Author: admin

ಬಿಬಿಎಂಪಿ ವ್ಯಾಪ್ತಿಯಲ್ಲಿ 2019-20ರಿಂದ 2021-22ರ ಅವಧಿಯಲ್ಲಿ 63 ಕಿಮೀ ರಾಜಕಾಲುವೆಗೆ ಬಾಕ್ಸ್ ಮತ್ತು ಯೂ ಟೈಪ್ ಕಾಮಗಾರಿ ನಿರ್ವಹಿಸಲು 7454 ಕೋಟಿ ವೆಚ್ಚವಾಗಿದೆ ಎಂದು ತೋರಿಸಲಾಗಿದೆ. ವಾಸ್ತವದಲ್ಲಿ ಕಾಮಗಾರಿ ನಡೆದಿಲ್ಲ. ಈ ಬಗ್ಗೆ ತನಿಖೆ ನಡೆಸಬೇಕು’ ಎಂದು ಸರ್ಕಾರ ರಚಿಸಿರುವ ಎಸ್‌ಐಟಿಗೆ ದೂರು ನೀಡಲಾಗಿದೆ. ಮಾಹಿತಿ ಹಕ್ಕು ಅಧ್ಯಯನ ಕೇಂದ್ರದ ಎನ್, ಅಮರೇಶ್ ಅವರು ಎಸ್‌ಐಟಿಯ ಅಧ್ಯಕ್ಷ ಪಿ. ಸಿ. ಜಾಫರ್ ಅವರಿಗೆ ದಾಖಲೆಗಳ ಸಹಿತ ಪತ್ರ ಸಲ್ಲಿಸಿದ್ದಾರೆ.

Read More

ನಮ್ಮತುಮಕೂರು/ಗುಬ್ಬಿ: ಇತ್ತೀಚೆಗಷ್ಟೇ  ತುಮಕೂರು ತಾಲೂಕು ಮಲ್ಲೇನಹಳ್ಳಿಯಲ್ಲಿ ಊರಿನ ಹೊರಗಡೆ ಇಡಲಾಗಿದ್ದ ಬಾಣಂತಿಯ ಮಗು ಅನಾರೋಗ್ಯ ಪೀಡಿತವಾಗಿ ಸಾವನ್ನಪ್ಪಿದ ಘಟನೆ ನಡೆದಿದ್ದರೂ ಇನ್ನೂ ಕೂಡ ಗೊಲ್ಲ ಸಮುದಾಯದಲ್ಲಿ ಜಾಗೃತಿ ಮೂಡಿಲ್ಲ, ಇದೀಗ ಇಂತಹದ್ದೇ ಮತ್ತೊಂದು ಪ್ರಕರಣ ಬಯಲಿಗೆ ಬಂದಿದೆ. ಗುಬ್ಬಿಯಿಂದ  ಸುಮಾರು 6 ಕಿ.ಮೀ. ದೂರದಲ್ಲಿರುವ ವರದೇವನಹಳ್ಳಿ ಹಟ್ಟಿ ಗ್ರಾಮದಲ್ಲಿ ಬಾಣಂತಿ ಮತ್ತು ಮಗುವನ್ನು ಗ್ರಾಮದ ಹೊರಗೆ ಗುಡಿಸಲಿನಲ್ಲಿ ಅಮಾನವೀಯ ಸ್ಥಿತಿಯಲ್ಲಿ ಯಾವುದೇ ಮೂಲಭೂತ ಸೌಕರ್ಯವಿಲ್ಲದ ಗೂಡಿನಂತಹ ಗುಡಿಸಲಿನಲ್ಲಿಟ್ಟ ಘಟನೆ ನಡೆದಿದೆ. ಈ ಬಗ್ಗೆ ಬಂದ ಖಚಿತ ಮಾಹಿತಿಯನ್ನಾಧರಿಸಿ  ಗುಬ್ಬಿಯ ಹಿರಿಯ ಸಿವಿಲ್ ನ್ಯಾಯಾಧೀಶರಾದ ಉಂಡಿ ಮಂಜುಳ ಶಿವಪ್ಪ ಹಾಗೂ ನ್ಯಾಯಾಲಯದ ಸಿಬ್ಬಂದಿ, ಆರಕ್ಷಕರು, ವಕೀಲರುಗಳ ಸಹಯೋಗದೊಂದಿಗೆ ಸ್ಥಳಕ್ಕೆ  ತೆರಳಿ ಮಗು ಮತ್ತು ಬಾಣಂತಿಯನ್ನು ಸುರಕ್ಷಿತವಾಗಿ  ಅವರ ಮನೆಗೆ ಕರೆತಂದು ಬಿಟ್ಟು ಅನಿಷ್ಠ ಪದ್ಧತಿ ಬಗ್ಗೆ ಜಾಗೃತಿ ಮೂಡಿಸಲಾಯಿತು. ಇನ್ನು ಯಾರು ಕೂಡ  ಈ ತರಹದ ಅನಿಷ್ಠ ಪದ್ಧತಿಯನ್ನು ಆಚರಿಸದಂತೆ ತಿಳಿಹೇಳಿದ ನ್ಯಾಯಾಧೀಶರು,  ಸಂವಿಧಾನಾತ್ಮಕವಾಗಿ ಮಗು ಹಾಗೂ ಬಾಣಂತಿ ಬದುಕಬೇಕು ಎಂದು ಗ್ರಾಮಸ್ಥರಿಗೆ…

Read More

ರಾಜ್ಯದಲ್ಲಿ ಸರಿಯಾಗಿ ಮಳೆಯಾಗದೇ ಜಲಾಶಯಗಳು ಭರ್ತಿಯಾಗದಿದ್ದರೂ ಸಹ ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸಿದ್ದನ್ನ ವಿರೋಧಿಸಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಂಡ್ಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ತಮಿಳುನಾಡಿಗೆ ಕಾವೇರಿ ನೀರು ಹರಿಸಿದ ಸರ್ಕಾರದ ನಡೆಯನ್ನ ಖಂಡಿಸಿ ಮಂಡ್ಯದ ಸಂಜಯ್ ಸರ್ಕಲ್ ಬಳಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಿವಿಯ ಮೇಲೆ ಹೂವಿಟ್ಟುಕೊಂಡು ರಸ್ತೆಯಲ್ಲಿ ಉರುಳಿ ಧರಣಿ ನಡೆಸಿದ್ದಾರೆ. ರೈತರ ಕಿವಿ ಮೇಲೆ ಕಾಂಗ್ರೆಸ್ ಸರ್ಕಾರ ಹೂವು ಇಡುತ್ತಿದೆ ಎಂದು ಪ್ರತಿಭಟನಾನಿರತ ಬಿಜೆಪಿ ಕಾರ್ಯಕರ್ತರು ಘೋಷಣೆ ಕೂಗಿ ಬಾಯಿಬಡಿದುಕೊಂಡು ಪ್ರತಿಭಟನೆ ನಡೆಸುತ್ತಿದ್ದು ರಸ್ತೆ ತಡೆದು ಟೈರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ . ಪ್ರತಿಭಟನೆಗೆ ಮಂಡ್ಯ ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್, ಸಂಸದ ಪಿಸಿ ಮೋಹನ್ ಸೇರಿ ಹಲವು ಬಿಜೆಪಿ ಮುಖಂಡರು ಸಾಥ್ ನೀಡಿದ್ದಾರೆ.

Read More

ಆಗಸ್ಟ್ 30 ರಿಂದ ಆರಂಭವಾಗಲಿರುವ ಏಕದಿನ ಏಷ್ಯಾಕಪ್‌ ಟೂರ್ನಿಗೆ ಟೀಂ ಇಂಡಿಯಾವನ್ನು ಪ್ರಕಟಿಸಲಾಗಿದೆ. ಭಾರತ ತಂಡವನ್ನ ಬಿಸಿಸಿಐ ಪ್ರಕಟಿಸಿದ್ದು ರೋಹಿತ್ ಶರ್ಮಾ ನಾಯಕರಾದರೇ , ಉಪನಾಯಕರಾಗಿ ಹಾರ್ದಿಕ್ ಪಾಂಡ್ಯ ಮುಂದುವರೆಯಲ್ಲಿದ್ದಾರೆ. ಎಂದಿನಂತೆ ವಿರಾಟ್ ಕೊಹ್ಲಿ ತಂಡದಲ್ಲಿದ್ದಾರೆ. ಬಹಳ ದಿನಗಳ ನಂತರ ಕೆಎಲ್ ರಾಹುಲ್ ಹಾಗೂ ಶ್ರೇಯಸ್ ಅಯ್ಯರ್ ಕಮ್ ಬ್ಯಾಕ್ ಮಾಡಿದ್ದಾರೆ. ಏಷ್ಯಾಕಪ್ ಮೂಲಕ ಟೀಂ ಇಂಡಿಯಾಕ್ಕೆ ಮರಳಿದ್ದಾರೆ. ಆದರೆ ಈ ಮೊದಲೇ ಊಹಿಸಿದಂತೆ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ಹಾಗೂ ಸ್ಪಿನ್ ಬೌಲರ್ ಚಹಲ್ ರನ್ನ ಕೈಬಿಡಲಾಗಿದೆ. ಆದರೆ ಅಚ್ಚರಿಯ ಆಯ್ಕೆ ಎಂಬಂತೆ ಕೇವಲ 8 ಟಿ20 ಪಂದ್ಯಗಳನ್ನಾಡಿರುವ ಹಾಗೂ ಒಂದೇ ಒಂದು ಏಕದಿನ ಪಂದ್ಯವನ್ನಾಡಿದ ಅನುಭವ ಹೊಂದಿರದ ಎಡಗೈ ಬ್ಯಾಟರ್ ತಿಲಕ್ ವರ್ಮಾ ಅವರಿಗೆ ತಂಡದಲ್ಲಿ ಅವಕಾಶ ನೀಡಲಾಗಿದೆ. ತಂಡ ಹೀಗಿದೆ.. ರೋಹಿತ್ ಶರ್ಮಾ(ನಾಯಕ), ಶುಭ್ ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್(ವಿಕೇಟ್ ಕೀಪರ್), ತಿಲಕ್ ವರ್ಮಾ, ಇಶಾನ್ ಕಿಶನ್. ಹಾರ್ದಿಕ್ ಪಾಂಡ್ಯ(ಉಪನಾಯಕ),…

Read More

ಬೆಂಗಳೂರು: 70 ವರ್ಷದ ವೃದ್ಧನೊಬ್ಬ ತನ್ನನ್ನ ಮದುವೆಯಾಗುವುದಾಗಿ ನಂಬಿಸಿ ನಂತರ ಮದುವೆಗೆ ನಿರಾಕರಿಸಿದ್ದಲ್ಲದೇ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ 63 ವರ್ಷದ ವೃದ್ಧೆಯೊಬ್ಬರು ಪೊಲೀಸ್ ಠಾಣಾ ಮೆಟ್ಟಿಲೇರಿರುವ ವಿಚಿತ್ರ ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ. ನೊಂದ ವೃದ್ಧೆ ನೀಡಿರುವ ದೂರಿನನ್ವಯ ಪೂರ್ವ ವಿಭಾಗದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವೃದ್ಧೆಯನ್ನು ಯಾಮಾರಿಸಿ ಮೂರೂವರೆ ಕೋಟಿ ರೂಪಾಯಿ ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡು ವಂಚಿಸಿದ್ದ ಆರೋಪಿಗಳನ್ನು ಬನಶಂಕರಿ ಠಾಣಾ ಪೊಲೀಸರು ಬಂಧಿಸಿದ್ದಾರೆ. 63 ವರ್ಷದ ಶಾಂತಾ ಎಂಬವರಿಗೆ ವಂಚಿಸಿದ್ದ ಅಪೂರ್ವ ಯಾದವ್, ಈಕೆಯ ತಾಯಿ ವಿಶಾಲ, ಸ್ನೇಹಿತೆ ಅರುಂಧತಿ ಹಾಗೂ ಪತಿ ರಾಕೇಶ್ ಬಂಧಿತರು. ಪ್ರಕರಣದ ವಿವರ: ಬನಶಂಕರಿ 2ನೇ ಹಂತದ ಪದ್ಮನಾಭನಗರದಲ್ಲಿ ವಾಸವಿದ್ದ ವೃದ್ಧೆ ಶಾಂತಾ ಅವರ ಪತಿ ಇತ್ತೀಚೆಗಷ್ಟೆ ತೀರಿಕೊಂಡಿದ್ದರು. ಶಾಂತಾ ಮತ್ತು ಅವರ ಪುತ್ರಿ ಮಾತ್ರ ಮನೆಯಲ್ಲಿ ವಾಸವಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಅರುಂಧತಿ ಮತ್ತು ರಾಕೇಶ್ ದಂಪತಿ ಇನ್ಸುರೆನ್ಸ್…

Read More

“ನನ್ನನ್ನು ಮತ್ತು ನನ್ನ ಮಕ್ಕಳನ್ನು ಪತಿ ಮನೆಯಿಂದ ಹೊರ ಹಾಕಿದ್ದು, ನನಗೆ ಜೀವ ಬೆದರಿಕೆಯಿದೆ. ಆತ ಯಾವುದೇ ಕ್ಷಣದಲ್ಲೂ ನಮ್ಮನ್ನು ಕೊಲ್ಲಬಹುದು” ಎಂದು ಆರೋಪಿಸಿ ಮಹಿಳೆಯೊಬ್ಬರು ಮಕ್ಕಳ ಸಹಿತ ವಿಡಿಯೋ ಮಾಡಿ ರಕ್ಷಣೆ ಕೋರಿದ್ದಾರೆ. ಸಂಬಂಧ ಹೈದರಾಬಾದ್ ಮೂಲದ ಪೂಜಾ ಗಾಂಧಿ ಎಂಬುವವರು ಪತಿ ವೈಭವ್ ಜೈನ್ ಮತ್ತು ಗೀತಿಕಾ ಬಿಂದನಂ, ರೋಹನ್ ಸಾಲ್ಯಾನ್ ಎಂಬುವವರಿಂದ ಪ್ರಾಣ ಬೆದರಿಕೆ ಇದೆ ಎಂದು ಕೊತ್ತನೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಕೊತ್ತನೂರು ನಿವಾಸಿ ಪೂಜಾ ಗಾಂಧಿ ಎಂಬುವವರು ಈ ವಿಡಿಯೋ ಮಾಡಿದ್ದಾರೆ. ಪತಿ ವೈಭವ್‌ ಜೈನ್‌, ಗೀತಿಕಾ ಬಿಂದನಂ, ರೋಹನ್‌ ಸಾಲ್ಯಾನ್‌ ಅವರಿಂದ ನನಗೆ ಮತ್ತು ಮಕ್ಕಳಿಗೆ ಜೀವ ಬೆದರಿಕೆ ಇದೆ ಎಂದು ಕೊತ್ತನೂರು ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಈ ನಡುವೆ ಪೂಜಾ ಗಾಂಧಿ ಸಹೋದರ ರಾಹುಲ್‌ ಗಾಂಧಿ ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಸಹೋದರಿಯ ಸೆಲ್ಫಿ ವಿಡಿಯೋ ಹಂಚಿಕೊಂಡು, ಮುಖ್ಯಮಂತ್ರಿ, ರಾಜ್ಯ ಪೊಲೀಸ್‌ ಮಹಾನಿರ್ದೇಶಕ, ನಗರ ಪೊಲೀಸ್‌ ಆಯುಕ್ತರಿಗೆ ಟ್ಯಾಗ್‌ ಮಾಡಿದ್ದಾರೆ. ಸಹೋದರಿಗೆ…

Read More

ಎಚ್‌ಸಿಜಿ ಕ್ಯಾನ್ಸರ್ ಆಸ್ಪತ್ರೆಯು ಬೆಂಗಳೂರಿನ ಸಾವಿರಕ್ಕೂ ಹೆಚ್ಚು ಕ್ಯಾನ್ಸರ್‌ ರೋಗಿಗಳಿಗೆ ವಿನೂತನ ಚಿಕಿತ್ಸೆಯಾದ ಸಮಗ್ರ ಜೀನೋಮಿಕ್ ಪ್ರೊಫೈಲಿಂಗ್ (ಸಿಜಿಪಿ) ಪೂರ್ಣಗೊಳಿಸಿದ್ದು, ಜೊತೆಗೆ, ಟ್ರಿಸ್ಟಾ ಸೈನ್ಸಸ್‌ ನ ಹೊಸ ಗುಣಮಟ್ಟದ ಕ್ಯಾನ್ಸರ್ ಆರೈಕೆಗೂ ಚಾಲನೆ ನೀಡುತ್ತಿದೆ ಎಂದು ಹೆಲ್ತ್‌ಕೇರ್ ಗ್ಲೋಬಲ್ ಎಂಟರ್‌ಪ್ರೈಸಸ್ (ಎಚ್‌ಸಿಜಿ) – ಕಾರ್ಯನಿರ್ವಾಹಕ ಅಧ್ಯಕ್ಷ ಡಾ.ಬಿ.ಎಸ್. ಅಜೈಕುಮಾರ್ ತಿಳಿಸಿದರು. ಎಚ್‌ ಸಿಜಿ ನಗರದಲ್ಲಿ ಆಯೋಜಿಸಿದ್ದ “ಇಲ್ಯುಮಿನಾ-ಪ್ರೇಮಾಸ್ ಜೊತೆಗಿನ ವಿವಿಧ ಕ್ಯಾನ್ಸರ್‌ ಗಳ ಜೀನೋಮ್ ಪ್ರೊಫೈಲಿಂಗ್‌ ನ ಚಿಕಿತ್ಸಕ ಮತ್ತು ಭವಿಷ್ಯಜ್ಞಾನದ ಉಪಯುಕ್ತತೆ”ವಿಷಯದ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಭಾರತದಲ್ಲಿ ಕ್ಯಾನ್ಸರ್ ಪ್ರಕರಣಗಳು ದಿನೇ ದಿನೆ ಹೆಚ್ಚುತ್ತಿವೆ. ಬಡವರಿಗೂ ಸಹ ಕೈಗೆಟುಕುವ ದರದಲ್ಲಿ ಕ್ಯಾನ್ಸರ್ ಚಿಕಿತ್ಸೆ ನೀಡುವುದು ನಮ್ಮ ಗುರಿಯಾಗಿದೆ. ಜೊತೆಗೆ, ಅತ್ಯಾಧುನಿಕ ಕ್ಯಾನ್ಸರ್‌ ಚಿಕಿತ್ಸೆ ನೀಡುವ ನಿಟ್ಟಿನಲ್ಲಿಯೂ ಸಾಕಷ್ಟು ಹೊಸ ಅನ್ವೇಷಣೆ ನಡೆಸಿದ್ದು, ಟ್ರಿಸ್ಟಾ ಸೈನ್ಸಸ್‌ ನ ಹೊಸ ಗುಣಮಟ್ಟದ ಕ್ಯಾನ್ಸರ್ ಚಿಕಿತ್ಸೆಯನ್ನೂ ಜಾರಿಗೆ ತರುವ ನಿಟ್ಟಿನಲ್ಲಿ ಹೆಜ್ಜೆ ಇಡುತ್ತಿದ್ದೇವೆ. ಇನ್ನು, ಅನುವಂಶಿಕವಾಗಿ ಬರುವ ಕ್ಯಾನ್ಸರ್‌ ತಡೆಗಟ್ಟಲು ಹಾಗೂ…

Read More

ರಾಜ್ಯದಲ್ಲಿ ಪಕ್ಷಾಂತರ ವಿಚಾರ ಇದೀಗ ಸಾಕಷ್ಟು ಸದ್ದು ಮಾಡುತ್ತಿದ್ದು. ಈ ಹಿಂದೆ ಬಿಜೆಪಿ ಸೇರಿದ್ದ ವಲಸೆ ಶಾಸಕರಲ್ಲಿ ಕೆಲವರು ಮತ್ತೆ ವಾಪಸ್ ಕಾಂಗ್ರೆಸ್ ಗೆ ಹೋಗಲಿದ್ದಾರೆ ಎಂಬ ಸುದ್ದಿ ಇದೆ. ಈ ಮಧ್ಯೆ ಇಂದು ಕೆಲ ಜೆಡಿಎಸ್ ಮತ್ತು ಬಿಜೆಪಿ ಮುಖಂಡರು ಕಾಂಗ್ರೆಸ್ ಸೇರಲಿದ್ದಾರೆ. ಕಳೆದ ವಿಧಾಸಭೆ ಚುನಾವಣೆ ವೇಳೆ ಬಿಜೆಪಿ ತೊರೆದು ಜೆಡಿಎಸ್ ಸೇರಿ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದ ಆಯನೂರು ಮಂಜುನಾಥ್ ಇದೀಗ ಕಾಂಗ್ರೆಸ್ ಕದ ತಟ್ಟುತ್ತಿದ್ದಾರೆ. ಇನ್ನೊಂದೆಡೆ ಬಿಜೆಪಿ ಮುಖಂಡ ಶಿಕಾರಿಪುರ ನಾಗರಾಜ್ ಗೌಡ ಕೂಡ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ. ಇನ್ನು ಎಸ್.ಟಿ.ಸೋಮಶೇಖರ್ ಬೆಂಬಲಿಗರು ಕೂಡ ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ ಎನ್ನಲಾಗಿದೆ. ಕೆಪಿಸಿಸಿ ಕಚೇರಿಯಲ್ಲಿ 15ಕ್ಕೂ ಅಧಿಕ ಬಿಜೆಪಿ ಮುಖಂಡರು ಕಾಂಗ್ರೆಸ್ ಸೇರಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Read More

ಈ ವರ್ಷ ಶ್ರಾವಣ ಬರೋಬರಿ ಎರಡು ತಿಂಗಳು ಬಂದಿದೆ, ಆದರೆ ಈ ಮೊದಲು ಬಂದಿರುವುದು ಶ್ರಾವಣ ಅಧಿಕ ಮಾಸ, ಆಗಸ್ಟ್ ೧೭ರಿಂದ ಶ್ರಾವಣ ಶುರು. ೩ ವರ್ಷಕ್ಕೊಮ್ಮೆ ಅಧಿಕ ಮಾಸ ಇರುತ್ತದೆ. ಈ ವರ್ಷ ಶ್ರಾವಣ ಅಧಿಕ ಮಾಸ ಬಂದಿದೆ. ಯಾವ ಮಾಸದ ಮೊದಲು ಅಧಿಕ ಮಾಸ ಬರುವುದೋ ಆ ಹೆಸರನ್ನು ನೀಡಲಾಗುವುದು, ಶ್ರಾವಣ ಅಧಿಕ ಮಾಸ ಜುಲೈ ೧೮ರಿಂದ ಆಗಸ್ಟ್ ೧೬ರವರೆಗೆ ಇತ್ತು. ಇದೀಗ ನಿಜ ಶ್ರಾವಣ ಮಾಸ ಆಗಸ್ಟ್ ೧೭ರಿಂದ ಪ್ರಾರಂಭವಾಗಿ ಸೆಪ್ಟೆಂಬರ್ ೧೫ರವರೆಗೆ ಇರಲಿದೆ. ಅಧಿಕ ಮಾಸದಲ್ಲಿ ಶುಭ ಕಾರ್ಯಗಳನ್ನು ಮಾಡುವುದಿಲ್ಲ ಸಾಮಾನ್ಯವಾಗಿ ಅಧಿಕ ಮಾಸದಲ್ಲಿ ಶುಭ ಕಾರ್ಯಗಳನ್ನು ಮಾಡುವುದಿಲ್ಲ, ಆದರೆ ಪೂಜಾ ಕಾರ್ಯಗಳನ್ನು ಮಾಡಲಾಗುವುದು. ಅಧಿಕ ಮಾಸದಲ್ಲಿ ಪ್ರತಿನಿತ್ಯ ಶ್ರೀವಿಷ್ಣುವಿನ ನಾಮಸ್ಮರಣೆ ಮಾಡಿದರೆ ಒಳ್ಳೆಯದು ಎಂದು ಹೇಳಲಾಗುತ್ತದೆ. ಈ ಅವಧಿಯಲ್ಲಿ ದೇವರ ಪೂಜೆಗಳನ್ನು ಮಾಡಲಾಗುವುದು, ಆದರೆ ಇದುವರೆಗೆ ಹೋಗದೇ ಇರುವ ದೇವಾಲಯಕ್ಕೆ ಈ ಅವಧಿಯಲ್ಲಿ ಹೋಗಬಾರದು. ಗೃಹ ಪ್ರವೇಶ, ಸಂನ್ಯಾಸಗ್ರಹಣ, ಗ್ರಹಣದೀಕ್ಷೆ, ವಿವಾಹ, ಉಪನಯನ ,…

Read More

ವಿಶ್ವವಿದ್ಯಾಲಯಗಳ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಅನ್ನು ಎಸ್. ಪಿ. ಎಸ್. ಪಿ., ಟಿ. ಎಸ್. ಪಿ. ಅಡಿ ವಿತರಿಸಲು ಕ್ರಮ ಕೈಗೊಳ್ಳುವಂತೆ ಸಿಎಂ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಕುಲಪತಿಗಳು, ಉನ್ನತ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು. ಲ್ಯಾಪ್ ಟಾಪ್ ಸಂಬಂಧ 230 ಕೋಟಿ ರೂ. ಒದಗಿಸುವಂತೆ ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್ ಗೆ ಸಭೆ ನಡೆಯುವಾಗಲೇ ದೂರವಾಣಿ ಮೂಲಕ ಸೂಚನೆ ನೀಡಿದರು.

Read More