nammatumakuru

    Subscribe to Updates

    Get the latest creative news from FooBar about art, design and business.

    What's Hot

    ಕೂಡ್ಲಿಗಿ: “ದೈವ ಒಂದೇ, ಅದು ದೇಶ – ದೇಶ ಸೇವೆಯೇ ದೈವ ಸೇವೆ”: ಮಾಜಿ ಸೈನಿಕ ಕಾಟೇರ ರಮೇಶ್

    July 27, 2026

    ಬಿಪಿಎಲ್ ಕಾರ್ಡ್ ಪಡೆಯಲು ವಾರ್ಷಿಕ ಆದಾಯ ಮಿತಿ ₹3 ಲಕ್ಷಕ್ಕೆ ಹೆಚ್ಚಿಸಲು ಕ್ರಮ: ಸಚಿವ ಕೆ.ಹೆಚ್. ಮುನಿಯಪ್ಪ

    July 27, 2026

    ವಿಧಾನಸಭೆಯಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ನೀರಿಳಿಸಲು ಬಿಜೆಪಿ–ಜೆಡಿಎಸ್ ಸಜ್ಜು: ಬಿ.ವೈ.ವಿಜಯೇಂದ್ರ

    July 27, 2026
    Facebook Twitter Instagram
    ಟ್ರೆಂಡಿಂಗ್
    • ಕೂಡ್ಲಿಗಿ: “ದೈವ ಒಂದೇ, ಅದು ದೇಶ – ದೇಶ ಸೇವೆಯೇ ದೈವ ಸೇವೆ”: ಮಾಜಿ ಸೈನಿಕ ಕಾಟೇರ ರಮೇಶ್
    • ಬಿಪಿಎಲ್ ಕಾರ್ಡ್ ಪಡೆಯಲು ವಾರ್ಷಿಕ ಆದಾಯ ಮಿತಿ ₹3 ಲಕ್ಷಕ್ಕೆ ಹೆಚ್ಚಿಸಲು ಕ್ರಮ: ಸಚಿವ ಕೆ.ಹೆಚ್. ಮುನಿಯಪ್ಪ
    • ವಿಧಾನಸಭೆಯಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ನೀರಿಳಿಸಲು ಬಿಜೆಪಿ–ಜೆಡಿಎಸ್ ಸಜ್ಜು: ಬಿ.ವೈ.ವಿಜಯೇಂದ್ರ
    • ತುಮಕೂರು: ನಡುರಸ್ತೆಯಲ್ಲೇ ರೌಡಿಶೀಟರ್‌ ಮಲ್ಲ ಬರ್ಬರ ಹತ್ಯೆ!
    • ಧರ್ಮೇಂದ್ರ ಪ್ರಧಾನ್ ಜವಾಬ್ದಾರಿ ಹೊತ್ತು ರಾಜೀನಾಮೆ ನೀಡಿರುವುದು ಸ್ವಾಗತಾರ್ಹ: ಡಾ.ಜಿ.ಪರಮೇಶ್ವರ್‌
    • ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ ಮಾಜಿ ಸಿಎಂ ಸಿದ್ದರಾಮಯ್ಯ: 2028ರ ಚುನಾವಣೆಗೆ ಸ್ಪರ್ಧಿಸಲ್ಲವೆಂದು ಸ್ಪಷ್ಟನೆ
    • ರಾಜ್ಯದಲ್ಲಿ ಬರ ಪರಿಸ್ಥಿತಿ: ದೆಹಲಿಯಲ್ಲಿ ಸಂಸದರು, ಕೇಂದ್ರ ಸಚಿವರ ಸಭೆ ಕರೆದ ಸಿಎಂ ಡಿ.ಕೆ. ಶಿವಕುಮಾರ್
    • ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳಡಿ ಅರ್ಹ ಫಲಾನುಭವಿಗಳ ಆಯ್ಕೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಅಲ್ಪಸಂಖ್ಯಾತರ ವಿರೋಧಿಗಳಿಗೆ 2023ರ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿ: ಜಮೀರ್ ಅಹ್ಮದ್ ಖಾನ್
    ಮಧುಗಿರಿ April 28, 2023

    ಅಲ್ಪಸಂಖ್ಯಾತರ ವಿರೋಧಿಗಳಿಗೆ 2023ರ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿ: ಜಮೀರ್ ಅಹ್ಮದ್ ಖಾನ್

    By adminApril 28, 2023No Comments4 Mins Read
    madugiri

    ಮಧುಗಿರಿ: ಕರ್ನಾಟಕ ರಾಜ್ಯದ ಜನಪ್ರಿಯ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ನವರ ಅವಧಿಯಲ್ಲಿ ಅಲ್ಪಸಂಖ್ಯಾತ ರ ಅಭಿವೃದ್ಧಿ ಗಾಗಿ 3150 ಕೋಟಿ ರೂ ಅನುದಾನ ನಿಗಧಿ ಮಾಡಿ ಸಮುದಾಯಗಳ ಅಭಿವೃದ್ಧಿಗೆ ಪೂರಕವಾಗಿದ್ದರು ಆದರೆ ಈ ಅನುದಾನವನ್ನು ಇಳಿಕೆಗೆ ಕುಮಾರಸ್ವಾಮಿಯೇ ಕಾರಣ ಎಂದು ಮಾಜಿ ಸಚಿವ ಬಿ.ಝೆಡ್ ಜಮೀರ್ ಅಹಮದ ಖಾನ್ ತಿಳಿಸಿದರು.

    ಪಟ್ಟಣದ ದಂಡೂರು ಬಾಗಿಲು ಸಮೀಪ ಇರುವ ಆಶುಕಾಣದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಈ ಹಿಂದೆ ಅಲ್ಪಸಂಖ್ಯಾತ ರ ಅಭಿವೃದ್ಧಿ ಗಾಗಿ ಸಿದ್ದರಾಮಯ್ಯ ನವರು 400 ಕೋಟಿ ಇದ್ದ ಅನುದಾನವನ್ನು 3150 ಕೋಟಿಗೆ ಹೆಚ್ಚಿಸಿ ಅಲ್ಪಸಂಖ್ಯಾತರ ಅಭಿವೃದ್ಧಿ ಗಾಗಿ ಹತ್ತು ಹಲವಾರು ಕಾರ್ಯಕ್ರಮಗಳನ್ನು ಸಮುದಾಯದ ವಿದ್ಯಾರ್ಥಿಗಳಿಗಾಗಿ , ಚಾಲಕರಿಗಾಗಿ, ಉನ್ನತ ವ್ಯಾಸಂಗಕ್ಕೆ ಹೊರದೇಶಕ್ಕೆ ಹೋಗುವ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿ ಹಲವಾರು ಯೋಜನೆಗಳನ್ನು ಜಾರಿಗೆ ಮಾಡಿದ್ದೇನೆ  ಎಂದರು.

    ನಿಮ್ಮ ಮನೆ ಮಗ ಜಮೀರ್ ಮೇಲೆ ನಂಬಿಕೆ ಇಟ್ಟು ನಾಲ್ಕು ಖಾತೆಗಳನ್ನು ನೀಡಿದ್ದು ಕಾಂಗ್ರೆಸ್ ಸರಕಾರ ಆದರೆ ಕುಮಾರ ಸ್ವಾಮಿ ಅಧಿಕಾರ ಹಿಡಿದಾಗ ಹಜ್ ಮತ್ತು ವಕ್ಪ್ ಸಚಿವರನ್ನಾಗಿ ನನ್ನನ್ನು  ನೇಮಕ  ಮಾಡಿದರು.  ಕಳೆದ ಚುನಾವಣೆಯ ಅವಧಿಯಲ್ಲಿ 38 ಸ್ಥಾನಗಳಿಸಿದ ಜೆಡಿಎಸ್ ಪಕ್ಷದಿಂದ ಮುಖ್ಯ ಮಂತ್ರಿ ಯಾಗಿದ್ದ ಕುಮಾರಸ್ವಾಮಿ ಅಲ್ಪಸಂಖ್ಯಾತರಿಗೆ ಮೀಸಲಾಗಿದ್ದ 3150 ಕೋಟಿ ರೂ ಇದ್ದ ಅನುಧಾನವನ್ನು ಕೇವಲ 1800 ಕೋಟಿಗೆ ಇಳಿಸಿದರು ಎಂದರು.

    ನಂತರ ಅಧಿಕಾರ ಹಿಡಿದ ಬಿಜೆಪಿಯವರು ಕೇವಲ 1000 ಕೋಟಿ ರೂಗಳಿಗೆ ಇಳಿಸಲು ಕಾರಣ ಇದೇ ಕುಮಾರಸ್ವಾಮಿ ಇಂತಹವರಿಗೆ ನಾವುಗಳು ಮತ ಚಲಾಯಿಸಬೇಕೆ , ನಾನೇ ಖುದ್ದು ಹೋಗಿ ಆಹ್ವಾನ ಪತ್ರಿಕೆ ನೀಡಿದರು ಬೆಂಗಳೂರಿನಲ್ಲಿದ್ದರು ಕೂಡ ಹಜ್ ಕಾರ್ಯಕ್ರಮದ ಆರಂಭಕ್ಕೆ ಬರಲೇ ಇಲ್ಲಾ , ಇಬ್ರಾಹಿಂ  ಅವರಿಗೆ   ಹಲವಾರು ಹುದ್ದೆಗಳನ್ನು ನೀಡಿ ಗೌರವಿಸಿದ್ದು ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ಆದರೆ ಇಬ್ರಾಹಿಂ ಇವರುಗಳ ವಿರುದ್ಧ ಮಾತನಾಡುವುದು ಸರಿಯೇ ? ಎಂದು ಪ್ರಶ್ನಿಸಿದರು.

    ಜೆಡಿಎಸ್ ಗೆ ಹೋದ ಇಬ್ರಾಹಿಂ ರವರನ್ನು ಎಂ ಎಲ್ ಸಿ ಮಾಡಲಿಲ್ಲ ಬದಲಿಗೆ 50 ಲಕ್ಷ ರೂ ಹಣ ಪಡೆದು ಶರವಣನಿಗೆ ಎಂ ಎಲ್ ಸಿ ಮಾಡಿದ್ದು ಇದೇ ಕುಮಾರಸ್ವಾಮಿ ಹಾಗೂ ಜೆಡಿಎಸ್ ನವರು , ಬಡವರ ಜನಪರವಾಗಿರುವ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.

    ನಾನು ಅಧಿಕಾರದಲ್ಲಿರುವರೆಗೂ ಯಾರೊಬ್ಬರನ್ನು ತಲೆ ಬಾಗಿಸದಂತೆ ಜವಾಬ್ದಾರಿ ಯಿಂದ ನಡೆದು ಕೊಳ್ಳುತ್ತೇನೆ. ಇಂದಿನ ಕ್ಷೇತ್ರದ ಶಾಸಕ ಯಾವ ರೀತಿ ಕೆಲಸ ಕಾರ್ಯಗಳನ್ನು ಮಾಡಿದ್ದಾರೆಂದು ನಿಮಗೆ ತಿಳಿದಿದೆ. ಹಿಜಾಬ್ , ಲೌಡ್ ಸ್ಪೀಕರ್ , ಹಲಾಲ್ ಜಟಾಕ ಕಟ್ ಗಳನ್ನು ವಿರೋಧಿಸಿದವರಿಗೆ ನೀವುಗಳು ಈ ಚುನಾವಣೆಯಲ್ಲಿ ಸರಿಯಾಗಿ ಪಾಠ ಕಲಿಸಬೇಕು ಎಂದು ಕರೆ ನೀಡಿದರು.

    ಜೆಡಿಎಸ್ ಪರವಾಗಿ ಮತ ಚಲಾಯಿಸಿದರೆ ಅದೂ ಬಿಜೆಪಿಯನ್ನು ಬೆಂಬಲಿಸಿದಂತೆ ಯಾವುದೇ ಕಾರಣಕ್ಕೂ ಜೆಡಿಎಸ್ ಬಿಜೆಪಿಗೆ ಮತ ಚಲಾಯಿಸ ಬೇಡಿ , ನನ್ನ ಮೇಲೆ ಗೌರವವಿಟ್ಟು ಸಮುದಾಯದವರು ರಾಜಣ್ಣನವರ ಪರವಾಗಿ ಕಾಂಗ್ರೆಸ್ ಗೆ ಮತ ಚಲಾಯಿಸಿ ಎಂದು ಮನವಿ ಮಾಡಿದರು.

    1993ರಲ್ಲಿ ವೀರಪ್ಪ ಮೊಯ್ಲಿ ಮುಖ್ಯಮಂತ್ರಿ ಯಾಗಿದ್ದ ಅವಧಿಯಲ್ಲಿ ಅಲ್ಪಸಂಖ್ಯಾತರಿಗಾಗಿ ಶೇ.6ರಷ್ಟು ಮೀಸಲಾತಿಯ ವರದಿ ಸಲ್ಲಿಸಿದ್ದರು ಆದರೆ ಅನಿವಾರ್ಯ ಕಾರಣಗಳಿಂದಾಗಿ ಅವರ ಸರಕಾರ ಹೋದ ನಂತರ ದೇವೆಗೌಡರು ಮುಖ್ಯಮಂತ್ರಿ ಯಾಗಿದ್ದು ಶೇ.6 ರಷ್ಟಿದ್ದ ಮೀಸಲಾತಿ ಯನ್ನು ಶೇ.4 ಇಳಿಸಿ ಕೊಟ್ಟರು ಎಂದರು.

    ಕೆ.ಎನ್.ರಾಜಣ್ಣ ಮಾತನಾಡಿ, ಜನರ ಭಾವನೆಗಳನ್ನು ಪ್ರಚೋದಿಸಿದ ಸರಕಾರ ನಿಮಗೆ ಬೇಕೆ , ದೇಶದ ಪಿತಾಮಹ ಗಾಂಧಿಯವರನ್ನು ಕೊಂದಿದ್ದು ಯಾರು.? ನಾವುಗಳು ಗಾಂಧಿ ಹಿಂದೂತ್ವ ವನ್ನು ಪ್ರತಿಪಾದಿಸುತ್ತವೆ ಬಿಜೆಪಿ ಯವರು ಗೊಡ್ಸೆ ಹಿಂದೂತ್ವ ಪರಿಪಾಲನೆ ಮಾಡುವವರು ಈ ದೇಶಕ್ಕೆ ಮಾರಕವಾಗಿದ್ದಾರೆ ಎಂದರು.

    ಗುಜರಾತ್ ರಾಜ್ಯಕ್ಕೆ ಪ್ರವೇಶ ಮಾಡದಂತೆ ನ್ಯಾಯಾಲಯದ ಸೂಚಿಸಿದ ವ್ಯಕ್ತಿಯೇ ಇಂದೂ ಕೇಂದ್ರದ ಗೃಹ ಸಚಿವರಾಗಿದ್ದಾರೆ. ಬಿಜೆಪಿ ಪಕ್ಷ ಸಂಘಟನೆ ಯಾಗಲು ಜೆಡಿಎಸ್ ಪಕ್ಷವೇ ಮೂಲವಾಗಿದ್ದು ಆ ಪಕ್ಷಕ್ಕೆ ಇಂದೂ ಬಿ ಟೀಮ್ ಆಗಿ ಗುರುತಿಸಿಕೊಳ್ಳುತ್ತಿದೆ ಎಂದರು.

    ದೇವೆಗೌಡರನ್ನು ಸೋಲಿಸಿದ್ದು ಯಾರೆಂದು ನಿಮಗೆ ತಿಳಿದಿದೆ ಆದರೂ ಇಂತಹ ಅಪಪ್ರಚಾರಗಳಿಗೆ ಕಿವಿ ಗೂಡಬೇಡಿ. ಡಿ.ಕೆ , ಸಿದ್ದರಾಮಯ್ಯ ನವರು ಸಹಿ ಮಾಡಿರುವ ಗ್ಯಾರಂಟಿ ಕಾರ್ಡ್ ಗಳು ನಿಮ್ಮ ಮನೆಯ ಬಾಗಿಲಿಗೆ ತಲುಪಿಸಿದ್ದೆವೆ. ಬಡವರ , ಜನಪರ ವಾಗಿರುವ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.

    ಟಿಪ್ಪು ಜಯಂತಿ ಜಾರಿಗೆ ತಂದಿದ್ದು ಕಾಂಗ್ರೆಸ್ ಪಕ್ಷ:
    ಟಿಪ್ಪು ಮತಾಂತದ ನಾಗಿರಲಿಲ್ಲಾ , ಶೃಂಗೇರಿಯಲ್ಲಿ, ಕೊಲ್ಲೂರು, ಧರ್ಮಸ್ಥಳ, ನಂಜನಗೂಡಿನ ದೇವಾಲಯಗಳಲ್ಲಿ ಟಿಪ್ಪುವನ್ನು ಗೌರವಿಸಲಾಗುತ್ತಿದೆ. ಇಂತಹ ಸಂಪ್ರಾದಾಯ ಹಾಗೂ ಪದ್ದತಿಗಳನ್ನು ವಿರೋಧಿಸುವ ಜನರನ್ನು ಏನೆಂದು ಕರೆಯಬೇಕು , ರೇಷ್ಮೆ ಬೆಳೆಯನ್ನು ರಾಜ್ಯದಲ್ಲಿ ಪರಿಚಯಿಸಿದ್ದು ಯಾರು ? ಬಿಜೆಪಿಯವರು ಅಲ್ಪಸಂಖ್ಯಾತ ರಿಗೆ ಈ ಹಿಂದೆ ಶೇ. 4ರಷ್ಟಿದ್ದ ಮೀಸಲಾತಿ ಯನ್ನು ರದ್ಧು ಮಾಡಿದ್ದು ಯಾರು ? ಯಾವ ಸರಕಾರವೆಂದು ನಿಮಗೆ ತಿಳಿದಿಯೇ ಎಂದು ಸಭಿಕರನ್ನು ಪ್ರಶ್ನಿಸಿದರು.

    ಬಡವರ ಪರ , ಅಲ್ಪಸಂಖ್ಯಾತರ ರಕ್ಷಣೆ ಮಾಡುವವರಲ್ಲಿ ಜಮೀರ್ ಸದಾ ಮುಂದು ನಾನು ಎಲ್ಲಾ ಜಾತಿಯವರ ಪರವಾಗಿ ಹೋರಾಟ ಮಾಡಿದ್ದೇನೆ ಇದೂ ನನ್ನ ಕಡೆಯ ಚುನಾವಣೆಯಾಗಿದ್ದು ಮೇ.10 ರಂದು ನಡೆಯುವ ಚುನಾವಣೆಯಲ್ಲಿ ಕ್ರ.ಮ ಸಂಖ್ಯೆ 3 ರ ಪರವಾಗಿ ಮತ ಚಲಾಯಿಸಿ ಎಂದರು.

    ನಿಖಿತ್ ಮೌರ್ಯ ಮಾತನಾಡಿ ಇಂದೂ ರಾಜ್ಯದ ಮೈದಾನಗಳಲ್ಲಿ ಆಟವಾಡುವ ಮಕ್ಕಳನ್ನು ಕೇಳಿದರೆ ಸಾಕು ಯಾವ ಪಕ್ಷ ಅಧಿಕಾರಕ್ಕೆ ಬರಬೇಕೆಂದು ಕೇಳಿದರೆ ಅವರು ಹೇಳುವುದು ಕಾಂಗ್ರೆಸ್ ಪಕ್ಷವೆಂದು, ರಾಜ್ಯದಲ್ಲಿ ಜೆಡಿಎಸ್ ಪಕ್ಷ ಇಂದೂ ಐಸಿಯು ಹಂತ ತಲುಪಿ ಇದೂ ಬಿಜೆಪಿಯ ಪರವಾಗಿದೆ.

    ಕಾಂಗ್ರೆಸ್ ಸರಕಾರ ಅನ್ನ ಭಾಗ್ಯ ಕೊಟ್ಟಿದೆ. ಕರೊನಾ ಸಂಧರ್ಭದಲ್ಲಿ ಜನರನ್ನು ಕೈ ಹಿಡಿದಿದ್ದು ಇದೇ ಅನ್ನ ಭಾಗ್ಯ. ಹಿಜಾಬ್ ಧರಿಸದಂತೆ ವಿರೋಧ ವ್ಯಕ್ತ ಪಡಿಸಿದ ಸರಕಾರ ಅವಧಿಯಲ್ಲಿ ನಡೆದ ಪಿಯುಸಿ ಪರೀಕ್ಷೆಯಲ್ಲಿ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯೇ ಅತೀ ಹೆಚ್ಚು ಅಂಕಗಳೊಂದಿಗೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವುದು ವಿಶೇಷವಾಗಿದೆ.

    ಸ್ವಚ್ಚ ಭಾರತ್ ಯೋಜನೆ ಜಾರಿಗೆ ತಂದ ಬಿಜೆಪಿ ಸರಕಾರ ಜನರ ಜೇಬನ್ನು ಖಾಲಿ ಮಾಡಿಸಿದೆ .ಮೇ .10 ರಂದು ನಡೆಯುವ ಚುನಾವಣೆಯಲ್ಲಿ ಜಿಲ್ಲೆಯ ಅತೀ ದೊಡ್ಡ ಪಕ್ಷವಾಗಿ ಕಾಂಗ್ರೆಸ್ ಹೊರಹೊಮ್ಮಲಿದೆ. ಮೇ.ತಿಂಗಳಲ್ಲಿ ವಿದ್ಯುತ್ ಬಿಲ್ ಪಾವತಿಸಿ ನಂತರ ನಮ್ಮ ಕಾಂಗ್ರೆಸ್ ಸರಕಾರ ಅಧಿಕಾರದ ಚುಕ್ಕಾಣಿ ಹಿಡಿದು ನಿಮ್ಮಗಳ ವಿದ್ಯುತ್ ಬಿಲ್ ಪಾವತಿಸುತ್ತದೆ ಕಾಂಗ್ರೆಸ್ ಪಕ್ಷ ಜಾರಿಗೆ ತಂದಿರುವ ಗ್ಯಾರೆಂಟಿ ಕಾರ್ಡ್ ನಲ್ಲಿನ ಭರವಸೆಗಳ ಈಡೇರಿಕೆಗಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಎಂದರು.

    ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ , ಮಾಜಿ ಅಧ್ಯಕ್ಷರುಗಳಾದ ಎಂ.ಕೆ.ನಂಜುಂಡರಾಜು , ಎನ್.ಗಂಗಣ್ಣ , ಎಸ್ ಎ ಜೆ ಶೌಕತ್ , ಅಯ್ಯೂಬ್ , ಪುರಸಭಾ ಸದಸ್ಯರಾದ ನಸೀಮಾ ಬಾನು , ಶಾಹೀನಾ ಕೌಸರ್ , ರಾಜ್ಯ ವಕ್ಪ ಬೋರ್ಡ್ ನಿರ್ದೇಶಕ ಅನವರ್ ಬಾಷ , ಗ್ರಾ.ಪಂ ಸದಸ್ಯೆ ರಿಯಾಹನಾ ಬಾನು , ಆಡಿಟರ್ ಸುಲ್ತಾನ್ , ಮಧುಗಿರಿ ಅಲ್ಪಸಂಖ್ಯಾತರ ಅಧ್ಯಕ್ಷರಾದ ಅಯುಬ್, ಸೈಯದ್ ಅಲಾವುದ್ದೀನ್, ಸಿಕಂದರ್ , ಮೊಹಮದ್ ಜಾಫರ್ ಸಾಧಿಕ್ ಬಾಬಫಕೃದ್ದೀನ್ , ಮನ್ನು , ಇಮ್ರಾನ್ , ಶಿರಾ ನಗರಸಭಾ ಸದಸ್ಯ ಜಾಫರ್ ಅಹಮದ್ , ಜಿ.ಶಾಹನ್ , ರಫೀಕ್ , ಅಮ್ರಾಜ್ , ಜಮೀರ್ , ಸಾಧಿಕ್ , ಹರ್ಷದ್ ಹುಸೇನ್, ಆಲಿ ಸಾಬ್ , ಗೌಸ್ ಪೀರ್ , ಮೆಹಬೂಬ್ ಸಾಬ್ , ನಿಜಾಮ್ , ವಸೀಂ , ಎಸ್ ಕೆ ಸೈಯದ್ , ಅಸ್ಲಂ, ಸನಾವುಲ್ಲಾ ಸಾಬ್ , ಶೌಕತ್ , ಜಾಫರ್ ಸಾಧಿಕ್ ಷರೀಫ್ , ಮುಬಾರಕ್, ದಾದಾಪೀರ್ ಸಾವಿರಾರು ಜನ ಕಾರ್ಯಕರ್ತರು ಇದ್ದರು.

    ವರದಿ: ಅಬಿದ್ ಮಧುಗಿರಿ


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL

    ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA

     

    admin
    • Website

    Related Posts

    ಬದುಕು ಉಜ್ವಲವಾಗಲು ಶಿಕ್ಷಣವೇ ಮುಖ್ಯ ಅಸ್ತ್ರ: ಶಾಸಕ ಕೆ.ಎನ್‌. ರಾಜಣ್ಣ ಕರೆ

    July 19, 2026

    ಒಕ್ಕಲೆಬ್ಬಿಸಿದರೆ ಸಾಕೇ? ರೈತರಿಗೆ ಪರ್ಯಾಯ ಭೂಮಿ ನೀಡಿ: ಸರ್ಕಾರಕ್ಕೆ ರೈತ ಸಂಘ ಒತ್ತಾಯ

    July 14, 2026

    ಮಧುಗಿರಿ: ಬೀದಿ ನಾಯಿಗಳ ದಾಳಿಗೆ 24 ಕುರಿ ಸಾವು

    July 10, 2026

    Comments are closed.

    Our Picks

    NEET ವಿವಾದ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ

    July 25, 2026

    ನೀಟ್ ಅಕ್ರಮ: ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ: ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹ

    July 21, 2026

    ಕೇಂದ್ರ ಸರ್ಕಾರವು ತಕ್ಷಣವೇ ಸೋನಮ್ ವಾಂಗ್ಚುಕ್ ಜೊತೆ ಚರ್ಚಿಸಲು ಆಗ್ರಹಿಸಿ ರಾಷ್ಟ್ರಪತಿಯವರಿಗೆ ಮನವಿ: ತುಮಕೂರಿನಲ್ಲಿ ಆನ್‌ ಲೈನ್ ಸಹಿ ಸಂಗ್ರಹ

    July 18, 2026

    ಪಿಎಂ–ವಿಕಸಿತ್ ಭಾರತ್ ರೋಜ್‌ ಗಾರ್ ಯೋಜನೆಯಡಿ ₹2,400 ಕೋಟಿ ಪ್ರೋತ್ಸಾಹಧನ ವಿತರಣೆ: 15 ಲಕ್ಷ ಉದ್ಯೋಗಾವಕಾಶಗಳ ಸೃಷ್ಟಿ

    June 20, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    Uncategorized

    ಕೂಡ್ಲಿಗಿ: “ದೈವ ಒಂದೇ, ಅದು ದೇಶ – ದೇಶ ಸೇವೆಯೇ ದೈವ ಸೇವೆ”: ಮಾಜಿ ಸೈನಿಕ ಕಾಟೇರ ರಮೇಶ್

    July 27, 2026

    ಕೂಡ್ಲಿಗಿ (ವಿಜಯನಗರ):  “ದೇಶ ಸೇವೆಯೇ ಈಶ ಸೇವೆ ಎಂಬ ನಾಣ್ಣುಡಿಯನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಮನಗಾಣಬೇಕಾಗಿದೆ” ಎಂದು ಮಾಜಿ ಸೈನಿಕ…

    ಬಿಪಿಎಲ್ ಕಾರ್ಡ್ ಪಡೆಯಲು ವಾರ್ಷಿಕ ಆದಾಯ ಮಿತಿ ₹3 ಲಕ್ಷಕ್ಕೆ ಹೆಚ್ಚಿಸಲು ಕ್ರಮ: ಸಚಿವ ಕೆ.ಹೆಚ್. ಮುನಿಯಪ್ಪ

    July 27, 2026

    ವಿಧಾನಸಭೆಯಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ನೀರಿಳಿಸಲು ಬಿಜೆಪಿ–ಜೆಡಿಎಸ್ ಸಜ್ಜು: ಬಿ.ವೈ.ವಿಜಯೇಂದ್ರ

    July 27, 2026

    ತುಮಕೂರು: ನಡುರಸ್ತೆಯಲ್ಲೇ ರೌಡಿಶೀಟರ್‌ ಮಲ್ಲ ಬರ್ಬರ ಹತ್ಯೆ!

    July 27, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.