Subscribe to Updates
Get the latest creative news from FooBar about art, design and business.
- ಹನೂರು ಶೂಟೌಟ್ ಪ್ರಕರಣ: ಸಿಬ್ಬಂದಿ ಕಾರ್ಯಾಚರಣೆಯನ್ನು ವಿಧಾನಸಭೆಯಲ್ಲಿ ಸಮರ್ಥಿಸಿಕೊಂಡ ಸಚಿವ ರಾಮಲಿಂಗಾರೆಡ್ಡಿ!
- ಟ್ರಾಫಿಕ್ ಪೊಲೀಸ್ ಮೇಲೆ ಹಲ್ಲೆ ನಡೆಸಿದ್ದ ಜೆಡಿಎಸ್ ನಾಯಕನ ಬಂಧನ!
- ಚಿತ್ರದುರ್ಗ: ಬಾವಿಯಲ್ಲಿ ನವವಿವಾಹಿತೆ ಶವ ಪತ್ತೆ – ಕೊಲೆ ಆರೋಪ
- ಖರ್ಗೆ ಭಾಷಣ ಮಾಡಿದ್ದ ಸ್ಥಳದಲ್ಲಿ ಶುದ್ಧೀಕರಣ ಹೋಮ: ವಿಧಾನ ಪರಿಷತ್ ನಲ್ಲಿ ಖಂಡನಾ ನಿರ್ಣಯ ಅಂಗೀಕಾರ
- ಆರ್ ಎಸ್ ಎಸ್ ಜಾತಿವಾದ, ಕೋಮುವಾದದ ‘ಸಾವಿರ ತಲೆಯ ವಿಷಪೂರಿತ ಹಾವು’: ಸಚಿವ ಯತೀಂದ್ರ ಸಿದ್ದರಾಮಯ್ಯ ವಾಗ್ದಾಳಿ
- ಹನೂರು ಶೂಟೌಟ್ ಪ್ರಕರಣ: ರಾಜ್ಯ ಸರ್ಕಾರದ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ತೀವ್ರ ಆಕ್ರೋಶ
- ಜೈಲಿನಲ್ಲೇ ಪ್ರಜ್ವಲ್ ರೇವಣ್ಣಗೆ ಡಿಜಿಪಿ ಅಲೋಕ್ ಕುಮಾರ್ ‘ಸ್ಪೆಷಲ್ ಕ್ಲಾಸ್’!
- ಬೆಳಕುಣಿ ಚೌದ್ರಿ ಗ್ರಾಮದಲ್ಲಿ ಸಾಹಿತ್ಯ ರತ್ನ ಅಣ್ಣಾಭಾವು ಸಾಠೆ 106ನೇ ಜಯಂತಿ ಆಚರಣೆ
Author: admin
ಶಿರಾ (ತುಮಕೂರು): ಈಡಿಗ ಜನಾಂಗದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬ್ರಹ್ಮಶ್ರೀ ನಾರಾಯಣಗುರು ಶಕ್ತಿ ಪೀಠದ ಪ್ರಣವಾನಂದ ಸ್ವಾಮೀಜಿ ಅವರು ಹಮ್ಮಿಕೊಂಡಿರುವ ಬೃಹತ್ ಪಾದಯಾತ್ರೆಗೆ ಶಿರಾ ತಾಲ್ಲೂಕಿನಲ್ಲಿ ಬುಧವಾರ ಅದ್ಧೂರಿ ಸ್ವಾಗತ ಕೋರಲಾಯಿತು. ಚಿತ್ತಾಪುರ ತಾಲ್ಲೂಕಿನ ಕರಗಲ್ಲು ಗ್ರಾಮದಿಂದ ಬೆಂಗಳೂರಿನವರೆಗೆ ಸುಮಾರು 700 ಕಿ.ಮೀ. ದೂರದ ಈ ಪಾದಯಾತ್ರೆಯು ಶಿರಾ ತಾಲ್ಲೂಕಿನ ಗಡಿಭಾಗವಾದ ಉಜ್ಜನಕುಂಟೆಗೆ ಆಗಮಿಸಿದಾಗ, ರಾಷ್ಟ್ರೀಯ ಈಡಿಗ ಮಹಾಮಂಡಳಿಯ ಮುಖಂಡರು ಮತ್ತು ಸಮುದಾಯದ ನಾಯಕರು ಸ್ವಾಮೀಜಿಯವರನ್ನು ಸ್ವಾಗತಿಸಿದರು. ಪಾದಯಾತ್ರೆಯ ಸಂದರ್ಭದಲ್ಲಿ ಮಾತನಾಡಿದ ಪ್ರಣವಾನಂದ ಸ್ವಾಮೀಜಿ, ಈಡಿಗ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ಈ ಪಾದಯಾತ್ರೆ ನಡೆಸುತ್ತಿರುವುದಾಗಿ ತಿಳಿಸಿದರು. ಬೇಡಿಕೆಗಳು: ಪರ್ಯಾಯ ವ್ಯವಸ್ಥೆ: ಈಡಿಗರ ಕುಲಕಸುಬಾದ ಸೇಂದಿ ಮಾರಾಟ ನಿಷೇಧಿಸಿರುವುದರಿಂದ ಜನಾಂಗದವರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಆದ್ದರಿಂದ ಬಾಧಿತ ಕುಟುಂಬಗಳಿಗೆ ತಲಾ 5 ಎಕರೆ ಜಮೀನು ಮಂಜೂರು ಮಾಡಬೇಕು. ಮೀಸಲಾತಿ: ಈಡಿಗ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ (ST) ಸೇರಿಸಬೇಕು. ಗೌರವ: ಬೆಂಗಳೂರಿನ ವಿಧಾನಸೌಧದ ಮುಂದೆ ಬ್ರಹ್ಮಶ್ರೀ ನಾರಾಯಣಗುರು ಅವರ…
ನವದೆಹಲಿ: ಕರ್ನಾಟಕದ ಬಾಕಿ ಇರುವ ನೀರಾವರಿ ಯೋಜನೆಗಳಿಗೆ ಶೀಘ್ರವಾಗಿ ಅನುಮೋದನೆ ನೀಡುವಂತೆ ಮಾಜಿ ಪ್ರಧಾನಿ ಹಾಗೂ ರಾಜ್ಯಸಭಾ ಸದಸ್ಯ ಹೆಚ್.ಡಿ. ದೇವೇಗೌಡ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು. ರಾಜ್ಯಸಭೆಯಲ್ಲಿ ಈ ವಿಷಯದ ಕುರಿತು ಮಾತನಾಡುತ್ತಾ ಅವರು ಅತ್ಯಂತ ಭಾವುಕರಾದರು. ಯೋಜನೆಗಳಿಗೆ ಆಗ್ರಹ: ಕಾವೇರಿ ಮತ್ತು ಕೃಷ್ಣಾ ನದಿ ಪಾತ್ರದ ಪ್ರಮುಖ ನೀರಾವರಿ ಯೋಜನೆಗಳು ದಶಕಗಳಿಂದ ನೆನೆಗುದಿಗೆ ಬಿದ್ದಿವೆ. ಮೇಕೆದಾಟು ಮತ್ತು ಕೃಷ್ಣಾ ಮೇಲ್ದಂಡೆ ಯೋಜನೆ (UKP) ಸೇರಿದಂತೆ ರಾಜ್ಯದ ಹಿತಾಸಕ್ತಿ ಕಾಪಾಡುವ ಯೋಜನೆಗಳಿಗೆ ಕೇಂದ್ರ ಸರ್ಕಾರ ಕೂಡಲೇ ಒಪ್ಪಿಗೆ ನೀಡಬೇಕು ಎಂದು ಅವರು ಮನವಿ ಮಾಡಿದರು. ಭಾವನಾತ್ಮಕ ಕ್ಷಣ: ಕರ್ನಾಟಕದ ರೈತರ ಸಂಕಷ್ಟ ಮತ್ತು ನೀರಾವರಿ ಸಮಸ್ಯೆಗಳ ಬಗ್ಗೆ ವಿವರಿಸುವಾಗ ದೇವೇಗೌಡರು ಗದ್ಗದಿತರಾದರು. “ನನ್ನ ಜೀವನದ ಕೊನೆಯ ಹಂತದಲ್ಲಿದ್ದೇನೆ, ಈ ಯೋಜನೆಗಳು ಜಾರಿಯಾಗುವುದನ್ನು ನೋಡುವ ಆಸೆ ನನಗಿದೆ” ಎಂದು ಅವರು ಭಾವುಕರಾಗಿ ನುಡಿದರು. ತಾರತಮ್ಯದ ಆರೋಪ: ಅಂತರರಾಜ್ಯ ನದಿ ನೀರು ಹಂಚಿಕೆ ವಿಷಯದಲ್ಲಿ ಕರ್ನಾಟಕಕ್ಕೆ ನಿರಂತರವಾಗಿ ಅನ್ಯಾಯವಾಗುತ್ತಿದೆ. ಸುಪ್ರೀಂ ಕೋರ್ಟ್ ಮತ್ತು…
ತುಮಕೂರು: ಪ್ರವಾಸಿ ಸ್ಥಳಗಳಲ್ಲಿ ಶಾಲಾ ಹಾಗೂ ಪ್ರವಾಸಿಗ ಮಕ್ಕಳ ಸುರಕ್ಷತೆ ಖಾತರಿಪಡಿಸಲು ನಿಯಮ ಅಳವಡಿಸುವ ಬಗ್ಗೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ.ಕೆ.ಟಿ. ತಿಪ್ಪೇಸ್ವಾಮಿ ಸರ್ಕಾರದ ಗಮನ ಸೆಳೆದಿದ್ದಾರೆ. ಈ ಬಗ್ಗೆ ಪ್ರವಾಸೋದ್ಯಮ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ಅವರು, ಇತ್ತೀಚಿನ ವರ್ಷಗಳಲ್ಲಿ ಬೀಚ್ ಗಳಲ್ಲಿ ಮುಳುಗಿ ಮಕ್ಕಳು ಸಾವನ್ನಪ್ಪುತ್ತಿರುವುದು, ಸೆಲ್ಫಿ ತೆಗೆದುಕೊಳ್ಳುವ ವೇಳೆ ಬೀಳುವುದು, ಚಾರಣದ ವೇಳೆ ದಾರಿ ತಪ್ಪಿ ಅಪಾಯಕ್ಕೆ ಸಿಲುಕುವುದು ಇತ್ಯಾದಿ ದುರ್ಘಟನೆಗಳು ವರದಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಎಲ್ಲ ಪ್ರವಾಸಿ ತಾಣಗಳ ಸ್ಥಳಗಳಲ್ಲಿ ಮಕ್ಕಳ ಸಹಾಯವಾಣಿ ಪ್ರದರ್ಶನ ಮಾಡಬೇಕು ಎಂದಿದ್ದಾರೆ. ಅಪಾಯಕಾರಿ ಪ್ರದೇಶಗಳಲ್ಲಿ ಸೂಚನಾ ಫಲಕ ಅಳವಡಿಸಬೇಕು. ಪ್ರವಾಸೋದ್ಯಮ ಮತ್ತು ಅರಣ್ಯ ಇಲಾಖೆ ಸಿಬ್ಬಂದಿಗೆ ತರಬೇತಿ ನೀಡಬೇಕು. ಮಕ್ಕಳ ಸುರಕ್ಷತಾ ವಲಯ ಗುರುತಿಸಬೇಕು. ಶಾಲಾ ಪ್ರವಾಸಗಳಿಗೆ ಪೂರ್ವ ನೋಂದಣಿ ಮಾಡಬೇಕು ಇತ್ಯಾದಿ ಸಲಹೆಗಳನ್ನು ನೀಡಿದ್ದು, ಇವುಗಳ ಜಾರಿಗೆ ಮನವಿ ಮಾಡಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್…
ಪಾವಗಡ: ನಿರಂತರವಾಗಿರುವ ಶಿಕ್ಷಣ ವ್ಯವಸ್ಥೆಯ ನಿರ್ಲಕ್ಷ್ಯತೆ ದೇಶಕ್ಕೆ ಮತ್ತು ಪ್ರಜಾಪ್ರಭುತ್ವಕ್ಕೆ ಅತ್ಯಂತ ಅಪಾಯಕಾರಿ ಎಂದು ಹಿರಿಯ ಸಾಹಿತಿ, ನಾಡೋಜ ಬರಗೂರು ರಾಮಚಂದ್ರಪ್ಪ ತಿಳಿಸಿದರು. ಅವರು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಎಸ್.ಎಸ್.ಕೆ. ರಂಗಮಂದಿರದಲ್ಲಿ ಮಂಗಳವಾರ 8ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ಶಿಕ್ಷಣ ದೇಶದಲ್ಲಿ ದೊಡ್ಡಮಟ್ಟದ ಪಲ್ಲಟ ಉಂಟುಮಾಡಿದೆ. ಸೆರೆಮನೆಯಲ್ಲಿದ್ದ ಶಿಕ್ಷಣ ಹಳ್ಳಿಗಳಿಗೆ, ಹಟ್ಟಿಗಳಿಗೆ, ಮಣ್ಣಿನ ಮನೆಗಳಿಗೆ, ಪ್ರತಿಯೊಬ್ಬರಲ್ಲಿ ಹರಿದುಬಂದಾಗ ಅಕ್ಷರಸ್ಥರು ಬೆಳೆದು ವಿದ್ಯಾವಂತರಾದರು. ಸಮುದಾಯಗಳ ಪ್ರಗತಿಯ ಪರ್ವ ಪ್ರಾರಂಭವಾಯಿತು. ಆದರೆ ಇಂದು ಶೇಕಡಾವಾರು ಫಲಿತಾಂಶಕ್ಕೆ ಮನ್ನಣೆ ನೀಡಲಾಗುತ್ತಿದ್ದು, ಪ್ರಗತಿ ಬದಲಾಗಿ ಅಂಕ ಆಧಾರಿತವಾಗಿ ದೊರೆಯುತ್ತಿರುವ ಶಿಕ್ಷಣವನ್ನು ಗುಣಮಟ್ಟದ ಶಿಕ್ಷಣ ಎಂದು ಕರೆಯಲಾಗುವುದಿಲ್ಲ ಎಂದರು. ಕನಿಷ್ಠ ಪ್ರಾಥಮಿಕ ಶಿಕ್ಷಣವಾದರೂ ಏಕರೂಪವಾಗಿರಬೇಕು ಮತ್ತು ಉನ್ನತ ಶಿಕ್ಷಣ ಬಹುರೂಪಿಯಾಗಿರಬೇಕು. ಗಡಿಭಾಗಗಳಲ್ಲಿ ಅನಿವಾರ್ಯವಾಗಿ ಕನಿಷ್ಠ ಎರಡು ಭಾಷೆಗಳು ಮತ್ತು ಎರಡು, ಮೂರು ಸಂಸ್ಕೃತಿಗಳಿರುವುದು ಸಹಜ. ಈ ಪ್ರದೇಶ ಕೊನೆಯಲ್ಲಿ ಇರುವುದರಿಂದ ಆಳುವವರ ನಿರ್ಲಕ್ಷ್ಯಕ್ಕೆ ಒಳಗಾಗುವುದು ಉಂಟು. ಗಡಿನಾಡು ಪ್ರಗತಿಗಾಗಿ ಸ್ಥಾಪನೆಗೊಂಡಿರುವ ಗಡಿನಾಡು ಅಭಿವೃದ್ಧಿ…
ತುಮಕೂರು: ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ವತಿಯಿಂದ, ಬಡವರ ನೋವನ್ನು ತಮ್ಮ ಬರವಣಿಗೆಯ ಮೂಲಕ ಜಗತ್ತಿಗೆ ಸಾದರಪಡಿಸಿದ ಸಾಹಿತ್ಯ ಲೋಕದ ಅಪ್ರತಿಮ ದೈತ್ಯ ಪ್ರತಿಭೆ ದಲಿತ ಕವಿ ಡಾ. ಸಿದ್ದಲಿಂಗಯ್ಯನವರ ಜನ್ಮ ದಿನಾಚರಣೆಯನ್ನು ನಗರದ ಅಮಾನಿಕೆರೆ ಗಾಜಿನ ಮನೆಯ ಆವರಣದಲ್ಲಿ ಆಚರಿಸಲಾಯಿತು. ದಲಿತ ಕವಿ ಸಿದ್ಧಲಿಂಗಯ್ಯರವರ ಕುರಿತು ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಜಿಲ್ಲಾಧ್ಯಕ್ಷರಾದ ಎನ್.ಕೆ.ನಿಧಿಕುಮಾರ್ ಮಾತನಾಡುತ್ತಾ, ಕಾವ್ಯವನ್ನೇ ಖಡ್ಗವಾಗಿಸಿಕೊಂಡು ದಲಿತರ ಪರವಾಗಿ ಸಾಮಾಜಿಕ ಸಮಾನತೆಗಾಗಿ ತಮ್ಮ ಬದುಕಿನದ್ದಕ್ಕೂ ಹೋರಾಟ ನಡೆಸಿದ ಕನ್ನಡದ ಹೆಮ್ಮೆಯ ಬಂಡಾಯ ಕವಿಯಾಗಿದ್ದವರು ಡಾ.ಸಿದ್ದಲಿಂಗಯ್ಯನವರು. ಅವರು ಬಡ ಕುಟುಂಬವೊಂದರಲ್ಲಿ ದೇವಯ್ಯ ಮತ್ತು ವೆಂಕಟಮ್ಮನವರ ಪುತ್ರರಾಗಿ 1954ರ ಫೆಬ್ರವರಿ ೩ರಂದು ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಮಂಚನಬೆಲೆಯಲ್ಲಿ ಜನಿಸಿದರು. ಪ್ರೊ. ಜಿ.ಎಸ್. ಶಿವರುದ್ರಪ್ಪನವರ ಮಾರ್ಗದರ್ಶನದಲ್ಲಿ `ಗ್ರಾಮದೇವತೆಗಳು’ ಎಂಬ ಪ್ರೌಢ ಪ್ರಬಂಧವನ್ನು ಮಂಡಿಸಿ 1989ರಲ್ಲಿ ಪಿಎಚ್.ಡಿ. ಪದವಿಯನ್ನು ಗಳಿಸಿದರು. ಬೆಂಗಳೂರು…
ಸರಗೂರು: ಲ್ಯಾಂಡ್ ಲಾರ್ಡ್ ಸಿನೆಮಾದ ನಾಯಕ ರಾಚಯ್ಯ ಸಂವಿಧಾನದ ಸ್ವರೂಪವಾಗಿಯೂ, ಆತ ಬಳಸುವ ಕೊಡಲಿಯು ಸಂವಿಧಾನ ಜಾರಿ ಮಾಡುವ ಕಾನೂನಿನ ರೂಪಕವಾಗಿರುವ ಸಿನಿಮಾ ನನ್ನ ಎಲ್ಲಾ ಸಮುದಾಯದ ಬಂಧುಗಳು ಸಿನಿಮಾ ನೋಡಬೇಕಾಗಿರುವ ಸಿನಿಮಾ ಎಂದು ಉದ್ಯಮಿ ಹಾಗೂ ಸಮಾಜ ಸೇವಕ ಮದನ್ ಮ್ಯಾಡಿ ತಿಳಿಸಿದರು. ಪಟ್ಟಣದ ಶಂಕರ್ ಟಾಕೀಸ್ ನಲ್ಲಿ ಲ್ಯಾಂಡ್ ಲಾರ್ಡ್ ಸಿನಿಮಾ ನೋಡಲು ಬುಧವಾರದಂದು ಉಚಿತವಾಗಿ ಒಂದು ದಿನದ ಟಿಕೆಟ್ ಯನ್ನು ವಿತರಿಸಿ ಮಾತನಾಡಿದರು. ಈ ಗ್ರಾಮಿಣ ಭಾಗದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಉಚಿತವಾಗಿ ಸಿನಿಮಾ ಟಿಕೆಟ್ ನೀಡುತ್ತಿದ್ದೇವೆ.ಅದರಿಂದ ಈ ಸಿನಿಮಾ ನೋಡಿ ಹಳ್ಳಿ ಹಳ್ಳಿಯ ಜನರು ಬಂದು ನೋಡಿ ಎಂದು ಕರೆ ನೀಡಿದರು. ಸಿನಿಮಾದಲ್ಲಿ ಪಾಳೇಗಾರ ಸಣ್ಣಧಣಿಯ ಮಾತಿನಿಂದ ಹೊರಡುವ ಕಾನೂನುಗಳು ಬದಲಾದರೂ ಕಟ್ಟಳೆಗಳು ಬದಲಾಗುವುದಿಲ್ಲ. ದೇಶಕ್ಕೆ ಸ್ವಾತಂತ್ರ್ಯ ಬಂದಿರಬಹುದು. ಆದರೆ, ನಮ್ಮ ಗ್ರಾಮಕ್ಕಲ್ಲ. ಕೂಲಿಗೆ ಕಾಳು ಮಾತ್ರವೇ. ಆಳು ಆಳಾಗಿಯೇ ಇರಬೇಕೆಂದು ಧ್ವನಿಸುವ ಮಾತುಗಳು ಪಾಳೇಗಾರಿಕೆಯ ಜಡ್ಡುಗಟ್ಟಿದ ಮನಃಸ್ಥಿತಿ ಸುಲಭವಾಗಿ ಹೋಗುವಂತಹದ್ದಲ್ಲ. ಸಂವಿಧಾನ ಜಾರಿ ಮಾಡುವವರು…
ಕೊರಟಗೆರೆ: ನಮ್ಮ ಹಳ್ಳಿಗಳು ಅಭಿವೃದ್ಧಿಯ ಜೊತೆಗೆ ಬದಲಾವಣೆಯಾಗಬೇಕಾದರೆ ದೇವತಾ ಕಾರ್ಯಗಳು ಹೆಚ್ಚು ಹೆಚ್ಚಾಗಿ ನಡೆಯಬೇಕು, ಇಂತಹ ಹಬ್ಬಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ಜಾತ್ಯಾತೀತವಾಗಿ ಆಚರಿಸಬೇಕು ಎಂದು ಎಲೆರಾಂಪುರ ನರಸಿಂಹಗಿರಿ ಸುಕ್ಷೇತ್ರ ಡಾ.ಹನುಮಂತನಾಥ ಸ್ವಾಮೀಜಿ ತಿಳಿಸಿದರು. ತಾಲ್ಲೂಕಿನ ಹೊಳವನಹಳ್ಳಿ ಹೋಬಳಿ ಮಾವತ್ತೂರು ಗ್ರಾ.ಪಂ ವ್ಯಾಪ್ತಿಯ ಲಿಂಗಾಪುರದಲ್ಲಿ ಶ್ರೀಮಾರಮ್ಮ ದೇವಿ ಸೇವಾ ಸಮಿತಿಯಿಂದ ಹಮ್ಮಿಕೊಂಡಿದ್ದ ಗ್ರಾಮ ದೇವತೆ ಶ್ರೀಮಾರಮ್ಮ ದೇವಿಯ ಉತ್ಸವ ಮೂರ್ತಿ ಪ್ರತಿಷ್ಠಾಪನಾ ಧಾರ್ಮಿಕ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. ಕಳೆದ ಎರಡು ದಿನಗಳಿಂದ ಶಾಸ್ತ್ರೋಕ್ತವಾಗಿ ಧಾರ್ಮಿಕ ಕಾರ್ಯಕ್ರಮ ನಡೆದಿದೆ, ಹೋಮ, ಹವನ, ವಿಶೇಷ ಪೂಜೆಯ ಮೂಲಕ ಮಾರಮ್ಮ ದೇವಿಗೆ ಶಕ್ತಿ ನೀಡಿದ್ದಾರೆ, ಪ್ರತಿಯೊಬ್ಬರು ಸ್ವಾರ್ಥಿಗಳಾಗಿ ಬದುಕದೇ ಈಶ ಸೇವೆ ದೇಶ ಸೇವೆ ಎಂಬಂತೆ ಭಾವನೆ ಇಟ್ಟುಕೊಂಡು ಸೇವಾ ಪುರಸ್ಕಾರಗಳು ಆಗಬೇಕು. ನಾವು ಹುಟ್ಟಿದ ಗ್ರಾಮ, ಬೆಳೆದಂತಹ ಸ್ಥಳ ಸ್ವರ್ಗಕ್ಕಿಂತಲೂ ಶ್ರೇಷ್ಠವಾದದ್ದು ಎಂದು ಹೇಳಿದರು. ಕರವೇ (ಪ್ರವೀಣ್ ಶೆಟ್ಟಿ ಬಣ) ಅಧ್ಯಕ್ಷ ನರಸಿಂಹರಾಜು ಮಾತನಾಡಿ, ಮಾಜಿ ಜಿಪಂ ಸದಸ್ಯ ಪಿ.ಎನ್ ಕೃಷ್ಣಮೂರ್ತಿ ಅಣ್ಣನವರ…
ತುಮಕೂರು: ಜಿಲ್ಲೆಯಾದ್ಯಂತ ಈ ಬಾರಿ ಮಾವಿನ ಮರಗಳು ಹೂವಿನಿಂದ ಕಂಗೊಳಿಸುತ್ತಿದ್ದು, ಬಂಪರ್ ಇಳುವರಿಯ ಮುನ್ಸೂಚನೆ ಸಿಕ್ಕಿದೆ. ಸುಮಾರು 83 ಸಾವಿರ ಮೆಟ್ರಿಕ್ ಟನ್ ಮಾವು ಉತ್ಪಾದನೆಯಾಗುವ ನಿರೀಕ್ಷೆಯಿದೆ. ಆದರೆ, ಈ ಸಂತಸದ ನಡುವೆಯೇ ಮಾರುಕಟ್ಟೆಯಲ್ಲಿ ಬೆಲೆ ಕುಸಿಯಬಹುದು ಎಂಬ ಆತಂಕ ರೈತರನ್ನು ಕಾಡತೊಡಗಿದೆ. ಇಳುವರಿಯ ಆಶಾಭಾವನೆ: ಕಳೆದ ಎರಡು ವರ್ಷಗಳಿಂದ ಹವಾಮಾನ ವೈಪರೀತ್ಯ ಹಾಗೂ ಅಕಾಲಿಕ ಮಳೆಯಿಂದಾಗಿ ಮಾವು ಬೆಳೆಗಾರರು ತೀವ್ರ ನಷ್ಟ ಅನುಭವಿಸಿದ್ದರು. ಕಳೆದ ವರ್ಷ ಹೂವಿಗಿಂತ ಮರಗಳಲ್ಲಿ ಚಿಗುರು ಹೆಚ್ಚಾಗಿ ಕಂಡುಬಂದಿತ್ತು, ಇದರಿಂದ ಇಳುವರಿ ಗಣನೀಯವಾಗಿ ಕುಸಿದಿತ್ತು. ಆದರೆ ಈ ಬಾರಿ ಮರ ತುಂಬಾ ಹೂವುಗಳು ಬಿಟ್ಟಿರುವುದು ರೈತರಲ್ಲಿ ಹೊಸ ಭರವಸೆ ಮೂಡಿಸಿದೆ. ಕಾಡುತ್ತಿರುವ ಆತಂಕಗಳು ತಾಪಮಾನ ಏರಿಕೆ: ಫೆಬ್ರವರಿಯಲ್ಲೇ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು, ಮಾರ್ಚ್ ವೇಳೆಗೆ ಇದು ಮತ್ತಷ್ಟು ಏರಲಿದೆ. ಅತಿಯಾದ ಉಷ್ಣಾಂಶದಿಂದ ಹೂವುಗಳು ಉದುರಿ, ಕಾಯಿ ಕಟ್ಟುವ ಪ್ರಕ್ರಿಯೆಗೆ ತೊಂದರೆಯಾಗಬಹುದೇ ಎಂಬ ಭೀತಿ ಇದೆ. ಗಾಳಿ-ಮಳೆ: ಮುಂಗಾರು ಬೇಗನೆ ಆರಂಭವಾಗಿ ಜೋರಾದ ಗಾಳಿ ಬೀಸಿದರೆ ಮರದಲ್ಲಿರುವ…
ಪಾವಗಡ: ಗಡಿ ಹಾಗೂ ಹಿಂದುಳಿದ ತಾಲ್ಲೂಕು ಎಂಬ ಹಣೆಪಟ್ಟಿ ಹೊತ್ತಿರುವ ಪಾವಗಡ ತಾಲ್ಲೂಕಿನಲ್ಲಿ, ಸಂಕಷ್ಟದಲ್ಲಿರುವವರ ಪಾಲಿಗೆ ಹೆಲ್ಪ್ ಸೊಸೈಟಿ ಸಂಸ್ಥೆಯು ‘ಬರದ ನಾಡಿನ ಭಗೀರಥ’ನಂತೆ ಕಾರ್ಯನಿರ್ವಹಿಸುತ್ತಿದೆ ಎಂದು ವ್ಯವಸಾಯ ಸೇವಾ ಸಹಕಾರ ಸಂಘದ ನಿರ್ದೇಶಕ ಲೋಕೇಶ್ ಪಾಳೇಗಾರ್ ಬಣ್ಣಿಸಿದರು. ತಾಲ್ಲೂಕಿನ ಕರಿಯಮ್ಮನಪಾಳ್ಯದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಹೆಲ್ಪ್ ಸೊಸೈಟಿ ವತಿಯಿಂದ ಏರ್ಪಡಿಸಲಾಗಿದ್ದ ಶುದ್ಧ ಕುಡಿಯುವ ನೀರಿನ ಘಟಕ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಫ್ಲೋರೇಡ್ ಮುಕ್ತ ಆರೋಗ್ಯಕರ ಸಮಾಜದತ್ತ ಹೆಜ್ಜೆ: ಆರೋಗ್ಯ, ಉದ್ಯೋಗ, ಸರ್ಕಾರಿ ಶಾಲೆಗಳ ಸಬಲೀಕರಣ, ಬಡತನ ನಿರ್ಮೂಲನೆ ಹಾಗೂ ಪ್ರಕೃತಿ ವಿಕೋಪದಂತಹ ಸಂದರ್ಭಗಳಲ್ಲಿ ಹೆಲ್ಪ್ ಸೊಸೈಟಿ ಸದಾ ಮುಂಚೂಣಿಯಲ್ಲಿದೆ. ತಾಲ್ಲೂಕಿನ ನೀರಿನಲ್ಲಿ ಫ್ಲೋರೇಡ್ ಅಂಶ ಹೆಚ್ಚಾಗಿದ್ದು, ಸಾವಿರಾರು ಜನರು ಹಾಗೂ ಮಕ್ಕಳು ಅಂಗವಿಕಲತೆಯ ಭೀತಿ ಎದುರಿಸುತ್ತಿದ್ದಾರೆ. ಇದನ್ನು ಮನಗಂಡು ಶಾಲೆಗಳಿಗೆ ಶುದ್ಧ ನೀರಿನ ಘಟಕಗಳನ್ನು ನೀಡುತ್ತಿರುವುದು ಶ್ಲಾಘನೀಯ ಎಂದರು. “ಸಂಕಷ್ಟದಲ್ಲಿರುವವರಿಗೆ ಸಹಾಯ ಹಸ್ತ ಚಾಚುವ ಹೆಲ್ಪ್ ಸೊಸೈಟಿಯ ಕಾರ್ಯವೈಖರಿ ತಾಲ್ಲೂಕಿನ ಅಭಿವೃದ್ಧಿಗೆ ಪೂರಕವಾಗಿದೆ.” -…
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಅವರಗುಪ್ಪದಲ್ಲಿ ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ನಡೆದ ಗಲಾಟೆ ಭೀಕರ ಹತ್ಯೆಯಲ್ಲಿ ಅಂತ್ಯಗೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಖ್ಯಾತ ಜ್ಯೋತಿಷಿ ಕಮಲಾಕರ್ ಭಟ್ ಮತ್ತು ಸುಚಿತ್ರಾ ಸೇರಿದಂತೆ ಒಟ್ಟು ಏಳು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಯ ವಿವರ: ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಮಹೇಶ್ ನಾಯ್ಕ್ ಅವರ ಪತ್ನಿ ಸುಚಿತ್ರಾ, ಸಿದ್ದಾಪುರದಲ್ಲಿ ಇಬ್ಬರು ಹೆಣ್ಣುಮಕ್ಕಳೊಂದಿಗೆ ವಾಸವಾಗಿದ್ದರು. ಈ ಸಮಯದಲ್ಲಿ ಆಕೆಗೆ ಜ್ಯೋತಿಷಿ ಕಮಲಾಕರ್ ಭಟ್ ಪರಿಚಯವಾಗಿ, ಇಬ್ಬರ ನಡುವೆ ಅಕ್ರಮ ಸಂಬಂಧ ಬೆಳೆದಿತ್ತು. ಕಮಲಾಕರ್ ಭಟ್ ಆಗಾಗ ಸುಚಿತ್ರಾ ಮನೆಗೆ ಬಂದು ಹೋಗುತ್ತಿದ್ದನು. ಈ ವಿಚಾರ ತಿಳಿದ ಹಿರಿಯ ಮಗಳು ತನ್ನ ತಂದೆ ಮಹೇಶ್ ನಾಯ್ಕ್‌ಗೆ ಮಾಹಿತಿ ನೀಡಿದ್ದಾಳೆ. ಇದರಿಂದ ಕೆರಳಿದ ಮಹೇಶ್ ನಾಯ್ಕ್ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರು ನೀಡಿದ ನಂತರ ಅವರು ತಮ್ಮ ಸಹೋದರ ವಸಂತ್ ನಾಯ್ಕ್ ಅವರ ಮನೆಗೆ ತೆರಳಿದ್ದರು. ತಮ್ಮ ವಿರುದ್ಧ ದೂರು ನೀಡಿದ ವಿಷಯ ತಿಳಿದ ಸುಚಿತ್ರಾ,…