Author: admin

ಮಧುಗಿರಿ: ಕರ್ನಾಟಕ ರಾಜ್ಯದ ಜನಪ್ರಿಯ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ನವರ ಅವಧಿಯಲ್ಲಿ ಅಲ್ಪಸಂಖ್ಯಾತ ರ ಅಭಿವೃದ್ಧಿ ಗಾಗಿ 3150 ಕೋಟಿ ರೂ ಅನುದಾನ ನಿಗಧಿ ಮಾಡಿ ಸಮುದಾಯಗಳ ಅಭಿವೃದ್ಧಿಗೆ ಪೂರಕವಾಗಿದ್ದರು ಆದರೆ ಈ ಅನುದಾನವನ್ನು ಇಳಿಕೆಗೆ ಕುಮಾರಸ್ವಾಮಿಯೇ ಕಾರಣ ಎಂದು ಮಾಜಿ ಸಚಿವ ಬಿ.ಝೆಡ್ ಜಮೀರ್ ಅಹಮದ ಖಾನ್ ತಿಳಿಸಿದರು. ಪಟ್ಟಣದ ದಂಡೂರು ಬಾಗಿಲು ಸಮೀಪ ಇರುವ ಆಶುಕಾಣದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಈ ಹಿಂದೆ ಅಲ್ಪಸಂಖ್ಯಾತ ರ ಅಭಿವೃದ್ಧಿ ಗಾಗಿ ಸಿದ್ದರಾಮಯ್ಯ ನವರು 400 ಕೋಟಿ ಇದ್ದ ಅನುದಾನವನ್ನು 3150 ಕೋಟಿಗೆ ಹೆಚ್ಚಿಸಿ ಅಲ್ಪಸಂಖ್ಯಾತರ ಅಭಿವೃದ್ಧಿ ಗಾಗಿ ಹತ್ತು ಹಲವಾರು ಕಾರ್ಯಕ್ರಮಗಳನ್ನು ಸಮುದಾಯದ ವಿದ್ಯಾರ್ಥಿಗಳಿಗಾಗಿ , ಚಾಲಕರಿಗಾಗಿ, ಉನ್ನತ ವ್ಯಾಸಂಗಕ್ಕೆ ಹೊರದೇಶಕ್ಕೆ ಹೋಗುವ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿ ಹಲವಾರು ಯೋಜನೆಗಳನ್ನು ಜಾರಿಗೆ ಮಾಡಿದ್ದೇನೆ  ಎಂದರು. ನಿಮ್ಮ ಮನೆ ಮಗ ಜಮೀರ್ ಮೇಲೆ ನಂಬಿಕೆ ಇಟ್ಟು ನಾಲ್ಕು ಖಾತೆಗಳನ್ನು ನೀಡಿದ್ದು ಕಾಂಗ್ರೆಸ್ ಸರಕಾರ ಆದರೆ ಕುಮಾರ ಸ್ವಾಮಿ ಅಧಿಕಾರ…

Read More

ಸನ್ಮಾನ್ಯ ಕಾರ್ಯಸಾಮ್ರಾಜ್ಞಿ ಶಾಸಕಿ ಡಾಕ್ಟರ್ ಅಂಜಲಿ ಹೇಮಂತ್ ನಿಂಬಾಳ್ಕರ್ ರವರು ಇಂದು ಖಾನಾಪುರ್ ತಾಲೂಕಿನ ಬಿಡಿ ಗ್ರಾಮದಲ್ಲಿ ಕಕ್ಕೇರಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಈ ಕೆಳಕಂಡ ಗ್ರಾಮಗಳಾದ ಭೊಗುರ, ಗಂದಿಗವಾಡ್, ಗುಂಡನಟ್ಟಿ, ಹಿಡಕಲ್, ಗಸ್ಟೋಳಿ ದಡ್ಡಿ, ಹಿಂಡಲಗಿ, ಕಸಮಳಗಿ, ಗ್ರಾಮದಿಂದ ನೂರಾರು ಕಾರ್ಯಕರ್ತರು ಬಿಜೆಪಿಯ ದ್ವಂದ ನಿಲುವುಗಳನ್ನು ಹಾಗೂ ಬಿಜೆಪಿಯ ಒಡೆದಾಳುವ ನೀತಿಯಿಂದ ಬೇಸತ್ತು ಖಾನಾಪುರ್ ಮತಕ್ಷೇತ್ರದ ಶಾಸಕಿ ಡಾಕ್ಟರ್ ಅಂಜಲಿ ಹೇಮಂತ್ ನಿಂಬಾಳ್ಕರ್ ಅವರ ಅಭಿವೃದ್ಧಿ ಕಾಮಗಾರಿಗಳನ್ನು ಮೆಚ್ಚಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ವ್ಯಕ್ತಪಡಿಸಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA

Read More

ತಿಪಟೂರು: ಶತ್ರುಗಳು ಇರಬೇಕು, ಆದರೆ ಹಿತಶತ್ರುಗಳು ಹೇಗೆ ಇರಬಾರದೋ ಅದೇ ರೀತಿ ಜೆ.ಡಿ.ಎಸ್.ನಲ್ಲಿ ಅಧಿಕಾರ ಅನುಭವಿಸಿದ ಕೆಲವು ಜಳ್ಳುಗಳು ಉದುರಿದರೇನು ಚಿಂತೆಯಿಲ್ಲ, ಗಟ್ಟಿಕಾಳುಗಳಿಂದ ಜೆ.ಡಿ.ಎಸ್ ಬಲಿಷ್ಟವಾಗುತ್ತಿದೆ ಎಂದು ಜೆ.ಡಿ.ಎಸ್ ಅಭ್ಯರ್ಥಿ ಕೆ.ಟಿ.ಶಾಂತಕುಮಾರ್ ತಿಳಿಸಿದರು. ನಗರದ ಗೃಹಕಛೇರಿಯಲ್ಲಿ ಗಂಗಾವತರಣದ ಪ್ರಯುಕ್ತ ಗಂಗಾಮಾತೆ ಹಾಗೂ ಭಗೀರಥನ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದ ಅವರಿಂದು, ಗಂಗಾವತರಣ ದಿನವಾಗಿದೆ ಇಂದಿನಿಂದ ಜೆ.ಡಿ.ಎಸ್. ಪಕ್ಷ ಗಂಗೆಯಂತೆ ಪಾವಿತ್ರ್ಯಯತೆಯನ್ನು ಉಂಟುಮಾಡಿದೆ ಎಂದರೆ ತಪ್ಪಾಗುವುದಿಲ್ಲ. ಏಕೆಂದರೆ ಜೆ.ಡಿ.ಎಸ್. ನಿಂದ ಗೆದ್ದ ಅಭ್ಯರ್ಥಿ ಪಕ್ಷದಿಂದ ಸ್ಥಾನಮಾನಗಳನ್ನು ಅನುಭವಿಸಿ ಇಂದು ಪಕ್ಷ ಬಿಟ್ಟಿರುವುದು ಒಂದು ರೀತಿಯ ಸಂತಸವಾಗಿದೆ. ಏಕೆಂದರೆ ಪಕ್ಷದಲ್ಲಿದ್ದುಕೊಂಡೇ ಹಿತಶತ್ರುಗಳಾಗುವ ಬದಲು ಇಂದು ಪಕ್ಷವನ್ನು ಬಿಟ್ಟಿರುವುದರಿಂದ ನಾವು ಧೈರ್ಯವಾಗಿ ಎದುರಿಸಬಹುದು ಎಂದು ಮಾಜಿ ಜಿ.ಪಂ ಸದಸ್ಯ ರಾಧಾ ನಾರಾಯಣಗೌಡರಿಗೆ ಟಾಮಗ್ ನೀಡಿದರು. ಇನ್ನೊಂದೆಡೆ ನನಗೆ ಜೆ.ಡಿ.ಎಸ್. ಪಕ್ಷದ ಟಿಕೆಟ್ ತಪ್ಪಿಸಬೇಕೆಂದು ಹಲವಾರು ಜನರು ಪ್ರಯತ್ನಪಟ್ಟರೂ,  ಕುಮಾರಸ್ವಾಮಿ ನನ್ನ ಮೇಲೆ ಭರವಸೆಯಿಟ್ಟು ಟಿಕೆಟ್ ನೀಡಿದ್ದಾರೆ. ಇದರಿಂದಲೇ ಜೆ.ಡಿ.ಎಸ್. ಎಷ್ಟು ಗಟ್ಟಿಯಾಗಿದೆ ಎಂಬುದು ತಿಳಿಯುತ್ತದೆ. ಇನ್ನು…

Read More

10 ವರ್ಷಗಳ ಬಳಿಕ ನಟಿ ಜಿಯಾ ಖಾನ್ ಆತ್ಮಹತ್ಯೆ ಪ್ರಕರಣದ ತೀರ್ಪು ನೀಡಲು ಮುಂಬೈ ವಿಶೇಷ ಸಿಬಿಐ ನ್ಯಾಯಾಲಯ ಸಜ್ಜಾಗಿದೆ. ಜಿಯಾ ಖಾನ್ ಅವರನ್ನು ಆತ್ಮಹತ್ಯೆಗೆ ಪ್ರೇರೇಪಿಸಿದ ಪ್ರಕರಣದಲ್ಲಿ ನಟ ಆದಿತ್ಯ ಪಾಂಚೋಲಿ ಮತ್ತು ಅವರ ತಾಯಿ ಜರೀನಾ ವಹಾಬ್ ಆರೋಪಿಗಳಾಗಿದ್ದಾರೆ. ಜಿ ಅವರು ಜುಹುದಲ್ಲಿನ ತಮ್ಮ ನಿವಾಸದಲ್ಲಿ ಹಗ್ಗದಿಂದ ನೇಣು ಹಾಕಿಕೊಳ್ಳುವ ಮೊದಲು ಸೂರಜ್ ಪಾಂಚೋಲಿ ವಿರುದ್ಧ ಗಂಭೀರ ಆರೋಪಗಳನ್ನು ಒಳಗೊಂಡ ಆರು ಪುಟಗಳ ಆತ್ಮಹತ್ಯೆ ಟಿಪ್ಪಣಿಯನ್ನು ಬರೆದಿದ್ದಾರೆ. ಸೂರಜ್‌ನೊಂದಿಗಿನ ಸಂಬಂಧ ಮತ್ತು ನಟನಿಂದ ತಾನು ಎದುರಿಸಿದ ದೈಹಿಕ ಮತ್ತು ಮಾನಸಿಕ ಕಿರುಕುಳದ ಬಗ್ಗೆ ಜಿಯಾ ತನ್ನ ಆತ್ಮಹತ್ಯೆ ಟಿಪ್ಪಣಿಯಲ್ಲಿ ಸ್ಪಷ್ಟಪಡಿಸಿದ್ದಾರೆ. ಈ ಚಿತ್ರಹಿಂಸೆಗಳು ಆತ್ಮಹತ್ಯೆಗೆ ಕಾರಣವಾಯಿತು ಎಂದು ಜಿಯಾ ಹೇಳುತ್ತಾರೆ. ವಿಶೇಷ ಸಿಬಿಐ ನ್ಯಾಯಾಧೀಶ ಎಎಸ್ ಸೈಯದ್ ಪ್ರಕರಣದ ತೀರ್ಪು ನೀಡಲಿದ್ದಾರೆ. ಜೂನ್ 13, 2013 ರಂದು, ಜಿಯಾ ಖಾನ್ ಮುಂಬೈನ ಜುಹುದಲ್ಲಿನ ತನ್ನ ಅಪಾರ್ಟ್ಮೆಂಟ್‌ ನಲ್ಲಿ  ಆತ್ಮಹತ್ಯೆ ಮಾಡಿಕೊಂಡಿದ್ದಳು. ಜಿಯಾ ಸಾವಿನ ನಂತರ ಸೂರಜ್ ಪಾಂಚೋಲಿಯನ್ನು ಬಂಧಿಸಲಾಯಿತು.…

Read More

ಶಾಂಘೈ ಸಹಕಾರ ಸಂಸ್ಥೆ (ಎಸ್‌ಸಿಒ) ಸದಸ್ಯ ರಾಷ್ಟ್ರಗಳ ರಕ್ಷಣಾ ಸಚಿವರ ಶೃಂಗಸಭೆ ಇಂದು  ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ದೆಹಲಿಯಲ್ಲಿ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಾದೇಶಿಕ ಶಾಂತಿ ಮತ್ತು ಭದ್ರತೆ, ಭಯೋತ್ಪಾದನೆ ತಡೆ ಮತ್ತು ದ್ವಿಪಕ್ಷೀಯ ಬಾಂಧವ್ಯ ಬಲವರ್ಧನೆ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ. ಚೀನಾದ ರಕ್ಷಣಾ ಸಚಿವ ಲಿ ಶಾಂಗ್‌ಫು, ತಾಜಿಕ್ ರಕ್ಷಣಾ ಸಚಿವ ಕರ್ನಲ್ ಜನರಲ್ ಶೆರಾಲಿ ಮಿರ್ಜೊ, ಇರಾನ್ ರಕ್ಷಣಾ ಸಚಿವ ಬ್ರಿಗೇಡಿಯರ್ ಜನರಲ್ ಮೊಹಮ್ಮದ್ ರೆಜಾ ಘರಾಯ್ ಅಸ್ಟಿಯಾನಿ ಮತ್ತು ಕಜಕಿಸ್ತಾನ್ ರಕ್ಷಣಾ ಸಚಿವ ಕರ್ನಲ್ ಜನರಲ್ ರಜ್ಲಾನ್ ಸಕ್ಸಿಲ್ನಿಕೋವ್ ಅವರು ಸಮಾವೇಶದಲ್ಲಿ ಭಾಗವಹಿಸಲು ದೆಹಲಿಗೆ ಆಗಮಿಸಿದ್ದಾರೆ. ಸಭೆಯಲ್ಲಿ ರಷ್ಯಾದ ರಕ್ಷಣಾ ಸಚಿವ ಸೆರ್ಗೆಯ್ ಶೋಯಿಗು ಮತ್ತು ಉಜ್ಬೇಕಿಸ್ತಾನ್ ಮತ್ತು ಕಿರ್ಗಿಸ್ತಾನ್‌ನ ರಕ್ಷಣಾ ಮಂತ್ರಿಗಳು ಭಾಗವಹಿಸಲಿದ್ದಾರೆ. ಸಮಾವೇಶಕ್ಕೂ ಮುನ್ನ ರಾಜನಾಥ್ ಸಿಂಗ್ ಅವರು ಇಂದು ಸದಸ್ಯ ರಾಷ್ಟ್ರಗಳ ರಕ್ಷಣಾ ಸಚಿವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ರಕ್ಷಣಾ ಸಂಬಂಧಿತ ವಿಷಯಗಳು ಮತ್ತು ಪರಸ್ಪರ ಆಸಕ್ತಿಯ ಇತರ…

Read More

ಕ್ರಿಮಿನಲ್ ಮಾನನಷ್ಟ ಪ್ರಕರಣದಲ್ಲಿ ಸೂರತ್ ಸೆಷನ್ಸ್ ಕೋರ್ಟ್ ಆದೇಶದ ವಿರುದ್ಧ ರಾಹುಲ್ ಗಾಂಧಿ ಸಲ್ಲಿಸಿರುವ ಮೇಲ್ಮನವಿಯನ್ನು ಗುಜರಾತ್ ಹೈಕೋರ್ಟ್ ನಾಳೆ ವಿಚಾರಣೆ ನಡೆಸಲಿದೆ. ಅರ್ಜಿಯನ್ನು ಆರಂಭದಲ್ಲಿ ಏಕ ಪೀಠದ ಮುಂದೆ ಪಟ್ಟಿ ಮಾಡಲಾಗಿತ್ತು, ಆದರೆ ನ್ಯಾಯಮೂರ್ತಿ ಗೀತಾ ಗೋಪಿ ಹಿಂತೆಗೆದುಕೊಂಡರು. ಇದರ ಬೆನ್ನಲ್ಲೇ ನ್ಯಾಯಮೂರ್ತಿ ಹೇಮಂತ್ ಪ್ರಚಕ್ ಅವರು ಪ್ರಕರಣದ ವಿಚಾರಣೆಯನ್ನು ನಾಳೆ ನಡೆಸಲಿದ್ದಾರೆ. ಇದಕ್ಕೂ ಮುನ್ನ ಏಪ್ರಿಲ್ 26 ರಂದು ನ್ಯಾಯಮೂರ್ತಿ ಗೀತಾ ಗೋಪಿ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿದಿದ್ದರು. ಮಾನನಷ್ಟ ಮೊಕದ್ದಮೆಯಲ್ಲಿ ತಾವು ದೋಷಿ ಎಂದು ಸಾಬೀತಾದ ತೀರ್ಪನ್ನು ಅಮಾನತುಗೊಳಿಸಲು ಸೂರತ್ ಮುಖ್ಯ ನ್ಯಾಯಿಕ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಮತ್ತು ಸೂರತ್ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಸಿದ್ಧವಿಲ್ಲದಿದ್ದಾಗ ರಾಹುಲ್ ಗಾಂಧಿ ಗುಜರಾತ್ ಹೈಕೋರ್ಟ್‌ನ ಮೊರೆ ಹೋಗಿದ್ದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA

Read More

ಪಶ್ಚಿಮ ಬಂಗಾಳದ ಐದು ಜಿಲ್ಲೆಗಳಲ್ಲಿ ಸಿಡಿಲು ಬಡಿದು 14 ಮಂದಿ ಸಾವನ್ನಪ್ಪಿದ್ದಾರೆ. ಪೂರ್ವ ಬರ್ಧಮಾನ್ ಜಿಲ್ಲೆಯಲ್ಲಿ ನಾಲ್ವರು ಮತ್ತು ಮುರ್ಷಿದಾಬಾದ್ ಮತ್ತು ಉತ್ತರ-24 ಪರಗಣಗಳಲ್ಲಿ ಇಬ್ಬರು ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ ಎಂದು ವಿಪತ್ತು ನಿರ್ವಹಣಾ ಇಲಾಖೆ ತಿಳಿಸಿದೆ. ಸತ್ತವರಲ್ಲಿ ಹೆಚ್ಚಿನವರು ರೈತರು ಎಂದು ಹೇಳಿದ್ದಾರೆ. ಪಶ್ಚಿಮ ಮಿಡ್ನಾಪುರ ಮತ್ತು ಹೌರಾ ಗ್ರಾಮಾಂತರ ಜಿಲ್ಲೆಗಳಲ್ಲಿ ಇನ್ನೂ ಆರು ಸಾವುಗಳು ವರದಿಯಾಗಿವೆ ಎಂದು ಪಶ್ಚಿಮ ಬಂಗಾಳ ಪೊಲೀಸರು ತಿಳಿಸಿದ್ದಾರೆ. ಕೋಲ್ಕತ್ತಾ, ಹೌರಾ, ಉತ್ತರ 24 ಪರಗಣಗಳು, ಪುರ್ಬಾ ಬರ್ಧಮಾನ್ ಮತ್ತು ಮುರ್ಷಿದಾಬಾದ್ ಸೇರಿದಂತೆ ದಕ್ಷಿಣ ಬಂಗಾಳ ಜಿಲ್ಲೆಗಳಲ್ಲಿ ಗುರುವಾರ ಸಂಜೆ ಗುಡುಗು ಸಹಿತ ಭಾರಿ ಮಳೆಯಾಗಿದೆ. ಸತ್ತವರಲ್ಲಿ ಹೆಚ್ಚಿನವರು ಹೊಲದಲ್ಲಿ ಕೆಲಸ ಮಾಡುವಾಗ ಸಿಡಿಲು ಬಡಿದ ರೈತರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA…

Read More

ಯಮಕನಮರಡಿ: ಕಾಂಗ್ರೆಸ್ ಪಕ್ಷದ ಸಿದ್ಧಾಂತದ ಮೇಲೆ ನಂಬಿಕೆ ಇಟ್ಟು ಬಿಜೆಪಿ, ಜೆಡಿಎಸ್ ನ ಅಪಾರ ಸಂಖ್ಯೆಯ ಕಾರ್ಯಕರ್ತರು ಪಕ್ಷಕ್ಕೆ ಸೇರ್ಪಡೆ ಆಗುತ್ತಿರುವುದು ಒಳ್ಳೆಯ ಬೆಳವಣಿಗೆ. ಎಲ್ಲಡೆ ಕಾಂಗ್ರೆಸ್‌ ಪಕ್ಷಕ್ಕೆ ಸಿಗುತ್ತಿರುವ  ಜನ ಬೆಂಬಲ ನೋಡಿದರೆ ಯಮಕನಮರಡಿಯಲ್ಲಿ ಕಾಂಗ್ರೆಸ್‌ ಬಾವುಟ ಹಾರುವುದು ಖಚಿತವೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್‌ ಜಾರಕಿಹೊಳಿ ಹೇಳಿದರು. ಯಮಕನಮರಡಿ ವಿಧಾನಸಭಾ ಕ್ಷೇತ್ರದ ಉಳ್ಳಾಗಡ್ಡಿ ಖಾನಾಪುರ, ವಾಡಿ ಸಿದ್ಲ್ಯಾಳ, ದಡ್ಡಿ ಗ್ರಾಮಗಳ ಕಾರ್ಯಕರ್ತರ ಮನೆಗಳಿಗೆ ಭೇಟಿ ನೀಡಿದ ಶಾಸಕ ಸತೀಶ್‌ ಜಾರಕಿಹೊಳಿಯವರು ಮತಯಾಚಿಸಿ, ಮಾತನಾಡಿದರು. ಯಮಕನಮರಡಿಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ಮಾಡಲಾಗಿದ್ದು, ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ಕೊಡಿಸುವ ಉದ್ದೇಶದಿಂದ ಶಾಲಾ-ಕಾಲೇಜುಗಳನ್ನು ಸುಧಾರಣೆ ಮಾಡಲಾಗಿದೆ. ಜನಸಂಖ್ಯೆಗೆ ಅನುಗುಣವಾಗಿ ಕ್ಷೇತ್ರದ ಪ್ರತಿ ಗ್ರಾಮಕ್ಕೂ 2 ಕೋಟಿಯಿಂದ 5 ಕೋಟಿ ರೂ. ವರೆಗೆ ಅನುದಾನ ನೀಡಲಾಗಿದೆ. ಹಳ್ಳಿಗಳ ಗ್ರಾಮೋದ್ಧಾರಕ್ಕೆ ಶ್ರಮಿಸಿದ್ದೇನೆ ಎಂದು ತಿಳಿಸಿದರು. ಕೋಮುವಾದಿ ಬಿಜೆಪಿಯನ್ನು ಬೇರು ಸಹಿತ ಕಿತ್ತೊಗೆದು ಸರ್ವ ಜನಾಂಗದ ಅಭಿವೃದ್ಧಿ ಕಲ್ಪನೆಯೊಂದಿಗೆ ಶ್ರಮಿಸುತ್ತಿರುವ ಕಾಂಗ್ರೆಸ್ ಪಕ್ಷವನ್ನು ರಾಜ್ಯದಲ್ಲಿ ಮತ್ತೊಮ್ಮೆ…

Read More

ಭಾರತ್ ಜೋಡೋ ಯಾತ್ರೆ ವೇಳೆ ರಾಹುಲ್ ಗಾಂಧಿಗೆ ಕೊಲೆ ಬೆದರಿಕೆ ಪತ್ರ ಕಳುಹಿಸಿದ ವ್ಯಕ್ತಿಯನ್ನು ಬಂಧಿಸಲಾಗಿದೆ. 60 ವರ್ಷದ ಐಶಿಲಾಲ್ ಜಾಮ್ ಅಲಿಯಾಸ್ ದಯಾಸಿಂಗ್ ಬಂಧಿತ ಆರೋಪಿ. ಪತ್ರದ ಹಿಂದಿನ ಕಾರಣ ಸ್ಪಷ್ಟವಾಗಿಲ್ಲ ಮತ್ತು ತನಿಖೆ ನಡೆಯುತ್ತಿದೆ ಎಂದು ಉಪ ಪೊಲೀಸ್ ಆಯುಕ್ತ (ಕ್ರೈಮ್ ಬ್ರಾಂಚ್) ನಿಮಿಷ್ ಅಗರ್ವಾಲ್ ಹೇಳಿದ್ದಾರೆ. ಸಂಬಂಧಿತ ಘಟನೆಯು ಕಳೆದ ವರ್ಷ ನವೆಂಬರ್ 2022 ರಲ್ಲಿ ನಡೆಯಿತು. ಯಾತ್ರೆ ಮಧ್ಯಪ್ರದೇಶದ ಇಂದೋರ್ ಪ್ರವೇಶಿಸಿದ ಕೂಡಲೇ ರಾಹುಲ್ ಗಾಂಧಿಗೆ ಬಾಂಬ್ ಹಾಕುವುದಾಗಿ ಪತ್ರ ಕಳುಹಿಸಿದ್ದವರು ಬೆದರಿಕೆ ಹಾಕಿದ್ದರು. ಇಂದೋರ್‌ನ ಸಿಹಿತಿಂಡಿ ಅಂಗಡಿಯೊಂದರ ಹೊರಗೆ ಪತ್ರ ಪತ್ತೆಯಾಗಿದೆ. ನಂತರ, ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 507 ರ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಯಿತು. ಇದೇ ವೇಳೆ ಐಶಿಲಾಲ್ ಜಾಮ್ ರೈಲಿನಲ್ಲಿ ಪರಾರಿಯಾಗಲು ಯತ್ನಿಸುತ್ತಿದ್ದ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ನಂತರ ಅವರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧಿಸಲಾಯಿತು ಎಂದು ಉಪ ಪೊಲೀಸ್ ಆಯುಕ್ತ (ಕ್ರೈಮ್ ಬ್ರಾಂಚ್) ನಿಮಿಷ್…

Read More

ಬಹಿರ್ದೆಸೆಗೆ ಹೋಗಿದ್ದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಅಪರಾಧಿಗೆ  ತುಮಕೂರಿನ ಗೌರವಾನ್ವಿತ ಅಧಿಕ ಜಿಲ್ಲಾ ಸತ್ರ ನ್ಯಾಯಾಲಯ ಎಫ್.ಟಿ.ಎಸ್.ಸಿ (ಪೋಕ್ಸೋ) 30 ವರ್ಷಗಳ ಜೈಲು ಶಿಕ್ಷೆ ಹಾಗೂ 1.50 ಲಕ್ಷ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ. 10ನೇ ತರಗತಿಯಲ್ಲಿ  ಓದುತ್ತಿದ್ದ ಸಂತ್ರಸ್ತ ಬಾಲಕಿಯು ತನ್ನ ಮನೆಯಲ್ಲಿ ಶೌಚಾಲಯ ಇಲ್ಲದ ಕಾರಣ ಹೊರಗಡೆ ಬಹಿರ್ದೆಸೆಗೆ ಹೋಗುತ್ತಿದ್ದಳು. ಇದೇ ಗ್ರಾಮದ ನಿವಾಸಿಯಾದ ಅಪರಾಧಿ ಹನುಮಂತ ಎಂಬಾತ ಮದುವೆಯಾಗಿ ಮೂವರು ಮಕ್ಕಳಿದ್ದರೂ ಕೂಡ, ಪ್ರಜ್ಞಾವಂತನಾಗಿ ನಡೆದುಕೊಳ್ಳದೇ, ಬಾಲಕಿ ಬಹಿರ್ದೆಸೆಗೆ ಹೋಗುತ್ತಿದ್ದಾಗ, ಹಿಂಬಾಲಿಸುವುದು, ಮರೆಯಲ್ಲಿ ನಿಂತು ನೋಡುತ್ತಿರುವಂತಹ ಕೃತ್ಯ ನಡೆಸಿದ್ದ. ಈ ಬಗ್ಗೆ ಬಾಲಕಿಯು ತನ್ನ ಪೋಷಕರಿಗೆ  ವಿಚಾರ ತಿಳಿಸಿದ್ದರು. ಬಾಲಕಿಯ ಪೋಷಕರು ಹನುಮಂತರಾಯನ ತಂದೆ ತಾಯಿಗೆ ಈ ವಿಚಾರ ತಿಳಿಸಿ, ಮಗನಿಗೆ ಬುದ್ಧಿ ಹೇಳುವಂತೆ ಕೇಳಿ ಕೊಂಡಿದ್ದರು. ಇದಾದ ನಂತರ 05–12–2021ರಂದು ಮಧ್ಯಾಹ್ನ 1:30 ಗಂಟೆಗೆ ನೊಂದ ಬಾಲಕಿಯು ದೊಡ್ಡರಾಮಣ್ಣ ಎಂಬವರ ಜಮೀನಿಗೆ ಬಹಿರ್ದೆಸೆಗೆ ತೆರಳಿದ್ದ  ವೇಳೆ ಏಕಾಏಕಿ ಅಲ್ಲಿಗೆ ಬಂದ ಹನುಮಂತರಾಯ…

Read More