Author: admin

ಬೆಂಗಳೂರು: ಹರಿಹರ ಪಂಚಮಸಾಲಿ ಪೀಠದ ಸತತ ಹೋರಾಟದ ಫಲವಾಗಿ ಪಂಚಮಸಾಲಿ ಸಮುದಾಯಕ್ಕೆ ರಾಜ್ಯ ಸರಕಾರದಿಂದ ಅತ್ಯುತ್ತಮ ಕೊಡುಗೆ ಘೋಷಣೆಯಾಗುವ ವಿಶ್ವಾಸವಿದೆ ಎಂದು ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಪೀಠಾಧ್ಯಕ್ಷರಾದ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮೀಜಿಗಳು ಹೇಳಿದರು. ಬೆಂಗಳೂರು ನಗರದ ಶ್ವಾಸ ಯೋಗ ಕೇಂದ್ರದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಪ್ರಮುಖ ಸಮುದಾಯಗಳಲ್ಲಿ ಒಂದಾಗಿರುವ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡಬೇಕು ಎನ್ನುವುದರ ಹೋರಾಟದ ಹಿಂದೆ 3 ದಶಕಗಳ ಇತಿಹಾಸವಿದೆ. ಹಂತಹಂತಗಳಲ್ಲಿ ನಡೆಸಿದ ಹೋರಾಟ ಅಂತಿಮ ಹಂತಕ್ಕೆ ಬಂದು ಸೇರಿದೆ. 2 ಡಿ ಹಾಗೂ 2 ಸಿ ಮೀಸಲಾತಿಯನ್ನು ಘೋಷಣೆ ಮಾಡಿದ್ದನ್ನು ನಾವು ಸ್ವಾಗತಿಸುವುದಾಗಲಿ ಅಥವಾ ತಿರಸ್ಕರಿಸುವುದಾಗಲಿ ಮಾಡಿರಲಿಲ್ಲ. ಈ ಘೋಷಣೆಯಲ್ಲಿ ಸ್ಪಷ್ಟತೆಯ ಅಗತ್ಯತೆಯನ್ನು ಒತ್ತಿ ಹೇಳಿದ್ದೇವು. ಈ ಹಿನ್ನಲೆಯಲ್ಲಿ ರಾಜ್ಯ ಸರಕಾರ ಹಿಂದುಳಿದ ಆಯೋಗದ ಮಧ್ಯಂತರ ವರದಿಯನ್ನು ಪಡೆದುಕೊಂಡಿದೆ. ಮಧ್ಯಂತರ ವರದಿಯನ್ನ ಸಮಗ್ರವಾಗಿ ಪರಿಶೀಲಿಸಿರುವ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳುವ…

Read More

ತುಮಕೂರು: 7 ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಅಪರಾಧಿಗೆ ಗೌರವಾನ್ವಿತ ಅಧಿಕ ಜಿಲ್ಲಾ ಸತ್ರ ನ್ಯಾಯಾಲಯ ಎಫ್.ಟಿ.ಎಸ್.ಸಿ.(ಪೋಕ್ಸೋ) 20 ವರ್ಷಗಳ ಸಜೆ ಮತ್ತು 75000 ರೂಪಾಯಿ ದಂಡ ವಿಧಿಸಿದೆ. ಪಾವಗಡ ತಾಲ್ಲೂಕು ದೊಮ್ಮತ್ತಮರಿ ಗ್ರಾಮ ವ್ಯಾಪ್ತಿಯ ಯಲಗಾನಗುಟ್ಟೆ ಮಜರೆ ಗ್ರಾಮ ನಿವಾಸಿ ಕೃಷ್ಣಮೂರ್ತಿ ಎಂಬಾತ ದಿನಾಂಕ 30–07–2021ರಂದು ಮಧ್ಯಾಹ್ನ 2:30 ಗಂಟೆಯ ಸುಮಾರಿಗೆ 7 ವರ್ಷದ ಬಾಲಕಿ ತನ್ನ ತಮ್ಮನ ಜೊತೆಗೆ ಮನೆಯ ಪಕ್ಕದಲ್ಲಿ ಆಟವಾಡುತ್ತಿದ್ದ ವೇಳೆ ನೇರಳೆ ಹಣ್ಣು ಕೊಡುವ ನೆಪದಲ್ಲಿ ಇಬ್ಬರನ್ನೂ ತನ್ನ ಮನೆಯ ಪಕ್ಕದಲ್ಲಿರುವ ನೇರಳೆ‌ ಮರದ ಬಳಿ ಕರೆದೊಯ್ದು ಬಾಲಕಿಗೆ ಲೈಂಗಿಕ ‌ದೌರ್ಜನ್ಯ ಎಸಗಿದ್ದ ಎಂದು ತನಿಖಾಧಿಕಾರಿಗಳಾದ ಲಕ್ಷ್ಮೀಕಾಂತ್ ಎಸ್. ಅವರು ದೋಷರೋಪಣ ಪಟ್ಟಿ ಕಲಂ 376 ಐಪಿಸಿ ಕಲಂ6 ಪೋಕ್ಸೋ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ನ್ಯಾಯಾಲಯದ ವಿಚಾರಣೆಯಲ್ಲಿ ಕೃಷ್ಣಮೂರ್ತಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವುದು ರುಜುವಾತಾದ ಕಾರಣ ಅಧಿಕ ಸತ್ರ ನ್ಯಾಯಾಲಯದ ಎಫ್.ಟಿ.ಎಸ್.ಸಿ.(ಪೋಕ್ಸೋ) ಗೌರವಾನ್ವಿತ ನ್ಯಾಯಾಧೀಶರಾದ ಸಂಧ್ಯಾ…

Read More

ಉತ್ತರ ಪ್ರದೇಶ: ಅಮೇಥಿ ರಾಮಗಂಜ್ ಪ್ರದೇಶದ ಹಳ್ಳಿಯೊಂದರಲ್ಲಿ 14 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಘಟನೆ ಗುರುವಾರ ನಡೆದಿದೆ. ತಮ್ಮ ಮಗಳು ಮನೆಗೆ ಬೇಕಾದ ವಸ್ತುಗಳನ್ನು ಖರೀದಿಸಲು ಮಾರ್ಚ್ 21ರಂದು ಸಂಜೆ ಮನೆಯಿಂದ ಹೊರಗೆ ಹೋಗಿದ್ದು, ಅದೇ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ವಾಹನದಲ್ಲಿ ಬಾಲಕಿಯನ್ನು ಎಳೆದೊಯ್ದು ಅತ್ಯಾಚಾರ ಎಸಗಿರುವುದಾಗಿ ಸಂತ್ರಸ್ತೆಯ ತಾಯಿ ಆರೋಪಿಸಿದ್ದಾರೆ. ಘಟನೆಯ ಮರುದಿನ ಬೆಳಗ್ಗೆ ಬಾಲಕಿ ಮನೆಗೆ ಹಿಂದಿರುಗಿದಾಗ ಈ ಬಗ್ಗೆ ತಾಯಿಗೆ ಮಾಹಿತಿ ನೀಡಿದ್ದು. ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಪ್ರಕರಣ ದಾಖಲಿದ ಪೊಲೀಸರು ಎಫ್ ಐಆರ್ ದಾಖಲಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ರಾಮ್ಗಂಜ್ ಠಾಣಾಧಿಕಾರಿ ಪಂಕಜ್ ದ್ವಿವೇದಿ ತಿಳಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA

Read More

ಮನುಷ್ಯ, ಮನುಷ್ಯನನ್ನು ಪ್ರೀತಿಸುವುದೇ ನಿಜ ಧರ್ಮ. ಧರ್ಮದ ಸತ್ವ ಅಡಗಿರುವುದೇ ಪ್ರೀತಿಯಲ್ಲಿ, ಸಮಾಜದಲ್ಲಿನ ಎಲ್ಲ ಸಮುದಾಯದವರು ಸಮಾನತೆಯಿಂದ ಕೂಡಿ ಬಾಳಿದಾಗ ಶಾಂತಿ ನೆಮ್ಮದಿಯ ಜೀವನ ಸಾಧ್ಯ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು. ಮಧುಗಿರಿ ತಾಲೂಕಿನ ಸಿದ್ದಾಪುರ ಗ್ರಾಮದ ಸಮೀಪದ ಮದರಸದಲ್ಲಿ, ಸುಮಾರು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಕಾಮಗಾರಿಯನ್ನು 40 ಲಕ್ಷ ರೂಪಾಯಿ ವೆಚ್ಚದಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಉದ್ಘಾಟಿಸಿ ಶಾಸಕರು ಮಾತನಾಡಿದರು. ಇದೇ ವೇಳೆ ಮದರಸದ ಗುರುಗಳಾದ ಮುಫ್ತಿ ಅಫ್ತಾಬ್ ಮೌಲನಾ ಮಾತನಾಡಿ, ಹಲವು ವರ್ಷಗಳಿಂದ ಸ್ಥಗಿತಗೊಂಡಿದ್ದ ಕಾಮಗಾರಿಯನ್ನು ಪೂರ್ಣಗೊಳಿಸಿದ್ದಕ್ಕಾಗಿ ಶಾಸಕರಿಗೆ ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೇ, ಶಾಸಕರ ಧರ್ಮ ಸಹಿಷ್ಣುತೆಯನ್ನು ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ಮಕ್ಕ ಮಸೀದಿ ಅಧ್ಯಕ್ಷರಾದ ಬಷೀರ್ ಹಜರತ್, ಮದೀನಾ ಮಸೀದಿ ಅಧ್ಯಕ್ಷರಾದ ಷರೀಫ್ ಹಾಜರತ್, ನಾಸಿರ್, ಜೆಡಿಎಸ್ ಪಕ್ಷದ ಮುಖಂಡರಾದ ತುಂಗೋಟಿ ರಾಮಣ್ಣ, ಪುರಸಭಾ ಅಧ್ಯಕ್ಷ ತಿಮ್ಮರಾಜು, ಸದಸ್ಯರಾದ ಚಂದ್ರಶೇಖರ್ ಬಾಬು ನಾರಾಯಣ, ಗಂಗರಾಜು ಅಲ್ಪಸಂಖ್ಯಾತ ಜೆಡಿಎಸ್ ಅಧ್ಯಕ್ಷರಾದ ಶಫಿಖ್, ದಾದು, ಶಿವಪ್ಪ, ಮೋಹನ್, ಧನಪಾಲ್, ರಘು ಮತ್ತು…

Read More

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದ ಪಂಪ್ ವೆಲ್ ಸಮೀಪದ ನಾಗುರಿ ಎಂಬಲ್ಲಿ ಕಳೆದ ವರ್ಷದ ನವೆಂಬರ್ 19ರಂದು ಸಂಜೆ ಸಂಭವಿಸಿದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಪುರುಷೋತ್ತಮ ಪೂಜಾರಿಯ ಕುಟುಂಬಕ್ಕೆ ಗುರು ಬೆಳದಿಂಗಳು ಫೌಂಡೇಶನ್ ವತಿಯಿಂದ ನಿರ್ಮಿಸಲಾದ ನವೀಕೃತ ಮನೆಯನ್ನು ಹಸ್ತಾಂತರಿಸಲಾಯಿತು. ಸುಮಾರು 6 ಲಕ್ಷ ರೂಪಾಯಿ ವೆಚ್ಚದಲ್ಲಿ ನವೀಕರಿಸಲಾದ ಈ ಮನೆಯನ್ನು ಯುಗಾದಿ ಹಬ್ಬದ ಕೊಡುಗೆಯಾಗಿ ಪುರುಷೋತ್ತಮ ಪೂಜಾರಿ ಹಾಗೂ ಕುಟುಂಬದ ಸದಸ್ಯರು, ಸಂಬಂಧಿಕರ ಸಮ್ಮುಖದಲ್ಲಿ ಹಸ್ತಾಂತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಗುರು ಬೆಳದಿಂಗಳು ಫೌಂಡೇಶನ್ ಅಧ್ಯಕ್ಷ ಪದ್ಮರಾಜ್ ಆರ್., ಜೆಪ್ಪು ಸಂತ ಅಂತೋನಿ ಆಶ್ರಮದ ನಿರ್ದೇಶಕ ಫಾದರ್ ಜೆ.ಬಿ.ಕ್ರಾಸ್ತಾ, ಮಾಜಿ ರಾಜ್ಯಸಭಾ ಸದಸ್ಯ ಬಿ.ಇಬ್ರಾಹೀಂ, ಉದ್ಯಮಿಗಳಾದ ರೋಹನ್ ಮೊಂತೆರೋ, ರಘುನಾಥ್ ಮಾಬೆನ್, ಧರ್ಮರಾಜ ಅಮ್ಮುಂಜೆ, ಕಾರ್ಪೊರೇಟರ್ ಪ್ರವೀಣ್ ಚಂದ್ರ ಆಳ್ವ, ಮಾಜಿ ಕಾರ್ಪೊರೇಟರ್ ಡಿ.ಕೆ.ಅಶೋಕ್ ಕುಮಾರ್, ಇಂಡಿಯಾನ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಯೂಸುಫ್ ಕುಂಬ್ಳೆ, ಸತ್ಯಜಿತ್ ಸುರತ್ಕಲ್, ಪ್ರಮುಖರಾದ ದೇವೇಂದ್ರ ಪೂಜಾರಿ, ಮೋಹನ್ ನೆಕ್ಕರೆಮಾರು, ಸೂರ್ಯಕಾಂತಿ…

Read More

ಚಾಮರಾಜನಗರದ ಪ್ರಸಿದ್ಧ ಯಾತ್ರಸ್ಥಳವಾದ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಯುಗಾದಿ ಜಾತ್ರೆಯ ರಥೋತ್ಸವವು ನಡೆದಿದ್ದು ಲಕ್ಷಾಂತರ ಮಂದಿ ಭಕ್ತರು ಮಹದೇಶ್ವರನಿಗೆ ಜೈಕಾರ ಹಾಕಿ ಪ್ರಾರ್ಥಿಸಿದರು. ಕರ್ನಾಟಕದ ಲಕ್ಷಾಂತರ ಭಕ್ತರು ಕಾಲ್ನಡಿಗೆ ಮೂಲಕ ಶ್ರೀಕ್ಷೇತ್ರಕ್ಕೆ ಆಗಮಿಸಿದ್ದು ತಮಿಳುನಾಡಿನಿಂಲೂ ಲಕ್ಷಾಂತರ ಭಕ್ತರು ರಥೋತ್ಸವದಲ್ಲಿ ಭಾಗಿಯಾಗಿದ್ದಾರೆ. ಈ ಬಾರಿ ಮಹದೇಶ್ವರನ 108 ಪ್ರತಿಮೆ ಕ್ಷೇತ್ರದ ಹೊಸ ಆಕರ್ಷಣೆಯಾಗಿದೆ. ರಥೋತ್ಸವ ಹಿನ್ನೆಲೆ ಪೊಲೀಸ್ ಇಲಾಖೆ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಲಾಗಿತ್ತು . ಜೊತೆಗೆ, ಪ್ರಾಧಿಕಾರವು ಸಕಲ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA

Read More

ಪಾವಗಡ ವಿಧಾನಸಭಾ ಕ್ಷೇತ್ರದ ಹಲವು ಜೆಡಿಎಸ್ ಮುಖಂಡರು ಜೆಡಿಎಸ್ ತೊರೆದು ಅಧಿಕೃತವಾಗಿ ಕಾಂಗ್ರೆಸ್ ಗೆ ಸೇರ್ಪಡೆಗೊಂಡರು. ಶಾಸಕರಾದ ವೆಂಕಟರಮಣಪ್ಪ ಹಾಗೂ ಯುವ ನಾಯಕ ಹೆಚ್.ವಿ.ವೆಂಕಟೇಶ್ ರವರ ಸಮ್ಮುಖದಲ್ಲಿ ಜೆಡಿಎಸ್ ಮುಖಂಡ, ನಿವೃತ್ತ ಶಿರಸ್ತೆದಾರರಾದ ಮಲ್ಲಿಕಾರ್ಜುನಪ್ಪ, ಮಾಜಿ ಗ್ರಾಮ ಪಂಚಾಯತ್ ಸದಸ್ಯ ಬೋರನಾಯಕ, ನಾರಾಯಣಪ್ಪ ದೇವಲಕೆರೆ, ತಿಪ್ಪೇಸ್ವಾಮಿ, ಮಾದನಾಯಕ, ಕರಿಯಣ್ಣ ಹಾಗೂ ಪ್ರೇಮ್ ಕುಮಾರ್ ಕಾಂಗ್ರೆಸ್ ಗೆ ಸೇರ್ಪಡೆಗೊಂಡರು. ಈ ವೇಳೆ ಹಿರಿಯ ಮುಖಂಡರಾದ ದೊಡ್ಡ ಹನುಮಂತರಾಯಪ್ಪ, ರಂಗೇಗೌಡರು, ಚಿಕ್ಕಣ್ಣ, ದಿನೇಶ್ ಗೋವಿಂದಪ್ಪ ಜಿ.ಕೆ., ಸಿದ್ದೇಶ್, ಮಾನಂಗಿ ರಂಗಣ್ಣ, ಅಂಗಡಿ ಮಂಜುನಾಥ್, ಅಂಗಡಿ ಹನುಮಂತರಾಯಪ್ಪ, ಯೂತ್ ಕಾಂಗ್ರೆಸ್ ಅಧ್ಯಕ್ಷ ಸುಜಿತ್, ಶ್ರೀರಾಮುಲು, ಮುರುಳಿಧರ್ ರಘು ಸೇರಿದಂತೆ ಇನ್ನೂ ಹಲವರು ಕಾರ್ಯಕರ್ತರು ಉಪಸ್ಥಿತರಿದ್ದರು. ವರದಿ: ರಾಮಪ್ಪ, ಸಿ.ಕೆ.ಪುರ, ಪಾವಗಡ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA

Read More

ಛತ್ತೀಸ್‌ಗಢ ವಿಧಾನಸಭೆಯು ಪತ್ರಕರ್ತರ ರಕ್ಷಣೆ ಮಸೂದೆಯನ್ನು ಅಂಗೀಕರಿಸಿದೆ. ಮುಖ್ಯಮಂತ್ರಿ ಭೂಪೇಶ್ ಬಾಗಲ್ ಅವರು ಮಸೂದೆಯನ್ನು ಮಂಡಿಸಿದರು. ಮಾಧ್ಯಮ ಕಾರ್ಯಕರ್ತರ ರಕ್ಷಣೆ ಮತ್ತು ಹಿಂಸಾಚಾರವನ್ನು ತಡೆಯಲು ಮಸೂದೆಯಾಗಿದೆ ಎಂದು ಭೂಪೇಶ್ ಭಾಗಲ್ ಸ್ಪಷ್ಟಪಡಿಸಿದ್ದಾರೆ. ಸದನದಲ್ಲಿ ವಿರೋಧ ಪಕ್ಷದ ನೇತೃತ್ವ ವಹಿಸಿರುವ ಬಿಜೆಪಿ, ಮಸೂದೆಯನ್ನು ಆಯ್ಕೆ ಸಮಿತಿಗೆ ಒಪ್ಪಿಸಬೇಕೆಂದು ಒತ್ತಾಯಿಸಿತ್ತು. ಆದರೆ ಈ ಬೇಡಿಕೆ ಕುಂಟುತ್ತಾ ಸಾಗಿತ್ತು. 2018ರಲ್ಲಿ ಕಾಂಗ್ರೆಸ್ ಪ್ರಣಾಳಿಕೆಯು ಪತ್ರಕರ್ತರ ರಕ್ಷಣೆಗೆ ಮಸೂದೆಯನ್ನು ತರುವುದಾಗಿ ಭರವಸೆ ನೀಡಿತ್ತು. ಪತ್ರಕರ್ತರ ಮೇಲಿನ ದಾಳಿಯನ್ನು ತಡೆಯುವುದು ಮತ್ತು ಮಾಧ್ಯಮ ಸಂಸ್ಥೆಗಳ ಆಸ್ತಿಗಳ ರಕ್ಷಣೆಯನ್ನು ಖಚಿತಪಡಿಸುವುದು ಈ ಮಸೂದೆಯ ಗುರಿಯಾಗಿದೆ. ಪತ್ರಕರ್ತರು ಮತ್ತು ಮಾಧ್ಯಮ ಸಂಸ್ಥೆಗಳ ಮೇಲೆ ಹಲ್ಲೆ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂತಹ ಮಸೂದೆಯನ್ನು ತರಲಾಗಿದೆ ಎಂದು ಭೂಪೇಶ್ ಬಾಗಲ್ ಹೇಳಿದ್ದಾರೆ. ಅಂತಹ ಶಾಸನಕ್ಕಾಗಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅಫ್ತಾಬ್ ಆಲಂ ನೇತೃತ್ವದಲ್ಲಿ 2019 ರಲ್ಲಿ ಸಮಿತಿಯನ್ನು ರಚಿಸಲಾಯಿತು. ವಿವಿಧ ರಾಜಕೀಯ ಪಕ್ಷಗಳ ಅಭಿಪ್ರಾಯ ಮತ್ತು ಸಲಹೆಗಳನ್ನೂ ಪರಿಗಣಿಸಿ ಮಸೂದೆಯನ್ನು ಸಿದ್ಧಪಡಿಸಲಾಗಿದೆ. ಇದೊಂದು ಐತಿಹಾಸಿಕ…

Read More

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರು ಹುರುನ್ ಇಂಡಿಯಾ ಬಿಡುಗಡೆ ಮಾಡಿದ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಈ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯರಾಗಿದ್ದಾರೆ. ಅಂಬಾನಿ ಸತತ ಮೂರನೇ ವರ್ಷ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಬಿರುದನ್ನು ಹೊಂದಿದ್ದಾರೆ. ಅವರು ಈ ಪಟ್ಟಿಯಲ್ಲಿ ಶ್ರೀಮಂತ ಟೆಲಿಕಾಂ ಉದ್ಯಮಿ ಕೂಡ ಆಗಿದ್ದಾರೆ. ಹಿಂಡರ್ ಬರ್ಗ್ ವರದಿಯಿಂದಾಗಿ ಭಾರೀ ಆರ್ಥಿಕ ಹಿನ್ನಡೆ ಎದುರಿಸಿದ್ದ ಗೌತಮ್ ಅದಾನಿ ಅವರಿಗೆ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲು ಸಾಧ್ಯವಾಗಲಿಲ್ಲ. ವರದಿಗಳ ಪ್ರಕಾರ, ಹಿಂಡರ್‌ಬರ್ಗ್ ವಿವಾದ ಬೆಳಕಿಗೆ ಬರುವ ಮೊದಲು ಅದಾನಿ ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿಯಾಗಿದ್ದರು. ಆದಾಗ್ಯೂ, ಹಿಂಡರ್‌ಬರ್ಗ್ ವರದಿಯು ಷೇರು ಮಾರುಕಟ್ಟೆಗಳನ್ನು ಒಳಗೊಂಡಂತೆ ಅವರ ಹಣಕಾಸಿನ ಮೇಲೆ ಭಾರಿ ಪ್ರಭಾವ ಬೀರಿತು. ಪ್ರತಿ ವಾರ 3000 ಕೋಟಿ ನಷ್ಟ ಅನುಭವಿಸುತ್ತಿದ್ದಾರೆ ಎಂದು ಅಂದಾಜಿಸಲಾಗುತ್ತಿದೆ. ಈ ವರ್ಷದ ಶ್ರೇಯಾಂಕದಲ್ಲಿ ಅವರು ಹನ್ನೊಂದು ಸ್ಥಾನ ಕುಸಿದಿದ್ದಾರೆ. ಹುರುನ್ ಗ್ಲೋಬಲ್‌ನ ಅಂಕಿಅಂಶಗಳ ಪ್ರಕಾರ, ಅಮೇರಿಕಾ ಮತ್ತು ಚೀನಾದ…

Read More

ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರು ಭಾರತೀಯ ಭಕ್ಷ್ಯಗಳನ್ನು ಸವಿಯುತ್ತಾರೆ. ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರು ಸೋಮವಾರ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಲಸ್ಸಿ ಮತ್ತು ಪಾನಿ ಪುರಿ ತಿನ್ನುತ್ತಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಪ್ರಧಾನಿ ಮೋದಿ ಅವರು ಜಪಾನ್ ಪ್ರಧಾನಿ ಗೋಲ್ಗಪ್ಪಾವನ್ನು ಆನಂದಿಸುತ್ತಿರುವ ಚಿತ್ರಗಳನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.ದೆಹಲಿಯ ಬುದ್ಧ ಜಯಂತಿ ಪಾರ್ಕ್‌ನಲ್ಲಿರುವ ಬಾಲ ಬೋಧಿ ವೃಕ್ಷಕ್ಕೆ ಭೇಟಿ ನೀಡಿದ ನಾಯಕರು ಅಲ್ಲಿ ಲಸ್ಸಿ, ಗೋಲ್ಗಪ್ಪ, ಅಂಪನ್ನ ಮತ್ತು ಕರಿದ ಇಡ್ಲಿಗಳನ್ನು ಸವಿದರು. ಫ್ಯೂಮಿಯೋ ಕಿಶಿಡಾ ಅವರು ಪ್ರಧಾನಿ ಮೋದಿಯವರೊಂದಿಗೆ ಪಾನಿಪುರಿ ಸವಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೀಡಿಯೊವನ್ನು 14.9 ಮಿಲಿಯನ್ ಜನರು ವೀಕ್ಷಿಸಿದ್ದಾರೆ ಮತ್ತು 2.8 ಮಿಲಿಯನ್ ಲೈಕ್‌ಗಳನ್ನು ಸ್ವೀಕರಿಸಿದ್ದಾರೆ. ನಾನು ಮತ್ತು ಪ್ರಧಾನಿ ಕಿಶಿದಾ ದೆಹಲಿಯ ಬುದ್ಧ ಜಯಂತಿ ಪಾರ್ಕ್‌ಗೆ ಹೋಗಿದ್ದೆವು. ಕೆಲವು ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದೇನೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. ರಕ್ಷಣೆ, ಆರೋಗ್ಯ, ತಂತ್ರಜ್ಞಾನ ಮತ್ತು…

Read More