Subscribe to Updates
Get the latest creative news from FooBar about art, design and business.
- ಆರೋಗ್ಯ ಶಿಬಿರ | ಹಾರ್ಟ್ ಸಂಸ್ಥೆಯ ಕಾರ್ಯ ಪ್ರಶಂಸನಿಯ: ಆರೋಗ್ಯಾಧಿಕಾರಿ ಡಾ.ಟಿ.ರವಿಕುಮಾರ್
- ವಿಜೃಂಭಣೆಯಿಂದ ನಡೆದ ದುಂಡಿ ಮಾರಮ್ಮ ದೇವಿ ಜಾತ್ರಾ ವಾರ್ಷಿಕೋತ್ಸವ
- ರಾಜ್ಯದಲ್ಲಿ ಎನ್ ಡಿಎಗೆ 2028ನೇ ಚುನಾವಣೆಯಲ್ಲಿ ಬಿಹಾರ ಮಾದರಿಯ ಗೆಲುವು: ಕೆ.ಎಂ.ಕೃಷ್ಣನಾಯಕ
- ನವೆಂಬರ್ 22ರಂದು ಸಾಹೇ ವಿಶ್ವವಿದ್ಯಾಲಯದ 14ನೇ ಘಟಿಕೋತ್ಸವ: ಡಾ.ಕೆ.ಬಿ.ಲಿಂಗೇಗೌಡ
- ಕಲ್ಪೋತ್ಸವ: ಗಮನ ಸೆಳೆದ ಜಂಬೂ ಸವಾರಿ, ಕಲಾತಂಡಗಳ ಮೆರುಗು
- ರೈತ ಹೋರಾಟಗಾರ ಸಿ.ಅಜ್ಜಪ್ಪ ನಿಧನ
- ವಿಕಲಚೇತನ ಸಾಧಕರಿಂದ ಅರ್ಜಿ ಆಹ್ವಾನ
- ಬೀದರ್ | ಪ್ರತಿ ಟನ್ ಕಬ್ಬಿಗೆ 2,950ರೂ. ನಿಗದಿ: ಪ್ರತಿಭಟನೆ ಕೈ ಬಿಟ್ಟ ರೈತರು
Author: admin
ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಕ್ಕಾಗಿ ಕಳೆದ ವರ್ಷ ದಾಖಲಾದ 2022 ರ ಭಯೋತ್ಪಾದಕ ಸಂಚಿನ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮಂಗಳವಾರ 12 ಸ್ಥಳಗಳಲ್ಲಿ ದಾಳಿ ನಡೆಸಿತು. ಕಳೆದ ವರ್ಷ ಡಿಸೆಂಬರ್ 23 ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ ವಿವಿಧ ನಿಷೇಧಗಳು, ಭಯೋತ್ಪಾದಕ ಸಂಘಟನೆಗಳು ಭಯೋತ್ಪಾದಕ ಕಾರ್ಯಕ್ರಮಗಳನ್ನು ಹರಡುತ್ತಿವೆ ಎಂಬ ಮಾಹಿತಿಯ ಆಧಾರದ ಮೇಲೆ ದಾಖಲಾದ ಪ್ರಕರಣದಲ್ಲಿ ಎನ್‌ಐಎ ಕಾಶ್ಮೀರದ ಹಲವು ಸ್ಥಳಗಳಲ್ಲಿ ದಾಳಿ ನಡೆಸಿತು. ಸೈಬರ್ ಸ್ಪೇಸ್ ಬಳಸಿ, ಅಲ್ಪಸಂಖ್ಯಾತರು,ಭದ್ರತಾ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡು ಧಾರ್ಮಿಕ ಸೌಹಾರ್ದತೆಯನ್ನು ಉತ್ತೇಜಿಸುವ ಭಯೋತ್ಪಾದಕ ದಾಳಿಗಳಲ್ಲಿ ಆತ ಭಾಗಿಯಾಗಿದ್ದಾನೆ ಎಂದು ಎನ್ಐಎ ಪತ್ತೆ ಮಾಡಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಪ್ರಧಾನಿ ನರೇಂದ್ರ ಮೋದಿ ಏಪ್ರಿಲ್ 29 ಮತ್ತು 30ರಂದು ರಾಜ್ಯದಲ್ಲಿ ಭರ್ಜರಿ ಪ್ರಚಾರ ನಡೆಸಿ ಧೂಳೆಬ್ಬಿಸಿ ಹೋಗಿದ್ದರು. ಇಂದು ಪುನಹ ರಾಜ್ಯಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಇಂದು, ನಾಳೆ ಬಿಜೆಪಿ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಪ್ರಧಾನಿ ಮೋದಿ ಬೆಳಗ್ಗೆ 10.25ಕ್ಕೆ ಚಿತ್ರದುರ್ಗಕ್ಕೆ ಆಗಮಿಸಲಿದ್ದು ಬೆಳಗ್ಗೆ 11 ಗಂಟೆಗೆ ಚಳ್ಳಕೆರೆಯಲ್ಲಿ ಪ್ರಚಾರ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಬಳಿಕ ಮಧ್ಯಾಹ್ನ 1 ಗಂಟೆಗೆ ಹೊಸಪೇಟೆ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಿ ಮಧ್ಯಾಹ್ನ 2.45ಕ್ಕೆ ಸಿಂಧನೂರು ಬಿಜೆಪಿ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಸಂಜೆ 5 ಗಂಟೆಗೆ ಕಲಬುರಗಿಯಲ್ಲಿ ರೋಡ್ ಶೋ ನಡೆಸಲಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತವರಿನಲ್ಲಿ ಸುಮಾರು 45 ನಿಮಿಷ ರೋಡ್ ಶೋ ನಡೆಸಿ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚನೆ ಮಾಡಲಿದ್ದಾರೆ. ಇಂದು ರಾತ್ರಿ ಕಲಬುರಗಿಯಲ್ಲೇ ತಂಗಲಿದ್ದಾರೆ. ಇನ್ನು ಕಲಬುರಗಿಯಲ್ಲಿ ಪ್ರಧಾನಿ ಮೋದಿ ರೋಡ್ ಶೋ ಹಿನ್ನೆಲೆ ಕಲಬುರಗಿಯಲ್ಲಿ ಡ್ರೋನ್ ಕ್ಯಾಮರಾ ಹಾರಾಟ ನಿಷೇಧಿಸಿ ಡಿಸಿ ಯಶವಂತ್ ಗುರುಕರ್ ಆದೇಶ ಹೊರಡಿಸಿದ್ದಾರೆ. ನಾಳೆ ಮಧ್ಯಾಹ್ನ…
ಗುಬ್ಬಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಪ್ರಗತಿ ಬಂದು ಸ್ವಸಹಾಯ ಸಂಘದ ಫಲಾನುಭವಿಗಳಿಗೆ ಅನೇಕ ಸೌಲಭ್ಯಗಳನ್ನು ನೀಡುತ್ತಿದ್ದು, ಅದರಂತೆ ನಿಮ್ಮ ಗ್ರಾಮದಲ್ಲಿ ನೂತನವಾಗಿ ಪ್ರಾರಂಭವಾಗುತ್ತಿರುವ ಪ್ರಗತಿ ಬಂಧು ಸಂಘದ ಮೂಲಕ ಉಳಿತಾಯ ಮಾಡುವ ಜೊತೆಗೆ ಸಂಘದ ಸದಸ್ಯರು ಆರ್ಥಿಕ ಚಟುವಟಿಕೆಗಳನ್ನು ಮಾಡಲು ಮುಂದಾಗುವ ಮೂಲಕ ಸಾಮಾಜಿಕ ಮತ್ತು ಆರ್ಥಿಕವಾಗಿ ಬೆಳವಣಿಗೆ ಆಗಲು ಸಹಕಾರಿಯಾಗುತ್ತದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಹರೀಶ್ ಸಲಹೆ ನೀಡಿದರು. ಗುಬ್ಬಿ ತಾಲೂಕಿನ ತೊರೆಹಳ್ಳಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನೂತನ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಅವರು ಭಾಗವಹಿಸಿ ಮಾತನಾಡಿದ ಅವರು ಗ್ರಾಮದಲ್ಲಿ ನೂತನ ಸಂಘವನ್ನು ಉದ್ಘಾಟಿಸಿದ್ದು ಅದರಂತೆ ಸಂಘದ ಉಳಿತಾಯ ಹಾಗೂ ಸಂಘದ ಹಣವನ್ನು ಕಟ್ಟಲು ಹೇರೂರು ಗ್ರಾಮದಲ್ಲಿ ಸಂದಾಯ ಕೇಂದ್ರ ಪ್ರತಿ ಬಾರಿ ಮಾಡುವ ಸಭೆಯಲ್ಲಿ ಉಳಿತಾಯಣವನ್ನು ಕಟ್ಟುವ ಮೂಲಕ ಸಂಘದ ಅಭಿವೃದ್ಧಿಗೆ ಸಂಘದ ಸದಸ್ಯರು ಸಹಕರಿಸುವಂತೆ ತಿಳಿಸಿದರು. ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ…
ಹುಬ್ಬಳ್ಳಿ: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರಿಗೆ ನಾನು ವಿಷಕನ್ಯೆ ಅಂದಿದ್ದೇನೆ. ನಾನು ಕ್ಷಮೆ ಕೇಳಲ್ಲ. ದೊರೆಸ್ವಾಮಿ ನಾಟಕ ಕಂಪನಿಗೆ ಕಾಂಗ್ರೆಸ್ ಏಜೆಂಟ್ ಅಂದಿದ್ದೆ. ನಾನು ರಾಜೀನಾಮೆ ಕೊಡುತ್ತೇನೆ. ಕ್ಷಮೆ ಕೇಳಲ್ಲ. ಪ್ರಧಾನಿ ಮೋದಿ ಬಗ್ಗೆ 91 ಸಾರಿ ಬೈದಿದ್ದಾರೆ. ಹೀಗಾಗಿ ವಿಷ ಸರ್ಪ ಅಂದಾಗ ನಾನು ವಿಷಕನ್ಯೆ ಅಂದಿದ್ದೇನೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಇನ್ನು ಮುಖ್ಯಮಂತ್ರಿಯಾಗುವ ವಿಚಾರವಾಗಿ ಮಾತನಾಡಿದ ಅವರು ಪಕ್ಷ ಯಾರನ್ನಾದರು ಮುಖ್ಯಮಂತ್ರಿ ಮಾಡಲಿ, ಬಸವರಾಜ ಬೊಮ್ಮಾಯಿ ಅವರನ್ನಾದರೂ ಮಾಡಲಿ ಅಥವಾ ನನ್ನನ್ನಾದರೂ ಮಾಡಲಿ ಎನ್ನುವ ಮೂಲಕ ಮುಖ್ಯಮಂತ್ರಿಯಾಗುವ ಇಂಗಿತವನ್ನು ವ್ಯಕ್ತಪಿಡಿಸದರು. ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಎಲ್ಲರಕ್ಕಿಂತ ನಾನು ಗಟ್ಟಿಯಾಗಿದ್ದೇನೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರದು ನಮ್ಮ ತರಹ ಸ್ಟ್ರಾಂಗ್ ಹಿಂದೂತ್ವ ಅಲ್ಲ. ಅವರು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ನಾನು ಮುಖ್ಯಮಂತ್ರಿ ಆಗುವ ಕನಸು ಕಂಡಿಲ್ಲ ಎಂದು ಸ್ಪಷ್ಟಪಡಿಸಿದರು. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಪಕ್ಷ ಕಡೆಗಣನೆ ಮಾಡಿದೆ ಎನ್ನುವ ಹೇಳಿಕೆ ವಿಚಾರವಾಗಿ ಮಾತನಾಡಿದ…
ಕರ್ನಾಟಕದಲ್ಲಿರುವ ಬಿಜೆಪಿ ಸರ್ಕಾರ ನಿಮ್ಮ ಜೇಬಿನಿಂದ ಹಣವನ್ನು ಕಿತ್ತುಕೊಂಡಿದೆ. ಈಗ ಎಲ್ಲಾ ಕೆಲಸಗಳಿಗೆ 40 ಪರ್ಸೆಂಟ್ ಕಮಿಷನ್ ಕೊಡುವ ಪರಿಸ್ಥಿತಿ ಬಂದಿದೆ ಎಂದು ರಾಹುಲ್ ಗಾಂಧಿ ಬಿಜೆಪಿಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಪಟ್ಟಣದ ರಂಗಮಂದಿರದ ಆವರಣದಲ್ಲಿ ಆಯೋಜಿಸಿದ್ದ ಬೃಹತ್ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ನೀವು ಬಿಜೆಪಿಗೆ ಮತ ನೀಡಿಲ್ಲ, ಅವರನ್ನು ಆಯ್ಕೆ ಮಾಡಿಲ್ಲ. ಆದರೆ, ಬಿಜೆಪಿಯವರು, ಶಾಸಕರನ್ನು ಖರೀದಿ ಮಾಡಿ ಲೋಕತಂತ್ರವನ್ನು ಹಾಳು ಮಾಡಿದ್ದಾರೆ ಎಂದು ಹೇಳಿದರು. ಸರ್ಕಾರದ ಕೆಲಸ ಜನರಿಗೆ ಉದ್ಯೋಗ, ಶಿಕ್ಷಣ, ಆರೋಗ್ಯಕ್ಕೆ ಹಣ ನೀಡಬೇಕು. ಆದರೆ ಈ ಸರ್ಕಾರ ನಿಮ್ಮ ಜೇಬಿಗೆ ಕತ್ತರಿ ಹಾಕುತ್ತಿದೆ. ಎಲ್ಲಾ ಕೆಲಸದ ಮೇಲೆ 40 ಪರ್ಸೆಂಟ್ ಲಂಚ ತೆಗೆದುಕೊಂಡಿದ್ದಾರೆ. ನನ್ನ ಹತ್ತಿರ 40 ಪರ್ಸೆಂಟ್ ಕಮಿಷನ್ ತೆಗೆದುಕೊಂಡಿದ್ದಾರೆ ಅಂತ ದಿಂಗಾಲೇಶ್ವರ ಸ್ವಾಮೀಜಿ ಕೂಡ ಹೇಳಿದ್ದಾರೆ. ಬಿಜೆಪಿ ಶಾಸಕರೊಬ್ಬರು , ಈಗಿನವರು 2 ಸಾವಿರ ಕೋಟಿ ಕೊಟ್ಟು ಸಿಎಂ ಆಗಿದ್ದಾರೆ ಅಂತ ಸಾರ್ವಜನಿಕವಾಗಿ ಹೇಳಿದ್ದಾರೆ ಎಂದು ಅವರು ಹೇಳಿದರು.…
ಕೊರಟಗೆರೆ :ಬಿಜೆಪಿ ಅಭ್ಯರ್ಥಿ ಅನಿಲ್ ಕುಮಾರ್ ಪರ ಅಸ್ಸಾಂ ಮುಖ್ಯಮಂತ್ರಿ ಡಾ.ಹಿಮಂತ ಬಿಸ್ವಾ ಶರ್ಮಾ ರೋಡ್ ಶೋ ನಡೆಸಿದರು. ಬೃಹತ್ ಮೆರವಣಿಗೆಗೆ ಆಗಮಿಸಿದ ಅಸ್ಸಾಂ ಸಿಎಂ ರವರನ್ನು ವಿವಿಧ ಕಲಾ ತಂಡಗಳೊಂದಿಗೆ ಕೊರಟಗೆರೆ ಬಿಜೆಪಿ ಅಭ್ಯರ್ಥಿ ಅನಿಲ್ ಕುಮಾರ್ ಬರ ಮಾಡಿಕೊಂಡರು. ಕೊರಟಗೆರೆ ಪಟ್ಟಣದ ಕೆ ಎಸ್ ಆರ್ ಟಿ ಸಿ ವೃತದಿಂದ ಎಸ್ ಎಸ್ ಆರ್ ವೃತ್ತದವರೆಗೂ ಬೃಹತ್ ಮೆರವಣಿಗೆ ನಡೆಸಲಾಯಿತು. ಭಾರೀ ಭದ್ರತೆಯೊಂದಿಗೆ ನಡೆದ ರೋಡ್ ಶೋ ಯಶಸ್ವಿಯಾಯಿತು. ಇದೇ ವೇಳೆ ಮಾತನಾಡಿದ ಅನಿಲ್ ಕುಮಾರ್, ಕೊರಟಗೆರೆ ಕ್ಷೇತ್ರವನ್ನು ಈ ಬಾರಿ ಕಾಂಗ್ರೆಸ್ ಮುಕ್ತ ಕೊರಟಗೆರೆ ಕ್ಷೇತ್ರವನ್ನಾಗಿ ಮಾಡಬೇಕು. ಡಾ.ಜಿ.ಪರಮೇಶ್ವರ್ 2,600 ಕೋಟಿಯಲ್ಲಿ ಕೊರಟಗೆರೆ ಕ್ಷೇತ್ರವನ್ನು ಅಭಿವೃದ್ಧಿಗೊಳಿಸಲು ಅನುದಾನವನ್ನು ತಂದಿದ್ದೇವೆ ಎಂದು ಹೇಳುತ್ತಾರೆ, 2,600 ಕೋಟಿ ಹಣದಲ್ಲಿ ಕೊರಟಗೆರೆ ಕ್ಷೇತ್ರವನ್ನು ರಾಜಧಾನಿಯಂತೆ ಅಭಿವೃದ್ಧಿ ಗೊಳಿಸಬಹುದಿತ್ತು ಎಂದು ಲೇವಡಿ ಮಾಡಿದರು. ಕ್ಷೇತ್ರದ 330 ಹಳ್ಳಿಗಳಲ್ಲಿ ಶೇಕಡ 80 ರಷ್ಟು ಹಳ್ಳಿಗಳಿಗೆ ನಾನು ಭೇಟಿ ನೀಡಿದ್ದೇನೆ. ಸರಿಯಾದ ರಸ್ತೆಗಳಿಲ್ಲದೆ, ವಿದ್ಯಾರ್ಥಿಗಳಿಗೆ ಸರಿಯಾದ…
ಉಕ್ರೇನ್‌ನ ರಕ್ಷಣಾ ಸಚಿವಾಲಯವು ಪವಿತ್ರ ಹಿಂದೂ ದೇವತೆಯಾದ ‘ಮಾತೆ ಕಾಳಿ’ಯ ಫೋಟೋದೊಂದಿಗೆ ವಿವಾದಾತ್ಮಕ ಟ್ವೀಟ್ ಅನ್ನು ಪೋಸ್ಟ್ ಮಾಡಿದೆ. ಸ್ಕರ್ಟ್ ಧರಿಸಿರುವ ಆಕೃತಿಯ ಚಿತ್ರವನ್ನು ‘ಕಲಾಕೃತಿ’ ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಲಾಗಿದೆ, ಆದರೆ ಭಾರತೀಯರಿಂದ ತೀವ್ರ ಟೀಕೆಗಳ ನಂತರ ಅದನ್ನು ತೆಗೆದುಹಾಕಲಾಗಿದೆ. ಇತ್ತೀಚೆಗೆ, ಉಕ್ರೇನ್ ರಷ್ಯಾದ ಇಂಧನ ಶೇಖರಣಾ ಸೌಲಭ್ಯವನ್ನು ಹೊಡೆದು ದೊಡ್ಡ ಹೊಗೆಯನ್ನು ಉಂಟುಮಾಡಿತು. ಈ ಹೊಗೆಯನ್ನು ಬಳಸಿ ಕಾಳಿ ದೇವಿಯಂತೆ ಕಾಣುವಂತೆ ಫೋಟೋವನ್ನು ಮಾರ್ಫ್ ಮಾಡಲಾಗಿದೆಯಂತೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ವಿಜಯಪುರ: ಹಾಳು ಬಾವಿಯಲ್ಲಿ ವೃದ್ಧೆಯ ಶವ ಪತ್ತೆಯಾಗಿರುವ ಘಟನೆ ವಿಜಯಪುರದಲ್ಲಿ ನಡೆದಿದೆ. ಶೇಖವ್ವ ತಾಯಿ ನರಳು ಮೃತ ದುರ್ದೈವಿ. ದೇವರಹಿಪ್ಪರಗಿ ಪಟ್ಟಣದ ಉಪ್ಪಳೇ ಅವರ ಹಾಳು ಬಾವಿಯಲ್ಲಿ ಶವ ಪತ್ತೆಯಾಗಿದೆ. ಬೆಳಗ್ಗೆ ಗ್ರಾಮಸ್ಥರು ಬಾವಿ ಸಮೀಪ ಹೋದಾಗ ವಿಷಯ ತಿಳಿದಿದೆ. ಇವರ ಸಾವಿಗೆ ಯಾವುದೇ ನಿಖರ ಕಾರಣ ತಿಳಿದುಬಂದಿಲ್ಲ. ದೇವರಹಿಪ್ಪರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ವೃದ್ಧೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಬೆಂಗಳೂರು: ಕರ್ನಾಟಕ ವಿಧಾನಸಭೆ ಚುಣಾವಣೆಗೆ ಈ ಬಾರಿ ಬಿಜೆಪಿ ಜನರ ಹೆಸರಿನಲ್ಲಿ ‘ಪ್ರಜಾ ಪ್ರಣಾಳಿಕೆ’ ಬಿಡುಗಡೆ ಮಾಡಿದೆ. ಬಿಜೆಪಿ ರಾಷ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಇಂದು ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಬಿಜೆಪಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು. ಕಾಂಗ್ರೆಸ್ ಪಕ್ಷ ಗ್ಯಾರಂಟಿ ಹೆಸರಿನಲ್ಲಿ ನೀಡಿರುವ ಭರವಸೆಗಳ ಬಗ್ಗೆ ಸಾಕಷ್ಟು ಟೀಕೆಗಳನ್ನು ಮಾಡಿರುವ ಬಿಜೆಪಿಯು ಇದೀಗ ಮತದಾರರನ್ನು ಓಲೈಸಲು ಭರಪೂರ ಯೋಜನೆಗಳನ್ನು ಘೋಷಿಸಿದೆ. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಟಲ್ ಆಹಾರ ಕೇಂದ್ರ ಸ್ಥಾಪನೆ ಬಿಪಿಎಲ್ ಕುಟುಂಬಗಳಿಗೆ ಉಚಿತ 3 ಗ್ಯಾಸ್( ಯುಗಾದಿ, ಗಣೇಶ ಚತುರ್ಥಿ, ದೀಪಾವಳಿಗೆ ಉಚಿತ ಗ್ಯಾಸ್) ಪೋಷಣೆ ಸ್ಕೀಮ್ ( ಬಿಪಿಎಲ್ ಕುಟುಂಬಗಳಿಗೆ ಪ್ರತಿ ನಿತ್ಯ ಅರ್ಧ ಲೀಟರ್ ನಂದಿನಿ ಹಾಲು ಏಕ ನಾಗರೀಕ ಸಂಹಿತೆ ಜಾರಿಗೆ ಭರವಸೆ ಕರ್ನಾಟಕ ಅಪಾರ್ಟ್‌ಮೆಂಟ್ ಓನರ್ ಶಿಪ್ ಆಕ್ಟ್ ತಿದ್ದುಪಡಿಗೆ ಭರವಸೆ ಒನಕೆ ಓಬವ್ವ ಯೋಜನೆಯಡಿ 10 ಸಾವಿರ ರೂಪಾಯಿ, 5 ವರ್ಷದ ಭವಿಷ್ಯ ನಿಧಿ ಸರ್ಕಾರಿ ಶಾಲೆಗಳ ಉನ್ನತೀಕರಣ ಭರವಸೆ
ಪಶ್ಚಿಮ ಬಂಗಾಳದ ಬಂಕುರಾ ಜಿಲ್ಲೆಯಲ್ಲಿ ಭಾನುವಾರ ಸಿಡಿಲು ಬಡಿದು ತೃಣಮೂಲ ಕಾಂಗ್ರೆಸ್ ಕಾರ್ಯಕರ್ತ ಮೃತಪಟ್ಟಿದ್ದಾರೆ. ಇಂಡಸ್‌ನಲ್ಲಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ನಡೆಸಿದ ರ್ಯಾಲಿಯಲ್ಲಿ ಈ ಘಟನೆ ನಡೆದಿದೆ. ಅಪಘಾತದಲ್ಲಿ 25 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 40 ವರ್ಷದ ಸಾಬರ್ ಮಲ್ಲಿಕ್ ಮೃತರು. ರ‍್ಯಾಲಿ ಸಾಗುತ್ತಿದ್ದಂತೆ ಧಾರಾಕಾರವಾಗಿ ಮಳೆ ಸುರಿಯಲಾರಂಭಿಸಿತು. ಇದರೊಂದಿಗೆ ಕೆಲವು ತೃಣಮೂಲ ಕಾರ್ಯಕರ್ತರು ಸಮೀಪದ ಮರದ ಕೆಳಗೆ ಆಶ್ರಯ ಪಡೆದರು. ಅಷ್ಟರಲ್ಲಿ ಮರಕ್ಕೆ ಸಿಡಿಲು ಬಡಿದಿದೆ. ಗಂಭೀರವಾಗಿ ಗಾಯಗೊಂಡಿದ್ದ ಮಲ್ಲಿಕ್‌ನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆತನ ಪ್ರಾಣ ಉಳಿಸಲಾಗಲಿಲ್ಲ. ಗಾಯಗೊಂಡ 25 ಮಂದಿಯಲ್ಲಿ ಏಳು ಮಂದಿಯನ್ನು ಬುರ್ದ್ವಾನ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ. ಘಟನೆಗೆ ಪಕ್ಷ ಸಂತಾಪ ವ್ಯಕ್ತಪಡಿಸಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy