Author: admin

ವರುಣಾ ಕ್ಷೇತ್ರದಿಂದ ಸಿದ್ಧರಾಮಯ್ಯ ವಿರುದ್ಧ ಸ್ಪರ್ಧೆ ಮಾಡುತ್ತೀರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿ ಸ್ಪಷ್ಟನೆ ನೀಡಿರುವ ಸಚಿವ ವಿ.ಸೋಮಣ್ಣ, ನಾನು ವರುಣ ಕ್ಷೇತ್ರದಿಂದ ಸ್ಪರ್ಧಿಸಲ್ಲ. ನಾನ್ಯಾಕೆ ಸಿದ‍್ಧರಾಮಯ್ಯ ವಿರುದ್ಧ ಸ್ಪರ್ಧಿಸಲಿ ಎಂದಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ವಿ.ಸೋಮಣ್ಣ, ಸಿದ್ದರಾಮಯ್ಯ ರಾಜ್ಯದ ದೊಡ್ಡನಾಯಕ. ಈ ಹಿಂದೆ ಚಾಮುಂಡೇಶ್ವರಿ ಬೈ ಎಲೆಕ್ಷನ್‌ ಲ್ಲಿ ನಾನು ಕೆಲಸ ಮಾಡಿದ್ದೆನು. 42 ಬೂತ್ ಜವಾಬ್ದಾರಿ ತಗೊಂಡಿದ್ದೆ. ಸಿದ್ದರಾಮಯ್ಯಗೆ ಯಾವ ಕ್ಷೇತ್ರದಲ್ಲಿ ಟಿಕೆಟ್‌ ನೀಡೊದು ಬಿಡೋದು, ಅವರ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಅದಕ್ಕಿಂತ ಮುಖ್ಯವಾಗಿ ಸಿದ್ದರಾಮಯ್ಯ ಒಬ್ಬ ರಾಜ್ಯದಲ್ಲಿ ಸರ್ವೋಚ್ಛ ನಾಯಕರು. ಅವರ ವಿರುದ್ದ ಸ್ಪರ್ಧೆ ಮಾಡುವ ಬಗ್ಗೆ ತೀರ್ಮಾನ ಮಾಡೋದು ಹೈಕಮಾಂಡ್ ಗೆ ಬಿಟ್ಟ ವಿಚಾರ ಎಂದರು. ನನಗೆ ಗೋವಿಂದರಾಜನಗರ ಕ್ಷೇತ್ರ ಇದೆ. ಚಾಮರಾಜನಗರಕ್ಕೆ ಹೋಗಿ ಕೆಲಸ ಮಾಡಲು ಅಮಿತ್ ಶಾ ಹೇಳಿದ್ದಾರೆ. ನಾನು ಹನೂರಿನಲ್ಲಿ ಸ್ಪರ್ಧಿಸುತ್ತೇನೆ ಎಂದರೂ ಯಾರು ಏನು ಹೇಳಲ್ಲ ಎಂದು ಸಚಿವ ಸೋಮಣ್ಣ ತಿಳಿಸಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು…

Read More

ಕಾಂಗ್ರೆಸ್ ನವರದ್ದು ಗ್ಯಾರಂಟಿ ಕಾರ್ಡ್ ಅಲ್ಲ.ಅದು ಡ್ಯುಪ್ಲಿಕೆಟ್ ಕಾರ್ಡ್. ನಮ್ಮ ಪಂಚರತ್ನ ಯೋಜನೆಯನ್ನು ರಾಜ್ಯದ ಜನರು ಸ್ವೀಕರಿಸಿದ್ದಾರೆ. ಪಂಚರತ್ನದ ಯೋಜನೆ ಮೂಲಕ ರಾಜ್ಯದಲ್ಲಿ ರಾಮರಾಜ್ಯ ಪ್ರಾರಂಭವಾಗುವ ವಿಶ್ಲೇಷಣೆ ಶುರುವಾಗಿದೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದರು. ಮಾರ್ಚ್ 26ರಂದು ಮೈಸೂರಿನಲ್ಲಿ ಪಂಚರತ್ನ ಯಾತ್ರೆ ಸಮಾರೋಪ ಸಮಾರಂಭ ಹಿನ್ನಲೆ. ಮೈಸೂರಿನ ಉತ್ತನಹಳ್ಳಿ ಹಳ್ಳಿ ಸಮೀಪ ಭರದಿಂದ ಸಾಗಿದ ಬೃಹತ್ ವೇದಿಕೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು ಮಾಜಿ ಸಿಎಂ ಕುಮಾರಸ್ವಾಮಿ ಭೇಟಿ ನೀಡಿ ವೀಕ್ಷಣೆ ಮಾಡಿದರು. ಮಾಜಿ ಸಿಎಂ ಹೆಚ್ ಡಿಕೆಗೆ ಶಾಸಕರಾದ ಜಿ ಟಿ ದೇವೇಗೌಡ, ಸಾರಾ ಮಹೇಶ್, ಅಶ್ವಿನ್ ಕುಮಾರ್, ವಿಧಾನಪರಿಷತ್ ಸದಸ್ಯ ಮಂಜೇಗೌಡ ಸಾಥ್ ನೀಡಿದರು. ಬಳಿಕ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ. ತಾಯಿ ಚಾಮುಂಡೇಶ್ವರಿ ಎಲ್ಲರಿಗೂ ಆಶೀರ್ವಾದ ಮಾಡಲಿ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ತಾಯಿ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಪಂಚರತ್ನ ಯಾತ್ರೆಯ ಸಮಾರೋಪ ಸಮಾರಂಭ ನಡೆಯುತ್ತದೆ. ಸುಮಾರು 100 ಎಕರೆಯಲ್ಲಿ ಒಂದು ಐತಿಹಾಸಿಕ ಕಾರ್ಯಕ್ರಮ ಮಾಡಲು ಸಿದ್ಧತೆ ನಡೆದಿದೆ. ಈ…

Read More

ಕೋಲಾರದಿಂದ ಸ್ಪರ್ಧಿಸದಂತೆ ಸಿದ್ಧರಾಮಯ್ಯಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಲಹೆ ನೀಡಿದ್ದಾರೆ ಎಂಬ ಸುದ್ದಿ ಹಬ್ಬಿರುವ ಹಿನ್ನೆಲೆ ಈ ಕುರಿತು ಸ್ವತಃ ಮಾಜಿ ಸಿಎಂ ಸಿದ‍್ಧರಾಮಯ್ಯ ಅವರೇ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ ಬೆಂಬಲಿಗರನ್ನುದ್ದೇಶಿಸಿ ಮಾತನಾಡಿದ ಸಿದ್ಧರಾಮಯ್ಯ, ಕೋಲಾರದಲ್ಲಿ ಸ್ಪರ್ಧಿಸಬೇಡಿ ಎಂದು ರಾಹುಲ್ ಗಾಂಧಿ ಹೇಳಿಲ್ಲ. 1 ಪರ್ಸೆಂಟ್ ರಿಸ್ಕ್ ತೆಗೆದುಕೊಳ್ಳಬೇಡಿ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಸ್ಪರ್ಧೆ ವಿಚಾರದಲ್ಲಿ ಸುಮ್ಮನೆ ಅಪಪ್ರಚಾರ ಮಾಡುತ್ತಿದ್ದಾರೆ. ನೀವು ರಾಜ್ಯಾದ್ಯಂತ ಪ್ರವಾಸ ಮಾಡಬೇಕು ಎಂದಿದ್ದಾರೆ. ನನ್ನ ಸ್ಪರ್ಧೆ ವಿಚಾರ ವರಿಷ್ಠರ ನಿರ್ಧಾರಕ್ಕೆ ಬಿಟ್ಟಿದ್ದು ಎಂದರು. ಕೋಲಾರದ ಸ್ಪರ್ಧೆ ವಿಚಾರ ಇನ್ನೂ ಇತ್ಯರ್ಥ ಆಗಿಲ್ಲ. ರಿಸ್ಕ್ ತೆಗೆದುಕೊಳ್ಳದಂತೆ ಹೇಳಿದ್ದಾರೆ. ಚುನಾವಣಾ ಪ್ರಚಾರಕ್ಕೆ ರಾಜ್ಯದಲ್ಲಿ ಓಡಾಡಬೇಕು. ಕೋಲಾರಕ್ಕೆ ಒಂದಿನ ಪ್ರಚಾರಕ್ಕೆ ಹೋಗಬಾರದು. ಕೋಲಾರಕ್ಕೆ ಸಮಯ ಕೊಡಲು ಆಗಲ್ಲ ಎಂದಿದ್ದೆ. ಕೋಲಾರ ವಿಚಾರ ಪೆಂಡಿಂಗ್ ಇಟ್ಟಿದ್ದೇನೆ. ಆದರೆ ಕೋಲಾರದಿಂದ ಹಿಂದೆ ಸರಿದ್ರು ಎಂದು ಅಪಪ್ರಚಾರವಾಗುತ್ತಿದೆ ಎಂದು ಸಿದ್ಧರಾಮಯ್ಯ ತಿಳಿಸಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ…

Read More

ಅಪಘಾತದಲ್ಲಿ ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ತಮ್ಮ ವಾಹನದಲ್ಲಿ ಕರೆದೊಯ್ದು ಚಿಕಿತ್ಸೆ ನೀಡಲು ಸಹಕರಿಸಿದ ಶಾಸಕಿ ಡಾ ಅಂಜಲಿತಾಯಿ ಹೇಮಂತ್ ನಿಂಬಾಳ್ಕರ್ ಅಭಿವೃದ್ಧಿ ಕಾರ್ಯದಲ್ಲಿ ಅಷ್ಟೆ ಅಲ್ಲದೆ ಮಾನವಿಯತೆಯಲ್ಲೂ ಸೈಎಣಿಸಿಕೊಂಡಿದ್ದಾರೆ. ಶಾಸಕಿ ಡಾ ಅಂಜಲಿ ನಿಂಬಾಳ್ಕರ್ ಅವರು ಭೂರಣಕಿ ಗ್ರಾಮಕ್ಕೆ ಕಾರ್ಯಕ್ರಮದ ನಿಮಿತ್ತವಾಗಿ ಹೋಗುವ ಸಂದರ್ಭದಲ್ಲಿ ಹೆಬ್ಬಾಳ ಗ್ರಾಮದ ಸಮೀಪದಲ್ಲಿ ಹೆಬ್ಬಾಳ ಗ್ರಾಮದ ಮಹಿಳೆಯಾದಂತ ಪೂಂಜಾ ಹಾಗೂ ಅವರ ಗಂಡ ಮತ್ತು ಮಕ್ಕಳು ಸಂಚರಿಸುವ ಸಂದರ್ಭದಲ್ಲಿ ಅಪಘಾತಕ್ಕೆ ಒಳಗಾದ ಪೂಂಜಾ ಅವರನ್ನು ತಮ್ಮ ವಾಹನದಲ್ಲಿ ನಂದಗಡ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ನೀಡಿ ಉಪಚರಿಸಿ ಧೈರ್ಯ ತುಂಬುವ ಕೆಲಸ ಮಾಡಿದರು. ಆಸ್ಪತ್ರೆಯ ವೈದ್ಯರಿಗೆ ಬೇಗ ಚಿಕಿತ್ಸೆ ನೀಡಬೇಕು ಎಂದು ಹೇಳಿದರು. ಕ್ಷೇತ್ರದ ಜನತೆಯ ಕಷ್ಟ ಸುಖಗಳಿಗೆ ಮೊದಲು ಪ್ರಾಮುಖ್ಯತೆ ನೀಡಿದ್ದಾರೆ ಇದರಿಂದಾಗಿ ಕ್ಷೇತ್ರದ ಜನತೆಯ ಹೃದಯದಲ್ಲಿ ಡಾ ಅಂಜಲಿ ನಿಂಬಾಳ್ಕರ್ ಪ್ರೀತಿ ಗೌರವ ಸ್ಥಾನ ಪಡೆದಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್…

Read More

ಬೆಳಗಾವಿ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನರಿಗೆ ಸುಳ್ಳು ಹೇಳುತ್ತಾ ಮೋಸ ಮಾಡುತ್ತಿವೆ. ಬಿಳಿ ಕೂದಲಿನ ವ್ಯಕ್ತಿಯ ಹೆಸರು ನಾನು ಹೇಳಲು ಬಯಸುವುದಿಲ್ಲ ಯಾಕೆಂದರೆ ಇದು ಕಾಂಗ್ರೆಸ್ ಯುವ ಕ್ರಾಂತಿ ಸಮಾವೇಶ ಎಂದು ಶಾಸಕಿ ಡಾ. ಅಂಜಲಿ ನಿಂಬಾಳ್ಕರ್ ಹೇಳಿದರು. ಬೆಲೆ ಏರಿಕೆ, ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಅಲ್ಲದೆ ಗ್ರಹಣಿ ಇಂದು ಮನೆ ನಡೆಸಲು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಸಿಲೆಂಡರ್ 1200 ರೂ.ಈ ಮಟ್ಟದ ಬೆಲೆ ಏರಿಕೆ ನಾವು ಎಂದು ನೋಡಿಲ್ಲಾ. ಇವರಿಗೆ 8 ವರ್ಷಗಳ ಕಾಲ ಸರ್ಕಾರ ನಡೆಸಲು ಬಿಟ್ಟಿದ್ದೇವೆ ಇವರು ದೇಶವನ್ನು ಬಡತನಕ್ಕೆ ತಳ್ಳಿದ್ದಾರೆ , ಎಂದು ಬೆಲೆ ಏರಿಕೆಯ ಕುರಿತು ಆಕ್ರೋಶ ವ್ಯಕ್ತಪಡಿಸಿದರು. ಖಾನಾಪುರ ಕ್ಷೇತ್ರಕ್ಕೆ ಕೇಂದ್ರ ಸಚಿವರು ರಾಜನಾಥ್ ಸಿಂಗ್ ಅವರು ಸಂಗೊಳ್ಳಿ ರಾಯಣ್ಣ ಅವರ ಸಮಾಧಿಗೆ ಭೇಟಿ ನೀಡಿ ಜನ ಸಂಕಲ್ಪ ಯಾತ್ರೆ ಪ್ರಾರಂಭಿಸಿದರು. ಅವರಿಗೆ ನಾನು ಹೇಳಲು ಬಯಸುತ್ತೇನೆ ನೀವು ಚುನಾವಣೆ ಬಂದಾಗ ಮಾತ್ರ ಮಹಾಪುರುಷರ ಹಾಗೂ ಸ್ವತಂತ್ರಕ್ಕಾಗಿ ತ್ಯಾಗ ಬಲಿದಾನ…

Read More

ನಗರದ ಹೋಟೆಲ್ ಒಂದರಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಜನಸಾಮಾನ್ಯರು, ವ್ಯಾಪಾರಸ್ಥರು, ಬಿಲ್ಡರ್ , ಆತಂಕದಲ್ಲಿದ್ದಾರೆ ಸಾಮಾನ್ಯ ಜನರಿಗೆ ನ್ಯಾಯ ಕೊಡುವವರೇ ಅನ್ಯಾಯವನ್ನು ಮಾಡುತ್ತಿದ್ದಾರೆ ಆಡಳಿತ ರೂಢ ಶಾಸಕರು ತಮ್ಮ ಆಡಳಿತ ಪ್ರಭಾವ ಹಾಗೂ ಸರ್ಕಾರದ ಪ್ರಭಾವವನ್ನು ಇಲ್ಲಿ ಅಧಿಕಾರಿಗಳ ಮೂಲಕ ವ್ಯಾಪಾರಸ್ಥರು ಹಾಗೂ ಜನಸಾಮಾನ್ಯರ ಜೀವಭಯದಿಂದ ದಿನಕಳೆಯುತ್ತಿದ್ದಾರೆ ಎಂದು ಗಂಭೀರ ಆರೋಪವನ್ನು ನ್ಯಾಯವಾದಿ ಪ್ರಭು ಎಥನಟ್ಟಿ ಮಾಡಿದರು. ನಾವು ಭಾರತೀಯ ಜನತಾ ಪಕ್ಷಕ್ಕೆ ಸಹಾಯ ಮಾಡುತ್ತಾ ಬಂದಿದ್ದೆವು ಹಿಂದುತ್ವದ ಆಧಾರದ ಮೇಲೆ ನಾವು ಈ ಪಕ್ಷವನ್ನು ಬೆಂಬಲಿಸುತ್ತಾ ಇದ್ದೆವು. ಆದರೆ ಇಲ್ಲಿ ಹಿಂದುಗಳಿಗೆ ರಕ್ಷಣೆ ಇಲ್ಲ ಹಿಂದುತ್ವದ ಆಧಾರದ ಮೇಲೆ ಬರಿ ರಾಜಕೀಯ ನಡೆಯುತ್ತಿದೆ ಎಂದು ದೂರಿದರು, ಬೆಳಗಾವಿ ಎಲ್ಲಿ ಸಬ್ ರಿಜಿಸ್ಟರ್ ಒಂದೇ ಕಚೇರಿ ಇತ್ತು ಅದನ್ನು ವಿಭಾಗ ಮಾಡಿ ದಕ್ಷಿಣ ಕ್ಷೇತ್ರಕ್ಕೆ ತೆಗೆದುಕೊಂಡು ಅಲ್ಲಿ ಸಬ್ ರಿಜಿಸ್ಟರ್ ಕಚೇರಿಯನ್ನು ಪ್ರಾರಂಭಿಸಿದ್ದಾರೆ ,ಆದರೆ ನಾವು ಈ ಬೆಳವಣಿಗೆಗೆ ವಿರೋಧಿಗಳಲ್ಲ ,ನಮ್ಮ ಬೇಡಿಕೆ ಯನ್ನು ನಾವು ಕಂದಾಯ ಸಚಿವರಿಗೆ…

Read More

ಬೆಳಗಾವಿಯಲ್ಲಿ ನಡೆದ ಯುವ ಕ್ರಾಂತಿ ಸಮಾವೇಶ ಚುನಾವಣೆ ಆಕಾಂಕ್ಷಿಗಳ ನಾಯಕರುಗಳಿಗೆ ಒಂದು ಉತ್ಸಾಹ ವಾತಾವರಣವನ್ನು ಸೃಷ್ಟಿಸಿತ್ತು. ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿ ವೇದಿಕೆಯನ್ನೆರಿದ್ದೆ ತಡ ಅವರ ಬಳಿ ಹೋಗಲು ಮತ್ತು ಅವರನ್ನು ಸನ್ಮಾನಿಸಿ ಸತ್ಕರಿಸಲು ಕಾಂಗ್ರೆಸ್ ನಾಯಕರುಗಳು ತುದಿಗಾಲಮೇಲೆ ನಿಂತಿದ್ದರು. ಚುನಾವಣೆ ಅಭ್ಯರ್ಥಿ ಆಕಾಂಕ್ಷಿಗಳಂತು ನಾ ಮುಂದು ತಾ ಮುಂದು ಎಂದು ದುಂಬಾಲು ಬಿದ್ದು ಹಂಬಲಿಸುತ್ತಿದ್ದರು. ಆದರೆ ಯಾರನ್ನೂ ರಾಹುಲ್ ಗಾಂಧಿ ಅವರ ಸಮೀಪ ಬಿಡದಂತೆ ಕಣ್ಗಾವಲು ಇರಿಸಲಾಗಿತ್ತು. ಇದೆಲ್ಲರ ನಡುವೆಯೇ ಜಿಲ್ಲಾ ಕಾಂಗ್ರೆಸ್ ವತಿಯಿಂದ ವಿನಯ್ ನವಲಗಟ್ಟಿ ಹಾಗೂ ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಲಕ್ಷ್ಮಣ್ ರಾವ್ ಚಿಗಳೆ ಅವರ ಜೊತೆ ಬೆಳಗಾವಿ ದಕ್ಷಿಣ್ ಮತಕ್ಷೇತ್ರದ ಅಭ್ಯರ್ಥಿ ಆಕಾಂಕ್ಷಿ ಯಾದ ಪ್ರಭಾವತಿ ಚಾವಡಿ ವೇದಿಕೆ ಏರಿ ರಾಹುಲ್ ಗಾಂಧಿ ಅವರ ಸಮ್ಮುಖಕ್ಕೆ ಹೋಗಿದ್ದಾರೆ. ಇದು ಪ್ರೋಟೋಕೋಲ್ ಉಲ್ಲಂಘನೆ ಎಂದು ಸಾರ್ವಜನೀಕವಾಗಿ ಚರ್ಚೆಗಳಾಗುತ್ತಿವೆ. ಸ್ಥಳೀಯ ಕಾರ್ಯಕರ್ತರಲ್ಲಿ ಅಸಮಾಧಾನ ಹಾಗೂ ಆಕ್ರೋಶ ವ್ಯಕ್ತವಾಗಿದ್ದು ಕಂಡುಬಂತು ನಮಗಿಲ್ಲದ ಅವಕಾಶ ಪ್ರಭಾವತಿಗೆ ಹೇಗೆ ದೊರಕಿತು! ಎಂದು…

Read More

ಕೊರಟಗೆರೆ : 2023ರ ವಿಧಾನಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಕೂಡಾ ಏರುತ್ತಿದೆ. ಶಾಸಕ ಪಟ್ಟವನ್ನು ಪಡೆಯಲೇಬೇಕು ಎಂಬ ಮಹದಾಸೆಯಿಂದ ಪಕ್ಷದ ಹಿರಿಯ ನಾಯಕರ ಮೇಲೆ ಆಕಾಂಕ್ಷಿಗಳು ಮೇಲಿಂದ ಮೇಲೆ ಒತ್ತಡ ಹಾಕುತ್ತಿರುವುದು ಕಂಡು ಬರುತ್ತಿದೆ. ತುಮಕೂರು ಜಿಲ್ಲೆಯ ಕೊರಟಗೆರೆ ವಿಧಾನಸಭಾ ಕ್ಷೇತ್ರ ಜೆಡಿಎಸ್ ಹಾಗೂ ಕಾಂಗ್ರೆಸ್ ಭದ್ರ ಕೋಟೆಯಾಗಿದ್ದು, ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೂ ಕೂಡಾ ಪ್ರತಿಷ್ಠೆಯ ಕಣವಾಗಿದೆ. ಹೌದು, ಕೊರಟಗೆರೆ ಕ್ಷೇತ್ರದಲ್ಲಿ ಹಾಲಿ ಕಾಂಗ್ರೆಸ್ ಪಕ್ಷದ ಶಾಸಕರು ಇದ್ದು ಶತಾಯ-ಗತಾಯ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲೇ ಬೇಕು ಎಂದು ರಾಜ್ಯ ಹಾಗೂ ರಾಷ್ಟçಮಟ್ಟದ ಬಿಜೆಪಿ ನಾಯಕರು ಒಂದಿಲ್ಲೊಂದು ತಂತ್ರವನ್ನು ಹೆಣೆಯುತ್ತಿದ್ದಾರೆ. ಆದರೆ ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದಿಂದ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದ್ದು ಹಿರಿಯ ನಾಯಕರಿಗೆ ತಲೆನೋವಾಗಿ ಪರಿಣಮಿಸಿದೆ. ಆದರೆ, ಕೊರಟಗೆರೆ ಕ್ಷೇತ್ರದಿಂದ ಕೆ.ಎಂ ಮುನಿಯಪ್ಪ ರವರಿಗೆ ಟಿಕೆಟ್ ಸಿಗುವ ಸಾಧ್ಯತೆ ಹೆಚ್ಚಾಗಿದ್ದು, ಮುನಿಯಪ್ಪ ಹಾಗೂ ತಂಡ ಉತ್ತರ ಪ್ರದೇಶದ ಮುಖ್ಯಮಂತ್ರಿ…

Read More

ಕೊರಟಗೆರೆ : ಹೊಸದಾಗಿ ನಿರ್ಮಿಸಿರುವ ಕಟ್ಟಡ ಎಷ್ಟು ಸುಂದರವಾಗಿದಿಯೋ ಅಷ್ಟೇ ಸುಂದರವಾಗಿ ಇಲ್ಲಿನ ಅಧಿಕಾರಿಗಳು ಕೆಲಸ ಮಾಡಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ.ಜಿ. ಪರಮೇಶ್ವರ್ ಹೇಳಿದರು. ಅವರು ತಾಲ್ಲೂಕಿನ ಅಕ್ಕಿರಾಂಪುರ ಗ್ರಾಮದಲ್ಲಿ ನೂತನ ಗ್ರಾಮ ಪಂಚಾಯತ್ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿ ಇಲ್ಲಿ ಯಾವುದೇ ರೀತಿಯ ಭ್ರಷ್ಟಾಚಾರ ನಡೆಯಬಾರದು, ಗ್ರಾಮಸ್ಥರಿಗೆ ಮನೆ ಮುಂಜೂರು ಮಾಡುವಾಗ ಹಣ ತೆಗೆದುಕೊಳ್ಳಬಾರದು ಕಷ್ಟ ಎಂದು ನಿಮ್ಮ ಬಳಿ ಬಂದಾಗ ಅವರಿಗೆ ಸರಿಯಾದ ರೀತಿಯಲ್ಲಿ ಕೆಲಸ ಮಾಡಿಕೊಡುವುದು ನಿಮ್ಮ ಜವಾಬ್ದಾರಿಯಾಗಿದೆ. ಕಳೆದ 5 ವರ್ಷಗಳಲ್ಲಿ ಅಕ್ಕಿರಾಂಪುರ ಗ್ರಾಮ ಪಂಚಾಯತ್ ನಲ್ಲಿ 6 ಕೋಟಿ 42 ಲಕ್ಷದ ಕಾಮಗಾರಿಗಳನ್ನು ಮಾಡಿದ್ದೇವೆ. ಮುಖ್ಯಮಂತ್ರಿಯವರ ಬಳಿ ಮಾತನಾಡಿ ವಿಶೇಷವಾಗಿ ಕೊರಟಗೆರೆ ಕ್ಷೇತ್ರಕ್ಕೆ 30 ಕೋಟಿ ಹಣವನ್ನು ತಂದು ಯಾವುದೇ ಪಕ್ಷ ಭೇದವಿಲ್ಲದೆ 36 ಪಂಚಾಯಿತಿಗಳಿಗೂ ಭೇಟಿ ಕೊಟ್ಟು ಪ್ರತ್ಯೇಕವಾಗಿ 50 ರಿಂದ 60 ಲಕ್ಷ ಹಣವನ್ನು ಕೊಟ್ಟಿದ್ದೇವೆ. ಕೊರಟಗೆರೆ ತಾಲ್ಲೂಕಿನ ಸಮಗ್ರ ಅಭಿವೃದ್ಧಿಗಾಗಿ ಸುಮಾರು 2500 ಕೋಟಿ ಹಣವನ್ನು ಖರ್ಚು…

Read More

ಕಾಂಗ್ರೆಸ್ ಸೇರ್ಪಡೆ ವಿಚಾರ ಮುಗಿದ ಅಧ್ಯಾಯ ಎಂದು ಸಚಿವ ವಿ.ಸೋಮಣ್ಣ ಸ್ಪಷ್ಟನೆ ನೀಡಿದ್ದಾರೆ.ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ವಿ.ಸೋಮಣ್ಣ, ನಾನು ಡೈರೆಕ್ಟ್ ರಾಜಕಾರಣಿ, ಏನೇ ಇದ್ದರೂ ನೇರವಾಗಿ ಹೇಳುತ್ತೇನೆ. ಕಾಂಗ್ರೆಸ್ ಗೆ ಸೇರುವ ವಿಷಯ ನನ್ನ ತಲೆಯಲ್ಲೇ ಇಲ್ಲ. ಅವೆಲ್ಲಾ ಮುಗಿದ ಅಧ್ಯಾಯ ಎಂದು ತಿಳಿಸಿದರು. ಇನ್ನು ಚಾಮರಾಜನಗರ ಜಿಲ್ಲೆಯಲ್ಲಿ ಸ್ಪರ್ಧೆ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಸೋಮಣ್ಣ, ರಾಜ್ಯದ 224 ಕ್ಷೇತ್ರಗಳಲ್ಲಿ ಸೋಮಣ್ಣಗೆ ಹಲವಾರು ಕ್ಷೇತ್ರಗಳ ಪರಿಚಯ ಇದೆ. ಜಿಲ್ಲೆಯಿಂದ ಸ್ಪರ್ಧಿಸುವ ಯೋಚನೆ ಇಲ್ಲ. ಚಾಮರಾಜನಗರ ನನ್ನ ಪ್ರೀತಿಯ ಜಿಲ್ಎಲ ಹೌದು. ಆದರೆ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಪಕ್ಷ ತೀರ್ಮಾನ ಮಾಡುತ್ತದೆ ಎಂದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA

Read More