Author: admin

ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆಯಾಗಿ ಖುಷ್ಬು ನೇಮಕಗೊಂಡಿದ್ದಾರೆ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಅವರು ಟ್ವಿಟರ್‌ನಲ್ಲಿ ಅವರ ಅವಿರತ ಪ್ರಯತ್ನಗಳು ಮತ್ತು ಮಹಿಳೆಯರ ಹಕ್ಕುಗಳಿಗಾಗಿ ಹೋರಾಟವನ್ನು ಗುರುತಿಸಿ ಅಭಿನಂದಿಸಿದ್ದಾರೆ. ಈ ಹಿಂದೆ ನಟಿ ಖುಷ್ಬು ಅವರು 2020 ರಿಂದ ಡಿಎಂಕೆ ಮತ್ತು ಕಾಂಗ್ರೆಸ್ ಪಕ್ಷಗಳನ್ನು ಸೇರಿದ ನಂತರ ಬಿಜೆಪಿಗೆ ಸೇರಿದ್ದರು. ಖುಷ್ಬು ಅವರು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯೆಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. 2021 ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಅವರು ಆಯರ್ವಿಳಕ್ಕು ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋತಿದ್ದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಮೆಕ್ಸಿಕನ್ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಭಯಾನಕ ಫೋಟೋವನ್ನು ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಿದ್ದಾರೆ. 3 ದಿನಗಳ ಹಿಂದೆ ಎಂಜಿನಿಯರ್ ಒಬ್ಬರು ತೆಗೆದ ಕಪ್ಪು ಬಣ್ಣದ ಭೂತದ ಆಕೃತಿಯ ಫೋಟೋವನ್ನು ಅವರು ಹಂಚಿಕೊಂಡಿದ್ದಾರೆ. ಇದು ಅಲಕ್ಸ್ ಎಂಬ ಅಲೌಕಿಕ ಆಕೃತಿಯಂತೆ ಕಾಣುತ್ತದೆ ಎಂದು ಅವರು ಹೇಳಿದ್ದಾರೆ.ಇದಾದ ನಂತರ ಅಲೌಕಿಕ ಆಕೃತಿಯನ್ನು ನಿಜವಾಗಿಯೂ ತೆಗೆದುಕೊಳ್ಳಲಾಗಿದೆಯೇ ಅಥವಾ ಮರದ ಕೊಂಬೆಯ ಮೇಲಿನ ಆಕೃತಿಯಂತೆ ಕಾಣುತ್ತಿದೆಯೇ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಬಾಗಲಕೋಟೆ (ತೇರದಾಳ): ನವ ಕರ್ನಾಟಕದಲ್ಲಿ ಎಲ್ಲಾರಿಗೂ ಅವಕಾಶವಿರುವ, ಸಮೃದ್ಧಿ ಇರುವ ನಾಡು ನಿರ್ಮಾಣ ಮಾಡೋಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆ ನೀಡಿದರು. ಅವರು ಇಂದು ಶ್ರೀಶೈಲ ಮಲ್ಲಿಕಾರ್ಜುನ ಭ್ರಮರಾಂಬ ದೇವಸ್ಥಾನಕ್ಕೆ ಅಡಿಗಲ್ಲು ಪೂಜೆ ನೆರವೇರಿಸಿ ಬಂಡಿಗಣಿ ಮಠ ಗ್ರಾಮದಲ್ಲಿ ಮಾತನಾಡಿದರು. ಕಾಯಕ ಹಾಗೂ ಕರ್ತವ್ಯದಲ್ಲಿ ಬಹಳ ವ್ಯತ್ಯಾಸವಿದೆ. ಕರ್ತವ್ಯ ದಿಂದ ಬಂದ ಉತ್ಪಾದನೆಗಳನ್ನು ದಾಸೋಹ ಮೂಲಕ ನೀಡಿದಾಗ ಅದು ಕಾಯಕ ಆಗುತ್ತದೆ. ಕಾಯಕನಿಷ್ಠೆಯನ್ನು ಪರಮಪೂಜ್ಯ ರು ದೊಡ್ಡ ಪ್ರಮಾಣದಲ್ಲಿ ಮಾಡುತ್ತಿರುವುದು ಹೆಮ್ಮೆಯ ಸಂಗತಿ. ಭಕ್ತಿ ಎಂಬುವುದು ಉತ್ಕೃಷ್ಟ ಪ್ರೀತಿ. ಕರಾರುರಹಿತ ಪ್ರೀತಿ ಭಕ್ತರಲ್ಲಿ ಬಂದಾಗ ಭಗವಂತ ಆಶೀರ್ವಾದ ಮಾಡುತ್ತಾನೆ ಎಂದು ಅವರು ಹೇಳಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ದೇಶಾದ್ಯಂತ ಹೊಸ ನಿಯಮ ಜಾರಿಯಾಗ್ತಿದೆ. ಈ ಮೂಲಕ ಪಡಿತರ ಚೀಟಿಯಿಂದ ಆಹಾರ ಧಾನ್ಯ ಪಡೆಯುವವರಿಗೆ ಕೇಂದ್ರ ಸರ್ಕಾರದ ನಿರ್ಧಾರದಿಂದ  ಸಿಹಿ ಸುದ್ದಿ ಸಿಕ್ಕಿದೆ. ಮೋದಿ ಸರ್ಕಾರದ ಮಹತ್ವಾಕಾಂಕ್ಷೆಯ  ಒನ್ ರೇಷನ್ ಕಾರ್ಡ್ ಯೋಜನೆಯನ್ನು ಇಡೀ ದೇಶದಲ್ಲಿ ಜಾರಿಗೆ ತರಲಾಗಿದ್ದು, ಇದರ ನಂತರ ಎಲ್ಲಾ ಅಂಗಡಿಗಳಲ್ಲಿ ಆನ್‌ಲೈನ್ ಎಲೆಕ್ಟ್ರಾನಿಕ್ ಪಾಯಿಂಟ್ ಆಫ್ ಸೇಲ್(ಪಿಒಎಸ್) ಸಾಧನಗಳನ್ನು ಕಡ್ಡಾಯಗೊಳಿಸಲಾಗುತ್ತದೆ ಎಂದು ಹೇಳಲಾಗಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾನೂನಿನ ಅಡಿಯಲ್ಲಿ ಪಡಿತರ ಅಂಗಡಿಗಳಲ್ಲಿ ಎಲೆಕ್ಟ್ರಾನಿಕ್ ಮಾಪಕಗಳೊಂದಿಗೆ ಎಲೆಕ್ಟ್ರಾನಿಕ್ ಪಾಯಿಂಟ್ ಆಫ್ ಸೇಲ್(ಇಪಿಒಎಸ್) ಸಾಧನಗಳನ್ನು ಲಿಂಕ್ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ, ಇದರಿಂದಾಗಿ ಫಲಾನುಭವಿಗಳು ಪೂರ್ಣ ಪ್ರಮಾಣದ ಆಹಾರ ಧಾನ್ಯಗಳನ್ನು ಪಡೆಯಬಹುದು. ಇದಕ್ಕಾಗಿ ಕಾನೂನು ನಿಯಮಗಳನ್ನು ಕೇಂದ್ರ ಸರ್ಕಾರ  ತಿದ್ದುಪಡಿ ಮಾಡಿದೆ. ನ್ಯಾಯಬೆಲೆ ಅಂಗಡಿಗಳನ್ನು ಆನ್‌ಲೈನ್ ಎಲೆಕ್ಟ್ರಾನಿಕ್ ಪಾಯಿಂಟ್ ಆಫ್ ಸೇಲ್(ಪಿಒಎಸ್) ಸಾಧನಗಳೊಂದಿಗೆ ಲಿಂಕ್ ಮಾಡಿದರೆ ಪಡಿತರ ತೂಕದಲ್ಲಿ ದೋಷಕ್ಕೆ ಅವಕಾಶವಿಲ್ಲ. ಸಾರ್ವಜನಿಕ ವಿತರಣಾ ವ್ಯವಸ್ಥೆಯ(ಪಿಡಿಎಸ್) ಫಲಾನುಭವಿಗಳಿಗೆ ಯಾವುದೇ ಸಂದರ್ಭದಲ್ಲಿ ಕಡಿಮೆ ಪಡಿತರ ಆಹಾರ ಸಿಗದಂತೆ ನೋಡಿಕೊಳ್ಳಲು, ಹೈಬ್ರಿಡ್…

Read More

ಕೊರಟಗೆರೆ: ಕೊರಟಗೆರೆ ತಾಲೂಕಿನಲ್ಲಿ ಇತ್ತೀಚಿಗೆ ನೂತನವಾಗಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ನಟರಾಜ್ ಹಲವು ಶಾಲೆಗಳಿಗೆ ಅನಿರೀಕ್ಷಿತ ಭೇಟಿ ನೀಡುವ ಮೂಲಕ ಶಿಕ್ಷಕರಿಗೆ ಅಚ್ಚರಿ ಮೂಡಿಸಿದ್ದಾರೆ. ತಾಲೂಕಿನಲ್ಲಿ ಇತ್ತೀಚೆಗೆ ಅನಿರೀಕ್ಷಿತ ಭೇಟಿ ಕೊಡುತ್ತಿರುವ ಬಿಇಒ ನಟರಾಜ್ ಇಂದು ಯಾವ ಶಾಲೆಗೆ ಬರಲಿದ್ದಾರೆ ಎಂದು ಶಿಕ್ಷಕರಿಗೆ ನಡುಕ ಹುಟ್ಟುತ್ತಿದೆ, ಯಾವುದೇ ಮಾಹಿತಿ ಇಲ್ಲದೆ ಬೆಳ್ಳಂಬೆಳ್ಳಗೆ ಶಿಕ್ಷಕರು ಶಾಲೆಗೆ ಬರುವ ಮುಂಚೆಯೇ ಶಾಲೆಯ ಮುಂದೆ ಹಾಜರಾಗುವ ಬಿಇಓ ನಟರಾಜ್ ಶಾಲೆಯ ಪೂರ್ಣ ವಾತಾವರಣವನ್ನು ಕಲೆಹಾಕಿ ಶಿಕ್ಷಕರಿಗೆ ಖಡಕ್ ಎಚ್ಚರಿಕೆ ನೀಡಲು , ಸರ್ಪ್ರೈಸ್ ವಿಸಿಟ್ ನೀಡುವ ಮೂಲಕ ತಾಲೂಕಿನಲ್ಲಿ ಮಿಂಚಿನ ಸಂಚಲನವನ್ನೇ ಮೂಡಿಸಿದ್ದಾರೆ. ಬಿಇಒ ನಟರಾಜ್ ಶೈಕ್ಷಣಿಕ ಕ್ಷೇತ್ರದಲ್ಲಿ ಒಂದು ಬದಲಾವಣೆ ತರಲು ಒಂದು ವಿಶಿಷ್ಟ ರೀತಿಯಲ್ಲಿ ಪ್ರಯೋಗ ಮಾಡುತ್ತಿದ್ದು, ಕೊರಟಗೆರೆ ತಾಲೂಕಿನಲ್ಲಿ ಹಲವು ಶಾಲೆಗಳಿಗೆ ಇತ್ತೀಚಿಗೆ ಸರ್ಪ್ರೈಸ್ ವಿಸಿಟ್ ನೀಡುವ ಮೂಲಕ ನಿಗದಿತ ಸಮಯಕ್ಕೆ ಹಾಜರಾಗದ ಶಿಕ್ಷಕರುಗಳಿಗೆ ಶಾಕ್ ನೀಡಿದ್ದು, ಜೊತೆಗೆ ಶಾಲೆಯನ್ನು ಮುಕ್ತಾಯ ಸಮಯಕ್ಕಿಂತ ಮುಂಚೆ ಹೊರಹೋಗುವ ಶಿಕ್ಷಕರಿಗೂ ಖಡಕ್ ಎಚ್ಚರಿಕೆ…

Read More

ತಿಪಟೂರು: ತಾಲೂಕಿನ ಹೊನ್ನವಳ್ಳಿ ಹೋಬಳಿಯ ಶ್ರೀ ಕ್ಷೇತ್ರ ಹೊಸಪಟ್ಟಣದ ಶ್ರೀ ದುರ್ಗಾಂಭ ದೇವಿಯವರ ಜಾತ್ರಾ ಮಹೋತ್ಸವವು ಇಂದಿನಿಂದ ಮಾರ್ಚ್  1ರವರೆಗೆ ಜರಗಲಿದೆ. ಈ ಸಂಬಂಧ ಕರೆದ ಪತ್ರಿಕಾಗೋಷ್ಠಿಯಲ್ಲಿ ಶ್ರೀ ದುರ್ಗಾಂಭ ದೇವಿ ಸೇವಾ ಸಮಿತಿ (ರಿ) ಮತ್ತು ದೇವಾಲಯದ ಗುಡಿಗೌಡರಾದ ಮಹಾಲಿಂಗಯ್ಯ ಜಾತ್ರಾ ಮಹೋತ್ಸವದ ಕುರಿತು ಮಾಹಿತಿ ನೀಡಿದರು. ಗ್ರಾಮದ ಧೂತರಾಯ ಸ್ವಾಮಿ, ಚೌಡೇನಹಳ್ಳಿ ಗ್ರಾಮದ ಬೀರಲಿಂಗೇಶ್ವರ ಸ್ವಾಮಿ ಮತ್ತು ಚೌಡೇನಹಳ್ಳಿ ಗ್ರಾಮದ ಧೂತರಾಯ ಸ್ವಾಮಿ ಆಗಮನದೊಂದಿಗೆ ದಿನಾಂಕ: 26/27.02.2023 ನೇ ಭಾನುವಾರ ಮತ್ತು ಸೋಮವಾರ ಅಮ್ಮನವರ ಮಧುವಣಗಿತ್ತಿ ಶಾಸ್ತ್ರ,, ದಿನಾಂಕ: 28.02.2023 ನೇ ಮಂಗಳವಾರ ಶ್ರೀ ದೇವಿಯವರಿಗೆ ಮುತ್ತಿನ ಪಲ್ಲಕ್ಕಿ ಉತ್ಸವ ಮತ್ತು ಆರತಿಬಾನ. ರಾತ್ರಿ ರಸಮಂಜರಿ (ಆರ್ಕೆಸ್ಟ್ರಾ) ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು. ದಿನಾಂಕ:01.03.2023 ನೇ ಬುಧವಾರ ಗಂಗಾಸ್ನಾನ,ಸಿಡಿ ಉತ್ಸವ ನಂತರ ಮಧ್ಯಾಹ್ನ 01:30 ಕ್ಕೆ ಶ್ರೀ ದೇವಿಯವರ  ದಿವ್ಯ ರಥೋತ್ಸವ, ನಂತರ ಅನ್ನ ಸಂತರ್ಪಣೆ, ಸಂಜೆ ಜಗದೊಡೆಯ ಧೂತಯ್ಯನವರ ಅದ್ದೂರಿ ಮಣೇವು  ಕಾರ್ಯಕ್ರಮವಿದ್ದು, ಈ ಜಾತ್ರಾ…

Read More

ಗದಗ: ಸ್ವಾಮೀಜಿಗಳ ಬಗ್ಗೆ ನನಗೆ ಅಪಾರ ಗೌರವ ಇದೆ. ಆದ್ರೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್​ರಂತೆ ಯಡಬಿಡಂಗಿ ಥರ ಆಗಬಾರದು ಎಂದು ಹಿರಿಯ ನಟ, ಆಪ್ ಮುಖಂಡ ಮುಖ್ಯಮಂತ್ರಿ ಚಂದ್ರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಜಿಲ್ಲೆಯಲ್ಲಿ ಆಯೋಜಿಸಿದ ಸುದ್ದಿಗೋಷ್ಠಿ ಮಾತನಾಡಿ, ಮಠಾಧೀಶರು ರಾಜಕೀಯ ಪ್ರವೇಶ ವಿಚಾರವಾಗಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದರು. ಲಾಯರ್ ಕೋರ್ಟ್​ನಲ್ಲಿ ಮಾತ್ರ ಲಾಯರ್. ಹೊರಗೆ ಬಂದ್ರೆ ಏನು ಬೇಕಾದ್ರೂ ಮಾಡಬಹುದು. ಆ ಸ್ವಾತಂತ್ರ್ಯ ಭಾರತ ದೇಶದಲ್ಲಿದೆ. ಹಾಗೆಯೇ ಸ್ವಾಮೀಜಿಗಳು ಕೂಡ ಕಾವಿ ಬಟ್ಟೆ ಹಾಕದೇ ರಾಜಕೀಯಕ್ಕೆ ಬಂದ್ರೆ ಒಳ್ಳೆಯದು. ಕಾವಿ ಬಟ್ಟೆ ಹಾಕಿಕೊಂಡು ಬಂದ್ರೆ ಗೌರವ ಇರಲ್ಲ. ಎಲ್ಲವನ್ನೂ ಬಿಟ್ಟು ಬಂದ್ರೆ ಓಕೆ. ಇಲ್ಲವಾದರೆ ಉತ್ತರ ಪ್ರದೇಶದ ಸಿಎಂ ಯೋಗಿಯಂತೆ ಯಡಬಿಡಂಗಿ ಥರ ಆಗಬಾರದು ಎಂದು ಕಿಡಿಕಾರಿದರು. ಸ್ವಾಮೀಜಿಗಳಿಗೆ ಕಾವಿ ಧಾರ್ಮಿಕ ಚಿಂತನೆ ಮಾಡತಕ್ಕಂತ ಭಾವನೆ ಇದೆ. ಅದನ್ನು ಇಟ್ಕೊಂಡು ರಾಜಕೀಯ ಮಾಡ್ತೀನಿ ಅಂದ್ರೆ ಮೂಲ ಸಿದ್ದಾಂತ ದುರುಪಯೋಗ ಆಗುತ್ತೆ ಅನ್ನೋ ಭಯವಿದೆ. ಮೂಲ ಸಿದ್ಧಾಂತ,…

Read More

ಪ್ರಕೃತಿ ಮತ್ತು ಪ್ರಾಣಿಗಳು, ಮನುಷ್ಯನ ಉತ್ತಮ ಸ್ನೇಹಿತರು. ದೇಶೀಯ ಸಾಕುಪ್ರಾಣಿಗಳನ್ನು ಮಾತ್ರ ಹಿಂತಿರುಗಿ ನೋಡಬೇಕಾಗಿದೆ. ಅವರು ನಮ್ಮ ಹತ್ತಿರದ ಸ್ನೇಹಿತರು. ಸಹಚರರು ಅಥವಾ ಮಕ್ಕಳಂತಹ ಸಾಕುಪ್ರಾಣಿಗಳನ್ನು ಮನುಷ್ಯರು ಕಾಳಜಿ ವಹಿಸುತ್ತಾರೆ. ಮನುಷ್ಯರು ಮತ್ತು ಈ ಪ್ರಾಣಿಗಳ ನಡುವೆ ಆಳವಾದ ಸ್ನೇಹವು ಹೆಚ್ಚಾಗಿ ಬೆಳೆಯುತ್ತದೆ. ಖಿನ್ನತೆ ಮತ್ತು ಬುದ್ಧಿಮಾಂದ್ಯತೆಯಿಂದ ಬಳಲುತ್ತಿರುವ ವೃದ್ಧರಿಗೆ ಸಾಂತ್ವನ ನೀಡುವ ಕುದುರೆಗಳ ಗುಂಪನ್ನು ಈಗ ಸಾಮಾಜಿಕ ಮಾಧ್ಯಮಗಳು ನೋಡುತ್ತಿವೆ. ಕುದುರೆಗಳು ತಮ್ಮ ಸಾಮೀಪ್ಯದಿಂದ  ಜನರಿಗೆ ಮಾನಸಿಕ ನೆಮ್ಮದಿ ಮತ್ತು ಸಂತೋಷವನ್ನು ತರುತ್ತವೆ. ಈ ಪ್ರಾಣಿಗಳ ಉಪಸ್ಥಿತಿಯು ವಯಸ್ಕರಿಗೆ ಚಿಕಿತ್ಸೆಯಂತಿದೆ. ಇಂತಹ ಹಲವಾರು ಮನ ಕಲಕುವ ವಿಡಿಯೋಗಳು ಪ್ರತಿದಿನ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಇದಕ್ಕೂ ಮುನ್ನ ತಾಯಿ ಮತ್ತು ಮಗುವಿನ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಜನರು ತೆಗೆದಿದ್ದರು. ಈ ತಾಯಿ ತನ್ನ ಮಗುವನ್ನು ಸೈಕಲ್‌ನಲ್ಲಿ ಕರೆದುಕೊಂಡು ಹೋಗುವ ರೀತಿ ವಿಡಿಯೋದಲ್ಲಿ ಎದ್ದು ಕಾಣುತ್ತಿದೆ. ಸೈಕಲ್ ನಲ್ಲಿದ್ದ ಮಗುವಿಗೆ ತಾಯಿ ಕುರ್ಚಿಯಲ್ಲಿ ಹಿಂಬದಿಯ ಸೀಟನ್ನು ಸಿದ್ಧಪಡಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ…

Read More

ಫೆಬ್ರುವರಿ 27ಕ್ಕೆ ಬೆಳಗಾವಿಗೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಸ್ವಾಗತಕ್ಕೆ ಕಮಲ ಪಡೆ ಅದ್ದೂರಿಯಿಂದ ತಯಾರಿ ನಡೆಸಿದೆ. ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಪದಾಧಿಕಾರಿಗಳು ಹಗಲು ರಾತ್ರಿ ಎನ್ನದೆ ಬೆಳಗಾವಿ ನಗರದ ಗಲ್ಲಿಗಳಲ್ಲಿ ರಸ್ತೆ ಉದ್ದದ ದೀಪ ಕಂಬಗಳಿಗೆ ಭಾರತೀಯ ಜನತಾ ಪಕ್ಷದ ಧ್ವಜ ಪತಾಕೆಗಳು ಹಾಗೂ ಸ್ವಾಗತ ಕೋರುವ ಪ್ಲೆಕ್ಸ್ ಗಳನ್ನು ಅಲ್ಲಲ್ಲಿ ಅಳವಡಿಸಲಾಗುತ್ತಿದೆ, ಭಾರತೀಯ ಜನತಾ ಪಕ್ಷದ ಕಾರ್ಯಕರ್ತರಲ್ಲಿ ಈ ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ಮೋದಿ ಬರುತ್ತಿರುವುದು ಅತಿಯ ಸಂತೋಷ ಹಾಗೂ ಆನಂದ ಸಂಭ್ರಮ ವನ್ನು ಉಂಟು ಮಾಡಿದೆ. ಅಲ್ಲದೆ ದಕ್ಷಿಣ ಮತ್ತು ಉತ್ತರ ಶಾಸಕರಗಳಾದ ಅಭಯ್ ಪಾಟೀಲ್ ಹಾಗೂ ಅನಿಲ್ ಬೇನಕೆ ಇವರ ನೇತೃತ್ವದಲ್ಲಿ ಕಾರ್ಯಕ್ರಮದ ಪೂರ್ವ ಸಿದ್ಧತೆಗಳನ್ನು ಮಾಡಲಾಗುತ್ತಿದೆ. ಈ ಕಡೆ ಬೂಡಾ ಅಧ್ಯಕ್ಷರಾದ ಸಂಜಯ್ ಬೆಳಗಾವ್ಕರ್ ತಮ್ಮ ಕಾರ್ಯಕರ್ತರೊಂದಿಗೆ ಬೆಳಗಾವಿ ನಗರಗಳ ರಸ್ತೆ ಉದ್ದಕ್ಕೂ ಅಲಂಕಾರ ಕಾರ್ಯದಲ್ಲಿ ತೊಡಗಿದ್ದಾರೆ. ಒಟ್ಟಾರೆ ಬೆಳಗಾವಿ ಕೇಸರಿಮಯವಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್…

Read More

ಹಾಸನ: ರಾಜ್ಯದಲ್ಲಿ ಕುಮಾರಸ್ವಾಮಿಯವರ ಸರ್ಕಾರ ಹೋದ ಮೇಲೆ ಹಾಸನದಲ್ಲಿ ಜೆಡಿಎಸ್ ಕಾರ್ಯಕರ್ತರ ಮೇಲೆ ಆಗುತ್ತಿರುವ ಕಿರುಕುಳ ನನಗೆ ತಿಳಿದಿದೆ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಬೇಸರ ವ್ಯಕ್ತಪಡಿಸಿದ್ದಾರೆ. ಹಾಸನದ ಬೈಲಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾರ್ಯಕರ್ತರ ಮೇಲೆ 107 ಕೇಸ್ ದಾಖಲಿಸಿದ್ದಾರೆ. ಕೆಲವರು ಚುನಾವಣೆ ಸಂದರ್ಭದಲ್ಲಿ ಗಲಾಟೆ ಮಾಡಿ ಕಾರ್ಯಕರ್ತರನ್ನು ಜೈಲಿಗೆ ಕಳಿಸುವ ಅಥವಾ ಗಡಿಪಾರು ಮಾಡುವ ಹುನ್ನಾರ ಮಾಡಿದ್ದಾರೆ ಎಂದು ಅವರು ಆರೋಪಿಸಿದರು. ಕೆಲವರು ದುಡ್ಡಿನಿಂದ ರೌಡಿಸಂ ಮಾಡಲು ಹೊರಟಿದ್ದಾರೆ. ನಿನ್ನೆ ಉಗನೆ ಗ್ರಾಮಕ್ಕೆ ಹೋಗಿದ್ದೆ. ಅಲ್ಲಿ ಜನ ನನ್ನ ಬಳಿ ರಕ್ಷಣೆ ಬೇಕು ಎಂದು ಹೇಳುತ್ತಾರೆ. ಈ ಕ್ಷೇತ್ರವನ್ನು ನಾನು ಸವಾಲಾಗಿ ಸ್ವೀಕರಿಸಿ ಮುನ್ನಡೆಸುವ ಕುರಿತು ಪಕ್ಷದ ಮುಖಂಡರೊಂದಿಗೆ ಚರ್ಚೆ ಮಾಡಿ ತಿರ್ಮಾನ ಕೈಗೊಳ್ಳುತ್ತೇನೆ ಎಂದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More