Author: admin

ತುರುವೇಕೆರೆ: ತಾಲೂಕಿನ ಚಿಕ್ಕ ತುರುವೇಕೆರೆ ಗ್ರಾಮದ ಮಲ್ಲಾಘಟ್ಟಕೆರೆಯ ಹಳ್ಳದಿಂದ ದಬ್ಬೇಘಟ್ಟ ಹೋಬಳಿಯ 29 ಕೆರೆಗಳಿಗೆ ನೀರು ತುಂಬಿಸುವ 50 ಕೋಟಿ ರೂ ವೆಚ್ಚದ ಏತ ನೀರಾವರಿ ಯೋಜನೆಗೆ ಇಂದು ಶಾಸಕ ಮಸಾಲ ಜಯರಾಮ್ ಗುದ್ದಲಿ ಪೂಜೆ ನೆರವೇರಿಸಿದರು. ನಂತರ ಮಾತನಾಡಿದ ಶಾಸಕರು ಈ ಯೋಜನೆಯನ್ನು ಮಂಜೂರು ಮಾಡಿಸಲು ಬಹಳ ಶ್ರಮ ಪಟ್ಟಿದ್ದೇನೆ ಮೊದಲು ಸುಮಾರು 27 ಕೋಟಿ ವೆಚ್ಚದಲ್ಲಿ ಕೋಳಾಲದ ಕೆರೆಯಿಂದ ಮಾಡುವ ಯೋಜನೆಯಾಗಿತ್ತು, ಎಲ್ಲ ಅಧಿಕಾರಿಗಳ ಜೊತೆ ಮತ್ತು ಮಾಧುಸ್ವಾಮಿಯವರ ಜೊತೆ ಚರ್ಚೆ ನೆಡೆಸಿದಾಗ ಅವರ ಸೂಚನೆಯಂತೆ ಅದನ್ನು ನಿಲ್ಲಿಸಲಾಯಿತು ಅಲ್ಲಿ ಅದು ಸಾಧ್ಯವಾಗುತ್ತಿರಲಿಲ್ಲ ಬೇರೆಯ ಯೋಜನೆಯನ್ನು ತಯಾರಿಸಲು ಸೂಚನೆ ನೀಡಿದರು. ಆಗ ಚಿಕ್ಕ ತುರುವೇಕೆರೆಯ ಹಳ್ಳದಿಂದ ನೀರನ್ನು ಏತ ನೀರಾವರಿಯ ಮೂಲಕ ಬಿಗನಹಳ್ಳಿ ಹಾಗೂ ಸುತ್ತಮುತ್ತಲ ಹಳ್ಳಿಯ ಕೆರೆಗಳಿಗೆ ನೀರು ಹರಿಸಲು ತೀರ್ಮಾನಿಸಲಾಯಿತು ಇದರಂತೆ ಸುಮಾರು 50 ಕೋಟಿ ರೂಗಳ ಯೋಜನೆಯನ್ನು ಸಿದ್ಧಪಡಿಸಲಾಯಿತು. ಇದರಬಗ್ಗೆ ಮಾಜಿಶಾಸಕರು ಇಲ್ಲದ ಸಲ್ಲದ ಆರೋಪಗಳನ್ನು ಮಾಡಿ ಸರ್ಕಾರಕ್ಕೆ ಇದರಬಗ್ಗೆ ಪತ್ರ ಬರೆದು ಯೋಜನೆಯನ್ನು…

Read More

ಪ್ರಧಾನಿ ನರೇಂದ್ರ ಮೋದಿ ಅವರು ಮಂಡ್ಯಗೆ ಭೇಟಿ ನೀಡಿದ್ದ ವೇಳೆ ರೌಡಿಶೀಟರ್ ಗೆ ಕೈಮುಗಿದು ನಮಸ್ಕರಿಸಿದ್ದು ಭಾರಿ ಟೀಕೆಗೆ ಗುರಿಯಾಗಿದ್ದು ಈ ವಿಚಾರಕ್ಕೆ ಸಂಬಂಧಿಸಿದಂತೆ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಈ ಕುರಿತು ಮಾತನಾಡಿರುವ ಹೆಚ್.ಡಿ ಕುಮಾರಸ್ವಾಮಿ, ಡಾನ್ ಕ್ರಿಕೆಟ್ ಬೆಟ್ಟಿಂಗ್ ನಡೆಸುವವನಿಗೆ ಪ್ರಧಾನಿ ಮೋದಿ ತಲೆ ಬಾಗಿದ್ದಾರೆ  ಇದು ನಾಚಿಕೆಗೇಡಿನ ಸಂಗತಿ.  ಈ ದೃಶ್ಯ ನೋಡಿದ್ರೆ ಬಿಜೆಪಿಯವರ ಸ್ಥಿತಿ ಗೊತ್ತಾಗುತ್ತೆ ಎಂದು ಟೀಕಿಸಿದರು. ಪ್ರಧಾನಿ ಮೋದಿ ಬೆಂಗಳೂರು-ಮೈಸೂರು ಎಕ್ಸ್​ ಪ್ರೆಸ್ ​ವೇ ಉದ್ಘಾಟಿಸಿ ಹೋಗಿದ್ದಾರೆ. ಆದರೆ, ಮೋದಿ ಓರ್ವ ರೌಡಿ ಶೀಟರ್​ಗೆ ಕೈಮುಗಿದಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಮೋದಿ ಮಂಡ್ಯ ಹೆಲಿಪ್ಯಾಡ್‍ ಗೆ ಬಂದಿಳಿದ ವೇಳೆ ಬಿಜೆಪಿ ಮುಖಂಡರು ಸ್ವಾಗತಕೋರಿದ್ದರು. ಈ ವೇಳೆ ಬಿಜೆಪಿ ಮುಖಂಡರ ಜೊತೆ ರೌಡಿ ಶೀಟರ್ ಫೈಟರ್ ರವಿ ಸಹ ಕಾಣಿಸಿಕೊಂಡಿದ್ದು, ಮೋದಿಗೆ ಕೈ ಮುಗಿದು ಸ್ವಾಗತ ಕೋರಿದ್ದಾರೆ. ಇದಕ್ಕೆ ಮೋದಿ ಸಹ ಫೈಟರ್ ರವಿ ಎದುರು ಕೈ ಮುಗಿದು ನಿಂತಿದ್ದು, ಇದೀಗ ಬಾರಿ ಟೀಕೆಗೆ…

Read More

ರಾಜ್ಯದಲ್ಲಿ ಶೀಘ್ರದಲ್ಲೇ 11,133 ಪೌರ ಕಾರ್ಮಿಕರ ಖಾಯಂ ನೇಮಕಾತಿ ಪ್ರಕ್ರಿಯೆ ನಡೆಯುತ್ತದೆ. ನೇರಪಾವತಿ ಅಡಿಯಲ್ಲಿ ಕೆಲಸ ಮಾಡುವ ಪೌರ ಕಾರ್ಮಿಕರಿಗೆ ಮೊದಲ ಆದ್ಯತೆ ಇರುತ್ತದೆ. ಎರಡನೇ ಹಂತದಲ್ಲಿ ಮತ್ತೆ 11867 ಪೌರ ಕಾರ್ಮಿಕರ ನೇಮಕಾತಿ ಪ್ರಕ್ರಿಯೆ ನಡೆಯುತ್ತದೆ. ಇದು ಒಂದು ಐತಿಹಾಸಿಕ ತೀರ್ಮಾನವಾಗಿದೆ ಎಂದು ರಾಜ್ಯ ಸಫಾಯಿ ಕರ್ಮಾಚಾರಿ ಆಯೋಗದ ಅಧ್ಯಕ್ಷ ಕೋಟೆ ಶಿವಣ್ಣ ತಿಳಿಸಿದರು. ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಕೋಟೆ ಶಿವಣ್ಣ ಅವರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಸಭೆಯಲ್ಲಿ ಪೌರಕಾರ್ಮಿಕರ ಕುಂದುಕೊರತೆ ಆಲಿಸಿದರು. ಸಭೆಯಲ್ಲಿ ಮೈಸೂರು ಜಿಲ್ಲಾಧಿಕಾರಿ ಕೆ.ವಿ ರಾಜೇಂದ್ರ, ಪಾಲಿಕೆ ಆಯುಕ್ತ ಲಕ್ಷ್ಮಿಕಾಂತ್ ರೆಡ್ಡಿ, ಜಿಪಂ ಸಿಇಒ ಗಾಯತ್ರಿ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗಿಯಾಗಿದ್ದರು. ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೋಟೆ ಶಿವಣ್ಣ. ಬೀದರ್ ನಿಂದ ಚಾಮರಾಜನಗರ ತನಕ ಪ್ರವಾಸ ಮಾಡಿದ್ದೇನೆ. ಪೌರಕಾರ್ಮಿಕರ ಕುಂದುಕೊರತೆ ಆಲಿಸಿದ್ದೇನೆ. ಅನೇಕರು ನಮಗೆ ಸಂಬಳ ನೀಡುತ್ತಿಲ್ಲ, ಸೂಕ್ತ ಸೌಲಭ್ಯ ನೀಡುತ್ತಿಲ್ಲ ಎಂಬ ಸಮಸ್ಯೆಯನ್ನ ನನ್ನ…

Read More

ಹೆಚ್.ಡಿ.ಕೋಟೆ: ತಾಲ್ಲೂಕಿನ ಚಕ್ಕೊಡನಹಳ್ಳಿ ಗ್ರಾಮ ಹಾಗೂ ದಟ್ಟಹಳ್ಳ ರಸ್ತೆಯ ಒಂಟಿ ಮನೆಯ ಮೇಲೆ ದಾಳಿ ನಡೆಸಿದ ಪೊಲೀಸರು 900 ಗ್ರಾಂ ಗಾಂಜಾ ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಹುಣಸೂರು ವಿಭಾಗೀಯ ಅಧಿಕಾರಿ ಮಹೇಶ್, ವೃತ್ತನಿರೀಕ್ಷಕ ಸಬೀರ್ ಹುಸೇನ್, ಉಪನಿರೀಕ್ಷಕ ರಸುಲ್ ಪಾಗವಾಲೆ, ಶೇಖರಪ್ಪ, ಸಿಬ್ಬಂದಿಗಳಾದ ಮೋಹನ್ ಕಬೀರ, ರಿತೀಶ್,ಯೋಗೇಶ್,ವಿಶೇಷಪೋಲಿಸ್ ಅಧಿಕಾರಿ ಮಹದೇವ್,ಮಹಿಳಾ ಸಹಾಯಕ ಉಪನಿರೀಕ್ಷಕಿ ಶಕೀಲವತಿ,ಹಾಗೂ ಸಿಬ್ಬಂದಿ ಹಾಜರಿದ್ದರು. ಬಂಧಿತ ಆರೋಪಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ವರದಿ: ಮಲಾರ ಮಹದೇವಸ್ವಾಮಿ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA

Read More

ಸಿಡಿ ಇಟ್ಟುಕೊಂಡು ಡಿ.ಕೆ ಶಿವಕುಮಾರ್ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ. ಸಚಿವರೊಬ್ಬರಿಗೆ ಕಾಂಗ್ರೆಸ್ ಗೆ ಬರದಿದ್ದರೇ ಸಿಡಿ ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು  ರಮೇಶ್ ಜಾರಕಿಹೊಳಿ ಆರೋಪ ಕುರಿತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಪ್ರತಿಕ್ರಿಯಿಸಿದ್ದಾರೆ. ಈ ಕುರಿತು ಬಾಗಲಕೋಟೆ ಬೀಳಗಿಯಲ್ಲಿ ಮಾತನಾಡಿದ ಶಾಸಕ ಸಿ.ಟಿ ರವಿ, ಡಿ.ಕೆ ಶಿವಕುಮಾರ್ ಮತ್ತು ರಮೇಶ್ ಜಾರಕಿಹೊಳಿ ಒಂದೇ ಪಕ್ಷದಲ್ಲಿದ್ದವರು. ಕಾಂಗ್ರೆಸ್ ಹೇಗೆ ಕೆಲಸ ಮಾಡುತ್ತೆ ಎಂದು ರಮೇಶ್ ಗೆ ಗೊತ್ತಿರುತ್ತೆ. ರಮೇಶ್ ಜಾರಕಿಹೊಳಿಗೆ ಮಾಹಿತಿ ಇರಬೇಕು, ಆದರೆ ಈ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದರು. ಇನ್ನು ಮುಂದಿನ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಎಂಬ ಸಿದ್ಧರಾಮಯ್ಯ ಹೇಳಿಕೆಗೆ ಟಾಂಗ್ ನೀಡಿದ ಸಿ.ಟಿ ರವಿ, ಸಿದ್ಧರಾಮಯ್ಯ ಏನು ಹೇಳುತ್ತಾರೋ ಅದು ಆಗಲ್ಲ. ಈ ಹಿಂದೆ ಬಿಎಸ್ ವೈ ಸಿಎಂ ಆಗಲ್ಲ ಅಂದರು. ಬಿಎಸ್ ವೈ ಸಿಎಂ ಆದರು. ಮೋದಿ ಪ್ರಧಾನಿಯಾಗಲ್ಲ ಎಂದ್ರು. ಆದರೆ ಪ್ರಧಾನಿಯಾದರು. ಸಿದ್ಧರಾಮಯ್ಯ ಹೇಳಿದ್ದೆಲ್ಲಾ ಉಲ್ಟಾ ಆಗುತ್ತೆ…

Read More

ರಾಜ್ಯ ವಿಧಾನಸಭೆ ಚುನಾವಣೆಗೆ ಬಿಜೆಪಿಯಿಂದ ಟಿಕೆಟ್ ಕೊಟ್ಟರೆ ಸ್ಪರ್ಧಿಸುತ್ತೇನೆ, ಕೊಡದಿದ್ದರೆ ಇಲ್ಲ. ನಾನು ಏನು ಹೇಳಬೇಕೋ ಎಲ್ಲವನ್ನೂ ಹೇಳಿದ್ದೇನೆ.  ಕವಲುದಾರಿಗಳು ಇರುತ್ತವೆ, ನಾನೇನೂ ಸನ್ಯಾಸಿ ಅಲ್ಲ ಎಂದು ವಸತಿ ಸಚಿವ ವಿ.ಸೋಮಣ್ಣ ಮಾರ್ಮಿಕವಾಗಿ ನುಡಿದಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ವಿ.ಸೋಮಣ್ಣ, ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ನಾವೆಲ್ಲರೂ ಸ್ನೇಹಿತರು. ನಾವೆಲ್ಲ ಒಟ್ಟಿಗೆ ಕೆಲಸ ಮಾಡಿದ್ದೇವೆ. ನನಗೆ ಬಿಜೆಪಿ ಮೇಲೆ ಅಸಮಾಧಾನ ಇದೆ ಅಂತಾ ನಾನು ಹೇಳಿಲ್ಲ. ನಾನು ಪಕ್ಷ ಬಿಡುತ್ತೇನೆ ಎಂದು ಯಾವತ್ತೂ ಹೇಳಿಲ್ಲ. ಪಕ್ಷ ನನಗೆ ಕೊಟ್ಟ ಎಲ್ಲ ಜವಾಬ್ದಾರಿಗಳೆಲ್ಲವನ್ನೂ ನಿರ್ವಹಿಸಿದ್ದೇನೆ. ತುಮಕೂರು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಿದ್ದೇನೆ. ನನ್ನನ್ನು ಬೆಂಗಳೂರಿಗೆ ಮಾತ್ರ ಯಾಕೆ ಸೀಮಿತ ಮಾಡುತ್ತೀರಿ? ಎಂದು ಪ್ರಶ್ನಿಸಿದರು. ನಾನು ಮೊದಲು ಕಾಂಗ್ರೆಸ್​ ನಲ್ಲೇ ಇದ್ದೆ, ಜನತಾಪಾರ್ಟಿ, ಜನತಾದಳದಲ್ಲೂ ಕೆಲಸ ಮಾಡಿದ್ದೇನೆ. ರಾಜಕಾರಣದಲ್ಲಿ ಇವೆಲ್ಲ ಸಾಮಾನ್ಯವಾಗಿ ಇರುತ್ತವೆ. ನಾನು ಯಾವತ್ತಾದರೂ ನನ್ನ ಪುತ್ರನಿಗೆ ಟಿಕೆಟ್ ಕೇಳಿದ್ದೀನಾ? ಅವಕಾಶ, ಹಣೆಬರಹ ಇದ್ದರೆ ಮಗನಿಗೆ ಟಿಕೆಟ್ ಸಿಗುತ್ತದೆ. ಎಲ್ಲರಿಗೂ ತಮ್ಮ ಮಕ್ಕಳು…

Read More

ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೆ ಕರ್ನಾಟಕಕ್ಕೆ 941.04 ಕೋಟಿ ರೂ. ಹೆಚ್ಚುವರಿ ಅನುದಾನವನ್ನ ಕೇಂದ್ರ ಸರ್ಕಾರ ಘೋಷಿಸಿದೆ. ಎನ್. ಡಿ.ಆರ್ ಎಫ್ ಅಡಿಯಲ್ಲಿ ಕೇಂದ್ರ ಸರ್ಕಾರವು ಕರ್ನಾಟಕಕ್ಕೆ 941.04 ಕೋಟಿ ರೂ. ಹೆಚ್ಚುವರಿ ಅನುದಾನ ಘೋಷಿಸಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅಧ್ಯಕ್ಷತೆಯಲ್ಲಿ ಇಂದು ನಡೆದ ಉನ್ನತ ಮಟ್ಟದ ಸಭೆಯಲ್ಲಿ ಐದು ರಾಜ್ಯಗಳಿಗೆ ಒಟ್ಟು 1,816.162 ಕೋಟಿ ರೂ. ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. 2022ರಲ್ಲಿ ಸಂಭವಿಸಿದ ಪ್ರವಾಹ, ಭೂಕುಸಿತ, ಮೇಘಸ್ಫೋಟ ಮತ್ತಿತರ ಪ್ರಾಕೃತಿಕ ವಿಪತ್ತುಗಳನ್ನು ಗಮನದಲ್ಲಿಟ್ಟುಕೊಂಡು ಈ ಅನುದಾನ ಘೋಷಣೆ ಮಾಡಲಾಗಿದೆ. ಅಸ್ಸಾಂಗೆ 520.466 ಕೋಟಿ ರೂ, ಹಿಮಾಚಲ ಪ್ರದೇಶಕ್ಕೆ 239.3 ಕೋಟಿ ರೂ, ನಾಗಾಲ್ಯಾಂಡ್​ಗೆ 68.02 ಕೋಟಿ ರೂ. ಮೇಘಾಲಯಕ್ಕೆ 47.326 ಕೋಟಿ ರೂ, ಅನುದಾನ ಘೋಷಣೆ ಮಾಡಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL ಯೂಟ್ಯೂಬ್ ಚಾನೆಲ್ ಸಬ್ಸ್…

Read More

ಕಾಂಗ್ರೆಸ್ ಗೆ ಬರದಿದ್ದರೇ ಸಿಡಿ ಬಿಡುಗಡೆ ಮಾಡುತ್ತೇನೆ ಎಂದು ಮಂತ್ರಿಯೊಬ್ಬರಿಗೆ ಡಿ.ಕೆ ಶಿವಕುಮಾರ್ ‍ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂದು ರಮೇಶ್ ಜಾರಕಿಹೊಳಿ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿಎಂ ಬಸವರಾಜ ಬೊಮ್ಮಾಯಿ, ನಮ್ಮ ಯಾವ ಸಚಿವರೂ ಸಿಡಿ ಬೆದರಿಕೆಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ರಮೇಶ್ ಜಾರಕಿಹೊಳಿಗೆ ಮಾಹಿತಿ ಇರಬಹುದು ಇದು ಡಿಜಿಟಲ್​ ಯುಗವಾದ್ದರಿಂದ ಹೊರ ಬರುತ್ತಿರಬಹುದು. ಆದರೆ ನಮ್ಮ ಯಾವ ಮಂತ್ರಿಗಳೂ ಸಿಡಿ ಬೆದರಿಕೆಗೆ ತಲೆಕೆಡಿಕೊಳ್ಳುವುದಿಲ್ಲ ಎಂದರು. ಸಿಎಂ ತಾರತಮ್ಯದಿಂದ ಸಚಿವ ನಾರಾಯಣಗೌಡ ಪಕ್ಷ ಬಿಡುತ್ತಾರೆಂಬ ಆರೋಪ ಕುರಿತು ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ, ಇದು ಕೇವಲ ಊಹಾಪೋಹ, ಇಂತಹ ಸುಳ್ಳು ಸುದ್ಧಿಗಳ ಬಗ್ಗೆ ನಾನು ಉತ್ತರಿಸುವುದಿಲ್ಲ ಎಂದರು. ರೈತರ ಕುಟುಂಬಗಳಿಗೆ ಕೃಷಿ ಆದಾಯ ಸಾಕಾಗೋದಿಲ್ಲ. ಹಾಗಾಗಿ ರೈತರ ಕುಟುಂಬಗಳಿಗೆ ವಿದ್ಯಾ ನಿಧಿ ಯೋಜನೆ ಮಾಡಲಾಗಿದೆ. ಸಂವಿಧಾನದ ಬದ್ದವಾಗಿ ಜನರನ್ನು ಪುಸಲಾಯಿಸಲಾಗಿದೆ. ಮಹಿಳೆಯರು ಹಾಗೂ ಯುವಕರಿಗೆ ಶಿಕ್ಷಣವನ್ನು ನೀಡಬೇಕು. ಆಗ ಮಾತ್ರ ಈ ನಾಡನ್ನು ಕಟ್ಟಲು ಸಾಧ್ಯ ಎಂದು…

Read More

ಕುಕಡೊಳ್ಳಿ ಗ್ರಾಮಸ್ಥರ ಬಹು ವರ್ಷಗಳ ಬೇಡಿಕೆಯಾದ ನೂತನ ಪ್ರೌಢ ಶಾಲೆಯ ಮಂಜೂರಾತಿಗಾಗಿ ಸೋಮವಾರ ಮುಂಜಾನೆ ಗಣೇಶ ದೇವಸ್ಥಾನದಲ್ಲಿ ಕರ್ನಾಟಕ ರಾಜ್ಯದ ರಾಜ್ಯಪಾಲರಿಗೆ, ಮುಖ್ಯ ಮಂತ್ರಿಗಳಿಗೆ ಹಾಗೂ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ಗಳಿಗೆ ರಕ್ತದಿಂದ ಗ್ರಾಮಸ್ಥರು ಮನವಿ ಬರೆದು ಕರ್ನಾಟಕ ಸರ್ಕಾರದ ಮುಖ್ಯ ಮಂಂತ್ರಿಗಳಾದ ಬಸವರಾಜ ಬೊಮ್ಮಾಯಿ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರಾದ ಬಿ ಸಿ ನಾಗೇಶ ಮತ್ತು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರಿಗೆ,ಪೋಸ್ಟ ಮುಖಾಂತರ ರಕ್ತದ ಮೂಲಕ ಮನವಿ ಕಳಿಸಲಾಯಿತು. ಇದೇ ಸಂದರ್ಭದಲ್ಲಿ ಗ್ರಾಮದ ಶಿಕ್ಷಣ ಪ್ರೇಮಿಗಳು, ಪಾಲಕರು ಯುವಕರು, ಸಂಘ ಸಂಸ್ಥೆಗಳ ಸರ್ವ ಸದಸ್ಯರು ಪಕ್ಷಾತೀತವಾಗಿ ಪಾಲ್ಗೊಂಡು ಗ್ರಾಮಸ್ಥರು ರಕ್ತದಲ್ಲಿ ಮನವಿ ಸಲ್ಲಿಸಲಿದರು. ಇದೆ ಸಮಯದಲ್ಲಿ ಗ್ರಾಮದ ಯುವಕರಾದ ಮಾರುತಿ ಸಾರಾವರಿ, ವಿಠ್ಠಲ ಬಡಸ, ರಮೇಶ ಲಕಮೋಜಿ,ಪುಂಡಲಿಕ ರಜಪೂತ,ಕಿರಣ ಹಟ್ಟಿ, ಶ್ರೀಕಾಂತ ಹಟ್ಟಿ , ಬಾಬು ಲಕಮೋಜಿ, ಬಸ್ಸು ಗಾಡಿಕೊಪ್ಪ,ರಾಮಕೃಷ್ಣ ವಡ್ಡಿನ , ತುಕಾರಾಮ ಹಟ್ಟಿ, ವಿಜಯ ವಡ್ಡಿನ. ಸೇರಿದಂತೆ ಕುಕಡೊಳ್ಳಿ ಗ್ರಾಮಸ್ಥರು ಪಕ್ಷಾತೀತವಾಗಿ…

Read More

ಬೆಳಗಾವಿ ನಗರದಲ್ಲಿ ಇಂದು ಬೆಳಗಾವಿ ವಾರ್ಡ್ ಸಮಿತಿ ಬಳಗ ವತಿಯಿಂದ ಸುದ್ದಿಗೋಷ್ಠಿ ನಡೆಸಿ ಪ್ರತಿ ವಾರ್ಡಿಗೆ ಒಂದು ವಾರ್ಡ್ ಕಮಿಟಿ ಮಾಡಬೇಕೆಂದು ವಾರ್ಡ್ ಸಮಿತಿ ಬಳಗದಿಂದ ಪ್ರಾದೇಶಿಕ ಆಯುಕ್ತರು ಬೆಳಗಾವಿ ಅವರಿಗೆ ಮನವಿ ನೀಡಿದ್ದೇವೆ ಕೆ ಎಂ ಸಿ ಕಾಯ್ದೆ 1976 ,ಸೆಕ್ಷನ್ 13ರ ಪ್ರಕಾರ, ಸಂವಿಧಾನಾತ್ಮಕವಾಗಿ ಶಾಸನತ್ಮಕವಾಗಿ ಮಹಾನಗರ ಪಾಲಿಕೆ ಅಡಿಯಲ್ಲಿ ಕಾನೂನಾತ್ಮಕವಾಗಿ ಕಡ್ಡಾಯವಾಗಿ ವಾರ್ಡ್ ಸಮಿತಿಗಳು ರಚನೆ ಮಾಡಬೇಕಾಗಿದೆ ಎಂದು ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಬಿ ಬಿ ಎಂ ಪಿ ಬೆಂಗಳೂರು,ಹುಬ್ಬಳ್ಳಿ ಧಾರವಾಡ, ಮಂಗಳೂರು, ಹಾಗೂ ಕಲ್ಬುರ್ಗಿ, ಮಹಾನಗರ ಪಾಲಿಕೆಗಳಲ್ಲಿ ವಾರ್ಡ್ ಕಮಿಟಿಗಳನ್ನು ರಚನೆ ಮಾಡಲು ಪ್ರಾರಂಭಿಸಿದ್ದಾರೆ ಆದರೆ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಇನ್ನೂ ಇದರ ಪ್ರಕ್ರಿಯೆ ಪ್ರಾರಂಭವಾಗಿಲ್ಲ. ಅದರ ಸಲುವಾಗಿ ವಾರ್ಡ್ ಕಮಿಟಿ ಬಳಗವತಿಯಿಂದ ಮಹಾನಗರ ಪಾಲಿಕೆ ಆಯುಕ್ತರಿಗೆ ಜಿಲ್ಲಾಧಿಕಾರಿಗಳಿಗೆ ಹಾಗೂ ಪ್ರಾದೇಶಿಕ ಆಯುಕ್ತರಿಗೆ ಮನವಿ ಸಲ್ಲಿಸಿದ್ದೇವೆ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಅರವಿಂದ್ ಕುಲಕರ್ಣಿ ವಾರ್ಡ್ ಕಮಿಟಿ ಕುರಿತು ಮಾಹಿತಿ ನೀಡಿದರು. ಇದು ಪ್ರತಿಯೊಂದು ವಾರ್ಡಿನಲ್ಲಿ ನಾಗರಿಕ…

Read More