Author: admin

ಹಲವು ದಿನಗಳ ಅನಿಶ್ಚಿತತೆಯ ನಂತರ ಮೇಘಾಲಯ ಮತ್ತು ನಾಗಾಲ್ಯಾಂಡ್‌ನ ಸಚಿವ ಸಂಪುಟ ಇಂದು ಅಧಿಕಾರ ವಹಿಸಿಕೊಳ್ಳಲಿದೆ. ಹಾಲಿ ಮುಖ್ಯಮಂತ್ರಿಗಳಾದ ಕಾನ್ರಾಡ್ ಸಂಗ್ಮಾ ಮತ್ತು ಸೋದರಳಿಯ ರಿಯೊ ನಾಗಾಲ್ಯಾಂಡ್‌ನಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಮೇಘಾಲಯದ ವಿವಿಧ ರಾಜಕೀಯ ಪಕ್ಷಗಳ ಒಕ್ಕೂಟವಾದ ಮೇಘಾಲಯ ಡೆಮಾಕ್ರಟಿಕ್ ಅಲಯನ್ಸ್ (MDA) ಅನ್ನು ಕ್ಯಾಬಿನೆಟ್ ರಚನೆಗೆ ಮುಂಚಿತವಾಗಿ ಪುನರ್ರಚಿಸಲಾಯಿತು. ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಅಧ್ಯಕ್ಷತೆಯ ಸಮಿತಿಯು ಬಿಜೆಪಿ, ಯುಡಿಪಿ, ಎಚ್‌ಎಸ್‌ಪಿಡಿಪಿ ಮತ್ತು ಪಿಡಿಎಫ್‌ಗಳನ್ನು ಒಳಗೊಂಡಿದೆ. ಹೊಸ ಸಂಪುಟದಲ್ಲಿ ಸಂಗ್ಮಾ ಅವರ ಎನ್‌ಪಿಪಿ 8 ಸಚಿವರನ್ನು ಪಡೆಯಲಿದೆ. ಯುಡಿಪಿ, ಎಚ್‌ಎಸ್‌ಪಿಡಿಪಿ ಮತ್ತು ಬಿಜೆಪಿ ಎರಡೂ ಪಕ್ಷಗಳಿಗೆ ತಲಾ ಒಂದು ಸಚಿವ ಸ್ಥಾನ ಸಿಗಲಿದೆ. ಮುಖ್ಯಮಂತ್ರಿ ಸೇರಿದಂತೆ 12 ಸಚಿವರಲ್ಲಿ 4 ಮಂದಿ ಗಾರೋ ಹಿಲ್ಸ್‌ನಿಂದ ಮತ್ತು 8 ಮಂದಿ ಖಾಸಿ-ಜೈನ್ತಿಯಾ ಹಿಲ್ಸ್‌ನವರು. 11 ಶಾಸಕರನ್ನು ಹೊಂದಿರುವ ಯುಡಿಪಿ ಮತ್ತು 2 ಶಾಸಕರನ್ನು ಹೊಂದಿರುವ ಪಿಡಿಎಫ್ ಬೆಂಬಲದೊಂದಿಗೆ ಸಂಗ್ಮಾ ಸರ್ಕಾರಕ್ಕೆ 45 ಶಾಸಕರ ಬೆಂಬಲವಿದೆ. ನಾಗಾಲ್ಯಾಂಡ್‌ನ ದೀರ್ಘಾವಧಿಯ ಮುಖ್ಯಮಂತ್ರಿ ನೆಫ್ಯೂ ರಿಯೊ…

Read More

ಬಿಜೆಪಿ ಕರ್ನಾಟಕ ಅಧ್ಯಕ್ಷ ನಳಿನ್ ಕುಮಾರ್ ಕಟ್ಟಿಲ್ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ನಿಂದನಾತ್ಮಕ ಹೇಳಿಕೆ ನೀಡಿದ್ದಾರೆ. ಮಕ್ಕಳನ್ನು ಹೊಂದುವ ಸಾಮರ್ಥ್ಯ ಇಲ್ಲದ ಕಾರಣ ರಾಹುಲ್ ಗಾಂಧಿ ಮದುವೆಯಾಗಿಲ್ಲ ಎಂದು ನಳಿನ್ ಕುಮಾರ್ ಅವಮಾನಿಸಿದ್ದಾರೆ. ಬಿಜೆಪಿಯ ಸಂಕಲ್ಪ ಯಾತ್ರೆಯ ಭಾಗವಾಗಿ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಕರ್ನಾಟಕ ಎಂಎಲ್‌ಸಿ ಮಂಜುನಾಥ್ ಅವರನ್ನು ಉಲ್ಲೇಖಿಸಿ ಬಿಜೆಪಿ ನಾಯಕರ ವಿವಾದಾತ್ಮಕ ಹೇಳಿಕೆ. ಸಿದ್ದರಾಮಯ್ಯ ಮತ್ತು ರಾಹುಲ್ ಗಾಂಧಿ ಈ ಹಿಂದೆ ಕೋವಿಡ್ ಲಸಿಕೆ ತೆಗೆದುಕೊಳ್ಳಬಾರದು ಎಂದು ಹೇಳಿದ್ದರು. ಲಸಿಕೆ ಹಾಕಿದರೆ ಮಕ್ಕಳಾಗುವುದಿಲ್ಲ ಎಂದರು. ಆದರೆ ನಂತರ ಅವರು ಲಸಿಕೆ ತೆಗೆದುಕೊಂಡರು. ರಾಹುಲ್ ಗಾಂಧಿ ಮದುವೆಯಾಗದೇ ಇರಲು ಅವರಿಗೆ ಮಕ್ಕಳಾಗುವ ಸಾಮರ್ಥ್ಯ ಇಲ್ಲದಿರುವುದೇ ಕಾರಣ ಎಂದು ಎಂಎಲ್ ಸಿ ಮಂಜುನಾಥ್ ಕಳೆದ ದಿನ ಹೇಳಿದ್ದರು. ನಳಿನ್‌ಕುಮಾರ್‌ ನಿಂದನೆ ವಿರುದ್ಧ ಕಾಂಗ್ರೆಸ್‌ ಹರಿಹಾಯ್ದರು. ನಳಿನ್ ಕುಮಾರ್ ಅವರಿಗೆ ಗಂಭೀರ ಮಾನಸಿಕ ಸಮಸ್ಯೆಗಳಿವೆ ಎಂದು ಕಾಂಗ್ರೆಸ್ ಶಾಸಕ ಮತ್ತು ರಾಜ್ಯ ಸಂವಹನ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ ಟ್ವೀಟ್…

Read More

ಅಂತರಾಷ್ಟ್ರೀಯ ಮಹಿಳಾ ದಿನವಾದ ಮಾರ್ಚ್ 8 ರಂದು ತೆಲಂಗಾಣ ಸರ್ಕಾರ ಮಹಿಳಾ ಉದ್ಯೋಗಿಗಳಿಗೆ ರಜೆ ಘೋಷಿಸಿದೆ. ಈ ಸಂಬಂಧ ಸಾಮಾನ್ಯ ಆಡಳಿತ ಇಲಾಖೆ ಹೊರಡಿಸಿದ್ದ ಆದೇಶಕ್ಕೆ ಮುಖ್ಯ ಕಾರ್ಯದರ್ಶಿ ಎ.ಶಾಂತಿ ಕುಮಾರಿ ಸಹಿ ಹಾಕಿದ್ದಾರೆ. ತೆಲಂಗಾಣದಲ್ಲಿ ಸರ್ಕಾರಿ ಮತ್ತು ಖಾಸಗಿ ವಲಯಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ರಜೆ ಘೋಷಿಸಲಾಗಿದೆ. ತೆಲಂಗಾಣ ಸರ್ಕಾರವು ಒಂದು ವಾರದ ಆಚರಣೆಯನ್ನು ಪ್ರಾರಂಭಿಸುತ್ತಿದೆ. ಸಮಾಜಕ್ಕೆ ಮಹಿಳೆಯ ಮಹತ್ವವನ್ನು ಸಾರಲು ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದೆ. ನಗರ, ಗ್ರಾಮೀಣ ಮತ್ತು ಸ್ಥಳೀಯ ಪ್ರದೇಶಗಳಲ್ಲಿನ ಮಹಿಳಾ ಪ್ರತಿನಿಧಿಗಳು, ಸ್ವ-ಸಹಾಯ ಗುಂಪುಗಳು ಮತ್ತು ವಿವಿಧ ಎನ್‌ಜಿಒಗಳು ಕಾರ್ಯಕ್ರಮದಲ್ಲಿ ಭಾಗವಹಿಸುವುದನ್ನು ಖಚಿತಪಡಿಸಿಕೊಳ್ಳಲಾಗುವುದು. ತೆಲಂಗಾಣದ ವಿವಿಧ ಸ್ಥಳಗಳಲ್ಲಿ ವಿವಿಧ ಸ್ವಸಹಾಯ ಗುಂಪಿನ ಕಾರ್ಯಕರ್ತರು ತಯಾರಿಸಿದ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳಗಳನ್ನು ಸಹ ಆಯೋಜಿಸಲಾಗಿದೆ. ಇದಲ್ಲದೆ, ಸರ್ಕಾರವು ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಒಳಗೊಂಡಂತೆ ವಿಸ್ತಾರವಾದ ಆಚರಣೆಗಳನ್ನು ಸಹ ಆಯೋಜಿಸಿದೆ. ಮಹಿಳೆಯರ ಆರೋಗ್ಯ ಮತ್ತು ಸಬಲೀಕರಣದ ಕುರಿತು ವಿವಿಧ ವಿಚಾರ ಸಂಕಿರಣಗಳನ್ನೂ ಆಯೋಜಿಸಲಾಗಿದೆ ಎಂದು…

Read More

ತಿಪಟೂರು: ಬಡವರ ಪಾಲಿನ ಸಂಜೀವಿನಿ ಎಂದರೆ ಸರ್ಕಾರಿ ಆಸ್ಪತ್ರೆ ಆದರೆ ಅಲ್ಲಿನ ದಂತ ವೈದ್ಯರೊಬ್ಬರು ದಿನನಿತ್ಯ ಕುಡಿದಿರುತ್ಥಾರೆ ಎಂಬ ಆರೋಪ ಕೇಳಿ ಬಂದಿತ್ತು. ಆದರೆ ಇಂದು ಕರ್ತವ್ಯದ ವೇಳೆಯಲ್ಲಿಯೇ ಕುಡಿದು ಟೇಬಲ್ ಮೇಲೆ ಕಾಲು ಹಾಕಿಕೊಂಡು ಬಂದ ರೋಗಿಗಳಿಗೆ ಕೈಮುಗಿದು ಕಳುಹಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತಿಪಟೂರು ಸಾರ್ವಜನಿಕ ಆಸ್ಪತ್ರೆಯಲ್ಲಿನ ಕರ್ತವ್ಯನಿರತ ದಂತ ವೈದ್ಯ ಡಾ.ಜಯಪ್ರಕಾಶ್ ಇಷ್ಟೆಲ್ಲಾ ಅವಾಂತರ ಮಾಡಿಕೊಂಡಿದ್ದಾರೆ. ಈ ವೈದ್ಯ ತಿಪಟೂರು ಸಾರ್ವಜನಿಕ ಆಸ್ಪತ್ರೆಗೆ ಬಂದಾಗಿನಿಂದಲೂ ಈತ ಯಾವಾಗಲು ಪಾನ ಮತ್ತನಾಗಿರುತ್ತಾನೆಂದು ಚಿಕಿತ್ಸೆ ಪಡೆದ ರೋಗಿಗಳು ಹೇಳುತ್ತಿದ್ದರು. ಇನ್ನು ಯಾವಾಗ ಹೋದರು ಇನ್ನೊಂದು ದಿನ ಬನ್ನಿ ಎನ್ನುತ್ತಾ ದಿನವನ್ನು ತಳ್ಳುತ್ತಿದ್ದರು. ಆದರೆ ಇಂದು ಕರ್ತವ್ಯದ ವೇಳೆಯಲ್ಲಿಯೇ ಪಾನಮತ್ತನಾಗಿ ಛೇರ್ಮೇಲೆ ಕುಳಿತು ಟೇಬಲ್ ಮೇಲೆ ಕಾಲು ಹಾಕಿಕೊಂದ್ದಾರೆ. ಕೊಠಡಿಯ ಹೊರಗೆ ಬಂದಿರುವ ಹೊರ ರೋಗಿಗಳು ಸರದಿಯ ಸಾಲಿನಲ್ಲಿ ನಿಂತಿದ್ದಾರೆ. ಹೀಗೆ ಮಲಗಿರುವ ವೈದ್ಯರನ್ನು ರೋಗಿಯೊಬ್ಬರು ಎಚ್ಚರಿಸಲು ಹೋದಾಗ ಅವರನ್ನು ಮಾತನಾಡಿಸಲು ಸಾಧ್ಯವಾಗದಷ್ಟು ಪಾನಮತ್ತನಾದ ವೈದ್ಯ ಕೈ ಸನ್ನೆಯಲ್ಲಿಯೇ…

Read More

ತಿಪಟೂರು: ಕೈ ಕೊಟ್ಟಿರುವ ಕೊಬ್ಬರಿ ಬೆಲೆ ರೈತರ ಜೀವನ ವಿಷ ಕುಡಿಯುವ ಪರಿಸ್ಥಿತಿಗೆ ಬಂದಿದೆ ಎಂದು ಜನಸ್ಪಂದನ ಟ್ರಸ್ಟ್ಅಧ್ಯಕ್ಷ ಕಾಂಗ್ರೆಸ್ ಮುಖಂಡ ಸಿ.ಬಿ.ಶಶಿಧರ್ ತಿಳಿಸಿದರು. ತಾಲೂಕಿನಲ್ಲಿ ಗ್ರಾಮಸ್ಥರೊಂದಿಗೆ ಕೊಬ್ಬರಿ ಬೆಂಬಲ ಬೆಲೆ 13ನೇ ದಿನಕ್ಕೆ ಕಾಲಿಟ್ಟಿರುವ ರೈತ ಧರಣಿಗೆ ಬೆಂಬಲ ನೀಡಿದ ಅವರು, ಮೂರು ನಾಲ್ಕು ತಿಂಗಳ ಹಿಂದೆ ಕುಂಟರಿಗೆ 18,000 ಪಡೆಯುತ್ತಿದ್ದ ರೈತರು ಇದೀಗ ಬೆಲೆ ಶೇಕಡ 55 ಕಡಿಮೆ ಆಗಿರುವುದರಿಂದ ಸಂಕಷ್ಟದಲ್ಲಿದ್ದಾರೆ. ಬೆಲೆ ಕಡಿಮೆಯಾಗಿರುವುದು ರೈತರಿಗೆ ಸಂಕಷ್ಟವಾಗಿ ಪರಿಣಮಿಸಿದೆ ಎಂದು ಅವರು ಹೇಳಿದರು. ಕೇಂದ್ರ ಸಚಿವ ಅಮಿತ್ ಶಾ ಅವರನ್ನ ಕರೆಸಿ ತಿಪಟೂರಿನಲ್ಲಿ ಅದ್ದೂರಿ ತೆಂಗು ಬೆಳೆಗಾರರ ಸಮಾವೇಶ ಮಾಡಿ, ರೈತರಿಗೆ ಭರವಸೆ ನೀಡಿದರು. ಆದರೆ ಸಚಿವ ಬಿ.ಸಿ.ನಾಗೇಶ್ ಸೇರಿದಂತೆ ಜಿಲ್ಲೆಯ ಮೂವರು ಸಚಿವರು ಕೂಡ ಮಾತಿಗೆ ತಪ್ಪಿದ್ದಾರೆ. ಕೊಬ್ಬರಿ ಬೆಲೆ ಇಳಿಕೆಯ ಬಗ್ಗೆ ಶಾಸಕರಾಗಲಿ ಮಂತ್ರಿಗಳಾಗಲಿ ಕಿಂಚಿತ್ತೂ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಆರೋಪಿಸಿದರು. ಧರಣಿಯಲ್ಲಿ ಬೈರನಾಯಕನಹಳ್ಳಿ ಗ್ರಾಮಸ್ಥರು, ಮಹಿಳೆಯರು ಭಾಗವಹಿಸಿದ್ದರು. ವರದಿ: ಆನಂದ್, ತಿಪಟೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ…

Read More

ದೊಡ್ಡಬಳ್ಳಾಪುರದ ಮದುರಹೊಸಹಳ್ಳಿ ನಿವಾಸಿ ಮುನಿಆಂಜನೇಯ(65) ಧರ್ಮಸ್ಥಳಕ್ಕೆ ಹೊರಟಿದ್ಧ ನಿವೃತ್ತ ಪೊಲೀಸ್ ಸಿಬ್ಬಂದಿ ಶವವಾಗಿ ಪತ್ತೆಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮುನಿಅಂಜನೇಯ ಗೆಳೆಯರ ಜೊತೆ ಧರ್ಮಸ್ಥಳಕ್ಕೆ ಹೊರಟಿದ್ದರು. ನಿನ್ನೆ ಮಧ್ಯಾಹ್ನ 2ಗಂಟೆಗೆ ಮನೆ ಬಿಟ್ಟಿದ್ದ ಮುನಿಅಂಜನೇಯ ಇಂದು ಬೆಳಿಗ್ಗೆ 3ಗಂಟೆಯಲ್ಲಿ ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದ ಬಳಿ ಶವವಾಗಿ ಪತ್ತೆಯಾಗಿದ್ದಾರೆ. ಇನ್ನು ಮುನಿಆಂಜನೇಯ ಅವರ ಬಳಿ ಇದ್ದ ನಗದು ಚಿನ್ನಾಭರಣ ನಾಪತ್ತೆಯಾಗಿದೆ. ಸಾವಿನ ಬಗ್ಗೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದು ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಕುರಿತು ಪ್ರಕರಣ ದಾಖಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA

Read More

ನಾಲ್ಕರಿಂದ ಆರು ಶಾಸಕರನ್ನ ಬಿಟ್ಟು ಬಹುತೇಕರಿಗೆ ಬಿಜೆಪಿ ಟಿಕೆಟ್ ನೀಡಲಾಗುತ್ತದೆ ಎಂದು  ಬಿಎಸ್ ಯಡಿಯೂರಪ್ಪ ತಿಳಿಸಿದರು. ಕಲ್ಬುರ್ಗಿಯಲ್ಲಿ ಇಂದು ಮಾತನಾಡಿ ಬಿಎಸ್ ಯಡಿಯೂರಪ್ಪ, ಬಿಜೆಪಿಗೆ ಯಾರು ಬರ್ತಾರೋ ಅವರನ್ನ ನಾವು ಸ್ವಾಗತಿಸುತ್ತೇವೆ. ವರಿಷ್ಠರು ಎಲ್ಲಿ ಹೇಳ್ತಾರೋ ಅಲ್ಲಿ ವಿಜಯೇಂದ್ರ ಸ್ಪರ್ಧೆ ಮಾಡುತ್ತಾರೆ. ಬಹುತೇಕ ಶೀಕಾರಿಪುರ ಕ್ಷೇತ್ರದಿಂದಲೇ ಸ್ಪರ್ಧಿಸಬಹುದು . ಮೋದಿ ಬಗ್ಗೆ ಮಲ್ಲಿಕಾರ್ಜುನ ರ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ ಎಂದರು. ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಗೆ ಜನ ಸೇರುತ್ತಿಲ್ಲ. ಕಾಂಗ್ರೆಸ್ಸಿಗರು ರಾಜ್ಯಕ್ಕೆ ರಾಹುಲ್ ಗಾಂಧಿ ಯಾಕೆ ಕರೆತರುತ್ತಿಲ್ಲ. ಕಾಂಗ್ರೆಸ್ಸಿಗರು ಬೇಕಾದರೇ ತಮ್ಮ ನಾಯಕರನ್ನ ಕರದು ಪ್ರಚಾರ ಮಾಡಲಿ ಎಂದು ಬಿಎಸ್ ವೈ ತಿಳಿಸಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA

Read More

ರಾಯಬಾಗ: ಚುನಾವಣಾ ಸಮೀಪಿಸುತ್ತಿದ್ದಂತೆ ಈಗ ಎಲ್ಲೆಡೆ ಗಿಫ್ಟ್ ಪಾಲಿಟಿಕ್ಸ್ ತಾರಕಕ್ಕೇರುತ್ತಿದೆ. ಒಂದೆಡೆ ಪ್ರಾಮಾಣಿಕತೆಯ ಮಂತ್ರ, ಇನ್ನೊಂದೆಡೆ ಆಮಿಷದ ತಂತ್ರ ಮುಂದುವರಿದಿದೆ. ಹೊಸಹೊಸ ಆಕಾಂಕ್ಷಿಗಳು ತಮ್ಮ ಜಾಗ ಭದ್ರಪಡಿಸಿಕೊಳ್ಳಲು ಹೈ ಕಮಾಂಡ್ ಪಾದಪೂಜೆಯ ಜೊತೆಜೊತೆಗೇ ಜನರ ನಿಯತ್ತನ್ನೇ ಹಾಳುಗೆಡವುತ್ತಿದ್ದಾರೆ. ಇದೀಗ ರಾಯಬಾಗ ಕ್ಷೇತ್ರದಲ್ಲಿ ನಡೆದ ವಿದ್ಯಮಾನವೊಂದು ಯಾರು ಪ್ರಾಮಾಣಿಕರು? ಅಧಿಕಾರ ಮುಖ್ಯವೋ, ಪ್ರಾಮಾಣಿಕತೆ ಮುಖ್ಯವೋ ಎಂಬೆಲ್ಲ ವಿಷಯಗಳ ಬಗ್ಗೆ ಚರ್ಚೆ ಹುಟ್ಟುಹಾಕಿದೆ. ರಾಯಬಾಗ ಮತಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ತಮಿಳುನಾಡು ಸರಕಾರದ ನಿವೃತ್ತ ಐಎಎಸ್ ಅಧಿಕಾರಿ ಶಂಭು ಕಲ್ಲೋಳಿಕರ ಮತದಾರರಿಗೆ ಆಮಿಷವೊಡ್ಡಿರುವ ಘಟನೆ ರಾಯಬಾಗ ತಾಲೂಕಿನ ಜೋಡಟ್ಟಿ ಗ್ರಾಮದಲ್ಲಿ ನಡೆದಿದೆ. ಇದಕ್ಕಾಗಿಯೇ ಅವರು ಜೋಡಟ್ಟಿ ಗ್ರಾಮದಲ್ಲಿ ಕಲ್ಲೋಳಿಕರ ತೋಟದಲ್ಲಿ ಬಾವಿ ಪೂಜೆ ಹಾಗೂ ಸುಮಂಗಲಿಯರ ಉಡಿ ತುಂಬುವ ಕಾರ್ಯಕ್ರಮ ಆಯೋಜಿಸಿಸೀರೆಗಳನ್ನು ಹಂಚಲು ಮುಂದಾಗಿದ್ದಾರೆ. ಈ ವಿಷಯ ಒಬ್ಬರಿಂದೊಬ್ಬರಿಗೆ ಹರಡಿ ಸುಮಾರು 20 ಸಾವಿರಕ್ಕೂ ಹೆಚ್ಚು ಮಹಿಳಾ ಮಣಿಗಳು ಸೀರೆಗಾಗಿ ಮುಗಿಬಿದ್ದಿದ್ದಾರೆ. ಇದ್ದ ಸೀರೆ ಲೆಕ್ಕಕ್ಕೂ ಬಂದ ಮಹಿಳೆಯರ ಲೆಕ್ಕಕ್ಕೂ ತಾಳಮೇಳವಾಗದೇ ತಬ್ಬಿಬ್ಬಾದ ಶಂಭು…

Read More

ಕಾಗವಾಡ: ಮತಕ್ಷೇತ್ರ ವಿಭಿನ್ನ ಹಾಗೂ ರಾಜಕೀಯಕ್ಕೆ ಸಂಬಂಧಿಸಿದಂತೆ ವಿಶಿಷ್ಟವಾದಂತಹ ಒಂದು ಕ್ಷೇತ್ರವಾಗಿದೆ. ಈ ಕ್ಷೇತ್ರ ವಿರೋಧ ಪಕ್ಷದ ನಾಯಕರಾದಂತಹ ಸಿದ್ದರಾಮಯ್ಯ ಅವರಿಗೆ ಹುಲಿಯ ಬಿರುದು ನೀಡಿರುವಂತಹ ಈ ಕ್ಷೇತ್ರ ಮೊದಲಿನಿಂದಲೂ ಕಾಂಗ್ರೆಸ್ ಅತ್ಯಂತ ಶಕ್ತಿಶಾಲಿಯಾಗಿದೆ. ಈ ಕ್ಷೇತ್ರವನ್ನು ಕಾಂಗ್ರೆಸ್ ಮಾಯಾ ಮತ್ತು ಕಾಂಗ್ರೆಸ್ ಪಕ್ಷದ ಭದ್ರಬುನಾದಿ ಹಾಕಿರುವಂತಹ ನಿಷ್ಠಾವಂತ ಕಾರ್ಯಕರ್ತ ಓಂ ಪ್ರಕಾಶ್ ಪಾಟೀಲ್ ಇವರು 20 ವರ್ಷಗಳಿಂದ ಪ್ರಾಮಾಣಿಕವಾಗಿ ಪಕ್ಷವನ್ನು ಸಂಘಟಿಸುತ್ತಾ ಬಲಗೊಳಿಸುತ್ತಾ ಬಂದಿದ್ದಾರೆ. ಈಗಿನ ಕೆಪಿಸಿಸಿ ಅಧ್ಯಕ್ಷರಾದಂತಹ ಡಿಕೆ ಶಿವಕುಮಾರ್ ಆಗ ಪ್ರಚಾರ ಸಮಿತಿಯ ಅಧ್ಯಕ್ಷರಾಗಿದ್ದ ಸಮಯದಲ್ಲಿ ಇವರು ಕಾಗವಾಡ ಕ್ಷೇತ್ರದ ಪ್ರಚಾರ ಸಮಿತಿ ಅಧ್ಯಕ್ಷರಾಗಿದ್ದರು. ಇವರ ಕಾಲಾವಧಿಯಲ್ಲಿ 2018 ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಗವಾಡ ಮತಕ್ಷೇತ್ರ ಕಾಂಗ್ರೆಸ್ ಮಯವಾಗಿತ್ತು ರೂ.30,000 ಮತಗಳ ಅಂತರದಲ್ಲಿ ಕಾಂಗ್ರೆಸ್ ಪಕ್ಷ ವಿಜಯವಾಗಿತ್ತು. ಇದಕ್ಕೆ ಓಂ ಪ್ರಕಾಶ್ ಪಾಟೀಲ್ ಅವರ ಶ್ರಮ ಮತ್ತು ಪಕ್ಷ ಸಂಘಟನೆಯ ತಂತ್ರಗಾರಿಕೆಯ ಕಾರಣ ವಾಗಿತ್ತು. ಅದಾದ ನಂತರ ರಾಜಕೀಯ ಬೆಳವಣಿಗೆಗಳಿಂದಾಗಿ ಕಾಗವಾಡ ಕ್ಷೇತ್ರ ಉಪಚುನಾವಣೆ 2019ರಲ್ಲಿ ಎದುರಿಸುವಂತಹ…

Read More

ಬೆಳಗಾವಿ: ದಕ್ಷಿಣ ಮತಕ್ಷೇತ್ರದಲ್ಲಿ ಪ್ರಭಾವತಿ ಫೌಂಡೇಶನ್ ವತಿಯಿಂದ ಮಹಿಳಾ ದಿನಾಚರಣೆ ಹಾಗೂ ಹೋಳಿ ಹಬ್ಬದ ನಿಮಿತವಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಸಂಸ್ಥಾಪಕಿ ಪ್ರಭಾವತಿ ಚೌವಡಿ ಹೇಳಿದ್ಧಾರೆ. ಸಂಸ್ಕೃತಿಕ ಕಾರ್ಯಕ್ರಮಗಳು ಡಿಜೆ ಸಂಗೀತಮಯ ಕಾರ್ಯಕ್ರಮಗಳು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೆ ಮಹಿಳೆಯರು ಗೌರವಿಸುವುದು ಮತ್ತು ಕೌಶಲ್ಯ ಆಧಾರಿತ ಉದ್ಯೋಗಗಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಪ್ರಭಾವತಿ ಫೌಂಡೇಶನ್ ಸಂಸ್ಥಾಪಕಿ ಪ್ರಭಾವತಿ ಚೌವಡಿ ನಗರದ ಹೋಟೆಲ್ ಒಂದರಲ್ಲಿ ಸುದ್ದಿಗೋಷ್ಠಿ ಮುಖಾಂತರ ಮಾಹಿತಿ ನೀಡಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA

Read More