Author: admin

ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ವಿವಿಧ ಹಂತಗಳಲ್ಲಿ ಆರು ದಿನಗಳ ಅಭಿಯಾನ ಆರಂಭವಾಗಿದೆ. ರೋಡ್ ಶೋ ಸೇರಿದಂತೆ 22 ಕಾರ್ಯಕ್ರಮಗಳಲ್ಲಿ ಪ್ರಧಾನಿ ಭಾಗವಹಿಸಲಿದ್ದಾರೆ. ಬೆಳಗ್ಗೆ 10 ಗಂಟೆಗೆ ಬೀದರ್‌ನ ಹುಮನಾಬಾದ್, 12 ಗಂಟೆಗೆ ವಿಜಯಪುರ ಮತ್ತು ಮಧ್ಯಾಹ್ನ 2 ಗಂಟೆಗೆ ಬೆಳಗಾವಿಯಲ್ಲಿ ಕುಡಚಿಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಮಧ್ಯಾಹ್ನ 3.30ಕ್ಕೆ ಬೆಂಗಳೂರಿನ ಮಾಗಡಿ ರಸ್ತೆಯ ನೈಸ್ ರಸ್ತೆಯಿಂದ ಸುಮನಹಳ್ಳಿವರೆಗೆ ನಾಲ್ಕೂವರೆ ಕಿಲೋಮೀಟರ್ ರೋಡ್ ಶೋ ನಡೆಸಲಾಗುವುದು. ಭಾನುವಾರ ಬೆಳಗ್ಗೆ 9.30ಕ್ಕೆ ಕೋಲಾರ ಹಾಗೂ ಸಂಜೆ 4 ಗಂಟೆಗೆ ಹಾಸನದ ಬೇಲೂರಿನಲ್ಲಿ ಪ್ರಚಾರ ಸಭೆ. ಮೈಸೂರಿನಲ್ಲಿ ಸಂಜೆ ರೋಡ್ ಶೋ ನಡೆಯಲಿದೆ.ಇದೇ ವೇಳೆ ಪ್ರಿಯಾಂಕಾ ಗಾಂಧಿ ಇಂದು ಕರ್ನಾಟಕದಲ್ಲಿ ಪ್ರಚಾರ ನಡೆಸಲಿದ್ದಾರೆ. ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ ಬೂತ್ ಮಟ್ಟದಲ್ಲಿ ಪ್ರಚಾರವನ್ನು ತೀವ್ರಗೊಳಿಸಲು ಸಜ್ಜಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ಹತ್ತಾರು ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಪ್ರಧಾನಮಂತ್ರಿಯವರು ‘ರೆವಿಡಿ ಸಂಸ್ಕೃತಿ’ (ಉಚಿತ ಕೊಡುಗೆಗಳನ್ನು…

Read More

ಏಪ್ರಿಲ್ 30ರಂದು ಖಾನಾಪುರ ಪಟ್ಟಣದ ಮಲಪ್ರಭಾ ಕ್ರೀಡಾಂಗಣದಲ್ಲಿ ಪ್ರಿಯಾಂಕ ಗಾಂಧಿ ಅವರು ಖಾನಾಪುರ ಜನತೆಯನ್ನು ಉದ್ದೇಶಿಸಿ ಮಾತನಾಡಲು ಹಾಗೂ ಖಾನಾಪುರ ಮತಕ್ಷೇತ್ರದಲ್ಲಿ ಮತ್ತೊಂದು ಸಾರಿ ಕಾಂಗ್ರೆಸ್ ಬಾವುಟ ಹಾರಿಸಲು ಪಣತೊಟ್ಟು ರಾಷ್ಟ್ರೀಯ ನಾಯಕರು ಬರುತ್ತಿರುವುದು  ಖಾನಾಪುರ   ಕಾಂಗ್ರೆಸ್ ಕಾರ್ಯಕರ್ತರಲ್ಲಿ ಅತಿ ಸಂತಸ ತಂದಿದೆ. ಕಾರ್ಯಕ್ರಮದ ನಿಮಿತ್ತವಾಗಿ ಭವ್ಯ ಸ್ಟೇಜ್ ಕಾರ್ಯವನ್ನು ವೀಕ್ಷಿಸಲು ಖಾನಾಪುರ   ಕಾಂಗ್ರೆಸ್ ವೀಕ್ಷಕರಾದ ಖಾಜಿ ನಿಜಾಮುದ್ದೀನ್ ಹಾಗೂ ಮಾನ್ಯ ಶಾಸಕಿ ಡಾಕ್ಟರ್ ಅಂಜಲಿ ಹೇಮಂತ್ ನಿಂಬಾಳ್ಕರ್  ಹಾಗೂ ಪ್ರಿಯಾಂಕಾ ಗಾಂಧಿ ಕಛೇರಿಯ ಅಧಿಕಾರಿಗಳು, ಭದ್ರತಾ ಸಿಬ್ಬಂದಿಗಳು ಮತ್ತು ಕಾರ್ಯಕರ್ತರು ಅಭಿಮಾನಿಗಳು  ಅವರ ಜೊತೆಗೂಡಿ ವೀಕ್ಷಣೆ ಮಾಡಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA

Read More

ಕೊರಟಗೆರೆ : ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಉಪಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಡಾ. ಜಿ. ಪರಮೇಶ್ವರ್ ಅವರು ಚುನಾವಣಾ ಪ್ರಚಾರ ನಡೆಸುತ್ತಿದ್ದ ವೇಳೆ ಅಭಿಮಾನಿಗಳು, ಕಾರ್ಯಕರ್ತರು ಜೆಸಿಬಿ ಯಂತ್ರದ ಮೂಲಕ ಹೂವಿನ ಸುರಿಮಳೆಗೈದಾಗ ಅದರಲ್ಲಿದ್ದ ಕಲ್ಲು ಪರಮೇಶ್ವರ್‌ ರವರ ತಲೆಗೆ ಬಿದ್ದು ರಕ್ತಸ್ರಾವವಾಗಿ ಪೆಟ್ಟಾಗಿರುವ ಘಟನೆ ನಡೆದಿದೆ. ಕೊರಟಗೆರೆ ತಾಲ್ಲೂಕಿನ ಹೊಳವನಹಳ್ಳಿ ಹೋಬಳಿಯ ಭೈರೇನಹಳ್ಳಿಯಲ್ಲಿ ಪರಮೇಶ್ವರ್ ಅವರು ಚುನಾವಣಾ ಪ್ರಚಾರಕ್ಕೆ ತೆರಳಿದ್ದರು. ಆ ವೇಳೆ ಜೆಸಿಬಿ ಯಂತ್ರದ ಮೂಲಕ ಕಾರ್ಯಕರ್ತರು ಮತ್ತು ಅಭಿಮಾನಿಗಳು ಪುಷ್ಪವೃಷ್ಠಿ ಮಾಡುವಾಗ ಅವರ ತಲೆಗೆ ಕಲ್ಲು ಬಿದ್ದು ಪೆಟ್ಟಾಗಿ ರಕ್ತಸ್ರಾವವಾಗಿದೆ. ತಕ್ಷಣ ಅವರು ಅಕ್ಕಿರಾಂಪುರದ ಪ್ರಾಥಮಿಕ ಆಸ್ಪತ್ರೆಗೆ ತೆರಳಿ ಪ್ರಾಥಮಿಕ ಚಿಕಿತ್ಸೆ ಪಡೆದು ತುಮಕೂರಿಗೆ ತೆರಳಿದರು. ಯಾರೋ ಕಿಡಿಗೇಡಿಗಳು ಹೂವಿನ ರಾಶಿಯಲ್ಲಿ ಕಲ್ಲು ಬೆರೆಸಿರಬಹುದು ಎಂದು ಪರಮೇಶ್ವರ್ ಅಭಿಮಾನಿಗಳು ಶಂಕಿಸಿದ್ದು, 2ನೇ ಬಾರಿಗೆ ಕಲ್ಲಿನಿಂದ ಪೆಟ್ಟು ನೀಡಲು ಸಂಚು ರೂಪಿಸಿರುವುದು ಈ ಘಟನೆಯಿಂದ ಬೆಳಕಿಗೆ ಬಂದಿದೆ ಎನ್ನಲಾಗಿದೆ.ನಾಮಪತ್ರ ಸಲ್ಲಿಸುವ ದಿನದಂದು ಸಹ ಕಿಡಿಗೇಡಿಗಳು ಕಲ್ಲು ಎಸೆದಿದ್ದರಿಂದ ಆ…

Read More

ಕೊರಟಗೆರೆ: ಮತಯಾಚನೆ ವೇಳೆ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಅವರಿಗೆ ಕಲ್ಲೇಟು ಬಿದ್ದಿದ್ದು, ತಲೆಗೆ ತೀವ್ರವಾದ ಏಟು ಬಿದ್ದು, ತೀವ್ರ ರಕ್ತಸ್ರಾವವಾಗಿದೆ. ಕೊರಟಗೆರೆ ತಾಲೂಕಿನ ಬೈರನಹಳ್ಳಿ ಕ್ರಾಸ್ ಬಳಿ ಘಟನೆ ನಡೆದಿದೆ. ಬೈರೇನಹಳ್ಳಿ ಕ್ರಾಸ್ ಬಳಿ ಪ್ರಚಾರದ ವೇಳೆಯಲ್ಲಿ ಕಿಡಿಗೇಡಿಗಳು ಕಲ್ಲುತೂರಾಟ ನಡೆಸಿದ್ದಾರೆ. ಪರಿಣಾಮವಾಗಿ ಅವರ ತಲೆಗೆ ತೀವ್ರವಾದ ಏಟು ತಗಲಿದೆ. ಪರಮೇಶ್ವರ್ ಅವರನ್ನು ತಕ್ಷಣವೇ ಅಕ್ಕಿರಾಂಪುರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗೆ ತುಮಕೂರಿನ ಕಡೆಗೆ ಕರೆದೊಯ್ಯಲಾಗಿದೆ. ಈ ಹಿಂದೆ ನಾಮಪತ್ರ ಸಲ್ಲಿಕೆ ವೇಳೆಯಲ್ಲೂ ಪರಮೇಶ್ವರ್ ಮೇಲೆ ಕಲ್ಲು ತೂರಾಟ ನಡೆಸಲಾಗಿತ್ತು. ಆ ವೇಳೆ ಮಹಿಳಾ ಪೊಲೀಸ್ ಪೇದೆಗೆ ಆ ಕಲ್ಲು ತಗಲಿತ್ತು. ಇದೀಗ ಮತ್ತೊಮ್ಮೆ ಇಂತಹದ್ದೇ ಘಟನೆ ನಡೆದಿದ್ದು, ಪರಮೇಶ್ವರ್ ಅಭಿಮಾನಿಗಳು ಆತಂಕಕ್ಕೀಡಾಗಿದ್ದಾರೆ. ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಕರಾವಳಿ ಜಿಲ್ಲೆಗೆ ಪ್ರಧಾನಿ ಮೋದಿ ಮತ್ತು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಬಂದು ಬಿಜೆಪಿ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಕರ್ನಾಟಕ ವಿಧಾನ ಸಭಾ ಚುನಾವಣಾ ಕಣ ರಂಗೇರಿದೆ. ಬಿರುಸಿನಿಂದ ಚುನಾವಣಾ ತಯಾರಿಗಳು ತುಂಬಾ ಬಿರುಸಿನಿಂದ ನಡೆಯುತ್ತಿದೆ. ಈ ನಡುವೆ ಕರಾವಳಿ ಜಿಲ್ಲೆಗೆ ಪ್ರಧಾನಿ ಮೋದಿ ಮತ್ತು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಬಿಜೆಪಿ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಮೇ.3ರಂದು ಮುಲ್ಕಿಗೆ ಪ್ರಧಾನಿ ನರೇಂದ್ರ ಮೋದಿ ಬ ರುತ್ತಿದ್ದಾರೆ. ಬಹುತೇಕ ಜನರು ಅವರ ಆಗಮನಕ್ಕೆ ಕಾಯುತ್ತಿದ್ದಾರೆ ಮತ್ತು ಮೇ.6ರಂದು ದ.ಕ ಜಿಲ್ಲೆಗೆ ಯೋಗಿ ಆದಿತ್ಯನಾಥ್ ಬರುತ್ತಾರೆ ಆದರೆ ಯೋಗಿಯವರ ಕಾರ್ಯಕ್ರಮದ ಜಾಗ ನಿಗದಿಯಾಗಿಲ್ಲ. ಉಡುಪಿ ಮತ್ತು‌ ದ.ಕ ಜಿಲ್ಲೆ ಯನ್ನು ಕೇಂದ್ರೀಕರಿಸಿ ಸಮಾವೇಶಗಳು ನಡೆಯಲಿದೆ ಎಂದು ಮಾಜಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ಹೇಳಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್…

Read More

ಲಕ್ನೋ : ಕಳೆದ ವಾರ ಆಚರಿಸಲಾದ ಈದ್‌ ನಲ್ಲಿ ಅನುಮತಿಯಿಲ್ಲದೆ ಕಾನ್ಪುರದ ಈದ್ಗಾದ ಹೊರಗೆ ರಸ್ತೆಯಲ್ಲಿ ನಮಾಜ್ ಮಾಡಿದ ಆರೋಪದ ಮೇಲೆ ಉತ್ತರ ಪ್ರದೇಶ ಪೊಲೀಸರು 2,000 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ನಮಾಜ್ ಮಾಡುತ್ತಿರುವವ ವಿಡಿಯೋವನ್ನು ಪೊಲೀಸರು ಚಿತ್ರೀಕರಿಸಿದ್ದುಮ ಅದರ ಮಾಹಿತಿ ಆಧಾರದಲ್ಲಿ ತನಿಖೆ ಮುಂದುವರಿಯುತ್ತಿದೆ ಎಂದು ಪೊಲೀಸರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಏಪ್ರಿಲ್ 26 ರ ಬುಧವಾರ ಬಜಾರಿಯಾ, ಬಾಬು ಪೂರ್ವಾ ಮತ್ತು ಜಜ್ಮೌ ಎಂಬ ಮೂರು ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕವಾಗಿ ಸಲ್ಲಿಸಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಸದಸ್ಯ ಮೊಹಮ್ಮದ್ ಸುಲೇಮಾನ್ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಧರ್ಮದ ಆಧಾರದ ಮೇಲೆ ವ್ಯಕ್ತಿಗಳನ್ನು ಗುರಿಯಾಗಿಸಲಾಗುತ್ತಿದೆ. ಅನೇಕರು ಈದ್ಗಾದ ಹೊರಗೆ ಪ್ರಾರ್ಥನೆ ಸಲ್ಲಿಸಿದ್ದಾರೆ ಎಂಬ ಪೊಲೀಸರ ಹೇಳಿಕೆಯನ್ನು ನಿರಾಕರಿಸಿದ್ದಾರೆ. ಆವರಣದಲ್ಲಿ ಸ್ಥಳಾವಕಾಶ ಇಲ್ಲದ ಕಾರಣ ಕೆಲವರು ಮಾತ್ರ ಹೊರಗಡೆಯೇ ಪ್ರಾರ್ಥನೆ ಸಲ್ಲಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ…

Read More

ಲಂಡನ್: ಕೃಷಿಯಲ್ಲಿ ರೋಗ ನಿರೋಧಕ ಔಷಧ ಬಳಕೆ ಹೆಚ್ಚಾದಂತೆ ಅದು ಮಾನವನ ಆರೋಗ್ಯಕ್ಕೆ ತುಂಬಾ ಅಪಾಯವನ್ನುಂಟು ಮಾಡುತ್ತದೆ ಎಂದು ಸಂಶೋಧನೆಯೊಂದು ಹೇಳಿದೆ. ಕೃಷಿ ಬೆಳೆಗೆ ತಗಲುವ ರೋಗ ತಡೆಗಟ್ಟಲು ಹಾಗೂ ಬೆಳೆಯ ಸಮೃದ್ಧಿಗಾಗಿ ರೋಗ ನಿರೋಧಕ ಔಷಧ ಬಳಕೆ ಹೆಚ್ಚಾದಂತೆ, ಮನುಷ್ಯರ ಆರೋಗ್ಯ ಕಾಪಾಡುವಲ್ಲಿ ರೋಗ ನಿರೋಧಕ ಪ್ರತಿರಕ್ಷಣಾ ವ್ಯವಸ್ಥೆಗೆ ನಿರೋಧಕ ಬ್ಯಾಕ್ಟೀರಿಯಾಗಳನ್ನು ಹುಟ್ಟು ಹಾಕಬಹುದು ಎಂದು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಜೀವಶಾಸ್ತ್ರ ವಿಭಾಗದ ಪ್ರಮುಖ ಸಂಶೋಧಕ ಪ್ರೊಫೆಸರ್ ಕ್ರೇಗ್ ಮ್ಯಾಕ್ಲೀನ್ ಹೇಳಿದರು. ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ತಂಡವು ಬ್ಯಾಕ್ಟೀರಿಯಂ ದಿಂದ ಉತ್ಪತ್ತಿಯಾಗುವ ಆಂಟಿಮೈಕ್ರೊಬಿಯಲ್ ಪೆಪ್ಟೈಡ್ (AMP) ಕೋಲಿಸ್ಟಿನ್ ಅನ್ನು ಬಳಸಿತ್ತು. ಎಎಂಪಿಗಳು ಪ್ರಾಣಿಗಳನ್ನು ಒಳಗೊಂಡಂತೆ ಹೆಚ್ಚಿನ ಜೀವಿಗಳಿಂದ ನೈಸರ್ಗಿಕವಾಗಿ ಉತ್ಪತ್ತಿಯಾಗುವ ಸಂಯುಕ್ತಗಳಾಗಿವೆ ಮತ್ತು ಬ್ಯಾಕ್ಟೀರಿಯಾದ ಸೋಂಕಿನ ವಿರುದ್ಧ ರಕ್ಷಣೆಯ ನಮ್ಮ ಮೊದಲ ಸಾಲಿನ ಸಹಜ ಪ್ರತಿರಕ್ಷೆಯಲ್ಲಿ ಪ್ರಮುಖ ಪಾತ್ರವನ್ನು ಹೊಂದಿವೆ. ಪ್ರತಿಜೀವಕ ನಿರೋಧಕತೆಯು ಕಳೆದ ದಶಕದಿಂದ ನಿರಂತರವಾಗಿ ಹೆಚ್ಚುತ್ತಿರುವ ಮತ್ತು ವೇಗವಾಗಿ ಹರಡುತ್ತಿರುವ ಒಂದು ದೊಡ್ಡ ಸಮಸ್ಯೆಯಾಗಿದೆ. ಈ ಸಮಸ್ಯೆಗೆ ಪ್ರಮುಖವಾದ ಆಧಾರವಾಗಿರುವ…

Read More

ರೆಫ್ರಿಜರೇಟರ್ ನ ಆಹಾರದ ಅಡ್ಡಪರಿಣಾಮಗಳು : ಬೇಸಿಗೆಕಾಲ ಪ್ರಾರಂಭವಾಗಿದೆ. ಮನೆಗಳಲ್ಲಿ ರೆಫ್ರಿಜರೇಟರ್  ಬಳಕೆಯು ವರ್ಧಿಸಿದೆ. ಬೇಸಿಗೆ ಕಾಲದಲ್ಲಿ ಆಹಾರ ಕೆಡದೆ ಇಟ್ಟುಕೊಳ್ಳುವ ಏಕಮಾರ್ಗ ರೆಫ್ರಿಜರೇಟರ್ ಆಗಿದೆ.   ಆದರೆ ದೀರ್ಘಾವಧಿಯಲ್ಲಿ ರೆಫ್ರಿಜರೇಟರ್  ನಲ್ಲಿ ಆಹಾರವನ್ನು ಸಂಗ್ರಹಿಸುವುದು ಆರೋಗ್ಯಕ್ಕೆ ಹಾನಿಕರವಾಗಬಹುದು. ರೆಫ್ರಿಜರೇಟರ್  ನಲ್ಲಿ ಆಹಾರವನ್ನು ಸಂಗ್ರಹಿಸುವುದು ಒಂದು ಪರಿಮಿತಿಯವರೆಗೆ ಸರಿಯೆಂದರೆ ದೀರ್ಘಾವಧಿಯ ಆಹಾರವನ್ನು ಮತ್ತೆ ಬಿಸಿಮಾಡಿ ಸೇವಿಸಿದರೆ ಅದರ ಪೋಷಕಾಂಶಗಳು ನಷ್ಟವಾಗುತ್ತದೆ . ದೀರ್ಘ ಸಮಯ ಫ್ರಿಡ್ಜ್‌ ನಲ್ಲಿ ಇರಿಸಿಕೊಳ್ಳುವ ಆಹಾರ ಸೇವಿಸುವಾಗ ಅಸಿಡಿಟಿ ಮುಂತಾದ ಸಮಸ್ಯೆಗಳಿಗೆ ಕಾರಣವಾಗಬಹುದು. ಇದರೊಂದಿಗೆ ಫ್ರಿಡ್ಜ್‌ ನಲ್ಲಿ ಇಡಬಾರದಂತಹ ಕೆಲವು ತರಕಾರಿಗಳಿವೆ. ಆಲೂಗಡ್ಡೆ, ಈರುಳ್ಳಿ, ಬೆಳ್ಳುಳ್ಳಿಯನ್ನು ಫ್ರಿಡ್ಜ್‌ ನಲ್ಲಿ ಇಡುವುದು ದೋಷಕರ. ಫ್ರಿಡ್ಜ್‌ ನಲ್ಲಿನಲ್ಲಿಡುವ ತಂಪಾದ ನೀರು ಕುಡಿಯುವದಕ್ಕಿಂತ ಮಣ್ಣಿನ ಪಾತ್ರೆಯಲ್ಲಿ ನೀರು ಕುಡಿಯುವುದು ಆರೋಗ್ಯಕ್ಕೆ ಉತ್ತಮ. ದೆಹಲಿಯಂತಹ ದೊಡ್ಡ ನಗರಗಳಲ್ಲಿ ವಾಸಿಸುವವರು ಅಡುಗೆ ಮನೆಯಲ್ಲಿ ನೀರು ಇಡಲು ಫ್ರಿಡ್ಜ್‌ ಗೆ ಬದಲಾಗಿ ಮಣ್ಣಿನ ಪಾತ್ರೆಗಳನ್ನು ಬಳಸುತ್ತಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್…

Read More

ನಾಸಿಕ್: ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಮಾತಿದೆ ಆದರೆ ಈ ಮಾತಿಗೆ ತಕ್ಕಂತೆ 3 ಅಡಿ ಎತ್ತರದ ಮಹಿಳೆ ಪೂಜಾ ಘೋಡ್ಕೆ ಅವರು ತಾನೇ ಸ್ವಂತ ಉದ್ಯಮವನ್ನು ಆರಂಭಿಸಿ ಇತರ ಮಹಿಳೆಯರಿಗೆ ಉದ್ಯೋಗವನ್ನು ನೀಡಿ ಯಶಸ್ವಿ ಮಹಿಳೆಯಾಗಿದ್ದಾರೆ. ಪೂಜಾ ಘೋಡ್ಕೆ ಹಲವಾರು ತೊಂದರೆಗಳನ್ನು ಎದುರಿಸಿದ್ದಾರೆ. ಪೂಜಾ ಜೀವನದಲ್ಲಿ ಏನು ಮಾಡುತ್ತಾಳೆ ಎಂಬುದು ಮನೆಯವರ ಆತಂಕ ಮತ್ತು ನರೆಹೊರೆಯವರ ಪ್ರಶ್ನೆಯಾಗಿತ್ತು. ಅಲ್ಲದೇ ಕಡಿಮೆ ಎತ್ತರದ ಕಾರಣದಿಂದ ಅನೇಕರು ಪೂಜಾರನ್ನು ಹೀಯಾಳಿಸುತ್ತಿದ್ದರು . ಅಂತಹ ಪರಿಸ್ಥಿತಿಯಲ್ಲಿ ಪೂಜಾಳ ಪೋಷಕರು ಅವಳ ಬೆಂಬಲವಾಗಿ ನಿಂತು, ಉತ್ತಮ ಶಿಕ್ಷಣ ಕೊಡಿಸಿದ್ದಾರೆ. ಆದ್ದರಿಂದ ಪೂಜಾ ಎಂಕಾಂ ಪದವೀಧರೆಯಾಗಿದ್ದಾರೆ. ಬಳಿಕ ಪೂಜಾ ಉದ್ಯೋಗಕ್ಕಾಗಿ ಹಲವಾರು ಕಂಪನಿಗಳ ಸಂದರ್ಶನವನ್ನು ಎದುರಿಸಿದರು.ಆದರೆ ಪೂಜಾಳ ಎತ್ತರವನ್ನು ನೋಡಿ ಕಂಪನಿಗಳು ಇವರನ್ನು ರಿಜೆಕ್ಟ್ ಮಾಡುತ್ತಿದ್ದವು. ಇದರಿಂದ ಪೂಜಾಳ ಪೋಷಕರು ಚಿಂತೆಗೀಡಾಗಿದ್ದರು. ಮಗಳಿಗೆ ಉತ್ತಮ ಉದ್ಯೋಗ ಸಿಕ್ಕು ಯಾರ ಹಂಗು ಇಲ್ಲದೇ ಬದುಕುತ್ತಾಳೆ ಎಂದುಕೊಂಡಿದ್ದ ಅವರ ಆಸೆ ನಿರಾಸೆಯಾಯಿತು ಎಂದು ಕೊರಗುತ್ತಿದ್ದರು. ಆದರೆ ಛಲಬಿಡದೆ ಪೂಜಾ…

Read More

ತುಮಕೂರು: ಭೂಮಿಯ ಅಳತೆಗೆ ತೆರಳಿದ್ದ ಸರ್ವೇಯರ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಕುಣಿಗಲ್ ತಾಲ್ಲೂಕಿನ ಬಿದನಗೆರೆ ಗ್ರಾಮದಲ್ಲಿ ಗುರುವಾರ ನಡೆಸಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗಿರೀಶ್ ಎಂಬವರು ಹಲ್ಲೆಗೆ ಒಳಗಾದ ಲೈಸೆನ್ಸ್ ಸರ್ವೆಯರ್ ಆಗಿದ್ದು, ಬಿದನಗೆರೆ ನಿವಾಸಿ ರತ್ನಮ್ಮ ಎಂಬುವವರು. ತಮ್ಮ ಜಮೀನು ಬಿದನಗೆರೆ ಸರ್ವೆ ನಂಬರ್ 94 ಮತ್ತು 74 ರ ಜಮೀನಿಗೆ ಸಂಬಂಧಿಸಿದಂತೆ. ಭೂಮಿ ಅಳತೆಗೆ ಸರ್ವೆಗೆ ಅರ್ಜಿ ಕೊಟ್ಟು ಭೂಮಿ ಸರ್ವೆ ಮಾಡಿಸಲು ಮುಂದಾಗಿದ್ರು. ಈ ವೇಳೆ ಪಕ್ಕದ ಜಮೀನಿನ ಕೃಷ್ಣಪ್ಪ ಹಾಗೂ ಆತನ ಪುತ್ರ. ನಮಗೆ ನೋಟಿಸ್ ಕೊಡದೇ ಭೂಮಿ ಸರ್ವೆಗೆ ಬಂದಿದ್ದೀರಾ  ಎಂದು ಗಲಾಟೆ ಮಾಡಿದ್ದಾರೆ. ಭೂಮಿ ಸರ್ವೆ ಮಾಡುತ್ತಿದ್ದ ಸರ್ವೆಯರ್ ಮೇಲೆ ಕಲ್ಲು ಹಾಗೂ ಇಟ್ಟಿಗೆಯಿಂದ. ಹಿಗ್ಗಾಮುಗ್ಗ ಥಳಿಸಿ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ನಾಲ್ಕೈದು ಜನರು ಸೇರಿ ಗಿರೀಶ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು, ಹಲ್ಲೆಯಿಂದ ರಕ್ತ ಸ್ರಾವವಾಗಿ ಬಿದ್ದಿದ್ದ ಗಿರೀಶ್…

Read More