Author: admin

ತುರುವೇಕೆರೆ: ತಾಲೂಕಿನ ಮಾಯಸಂದ್ರ ಮಾಯಸಂದ್ರ ಗ್ರಾಮ ಹಾಗೂ ಕೋಡಿ ನಾಗಸಂದ್ರ ಟಿ ಬಿ ಕ್ರಾಸ್ನ ಇಪ್ಪತ್ತಕ್ಕೂ ಹೆಚ್ಚು ಕೆಲವು ಮುಸ್ಲಿಂ ಯುವಕರು.ಕಾಂಗ್ರೆಸ್ ಪಕ್ಷವನ್ನು ತೊರೆದು ಜೆಡಿಎಸ್ ಪಕ್ಷಕ್ಕೆ ಜೆಡಿಎಸ್ ಮುಖಂಡರಾದ ಬಾಣಸಂದ್ರ ರಮೇಶ್ ಅವರ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ಸೋಮಶೇಖರ್ ಟಿ ಬಿ ಕ್ರಾಸ್, ಸಾಬೀರ್, ಮುಬಾರಕ್, ಮುಸಾಹಿಫ್, ಅಹಮದ್, ಖುರೇಶಿ, ಹಾಸಿಫ್ ,ನವಾಜ್, ಹರ್ಷದ್, ಜುಬೇರ್, ಮುಜೀಬ್, ನೇಮಥ್, ಸದ್ದಾಂ  ,ಜಲಾಲ್, ಇನ್ನು ಅನೇಕ ಜೆಡಿಎಸ್ ಮುಖಂಡರು ಹಾಜರಿದ್ದರು. ವರದಿ: ಸುರೇಶ್ ಬಾಬು ಎಂ. ತುರುವೇಕೆರೆ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1 ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA

Read More

ಹೆಚ್.ಡಿ.ಕೋಟೆ: ಇಂದು ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಜಾತ್ಯಾತೀತ ಜನತಾದಳ  ವತಿಯಿಂದ ನಾಡು ಕಂಡ ಅಪ್ರತಿಮ ರಾಜಕಾರಣಿ ಆರ್.ಧ್ರುವನಾರಾಯಣ್ ರವರಿಗೆ ಶ್ರದ್ಧಾಂಜಲಿ ಸಭೆ ನಡೆಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ, ನಾನು ಮತ್ತು ಧ್ರುವನಾರಾಯಣ್ ರವರು ಅತ್ಯಂತ ಆತ್ಮೀಯವಾಗಿ ಇದ್ದೆವು. ಇಬ್ಬರೂ ಜೊತೆಯಾಗಿ ಕೆಲಸ ಮಾಡಿದ್ದೆವು. ಆದರೆ ಕಳೆದ ಒಂಬತ್ತು ವರ್ಷದಿಂದ ಅವರ ನನ್ಮ ಸ್ನೇಹ ಮುರಿದ್ದಿತ್ತು, ಆದರೆ ಯಾವತ್ತೂ ನೇರ ನೇರ ನಿಂತು ಜಗಳವಾಗಲಿ. ಮಾತುಕತೆಯಾಗಲಿ ಇರಲಿಲ್ಲ. ಧ್ರುವನಾರಾಯಣ್ ರವರು ಯಾವುದೇ ವೇದಿಕೆಯಲ್ಲಿ ಅಥವಾ ಕಾರ್ಯಕ್ರಮದಲ್ಲಿಯಾಗಲಿ ನನ್ನ ಬಗ್ಗೆ ಕೆಟ್ಟದಾಗಿ ಅಥವಾ ನನ್ನ ವಿರೋಧವಾಗಿ ಮಾತನಾಡಲಿಲ್ಲ.  ಇಂತಹ ಸಹೃದಯ ವ್ಯಕ್ತಿ ಇಂದು ನಮ್ಮ ನಡುವೆ ಇಲ್ಲದಿರುವುದು ನೋವಿನ ಸಂಗತಿ ಎಂದರು. ಈ ಸಂದರ್ಭದಲ್ಲಿ ರಾಜೇಂದ್ರ,ಗೋಪಾಲಸ್ವಾಮಿ, ಚಾ.ನಂಜುಂಡ ಮೂರ್ತಿ, ಫಿಸ್ ಸಲೀಮ್ ತಾರಕ ಮನ್ಸೂರ್, ಮಂಚಯ್ಯ, ಕಡಕೊಳ ನಾಗರಾಜು,  ಧ್ರುವನಾರಾಯಣ ಅಭಿಮಾನಿಗಳು ಹಾಜರಿದ್ದರು. ವರದಿ: ಮಲಾರ ಮಹದೇವಸ್ವಾಮಿ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್…

Read More

ಸರಗೂರು: ಬೆಳೆಯುವ ಮಕ್ಕಳ ಪೌಷ್ಟಿಕಾಂಶ ಹೀರಿ ಬೆಳೆಯುವ ಜಂತು ಹುಳಗಳ ನಿವಾರಣೆಗಾಗಿ ಅಲ್ಪೆಂಡಝೋಲ್‌ ಮಾತ್ರೆ ಪ್ರತಿಯೊಬ್ಬ ವಿದ್ಯಾರ್ಥಿಗಳು ಸೇವಿಸುವಂತೆ ಶಿಕ್ಷಕರು ನೋಡಿಕೊಳ್ಳಬೇಕು ಎಂದು ವೈದ್ಯಾಧಿಕಾರಿ ಪಾರ್ಥ ಸಾರಥಿ ಹೇಳಿದರು. ತಾಲ್ಲೂಕಿನ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರರಂದು ಸಮುದಾಯ ಆರೋಗ್ಯ ಕೇಂದ್ರ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹಯೋಗದೊಂದಿಗೆ ನಡೆದ ರಾಷ್ಟ್ರೀಯ ಜಂತುಹುಳ ನಿವಾರಣಾ ಕಾರ್ಯಕ್ರಮದ ಉದ್ಘಾಟಿಸಿ ಅವರು ಮಾತನಾಡಿದರು. ಬಯಲು ಶೌಚದಿಂದಾಗಿ, ಬರಿಗಾಲಿನಲ್ಲಿನಡೆದಾಗ ಹಾಗೂ ಕಲುಷಿತ ಕೈಗಳಿಂದ ಆಹಾರ ಸೇವನೆ ಮಾಡುವುದರಿಂದ ಜಂತು ಹುಳುಗಳು ದೇಹದೊಳಗೆ ಪ್ರವೇಶಿಸಿ ಕರುಳಿನಲ್ಲಿವಾಸಿಸುವ ಜೀವಿಗಳಾಗಿ ಬೆಳೆಯುತ್ತದೆ. ಇವುಗಳು ಮಕ್ಕಳಲ್ಲಿನ ಪೌಷ್ಠಿಕಾಂಶ ಹೀರುವುದರಿಂದ ರಕ್ತ ಹೀನತೆ ಉಂಟು ಮಾಡಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಶಾಲೆಯ ಮಕ್ಕಳಲ್ಲಿನ ಕಲಿಕಾ ಸಾಮರ್ಥ್ಯ ಮತ್ತು ಆರೋಗ್ಯ ಸುಧಾರಿಸುವ ನಿಟ್ಟಿನಲ್ಲಿಜಂತು ಹುಳುಗಳು ದೇಹದೊಳಗೆ ಪ್ರವೇಶಿಸದಂತೆ ಮುನ್ನಚ್ಚರಿಕೆ ವಹಿಸಿ ಎಂದು ಸಲಹೆ ನೀಡಿದರು. ಹಿಂದೆ ಬಹುತೇಕ ಮಕ್ಕಳಲ್ಲಿಪೂರ್ವ ಕಾಲದಲ್ಲಿಜಂತು ಹುಳು ಸಮಸ್ಯೆ ಕಾಣುತ್ತಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿಆ ಸಮಸ್ಯೆ…

Read More

ತುರುವೇಕೆರೆ: ತಾಲೂಕಿನಲ್ಲಿ ನಾಳೆ  14ನೇ ಮಂಗಳವಾರ ಮೊಟ್ಟಮೊದಲ ಬಾರಿಗೆ ಇತಿಹಾಸದಲ್ಲೇ ತುರುವೇಕೆರೆ ಪಟ್ಟಣದ ಗುರುಭವನದ ಆವರಣದಲ್ಲಿ ಮಾಜಿ ಶಾಸಕರಾದ ಎಂ ಟಿ ಕೃಷ್ಣಪ್ಪನವರ ನೇತೃತ್ವದಲ್ಲಿ ಅಲ್ಪಸಂಖ್ಯಾತರ ಸಮಾವೇಶ ನಡೆಯಲಿದೆ. ಈ ಸಮಾವೇಶಕ್ಕೆ ರಾಜ್ಯಾಧ್ಯಕ್ಷರಾದ ಸಿಎಂ ಇಬ್ರಾಹಿಂ, ಕಾರ್ಯಾಧ್ಯಕ್ಷೆ ನಜ್ಮಾ ನಜೀರ್, ನೌಶಿದ್ದು ಖಾನ್, ಇನ್ನು ಅನೇಕ ರಾಜ್ಯಮಟ್ಟದ ಜಿಲ್ಲಾಮಟ್ಟದ ಜೆಡಿಎಸ್ ಮುಖಂಡರುಗಳು ಆಗಮಿಸಲಿದ್ದು, ಈ ಸಮಾವೇಶ ನಮ್ಮ ತಾಲೂಕಿನಲ್ಲಿರುವ 80 ಹಳ್ಳಿಯಿಂದ ನಮ್ಮ ಪಕ್ಷದ ಮುಖಂಡರುಗಳು ಕಾರ್ಯಕರ್ತರನ್ನು ಕರೆತಂದು, ರಾಜ್ಯಾಧ್ಯಕ್ಷರು ಬರುವ ಹಿನ್ನೆಲೆಯಲ್ಲಿ ಸಂಘಟನೆಗೆ ಒತ್ತುಕೊಟ್ಟು ಚುನಾವಣೆ ಹತ್ತಿರವಿರುವುದರಿಂದ ನಮ್ಮ ಪಕ್ಷಕ್ಕೆ ಅನುಕೂಲವಾಗುತ್ತದೆ, ಹಾಗಾಗಿ ಮೊಟ್ಟ ಮೊದಲನೇ ಬಾರಿಗೆ ನಮ್ಮ ತಾಲೂಕಿನಲ್ಲಿ ಅಲ್ಪಸಂಖ್ಯಾತರ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ತಾಲೂಕು ಅಲ್ಪಸಂಖ್ಯಾತರ ಅಧ್ಯಕ್ಷ ಜಫ್ರುಲ್ಲಾ ಖಾನ್ ಹೇಳಿದರು , ಇದೆ ವೇಳೆಯಲ್ಲಿ ಜೆಡಿಎಸ್ ಪಕ್ಷದ ಕಾರ್ಯಕರ್ತರಾದ ನಯಾಜ್, ಅಸ್ಲಾಂ, ಯಾಸಿನ್, ನಯಾಜ್ ಪಾಶ, ಫಯಾಜ್, ಹಾದಿಲ್, ವಸಿಂ, ಜಾಕೀರ್, ಇನ್ನು ಅನೇಕ ಕಾರ್ಯಕರ್ತರು ಹಾಜರಿದ್ದರು. ವರದಿ: ಸುರೇಶ್ ಬಾಬು ಎಂ. ತುರುವೇಕೆರೆ ನಮ್ಮತುಮಕೂರು.ಕಾಂನ…

Read More

ಬೆಳಗಾವಿ: ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರ ಶ್ರಮ ಸಾರ್ಥಕವಾಗಿದೆ. ರಾಜಹಂಸಗಡವನ್ನು ದೊಡ್ಡ ಧಾರ್ಮಿಕ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಬೇಕೆನ್ನುವ ಅವರ ಕನಸು ನನಸಾಗಿದೆ. ನವೀಕೃತ ಸಿದ್ಧೇಶ್ವರ ಮಂದಿರ ಮತ್ತು ಛತ್ರಪತಿ ಶಿವಾಜಿ ಮೂರ್ತಿ ಉದ್ಘಾಟನೆಯಾಗಿ ಒಂದೇ ವಾರದಲ್ಲಿ ರಾಜಹಂಸಗಡ ದೊಡ್ಡ ಮಟ್ಟದಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಭಾನುವಾರ ಒಂದೇ ದಿನ 10 ಸಾವಿರಕ್ಕಿಂತ ಹೆಚ್ಚು ಪ್ರವಾಸಿಗರು ಆಗಮಿಸಿ, ಅಭಿವೃದ್ಧಿ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು. ಲಕ್ಷ್ಮೀ ಹೆಬ್ಬಾಳಕರ್ ಶಾಸಕರಾದ ದಿನದಿಂದಲೇ ರಾಜಹಂಸಗಡ ಕೊಟೆಯನ್ನು ಪರಿಪೂರ್ಣ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಬೇಕೆನ್ನುವ ಕನಸು ಹೊತ್ತಿದ್ದರು. ಅಲ್ಲಿ ರಾಷ್ಟ್ರದಲ್ಲೇ ಭವ್ಯವಾದ ಛತ್ರಪತಿ ಶಿವಾಜಿ ಮೂರ್ತಿ ಪ್ರತಿಷ್ಠಾಪಿಸಬೇಕೆನ್ನುವ ಗುರಿ ಇಟ್ಟುಕೊಂಡು ಕೆಲಸ ಮಾಡಿದರು. ಯಾವ ಅಡ್ಡಿ, ಆತಂಕಕ್ಕೂ ಬಗ್ಗದೆ ನಿರಂತರ ಪ್ರಯತ್ನ ಮಾಡಿ ಯಶಸ್ವಿಯಾದರು. ಮಾರ್ಚ್ 5ರಂದು ನವೀಕೃತ ಸಿದ್ದೇಶ್ವರ ಮಂದಿರ ಮತ್ತು ಬೃಹತ್ ಛತ್ರಪತಿ ಶಿವಾಜಿ ಮೂರ್ತಿ ಶಾಸ್ತ್ರೋಕ್ತವಾಗಿ ಉದ್ಘಾಟನೆಯಾಯಿತು. ಉದ್ಘಾಟನೆಯ ದಿನವೇ ಒಂದೂವರೆ ಲಕ್ಷಕ್ಕಿಂತ ಹೆಚ್ಚು ಜನರು ಆಗಮಿಸಿ, ಹರ್ಷೋದ್ಘಾರಗೈದಿದ್ದರು. ಅಲ್ಲಿಂದ ಪ್ರತಿನಿತ್ಯ 2 -3 ಸಾವಿರ ಪ್ರವಾಸಿಗರು…

Read More

ಬೆಳಗಾವಿ ನಗರ ಕನ್ನಡ ಸಾಹಿತ್ಯ ಭವನದಲ್ಲಿ ಇಂದು ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಕನ್ನಡಪರ ಹೋರಾಟಗಾರರು ಜಾತ್ಯತೀತ ಜನತಾದಳವನ್ನು ಶಂಕರಗೌಡ ಪಾಟೀಲ್ ಅವರ ಸಮ್ಮುಖದಲ್ಲಿ ಪಕ್ಷವನ್ನು ಸೇರಿದರು. ಶಂಕರಗೌಡ ಪಾಟೀಲ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಬೆಳಗಾವಿ ಜಿಲ್ಲೆ ಯಲ್ಲಿ ಶಕ್ತಿ ಹೀನವಾಗಿರುವ ಜೆ ಡಿಎಸ್ ಪಕ್ಷವನ್ನುತಳ ಮಟ್ಟದಿಂದ ಕಟ್ಟುತ್ತೇವೆ ಮತ್ತೆ ಜಿಲ್ಲೆಯಲ್ಲಿ ಜೆ ಡಿ ಎಸ್ ಅಸ್ತಿತ್ವದಲ್ಲಿ ಬರಲಿದೆ. ಅದಕ್ಕಾಗಿ ಗ್ರಾಮೀಣ ಮಟ್ಟದಲ್ಲಿ ಕಾರ್ಯಕರ್ತರನ್ನು ಜಾಗೃತಗೊಳಿಸುತ್ತಾ ಹಳೆ ಕಾರ್ಯಕರ್ತರನ್ನು ಹಾಗೂ ಹೊಸದಾಗಿ ಸದಸ್ಯತ್ವ ನಿಡುತ್ತಾ ಪಕ್ಷಕ್ಕೆ ಸೇರ್ಪಡೆ ಮಾಡುತ್ತಾ ಇದ್ದೇವೆ. ಅದರ ಭಾಗವಾಗಿಯೇ ಕನ್ನಡಪರ ಸಂಘಟನೆಗಳು ಮತ್ತು ಕನ್ನಡಪರ ಹೋರಾಟಗಾರರು ಜೆ ಡಿ ಎಸ್ ಪಕ್ಷವನ್ನು ಸೇರಿದ್ದಾರೆ. ಪಕ್ಷ ಬಲಿಷ್ಠ ಗೊಳ್ಳಲಿದೆ ಸ್ವಂತ ಬಲದಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಾನು ಹಲವಾರು ವರ್ಷಗಳಿಂದ ಸಮಾಜ ಸೇವೆ ಹಾಗೂ ಕನ್ನಡಪರ ಹೋರಾಟಗಾರರಾಗಿ ನಾನು ತೊಡಗಿಸಿಕೊಂಡಿದ್ದೇನೆ ಈಗ ಜಾತ್ಯತೀತ ಜನತಾದಳದ ಗ್ರಾಮೀಣ ಕ್ಷೇತ್ರದ ಅಭ್ಯರ್ಥಿ ಆಕಾಂಕ್ಷಿಯಾಗಿದ್ದೇನೆ. ನಮ್ಮ ನಾಯಕರಗಳಾದ ವಿವೇಕ್ ರಾವ್…

Read More

ಬೆಳಗಾವಿ: ವಿಧಾನ ಸಭಾ ಚುನಾವಣೆ ಘೋಷಣೆಗೆ ದಿನಗಣನೆ ಆರಂಭವಾಗಿದೆ. ಯಾವುದೇ ಕ್ಷಣದಲ್ಲಿ ಚುನಾವಣೆ ಆಯೋಗ ನೀತಿಸಂಹಿತೆ ಜಾರಿಗೊಳಿಸಬಹುದು ಎಂದು ಎಲ್ಲ ರಾಜಕಾರಣಿಗಳು ಕಾಯುತ್ತಿದ್ದಾರೆ. ಆದರೆ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಮಾತ್ರ ಅಭಿವೃದ್ಧಿ ಯೋಜನೆಗಳ ಸರಣಿ ಇನ್ನೂ ನಿಂತಿಲ್ಲ. ಮಳೆಗಾಲದ ಮಳೆಯಂತೆ ನಿರಂತರವಾಗಿ ಶಂಕುಸ್ಥಾಪನೆ ಇಲ್ಲವೇ ಉದ್ಘಾಟನೆ ಕಾರ್ಯಕ್ರಮಗಳು ಮುಂದುವರಿದಿವೆ. ಕ್ಷೇತ್ರಕ್ಕೆ ಸಾವಿರಾರು ಕೋಟಿ ರೂ.ಗಳ ಯೋಜನೆಗಳನ್ನು ತಂದಿರುವ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್, ಚುನಾವಣೆ ಅಧಿಸೂಚನೆ ಜಾರಿಗೊಳ್ಳುವ ಮುನ್ನ ಎಲ್ಲ ಕಾಮಗಾರಿಗಳಿಗೆ ಚಾಲನೆ ನೀಡುವ ತವಕದಲ್ಲಿದ್ದಾರೆ. ಶಾಸಕರಾಗಿ ಆಯ್ಕೆಯಾದ ದಿನದಿಂದಲೂ ಅವರು ಅವಿಶ್ರಾಂತವಾಗಿ ಯೋಜನೆಗಳನ್ನು ತಂದು ಚಾಲನೆ ನೀಡುತ್ತಲೇ ಇದ್ದಾರೆ. ಭಾನುವಾರ ಸಹ ಲಕ್ಷ್ಮೀ ಹೆಬ್ಬಾಳಕರ್ ಮತ್ತು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹಲವು ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ಇನಾಂ ಬಡಸ್ ಗ್ರಾಮದ ಸರ್ಕಾರಿ ಹಿರಿಯ ಮರಾಠಿ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಹೊಸ ಕೊಠಡಿಯನ್ನು ಲಕ್ಷ್ಮೀ ಹೆಬ್ಬಾಳಕರ್ ಉದ್ಘಾಟಿಸಿದರು. ಈ ಸಮಯದಲ್ಲಿ ಗ್ರಾಮದ ಹಿರಿಯರು, ಮೇದಾರ್,…

Read More

ಗೋಕಾಕ್ : “ಮಾ. 15ರಂದು ಗೋಕಾಕನಲ್ಲಿ ಪ್ರಜಾಧ್ವನಿ ಸಮಾವೇಶ ಆಯೋಜಿಸಲಾಗಿದ್ದು, ವಿಪಕ್ಷ ನಾಯಕ ಸಿದ್ದರಾಮಯ್ಯನವರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಕಾಂಗ್ರೆಸ್‌ ಹಲವು ಗಣ್ಯರು ಆಗಮಿಸುತ್ತಿದ್ದಾರೆ” ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಹೇಳಿದರು. ನಗರದ ಹಿಲ್‌ ಗಾರ್ಡನ್‌ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2023ರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಈಗಾಗಲೇ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ 1ನೇ ಹಂತದಲ್ಲಿ ಪ್ರಜಾಧ್ವನಿ ಯಾತ್ರೆ ಯಶಸ್ಸಿಯಾಗಿ ನಡೆಸಲಾಗಿದ್ದು, 2ನೇ ಹಂತದ ಯಾತ್ರೆಯನ್ನು ವಿಧಾನಸಭಾ ಕ್ಷೇತ್ರವಾರು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು. ಪ್ರಜಾಧ್ವನಿ ಯಾತ್ರೆಯಲ್ಲಿ ಘೋಷಿಸಿದ ಯೋಜನೆಗಳನ್ನು ಮನೆ ಮನೆಗೆ ತಿಳಿಸಲಾಗುವುದು, ಇನ್ನು ಅನೇಕ ಯೋಜನೆಗಳನ್ನು ಘೋಷಿಸಲಾಗುವುದು, ಇದರಲ್ಲಿ ಜಿಲ್ಲಾವಾರು ಯೋಜನೆಗಳು ಹಂಚಿಕೆಯಾಗಿವೆ. ಜನ ಆಶೀರ್ವಾದ ಮಾಡಿದರೆ ಈ ಎಲ್ಲ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುತ್ತೇವೆ ಎಂದು ಹೇಳಿದರು ಪಕ್ಷಾಂತರ ಪರ್ವ ಸಹಜ: ಚುನಾವಣೆ ಬಂದಾಗ ಪಕ್ಷಾಂತರ ಪರ್ವ ಸಹಜವಾಗಿದೆ. ಬಿಜೆಪಿ ಆಡಳಿತ ಅವಧಿಯಲ್ಲಿ ಬೆಲೆ ಏರಿಕೆಯಿಂದ ಜನರು ತತ್ತರಿಸಿಹೋಗಿದ್ದಾರೆ. ಹೀಗಾಗಿ ಬಿಜೆಪಿ ತೊರೆದು ಕಾಂಗ್ರೆಸ್‌ನತ್ತ ಒಲವು ತೋರುತ್ತಿದ್ದಾರೆ. ಮತದಾರರು…

Read More

ದೇಶದ ಅತಿದೊಡ್ಡ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ ದೇಶದಲ್ಲಿ ತನ್ನ 5G ಸೇವೆಗಳನ್ನು ವೇಗವಾಗಿ ವಿಸ್ತರಿಸುತ್ತಿದೆ. ರಿಲಯನ್ಸ್ ಜಿಯೋ 749 ಮತ್ತು 899 ರೂಗಳ ಬೆಲೆಯ ಈ ಜಿಯೋ ಪ್ರಿಪೇಯ್ಡ್ ಯೋಜನೆಯು ಅನಿಯಮಿತ ಕರೆ ಮತ್ತು ಡೇಟಾ ಪ್ರಯೋಜನಗಳನ್ನು ಸುಮಾರು 3 ತಿಂಗಳ ಮಾನ್ಯತೆಯೊಂದಿಗೆ ಬರುತ್ತದೆ. ಜಿಯೋ ರೂ 899 ಯೋಜನೆ ರಿಲಯನ್ಸ್ ಜಿಯೋದ ಜನಪ್ರಿಯ ಯೋಜನೆಗಳಲ್ಲಿ ಒಳಗೊಂಡಿರುವ ಈ ಯೋಜನೆಯು 90 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಇದರಲ್ಲಿ ಕಂಪನಿಯು ಅನಿಯಮಿತ ಕರೆ, ದೈನಂದಿನ ಡೇಟಾ ಮತ್ತು ಇತರ ಅನೇಕ ಪ್ರಯೋಜನಗಳನ್ನು ನೀಡುತ್ತದೆ. My Jio ಅಪ್ಲಿಕೇಶನ್ ಅಥವಾ Jio ಅಧಿಕೃತ  ವೆಬ್ಸೈಟ್ ಗೆ  ಭೇಟಿ ನೀಡುವ ಮೂಲಕ ಈ ಯೋಜನೆಯನ್ನು ರೂ 899 ಕ್ಕೆ ಸಕ್ರಿಯಗೊಳಿಸಬಹುದು. ಅಲ್ಲದೆ ನೀವು ಯೋಜನೆಯಲ್ಲಿ ಪ್ರತಿದಿನ 2.5GB ಡೇಟಾವನ್ನು ಪಡೆಯುತ್ತೀರಿ. ಅಂದರೆ ಯೋಜನೆಯ ಮಾನ್ಯತೆಯವರೆಗೆ ಗ್ರಾಹಕರಿಗೆ ಸಂಪೂರ್ಣ 225GB ಡೇಟಾದ ಪ್ರಯೋಜನವನ್ನು ನೀಡಲಾಗುತ್ತದೆ. ಈ ಜಿಯೋ ಯೋಜನೆಯೊಂದಿಗೆ ಗ್ರಾಹಕರು ಪ್ರತಿದಿನ 100 SMS ಅನ್ನು…

Read More

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಾವೂರಿನ ಶಾಂತಿನಗರದಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ವೇಳೆ ಕಾರ್ಯಕ್ರಮವನ್ನು ಉದ್ದೇಶಿಸಿ ಕೆಎಸ್​​ ಈಶ್ವರಪ್ಪ ಅವರು ಮಾತನಾಡುತ್ತಿದ್ದರು. ಆದರೆ ಈಶ್ವರಪ್ಪ ಮಾತನಾಡುತ್ತಿದ್ದ ವೇಳೆ ಅಜಾನ್ ಕೇಳಿ ಬಂದಿತ್ತು. ಇದರಿಂದ ಸಿಡಿಮಿಡಿಗೊಂಡ ಈಶ್ವರಪ್ಪ ಅವರು, ನನಗೆ ಎಲ್ಲಿ ಹೋದರೂ ಇದೊಂದು ತಲೆನೋವು. ಸುಪ್ರೀಂ ಕೋರ್ಟ್ ಆದೇಶವಿದ್ದು, ಇಂದಲ್ಲ ನಾಳೆ ಇದು ಖತಂ ಆಗಲಿದೆ, ಇದರಲ್ಲಿ ಯಾವುದೇ ಅನುಮಾನ ಬೇಡ. ಎಲ್ಲಾ ಧರ್ಮಗಳಿಗೆ ಗೌರವ ಕೊಡಬೇಕೆಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳುತ್ತಾರೆ. ಆದರೆ ಮೈಕ್​​​ನಲ್ಲಿ ಕೂಗಿದ್ದಲ್ಲಿ ಮಾತ್ರವೇ ಅಲ್ಲಾಗೆ ಕಿವಿ ಕೇಳೋದಾ? ನಮ್ಮ ದೇವಸ್ಥಾನಗಳಲ್ಲೂ ಪೂಜೆ ಮಾಡುತ್ತೇವೆ‌. ಶ್ಲೋಕ, ಭಜನೆಗಳನ್ನು ಹೇಳಲಾಗುತ್ತದೆ. ಅವರಿಗಿಂತ ಹೆಚ್ಚು ಭಕ್ತಿ ನಮ್ಮಲ್ಲೂ ಇದೆ. ಪ್ರಪಂಚದಲ್ಲಿ ಧರ್ಮವನ್ನು ಉಳಿಸುವಂಥಹ ದೇಶ ಭಾರತ ಮಾತ್ರ. ಆದರೆ ಮೈಕ್ ಹಿಡಿದುಕೊಂಡು ಮಾತ್ರ ಹೇಳಿದರೆ ಅವನಿಗೆ ಕಿವುಡಾ ಎಂದು ಕೇಳಬೇಕಾಗುತ್ತದೆ. ಆದ್ದರಿಂದ ಈ ಸಮಸ್ಯೆ ಆದಷ್ಟು ಬೇಗ ಪರಿಹಾರ ಆಗಬೇಕು ಎಂದು ಹೇಳಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು…

Read More