರ್ಮವನ್ನು ರಾಜಕೀಯದ ಅಸ್ತ್ರವನ್ನಾಗಿ ಮಾಡುತ್ತಿರುವ…
ತಿಪಟೂರು: ಜೆಡಿಎಸ್ ಪಕ್ಷದ ವರಿಷ್ಠರ ನಿರ್ದೇಶನದಂತೆ ತಿಪಟೂರು ತಾಲೂಕು ಜೆಡಿಎಸ್ ಘಟಕದಲ್ಲಿ ಪ್ರಮುಖ ನೇಮಕಾತಿಗಳನ್ನು ಮಾಡಲಾಗಿದ್ದು, ಪಕ್ಷದ ಸಂಘಟನೆಗೆ ವೇಗ ನೀಡಲಾಗಿದೆ. ತಾಲೂಕು ಎಸ್‌ಸಿ ಘಟಕದ ಅಧ್ಯಕ್ಷರಾಗಿ ಜಕ್ಕನಹಳ್ಳಿ ಮೋಹನ್ ಹಾಗೂ ನಗರ ಘಟಕದ ಉಪಾಧ್ಯಕ್ಷರಾಗಿ ರಾಜಶೇಖರಯ್ಯ ಅವರನ್ನು ಅಧಿಕೃತವಾಗಿ ನೇಮಕ ಮಾಡಲಾಗಿದೆ. ನಿರುದ್ಯೋಗದ ವಿರುದ್ಧ ಕೆ.ಟಿ. ಶಾಂತಕುಮಾರ್ ಕಳಕಳಿ: ನೇಮಕಾತಿ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ಮುಖಂಡ ಕೆ.ಟಿ. ಶಾಂತಕುಮಾರ್, ರಾಜ್ಯದಲ್ಲಿ ತಾಂಡವವಾಡುತ್ತಿರುವ ನಿರುದ್ಯೋಗ ಸಮಸ್ಯೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು. “ವಿದ್ಯಾವಂತ ಯುವಜನತೆ ಉದ್ಯೋಗವಿಲ್ಲದೆ ಆಸೆಯನ್ನೇ ಕಳೆದುಕೊಳ್ಳುತ್ತಿದ್ದಾರೆ. ಮಕ್ಕಳ ಭವಿಷ್ಯದ ಬಗ್ಗೆ ಕನಸು ಕಂಡ ಪಾಲಕರು ಇಂದು ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ. ದೇಶದಲ್ಲಿ ಶೇ. 70 ರಷ್ಟು ಯುವಕರು ಉದ್ಯೋಗವಿಲ್ಲದೆ ಪರಿತಪಿಸುತ್ತಿದ್ದಾರೆ” ಎಂದು ಅವರು ಬೇಸರ ವ್ಯಕ್ತಪಡಿಸಿದರು. ಜನವರಿ 31ರಂದು 3ನೇ ಹಂತದ ಉದ್ಯೋಗ ಮೇಳ: ನಿರುದ್ಯೋಗಿ ಯುವಕರಿಗೆ ಆಸರೆಯಾಗುವ ನಿಟ್ಟಿನಲ್ಲಿ ತಿಪಟೂರಿನಲ್ಲಿ ಈಗಾಗಲೇ ಎರಡು ಬಾರಿ ಯಶಸ್ವಿಯಾಗಿ ಉದ್ಯೋಗ ಮೇಳ ನಡೆಸಲಾಗಿದ್ದು, ಈಗ ಮೂರನೇ ಭಾಗವಾಗಿ ಬೃಹತ್ ಮೇಳವನ್ನು…
ತುಮಕೂರು: ರಾಜ್ಯದ ಬಹುಪಾಲು ಜಿಲ್ಲೆಗಳಿಗೆ ಹೆಬ್ಬಾಗಿಲಿನಂತಿರುವ ತುಮಕೂರಿನಲ್ಲಿ ಮುದ್ರಕರು ಮುದ್ರಣ ಕ್ಷೇತ್ರದಲ್ಲಿನ ನೂತನ ತಾಂತ್ರಿಕ ಕೌಶಲ್ಯಗಳನ್ನು ಅಳವಡಿಸಿಕೊಂಡು ಗ್ರಾಹಕರ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸುವುದರ ಮೂಲಕ ತುಮಕೂರನ್ನು ‘ಪ್ರಿಂಟಿಂಗ್ ಹಬ್’ ಆಗಿ ರೂಪಿಸಬೇಕೆಂದು ಸಮಾಲೋಚಕರಾದ ಸಿ.ಸಿ.ಪಾವಟೆ ಸಲಹೆ ನೀಡಿದರು. ತುಮಕೂರು ಜಿಲ್ಲಾ ಮುದ್ರಣಕಾರರ ಸಂಘದ ವತಿಯಿಂದ ಏರ್ಪಡಿಸಿದ್ದ ‘ಮುದ್ರಣಕಾರರ ಕುಂದುಕೊರತೆಗಳ ಕುರಿತ ಸಮಾಲೋಚನಾ ಸಭೆ’ಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡುತ್ತಿದ್ದರು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಜಾಗತೀಕರಣ ಮತ್ತು ತಾಂತ್ರಿಕ ಪ್ರಗತಿ ಮುದ್ರಣ ಉದ್ಯಮವು ತನ್ನ ವ್ಯಾಪ್ತಿ ಹಾಗೂ ಸಾಮರ್ಥ್ಯವನ್ನು ವಿಸ್ತರಿಸಲು ಅನುವು ಮಾಡಿದೆ. ಗ್ರಾಹಕರ ಬೇಡಿಕೆಗಳು ಮುದ್ರಣ ಉದ್ಯಮದಲ್ಲಿ ಅನೇಕ ಹೊಸ ಅವಕಾಶಗಳಿಗೆ ಅನುವು ಮಾಡಿಕೊಟ್ಟಿವೆ. ಸಾಂಪ್ರದಾಯಿಕ ಆಫ್ ಸೆಟ್‌ನಿಂದ ಡಿಜಿಟಲ್ ಮುದ್ರಣದವರೆಗೆ ಅನೇಕ ಬದಲಾವಣೆಗಳಾಗಿವೆ. ಇದಕ್ಕನುಗುಣವಾಗಿ ಮುದ್ರಕರು ಮುದ್ರಣ ಕ್ಷೇತ್ರದಲ್ಲಿ ದೈನಂದಿನ ಆಗುತ್ತಿರುವ ಬದಲಾವಣೆಗಳ ಬಗ್ಗೆ ಪ್ರತಿನಿತ್ಯ ಅಪ್ ಡೇಟ್ ಆಗಬೇಕೆಂದು ಅವರು, ನಿಮ್ಮ ವೃತ್ತಿಯಲ್ಲಿ ಪ್ರೀತಿ, ಭಕ್ತಿ, ವಿಶ್ವಾಸ, ಬದ್ಧತೆ ಹಾಗೂ ಶರಣಾಗತಿಯಿರಬೇಕು. ಅದೇ ರೀತಿ ದುಶ್ಚಟಗಳಿಂದ ದೂರವಿರಬೇಕು ಎಂದು…
ತುಮಕೂರು: ರಾಜ್ಯದಲ್ಲಿ 21 ರೀತಿಯ ನ್ಯೂನತೆಯುಳ್ಳ 11,45,208 ಜನ ವಿಕಲಚೇತನರಿದ್ದರೆ, ತುಮಕೂರು ಜಿಲ್ಲೆಯಲ್ಲಿ 46 ಸಾವಿರ ಮಂದಿ ವಿಕಲಚೇತನರಿದ್ದಾರೆ. ಎಲ್ಲವೂ ಸರಿಯಾಗಿರುವ ನಾವು ವಿಕಲಚೇತನರನ್ನು ಅವರ ದೃಷ್ಟಿಕೋನದಲ್ಲಿ ನೋಡಬೇಕಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಡಾ. ಸಿದ್ಧರಾಮಣ್ಣ ಕೆ. ತಿಳಿಸಿದರು. ತುಮಕೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಸಮಾಜಕಾರ್ಯ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದಲ್ಲಿ ಮೊಬಿಲಿಟಿ ಇಂಡಿಯಾ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ವಿಕಲಚೇತನರ ದಿನಾಚರಣೆ ಹಾಗೂ ಕಾಯ್ದೆ ಅರಿವು ಮತ್ತು ಸೌಲಭ್ಯ ಕುರಿತ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಎಲ್ಲವೂ ಕಾನೂನಿನಿಂದಲೇ ಪರಿಹಾರವಾಗುವುದಿಲ್ಲ. ಮಹಿಳೆಯರು, ಮಕ್ಕಳು, ವಿಕಲಚೇತನರು ಇವರೆಲ್ಲರಿಗೂ ವಿಶೇಷ ಕಾನೂನುಗಳಿವೆ. ಆದರೆ ಅದರ ಅನುಷ್ಠಾನ ಮುಖ್ಯವಾಗಿದೆ ಎಂದರು. ಶೇ. 90 ಕ್ಕಿಂತಲೂ ಹೆಚ್ಚು ಅಂಗವೈಕಲ್ಯ ಹೊಂದಿರುವ ಪೋಷಕರಿಗೆ ಆರ್ಥಿಕ ನೆರವು ನೀಡಲಾಗುತ್ತಿದೆ. ವಿಕಲಚೇತನರ ಪುನರ್ವಸತಿಗಾಗಿ 222 ಜನ ವಿಆರ್‌ಡಬ್ಲ್ಯೂ, 8 ಜನ ಎಂ.ಆರ್.ಡಬ್ಲ್ಯೂ, 18 ಜನ ಯುಆರ್‌ಡಬ್ಲ್ಯೂಗಳು, 7 ವಿವಿಧ ಸಂಘ ಸಂಸ್ಥೆಗಳು ಸರ್ಕಾರದ ಅನುದಾನ ಪಡೆದು…
ತುಮಕೂರು: ದೇಶದ ಬೆನ್ನೆಲುಬು ಪ್ರತಿಯೊಬ್ಬರಿಗೂ ಅನ್ನ ನೀಡುವ ಶ್ರಮಿಕ ವರ್ಗವೆಂದರೆ ಅದು ರೈತ ಕುಟುಂಬ. ದೇಶಕ್ಕೆ ಅನ್ನ ಹಾಕುವ ಅನ್ನದಾತನ ಬೆನ್ನುಮೂಳೆಯನ್ನು ದೇಶದಲ್ಲಿ ಇದುವರೆಗೂ ಅಧಿಕಾರ ನಡೆಸಿದ ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರಗಳು ಮುರಿದಿವೆ. ರೈತ ಮತ್ತು ರೈತರ ಸಂಘಟನೆಗಳನ್ನು ದುರುಪಯೋಗ ಪಡಿಸಿಕೊಂಡು ರಾಜ್ಯದಲ್ಲಿ ಆಡಳಿತ ನೀಡುತ್ತಿದೆ ಎಂದು ಆಮ್ ಆದ್ಮಿ ಪಾರ್ಟಿಯ ಜಿಲ್ಲಾಧ್ಯಕ್ಷ ಹೆಚ್ ಎ ಜಯರಾಮಯ್ಯ ಅವರು ತಿಳಿಸಿದರು. ತಮ್ಮ ಕಚೇರಿಯಲ್ಲಿ ವಿಶ್ವ ರೈತರ ದಿನಾಚರಣೆ ಪ್ರಯುಕ್ತ ವರ್ಗಕ್ಕೆ ಅಭಿನಂದನೆಗಳನ್ನು ಸಲ್ಲಿಸಿ ಮಾತನಾಡಿದ ಅವರು ರೈತರ ಪರವಾಗಿ ಒಗ್ಗಟ್ಟಿನಿಂದ ರೈತರಿಗೆ ಸಾಮಾಜಿಕ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಈ ದಿನಾಚರಣೆಯನ್ನು ಸಮರ್ಪಣೆ ಮಾಡುತ್ತಿದ್ದೇವೆ. ಅನ್ನದಾತನಿಂದ ಮತ ಪಡೆದು ರೈತರ ಬೆನ್ನುಮೂಳೆಯನ್ನು ಮುರಿಯುತ್ತಲೇ ಬಂದಿರುವ ಸರ್ಕಾರದ ಒಬಂದಿ ನೀತಿಯನ್ನು ನಮ್ಮ ಪಕ್ಷ ಖಂಡಿಸುತ್ತದೆ ಎಂದು ತಿಳಿಸಿದರು. ಸ್ವಾತಂತ್ರ್ಯ ನಂತರದಲ್ಲೂ ರೈತರಿಗೆ ಸಂವಿಧಾನ ಬದ್ಧವಾಗಿ ಸಲ್ಲಬೇಕಾದ ಸವಲತ್ತುಗಳು ಇದುವರೆಗೂ ದೊರೆಯುತ್ತಿಲ್ಲ. ದೇಶಕ್ಕೆ ಅನ್ನ ನೀಡುವ ಪ್ರತಿ ರೈತ ಕುಟುಂಬಗಳು ನೆಮ್ಮದಿಯಿಂದ ಬದುಕುವಂತಹ ಯೋಜನೆಯ…
ತುಮಕೂರು: ನಗರದ ಅಮಾನಿಕೇರೆ ಗಜಾನನ ಮಂಟಪದಲ್ಲಿ 2 ದಿನಗಳ ಕಾಲ ಆಯೋಜಿಸಿದ್ದ 17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮಂಗಳವಾರ ಸಂಜೆ ವಿದ್ಯುಕ್ತ ತೆರೆಬಿದ್ದಿತು. ಸಮಾರೋಪ ಸಮಾರಂಭದಲ್ಲಿ ಸಮ್ಮೇಳನಾಧ್ಯಕ್ಷ ಡಾ. ಕರಿಗೌಡ ಬೀಚನಹಳ್ಳಿ ದಂಪತಿಗೆ ಗೌರವ ಸನ್ಮಾನದೊಂದಿಗೆ ಕನ್ನಡ ಶಾಲೆಗಳನ್ನು ಮುಚ್ಚದೆ ಅವುಗಳನ್ನು ಬಲಪಡಿಸುವ ಕ್ರಮಕೈಗೊಳ್ಳುವುದು ಸೇರಿದಂತೆ ನಾಲ್ಕು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಸಮಾರೋಪ ಸಮಾರಂಭದಲ್ಲಿ ಸಾಧಕರಿಗೆ ಸನ್ಮಾನ ನೆರವೇರಿಸಿದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಶಾಸಕ ಕೆ.ಎನ್. ರಾಜಣ್ಣ ಅವರು, ಈಗಿನ ಮಕ್ಕಳು ಮೊಬೈಲ್ ಬಳಕೆಯಿಂದ ಕೇವಲ ತಾಂತ್ರಿಕ ಜ್ಞಾನದ ಅರಿವು ಪಡೆಯುತ್ತಿದ್ದಾರೆಯೇ ವಿನಃ ಮಾನವೀಯ ಸಂಬಂಧ ಹಾಗೂ ನೈತಿಕ ಮೌಲ್ಯಗಳಿಂದ ದೂರವಾಗುತ್ತಿದ್ದಾರೆ. ಮಕ್ಕಳಿಗೆ ಮೊಬೈಲ್ ಬಿಡಿಸಿ ಪುಸ್ತಕ, ಸಾಹಿತ್ಯ ಓದಿನ ಅಭಿರುಚಿ ಬೆಳೆಸಬೇಕು. ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆಗೆ ಓದು ಅನಿವಾರ್ಯ. ಮಕ್ಕಳಲ್ಲಿ ಸಾಹಿತ್ಯದ ಬಗ್ಗೆ ಆಸಕ್ತಿ ಮೂಡಿಸಿದರೆ ಭಾಷೆಯ ಉಳಿವು ಸಾಧ್ಯ ಎಂದರು. ಹಿಂದೆ ಬಸ್ಸಿನಲ್ಲಿ ಪ್ರಯಾಣಿಸುವಾಗ ಅಕ್ಕಪಕ್ಕದವರನ್ನು ಪರಿಚಯ ಮಾಡಿಕೊಂಡು ಅನುಭವಗಳನ್ನು ಹಂಚಿಕೊಳ್ಳುವ ಸಂಸ್ಕೃತಿ ಇತ್ತು.…
ಬೆಂಗಳೂರು: ಮದುವೆಯಾದ ಕೇವಲ ಮೂರೇ ತಿಂಗಳಲ್ಲಿ ಪತಿಯ ಅಸಹಜ ಲೈಂಗಿಕ ಕಿರುಕುಳ ಹಾಗೂ ವಿಕೃತ ವರ್ತನೆಯಿಂದ ಬೇಸತ್ತ ಮಹಿಳೆಯೊಬ್ಬರು ತನ್ನ ಪತಿಯ ವಿರುದ್ಧ ಬೆಂಗಳೂರಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಘಟನೆಯ ವಿವರ: ಖಾಸಗಿ ಕಂಪನಿಯೊಂದರಲ್ಲಿ ಹೆಚ್‌ಆರ್ (HR) ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಮಂಜುನಾಥ್ ಮತ್ತು ಸಂತ್ರಸ್ತೆ ಪರಸ್ಪರ ಪ್ರೀತಿಸಿ, 2025ರ ಸೆಪ್ಟೆಂಬರ್ 3ರಂದು ಕುಟುಂಬದ ಸಮ್ಮುಖದಲ್ಲಿ ವಿವಾಹವಾಗಿದ್ದರು. ಆದರೆ ಮದುವೆಯಾದ ಕೆಲವೇ ದಿನಗಳಲ್ಲಿ ಪತಿಯ ಅಸಲಿ ಮುಖ ಬಯಲಾಗಿದೆ. ಪತ್ನಿಯ ಗಂಭೀರ ಆರೋಪಗಳು: ಲೈಂಗಿಕ ಕಿರುಕುಳ: ಪತಿ ಮಂಜುನಾಥ್ ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೋಗಳನ್ನು ನೋಡಿ, ಅದೇ ರೀತಿ ಲೈಂಗಿಕ ಕ್ರಿಯೆ ನಡೆಸುವಂತೆ ಪೀಡಿಸುತ್ತಿದ್ದ. ಪೀರಿಯಡ್ಸ್ (ಮಾಸಿಕ ತೀರ್ಪು) ಸಮಯದಲ್ಲೂ ದೈಹಿಕ ಸಂಬಂಧಕ್ಕೆ ಒತ್ತಾಯಿಸುತ್ತಿದ್ದ ಎಂದು ಪತ್ನಿ ಆರೋಪಿಸಿದ್ದಾರೆ. ವಿಕೃತ ವರ್ತನೆ: ಮನೆಯಲ್ಲಿ ಅತ್ತೆ-ಮಾವ ಇದ್ದರೂ ಮಂಜುನಾಥ್ ಅರೆಬೆತ್ತಲೆಯಾಗಿ ಅಥವಾ ಸಂಪೂರ್ಣ ಬೆತ್ತಲೆಯಾಗಿ ಓಡಾಡುತ್ತಾ ಮುಜುಗರ ಉಂಟುಮಾಡುತ್ತಿದ್ದ. ಪತ್ನಿಯ ಅನುಮತಿ ಇಲ್ಲದೆ ಆಕೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿ…