Author: admin

ಮಾರ್ಚ್ ಅಂತ್ಯದಲ್ಲಿ ಆಕಾಶದಲ್ಲಿ ಅದ್ಭುತ ದೃಶ್ಯವು ನಿಮ್ಮನ್ನು ಕಾಯುತ್ತಿದೆ. ಮಾರ್ಚ್ 28 ರಂದು, ಮನಾತ್‌ನಲ್ಲಿ ಐದು ಗ್ರಹಗಳು ಒಟ್ಟಿಗೆ ಗೋಚರಿಸುತ್ತವೆ. ಮಂಗಳ, ಶುಕ್ರ, ಬುಧ, ಗುರು ಮತ್ತು ಯುರೇನಸ್ ಗ್ರಹಗಳನ್ನು ನೋಡಬಹುದು. ಗುರುವು ಬುಧಕ್ಕಿಂತ ಪ್ರಕಾಶಮಾನವಾಗಿ ಗೋಚರಿಸುತ್ತದೆ ಎಂದು ವರದಿಯಾಗಿದೆ. ಐದು ಗ್ರಹಗಳಲ್ಲಿ ಶುಕ್ರವು ಅತ್ಯಂತ ಪ್ರಕಾಶಮಾನವಾಗಿದೆ. ಶುಕ್ರನನ್ನು ಬರಿಗಣ್ಣಿನಿಂದ ನೋಡಬಹುದು. ಇತರ ಗ್ರಹಗಳು ಸಹ ಗೋಚರಿಸುತ್ತವೆ ಆದರೆ ಶುಕ್ರನಂತೆ ಪ್ರಕಾಶಮಾನವಾಗಿಲ್ಲ. ಯುರೇನಸ್ ನೋಡಲು ಕಷ್ಟವಾಗುತ್ತದೆ. ಇದಕ್ಕೂ ಮುನ್ನ ಮಾರ್ಚ್ 1 ರಂದು ಶುಕ್ರ ಮತ್ತು ಗುರು ನೇರ ರೇಖೆಯನ್ನು ತಲುಪಿತ್ತು. ಮತ್ತು ಫೆಬ್ರವರಿಯಲ್ಲಿ, ಗುರು ಮತ್ತು ಶುಕ್ರವು ಹುಣ್ಣಿಮೆಯೊಂದಿಗೆ ನೇರ ಸಾಲಿನಲ್ಲಿದ್ದರು ಎಂಬ ಮಾಹಿತಿ  ಲಭ್ಯವಾಗಿದೆ . ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA

Read More

ಇಂದು ವಿಶ್ವ ಅರಣ್ಯ ದಿನ. ಜೀವಿಗಳ ಆರೋಗ್ಯದಲ್ಲಿ ಅರಣ್ಯಗಳ ಪಾತ್ರ ಈ ಅರಣ್ಯ ದಿನದ ಸಂದೇಶವಾಗಿದೆ. ಪ್ರತಿ ಅರಣ್ಯ ದಿನವು ಅರಣ್ಯ ಮತ್ತು ಅರಣ್ಯ ಸಂಪತ್ತನ್ನು ರಕ್ಷಿಸುವ ಮತ್ತು ಪ್ರಕೃತಿಯ ಜೀವವೈವಿಧ್ಯತೆಯನ್ನು ಸಂರಕ್ಷಿಸುವ ಮಹತ್ವವನ್ನು ನೆನಪಿಸುತ್ತದೆ. ಅರಣ್ಯಗಳು ಭೂಮಿಯ ಜೀವವೈವಿಧ್ಯದ ಮೂಲವಾಗಿದೆ. ಸುಮಾರು 1.6 ಶತಕೋಟಿ ಜನರು ಆಹಾರ, ಆಶ್ರಯ, ಶಕ್ತಿ ಮತ್ತು ಔಷಧಕ್ಕಾಗಿ ಅರಣ್ಯಗಳನ್ನು ಅವಲಂಬಿಸಿದ್ದಾರೆ, ಆದರೆ ಇಂದು ಸಂಭವಿಸುತ್ತಿರುವ ಅರಣ್ಯನಾಶದ ಪ್ರಮಾಣವು ಆತಂಕಕಾರಿಯಾಗಿದೆ. ಪ್ರತಿ ವರ್ಷ ಸರಾಸರಿ ಒಂದು ಕೋಟಿ ಹೆಕ್ಟೇರ್ ಅರಣ್ಯವನ್ನು ಕಳೆದುಕೊಳ್ಳುತ್ತಿದ್ದೇವೆ. 1990ರಿಂದಲೇ 42 ಕೋಟಿ ಹೆಕ್ಟೇರ್ ಅರಣ್ಯ ನಾಶವಾಗಿದೆ ಎಂದು ಅಂದಾಜಿಸಲಾಗಿದೆ. ಸಂಪೂರ್ಣವಾಗಿ ಕಳೆದುಹೋದ ಅಥವಾ ನಾಶವಾದ ಅರಣ್ಯ ಆವಾಸಸ್ಥಾನವನ್ನು ಮರುಸ್ಥಾಪಿಸುವುದು ಎಂದಿಗಿಂತಲೂ ಹೆಚ್ಚು ಮಹತ್ವದ್ದಾಗಿರುವ ಈ ಸಂದರ್ಭದಲ್ಲಿ ಮತ್ತೊಂದು ಅರಣ್ಯ ದಿನವು ಹಾದುಹೋಗುತ್ತದೆ. ವಿಶ್ವಸಂಸ್ಥೆಯ ನೇತೃತ್ವದಲ್ಲಿ ಪ್ರಪಂಚದಾದ್ಯಂತ ಈ ದಿನವನ್ನು ಆಚರಿಸಲಾಗುತ್ತದೆ. ಸಸಿಗಳನ್ನು ನೆಡುವುದು, ಮರಗಳ ಆರೈಕೆ ಮತ್ತು ವಿಚಾರ ಸಂಕಿರಣಗಳು ಮತ್ತು ತರಗತಿಗಳನ್ನು ಆಯೋಜಿಸುವ ಮೂಲಕ ಅರಣ್ಯ ಸಂರಕ್ಷಣೆಯನ್ನು ಖಚಿತಪಡಿಸಿಕೊಳ್ಳಲಾಗುತ್ತದೆ. ಜೀವದ…

Read More

ಕ್ರಿಮಿಯನ್ ಪರ್ಯಾಯ ದ್ವೀಪದ ಉತ್ತರದಲ್ಲಿರುವ ಧಂಕೋದಲ್ಲಿ ನಡೆದ ಸ್ಫೋಟದಲ್ಲಿ ರಷ್ಯಾದ ಕ್ರೂಸ್ ಕ್ಷಿಪಣಿಗಳು ನಾಶವಾದವು ಎಂದು ಉಕ್ರೇನ್ ಹೇಳಿದೆ. ರಷ್ಯಾದ ಕಪ್ಪು ಸಮುದ್ರದ ನೌಕಾಪಡೆಯ ಬಳಕೆಗಾಗಿ ರೈಲು ಮೂಲಕ ಸಾಗಿಸುತ್ತಿದ್ದ ಕ್ಷಿಪಣಿಗಳ ಮೇಲೆ ಸೋಮವಾರ ತಡರಾತ್ರಿ ದಾಳಿ ನಡೆದಿದೆ ಎಂದು ಸೇನಾ ಗುಪ್ತಚರ ಸಂಸ್ಥೆ ತಿಳಿಸಿದೆ. ಅನೇಕ ಕಲಿಬರ್-ಕೆಎನ್ ಕ್ರೂಸ್ ಕ್ಷಿಪಣಿಗಳನ್ನು ನಾಶಪಡಿಸಲಾಗಿದೆ ಎಂದು ಉಕ್ರೇನ್‌ನ ಮಿಲಿಟರಿ ಏಜೆನ್ಸಿಯ ಹೇಳಿಕೆ ತಿಳಿಸಿದೆ. ಕ್ಷಿಪಣಿಗಳನ್ನು ರೈಲಿನ ಮೂಲಕ ಸಾಗಿಸಲಾಯಿತು ಮತ್ತು ಜಲಾಂತರ್ಗಾಮಿ ಉಡಾವಣೆಗಾಗಿ ಉದ್ದೇಶಿಸಲಾಗಿದೆ ಎಂದು ಹೇಳಿದೆ. ಸ್ಫೋಟ ಸಂಭವಿಸಿರುವುದು ದೃಢಪಟ್ಟಿದ್ದರೂ ಉಕ್ರೇನ್ ಹೊಣೆಯೇ ಅಥವಾ ಯಾವ ಆಯುಧ ಬಳಸಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ. ಉಕ್ರೇನ್ ದಾಳಿಯ ಹಿಂದೆ ಉಕ್ರೇನ್ ಕೈವಾಡವಿದೆ ಎಂದು ದೃಢಪಡಿಸಿದರೆ ಅದು ಕ್ರೈಮಿಯಾಕ್ಕೆ ಉಕ್ರೇನ್ ಪಡೆಗಳ ಅಪರೂಪದ ಆಕ್ರಮಣವಾಗಿದೆ. , ಧನ್ಕೋಯ್ ನಗರದಲ್ಲಿ ಡ್ರೋನ್ ದಾಳಿ ನಡೆದಿದೆ ಎಂದು ರಷ್ಯಾದಿಂದ ನೇಮಕಗೊಂಡ ಗವರ್ನರ್ ಹೇಳಿದ್ದಾರೆ. ಆದರೆ ಅದು ಕ್ರೂಸ್ ಕ್ಷಿಪಣಿಗಳನ್ನು ದಾಳಿಯ ಗುರಿಯಾಗಿ ಉಲ್ಲೇಖಿಸಿಲ್ಲ.ದಾಳಿಯಲ್ಲಿ 33 ವರ್ಷದ ವ್ಯಕ್ತಿ ಗಂಭೀರವಾಗಿ…

Read More

ಬೆಂಗಳೂರು: ರಾಜ್ಯ ಸರಕಾರವು ನೂತನವಾಗಿ ಸ್ಥಾಪಿಸಿರುವ ಚಾಮರಾಜನಗರ, ಬೀದರ್, ಹಾವೇರಿ, ಹಾಸನ, ಕೊಡಗು, ಕೊಪ್ಪಳ ಮತ್ತು ಬಾಗಲಕೋಟೆ ವಿಶ್ವವಿದ್ಯಾಲಯಗಳಿಗೆ ಕುಲಪತಿಗಳನ್ನು ನೇಮಿಸಿ, ಸೋಮವಾರ ಆದೇಶ ಹೊರಡಿಸಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ತಿಳಿಸಿದ್ದಾರೆ. ಇದರಂತೆ ಬೆಂಗಳೂರು ವಿವಿ ಪತ್ರಿಕೋದ್ಯಮ ವಿಭಾಗದ ಡಾ.ಬಿ ಕೆ ರವಿ ಅವರನ್ನು ಕೊಪ್ಪಳ ವಿವಿ, ಬಾಗಲಕೋಟೆಯ ತೋಟಗಾರಿಕೆ ವಿ.ವಿ.ದ ಡಾ.ಅಶೋಕ ಸಂಗಪ್ಪ ಆಲೂರು ಅವರನ್ನು ಕೊಡಗು ವಿವಿ, ಮೈಸೂರು ವಿವಿ ಮಾನವಶಾಸ್ತ್ರ ವಿಭಾಗದ ಡಾ.ಎಂ ಆರ್‍‌ ಗಂಗಾಧರ ಅವರನ್ನು ಚಾಮರಾಜನಗರ ವಿವಿ, ಬೆಳಗಾವಿಯ ಕೆ.ಎಸ್‌.ಗೋಗಟೆ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಆನಂದ್‌ ಶರದ್‌ ದೇಶಪಾಂಡೆ ಅವರನ್ನು ಬಾಗಲಕೋಟೆ ವಿವಿ, ಕುವೆಂಪು ವಿ.ವಿ.ದ ಡಾ.ಬಿ ಎಸ್‌ ಬಿರಾದಾರ್‍‌ ಅವರನ್ನು ಬೀದರ್‍‌ ವಿವಿ, ಬಾಗಲಕೋಟೆಯ ಬಸವೇಶ್ವರ ಎಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್‌ ವಿಭಾಗದ ಡಾ.ಸುರೇಶ್‌ ಎಚ್‌ ಜಂಗಮಶೆಟ್ಟಿ ಅವರನ್ನು ಹಾವೇರಿ ವಿವಿ ಮತ್ತು ಧಾರವಾಡದ ಕರ್ನಾಟಕ ವಿ.ವಿ.ದ ನಿವೃತ್ತ ಪ್ರೊಫೆಸರ್‍‌ ಆಗಿರುವ ಡಾ.ಟಿ ಸಿ ತಾರಾನಾಥ್‌…

Read More

ಬೆಳಗಾವಿಯಲ್ಲಿ ಸೋಮವಾರ ಯುವಕ್ರಾಂತಿ ಸಮಾವೇಶದಲ್ಲಿ ಅವರು ಮಾತನಾಡುತ್ತಿದ್ದರು. ಬಿಜೆಪಿ ಸರಕಾರ 40 ಪರ್ಸೆಂಟ್ ಸರಕಾರ. ಈ ಸರಕಾರದಿಂದ ಜನರು ಬೇಸತ್ತಿದ್ದಾರೆ. ಯಾವುದರಲ್ಲಿ ನೋಡಿದರೂ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ ಎಂದು ರಾಹುಲ್ ಗಾಂಧಿ ಹೇಳಿದರು. ಕರ್ನಾಟಕದ ಸರಕಾರ ಭ್ರಷ್ಟ ಸರಕಾರ, 40 ಪರ್ಸೆಂಟ್ ಸರಕಾರ ಎಂದು ಇಲ್ಲಿನ ಗುತ್ತಿಗೆದಾರರು ಹೇಳಿದ್ದಾರೆ. ಕರ್ನಾಟಕದ ಯಾವುದೇ ಯುವಕರನ್ನು ಕೇಳಿದರೂ ಹೇಳುತ್ತಾರೆ. ಪಿಎಸ್ಐ ಹುದ್ದೆಯಲ್ಲಿ ಭ್ರಷ್ಟಾಚಾರ, ಉಪನ್ಯಾಸಕರ ಹುದ್ದೆಯಲ್ಲಿ ಭ್ರಷ್ಟಾಚಾರ, ಮೈಸೂರು ಸ್ಯಾಂಡಲ್ ನಲ್ಲಿ ಶಾಸಕರ ಮಗನ ಬಳಿಯೆ 8 ಕೋಟಿ ರೂ. ಸಿಕ್ಕಿತು. ಯಾವುದರಲ್ಲಿ ನೋಡಿದರೂ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಜನಸಾಮಾನ್ಯರ ಸರಕಾರವನ್ನು ಕರ್ನಾಟಕದ ಜನರು ಬಯಸಿದ್ದಾರೆ. ಹಾಗಾಗಿ ಈ ಬಾರಿ ಸ್ಪಷ್ಟ ಬಹುಮತದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಈ ವೇಳೆ ಮಾತನಾಡಿ, ವೇದಿಕೆಯ ಮೇಲಿರುವ ನಮ್ಮ ಪಕ್ಷದ ನಾಯಕರ ವಿಶ್ವಾಸ ನೋಡಿ ನನಗೆ ಖುಷಿಯಾಗುತ್ತಿದೆ. ಬೆಳಗಾವಿಯ 18ಕ್ಕೆ 18 ಸ್ಥಾನಗಳನ್ನೂ ಕಾಂಗ್ರೆಸ್ ಗೆಲ್ಲಬೇಕು. ಅದೇನೂ ಕಷ್ಟದ ವಿಚಾರವಲ್ಲ.…

Read More

ಬೆಳಗಾವಿ: ಬಿಜೆಪಿಯ ವಾಟ್ಸಪ್ ಯುನಿವರ್ಸಿಟಿ ಹೊಸ ಇತಿಹಾಸ ಬರೆಯಲು ಯತ್ನಿಸುತ್ತಿದೆ. ಮಹನೀಯರ ಜೀವನ ಚರಿತ್ರೆ ಬಗ್ಗೆ ಸುಳ್ಳು ಹೇಳಲು ಹೊರಟಿದೆ. ಕಾಲ್ಪನಿಕ ಕಥೆಗಳ ಮೂಲಕ ತಪ್ಪು ಸಂದೇಶವನ್ನು ರವಾನಿಸಲಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಿಜೆಪಿ ವಿರುದ್ಧ ಕಿಡಿ ಕಾರಿದ್ದಾರೆ. ನಗರದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಅಶ್ವಥ್ ನಾರಾಯಣ್ ಹಾಗೂ ಶೋಭಾ ಕರಂದ್ಲಾಜೆ ಟಿಪ್ಪು ಬಗ್ಗೆ ತಪ್ಪು ಮಾಹಿತಿ ನೀಡಲು ಹೊರಟಿದ್ದಾರೆ. ಟಿಪ್ಪು ಸಾಧನೆ ಬಗ್ಗೆ ಇತಿಹಾಸವೇ ಇದೆ. ಇದರ ಕುರಿತು ಸಾಕಷ್ಟು ಗ್ರಂಥಗಳಿವೆ. ಈಗ ಉರಿಗೌಡ, ನಂಜೇಗೌಡ ಬಗ್ಗೆ ಚಿತ್ರ ಮಾಡುತ್ತಿದ್ದಾರೆ. ಒಕ್ಕಲಿಗರ ಮತ ಸೆಳೆಯಲು ಮತ್ತು ಅವರ ಭಾವನೆಗಳಿಗೆ ಧಕ್ಕೆ ತರಲು ಬಿಜೆಪಿಯವರು ಮುಂದಾಗಿದ್ದಾರೆ. ನಿರ್ಮಲಾನಂದ ಸ್ವಾಮೀಜಿ ಇದರ ಬಗ್ಗೆ ಹೋರಾಟ ಮಾಡಬೇಕು. ಸಾಹಿತಿಗಳು, ಹೋರಾಟಗಾರರು ಹಾಗೂ ಎಲ್ಲಾ ಸಮಾಜಗಳ ಮಠಾಧೀಶರು ಇದಕ್ಕೆ ಕೈಜೋಡಿಸಬೇಕು ಎಂದರು. ಹೆಸರುಗಳನ್ನು ಬದಲಾವಣೆ ಮಾಡಲು ಸಾಧ್ಯವೇ? ಬಿಜೆಪಿಯ ವಾಟ್ಸಪ್ ಯುನಿವರ್ಸಿಟಿ ಹೊಸ ಇತಿಹಾಸ ಬರೆಯಲು ಯತ್ನಿಸುತ್ತಿದೆ. ಇದನ್ನು ಖಂಡಿಸಲು ನಿರ್ಮಲಾನಂದ ಸ್ವಾಮೀಜಿ ಸಭೆ…

Read More

ಬೆಳಗಾವಿ: ಪದವಿ ಓದಿದ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು 3 ಸಾವಿರ ರೂ. ಭತ್ಯೆ ನೀಡುವುದಾಗಿ ಕಾಂಗ್ರೆಸ್‌ ಘೋಷಿಸಿದೆ. ಬೆಳಗಾವಿಯಲ್ಲಿ ನಡೆಯುತ್ತಿರುವ ಯುವಕ್ರಾಂತಿ ಸಮಾವೇಶದಲ್ಲಿ ರಾಹುಲ್‌ ಗಾಂಧಿ ಕಾಂಗ್ರೆಸ್‌ನ 4ನೇ ಗ್ಯಾರಂಟಿಯನ್ನು ಘೋಷಿಸಿದರು. ಮುಂದೆ ಕರ್ನಾಟಕದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಪ್ರತಿ ತಿಂಗಳು ಪದವಿ ಓದಿದವರಿಗೆ ನಿರುದ್ಯೋಗ ಭತ್ಯೆಯಾಗಿ 3 ಸಾವಿರ ರೂ., ಡಿಪ್ಲೋಮಾ ಓದಿದವರಿಗೆ 1,500 ರೂ. ನೀಡಲಾಗುವುದು ಎಂದು ಕಾಂಗ್ರೆಸ್‌ ʼಯುವ ನಿಧಿʼ ಯೋಜನೆಯನ್ನು ಘೋಷಣೆ ಮಾಡಿದೆ. ಈಗಾಗಲೇ ಕಾಂಗ್ರೆಸ್‌ ಮೂರು ಗ್ಯಾರಂಟಿಯನ್ನು ಘೋಷಣೆ ಮಾಡಿದೆ. ಪ್ರತಿ ತಿಂಗಳು ಕುಟುಂಬಕ್ಕೆ 10 ಕೆಜಿ ಅಕ್ಕಿ ಉಚಿತ, 200 ಯೂನಿಟ್‌ ವಿದ್ಯುತ್‌ ಉಚಿತ, ಕುಟುಂಬದ ಓರ್ವ ಮಹಿಳೆಗೆ 2 ಸಾವಿರ ರೂ. ನೀಡಲಾಗುವುದು ಎಂದು ಕಾಂಗ್ರೆಸ್‌ ಈಗಾಗಲೇ ಘೋಷಣೆ ಮಾಡಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ:…

Read More

ತುರುವೇಕೆರೆ : ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜೆ ಡಿ ಎಸ್ ಪಕ್ಷದ ತಾಲೂಕು ಯುವ ಘಟಕದ ಅಧ್ಯಕ್ಷರಾದ ಬಾಣಸಂದ್ರ ರಮೇಶ್ ವೀರಶೈವ ಸಮಾಜದ ಮುಖಂಡರಾದ ವಿಶ್ವನಾಥ್ ರವರ ನೇತೃತ್ವದಲ್ಲಿ ಹುಲ್ಲೇ ಕೆರೆ ಗ್ರಾಮದ ವೀರಶೈವ ಯುವಕರುಗಳಾದ ಹೇಮಂತ್, ಯುವರಾಜ್, ಯಶ್ವಂತ್, ಪ್ರಜ್ವಲ್, ಮಹೇಶ್, ಜ್ಞಾನೇಶ ,ಚರಣ್ ಮತ್ತು ಕೆಲ ಯುವಕರು ಬಿಜೆಪಿ ಪಕ್ಷದ ತತ್ವ ಸಿದ್ಧಾಂತದಿಂದ ಹಾಲಿ ಶಾಸಕರ ಆಡಳಿತ ವೈಕರಿಯಿಂದ ಬೇಸತ್ತು ಮಾಜಿ ಶಾಸಕರಾದ ಎಂ.ಟಿ. ಕೃಷ್ಣಪ್ಪನವರ ಆಡಳಿತ ವೈಕರಿನ ಮೆಚ್ಚಿ ಇಂದು ಪಕ್ಷ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ವೆಂಕಟಾಪುರ ಯೋಗೀಶ್, ಹರೀಶ್ ,ಕಣತೂರು ಪ್ರಸನ್ನ ,ಆನಂದ ಮರಿಯ, ಶಶಿ, ತೊರೆಮಾವಿನಹಳ್ಳಿ ರಾಮಕೃಷ್ಣ ,ತಂಡಗ ಗ್ರಾಮ ಪಂಚಾಯತಿ ಸದಸ್ಯರಾದ ಚನ್ನಬಸವೇಗೌಡ ಇದ್ದರು. ವರದಿ: ಸುರೇಶ್ ಬಾಬು ಎಂ. ತುರುವೇಕೆರೆ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ:…

Read More

ಮುಂಬೈ: ಹುಲಿ ಮತ್ತು ಚಿರತೆಗಳ ದಾಳಿಗೆ 2022ರಲ್ಲಿ ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯಲ್ಲಿ 53 ಜನರು ಮೃತಪಟ್ಟಿದ್ದಾರೆ ಎಂದು ರಾಜ್ಯ ಅರಣ್ಯ ಸಚಿವ ಸುಧೀರ್ ಮುಂಗಂತಿವಾರ್ ತಿಳಿಸಿದ್ದಾರೆ. ಶಾಸಕ ಬಂಟಿ ಭಂಗಾಡಿಯಾ ಕೇಳಿದ ಪ್ರಶ್ನೆಗೆ ವಿಧಾನಸಭೆಯಲ್ಲಿ ಉತ್ತರಿಸಿದ ಅವರು, ಚಂದಾಪುರ ಜಿಲ್ಲೆಯೊಂದರಲ್ಲೇ ಹುಲಿಗಳ ದಾಳಿಗೆ 44 ಮಂದಿ ಹಾಗೂ ಚಿರತೆ ದಾಳಿಗೆ ಒಂಬತ್ತು ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. 2022ರಲ್ಲಿ ಚಿರತೆ, ಜಿಂಕೆ, ಕರಡಿ, ಮತ್ತು ನವಿಲುಗಳ ಸೇರಿದಂತೆ ಒಟ್ಟು 53 ವನ್ಯಜೀವಿಗಳು ಮೃತಪಟ್ಟಿವೆ. ಇವುಗಳಲ್ಲಿ 9 ಹುಲಿಗಳು ಮತ್ತು 3 ಚಿರತೆಗಳು ನೈಸರ್ಗಿಕ ಕಾರಣಗಳಿಂದ ಮೃತಪಟ್ಟಿವೆ. ಅದೇ ವರ್ಷದಲ್ಲಿ ಕನಿಷ್ಠ ಐದು ಚಿಟಾಲ್ಗಳು ಮತ್ತು ಮೂರು ಕಾಡುಹಂದಿಗಳನ್ನು ಕಳ್ಳ ಬೇಟೆಗಾರರು ಕೊಂದಿದ್ದಾರೆ ಎಂದು ಸಚಿವರು ತಿಳಿಸಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA

Read More

ವಿಜಯಪುರ : ‘ಒಂದನೇ ತರಗತಿಯಿಂದ ಎಂಟನೇ ತರಗತಿಯವರೆಗೆ ಪರಿಶಿಷ್ಟ ಜಾತಿ ಮತ್ತು ಪಂಗಡ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ವಿದ್ಯಾರ್ಥಿ ವೇತನವನ್ನು ಕೇಂದ್ರ ಸರ್ಕಾರ ರದ್ದುಪಡಿಸಿರುವುದು ದಲಿತ ವಿರೋಧಿ ಕ್ರಮ’ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ. ಕಳೆದ ವರ್ಷ ಸುಮಾರು 60 ಲಕ್ಷ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ರದ್ದು ಮಾಡಲಾಗಿದೆ. ಸುಮಾರು 2000 ಸಂಶೋಧನಾ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿಲ್ಲ. ಜೊತೆಗೆ ವಿದೇಶಗಳಿಗೆ ಹೋಗುವ ವಿದ್ಯಾರ್ಥಿಗಳಿಗೂ ವಿದ್ಯಾರ್ಥಿ ವೇತನ ನಿಲ್ಲಿಸಲಾಗಿದೆ. ಇದೆಲ್ಲವನ್ನು ಗಮನಿಸಿದರೆ ಹಿಂದುಳಿದ, ಧಾರ್ಮಿಕ ಅಲ್ಪಸಂಖ್ಯಾತ ಹಾಗೂ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಬೇಕೆನ್ನುವುದುಕೇಂದ್ರದ ಉದ್ದೇಶವಾಗಿದೆ. ಬಡವರ ಮಕ್ಕಳು ಶಿಕ್ಷಣ ಪಡೆಯದೇ ಗುಲಾಮರಾಗಬೇಕೆನ್ನುವುದು ಬಿಜೆಪಿಯ ಉದ್ದೇಶ’ ಎಂದು ದಲಿತ ಸಂಘರ್ಷ ಸಮಿತಿ(ರಿ) ಪ್ರೊ. ಬಿ. ಕೃಷ್ಣಪ್ಪನವರು ಸ್ಥಾಪಿಸಿದ. ವಿಜಯಪುರ ಜಿಲ್ಲಾ ಸಂಚಾಲಕರು ಕಂಠೀರವ ಹೊಸಮನಿ ಪತ್ರಿಕಾ ಪ್ರಕಟಣೆಯಲ್ಲಿ ಟೀಕಿಸಿದ್ದಾರೆ. ಇನ್ನು ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಉಪ…

Read More