Author: admin

ಹಾವೇರಿ: ಮೊದಲು ಬಸ್ ​ಗಳಲ್ಲಿ ಪುರುಷ ಪ್ರಯಾಣಿಕರ ಸಂಖ್ಯೆ 60% ಮತ್ತು ಮಹಿಳಾ ಪ್ರಯಾಣಿಕರ ಸಂಖ್ಯೆ ಶೇ. 40 ರಷ್ಟಿತ್ತು. ಈಗ ಪುರುಷ ಪ್ರಯಾಣಿಕರ ಸಂಖ್ಯೆ ಕುಸಿದಿದೆ ಎಂದು ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್​ ತಿಳಿಸಿದ್ದಾರೆ. ಶಕ್ತಿ ಯೋಜನೆ ಬಗ್ಗೆ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಶೇ.60 ರಷ್ಟು ಮಹಿಳೆಯರು ಈಗ ಸಾರಿಗೆ ಬಸ್ ನಲ್ಲಿ  ಪ್ರಯಾಣಿಸುತ್ತಿದ್ದಾರೆ. ಶೇ.40ರಷ್ಟು ಪುರುಷರು ಪ್ರಯಾಣಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಬಸ್ ​ಗಳ ಆದಾಯ ದಿನಕ್ಕೆ 55 ಲಕ್ಷ ಇತ್ತು. ಈಗ 70 ಲಕ್ಷಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA

Read More

ಗದಗ: ಜನರ ಮನಸ್ಸನ್ನ‌ ಕೆಡಿಸಿ ಗೊಂದಲ‌ಸೃಷ್ಠಿ ಮಾಡಿ ರಾಜಕೀಯ ಲಾಭ ಪಡೆಯುವ ಬಿಜೆಪಿ ಪ್ರಯತ್ನ ವಿಫಲವಾಗಿದೆ ಎಂದು ಸಚಿವ ಹೆಚ್.ಕೆ.ಪಾಟೀಲ‌ ಹೇಳಿದ್ದಾರೆ. ಅಕ್ಕಿ ಹೊಂದಿಸಲು ಕೈಲಾಗದ ಸಿಎಂ‌ ಎಂಬ ಬಿಜೆಪಿ ಟ್ವೀಟ್​ ಗೆ ತಿರುಗೇಟು ನೀಡಿದ ಅವರು, ಅಕ್ಕಿ‌ ಹೊಂದಿಸಲು ಆಗದಂತೆ ಪರಿಸ್ಥಿತಿ ನಿರ್ಮಾಣ‌ ಮಾಡಿದ್ದೇ ಕೇಂದ್ರ ಸರ್ಕಾರ ಎಂದಿದ್ದಾರೆ. ಖಾಸಗಿಯವರಿಗೆ ಅಕ್ಕಿ ಮಾರಾಟ ಮಾಡಿ ಆದರೆ ರಾಜ್ಯ ಸರ್ಕಾರಕ್ಕೆ ಅಕ್ಕಿ‌ ಕೊಡಬೇಡಿ. ಇಂತಹ ನಿಲುವಿಗೆ ಆ(ಬಿಜೆಪಿ) ಪಕ್ಷದ ನಾಯಕರಿಗೆ ನಾಚಿಕೆ ಆಗುವುದಿಲ್ಲವೇ ಎಂದು ಪ್ರಶ್ನಿಸಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA

Read More

ಬೆಂಗಳೂರು: ನಗರದಲ್ಲಿ ನಿಗದಿಯಾಗಿದ್ದ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ರದ್ದು ಮಾಡಲಾಗಿದೆ. ಮುಂದಿನ ಕ್ರಮದ ಬಗ್ಗೆ ಹೈಕಮಾಂಡ್ ಜತೆ ಚರ್ಚಿಸಲು ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ  ಬೆಳಗ್ಗೆ 11 ಗಂಟೆಗೆ ಬೆಂಗಳೂರಿನಿಂದ ನವದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ನಡೆಯಲಿರುವ ಬಿಜೆಪಿ ಸಭೆಯಲ್ಲಿ ಬಿಎಸ್​ ಯಡಿಯೂರಪ್ಪ ಭಾಗವಹಿಸಲಿದ್ದು, ಬಳಿಕ ದೆಹಲಿಯಲ್ಲೇ ವಿಧಾನಸಭೆ, ವಿಧಾನಪರಿಷತ್ ವಿಪಕ್ಷ ನಾಯಕ, ಮುಖ್ಯ ಸಚೇತಕರ ಹೆಸರು ಘೋಷಣೆ ನಿರೀಕ್ಷೆ ಇದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA

Read More

ಕಾರವಾರ: ನಡುರಸ್ತೆಯಲ್ಲಿ ದನದ ತಲೆಯೊಂದು ಬಿದ್ದಿರುವಂತಹ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಹೆಗಡೆಕಟ್ಟಾ ಗ್ರಾಮದಲ್ಲಿ ಈ ಘಟನೆ ಕಂಡು ಬಂದಿದ್ದು, ಸದ್ಯ ಆತಂಕ ಸೃಷ್ಟಿಸಿದೆ. ಅಪರಿಚಿತರು ದನದ ತಲೆ ಕತ್ತರಿಸಿ ಬಿಸಾಕಿರುವ ಶಂಕೆ ವ್ಯಕ್ತವಾಗಿದೆ. ಇನೊಂದೆಡೆ ಪೊದೆಯಲ್ಲಿ ಎಸೆದಿದ್ದ ದನದ ತಲೆಯನ್ನ ಕಚ್ಚಿ ತಂದು ಶ್ವಾನಗಳು ರಸ್ತೆ ಬಿಸಾಡಿವೆ ಎನ್ನಲಾಗುತ್ತಿದೆ. ಸದ್ಯ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಶಿರಸಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA

Read More

ತುಮಕೂರು: ಜಿಲ್ಲೆಯಲ್ಲಿ ಆಡಳಿತಾತ್ಮಕ ಭೂಮಿ ವಸತಿ ಸಮಸ್ಯೆಗಳ ಕುರಿತು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯಿಂದ  ಶನಿವಾರ ಬೆಳಿಗ್ಗೆ ಮುಂದಿನ  ಹೋರಾಟಗಳ ರೂಪುರೇಷೆಗಳ ಬಗ್ಗೆ ತುಮಕೂರಿನ ಭೂಮಿ ವಸತಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಭೆಯು ಯಶಸ್ವಿಯಾಗಿ ನಡೆಯಿತು ತುಮಕೂರು ಜಿಲ್ಲೆಯ ಚಿ.ನಾ ಹಳ್ಳಿ,ತುಮಕೂರು, ಮಧುಗಿರಿ, ಕೊರಟಗೆರೆ ತಾಲ್ಲೂಕುಗಳ ಸುಮಾರು 300 ಜನರು ಸಭೆಯಲ್ಲಿ ಭಾಗವಹಿಸಿ ಸಮಿತಿಯಲ್ಲಿ ಸಮಸ್ಯೆಗಳನ್ನು  ನೊಂದಾಯಿಸಿಕೊಂಡರು. ಇದೇ ವೇಳೆ ಸಮಿತಿಗೆ ಬಂದಿರುವ ಸಾರ್ವಜನಿಕರ ಸಮಸ್ಯೆಗಳನ್ನು ಪಟ್ಟಿ ಮಾಡಿ, ಜುಲೈ ತಿಂಗಳ 15ನೇ ತಾರೀಖಿನ ನಂತರ ಸುಮಾರು 500 ಜನರು ಒಂದು ದಿನದ ಸಾಂಕೇತಿಕ ಪ್ರತಿಭಟನೆ ಕೈಗೊಂಡು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿ ಸಮಸ್ಯೆಗಳನ್ನು ಮೂರು ತಿಂಗಳೊಳಗೆ ಬಗೆಹರಿಸಿ ಕೊಡಲು ಒತ್ತಾಯಿಸಲು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು. ಇದೇ ವೇಳೆ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರನ್ನು ಭೇಟಿ ಮಾಡಿ ತುರ್ತು ಸಮಸ್ಯೆಗಳ ಬಗ್ಗೆ ವಿಚಾರ ಮಾಡಲಾಯಿತು. ಈ ವೇಳೆ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ತುಮಕೂರು…

Read More

ತುರುವೇಕೆರೆ: ತಾಲೂಕಿನ ಕೊಂಡಜ್ಜಿ ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಕ್ಕೆ ಸಾಮಾನ್ಯ ಕ್ಷೇತ್ರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಬಿಸಿಎಂಎ ಮತ್ತು ಬಿ ಸಿ ಎಂ ಬಿ ಕ್ಷೇತ್ರಗಳಿಗೆ ಚುನಾವಣೆ ನಡೆಯಿತು. ಬಿಜೆಪಿ ಮುಖಂಡರಾದ ಕೊಂಡಜ್ಜಿ ವಿಶ್ವನಾಥ್ ರವರ ಬೆಂಬಲಿತ ಏಳು ಜನ ಅಭ್ಯರ್ಥಿಗಳಾದ ಲತಾ ಗಿರೀಶ್ ಕೆ ಸಿ.ಸುಮತಿ ಚಂದ್ರಶೇಖರ್, ಸಾವಿತ್ರಮ್ಮ ರಾಜಣ್ಣ ,ಪದ್ಮ ಗಂಗಾಧರ್, ತೀರ್ಥ ಶ್ರೀ ಪುರುಷೋತ್ತಮ್ , ಜಯಲಕ್ಷ್ಮಿ ಶಿವಣ್ಣ .ಜಗದಾಂಬ ರಮೇಶ್ ರವರುಗಳು ವಿಜಯಶಾಲಿಗಳಾಗಿದ್ದು, ಇವರ ಹೆಸರುಗಳು ಘೋಷಣೆಯಾದ ತಕ್ಷಣ ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಿಸಿ ಸಿಹಿ ಹಂಚಿದರು. ಅಧ್ಯಕ್ಷ ಗಾದಿಯೂ ಕೂಡ ವಿಶ್ವನಾಥ್ ರವರ ಬೆಂಬಲಿತರ ಪಾಲಿಗೆ ಬಂದಿದೆ. ವಿಜಯಶಾಲಿಗಳಾದ ನೂತನ ಸದಸ್ಯರುಗಳಿಗೆ ಮುಖಂಡರಾದ ಕೊಂಡಜ್ಜಿ ಕೆ.ಎಸ್.ವಿಶ್ವನಾಥ್ ಹಾರ ಹಾಕಿ ಶಾಲು ಹೊದಿಸಿ ಅಭಿನಂದಿಸಿದರು.ಈ ಸಂದರ್ಭದಲ್ಲಿ ದಯಾನಂದ್. ಕೆ.ಸಿ.ಗಿರೀಶ್, ಗುಡಿ ಗೌಡ ಲೋಕೇಶ್, ಪುರುಷೋತ್ತಮ್, ಸಿದ್ದಲಿಂಗೇಗೌಡ ಇತರರು ಇದ್ದರು. ವರದಿ: ಸುರೇಶ್ ಬಾಬು ಎಂ. ತುರುವೇಕೆರೆ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ…

Read More

ಬೆಳಗಾವಿ: ಮಹಾನ್ ಪುರುಷರ ಇತಿಹಾಸ ತಿರುಚುವ ಪ್ರಯತ್ನ ನಡೆಯುತಿದೆ.ಇತಿಹಾಸ ಉಳಿಸಿ, ಬೆಳೆಸುವ ಸಲುವಾಗಿ ಮಹಾನ್ ಪುರುಷರ ಪ್ರತಿಮೆ ಅನಾವರಣ ಮಾಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅಭಿಪ್ರಾಯಪಟ್ಟಿದ್ದಾರೆ. ಇಲ್ಲಿನ ಆಂಜನೇಯ ನಗರದಲ್ಲಿರುವ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಆವರಣದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣಗೊಳಿಸಿ ಮಾತನಾಡಿದ ಅವರು,ಮಹಾಪುರುಷರು ಇದ್ದ, ಹಾಗೆ ಇರಬೇಕು. ಯಾರೋ ಮಧ್ಯ ಬಂದು ಒಂದು ಪುಸ್ತಕದಲ್ಲಿ ತಿರುಚಿದರೆ ಹತ್ತು ವರ್ಷದ ನಂತರ ಅದು ನಿಜವಾಗುತ್ತದೆ. ಹೀಗಾಗಿ ರಾಯಣ್ಣ, ಅಂಬೇಡ್ಕರ್ ಅವರೆಲ್ಲಾ ಇದ್ದ ಹಾಗೇ ಇರಬೇಕೆಂಬ ಉದ್ದೇಶದಿಂದ ಅಲ್ಲಲ್ಲಿ ಮಹಾನ್ ಪುರುಷರ ಪ್ರತಿಮೆ ಅನಾವರಣ ಮಾಡಲಾಗುತ್ತಿದೆ. ಸರ್ಕಾರದಿಂದ ಇನ್ನೂ ಹೆಚ್ಚಿನ ಕೆಲಸಗಳನ್ನು ಮಾಡಲಾಗುವುದು ಎಂದು ಭರವಸೆ ನೀಡಿದರು. ದೇಶದ ಪ್ರಗತಿಗೆ ಕಾಂಗ್ರೆಸ್‌ ಸಾಕಷ್ಟು ಶ್ರಮಿಸಿದೆ: 2013ರಲ್ಲಿ ನಾನು ಮಂತ್ರಿಯಾಗಿದ್ದಾಗ ಈ ಕಾಲೇಜು ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದೇವು, ಈಗ ಇಷ್ಟು ದೊಡ್ಡದಾಗಿ ಬೆಳೆದಿರುವುದು ಬಹಳ ಸಂತೋಷ ತಂದಿದೆ. ಇದು ಇತಿಹಾಸ, ಮತ್ತೆ…

Read More

ಜುಲೈ 3ರಿಂದ 14ರವರೆಗೆ ವಿಧಾನಮಂಡಲದ ಅಧಿವೇಶನ ನಡೆಯಲಿದೆ.ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ವಿಧಾನಸೌಧ ಸುತ್ತಮುತ್ತಲಿನ 2 ಕಿ. ಮೀ ವ್ಯಾಪ್ತಿಯ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ನಗರ ಪೊಲೀಸ್ ಕಮಿಷನರ್ ಬಿ. ದಯಾನಂದ್ ನಿಷೇದಾಜ್ಞೆ ಹೊರಡಿಸಿದ್ದಾರೆ. ಜುಲೈ 3ರಿಂದ 14ರವರೆಗೆ ಬೆಳಿಗ್ಗೆ 6 ಗಂಟೆಯಿಂದ ತಡರಾತ್ರಿ 12ಗಂಟೆವರೆಗೂ ನಿಷೇಧಾಜ್ಞೆ ಜಾರಿಯಲ್ಲಿರಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಐದು ಅಥವಾ ಐದಕ್ಕಿಂತ ಹೆಚ್ಚು ಜನರು ಗುಂಪು ಸೇರಬಾರದು. ಪ್ರತಿಭಟನೆ, ಮೆರವಣಿಗೆ,ರ್ಯಾಲಿ,ಸಭೆ ನಡೆಸಬಾರದು. ಶಸ್ತ್ರಾಸ್ತ್ರ, ದೊಣ್ಣೆ, ಕತ್ತಿ, ಕಲ್ಲು, ಚಾಕು ಹಾಗೂ ಇತರ ಮಾರಕಾಸ್ತ್ರಗಳನ್ನು ಇಟ್ಟುಕೊಂಡು ಓಡಾಡಬಾರದು. ವ್ಯಕ್ತಿಗಳ ಪ್ರತಿಕೃತಿ ದಹನ, ಭಿತ್ತಿಪತ್ರ ಪ್ರದರ್ಶನ ಮಾಡಬಾರದು’ ಎಂದು ಆದೇಶದಲ್ಲಿ ತಿಳಿಸಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಕೊರಟಗೆರೆ: ಪಟ್ಟಣದ ತೇರಿನ ಬೀದಿಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಏಕಾದಶಿ ಹಬ್ಬದ ಮರುದಿನ ಬೆಳಗ್ಗೆ ಕೋಟೆ ವೆಂಕಟರಮಣ ಸ್ವಾಮಿಯ ರಥೋತ್ಸವ ಮಾಡುವುದು ಇತಿಹಾಸದಿಂದ ಇಲ್ಲಿ ನಡೆದುಕೊಂಡು ಬಂದಿರುವ ಪದ್ಧತಿ.. ಶ್ರೀ ವೆಂಕಟರಮಣ ಸ್ವಾಮಿಯ ತೇರಿನ ವಿಶೇಷವೇನೆಂದರೆ ಏಕಾದಶಿ ಹಬ್ಬದ ಮರುದಿನ ಬೆಳಗ್ಗೆ ತೇರನ್ನು ಇಳಿಯುವ ಸಂದರ್ಭದಲ್ಲಿ ಕರಿಯಣ್ಣ ಕೆಂಚಣ್ಣ ಎಂದು ಭೂತಾರಾಧನೆ ಮಾಡುವುದು ಇಲ್ಲಿನ ಕೆಲವು ಜನಾಂಗದ ವಾಡಿಕೆ… ಪಟ್ಟಣದಲ್ಲಿ ವಾಸಿಸುವ ಪ್ರತಿಯೊಬ್ಬರು ಜಾತಿಭೇದವಿಲ್ಲದೆ ಈ ರಥೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ ಶ್ರೀ ವೆಂಕಟರಮಣ ಸ್ವಾಮಿಯ ಕೃಪೆಗೆ ಪಾತ್ರರಾಗಿ ತೇರನ್ನ ಎಳೆದು ದೇವರಲ್ಲಿ ತಮ್ಮ ಇಷ್ಟಾರ್ಥಗಳನ್ನು ಬೇಡಿಕೊಳ್ಳುತ್ತಾರೆ… ಶ್ರೀ ವೆಂಕಟರಮಣ ಸ್ವಾಮಿಯ ಭಕ್ತಾದಿಗಳು ಮಾತನಾಡಿ ಮುಜರಾಯಿ ಇಲಾಖೆಗೆ ಸೇರಿರುವ ಈ ದೇವಸ್ಥಾನಗಳನ್ನು ಜೀರ್ಣೋದ್ವಾರ ಮಾಡುವುದರಲ್ಲಿ ನಮ್ಮ ರಾಜ್ಯ ಸರ್ಕಾರ ವಿಫಲವಾಗಿರುವುದು ನಮ್ಮ ದುರದೃಷ್ಟವೇ ಸರಿ ದೇವಸ್ಥಾನಗಳಲ್ಲಿ ಭಕ್ತಾದಿಗಳು ಹರಕೆ ಎಂದು ಹುಂಡಿಯಲ್ಲಿ ಹಾಕುವ ಹಣವನ್ನು ಮಾತ್ರ ತೆಗೆದುಕೊಂಡು ಹೋಗುತ್ತಾರೆ ಆದರೆ ದೇವಸ್ಥಾನಗಳ ಅಭಿವೃದ್ಧಿ ಮಾತ್ರ ಶೂನ್ಯವಾಗಿದೆ ಇನ್ನಾದರೂ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು…

Read More

ಕೊರಟಗೆರೆ: ತಾಲೂಕಿನ ಕಸಬಾ ಹೋಬಳಿಯ ಬೋಡ ಬಂಡೆನಹಳ್ಳಿ ಗ್ರಾಮದಲ್ಲಿ ಏಕಾದಶಿ ಹಬ್ಬದ ಪ್ರಯುಕ್ತ ಇತಿಹಾಸ ಪ್ರಸಿದ್ದಿ ಇರುವಂತಹ ಬೆಟ್ಟದ ಮೇಲೆ ಗುಹೆಯೊಳಗೆ ನೆಲೆಸಿರುವ ತಿಮ್ಮಪ್ಪ ಹಾಗೂ ಆಂಜನೇಯನಿಗೆ ಗ್ರಾಮದ ಪ್ರತಿ ಮನೆಯಲ್ಲೂ ವಿಶೇಷ ನೈವೇದ್ಯವನ್ನ ತಯಾರು ಮಾಡಿ ಬುತ್ತಿ ಕಟ್ಟಿಕೊಂಡು ಬೆಟ್ಟಕ್ಕೆ ಹೋಗುವುದು ವಾಡಿಕೆ… ಗ್ರಾಮದ ಹಿಂದೂ ಸಾದರು ಜನಾಂಗದ ಪ್ರತಿ ಮನೆಯಲ್ಲಿ ವಿಶೇಷ ನೈವೇದ್ಯದ ಬುತ್ತಿಯನ್ನು ಹೊತ್ತುಕೊಂಡು ಊರಿನ ಗ್ರಾಮ ದೇವತೆ ಶ್ರೀ ಚೌಡೇಶ್ವರಿ ತಾಯಿಗೆ ಪೂಜೆ ಸಲ್ಲಿಸಿ ಬೆಟ್ಟದ ಮೇಲೆ ನೆಲೆಸಿರುವ ತಿಮ್ಮಪ್ಪ ಹಾಗೂ ಆಂಜನೇಯನಿಗೆ ನೈವೇದ್ಯವನ್ನ ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಿ ರೈತರು ತಮ್ಮ ಭೂಮಿಯಲ್ಲಿ ಬಿತ್ತಿರುವ ಬೆಳೆಯು ಕೈ ಸೇರುವಂತೆ ವರುಣ ದೇವರಲ್ಲಿ ಪ್ರಾರ್ಥಿಸುತ್ತಾರೆ. ನಂತರ ಬೆಟ್ಟಕ್ಕೆ ಹೋಗಿರುವ ಭಕ್ತರು ಪ್ರತಿ ವರ್ಷದಂತೆ ಬಂಡೆಯ ಮೇಲೆ ನೈವೇದ್ಯವನ್ನ ಸೇವಿಸಿ ಹಿಂತಿರುಗುವುದು ಇಲ್ಲಿನ ಪದ್ಧತಿಯಾಗಿದೆ.ಇದೇ ಸಂದರ್ಭದಲ್ಲಿ ಗ್ರಾಮದ ಹಿರಿಯರು ಯುವಕರು ಮಹಿಳೆಯರು ಮಕ್ಕಳು ಪಾಲ್ಗೊಂಡಿದ್ದರು… ವರದಿ: ಮಂಜುಸ್ವಾಮಿ ಎಂ.ಎನ್., ಕೊರಟಗೆರೆ… ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು…

Read More