Author: admin

ಶೀಘ್ರವೇ 6 ಸಾವಿರ ಪೊಲೀಸ್ ಪೇದೆಗಳ ನೇಮಕಕ್ಕೆ ಸರಕಾರ ಕ್ರಮ ವಹಿಸಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ಬೆಂಗಳೂರು ನಗರದಲ್ಲಿನ 2,500 ಹಾಗೂ ರಾಜ್ಯದ ಉಳಿದ ಭಾಗದಲ್ಲಿ ಖಾಲಿ ಇರುವಂತ 3,500 ಪೇದೆಗಳ ನೇಮಕಾತಿಯನ್ನು ಮಾಡಿಕೊಳ್ಳುವುದಾಗಿ ಗೃಹ ಸಚಿವರು ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ ಎಲ್ಲಿ ಅಗತ್ಯ ಇದೆಯೋ ಅಲ್ಲಿ ಹೊಸ ಪೊಲೀಸ್ ಠಾಣೆ ಪ್ರಾರಂಭಿಸಲು ಉತ್ಸುಕವಾಗಿದೆ. ಆದರೇ ಸ್ಥಳೀಯವಾಗಿ ಪ್ರಸ್ತಾವನೆ ಬರಬೇಕು. ಕೆಲವೆಡೆ ಬಾಡಿಗೆ ಕಟ್ಟದಲ್ಲಿ ಪೊಲೀಸ್ ಠಾಣೆಗಳಿದ್ದು ಹಂತ ಹಂತವಾಗಿ ಹೊಸ ಕಟ್ಟಡ ನಿರ್ಮಾಣಕ್ಕೆ ಕ್ರಮ ವಹಿಸಲಾಗುತ್ತದೆ ಎಂದು ಹೇಳಿದ್ದಾರೆ. ಪಿಎಸ್‌ಐ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಕೆಲ ಅಭ್ಯರ್ಥಿಗಳು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಕೋರ್ಟ್ ಸರ್ಕಾರ ಅಭಿಪ್ರಾಯ ಕೇಳಿತ್ತು. ಮರು ಪರೀಕ್ಷೆ ನಡೆಸುವುದಾಗಿ ಹೇಳಲಾಗಿದೆ. ಇನ್ನೂ ನ್ಯಾಯಾಲಯದಿಂದ ತೀರ್ಮಾನ ಹೊರಬಂದ ನಂತ್ರ, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

Read More

ತುಮಕೂರು: ವೃದ್ದೆಯೊಬ್ಬರು ಅಪಘಾತದಲ್ಲಿ ಗಾಯಗೊಂಡು ತಕ್ಷಣ ಸೂಕ್ತ ಚಿಕಿತ್ಸೆ ದೊರೆಯದೆ ರಸ್ತೆಯಲ್ಲೇ ನರಳಾಡಿದ ಘಟನೆ ತುಮಕೂರಿನ ಚಿಕ್ಕನಾಯನಹಳ್ಳಿಯಲ್ಲಿ ಪಟ್ಟಣದಲ್ಲಿ ನಡೆದಿದೆ. ಗೌರಮ್ಮ ಎಂಬುವರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಲಾರಿ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಅವರ ಕಾಲಗಳ ಮೇಲೆ ಲಾರಿಯ ಚಕ್ರ ಹರಿದ ಪರಿಣಾಮ ಗಂಭೀರವಾದ ಗಾಯಗಳಾಗಿದ್ದು. ಅಲ್ಲದೆ ತಕ್ಷಣ ಚಿಕಿತ್ಸೆ ದೊರೆಯದೆ ಸುಮಾರು ಅರ್ಥ ಗಂಟೆಗೂ ಹೆಚ್ಚು ಕಾಲ ನರಳಾಡಿದರು. ಕಾಲು ಮುರಿದುಕೊಂಡು ರಕ್ತದ ಮಡುವಿನಲ್ಲಿ ಒದ್ದಾದುತ್ತಿದ್ದ ಹೃದಯ ಚಿಕಿತ್ಸೆ ಲಭಿಸಲೆಂದು ಸಾರ್ವಜನಿಕರು ಆಂಬುಲೆನ್ಸ್ ಗೆ ಕರೆ ಮಾಡಿದ್ದಾರೆ. ಆದ್ರೆ ಚಿಕ್ಕನಾಯಕನಹಳ್ಳಿ  ಪಟ್ಟಣದಲ್ಲಿಯೇ ಈ ಘಟನೆ ಸಂಭವಿಸಿದರು ಕೂಡ ಸ್ಥಳಕ್ಕೆ ಅರ್ಧಗಂಟೆ ಗಂಟೆಯಾದರೂ  ಆಂಬ್ಯುಲೆನ್ಸ್ ಬರ್ಲಿಲ್ಲ. ಇದರಿಂದಾಗಿ ರೊಚ್ಚಿಗೆದ್ದ ಸ್ಥಳೀಯರು ಆಟೋದಲ್ಲೇ ಅಜ್ಜಿಯನ್ನು ಆಸ್ಪತ್ರೆಗೆ ಚಿಕಿತ್ಸೆಗಾಗಿ ಕಳುಹಿಸಿಕೊಟ್ಟರು.  ತಾಲೂಕು ಆಸ್ಪತ್ರೆಯಲ್ಲಿ ಗಾಯಗೊಂಡ ಗೌರಮ್ಮಗೆ ಚಿಕಿತ್ಸೆ ನೀಡಲಾಗಿದೆ. ಕೊಡ್ಲಾಪುರ ಗ್ರಾಮದ ಅಜ್ಜಿ ಗೌರಮ್ಮ ರಸ್ತೆ ದಾಟುವಾಗ ಅಪಘಾತ ಸಂಭವಿಸಿದೆ. ಸರ್ಕಾರಿ ಶಾಲೆ ಮುಂಭಾಗ ವೇಗವಾಗ ಬಂದ ಸಿಮೆಂಟ್ ಲಾರಿ ಡಿಕ್ಕಿ ಹೊಡೆದಿತ್ತು.…

Read More

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2023ರಲ್ಲಿ ಪಾಲ್ಗೊಳ್ಳಲು ದಸರಾ ಗಜಪಡೆ ಮೈಸೂರು ಆಗಮನಕ್ಕೆ ಎರಡು ವಾರ ಮಾತ್ರ ಬಾಕಿ ಇದೆ. ಸೆಪ್ಟೆಂಬರ್ 1ರಂದು ಗಜಪಯಣ ಸಮಾರಂಭ ನಡೆಯಲಿದೆ. ಗಜಪಯಣ ಸಮಾರಂಭದ ಬಳಿಕ ಮೈಸೂರಿಗೆ ಆಗಮಿಸಲಿರುವ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ದಸರಾ ಗಜಪಡೆ ಸೆಪ್ಟೆಂಬರ್ 4ರಂದು ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣ ಪ್ರವೇಶಿಸಲಿದೆ. ಹೀಗಾಗಿ ಗಜಪಡೆಯ ವಾಸ್ತವ್ಯಕ್ಕಾಗಿ ತಾತ್ಕಾಲಿಕ ಶೆಡ್ ಗಳ ನಿರ್ಮಾಣ ಕಾರ್ಯ ನಡೆಯುತ್ತಿದ್ದು ಕೆಲಸ ಭರದಿಂದ ಸಾಗಿದೆ. ಮೊದಲ ತಂಡದಲ್ಲಿ 9 ಆನೆಗಳು ಆಗಮಿಸಲಿದ್ದು, ಎರಡನೇ ತಂಡದಲ್ಲಿ ಐದು ಆನೆಗಳು ಆಗಮಿಸಲಿವೆ. ಆನೆಗಳ ಜೊತೆಗೆ ಮಾವುತರು, ಕಾವಾಡಿಗಳು ಕೂಡ ಬರಲಿದ್ದಾರೆ. ಹೀಗಾಗಿ ಮಾವುತರು ಹಾಗೂ ಕಾವಾಡಿಗಳ ಕುಟುಂಬಕ್ಕೂ ತಾತ್ಕಾಲಿಕ ಶೆಡ್ ಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ. ಈ ಕುರಿತು ಮಾತನಾಡಿದ ಡಿಸಿಎಫ್ ಸೌರಬ್ ಕುಮಾರ್, ಈ ಬಾರಿಯ ದಸರಾ ಮಹೋತ್ಸವಕ್ಕೆ ಆಗಮಿಸುವ ಗಜಪಡೆಗಳ ಆಗಮನಕ್ಕೆ ಸಕಲ ಸಿದ್ದತೆಗಳು ನಡೆಯುತ್ತಿವೆ. ಮೊದಲ ಹಂತದಲ್ಲಿ 9 ಆನೆಗಳು ಆಗಮಿಸಲಿವೆ. ಎರಡನೇ ಹಂತದಲ್ಲಿ 5…

Read More

ಸಿಎಂ ಸಿದ್ದರಾಮಯ್ಯ ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಪತ್ರಿಕಾ ವೃತ್ತಿ ಸಂಬಂಧಿತ ನಾನಾ ಪದಾಧಿಕಾರಿಗಳ ಜತೆ ಸಭೆ ನಡೆಸಿ ಎಲ್ಲರ ಅಹವಾಲು ಮತ್ತು ಬೇಡಿಕೆಗಳನ್ನು ಆಲಿಸಿದರು.ಪತ್ರಿಕಾ ವಿತರಕರ ಸಂಘ ಸೇರಿ ಕಾರ್ಯನಿರತ ಪತ್ರಕರ್ತರ ಸಂಘಟನೆಗಳ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಒಟ್ಟು ಒಂಬತ್ತು ಸಂಘಟನೆಗಳ 12 ಮಂದಿ ಪದಾಧಿಕಾರಿಗಳು ತಮ್ಮ ಬೇಡಿಕೆಗಳನ್ನು ಮಂಡಿಸಿದರು. ಎಲ್ಲರ ಬೇಡಿಕೆಗಳನ್ನೂ ಸಮಗ್ರವಾಗಿ ಪರಿಶೀಲಿಸಿ ಬಳಿಕ ಪ್ರತಿಕ್ರಿಯಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.

Read More

ಬೆಂಗಳೂರು ಕ್ಲೀನ್ಸ್ ರಸ್ತೆಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯಿಂದ ಅಳವಡಿಸಿದ್ದ ಅನಧಿಕೃತ ಬ್ಯಾನರ್ ಅನ್ನು ತೆರವುಗೊಳಿಸಿ 50,000/- ರೂ. ದಂಡ ವಿಧಿಸಲಾಗಿದೆ ಎಂದು ಬಿಬಿಎಂಪಿ ತಿಳಿಸಿದೆ. ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗ, ರಾಜ್ಯಾಧ್ಯಕ್ಷರು, ಜಿಲ್ಲಾಧ್ಯಕ್ಷರು ರಾಜ್ಯದ ಎಲ್ಲಾ ಪಧಾಧಿಕಾರಿಗಳು ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ, ಮಾಜಿ ಮುಖ್ಯಮಂತ್ರಿ ದಿ. ಡಿ. ದೇವರಾಜ ಅರಸು ಜನ್ಮ ದಿನಾಚರಣೆಯ ಅಂಗವಾಗಿ ಕಾಂಗ್ರೆಸ್ ಕಛೇರಿಯ ಮುಂಭಾಗದಲ್ಲಿ ಅನಧಿಕೃತವಾಗಿ ಬ್ಯಾನರ್ ಅಳವಡಿಸಲಾಗಿತ್ತು.

Read More

ರಾಜ್ಯದಲ್ಲಿ ಮತ್ತೆ ಕೊರೊನಾ ರೂಪಾಂತರಿ ವೈರಸ್ ಆತಂಕ ಹುಟ್ಟಿಕೊಂಡಿದೆ. ಆರೋಗ್ಯದ ಬಗ್ಗೆ ಎಚ್ಚರವಹಿಸಲು ಆರೋಗ್ಯ ಇಲಾಖೆ ಸೂಚನೆ ಕೊಟ್ಟಿದೆ. ಕೊರೊನಾ ರೂಪಾಂತರಿ ಎರಿಸ್ EG.5 ವಿದೇಶಗಳಲ್ಲಿ ಆತಂಕ ಸೃಷ್ಟಿಸಿದೆ. ಒಮಿಕ್ರಾನ್ ರೂಪಾಂತರಿಯ ಉಪ ತಳಿ ಎರಿಸ್ EG.5 ವೈರಸ್ ಅತಿವೇಗವಾಗಿ ಹರಡುವ ಆತಂಕವಿದೆ. ಅಮೆರಿಕ, ಜಪಾನ್, ಬ್ರಿಟನ್‌ ನಲ್ಲಿ ಎರಿಸ್ EG.5 ವೈರಸ್ ಭೀತಿ ಹೆಚ್ಚಿದೆ. ಹೀಗಾಗಿ ರಾಜ್ಯದಲ್ಲೂ ಮತ್ತೆ ಕೊವಿಡ್ ಹರಡುವ ಆತಂಕ ಉಂಟಾಗಿದೆ.

Read More

ಬೆಂಗಳೂರು ನಗರದ ಎಚ್‌ ಎಎಲ್ ಬಳಿಯ ವಾಯುಸೇನೆ ಜಾಗಕ್ಕೆ ಪಾನಮತ್ತನಾಗಿ ಅಕ್ರಮವಾಗಿ ಪ್ರವೇಶಿಸಿದ್ದ ರಾಜ್‌ ಕುಮಾರ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಪಶ್ಚಿಮ ಬಂಗಾಳದ ರಾಜ್‌ ಕುಮಾರ್, ಕೆಲಸ ಹುಡುಕಿಕೊಂಡು ನಗರಕ್ಕೆ ಬಂದಿದ್ದ. ವಾಯುಸೇನೆ ಜಾಗದಲ್ಲಿ ಸುತ್ತಾಡುತ್ತಿದ್ದ ಈತನನ್ನು ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದು ಠಾಣೆಗೆ ಒಪ್ಪಿಸಿದ್ದಾರೆ. ‘ಅಕ್ರಮ ಪ್ರವೇಶ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ. ‘ನೀಲಿ ಬಣ್ಣದ ಕುರ್ತಾ ಧರಿಸಿದ್ದ ರಾಜ್‌ ಕುಮಾರ್, ಪಾನಮತ್ತನಾಗಿ ವಾಯುಸೇನೆಯ ತಾಂತ್ರಿಕ ವಿಭಾಗದ ಜಾಗದೊಳಗೆ ಹೋಗಿದ್ದ. ಆತನನ್ನು ನೋಡಿದ್ದ ಭದ್ರತಾ ಸಿಬ್ಬಂದಿ, ಸುತ್ತುವರೆದು ಹಿಡಿದಿದ್ದರು. ಆರೋಪಿಯನ್ನು ವಿಚಾರಣೆ ಮಾಡಲಾಗಿದೆ. ಈತನ ವಿರುದ್ಧ ಯಾವುದೇ ಅಪರಾಧ ಪ್ರಕರಣಗಳಿಲ್ಲ’ ಎಂದು ತಿಳಿಸಿವೆ.

Read More

ಬೆಂಗಳೂರು: ಬ್ಯಾಟರಾಯನಪುರ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದ್ದ ಅಪಘಾತದಲ್ಲಿ ಗಾಯಗೊಂಡಿದ್ದ ಮದಿ ಅಳಗನ್ (50) ಅವರು ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಸ್ಥಳೀಯ ನಿವಾಸಿ ಮದಿ ಅಳಗನ್ ಅವರು ನಾಯಂಡನಹಳ್ಳಿ ಜಂಕ್ಷನ್ ಬಳಿ ಆಗಸ್ಟ್ 19ರಂದು ರಾತ್ರಿ ರಸ್ತೆ ದಾಟುತ್ತಿದ್ದರು. ಅದೇ ಸಂದರ್ಭದಲ್ಲಿ ಅತೀ ವೇಗವಾಗಿ ಬಂದಿದ್ದ ವಾಹನವೊಂದು ಅವರಿಗೆ ಡಿಕ್ಕಿ ಹೊಡೆದಿತ್ತು’ ಎಂದು ಪೊಲೀಸರು ಹೇಳಿದ್ದಾರೆ. .

Read More

ನಾನು ಬಿಜೆಪಿಯಲ್ಲೇ ಇರುತ್ತೇನೆ, ಕಾಂಗ್ರೆಸ್ ಸೇರಲ್ಲ ಎಂದು ಕೊಪ್ಪಳದಲ್ಲಿ ಬಿಜೆಪಿ ಸಂಸದ ಸಂಗಣ್ಣ ಕರಡಿ ಹೇಳಿಕೆ ನೀಡಿದರು. ನಾನು ಲೋಕಸಭೆ ಚುಣಾವಣೆಯಲ್ಲಿ ಮತ್ತೆ ಸ್ಪರ್ಧಿಸುತ್ತೇನೆ. ಬೇಕಾದ್ರೇ ರಕ್ತದಲ್ಲಿ ಬರೆದು ಕೊಡುತ್ತೇನೆ ಕಾಂಗ್ರೆಸ್ ಸೇರಲ್ಲ. ಲೋಕಸಭಾ ಚುನಾವಣೆಗೆ ಟಿಕೆಟ್ ನೀಡುತ್ತೆ ಎಂಬ ವಿಶ್ವಾಸ ಇದೆ. ಟಿಕೆಟ್ ನೀಡದಿದ್ದರೂ ಪಕ್ಷದ ಪರವಾಗಿ ಕೆಲಸ ಮಾಡ್ತೇನೆ. ಕುಷ್ಟಗಿ ಕ್ಷೇತ್ರದ ಶಾಸಕ ದೊಡ್ಡನಗೌಡ ಬಿಜೆಪಿ ಬಿಡುವುದಿಲ್ಲ ಎಂದರು.

Read More

ತುರುವೇಕೆರೆ : ಈ ಕ್ಷೇತ್ರದ ವಸತಿ ಯೋಜನೆ ಅಡಿಯಲ್ಲಿ ಬಂದಂತಹ ಮನೆಗಳನ್ನು ಮಸಾಲ ಜಯರಾಮ್ ರವರ ಕುಮ್ಮಕ್ಕಿನಿಂದ ಕುಣಿಗಲ್ ಕ್ಷೇತ್ರಕ್ಕೆ ನೀಡಲಾಗಿದೆ ಎಂಬ ಶಾಸಕ ಎಂ.ಟಿ.ಕೃಷ್ಣಪ್ಪನವರ ಮಾತು ಹಾಸ್ಯಾಸ್ಪದ ಎಂದು ಮಾಜಿ ಶಾಸಕ ಮಸಾಲ ಜಯರಾಮ್ ಹೇಳಿದ್ದಾರೆ. ತಮ್ಮ ಫಾರ್ಮ್ ಹೌಸ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡೋಂಗಿ ರಾಜಕಾರಣ ಮಾಡುವುದನ್ನು ಮೊದಲು ಬಿಡಿ ಎಂ.ಟಿ.ಕೃಷ್ಣಪ್ಪನವರೆ, ಕೊಟ್ಟ ಕುದುರೆಯನ್ನು ಏರದವನು ಶೂರನು ಅಲ್ಲ ಧೀರನು ಅಲ್ಲ, ತಾಲೂಕಿಗೆ ತಂದಂತಹ ಮನೆಗಳನ್ನು ಸರಿಯಾಗಿ ಬಳಸಿಕೊಳ್ಳಲಾಗದೆ ಅಸಹಾಯಕತೆಯಿಂದ ಈ ಮಾತನ್ನು ಆಡುತ್ತಿದ್ದಾರೆ. ಕೈಲಾಗದವನು ಮೈಯನ್ನು ಪರಚಿಕೊಂಡ ಎಂಬ ಗಾದೆ ಎಂ.ಟಿ.ಕೃಷ್ಣಪ್ಪರಂತಹವರನ್ನು ನೋಡಿ ಹಿರಿಯರು ಮಾಡಿರಬೇಕು ಎಂದರು. 2023ರವರೆಗೆ ಮಾಡುತ್ತಿದ್ದ ಕಾಮಗಾರಿಗಳನ್ನು ನನ್ನ ಅವಧಿಯಲ್ಲಿ ಆದಂತಹ ಕಾಮಗಾರಿಗಳು ಎಂದು ಸುಳ್ಳು ಹೇಳಿಕೊಂಡೆ ಓಡಾಡಿದ್ದಾರೆ,  ಈಗಲೂ ನನಗೆ ಮನೆ ತರುವ ಸಾಮರ್ಥ್ಯವಿದೆ. ಮಾನ್ಯ ಸಂಸದರಾದ ಬಸವರಾಜ್ ಅವರ ಬಳಿ ಮಾತಾಡಿದ್ದೇನೆ.  ಕೊಡುತ್ತೇನೆ ಎಂಬ ಭರವಸೆಯನ್ನು ನೀಡುತ್ತಿದ್ದಾರೆ, 1000 ಮನೆಗಳನ್ನು ಈ ಕ್ಷೇತ್ರಕ್ಕೆ ತಂದೆ ತರುತ್ತೇನೆ ಎಂದು ಈ…

Read More