Author: admin

ಬೆಳಗಾವಿ: ನಗರದಲ್ಲಿ ವಿವಿಧ ಕಡೆಗಳಲ್ಲಿ ಇಂದು ಉತ್ತರ ಮತ ಕ್ಷೇತ್ರದ ಶಾಸಕ ಅನಿಲ ಬೆನಕೆ ಅವರು, ಸುಮಾರು 3 ಕೋಟಿಗೂ ಹೆಚ್ಚು ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು. ಅಶೋಕ ನಗರದಲ್ಲಿ ಸುಮಾರು 27 ಲಕ್ಷ ರಸ್ತೆ, ಚರಂಡಿ ಕಾಮಗಾರಿಗೆ ಚಾಲನೆ, ಅಮನ ನಗರ ಮತ್ತು ಮಾರುತಿ ನಗರದಲ್ಲಿ 2.5 ಕೋಟಿ ವೆಚ್ಚದಲ್ಲಿ ಚರಂಡಿ ಮತ್ತು ರಸ್ತೆ ಕಾಮಗಾರಿಗೆ ಚಾಲನೆ, ಎಸ್ ಮೋಟರ್ಸ ಹತ್ತಿರ 50 ಲಕ್ಷ ವೆಚ್ಚದಲ್ಲಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಚಾಲನೆ ನೀಡಿದರು. ಕಾಮಗಾರಿಗೆ ಚಾಲನೆ ನೀಡವ ವೇಳೆ ನಿವಾಸಗಳಿಂದ ಶಾಸಕ ಅನಿಲ ಬೆನಕೆ ಅವರಿಗೆ ಸನ್ಮಾನಿಸಲಾಯಿತು. ಶಾಸಕರು ಹೊದಲೆಲ್ಲ ಸ್ಥಳೀಯ ನಿವಾಸಿಗಳುನೀರಿನ ಸಮಸ್ಯೆ, ಕಸ ವಿಲೇವಾರಿ ಸಮಸ್ಯೆಡ್ರೈನೆಜ ಸಮಸ್ಯೆ ಬಗ್ಗೆ ಶಾಸಕರಿಗೆ ಹೇಳಿಕೊಂಡರು.‌ ಈ ವೇಳೆ ಶಾಸಕ ಅನಿಲ ಬೆನಕೆ ಅವರು, ಸ್ಥಳದಲ್ಲೇ ಸಂಬಂಧಿಸಿದ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಸಮಸ್ಯೆಗೆ ಸ್ಪಂದಿಸುವಂತರ ಸೂಚನೆ ನೀಡಿದರು. ಕಾಮಗಾರಿಗೆ ಚಾಲನೆ ನೀಡದ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ…

Read More

ಸರಗೂರು: ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್ ಧ್ರುವನಾರಾಯಣ್ ಅವರು ಹೃದಯಾಘಾತದಿಂದ ಅಕಾಲಿಕವಾಗಿ ನಿಧನರಾಗಿದ್ದು, ಈ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತ ಶೋಕ ಮಡುಗಟ್ಟಿದೆ. ಮಾಜಿ ಸಂಸದ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್ ಧ್ರುವನಾರಾಯಣ್ ಅವರು ಕಾಯಕಯೋಗಿ, ಹೃದಯವಂತ ರಾಜಕಾರಣಿಯಾಗಿದ್ದರು. ಅವರ ಅಕಾಲಿಕ ನಿಧನ ವೈಯಕ್ತಿಕವಾಗಿ ಹಾಗೂ ಅಭಿಮಾನಿಗಳಿಗೆ ತುಂಬಲಾರದ ನಷ್ಟ ಎಂದು ಯಜಮಾನರು ಶಿವಮೂರ್ತಿ ಸಂತಾಪ ವ್ಯಕ್ತಪಡಿಸಿದರು. ಹಾದನೂರು ಗ್ರಾಮದಲ್ಲಿ ಶನಿವಾರ ರಂದು ಆರ್. ಧ್ರುವನಾರಾಯಣ್ ರವರ ಪೋಟೋ ಪುಷ್ಪಾರ್ಚನೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದ ಅವರು, ಅವರ ಸರಳತೆ, ಸಂಘಟನಾ ಚಾತುರ್ಯ ಹಾಗೂ ಪಕ್ಷ ನಿಷ್ಠೆ ಬಗ್ಗೆ ಅರಿತಿದ್ದೆ ಎಂದರು. ಗ್ರಾಪಂ ಸದಸ್ಯ ಪ್ರಕಾಶ್ ಮಾತನಾಡಿ, ಸಾಕಷ್ಟು ಸುಧಾರಣೆಗೆ ಮುಂದಾಗಿದ್ದ ಅವರು ಹೆಚ್ಚು ಬಾರಿ ಜಿಲ್ಲೆಗೆ ಭೇಟಿ ನೀಡಿದ್ದಾರೆ. ಸಾಕಷ್ಟು ಬೇಡಿಕೆಗಳನ್ನು ಈಡೇರಿಸಿದ್ದಾರೆ. ಸದಾ ಹಸನ್ಮುಖಿಯಾಗಿರುತ್ತಿದ್ದ ಅವರಿಗೆ ಕ್ಯಾಬಿನೆಟ್ನಲ್ಲಿ ವಿಶೇಷ ಸ್ಥಾನಮಾನವಿತ್ತು. ಎಚ್.ಡಿ.ಕೋಟೆ ಮತ್ತು ಸರಗೂರು ತಾಲೂಕಿನ ಬಗ್ಗೆ ಅಪಾರ ಅಭಿಮಾನ. ಅವರೊಬ್ಬ ಅಜಾತಶತ್ರು, ಉತ್ತಮ ಆಡಳಿತಗಾರ, ಸ್ನೇಹಜೀವಿ, ಈವರೆಗೆ ಯಾರಿಗೂ ತೊಂದರೆ ಕೊಟ್ಟವರಲ್ಲ…

Read More

ಬೆಳಗಾವಿ: ದೇಶದ ಅಭಿವೃದ್ಧಿ ಶಿಕ್ಷಣದಿಂದ ಮಾತ್ರ ಸಾಧ್ಯ. ಕಾರಣ ವಿದ್ಯಾರ್ಥಿಗಳು ವ್ಯಾಸಂಗಕ್ಕೆ ಹೆಚ್ಚಿನ ಗಮನ ನೀಡಬೇಕು. ನಿಮಗೆ ಬೇಕಾದ ಸಹಾಯ, ಸಹಕಾರ ನೀಡಲು ನಾನು ಸದಾ ಬದ್ಧನಿದ್ದೇನೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್‌ ಜಾರಕಿಹೊಳಿ ಹೇಳಿದರು. ಯಮಕನಮರಡಿ ಮತಕ್ಷೇತ್ರದ ಮುಚ್ಚಂಡಿ ಗ್ರಾಮದಲ್ಲಿ ಸರ್ಕಾರಿ ಮಾದರಿ ಕನ್ನಡ ಶಾಲೆ ಸನ್ 2022 – 23 ರಲ್ಲಿ ” 4059″ ಕಟ್ಟಡಗಳ ಯೋಜನೆಯಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ್ದ 6 ಪ್ರಾಥಮಿಕ ಶಾಲೆಯ ನೂತನ ಕೊಠಡಿಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಸಾಧನೆ ಮಾಡುವ ಗುರಿ ಹೊಂದಬೇಕು. ಉನ್ನತ ಹುದ್ದೆಗಳ ಗುರಿಯೊಂದಿಗೆ ವ್ಯಾಸಂಗ ಮಾಡಬೇಕು. ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿದರೆ ಮಾತ್ರ ಯಾವುದೇ ದೇಶ ಅಭಿವೃದ್ಧಿ ಪಥದಲ್ಲಿ ಸಾಗಲು ಸಾಧ್ಯ. ಈ ನಿಟ್ಟಿನಲ್ಲಿ ಗುಣಮಟ್ಟದ ಶಿಕ್ಷಣದ ಬಗ್ಗೆ ವಿದ್ಯಾರ್ಥಿಗಳು ಗಮನಹರಿಸಬೇಕೆಂದು ತಿಳಿಸಿದರು. ಈ ನೂತನ ಶಾಲಾ ಕೊಠಡಿಗಳಿಂದ ಮುಂದಿನ ಹತ್ತು ವರ್ಷಗಳ ಅವಧಿಗೆ ವಿದ್ಯಾರ್ಥಿಗಳಿಗೆ ಕೊಠಡಿಗಳ ಕೊರತೆ ಆಗಲ್ಲ. ಮತಕ್ಷೇತ್ರದಲ್ಲಿ ಕಳೆದ…

Read More

ಮಾಜಿ ಶಾಸಕ ಹಾಗೂ ಕಾಂಗ್ರೆಸ ಮುಖಂಡ ಫಿರೋಜ್ ಶೆಠ ಮಾಧ್ಯಮಗಳೊಂದಿಗೆ ಮಾತನಾಡಿ ಬೆಳಗಾವಿ ನಗರಕ್ಕೆ ನರೇಂದ್ರ ಮೋದಿ ಭೇಟಿಯಿಂದ ಬೆಳಗಾವಿ ರಾಜಕಾರಣದಲ್ಲಿ ಏನು ಬದಲಾವಣೆಯಾಗುವುದಿಲ್ಲ. ಜನ ಅಭಿವೃದ್ಧಿ ಕಾರ್ಯಕ್ರಮಗಳತ್ತ ಒಲವು ನೀಡುತ್ತಿದ್ದಾರೆ. ನಾನು ಹತ್ತು ವರ್ಷಗಳ ಕಾಲ ಅವಧಿಯಲ್ಲಿ ಮಾಡಿರುವಂತ ಅಭಿವೃದ್ಧಿ ಕಾರ್ಯಕ್ರಮಗಳಿಂದ ಜನರ ಮನಸ್ಸಿನಲ್ಲಿ ಮತ್ತು ಜನರ ಹೃದಯದಲ್ಲಿ ನಾನಿದ್ದೇನೆ ಎಂದರು. ಭಾರತೀಯ ಜನತಾ ಪಕ್ಷ ಸುಳ್ಳಿನ ಪಕ್ಷ ಇದು ಜನರಿಗೆ ಮೋಸ ಮಾಡುವಂತ ಪಕ್ಷ. ಅಗತ್ಯ ವಸ್ತುಗಳ ಬೆಲೆ ಏರಿಕೆ ದಿನನಿತ್ಯದ ವಸ್ತುಗಳ ಬೆಲೆ ಏರಿಕೆ ಇವೆಲ್ಲವೂ ಜನಸಾಮಾನ್ಯರ ಕಷ್ಟಕ್ಕೆ ಕಾರಣವಾಗಿವೆ. ಅದರಿಂದಾಗಿ ಜನ ಬಿಜೆಪಿ ಸರ್ಕಾರ ಆಡಳಿತ ದಿಂದ ಕಂಗಟ್ಟಿ ಹೋಗಿದ್ದಾರೆ ಎಂದು ಫಿರೋಜ್ ಶೆಠ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA

Read More

ಇದು ಅಧಿಕೃತವಾಗಿ ಕಾಶ್ಮೀರದಲ್ಲಿ ವಸಂತವಾಗಿದೆ. ಶ್ರೀನಗರವು ಗುಲಾಬಿ ಮತ್ತು ಬಿಳಿ ಹೂವುಗಳಿಂದ ತುಂಬಿದೆ. ಇದು ಪ್ರವಾಸಿ ಋತುವಿನ ಆರಂಭ ಮತ್ತು ವಸಂತಕಾಲದ ಆಗಮನವನ್ನು ಸೂಚಿಸುತ್ತದೆ. ಪ್ರವಾಸಿಗರ ಆಗಮನವು ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿಯುತ್ತದೆ ಎಂದು ಅಧಿಕಾರಿಗಳು ಹಾರೈಸಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಪ್ರವಾಸೋದ್ಯಮ ಇಲಾಖೆಯು ಮಾರ್ಚ್ ಮಧ್ಯದಲ್ಲಿ ಶ್ರೀನಗರದ ವಿವಿಧ ಉದ್ಯಾನಗಳಲ್ಲಿ ವಸಂತವನ್ನು ಆಚರಿಸಲು ಯೋಜಿಸುತ್ತಿದೆ. ಬಾದಾಮಿ ಹೂವಿನ ಹೊರತಾಗಿ, ಏಷ್ಯಾದ ಅತಿದೊಡ್ಡ ಟುಲಿಪ್ ಉದ್ಯಾನವು ಮುಂದಿನ ಕೆಲವು ವಾರಗಳಲ್ಲಿ ಸಾರ್ವಜನಿಕರಿಗೆ ತೆರೆಯುವ ನಿರೀಕ್ಷೆಯಿದೆ. ಶ್ರೀನಗರದ ಹರಿ ಪರ್ಬತ್ ಕೋಟೆಯ ಕಣಿವೆಯಲ್ಲಿ ಸಾವಿರಾರು ಬಾದಾಮಿ ಮರಗಳು ಅರಳುತ್ತಿವೆ. ಈ ಋತುವಿನ ಹೂಬಿಡುವಿಕೆಯು ಕಠಿಣ ಚಳಿಗಾಲದಲ್ಲಿ ಒಳಾಂಗಣದಲ್ಲಿ ಉಳಿಯುವ ಹೆಚ್ಚಿನ ಸ್ಥಳೀಯರನ್ನು ಎಚ್ಚರಗೊಳಿಸಲು ನಿರ್ವಹಿಸುತ್ತದೆ. ವಸಂತವು ಉದ್ಯಾನವನಗಳಿಗೆ ಮಾತ್ರವಲ್ಲದೆ ಜನರ ಜೀವನಕ್ಕೂ ಬಣ್ಣವನ್ನು ತರುತ್ತದೆ. ಶ್ರೀನಗರದಲ್ಲಿರುವ ಈ ಪ್ರಸಿದ್ಧ ಬಾದಾಮಿ ತೋಟವನ್ನು ಬಾದಾಮ್ವಾರಿ ಎಂದು ಕರೆಯಲಾಗುತ್ತದೆ. ನೂರಾರು ಪ್ರವಾಸಿಗರು ಈಗಾಗಲೇ ಬಾದಾಮವಾರಿಗೆ ಭೇಟಿ ನೀಡಿದ್ದಾರೆ. ಈ ಉದ್ಯಾನವನದ ಬಗ್ಗೆ ಯಾವುದೇ ಅಧಿಕೃತ ದಾಖಲೆಗಳನ್ನು…

Read More

ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಸುಳೇಬಾವಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆ ಬೆಳಗಾವಿ ವಿಭಾಗದಿಂದ 2019-20 ನೇ ಸಾಲಿನ ನಬಾರ್ಡ್ ಆರ್.ಐ.ಡಿ.ಎಫ್ 25ನೇ ಯೋಜನೆಯಡಿ ನಿರ್ಮಿಸಲಾದ ಸರಕಾರಿ ಪ್ರೌಢಶಾಲೆಯ ನೂತನ ಕಟ್ಟಡವನ್ನು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹಾಗೂ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ “ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಇತರ ಮೂಲಸೌಲಭ್ಯಗಳ ಜೊತೆಗೆ ಶೈಕ್ಷಣಿಕ ಅಭಿವೃದ್ಧಿಗೂ ಸಾಕಷ್ಟು ಒತ್ತು ನೀಡಲಾಗಿದೆ. ಗ್ರಾಮಿಣ ಭಾಗದ ಅನೇಕ ಶಾಲೆಗಳನ್ನು ಸ್ಮಾರ್ಟ್ ಆಗಿ ಉನ್ನತೀಕರಿಸಿದ್ದು ಹಲವಾರು ಗ್ರಾಮೀಣ ವಿದ್ಯಾರ್ಥಿಗಳಿಗೆ ಪಟ್ಟಣ, ನಗರಗಳಲ್ಲಿ ಲಭಿಸುವ ಗುಣಮಟ್ಟದ ಶಿಕ್ಷಣ ಲಭಿಸುತ್ತಿದೆ” ಎಂದರು. ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮಾತನಾಡಿ, “ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರ ಮಾರ್ಗದರ್ಶನದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಕ್ಷೇತ್ರಾದ್ಯಂತ ಕೈಗೊಳ್ಳಲಾಗುತ್ತಿದ್ದು ಇನ್ನೂ ಹೆಚ್ಚಿನ ಅಭಿವೃದ್ಧಿಯ ಸಂಕಲ್ಪ ಸಾಕಾರವಾಗಲು ಜನತೆ ಕೂಡ ಕೈಜೋಡಿಸಬೇಕು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493…

Read More

ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ ಆರ ಪಿ ಐ ನಗರದ ಸರ್ಕಿಟ್ ಹೌಸ್ ನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಆರ. ಪಿ .ಐ ರಾಷ್ಟ್ರೀಯ ಕಾರ್ಯಾಧ್ಯಕ್ಷ ಡಾ.ವೆಂಕಟ ಸ್ವಾಮಿ ಮಾತನಾಡುತ್ತಾ ಬೆಳಗಾವಿ ಹಾಗೂ ಕರ್ನಾಟಕದಲ್ಲಿ ಆರ ಪಿ ಐ ಪಕ್ಷ ಒಂದು ಭೀಮ ಶಕ್ತಿ ಯಾಗಿ ಹೊರ ಹೊಮ್ಮುತ್ತಿದೆ ಎಂದರು. 2023ರ ಚುನಾವಣೆಯ ಮುಂಚಿತವಾಗಿ ನಾವು ಪಕ್ಷ ಸಂಘಟನೆಯಲ್ಲಿ ತೊಡಗಿದ್ದೇವೆ. ಅದರ ಅಂಗವಾಗಿ ಬೆಳಗಾವಿಯಲ್ಲಿ ಮಾಜಿ ಕಾರ್ಪೊರೇಟರ್ ಹಾಗೂ ಜನಸೇವಕರಾದ ಶಿವ ಲಿಂಬುಜಿ ಚೌಗುಲೆ .ನಮ್ಮ ಪಕ್ಷಕ್ಕೆ ಸೇರ್ಪಡೆ ಆಗಿದ್ದಾರೆ ಅವರಿಗೆ ನಾವು ಜಿಲ್ಲಾ ಉಸ್ತುವಾರಿ ಹಾಗೂ ಚುನಾವಣೆಯ ಮಹತ್ವದ ಜವಾಬ್ದಾರಿಗಳನ್ನು ಶಿವ ಲಿಂಬುಜಿ ಚೌಗುಲೆ ಅವರಿಗೆ ನೀಡಲಿದ್ದೇವೆ. ಇದೇ ವೇಳೆ ಮಾತನಾಡುತ್ತಾ ಕೇಂದ್ರದಲ್ಲಿ ಎನ್‌ ಡಿ ಎ ಮೈತ್ರಿಕೂಟದಲ್ಲಿ ನಾವಿದ್ದು ನಮ್ಮ ರಾಜ್ಯಾಧ್ಯಕ್ಷರಾದ ರಾಮದಾಸ್ ಸಟೋಲೆ ಮಂತ್ರಿ ಕೂಡ ಇದ್ದಾರೆ. 2023ರ ಚುನಾವಣೆಯಲ್ಲಿ ನಾವು ಭಾರತೀಯ ಜನತಾ ಪಕ್ಷದ ಜೊತೆ ಸ್ಥಾನ ಹೊಂದಾಣಿಕೆ ಮಾಡಿಕೊಳ್ಳಲಿದ್ದೇವೆ. ನಮ್ಮ ಸ್ಪಷ್ಟವಾದ ಉದ್ದೇಶ ಕಾಂಗ್ರೆಸ್ ರಾಜ್ಯದಲ್ಲಿ…

Read More

ಸಂಜಯ ಗೂಡಾವಥ ಗ್ರೂಪ್ 2013 ರಿಂದ ಪ್ರಾರಂಭವಾಗಿದ್ದು ತನ್ನ ಗ್ರಾಹಕ ಕೇಂದ್ರ ವ್ಯಾಪಾರ ನೀತಿಗಳ ಮೂಲಕ ಸಂಸ್ಥೆ ಲಕ್ಷಾಂತರ ಜನರಿಗೆ ಪ್ರೀಯವಾಗಿದೆ. ಈ ಸಂಸ್ಥೆಯಿಂದ ಕರ್ನಾಟಕ ದಲ್ಲಿ ಕಿರಾಣಿ ಅಂಗಡಿಗಳ ಸಮಕಾಲೀನ ವ್ಯಾಪಾರಿಗಳು ಹಾಗೂ ಲೇಔಟ್ ಮೂಲಕ ತನ್ನ ಉತ್ಪನ್ನಗಳ ಲಾಭ ಆಗುವಂತೆ ಮಾಡುವ ಜಿಸಿಎಲ್ ತನ್ನ ಗ್ರಾಹಕರ ಮಾರುಕಟ್ಟೆ ವ್ಯಾಪ್ತಿಯನ್ನು ಹೆಚ್ಚಿಸಲು ಉದ್ದೇಶಿಸಿದೆ, ಜಿ ಸಿ ಎಲ್ ನಿರಂತರ ಉತ್ಪನ್ನ ನಾಮಿನೇತೇ ಸ್ಪರ್ಧಾತಕ ಬೆಲೆ ಮತ್ತು ಗುಣಮಟ್ಟವನ್ನು ಸೃಷ್ಟಿಸುವ ಮೂಲಕ ತನ್ನದೇ ಆದ ವಿಶಿಷ್ಟವಾದ ಬ್ರಾಂಡ್ ವನ್ನು ಗುರುತಿಸಿ ಸೃಷ್ಟಿಸಿಕೊಂಡಿದೆ. ಈಗ ಬೆಳಗಾವಿ ಮತ್ತು ಹುಬ್ಬಳ್ಳಿ ಇಂದ ಕರ್ನಾಟಕದಲ್ಲಿ ಪ್ರಾರಂಭ ಮಾಡಲಿದ್ದು ಸಣ್ಣ ವ್ಯಾಪಾರಸ್ಥರಿಂದ ಎಲ್ಲಾ ವ್ಯಾಪಾರಸ್ಥರುಗಳಿಗೆ ನಾವು ನಮ್ಮ ಪ್ರಾಡಕ್ಟ್ ವಿತರ್ಣಗಳನ್ನು ಮಾಡಲಿದ್ದೇವೆ ನಮ್ಮ ಗ್ರಾಹಕರ ಸಂತೃಪ್ತಿಯ ನಮ್ಮ ದಯವಾಗಲಿದೆ.ಎಂದು ಜಿ ಸಿ ಎಲ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸೋನಾಲಿ ಗೋಡಾವಥ ಬೆಳಗಾವಿ ನಗರದ ಯು ಕೆ 27 ಹೋಟೆಲ್ ಒಂದರಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ತಿಳಿಸಿದರು. ಮುಂದಿನ ದಿನಗಳಲ್ಲಿ…

Read More

ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಖನಗಾಂವ ಖುರ್ದ ಗ್ರಾಮದ ಶ್ರೀ ಗ್ರಾಮದೇವತೆ ಯಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್, ದೇವಿಯ ಉಡಿ ತುಂಬಿ ಆಶೀರ್ವಾದ ಪಡೆದರು. ಈ ಸಮಯದಲ್ಲಿ ಸಿದ್ರಾಯಿ ಪಾಟೀಲ, ಕಲ್ಲಪ್ಪ, ಮಹೇಶ. ಪಾಟೀಲ, ರಂಜನಾ ಗಿರಿಯಾಲ್ಕರ್, ಭಾರತಾ ಪಾಟೀಲ, ಮಾರುತಿ ಕೂನಸಿನಕೊಪ್ಪ, ಶಿವಬಸ್ಸು ಚಚಡಿ ಹಾಗೂ ದೇವಸ್ಥಾನದ ಟ್ರಸ್ಟ್ ಕಮೀಟಿಯವರು ಉಪಸ್ಥಿತರಿದ್ದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA

Read More

ಕೆ.ಆರ್.ಪೇಟೆ: ತಾಲ್ಲೂಕಿನ ಅಕ್ಕಿಹೆಬ್ಬಾಳು ಗ್ರಾಮದಲ್ಲಿರುವ ಶ್ರೀ ಲಕ್ಷ್ಮೀ ವೆಂಕಟೇಶ್ವರ ಸಮುದಾಯ ಭವನದ ಆವರಣದಲ್ಲಿ ಜನ ಸಂಪರ್ಕ ಸಭೆ ಹಾಗೂ ಕೆ.ಸಿ.ನಾರಾಯಣಗೌಡ ಅಭಿಮಾನಿ ಬಳಗದ ವತಿಯಿಂದ ಹೋಬಳಿ ಮಟ್ಟದ ಬೃಹತ್ ಸಮಾವೇಶ ನಡೆಯಿತು. ಗಣ್ಯರೊಂದಿಗೆ ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಿದ ಸಚಿವ ನಾರಾಯಣಗೌಡ ಸಮಾವೇಶವನ್ನುದ್ದೇಶಿಸಿ ಮಾತನಾಡಿ,  ಯಾರು ತಂದೆ ತಾಯಿ ಸೇವೆ ಮಾಡುತ್ತಾರೋ ಅಂಥವರಿಗೆ ದೇವರು ಉತ್ತಮ ಭವಿಷ್ಯ ಕೊಡುತ್ತಾನೆ. ಅದಕ್ಕೆ ಉದಾಹರಣೆಯಾಗಿ ನಾನೇ ಸಾಕ್ಷಿ ಎಂದರು. ಕ್ಷೇತ್ರಕೆ  ಯಾರೇ ಬರಲಿ ಅಭಿವೃದ್ಧಿ ಕೆಲಸ ಆಗಿಲ್ಲ ಅನ್ನುತ್ತಾರೆ. ಆದರೆ ಇಲ್ಲಿ ಯಾರು ಕಣ್ಣಿಗೆ ಪಟ್ಟಿ ಕಟ್ಟಿಕೊಂಡಿಲ್ಲ, ಮತದಾರ ದೇವರುಗಳು ನಿಮಗೆ ಗೊತ್ತು. ರಾಜಕೀಯದಲ್ಲಿ ಇರಬೇಕಾ ಇರಬಾರದೆಂದು ತೀರ್ಮಾನ ನಿಮ್ಮದು. ಗೂಂಡ ರಾಜಕಾರಣಿಗಳಿಗೆ ಭಯಪಡುವ ಅಗತ್ಯ ಇಲ್ಲ ಆದರಿಂದ ಈ ತಾಲ್ಲೂಕನ್ನು ಮಾದರಿ ತಾಲ್ಲೂಕನ್ನಾಗಿ ಮಾಡಬೇಕಾದರೆ, ಈ ಸಲ ನನಗೆ ಆಶೀರ್ವದಿಸಿ ಎಂದು ಅವರು ಮತದಾರರಿಗೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಮುಡಾ ಅಧ್ಯಕ್ಷರಾದ ವಾಸು, ಪಕ್ಷದ ಮುಖಂಡರುಗಳಾದ ಅಂಬರೀಶ್, ಮಂಜಣ್ಣ,…

Read More