Subscribe to Updates
Get the latest creative news from FooBar about art, design and business.
- ರಾಗಿ ಕಟಾವು ಯಂತ್ರಕ್ಕೆ ಪ್ರತಿ ಗಂಟೆಗೆ ಬೆಲೆ ನಿಗದಿ
- ಏತ ನೀರಾವರಿ ಯೋಜನೆಗೆ ಹೆಚ್ಚುವರಿ ಅನುದಾನ ಮಂಜೂರು ಮಾಡಿ: ಶಾಸಕ ಎಂ.ಟಿ.ಕೃಷ್ಣಪ್ಪ ಒತ್ತಾಯ
- ತಿಪಟೂರು: ನ.21ರವರೆಗೆ ಕಲ್ಪೋತ್ಸವ ಕಾರ್ಯಕ್ರಮ
- ಬಂಜಾರ ಸಂಸ್ಕೃತಿ ಉಳಿವಿಗೆ ತುಮಕೂರಿನಲ್ಲಿ ಅದ್ಧೂರಿ ಜಿಲ್ಲಾ ಮಟ್ಟದ ಕಲಾ ಮೇಳ
- ಕಣ್ಣಿನ ಆರೋಗ್ಯಕ್ಕೆ ಸಮತೋಲನ ಆಹಾರ ಸೇವಿಸಬೇಕು: ಸಂಪತ್ ಕುಮಾರ್
- ಮಕ್ಕಳು ಮದ್ಯಪಾನ, ಧೂಮಪಾನ ಚಟುವಟಿಕೆಗಳಿಂದ ದೂರವಿರಬೇಕು: ಶಿಕ್ಷಕ ಮದನ್
- ತುಮಕೂರು | ನವೆಂಬರ್ 21—22ರಂದು ವಿಜ್ಞಾನ ವಸ್ತು ಪ್ರದರ್ಶನ
- ಸಾಲಬಾಧೆ: ರೈತ ಸಾವಿಗೆ ಶರಣು
Author: admin
ಬುರ್ಹಾನ್‌ಪುರ: 40 ವರ್ಷದ ವ್ಯಕ್ತಿಯೊಬ್ಬ ತನ್ನ ಪತ್ನಿ ಮತ್ತು ಮೂವರು ಪುತ್ರಿಯರನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ಘಟನೆ ಮಧ್ಯಪ್ರದೇಶದ ಬುರ್ಹಾನ್‌ಪುರ ಜಿಲ್ಲೆಯಲ್ಲಿ ನೇಪಾನಗರದ ದವಾಲಿಖುರ್ದ್ ಗ್ರಾಮದಲ್ಲಿ ನಡೆದಿದೆ. 40 ವರ್ಷದ ಮನೋಜ್, ಅವರ ಪತ್ನಿ ಸಾಧನಾ ಮತ್ತು ಮೂವರು ಪುತ್ರಿಯರಾದ ಅಕ್ಷರ, ನೇಹಾ ಮತ್ತು ತನು ಮೃತಪಟ್ಟವರು ಎಂದು ಗುರುತಿಸಲಾಗಿದೆ. ಮನೋಜ್ ಮತ್ತು ಸಾಧನಾ ಅವರ ಶವಗಳು ಮಲಗುವ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದರೆ, ಮೂವರು ಹುಡುಗಿಯರ ಶವಗಳು ಹೊರಗಿನ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿವೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಸ್ಥಳೀಯರ ಪ್ರಕಾರ, ಕಳೆದ ಕೆಲವು ದಿನಗಳಿಂದ ಮನೋಜ್ ಮತ್ತು ಅವರ ಕುಟುಂಬ ಸದಸ್ಯರು ಅನಾರೋಗ್ಯದಿಂದ ಬಳಲುತ್ತಿದ್ದರು. ಈ ಬಗ್ಗೆ ಪೊಲೀಸರು ವಿವರವಾದ ತನಿಖೆ ಆರಂಭಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಚಾಮರಾಜನಗರ: ಕೆಪಿಸಿಸಿ ಕಾರ್ಯಧ್ಯಕ್ಷ, ಮಾಜಿ ಸಂಸದ ಆರ್. ಧ್ರುವನಾರಾಯಣ್ ತಮ್ಮ ಹುಟ್ಟೂರಿನ ಜನ್ಮದಾತರ ಸಮಾಧಿಯ ಬಳಿಯೇ ಮಣ್ಣಲ್ಲಿ ಮಣ್ಣಾದರು. ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದಿಂದ ಎರಡು ಭಾರಿ ಸಂಸದರಾಗಿ ಜನ ಮನ್ನಣೆ ಪಡೆದಿದ್ದ ಆರ್. ಧ್ರುವನಾರಾಯಣ್ ಅವರು ಶನಿವಾರ ಬೆಳಗ್ಗೆ ಮೈಸೂರಿನ ಸ್ವಗೃಹದಲ್ಲಿ ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗದ ಮಧ್ಯೆ ಮೃತಪಟ್ಟಿದ್ದರು. ಅವರ ಅಂತ್ಯಕ್ರಿಯೆ ಕುಟುಂಬದರ ಬಯಕೆಯಂತೆ ಹುಟ್ಟೂರಾದ ಚಾಮರಾಜನಗರ ತಾಲ್ಲೂಕಿನ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಹೆಗ್ಗವಾಡಿ ಗ್ರಾಮದ ತೋಟದಲ್ಲಿ ಹಿಂದೂ ಸಂಪ್ರದಾಯದಂತೆ ನೇರವೇರಿತು. ಸಾವಿರಾರು ಅಭಿಮಾನಿಗಳು, ಬಂಧು ಬಳಗದವರ ಸಮ್ಮುಖದಲ್ಲಿ ಧ್ರುವನಾರಾಯಣ್ ಅವರ ಅಂತ್ಯಕ್ರಿಯೆ ನೆರವೇರಿತು. ಧ್ರುವನಾರಾಯಣ ಅವರ ಹಿರಿಯ ಪುತ್ರ ದರ್ಶನ್ ದೃವ ಧಾರ್ಮಿಕ ವಿಧಿವಿಧಾನ ಕಾರ್ಯಗಳನ್ನು ನೆರವೇರಿಸಿದರು. ಜನ್ಮದಾತರ ಸಮಾಧಿಯ ಬಳಿ ಆರ್. ಧ್ರುವನಾರಾಯಣ್ ಅಜರಾಮರರಾದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ನವದೆಹಲಿ: ನವದೆಹಲಿ ಬಾರ್ ಅಸೋಸಿಯೇಷನ್ ಆಯೋಜಿಸಿದ್ದ ಹೋಳಿ ಮಿಲನ್ ಕಾರ್ಯಕ್ರಮದಲ್ಲಿ ಮಹಿಳೆಯೊಬ್ಬರು ಬಾಲಿವುಡ್ ಹಾಡಿಗೆ ಅಶ್ಲೀಲವಾಗಿ ನೃತ್ಯ ಮಾಡಿದ್ದು, ಇದೀಗ ಹೊಸ ವಿವಾದಕ್ಕೆ ಕಾರಣವಾಗಿದೆ. ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ಆವರಣದಲ್ಲಿ ಮಾರ್ಚ್ 6 ರಂದು ಹೋಳಿ ಮಿಲನ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ವೃತ್ತಿಪರ ನೃತ್ಯಗಾರರು ಬಾಲಿವುಡ್ ಹಾಡಿಗೆ ಅಶ್ಲೀಲವಾಗಿ ನೃತ್ಯ ಮಾಡಿದ್ದು, ಈ ಬಗ್ಗೆ ಸಂದೀಪ್ ಪಾಂಡೆ ಎಂಬ ಬಳಕೆದಾರರು ಟ್ವಿಟ್ಟರ್ ನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದರು. ಈ ವಿಡಿಯೋ ಇದೀಗ ವ್ಯಾಪಕವಾಗಿ ವೈರಲ್ ಆಗಿದ್ದು, ಘಟನೆಯನ್ನು ದೆಹಲಿ ಹೈಕೋರ್ಟ್ “ಅನುಚಿತ” ನೃತ್ಯ ಪ್ರದರ್ಶನ ಎಂದು ಹೇಳಿದೆ. ಜೊತೆಗೆ ಘಟನೆಯು ವಕೀಲ ವೃತ್ತಿಯ ಉನ್ನತ ನೈತಿಕ ಮತ್ತು ನೈತಿಕ ಮಾನದಂಡಗಳಿಗೆ ಅನುಗುಣವಾಗಿಲ್ಲ. ನ್ಯಾಯಾಂಗ ಸಂಸ್ಥೆಯ ಪ್ರತಿಷ್ಠೆಗೆ ಕಳಂಕ ತರುವ ಪರಿಣಾಮವನ್ನು ಹೊಂದಿದೆ ಎಂದು ಖಂಡಿಸಿದೆ. NDBA ಗೆ ಶೋಕಾಸ್ ನೋಟಿಸ್ ನೀಡಲಿದ್ದು, ಮುಂದಿನ ಆದೇಶದವರೆಗೆ ಯಾವುದೇ ಕಾರ್ಯಕ್ರಮಕ್ಕಾಗಿ ನ್ಯಾಯಾಲಯದ ಆವರಣವನ್ನು ಹೊಸದಿಲ್ಲಿ ಬಾರ್ ಅಸೋಸಿಯೇಶನ್‌ನ ಪ್ರಸ್ತುತ ಕಾರ್ಯನಿರ್ವಾಹಕರು ಬಳಸಲು…
ಹೈದರಾಬಾದ್ : ಆಂತರಿಕ ಭದ್ರತೆಗೆ ಸಂಬಂಧಿಸಿದ ಹಲವಾರು ಸವಾಲುಗಳನ್ನು ಕಳೆದ ಒಂಬತ್ತು ವರ್ಷಗಳಲ್ಲಿ ಕೇಂದ್ರ ಸರ್ಕಾರವು ಯಶಸ್ವಿಯಾಗಿ ನಿರ್ವಹಿಸಿದೆ, ಭಯೋತ್ಪಾದನೆ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಶೂನ್ಯ ಸಹಿಷ್ಣು ನೀತಿಯು ಮುಂದುವರೆಯಲಿದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ತೆಲಂಗಾಣದ ಹಕೀಂಪೇಟ್‌ನಲ್ಲಿಯ ರಾಷ್ಟ್ರೀಯ ಕೈಗಾರಿಕಾ ಭದ್ರತಾ ಅಕಾಡೆಮಿಯಲ್ಲಿ ನಡೆದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ 54ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಪ್ರತ್ಯೇಕತಾವಾದ, ಭಯೋತ್ಪಾದನೆ ಮತ್ತು ದೇಶ ವಿರೋಧಿ ಚಟುವಟಿಕೆಗಳು ದೇಶದ ಯಾವುದೇ ಭಾಗದಲ್ಲಿ ನಡೆದರೂ ಅದನ್ನು ದೃಢವಾಗಿ ನಿಭಾಯಿಸಲಾಗುತ್ತದೆ ಎಂದಿದ್ದಾರೆ. ಭಯೋತ್ಪಾದನೆ ವಿರುದ್ಧ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆ (ಸಿಎಪಿಎಫ್) ಮತ್ತು ರಾಜ್ಯ ಪೊಲೀಸರು ‘ಮಹತ್ವ’ದ ಪಾತ್ರ ವಹಿಸುತ್ತಿದ್ದಾರೆ ಎಂದು ಒತ್ತಿ ಹೇಳಿದ ಅವರು, ಕಳೆದ ಒಂಬತ್ತು ವರ್ಷಗಳಲ್ಲಿ ಭದ್ರತೆ ವಿಚಾರದಲ್ಲಿ ಅವರ ಪಾತ್ರ ರುಜವಾತಾಗಿದೆ ಎಂದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್…
ತೆಲಂಗಾಣ ಸಿಎಂ ಚಂದ್ರಶೇಖರ ರಾವ್ ಹೊಟ್ಟೆ ಹುಣ್ಣಿನ ಸಮಸ್ಯೆಯಿಂದಾಗಿ ಭಾನುವಾರ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೆಸಿಆರ್ ಅವರ ಹೊಟ್ಟೆಯಲ್ಲಿ ಸಣ್ಣ ಹುಣ್ಣು ಕಾಣಿಸಿಕೊಂಡಿದ್ದು, ಚಿಕಿತ್ಸೆ ಪ್ರಾರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಚಂದ್ರಶೇಖರ ರಾವ್ ಅವರನ್ನು ಎಐಜಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಅವರನ್ನು ಗ್ಯಾಸ್ಟ್ರೋಎಂಟರಾಲಜಿ ಮುಖ್ಯಸ್ಥರೂ ಆಗಿರುವ ಆಸ್ಪತ್ರೆಯ ಅಧ್ಯಕ್ಷ ಡಾ. ಡಿ. ನಾಗೇಶ್ವರ ರೆಡ್ಡಿ ಪರೀಕ್ಷಿಸಿದ ನಂತರ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅಲ್ಲಿ ಅವರಿಗೆ ಕೆಲವು ವೈದ್ಯಕೀಯ ಪರೀಕ್ಷೆಗಳಿಗೆ ಒಳಪಡಿಸಲಾಯಿತು ಎಂದು ಅವರು ಮಾಹಿತಿ ನೀಡಿದ್ದಾರೆ. ಆಸ್ಪತ್ರೆಯಲ್ಲಿ ಅವರಿಗೆ ಸಿಟಿ ಸ್ಕ್ಯಾನ್ ಮತ್ತು ಎಂಡೋಸ್ಕೋಪಿ ನಡೆಯಲಾಗಿದೆ ಎಂದು ಆಸ್ಪತ್ರೆ ಮಾಹಿತಿ ನೀಡಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಚಾಮರಾಜನಗರ: ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಅವರಿಗೆ ದಿಢೀರ್ ಎದೆನೋವು ಕಾಣಿಸಿಕೊಂಡು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೊಳ್ಳೇಗಾಲ ಮೀಸಲು ವಿಧಾನಸಭಾ ಕ್ಷೇತ್ರದ ಶಾಸಕ ಎನ್.ಮಹೇಶ್ ಅವರಿಗೆ ದಿಢೀರ್ ಎದೆನೋವು ಕಾಣಿಸಿಕೊಂಡಿದ್ದರಿಂದ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು ಆ್ಯಂಜಿಯೋಗ್ರಾಂ ಮಾಡಲಾಗಿದೆ ಎಂದು ತಿಳಿದುಬಂದಿದೆ. 1 ದಿನ ವಿಶ್ರಾಂತಿ ಪಡೆಯಲು ವೈದ್ಯರು ಸಲಹೆ ಕೊಟ್ಟಿದ್ದು ಸದ್ಯ ಮಹೇಶ್ ಆಸ್ಪತ್ರೆಯಲ್ಲೇ ಇದ್ದಾರೆ. ಇನ್ನು, ಈ ಸಂಬಂಧ ಶಾಸಕ ಮಹೇಶ್ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದು “ನನಗೆ ಏನು ತೊಂದರೆ ಇಲ್ಲ, ದಯಮಾಡಿ ಯಾರು ಆಸ್ಪತ್ರೆ ಕಡೆಗೆ ಬರೋದಕ್ಕೆ ಹೋಗ್ಬೇಡಿ, ಅದರಿಂದ ಬೇರೆ ರೋಗಿಗಳಿಗೆ ತೊಂದರೆಯಾಗುತ್ತದೆ. ನಾಳೆ ನಿಮ್ಮನ್ನು ಭೇಟಿ ಮಾಡ್ತೀನಿ ಎಂದು ಮಾಹಿತಿ ನೀಡಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಹೆಚ್.ಡಿ.ಕೋಟೆ: ತಾಲ್ಲೂಕಿನ ಮಲಾರ ಕಾಲೋನಿ ಗ್ರಾಮದಲ್ಲಿ ಚಾಮರಾಜನಗರ ಲೋಕಸಭಾ ಮಾಜಿ ಸಂಸದರಾದ ಆರ್.ಧ್ರುವನಾರಾಯಣ ರವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು ನಂತರ ಮಾತನಾಡಿದ ಧ್ರುವನಾರಾಯಣರವರ ಅಭಿಮಾನಿ, ಗ್ರಾಮದ ಮುಖಂಡ ಮಲಾರ ಮಹದೇವು ಅವರು, ಧ್ರುವನಾರಾಯಣರವರು ಮಿನುಗುವ ನಕ್ಷತ್ರದಂತೆ ಇಡೀ ಸಮಾಜಕ್ಕೆ ಬೆಳಕನ್ನು ಚೆಲ್ಲಿದ ಒಬ್ಬ ಪ್ರತಿಭಾನ್ವಿತ ರಾಜಕಾರಣಿ, ಅವರನ್ನು ಕಳೆದುಕೊಂಡಿರುವುದರಿಂದ ಇಡೀ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ತಮ್ಮ ದುಗುಡವನ್ನು ಹೊರಹಾಕಿದರು ಮಲಾರ ಕಾಲೋನಿ ಗ್ರಾಮದಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿತ್ತು. ಗ್ರಾಮದ ಅಕ್ಷರಸ್ಥ ಯುವಕರು, ಧ್ರುವನಾರಾಯಣ್ ರವರಿಂದ ಸಹಾಯ ಪಡೆದ ಎಷ್ಟೋ ಬಡಕುಟುಂಬಗಳು ಕಂಬನಿ ಮಿಡಿಯುತಿದ್ದದ್ದು ಎದ್ದು ಕಾಣುತಿತ್ತು. ಶ್ರದ್ಧಾಂಜಲಿ ಸಭೆಯಲ್ಲಿ ಗ್ರಾಮದ ಮುಖಂಡರಾದ ಚಂದ್ರಶೇಖರಮೂರ್ತಿ, ಬಿ.ಟಿ.ಕೃಷ್ಣಮೂರ್ತಿ, ಮಿಲ್ ನಾಗಯ್ಯ, ಮಹದೇವಪ್ರಸಾದ್, ಸಣ್ಣಸ್ವಾಮಯ್ಯ, ಪದ್ಮರಾಜು, ಮಹದೇವು, ತಮ್ಮಯ್ಯ, ಪಿ ಮಲಿಯಯ್ಯ, ಮದೇವು, ಎಲ್.ಮಲ್ಲಿಕ್, ಮೂರ್ತಿ, ಬಸವರಾಜು, ನೂರಾರು ಧ್ರುವನಾರಾಯಣ ರವರ ಅಭಿಮಾನಿಗಳು ಹಾಜರಿದ್ದರು. ವರದಿ: ಮಲಾರ ಮಹದೇವಸ್ವಾಮಿ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್…
ಬೇಸಿಗೆ ಬಂದಂತರೆ ಎಷ್ಟೇ ಹುಷಾರಾಗಿದ್ದರು ಅಗ್ನಿ ಅವಘಡಗಳು ಸಂಭವಿಸುತ್ತಿರುತ್ತವೆ. ಅದೇ ರೀತಿ ತಿಪಟೂರಿನ ಗಡಿ ಗ್ರಾಮವಾದ ಹೆಗ್ಗಟ್ಟ ಗ್ರಾಮದಲ್ಲಿ ಮನಕಲಕುವ ಘಟನೆ ನಡೆದಿದೆ. ಇಲ್ಲಿನ ನಿವಾಸಿ ನಟರಾಜ್ ಎಂಬವರ ಮನೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಸಂಪೂರ್ಣ ಸುಟ್ಟುಹೋಗಿದೆ. ಒಂದು ವರ್ಷದ ಹಿಂದೆ 8 ಲಕ್ಷ ರೂಪಾಯಿಗೆ ಈ ಮನೆಯನ್ನು ಖರೀದಿ ಮಾಡಿದ್ದರು. ಅವರಿವರ ಬಳಿ ಸಾಲ ಮಾಡಿ, ಜಮೀನು ಮಾರಿ ಹಣ ಹೊಂದಿಸಿ ಮನೆ ಮಾಡಿದ್ದರು. ಆದರೆ ಇವೆಲ್ಲವೂ ಕೆಲವೇ ಕ್ಷಣಗಳಲ್ಲಿ ಸುಟ್ಟು ಹೋಗಿದೆ. ಅಗ್ನಿ ಅನಾಹುತ ಹಿನ್ನೆಲೆಯಲ್ಲಿ ಮನೆಯಲ್ಲಿ ಸಾಕಿದ್ದ 15 ನಾಟಿ ಕೋಳಿ, ಏಳು ಕುರಿಗಳು, 11 ಸಾವಿರ ಕೊಬ್ಬರಿ 150 ಗ್ರಾಂ ಚಿನ್ನ ಹಾಗೂ ಬೆಳ್ಳಿ, ಎಲ್ಇಡಿ ಟಿವಿ ಮನೆಯಲ್ಲಿ ಬೆಲೆ ಬಾಳುವ ವಸ್ತುಗಳು ಸಂಪೂರ್ಣ ಸುಟ್ಟು ಕರಕಲಾಗಿದೆ. ಕೂಲಿ ನಾಲಿ ಮಾಡಿ ಜೀವನ ಸಾಗಿಸುವುದಕ್ಕೆ ಇದ್ದ ಒಂದು ಮನೆಯು ಸುಟ್ಟು ಹೋಗಿರುವುದರಿಂದ ಈ ಕೂಡಲೇ ಸರ್ಕಾರ ನಮ್ಮ ನೆರವಿಗೆ ಬರಬೇಕೆಂದು ನಟರಾಜು ಹಾಗೂ ಗ್ರಾಮಸ್ಥರು…
ಮಧುಗಿರಿ : ಶ್ರೀ ಬಸವೇಶ್ವರ ವಿದ್ಯಾಸಂಸ್ಥೆ, ಪ್ರಾರ್ಥನಾ ಪಬ್ಲಿಕ್ ಸ್ಕೂಲ್, ದಂಡಿನ ದಿಬ್ಬ ಶಾಲೆಯಲ್ಲಿ 2022-23 ನೇ ಸಾಲಿನ ಕಲಿನಲಿ ಸಮಾರಂಭ ಶನಿವಾರ ಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ವಿಜಯ್ ಪ್ರಕಾಶ್, ಕರ್ನಾಟಕದಲ್ಲಿ ಬದುಕಲು ಕನ್ನಡ ಭಾಷೆ ಚೆಂದ, ಆದರೆ ನಮ್ಮ ಕರ್ನಾಟಕದಲ್ಲೂ ಉತ್ತಮವಾದ ಹುದ್ದೆಗಳಿಗೆ ಆಯ್ಕೆಯಾಗಲು ತುಂಬ ಆಂಗ್ಲ ಭಾಷೆಯು ಮುಖ್ಯವಾಗಿದೆ ಎಂದು ತಿಳಿಸಿದರು ಅಧ್ಯಕ್ಷತೆಯ ಡಿ.ವಿ.ದ್ವಾರಕೀಶ್ ರವರು ವಹಿಸಿದರು, ಮುಖ್ಯ ಅತಿಥಿಗಳಾಗಿ ಚನ್ನಬಸಪ್ಪ, ದೊಡ್ಡೇರಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ನಾಗಮಣಿ ರಂಗಸ್ವಾಮಿ, ಉಪಾಧ್ಯಕ್ಷರಾದ ಹರೀಶ್, ಸದಸ್ಯರು ಶೈಲಕುಮಾರ ವರದರಾಜು, ಕಲಾವತಿ ವೆಂಕಟಪ್ಪ, ಗೋಪಾಲಕೃಷ್ಣ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ದೊಡ್ಡೇರಿ ಕ್ಲಸ್ಟರ್ ಬಸವೇಶ್ವರ, ಆಡಳಿತ ಮಂಡಳಿಯ ಸದಸ್ಯರುಗಳು ಹಾಗೂ ಪೋಷಕರು ಭಾಗವಹಿಸಿದರು. ಅಧ್ಯಕ್ಷರು ಹೊನ್ನೇಶಪ್ಪ, ಮುಖ್ಯೋಪಾದ್ಯರಾದ ಲಕ್ಷ್ಮಮ್ಮ, ಈ ಶಾಲೆಯ ಸಂಸ್ಥಾಪಕರಾದ ಕಾರ್ಯದರ್ಶಿ ಎಂ.ಎಸ್.ವಿಜಯಪ್ರಕಾಶ್ ರವರು ಹಾಜರಿದ್ದರು. ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಂದ ನೃತ್ಯ ಪ್ರದರ್ಶನ ನಡೆಯಿತು. ವರದಿ: ದೊಡ್ಡೇರಿ ಮಹಾಲಿಂಗಯ್ಯ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ…
ಬದುಕು ಎಂಬುದು ಹರಿಯುವ ನೀರಿನ ಕೊನೆ ಇಲ್ಲದ ಹಾಗೆ. ಇಲ್ಲಿ ಯಾವುದು ಶಾಶ್ವತವಲ್ಲ. ಉಳಿಯುವುದು ಒಂದೇ, ಹೃದಯವಂತಿಕೆ. ಈ ಬದುಕೊಂದು ಗೊಂಬೆಯಾಟ. ನಾವು ಕೆಲವು ಗೊಂಬೆಗಳ ಆಡಿಸಿದರೆ ನಮ್ಮನ್ನಾಡಿದುತ ಕಾಣಸಿಗನು. ಮಾನವನ ಬದುಕು ಕಾಯಕ, ಹುಡುಕು ಕಲ್ಲು ಕಲ್ಲುಗಳಲ್ಲು ಮಣಿ ಮಣಿಗಳಂತೆ ಎಲ್ಲೆಲ್ಲೋ ಇಟ್ಟ ಬಣ್ಣ ಬಣ್ಣದ ಮಣಿಗಳಂತೆ ಪೋಣಿಸಿದ ಕಾಯಕ ಕುಸುರಿ ಕೆಲಸ ನೋಡಿದಾಗ ಬಣ್ಣ ಬಣ್ಣದ ಬದುಕಿನಲ್ಲಿ ನಿಜವಾದ ಬದುಕಿನ ಕಷ್ಟ ಅರಿವಾಗಲೇಬೇಕು. ಕಲಾ ಮಿತ್ರ ತನ್ನ ಕೈಚಳಕದ ಕಾವೇರಿ ಮಾತೆಯನ್ನು ಜಲಲ ಧಾರೆಯಲ್ಲಿ ಸುಂದರವಾದ ಪ್ರಕೃತಿಯ ಚಿತ್ರಣವನ್ನು ಅದ್ಭುತವಾಗಿ ಪ್ರದರ್ಶಿಸಿ ಪುತ್ತೂರು ತಾಲೂಕು ಕಬಕ ಗ್ರಾಮದ ನೂಜೀ ವೇ. ಮೂ ರಾಮಕೃಷ್ಣ ಭಟ್ ನೂತನವಾಗಿ ಕಟ್ಟಿಸಿರುವ ಮನೆಯ ಶ್ರೀ ಕೃಷ್ಣ ಮಂಟಪದ ಒಳಭಾಗದಲ್ಲಿ ನಿಜವಾದ ಬದುಕಿನ ಕಷ್ಟ ಅರಿವಾಗಲೇ ಬೇಕು. ಕಾವೇರಿ ಮಾತೆ ಹರಸು ನಮ್ಮನೆಲ್ಲ…… ನಮನ ನಮ್ಮ…..!! ಕಾಲಕಾಲಕ್ಕೆ ಮಳೆ ಸಮೃದ್ಧಿಸಲಿ ಇಳೆ….! ಎಂಬಂತಿದೆ ಅಲ್ಲವೇ ಕೃಷಿಕನ ಮಾರ್ಮಿಕ ನುಡಿ. ಚಿತ್ರ: ಸವಿತಾ ಕೋಡಂದೂರ್ ಬರಹ:ಕುಮಾರ್…