Author: admin

ಮಧುಗಿರಿ: ಎರಡು ಪ್ರತ್ಯೇಕ ಅಪಘಾತದಲ್ಲಿ ಓರ್ವ ಮಹಿಳೆ ಮೃತಪಟ್ಟು, ಹಲವರಿಗೆ ಗಾಯವಾಗಿರುವ ಘಟನೆ ಮಧುಗಿರಿ ತಾಲೂಕಿನ ಮಿಡಿಗೇಶಿ ವ್ಯಾಪ್ತಿಯಲ್ಲಿ ನಡೆದಿದೆ. ಕಾರು ಡಿಕ್ಕಿ: ಮಹಿಳೆ ಸಾವು ಮಿಡಿಗೇಶಿ: ಪಾದಚಾರಿ ಮಹಿಳೆಯೊಬ್ಬರಿಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮವಾಗಿ ಮಹಿಳೆಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಧುಗಿರಿ ತಾಲೂಕಿನ ಮಿಡಿಗೇಶಿ ಗ್ರಾಮದ ಕೆಪಿಟಿಸಿಎಲ್ ಕಚೇರಿ ಮುಂಭಾಗ ಫೆ.21 ರಂದು ನಡೆದಿದೆ. ಮೃತ ಮಹಿಳೆಯನ್ನು ಲತಾ (45) ಎಂದು ಗುರುತಿಸಲಾಗಿದೆ. ಸದರಿ ಮಹಿಳೆಯು ನ್ಯಾಯಬೆಲೆ ಅಂಗಡಿಯಿಂದ ಮನೆಗೆ ಪಡಿತರ ತರುವ ವೇಳೆ ಈ ಘಟನೆ ಸಂಭವಿಸಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದವರೆಲ್ಲರೂ ಸುರಕ್ಷಿತರಾಗಿದ್ದಾರೆ. ಘಟನಾ ಸ್ಥಳಕ್ಕೆ ಸಿಪಿಐ ಹನುಮಂತರಾಯಪ್ಪ ಅವರು ಭೇಟಿ ನೀಡಿ ಪರಿಶೀಲಿಸಿದರು. ಕಾರಿನ ಚಾಲಕನನ್ನು ವಶಕ್ಕೆ ಪಡೆಯಲಾಗಿದ್ದು, ಮಿಡಿಗೇಶಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದ್ವಿಚಕ್ರ ವಾಹನಗಳ ಡಿಕ್ಕಿ: ಮಿಡಿಗೇಶಿ: ದ್ವಿಚಕ್ರ ವಾಹನಗಳೆರಡು ಮುಖಾಮುಖಿ ಡಿಕ್ಕಿಯಾದ ಪರಿಣಾಮವಾಗಿ ಹಲವರಿಗೆ ಪೆಟ್ಟಾಗಿರುವ ಘಟನೆ ಮಧುಗಿರಿ ತಾಲ್ಲೂಕಿನ ರಾಜ್ಯ ಹೆದ್ದಾರಿ ರಸ್ತೆಯ ಮಿಡಿಗೇಶಿ ಬಸ್ ನಿಲ್ದಾಣದ ಸಮೀಪ ನಡೆದಿದೆ. ಪಾವಗಡ…

Read More

ತುಮಕೂರು: ಪರಿಶಿಷ್ಟ ಜಾತಿಗಳ ಒಳಮೀಸಲಾತಿ ವರ್ಗೀಕರಣದ ವಿಚಾರಕ್ಕೆ ಸಂಬಂಧಿಸಿದಂತೆ ಆಗಸ್ಟ್ 1, 2024ರ ಸರ್ವೋಚ್ಚ ನ್ಯಾಯಾಲಯದ ಐತಿಹಾಸಿಕ ತೀರ್ಪಿನ ಆಧಾರದ ಮೇಲೆ ರಾಜ್ಯ ಸರ್ಕಾರ ತಮ್ಮ ಪರಮಾಧಿಕಾರವನ್ನು ಚಲಾಯಿಸಿ ಇದುವರೆಗೂ ನೊಂದ ಸಮುದಾಯಗಳು ನಡೆಸಿಕೊಂಡು ಬಂದಿರುವ ಅವಿಶ್ರಾಂತ ಸಂಘರ್ಷಕ್ಕೆ ಇತಿಶ್ರೀ ಹಾಡಬಹುದೆಂಬ ನಿರೀಕ್ಷೆ ಹುಸಿಯಾಗಿದೆ. ಅದರಲ್ಲೂ ಸಂವಿಧಾನ ಪರ, ಸಾಮಾಜಿಕ ನ್ಯಾಯದ ಪರ, ಸಮಾಜವಾದಿ ಸಿದ್ಧಾಂತದ ಹಿನ್ನೆಲೆಯ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರವು ಒಳಮೀಸಲಾತಿ ವಿಚಾರದಲ್ಲಿ ಅಸ್ಪಷ್ಟ ತೀರ್ಮಾನ ಕೈಗೊಳ್ಳಬಹುದೆಂದು ಯಾರೂ ಭಾವಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವಕಾಶ ವಂಚಿತ ಸಮುದಾಯಗಳು ಮತ್ತೊಂದು ಸುತ್ತಿನ ಸಂಘರ್ಷಕ್ಕೆ ಮುಂದಾಗಲು ಆಡಳಿತಾರೂಢ ಸರ್ಕಾರವೇ ಅವಕಾಶ ಮಾಡಿಕೊಟ್ಟಿದೆ ಎಂದು ಜಿಲ್ಲಾ ಮಾದಾರ ಮಹಾಸಭಾ ಹಾಗೂ ಒಳ ಮೀಸಲಾತಿ ಹೋರಾಟ ಸಮಿತಿ ತಿಳಿಸಿದೆ. ಸರ್ವೋಚ್ಚ ನ್ಯಾಯಾಲಯದ ಆಶಯದಂತೆ ಹಿಂದುಳಿದಿರುವಿಕೆಯೇ ಒಳಮೀಸಲಾತಿ ಹಂಚಿಕೆಯ ಮಾನ ದಂಡವಾಗಿದೆ. ತೆಲಂಗಾಣದಲ್ಲಿ ಒಳಮೀಸಲಾತಿ ಜಾರಿಗೊಳಿಸಿ ನೆನೆಗುದಿಗೆ ಬಿದ್ದಿರುವ ಅಸಂಖ್ಯಾತ ಸರ್ಕಾರಿ ಹುದ್ದೆಗಳ ನೇಮಕಾತಿಗೆ ಯುದ್ಧೋಪಾದಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಅದಕ್ಕೆ ವ್ಯತಿರಿಕ್ತವಾಗಿ ಕರ್ನಾಟಕದಲ್ಲಿ ಮಾತ್ರ ಸರ್ವೋಚ್ಚ ನ್ಯಾಯಾಲಯದ…

Read More

ತುರುವೇಕೆರೆ: ದೇವರು ಬಂದಂತೆ ನಾಟಕವಾಡಿ ನೂತನ ದಲಿತ ದಂಪತಿಯನ್ನು ಅವಮಾನಿಸಿ ದೇವಾಲಯದಿಂದ ಹೊರಕಳಿಸಿದ ಘಟನೆಗೆ ಸಂಬಂಧಿಸಿದಂತೆ  ಕೃತ್ಯ ನಡೆಸಿದ ವ್ಯಕ್ತಿ ಹಾಗೂ ಸಹಚರರ ಮೇಲೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯ ವಿವರ: ತಾಲೂಕಿನ ಗೋಣಿ ತುಮಕೂರು ಗ್ರಾಮದ ಅರಸಮ್ಮ ದೇವಾಲಯದಲ್ಲಿ ಈ ಘಟನೆ ನಡೆದಿದೆ. ದಲಿತ ಜನಾಂಗದ ಯುವಕ ಹೊಸದಾಗಿ ಮದುವೆಯಾಗಿ ದಂಪತಿ ಅರಸಮ್ಮ ದೇವಾಲಯಕ್ಕೆ ಪೂಜೆಗೆ ಹೋಗಿದ್ದಾಗ ನಾರಾಯಣಪ್ಪ ಎಂಬ ವ್ಯಕ್ತಿ ದೇವಾಲಯದ ಒಳಗೆ ದೇವರು ಬಂದಂತೆ ನಟನೆ ಮಾಡಿ ದಲಿತರು ಒಳಗೆ ಬಂದರೆ ಪುಣ್ಯ ಮಾಡಿಸಬೇಕು ಎಂದು ದೇವಾಲಯದ ಒಳಗಿದ್ದ ದಲಿತ ಕುಟುಂಬವನ್ನು ಹೊರಕಳಿಸಿ ಅವಮಾನ ಮಾಡಿದ್ದ. ಈ ಎಲ್ಲ ನಾಟಕೀಯ ಬೆಳವಣಿಗೆಯನ್ನು ಮೊಬೈಲ್‌ ನಲ್ಲಿ ಸೆರೆ ಮಾಡಲಾಗಿತ್ತು. ಈ ಘಟನೆಯಿಂದ ನೊಂದ ಜಗದೀಶ್ ಪಟ್ಟಣದ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಅನ್ವಯ ಪೊಲೀಸ್ ಠಾಣೆಯಲ್ಲಿ ಎಫ್‌ ಐಆರ್ ದಾಖಲಾಗಿದ್ದು, ಗ್ರಾಮದ ನಾರಾಯಣಪ್ಪ, ಪ್ರಭಾ, ಕಾಂತಣ್ಣ, ಅಮೂಲ್ಯ, ಪುಟ್ಟೇಗೌಡ, ಪದ್ಮ ಇತರರ ಮೇಲೆ ಎಸ್.ಸಿ.,…

Read More

ಮಧುಗಿರಿ: ತುಮಕೂರು ಜಿಲ್ಲೆಯ ಮಧುಗಿರಿ ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಬಸ್‌ ಗಳಿಗಾಗಿ ಕಾಯುವ ಪ್ರಯಾಣಿಕರಿಗೆ ಸೂಕ್ತ ತಂಗುದಾಣಗಳಿಲ್ಲದೆ ತೀವ್ರ ತೊಂದರೆಯಾಗುತ್ತಿದೆ. ಪಟ್ಟಣದ ಹೃದಯಭಾಗದಲ್ಲಿರುವ ರಾಘವೇಂದ್ರ ಸರ್ಕಲ್ ಸೇರಿದಂತೆ ಹಲವು ಕಡೆಗಳಲ್ಲಿ ಆಶ್ರಯವಿಲ್ಲದೆ ಸಾರ್ವಜನಿಕರು ಬಿಸಿಲು ಮತ್ತು ಮಳೆಯಲ್ಲಿ ನಿಂತೇ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಪಟ್ಟಣದ ರಾಘವೇಂದ್ರಸ್ವಾಮಿ ದೇವಸ್ಥಾನದ ಮುಂಭಾಗ, ಪಾವಗಡ ವೃತ್ತ ಮತ್ತು ಗೌರಿಬಿದನೂರು ವೃತ್ತಗಳು ತುಮಕೂರು, ಬೆಂಗಳೂರು, ಶಿರಾ ಸೇರಿದಂತೆ ಅಂತರರಾಜ್ಯಗಳಿಗೂ ಸಂಪರ್ಕ ಕಲ್ಪಿಸುವ ಪ್ರಮುಖ ಕೇಂದ್ರಗಳಾಗಿವೆ. ಹಿಂದೆ ರಾಘವೇಂದ್ರ ವೃತ್ತದಲ್ಲಿ ತಂಗುದಾಣವಿತ್ತಾದರೂ, ಶಿಥಿಲಗೊಂಡಿದ್ದ ಆ ಕಟ್ಟಡವು ಕೆಲವು ವರ್ಷಗಳ ಹಿಂದೆ ಮಳೆಗೆ ಬಿದ್ದು ಹೋಗಿದೆ. ಅಂದಿನಿಂದ ಈವರೆಗೆ ಹೊಸ ತಂಗುದಾಣ ನಿರ್ಮಾಣವಾಗದ ಕಾರಣ ಪ್ರಯಾಣಿಕರು ಪರದಾಡುತ್ತಿದ್ದಾರೆ. “ಕಾಲೇಜು ಮುಗಿಸಿ ಮನೆಗೆ ಹೋಗಲು ಪ್ರತಿದಿನ ಬಸ್‌ಗಾಗಿ ಗಂಟೆಗಟ್ಟಲೆ ನಿಂತೇ ಕಾಯಬೇಕಾಗಿದೆ. ಜನಪ್ರತಿನಿಧಿಗಳು ಕೂಡಲೇ ಈ ಬಗ್ಗೆ ಗಮನ ಹರಿಸಬೇಕು” ಎಂದು ಸ್ಥಳೀಯ ವಿದ್ಯಾರ್ಥಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಪುರಸಭೆ ಮುಖ್ಯಾಧಿಕಾರಿ ಸುರೇಶ್ ಅವರು, “ಪಟ್ಟಣದಲ್ಲಿ ಸದ್ಯ…

Read More

ಮಧುಗಿರಿ: ತಾಲೂಕಿನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತವೊಂದರಲ್ಲಿ ಪಡಿತರ (ರೇಷನ್) ತರಲು ಹೋಗುತ್ತಿದ್ದ ಮಹಿಳೆಯೊಬ್ಬರು ಕಾರು ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಮೃತ ಮಹಿಳೆಯು ಮನೆಗೆ ಬೇಕಾದ ಪಡಿತರ ಪದಾರ್ಥಗಳನ್ನು ತರಲು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಕಾರೊಂದು ಅವರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಮಹಿಳೆ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಅಪಘಾತವು ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ವ್ಯಾಪ್ತಿಯಲ್ಲಿ ನಡೆದಿದ್ದು, ಘಟನೆಯಿಂದಾಗಿ ಸ್ಥಳೀಯವಾಗಿ ಆಕ್ರೋಶ ಮತ್ತು ವಿಷಾದ ವ್ಯಕ್ತವಾಗಿದೆ. ಅಪಘಾತ ಸಂಭವಿಸುತ್ತಿದ್ದಂತೆ ಚಾಲಕ ಕಾರಿನೊಂದಿಗೆ ಪರಾರಿಯಾಗಲು ಯತ್ನಿಸಿದ್ದ ಎನ್ನಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

Read More

ಬಳ್ಳಾರಿ:  ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶೇ.99 ರಷ್ಟು ಕಠಿಣ ಪರಿಶ್ರಮ, ಕೇವಲ ಶೇ.01 ರಷ್ಟು ಅದೃಷ್ಟದಿಂದ ಮಾತ್ರ ಏನನ್ನಾದರೂ ಸಾಧಿಸಲು ಸಾಧ್ಯ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಧೀಶರಾದ ರಾಜೇಶ್ ಎನ್. ಹೊಸಮನೆ ಅವರು ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಜಿಪಂ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಬಳ್ಳಾರಿ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳ ನಿಲಯಾರ್ಥಿಗಳಿಗೆ ಶನಿವಾರ ಹಮ್ಮಿಕೊಂಡಿದ್ದ ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ವೃತ್ತಿ ಮಾರ್ಗದರ್ಶನ ಕುರಿತು ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಸ್ಪರ್ಧಾತ್ಮಕ ಯುಗದಲ್ಲಿ ಶಾರೀರಿಕ, ಮಾನಸಿಕವಾಗಿ ಸದೃಢರಾಗುವ ಮೂಲಕ ಸತತ ಪರಿಶ್ರಮದಿಂದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಧೈರ್ಯದಿಂದ ಎದುರಿಸಬೇಕು ಎಂದು ತಿಳಿಸಿದರು. ವಿದ್ಯಾರ್ಥಿ ಜೀವನದಲ್ಲಿ ಸಮಯ ಅಮೂಲ್ಯವಾಗಿದ್ದು, ಶಾಲಾ–ಕಾಲೇಜು ಮುಗಿದ ನಂತರವೇ ನಿಜವಾದ ಜೀವನ ಆರಂಭಗೊಳ್ಳುತ್ತದೆ. ಸಾಧಕರ ಜೀವನ…

Read More

ಸಂತಪುರ: ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಸಂತಪುರದ ಅನುಭವ ಮಂಟಪ ಗುರುಕುಲ್ ಪಬ್ಲಿಕ್ ಸ್ಕೂಲ್‌ನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ‘ರಾಷ್ಟ್ರೀಯ ಬಾಯಿ ಹಲ್ಲು ತಪಾಸಣೆ ಶಿಬಿರ’ (NOHP) ವನ್ನು ಹಮ್ಮಿಕೊಳ್ಳಲಾಗಿತ್ತು. ಸಂತಪುರ ಸಮುದಾಯ ಆರೋಗ್ಯ ಕೇಂದ್ರದ ದಂತ ವೈದ್ಯಾಧಿಕಾರಿಗಳಾದ ಡಾ.ರೇಣುಕಾ ಅವರು ಎಲ್.ಕೆ.ಜಿ. ಮತ್ತು ಯು.ಕೆ.ಜಿ. ಮಕ್ಕಳಿಗೆ ಸ್ವಯಂ ಪ್ರೇರಿತವಾಗಿ ಉಚಿತ ಬ್ರಷ್‌ಗಳನ್ನು ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದ ಡಾ. ರೇಣುಕಾ ಅವರು, ಸಣ್ಣ ವಯಸ್ಸಿನಲ್ಲೇ ಹಲ್ಲಿನ ಆರೋಗ್ಯ ಕಾಪಾಡಿಕೊಳ್ಳುವುದು ಎಷ್ಟು ಮುಖ್ಯ ಎಂಬುದರ ಕುರಿತು ಜಾಗೃತಿ ಮೂಡಿಸಿದರು. “ಮಕ್ಕಳು ದಿನಕ್ಕೆ ಎರಡು ಬಾರಿ ಕಡ್ಡಾಯವಾಗಿ ಹಲ್ಲು ಉಜ್ಜಬೇಕು. ಅತಿಯಾದ ಚಾಕೊಲೇಟ್ ಮತ್ತು ಎಣ್ಣೆ ಪದಾರ್ಥಗಳ ಸೇವನೆಯಿಂದ ಹಲ್ಲುಗಳು ಬೇಗನೆ ಹಾಳಾಗುತ್ತವೆ” ಎಂದು ಎಚ್ಚರಿಕೆ ನೀಡಿದರು. ತಪಾಸಣೆಯ ಸಮಯದಲ್ಲಿ ಹಲ್ಲು ಹುಳುಕಿರುವ ಮಕ್ಕಳ ಬಗ್ಗೆ ಶಾಲಾ ಶಿಕ್ಷಕರಿಗೆ ಮಾಹಿತಿ ನೀಡಿದ ವೈದ್ಯರು, ತಕ್ಷಣವೇ ಅವರ ಪೋಷಕರಿಗೆ ತಿಳಿಸಿ ಸೂಕ್ತ…

Read More

ಬೆಂಗಳೂರು: ರಾಜ್ಯ ಸರ್ಕಾರದಲ್ಲಿ ‘ಕಮಿಷನ್ ಸಂಸ್ಕೃತಿ’ ಇದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ನೀಡಿರುವ ಹೇಳಿಕೆಯು ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರವನ್ನು ಬಹಿರಂಗಪಡಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಟೀಕಿಸಿದ್ದಾರೆ. ‘ಲಂಚ ಗ್ಯಾರಂಟಿ’: ಕಾಂಗ್ರೆಸ್ ಸರ್ಕಾರ ತನ್ನ ‘ಪಂಚ ಗ್ಯಾರಂಟಿ’ಗಳ ಬಗ್ಗೆ ಅಬ್ಬರದ ಪ್ರಚಾರ ಮಾಡುತ್ತಿದೆ. ಆದರೆ ಜನರಿಗೆ ನಿಜವಾಗಿ ಸಿಗುತ್ತಿರುವುದು ಕೇವಲ ‘ಲಂಚ ಗ್ಯಾರಂಟಿ’ ಮಾತ್ರ ಎಂದು ವಿಜಯೇಂದ್ರ ವ್ಯಂಗ್ಯವಾಡಿದ್ದಾರೆ. ಜಾರಕಿಹೊಳಿ ಒಪ್ಪಿಗೆ: ಸರ್ಕಾರಿ ಕಾಮಗಾರಿಗಳಲ್ಲಿ ಕಮಿಷನ್ ಪದ್ಧತಿ ಹಿಂದೆಯೂ ಇತ್ತು, ಈಗಲೂ ಇದೆ ಮತ್ತು ಮುಂದೆಯೂ ಇರುತ್ತದೆ ಎಂಬ ಸತೀಶ್ ಜಾರಕಿಹೊಳಿ ಅವರ ಮಾತುಗಳು ಜನರಲ್ಲಿರುವ ಆತಂಕವನ್ನು ನಿಜವಾಗಿಸಿವೆ. ಸ್ವತಃ ಲೋಕೋಪಯೋಗಿ ಸಚಿವರೇ ವ್ಯವಸ್ಥೆಯಲ್ಲಿನ ಈ ಲೋಪವನ್ನು ಒಪ್ಪಿಕೊಂಡಿರುವುದು ಗಂಭೀರ ವಿಚಾರ ಎಂದು ಅವರು ಹೇಳಿದ್ದಾರೆ. 1985ರಲ್ಲಿ ಅಂದಿನ ಪ್ರಧಾನಿ ರಾಜೀವ್ ಗಾಂಧಿಯವರು “ದೆಹಲಿಯಿಂದ ಕಳುಹಿಸಿದ ಒಂದು ರೂಪಾಯಿಯಲ್ಲಿ ಕೇವಲ 15 ಪೈಸೆ ಮಾತ್ರ ಜನರಿಗೆ ತಲುಪುತ್ತದೆ” ಎಂದು ಹೇಳಿದ್ದನ್ನು ವಿಜಯೇಂದ್ರ ನೆನಪಿಸಿದರು. ದಶಕಗಳು ಕಳೆದರೂ ಕಾಂಗ್ರೆಸ್…

Read More

ತುಮಕೂರು: ವಿಕಲಚೇತನರಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಶೇ.05ರಷ್ಟು ರಾಜಕೀಯ ಮೀಸಲಾತಿ ನೀಡಬೇಕು, ಬಜೆಟ್‌ ನಲ್ಲಿ ಹೆಚ್ಚುವರಿ ಅನುದಾನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ಅಂಗವಿಕಲರ ರಾಜ್ಯ ಒಕ್ಕೂಟದ ವತಿಯಿಂದ ಕೈಗೊಂಡಿರುವ ಬೆಂಗಳೂರು ಚಲೋ ಬೈಕ್ ರ‍್ಯಾಲಿ ಫೆ.22 ರಂದು ತುಮಕೂರು ನಗರಕ್ಕೆ ಆಗಮಿಸಲಿದೆ ಎಂದು ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಟಿ.ಎಸ್.ಮಂಜುಳ ತಿಳಿಸಿದರು. ಚಿಕ್ಕಪೇಟೆಯಲ್ಲಿರುವ ಪರಿವರ್ತನಾ ಚಾರಿಟಬಲ್ ಟ್ರಸ್ಟ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯ ಮೀಸಲಾತಿ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟು ಫೆ.19 ರಂದು ಬಸವನ ಬಾಗೇವಾಡಿಯ ಕೂಡಲ ಸಂಗಮದಿಂದ ಹೊರಟ ಅಂಗವಿಕಲರ ಬೈಕ್ ರ್ಯಾಲಿ, ಫೆ.22ಕ್ಕೆ ತುಮಕೂರು ನಗರವನ್ನು ತಲುಪಲಿದೆ. ಸಿದ್ಧಗಂಗಾ ಮಠದಲ್ಲಿ ವಾಸ್ತವ್ಯ ಹೂಡಿ, ಫೆ.23ರಂದು ತುಮಕೂರಿನಿಂದ ಹೊರಟು, ಸಂಜೆ ವೇಳೆಗೆ ಫ್ರೀಡಂಪಾರ್ಕ್ ತಲುಪಿ, ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲಿದ್ದೇವೆ ಎಂದರು. ಇಂದಿನ ಬೆಲೆ ಹೆಚ್ಚಳಕ್ಕೆ ಅನುಗುಣವಾಗಿ ಅಂಗವಿಕಲರ ಮಾಶಾಸನ ಹೆಚ್ಚಳ, ಗ್ರಾಮೀಣ ಭಾಗದಲ್ಲಿ ಅಂಗವಿಕಲರ ಪುನರ್ ವಸತಿಗಾಗಿ ದುಡಿಯುತ್ತಿರುವ ವಿಆರ್‌’ಡಬ್ಲ್ಯು, ಎಂಆರ್‌ ಡಬ್ಲ್ಯುಗಳ ಗೌರವಧನ ಹೆಚ್ಚಳ, ಕನಿಷ್ಠ…

Read More

ತುಮಕೂರು: ತಾಲ್ಲೂಕಿನ ಹತ್ತೇನಹಳ್ಳಿ ಮಾರಮ್ಮ ದೇವಸ್ಥಾನದಲ್ಲಿ ಇತ್ತೀಚೆಗೆ ನಡೆದ ದೇವರ ಒಡವೆ ಕಳವು ಪ್ರಕರಣದಲ್ಲಿ ದೇವರ ತಾಳಿಯೂ ಕಳವಾಗಿತ್ತು. ದೇವರ ಒಡವೆ ಕಳವಾಗಿ ದೊಡ್ಡ ಅಪಚಾರವಾಗಿದೆ ಎಂದು ಭಕ್ತರು ಕಳವಳಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಮಾಜಿ ಶಾಸಕ ಡಿ.ಸಿ.ಗೌರಿಶಂಕರ್ ಹಾಗೂ ಇವರ ಆಪ್ತರಾದ ಕಾಂಗ್ರೆಸ್ ಮುಖಂಡ, ಉದ್ಯಮಿ ಊರುಕೆರೆ ಜಗದೀಶ್ ಅವರು ಹೊಸದಾಗಿ ತಾಳಿ ಮಾಡಿಸಿ ಶುಕ್ರವಾರ ಮಾರಮ್ಮ ದೇವಿಗೆ ಸಮರ್ಪಣೆ ಮಾಡಿದರು. ತಹಶೀಲ್ದಾರ್ ರಾಜೇಶ್ವರಿ ಸೇರಿದಂತೆ ದೇವಸ್ಥಾನ ಸಮಿತಿ ಮುಖಂಡರು, ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಸಮುಖದಲ್ಲಿ ಮಾರಮ್ಮ ದೇವಿಗೆ ತಾಳಿ ಸಮರ್ಪಿಸಿ ಗೌರಿಶಂಕರ್ ಮತ್ತು ಬಳಗ ವಿಶೇಷ ಪೂಜೆ ಸಲ್ಲಿಸಿದರು. ಉದ್ಯಮಿ ಊರುಕೆರೆ ಜಗದೀಶ್ ಅವರು 30 ಲಕ್ಷ ರೂ. ವೆಚ್ಚದಲ್ಲಿ ಹತ್ತೇನಹಳ್ಳಿ ಮಾರಮ್ಮನ ಗರ್ಭಗುಡಿ ನಿರ್ಮಾಣ ಮಾಡಿಸಿದ್ದಾರೆ. ದೇವಸ್ಥಾನದ ಜೀರ್ಣೋದ್ಧಾರ ಕೆಲಸ ನಡೆಯುತ್ತಿದ್ದು, ರಾಜಗೋಪುರ ನಿರ್ಮಾಣಕ್ಕೆ ತಾವು, ಜಗದೀಶ್ ಹಾಗೂ ತಮ್ಮ ಗೆಳೆಯರ ಬಳಗ ಎಷ್ಟೇ ಖರ್ಚಾದರೂ ದೇಣಿಗೆ ನೀಡುತ್ತೇವೆ. ಭಕ್ತರು ನೀಡುವ ದೇಣಿಗೆಯ ಪ್ರತಿ ರೂಪಾಯಿಯ ಲೆಕ್ಕವನ್ನು ಪಾರದರ್ಶಕವಾಗಿ…

Read More