Author: admin

ಕದರಿ (ಸತ್ಯಸಾಯಿ ಜಿಲ್ಲೆ): ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿಯೊಬ್ಬ ಸಾರ್ವಜನಿಕವಾಗಿ ಸರ್ಕಾರಿ ಆಸ್ಪತ್ರೆಯ ಆವರಣದಲ್ಲೇ ತನ್ನ ಪತ್ನಿಯ ಗಂಟಲು ಸೀಳಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಆಂಧ್ರಪ್ರದೇಶದ ಸತ್ಯಸಾಯಿ ಜಿಲ್ಲೆಯ ಕದರಿ ಪಟ್ಟಣದಲ್ಲಿ ನಡೆದಿದೆ. ಘಟನೆಯಿಂದ ಆಸ್ಪತ್ರೆಯ ರೋಗಿಗಳು ಹಾಗೂ ವೈದ್ಯಕೀಯ ಸಿಬ್ಬಂದಿ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಮುಡಿಗುಬ್ಬ ಮಂಡಲದ ಈದುಲಪಲ್ಲಿ ಗ್ರಾಮದ ನಿವಾಸಿ ಗಂಗಾರಾಜು ಎಂಬಾತನೇ ಪತ್ನಿಯನ್ನು ಕೊಂದ ಆರೋಪಿಯಾಗಿದ್ದು, ಸದ್ಯ ಪೊಲೀಸರು ಈತನನ್ನು ಬಂಧಿಸಿದ್ದಾರೆ. ಆರೋಪಿ ಗಂಗಾರಾಜು ಮತ್ತು ಆತನ ಪತ್ನಿ ಸುನೀತಾ ನಡುವೆ ಕೆಲವು ಸಮಯದಿಂದ ದಾಂಪತ್ಯ ಕಲಹವಿತ್ತು. ಇತ್ತೀಚೆಗೆ ಗಂಗಾರಾಜು ಪತ್ನಿಗೆ ತೀವ್ರವಾಗಿ ಥಳಿಸಿದ್ದನು. ಇದರಿಂದ ಗಾಯಗೊಂಡಿದ್ದ ಸುನೀತಾಳನ್ನು ಆಕೆಯ ಪೋಷಕರು ಚಿಕಿತ್ಸೆಗಾಗಿ ಕದರಿಯ ಸರ್ಕಾರಿ ಪ್ರದೇಶ ಆಸ್ಪತ್ರೆಗೆ ದಾಖಲಿಸಿದ್ದರು. ಬುಧವಾರ ಆಸ್ಪತ್ರೆಗೆ ಬಂದ ಗಂಗಾರಾಜು, ಉತ್ತಮ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗೋಣ ಎಂದು ಪತ್ನಿ ಸುನೀತಾಳನ್ನು ಒಪ್ಪಿಸಿದ್ದಾನೆ. ಪತಿಯ ಮಾತನ್ನು ನಂಬಿದ ಸುನೀತಾ ವಾರ್ಡ್ನಿಂದ ಹೊರಬಂದು ಆಸ್ಪತ್ರೆಯ ವರಾಂಡ ತಲುಪುತ್ತಿದ್ದಂತೆ, ಗಂಗಾರಾಜು ತಾನು ಮೊದಲೇ…

Read More

ಪಾವಗಡ: ತಾಲ್ಲೂಕಿನ ಕೋಟಾಗುಡ್ಡ ಗ್ರಾಮದಲ್ಲಿ ಕಳೆದ ಒಂದು ವಾರದಿಂದ ತೀವ್ರಗೊಂಡಿದ್ದ ಕುಡಿಯುವ ನೀರಿನ ಸಮಸ್ಯೆಗೆ ಪಾವಗಡ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಎಂ.ಚೇತನ್ ಬಾಬು ಅವರು ತ್ವರಿತವಾಗಿ ಸ್ಪಂದಿಸಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸುವ ವ್ಯವಸ್ಥೆ ಕಲ್ಪಿಸಿದ್ದಾರೆ. ಗ್ರಾಮಸ್ಥರು ಸೋಮವಾರ ರಾತ್ರಿ ದೂರವಾಣಿ ಮೂಲಕ ಸಂಪರ್ಕಿಸಿ, ಮನೆಗಳಲ್ಲಿ ಕುಡಿಯುವ ನೀರಿನ ಅಭಾವದಿಂದ ಎದುರಾಗಿರುವ ಸಂಕಷ್ಟವನ್ನು ವಿವರಿಸಿದ್ದರು. ವಿಷಯ ತಿಳಿದ ಕೂಡಲೇ ಚೇತನ್ ಬಾಬು ಅವರು ತಮ್ಮ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿ, ತಕ್ಷಣವೇ ನೀರು ಪೂರೈಕೆಗೆ ಕ್ರಮ ಕೈಗೊಂಡರು. ಮಂಗಳವಾರ ಬೆಳಗ್ಗಿನಿಂದಲೇ ಚೇತನ್ ಬಾಬು ಅವರ ಕಾರ್ಯಕರ್ತರು ಗ್ರಾಮದಲ್ಲಿದ್ದು, ನೀರಿನ ಕೊರತೆ ಇರುವ ಪ್ರದೇಶಗಳನ್ನು ಗುರುತಿಸಿ ಮನೆ–ಮನೆಗೆ ಟ್ಯಾಂಕರ್ ಮೂಲಕ ನೀರು ತಲುಪಿಸುತ್ತಿದ್ದಾರೆ. ಇದುವರೆಗೆ ಸುಮಾರು 10 ಟ್ಯಾಂಕರ್ ನೀರನ್ನು ಅಗತ್ಯವಿರುವ ಕುಟುಂಬಗಳಿಗೆ ಪೂರೈಸಲಾಗಿದೆ. ಇಂದು ರಾತ್ರಿ 10 ಗಂಟೆಯವರೆಗೆ ಈ ಸೇವಾ ಕಾರ್ಯ ಮುಂದುವರಿಯಲಿದೆ ಎಂದು ತಿಳಿಸಲಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಕೆ.ಎಂ. ಚೇತನ್ ಬಾಬು ಅವರು, “ಗ್ರಾಮಸ್ಥರ ಸಂಕಷ್ಟಕ್ಕೆ…

Read More

ಕೊರಟಗೆರೆ: ತಾಲ್ಲೂಕಿನ ತೋವಿನಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮನೆ ಸೈಟ್ ಹಂಚಿಕೆ ವಿಚಾರ ಭಾರೀ ವಿವಾದಕ್ಕೆ ಕಾರಣವಾಗಿದೆ. ಸೈಟ್ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಕುರಿಹಳ್ಳಿ ಹಾಗೂ ಬೋರಪ್ಪನಹಟ್ಟಿ ಗ್ರಾಮಗಳ ನಿವಾಸಿಗಳು ಗ್ರಾಮ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಲು ಮುಂದಾದ ಘಟನೆ ನಡೆದಿದೆ. ತೋವಿನಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 65 ಮನೆ ಸೈಟ್‌ ಗಳ ಹಂಚಿಕೆಗೆ ಅವಕಾಶವಿದ್ದು, 90ಕ್ಕೂ ಹೆಚ್ಚು ಅರ್ಜಿಗಳು ಬಂದಿರುವುದು ಗೊಂದಲಕ್ಕೆ ಕಾರಣವಾಗಿದೆ. ಈ ನಡುವೆ ಈಗಾಗಲೇ ಮನೆ ಸೈಟ್ ಹೊಂದಿರುವ ಕೆಲವರಿಗೂ ಮತ್ತೊಮ್ಮೆ ಸೈಟ್ ಮಂಜೂರು ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅಲ್ಲದೆ, ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರದ ತುಮಕೂರು ಜಿಲ್ಲೆಯ ಎಲ್ಲಾಪುರ ನಿವಾಸಿಗಳಿಗೂ ಸೈಟ್ ನೀಡಲು ತೀರ್ಮಾನಿಸಲಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಕುರಿಹಳ್ಳಿ ಮತ್ತು ಬೋರಪ್ಪನಹಟ್ಟಿ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಲು ಮುಂದಾದರು. ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.…

Read More

ತುಮಕೂರು: ಜೂನ್ 30 ರಿಂದ ಆರಂಭಗೊಂಡಿರುವ ಜಿಲ್ಲೆಯ ಮತದಾರರಿಗೆ ಎಸ್ ಐಆರ್ ಅರ್ಜಿ ವಿತರಣೆ ಪ್ರಕ್ರಿಯೆ ಭಾಗವಾಗಿ ಮಂಗಳವಾರ ಅಂತ್ಯದ ವೇಳೆಗೆ ಒಟ್ಟು 19,39,324 ಮಂದಿ ಎಸ್ ಐಆರ್ ಅರ್ಜಿ ವಿತರಣೆ ಮಾಡಿರುವುದಾಗಿ ಜಿಲ್ಲಾ ಚುನಾವಣಾಧಿಕಾರಿಗಳಾದ ಡಿಸಿ ಶುಭಕಲ್ಯಾಣ್ ಮಾಹಿತಿ ನೀಡಿದ್ದಾರೆ. ಈ ಪೈಕಿ 1,09,891 ಮತದಾರರ ಎಸ್ ಐಆರ್ ಅರ್ಜಿ ಡಿಜಿಟೈಸೇಷನ್ ಆಗಿದ್ದು, 3,297 (0.14%) ಮಂದಿ ಮತದಾರರು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಒಟ್ಟು 1162 ಮಂದಿ ಮತದಾರರು ಪವತಿ, ಸ್ಥಳಾಂತರದ ಕಾರಣಕ್ಕೆ ಬಿಎಲ್ಒಗಳಿಗೆ ಲಭ್ಯವಾಗಿಲ್ಲ. ಇದರಲ್ಲಿ 714 ಮಂದಿ ಮರಣವನ್ನಪ್ಪಿದ್ದವರು, 329 ಮಂದಿ ಶಾಶ್ವತ ಸ್ಥಳಾಂತರಗೊಂಡುವರು. 90 ಮಂದಿ ಆಗಲೇ ನೊಂದಾವಣೆ ಮಾಡಿರುವವರು ಸೇರಿದ್ದಾರೆ ಎಂದು ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

Read More

ತುಮಕೂರು: ಮೀನುಗಾರಿಕೆ ಇಲಾಖೆ ವತಿಯಿಂದ ಕೇಂದ್ರ ಪುರಸ್ಕೃತ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ 2026–27ನೇ ಸಾಲಿನಲ್ಲಿ ಪರಿಸರ ಸ್ನೇಹಿ ಸುಸಜ್ಜಿತ ಕಿಯೋಸ್ಕ್ ಮಾದರಿಯ ಇ-ತ್ರಿಚಕ್ರ ವಾಹನಗಳಲ್ಲಿ ತಾಜಾ ಮೀನು ಉತ್ಪನ್ನ ಮಾರಾಟ ಮಾಡಲು ಸಾರ್ವಜನಿಕ ಸಹಭಾಗಿತ್ವದ ಮೂಲಕ ಮತ್ಸ್ಯವಾಹಿನಿ ವಾಹನಗಳನ್ನು ಪರವಾನಿಗೆ ಆಧಾರದಲ್ಲಿ ಪಡೆಯಲು ಮೀನುಗಾರಿಕೆಯಲ್ಲಿ ತೊಡಗಿರುವವರಿಂದ ಅರ್ಜಿ ಆಹ್ವಾನಿಸಲಾಗಿದೆ. ವಾಹನ ಸೌಲಭ್ಯಕ್ಕಾಗಿ ಭದ್ರತಾ ಠೇವಣಿಯನ್ನು ಸಾಮಾನ್ಯ ವರ್ಗದವರಿಗೆ 1 ಲಕ್ಷ ರೂ. ಹಾಗೂ ಪರಿಶಿಷ್ಟ ಜಾತಿ/ಪ.ಪಂಗಡ/ಮಹಿಳೆಯರಿಗೆ 50 ಸಾವಿರ ರೂ.ಗಳನ್ನು ನಿಗದಿಪಡಿಸಲಾಗಿದೆ. ಆಸಕ್ತರು ಜುಲೈ 17ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಮೀನುಗಾರಿಕೆ ಉಪನಿರ್ದೇಶಕರ ಕಚೇರಿ ಹಾಗೂ ತುಮಕೂರು, ತಿಪಟೂರು, ತುರುವೇಕೆರೆ, ಕುಣಿಗಲ್, ಸೇರಿದಂತೆ ವಿವಿಧ ತಾಲೂಕಿನ ಮೀನುಗಾರಿಕೆ ಸಹಾಯಕ ನಿರ್ದೇಶಕರನ್ನು ಸಂಪರ್ಕಿಸಬಹುದಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

Read More

ಸುಪ್ರಿಯಾ ಎಷ್ಟೇ ಬಗೆಯ ಸಾಂಬಾರ್, ಪಲ್ಯಗಳಿದ್ದರೂ, ಬಿಸಿ ಬಿಸಿ ಅನ್ನಕ್ಕೆ ಒಂದು ಚಮಚ ಚಟ್ನಿ ಮತ್ತು ಸ್ವಲ್ಪ ಕೊಬ್ಬರಿ ಎಣ್ಣೆ ಸೇರಿಸಿ ಕಲಸಿ ತಿಂದರೆ ಸಿಗುವ ತೃಪ್ತಿಯೇ ಬೇರೆ. 6 ಚಟ್ನಿ ರೆಸಿಪಿಗಳ ವಿವರ ಇಲ್ಲಿದೆ: ಕರಿಬೇವಿನ ಚಟ್ನಿ: ಕರಿಬೇವಿನಲ್ಲಿ ಕಬ್ಬಿಣಾಂಶ, ಆಂಟಿಆಕ್ಸಿಡೆಂಟ್ ಗಳು ಮತ್ತು ಫೈಬರ್ ಸಮೃದ್ಧವಾಗಿದೆ. ಬೇಕಾಗುವ ಸಾಮಗ್ರಿಗಳು: 2 ಕಪ್ ಕರಿಬೇವು, 1 ಕಪ್ ತುರಿದ ಕಾಯಿತುರಿ, 5 ಒಣಮೆಣಸಿನಕಾಯಿ, ಸಣ್ಣ ನೆಲ್ಲಿಕಾಯಿ ಗಾತ್ರದ ಹುಣಿಸೇಹಣ್ಣು, 3 ಎಸಳು ಬೆಳ್ಳುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು, 1 ಟೀಸ್ಪೂನ್ ಕೊಬ್ಬರಿ ಎಣ್ಣೆ. ತಯಾರಿಸುವ ವಿಧಾನ: ಬಾಣಲೆಯಲ್ಲಿ ಕೊಬ್ಬರಿ ಎಣ್ಣೆ ಬಿಸಿ ಮಾಡಿ ಕರಿಬೇವು ಮತ್ತು ಒಣಮೆಣಸಿನಕಾಯಿಯನ್ನು ಲಘುವಾಗಿ ಹುರಿಯಿರಿ. ನಂತರ ಕಾಯಿತುರಿ, ಹುಣಿಸೇಹಣ್ಣು, ಬೆಳ್ಳುಳ್ಳಿ ಮತ್ತು ಉಪ್ಪು ಸೇರಿಸಿ ಗಟ್ಟಿಯಾಗಿ ರುಬ್ಬಿಕೊಳ್ಳಿ. ಟೊಮೆಟೊ–ಬೆಳ್ಳುಳ್ಳಿ ಚಟ್ನಿ ಮನೆಯಲ್ಲಿ ಯಾವುದೇ ತರಕಾರಿ ಇಲ್ಲದ ದಿನಗಳಲ್ಲಿ ಅನ್ನದ ಜೊತೆ ಸವಿಯಲು ಇದು ಅತ್ಯುತ್ತಮ. ಬೇಕಾಗುವ ಸಾಮಗ್ರಿಗಳು: 4 ಹಣ್ಣಾದ ಟೊಮೆಟೊ, 8 ಎಸಳು…

Read More

ಮಧುಗಿರಿ: ಮಹಿಳೆಯರ ಸುರಕ್ಷತೆ, ಭದ್ರತೆ ಮತ್ತು ಆರ್ಥಿಕ ಸಬಲೀಕರಣಕ್ಕಾಗಿ ಸರ್ಕಾರದ ವಿವಿಧ ಯೋಜನೆಗಳು ಹಾಗೂ ಕಾನೂನುಗಳ ಬಗ್ಗೆ ಪ್ರತಿಯೊಬ್ಬರೂ ಜಾಗೃತಿ ಮೂಡಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದು ಜಿಲ್ಲಾ ಮಿಷನ್ ಸಂಯೋಜಕ ಶಶಿಧರ ಹೆಚ್.ಜಿ. ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಹಿಳಾ ಸಬಲೀಕರಣ ಘಟಕ, ತುಮಕೂರು ಹಾಗೂ ಮಧುಗಿರಿ ಪಟ್ಟಣದ ಜ್ಞಾನಪ್ರಿಯಾ ಪದವಿ ಪೂರ್ವ ಕಾಲೇಜಿನಲ್ಲಿ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರದ ಮಿಷನ್ ಶಕ್ತಿ ಯೋಜನೆಯ ಮಹಿಳಾ ಸಬಲೀಕರಣ ಘಟಕದಲ್ಲಿ ಮಹಿಳೆಯರ ಸುರಕ್ಷತೆ, ಭದ್ರತೆ ಮತ್ತು ಸಬಲೀಕರಣಕ್ಕಾಗಿ ಕಾನೂನು ಅರಿವು ಅಗತ್ಯವಾಗಿದೆ. ವರದಕ್ಷಿಣೆ, ವಧು–ದಕ್ಷಿಣೆ, ಮಹಿಳಾ ಸಬಲೀಕರಣ ಮಹತ್ವ ಮತ್ತು ಹೆಣ್ಣು ಮಕ್ಕಳ ಶಿಕ್ಷಣದ ಮಹತ್ವದ ಬಗ್ಗೆ ತಿಳಿಸಿದರು. ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಆಶಯ ವ್ಯಕ್ತಪಡಿಸಿದರು. ಇದೇ ವೇಳೆ ಮಹಿಳೆಯರು ಉಚಿತ ಕಾನೂನು ನೆರವು, ಸಲಹೆ…

Read More

ತುಮಕೂರು: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಮುಂಬರುವ ದಿನಗಳಲ್ಲಿ ಪೌರತ್ವ ದೃಢೀಕರಿಸುವ ಅತ್ಯಂತ ಮಹತ್ವದ ಪ್ರಕ್ರಿಯೆಯಾಗಿದ್ದು, ಭಾರತೀಯ ಮತದಾರರನ್ನು ಅಧಿಕೃತಗೊಳಿಸುವ ಈ ಪ್ರಕ್ರಿಯೆಯಲ್ಲಿ ಪ್ರತಿ ಮತದಾರರು ತಪ್ಪದೇ ಪಾಲ್ಗೊಳ್ಳಬೇಕು ಎಂದು ಉದ್ಯಮಿ ಹಾಗೂ ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ಸ್ಫೂರ್ತಿ ಚಿದಾನಂದ್ ಮನವಿ ಮಾಡಿದರು. ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು ಜಿಲ್ಲಾಡಳಿತದಿಂದ ಬೂತ್ ಮಟ್ಟಕ್ಕೆ ಶಿಕ್ಷಕರು, ಅಧಿಕಾರಿಗಳನ್ನು ಎಸ್ ಐಆರ್ ಪ್ರಕ್ರಿಯೆಗೆ ನಿಯೋಜಿಸಿದ್ದು, ಆಧಾರ್ ನಷ್ಟೇ ಎಸ್ ಐಆರ್ ಮಹತ್ವ ಪಡೆದಿದೆ. ನಿಮ್ಮ ಮನೆ ಬಾಗಿಲಿಗೆ ಬಂದಂತಹ ಬಿಎಲ್ ಒಗಳಿಗೆ ನಿಮ್ಮ ಕುಟುಂಬದ ಪ್ರತಿ ಮತದಾರರ ದಾಖಲಾತಿ ಕೊಟ್ಟು ಎಸ್ ಐಆರ್ ಖಾತ್ರಿ ಪಡಿಸಬೇಕು. ಈ ಎಸ್ ಐಆರ್ ಮುಂದಿನ ದಿನಗಳಲ್ಲಿ ಪೌರತ್ವ ದೃಢೀಕರಿಸುವ ಮಹತ್ವದ ದಾಖಲೆಯಾಗಲಿದ್ದು, ಈಗ ಅದನ್ನು ನಿರ್ಲಕ್ಷಿಸದೆ ಪ್ರತಿ ಮತದಾರರು ಎಸ್ ಐಆರ್ ನಲ್ಲಿ ಭಾಗಿಯಾಗುವಂತೆ ಪುನರುಚ್ಚರಿಸಿ ಮನವಿ ಮಾಡಿದ್ದಾರೆ. ಎಸ್ ಐಆರ್ ಅರ್ಜಿ ತುಂಬುವಲ್ಲಿ ಗೊಂದಲಗಳನ್ನು ಏರ್ಪಡಿಸಿಕೊಳ್ಳುವುದು…

Read More

ತುಮಕೂರು: ನಗರದ ಅಮಾನಿಕೆರೆಯಲ್ಲಿರುವ ಪ್ರಸಿದ್ಧ ಗಾಜಿನ ಮನೆಯಲ್ಲಿ ಜುಲೈ 10, 11 ಮತ್ತು 12 ರಂದು ಮೂರು ದಿನಗಳ ಕಾಲ ‘ಬಿಲ್ಡ್ ಟೆಕ್-2026’ ಬೃಹತ್ ಕಟ್ಟಡ ಸಾಮಗ್ರಿಗಳ, ಇಂಟೀರಿಯರ್ಸ್ ಹಾಗೂ ಫರ್ನೀಚರ್ ವಸ್ತು ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ. ಇಂಜಿನಿಯರ್ಸ್ ಅಸೋಸಿಯೇಷನ್ ಮತ್ತು ಬೆಂಗಳೂರಿನ ಯು.ಎಸ್. ಕಮ್ಯುನಿಕೇಷನ್ಸ್ ಇವರ ಜಂಟಿ ಸಹಯೋಗದಲ್ಲಿ ಈ ಪ್ರದರ್ಶನ ಆಯೋಜನೆಗೊಂಡಿದೆ. 20 ವರ್ಷಗಳ ನಿರಂತರ ಯಶಸ್ಸು: ಈ ಕುರಿತು ಮಾಹಿತಿ ನೀಡಿರುವ ಇಂಜಿನಿಯರ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ಎನ್.ವಿ. ರಾಮಮೂರ್ತಿ ಅವರು, “ಕಳೆದ 20 ವರ್ಷಗಳಿಂದ ನಿರಂತರವಾಗಿ ಪ್ರತಿ ಎರಡು ವರ್ಷಕ್ಕೊಮ್ಮೆ ಈ ಬಿಲ್ಡ್ಟೆಕ್ ಬೃಹತ್ ವಸ್ತು ಪ್ರದರ್ಶನ ನಡೆಯುತ್ತಾ ಬಂದಿದೆ. ಪ್ರತಿ ಬಾರಿಯೂ ಹೊಸತನ ಹಾಗೂ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಹೊಸ ಉತ್ಪನ್ನಗಳನ್ನು ಪರಿಚಯಿಸುವ ಮೂಲಕ ಇದು ತುಮಕೂರಿನ ಜನತೆಗೆ ಅತ್ಯಂತ ಅಚ್ಚುಮೆಚ್ಚಿನ ಕಾರ್ಯಕ್ರಮವಾಗಿ ಮೂಡಿಬಂದಿದೆ” ಎಂದು ತಿಳಿಸಿದ್ದಾರೆ. ಪ್ರದರ್ಶನದ ಪ್ರಮುಖ ಆಕರ್ಷಣೆಗಳು: ಮನೆ ಕಟ್ಟುವವರಿಗೆ ಹಾಗೂ ಇಂಟೀರಿಯರ್ ಹವ್ಯಾಸಿಗಳಿಗೆ ಒಂದೇ ಸೂರಿನಡಿ ಎಲ್ಲ ಮಾಹಿತಿಯನ್ನು ಒದಗಿಸುವ ಈ…

Read More

ತುಮಕೂರು: ನಗರದ ನ್ಯಾಯಾಲಯ ಆವರಣದಲ್ಲಿ ಸೋಮವಾರ ಹಿರಿಯ ವಕೀಲರಾದ ಎಂ.ಸಿ.ರವೀಶ್ ಅವರ ಮೇಲೆ ಬಿ.ಎ.ನಿರಂಜನ್ ಎಂಬುವವರು ಹಲ್ಲೆ ನಡೆಸಿದ್ದನ್ನು ಖಂಡಿಸಿ ಜಿಲ್ಲಾ ವಕೀಲರ ಸಂಘದ ನೇತೃತ್ವದಲ್ಲಿ ವಕೀಲರು ಮಂಗಳವಾರ ಪ್ರತಿಭಟನೆ ನಡೆಸಿ ನ್ಯಾಯಾಲಯ ಕಲಾಪಗಳಲ್ಲಿ ಭಾಗವಹಿಸದೆ ಕಲಾಪಗಳಿಂದ ದೂರ ಉಳಿದರು. ಪ್ರತಿಭಟನೆಯಲ್ಲಿ ಮಾತನಾಡಿದ ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಹಿರೇಹಳ್ಳಿ ಮಹೇಶ್, ಕರ್ತವ್ಯದ ಮೇಲಿದ್ದ ವಕೀಲರ ಮೇಲೆ ನ್ಯಾಯಾಲಯ ಆವರಣದಲ್ಲಿ ಹಲ್ಲೆ ನಡೆಸಿರುವುದು ಖಂಡನೀಯ. ಆರೋಪಿಯನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು. ಇದೇ 6 ರಂದು ಸೋಮವಾರ ಮಧ್ಯಾಹ್ನ 2.02ರ ಸಮಯದಲ್ಲಿ ನಗರದ 2ನೇ ಅಧಿಕ ಸಿವಿಲ್ ನ್ಯಾಯಾಲಯ ಹಿರಿಯ ಶ್ರೇಣಿ ನ್ಯಾಯಾಲಯ ಒಳಗಿನಿಂದ ಕಲಾಪಗಳನ್ನು ಮುಗಿಸಿಕೊಂಡು ಹೊರ ಬಂದಂತಹ ಸಂದರ್ಭದಲ್ಲಿ ವಕೀಲ ಎಂ.ಸಿ.ರವೀಶ್ ಅವರ ಮೇಲೆ ಒ.ಎಸ್.359/2015ರ ಪ್ರಕರಣದ 2ನೇ ಪ್ರತಿವಾದಿ ತುಮಕೂರು ತಾಲ್ಲೂಕು ಕೋರಾ ಹೋಬಳಿ ಬ್ರಹ್ಮಸಂದ್ರದ ಬಿ.ಎ. ನಿರಂಜನ್ ಎಂಬಾತ ತನ್ನ ಎದುರಿಗೆ ಏಕೆ ಕೇಸನ್ನು ತೆಗೆದುಕೊಂಡಿದ್ದೀಯಾ? ಎಂದು ವಕೀಲರಾದ ಎಂ.ಸಿ.…

Read More