Subscribe to Updates
Get the latest creative news from FooBar about art, design and business.
- ನಾವು ಗೊರಕೆ ಹೊಡೆಯುವ ಶಬ್ದ ನಮಗೇ ಏಕೆ ಕೇಳಿಸುವುದಿಲ್ಲ? ಇದರ ಹಿಂದಿದೆ ಮೆದುಳಿನ ವಿಚಿತ್ರ ಆಟ!
- ಎಫ್ ಡಿ ಹೂಡಿಕೆದಾರರ ಗಮನಕ್ಕೆ: ನವೆಂಬರ್ ನಲ್ಲಿ ಬಡ್ಡಿದರ ಬದಲಾವಣೆ, ಯಾವ ಬ್ಯಾಂಕ್ ನಲ್ಲಿ ಹೆಚ್ಚು ಲಾಭ?
- ಸರ್ಕಾರಿ ಹುದ್ದೆಗಳ ಆಕಾಂಕ್ಷಿಗಳಿಗೆ ಸುವರ್ಣಾವಕಾಶ: ಉಚಿತ ತರಬೇತಿಗೆ ಅರ್ಜಿ ಆಹ್ವಾನ
- ದೇವೀರಮ್ಮನ ಜಾತ್ರೆಗೆ ಕ್ಷಣಗಣನೆ:ಬೆಟ್ಟ ಹತ್ತುವ ಮುನ್ನ ಈ ನಿಯಮ ತಿಳಿಯಿರಿ!
- ಯುವಜನರಲ್ಲೂ ಹೆಚ್ಚುತ್ತಿದೆ ಕ್ಯಾನ್ಸರ್ ಅಪಾಯ; ನಿರ್ಲಕ್ಷಿಸಬಾರದ ಈ ಲಕ್ಷಣಗಳು!
- ಶ್ರೀ ಶಿವಕುಮಾರ ಸ್ವಾಮೀಜಿ ವೃತ್ತದ ಹೆಸರು ಬದಲಾವಣೆ ಇಲ್ಲ – ಜಿಲ್ಲಾಡಳಿತದಿಂದ ಅಧಿಕೃತ ಸ್ಪಷ್ಟನೆ
- ವಿದ್ಯಾರ್ಥಿಗಳ ನೆಚ್ಚಿನ ಗುರುಗಳಾದ ಕೃಷ್ಣಪ್ಪ ಜೆ. ಅವರಿಗೆ ಗೌರವಪೂರ್ವಕ ನಿವೃತ್ತಿ ಬೀಳ್ಕೊಡುಗೆ
- ವಿಶೇಷ ಚೇತನರಿಗೆ ಸಮಾಜದಲ್ಲಿ ಮೊದಲ ಆದ್ಯತೆ ನೀಡಬೇಕು: ಶಾಸಕ ಸಿ.ಬಿ.ಸುರೇಶ್ ಬಾಬು
Author: admin
ಆಶಾ ಕಾರ್ಯಕರ್ತೆಯರ ಸಂಬಳ ಹೆಚ್ಚಳ ಮಾಡುವ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ ಅಂತಾ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು. ವಿಧಾನ ಪರಿಷತ್ ಪ್ರಶೋತ್ತರ ಕಲಾಪದಲ್ಲಿ ಶಾಸಕ ತಿಪ್ಪೇಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದರು. ಆಶಾ ಕಾರ್ಯಕರ್ತೆಯರ ಸಂಬಳ ಜಾಸ್ತಿ ಮಾಡಬೇಕು. ಅವರಿಗೂ ಪಿಂಚಣಿ ಕೊಡಬೇಕು. ಹೊಸ ಸ್ಮಾರ್ಟ್‌ಫೋನ್‌ಗಳನ್ನ ನೀಡಬೇಕು ಅಂತಾ ಆಗ್ರಹಿಸಿದರು. ಇದಕ್ಕೆ ಉತ್ತರ ನೀಡಿದ ಸಚಿವ ದಿನೇಶ್ ಗುಂಡೂರಾವ್, ಆಶಾ ಕಾರ್ಯಕರ್ತೆಯರ ಸಂಬಳ ಹೆಚ್ಚಳ ಮಾಡುವ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ. ರಾಜ್ಯ ಸರ್ಕಾರದಿಂದ ಈಗಾಗಲೇ 5 ಸಾವಿರ ಗೌರವ ಧನ ನೀಡಲಾಗ್ತಿದೆ. ಕೇಂದ್ರದಿಂದ 5-8 ಸಾವಿರ ಗೌರವ ಧನ ಸಿಗುತ್ತಿದೆ. ಒಟ್ಟಾರೆ 10-13 ಸಾವಿರ ಗೌರವ ಧನ ಸಿಗುತ್ತಿದೆ. ಸದ್ಯ ಅವರ ಗೌರವ ಧನ ಹೆಚ್ಚಳ ಸಾಧ್ಯವಿಲ್ಲ ಎಂದು ಹೇಳಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್. ಡಿ. ಕುಮಾರಸ್ವಾಮಿ ಕೇಂದ್ರ ಸಚಿವರಾಗುತ್ತಾರಾ? ಎಂಬ ಚರ್ಚೆಗಳು ಆರಂಭವಾಗಿದೆ. ಇತ್ತೀಚೆಗೆ ಕುಮಾರಸ್ವಾಮಿ ಬಿಜೆಪಿ ಬಗ್ಗೆ ಬಹಳ ಸಾಫ್ಟ್ ಕಾರ್ನರ್ ಆಗಿ ಮಾತುಗಳನ್ನು ಆಡುತ್ತಿದ್ದು, ಲೋಕಸಭಾ ಚುನಾವಣೆಗೆ ನಮ್ಮ ಕುಟುಂಬದಿಂದ ಯಾರು ಸ್ಪರ್ಧೆ ಮಾಡುವುದಿಲ್ಲ ಎಂಬುದನ್ನು ಹೇಳುವ ಮೂಲಕ ಈ ವಿಚಾರಕ್ಕೆ ಪುಷ್ಟಿ ನೀಡುತ್ತಿದ್ದಾರೆ. ಇನ್ನು ಕೇಂದ್ರ ಸಚಿವರಾಗುವ ಮೂಲಕ ರಾಜ್ಯದಲ್ಲಿ ತಮ್ಮ ಪಕ್ಷವನ್ನು ಸದೃಢಗೊಳಿಸಿಕೊಳ್ಳಬಹುದು. ತಮ್ಮ ಪುತ್ರನಿಗೂ ರಾಜಕೀಯ ನೆಲೆ ಕಲ್ಪಿಸಬಹುದು. ಜೊತೆಗೆ ಮುಂದಿನ 5 ವರ್ಷಗಳ ಕಾಲ ಆ್ಯಕ್ಟಿವ್ ರಾಜಕಾರಣದಲ್ಲಿ ಗುರುತಿಸಿಕೊಳ್ಳಬಹುದು ಎಂಬ ಕಾರಣವನ್ನು ಮುಂದಿಟ್ಟುಕೊಂಡು ಕೇಂದ್ರ ಸಚಿವರಾಗುತ್ತಾರೆ ಎಂಬ ಚರ್ಚೆಗಳು ಆರಂಭವಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ರಾಜ್ಯದ ಕರಾವಳಿ ಜಿಲ್ಲೆಗಳು ಹಾಗೂ ದಕ್ಷಿಣ ಒಳನಾಡಿನ ಕೆಲವೆಡೆ ಮುಂದಿನ 4 ದಿನ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ವಿಜಯನಗರ, ಯಾದಗಿರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಹಾಸನ, ಮಂಡ್ಯ, ಮೈಸೂರು, ರಾಮನಗರ, ತುಮಕೂರು ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಕ್ಯಾಸಲ್ ರಾಕ್, ಕೊಲ್ಲೂರು, ಕಾರ್ಕಳ, ಕೋಟ, ಸಿದ್ದಾಪುರ, ಕುಮಟಾ, ಕಾರವಾರ, ಶಿರಾಲಿ, ಗೇರುಸೊಪ್ಪ, ಧರ್ಮಸ್ಥಳ, ಸುಬ್ರಹ್ಮಣ್ಯ, ಬೆಳ್ತಂಗಡಿ, ಕೊಟ್ಟಿಗೆಹಾರ, ಜಾನ್ಮನೆ, ಸಿದ್ದಾಪುರ, ಮಂಕಿ, ಹೊನ್ನಾವರ, ಗೋಕರ್ಣ, ಕುಂದಾಪುರ, ಅಕ್ಕಿಆಲೂರು, ಕಿರವತ್ತಿ, ಮುಲ್ಕಿ, ಮಾಣಿ, ಗುಬ್ಬಿ, ಕಮ್ಮರಡಿ, ಎನ್ಆರ್ಪುರ, ಜಯಪುರ, ಸಕಲೇಶಪುರ, ಚಿಕ್ಕಬಳ್ಳಾಪುರದಲ್ಲಿ ಮಳೆಯಾಗಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿರಲಿದ್ದು, ಸಾಧಾರಣ ಮಳೆಯಾಗಲಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್…
ಬಾಗಲಕೋಟೆ: ಜ್ಞಾನವು ಭಾಷೆಗಿಂತ ದೊಡ್ಡದಾಗಿದ್ದು ನಿರಂತರ ಅದ್ಯಯನದಿಂದ ಭಾಷಾ ಸಾಮರ್ಥ್ಯವನ್ನು ಅರಿತುಕೊಳ್ಳಲು ಸಾಧ್ಯ. ಓದುವ, ಗ್ರಹಿಸುವ ಮತ್ತು ಕಲ್ಪನಾ ಪ್ರವೃತ್ತಿ ಬೆಳಸಿಕೊಳ್ಳಲು ಬರವಣಿಗೆಯು ಉತ್ತಮ ಮಾದ್ಯಮ ಎಂದು ವಿಶ್ರಾಂತ ಪ್ರಾಚಾರ್ಯರಾದ ಡಾ. ವ್ಹಿ.ಎಸ್ ಕಟಗಿಹಳ್ಳಿಮಠ ಹೇಳಿದರು. ಬಿವಿವಿ ಸಂಘದ ಬಸವೇಶ್ವರ ಕಲಾ ಮಾಹಾವಿದ್ಯಾಲಯದಲ್ಲಿ ಕರ್ನಾಟಕ ಸಾಹಿತ್ಯ ಸಂಘ ಹಾಗೂ ಐಕ್ಯೂ ಎಸಿ ಘಟಕದ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಳ್ಳಲಾದ ಕನ್ನಡ ಬರವಣಿಗೆಯ ಕೌಶಲ್ಯ ಸರ್ಟಿಫಿಕೇಟ್ ಕೋರ್ಸ್ ಉದ್ಘಾಟನಾ ಸಮಾರಂಭವನ್ನು ಕಪ್ಪೆ ಅರೆಭಟ್ಟನ ಶಾಸನದ ಮೊದಲ ಕನ್ನಡ ತ್ರಿಪದಿಯನ್ನು ಓದುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸಾವಿರಾರು ವರ್ಷಗಳಿಂದ ಭಾಷೆಗಳು ಸರಳೀಕರಣವಾಗುತ್ತ ಸುಲಭ ಭಾಷೆಗಳಾಗಿ ಬಂದಿದ್ದು ಇದಕ್ಕೆ ಬರವಣಿಗೆಯು ಮೂಲವಾಗಿದೆ ಎಂದರು. ಎಲ್ಲರೂ ಮಾತಗಳನ್ನಾಡಬಹುದು ಆದರೆ ಮೆಚ್ಚುಗೆಯಾಗುವ ಬರವಣಿಗೆ ಬರೆಯಬೇಕಾದರೆ ಕೌಶಲ್ಯ ಮುಖ್ಯ. ಬರವಣಿಗೆಗೂ ತನ್ನದೆಯಾದ ಭಾಷೆಯಿದೆ. ಹಿರಿಯ ದರ್ಜೆಯ ಸ್ಪರ್ಧಾತ್ಮಕ ಪರೀಕ್ಷೆಗಳು ಪರಿಣಾಮಕಾರಿ ಬರವಣಿಗೆಯನ್ನು ನಿರೀಕ್ಷಿಸುವುದರಿಂದ ಪರೀಕ್ಷೆಗಳನ್ನು ಎದುರಿಸುವ ಕ್ರಮ ಗೊತ್ತಿದ್ದರೆ ಐಎಸ್, ಕೆಎಸ್ ಪರೀಕ್ಷೆಗಳನ್ನು ಎದುರಿಸುವುದು ಸುಲಭ ಎಂದರು. ಸಂಕ್ಷಿಪ್ತ ಬರವಣಿಗೆಯಲ್ಲಿ…
ಬಳ್ಳಾರಿ: ಕರ್ನಾಟಕ ಸರ್ಕಾರ ಗೃಹ ಜ್ಯೋತಿ ಯೋಜನೆ ಅಡಿ ಪ್ರತಿ ಮನೆಗೆ 200 ಯುನಿಟ್ ಉಚಿತ ವಿದ್ಯುತ್ ನೀಡಲು ನಿರ್ಧರಿಸಿದೆ. ಯೋಜನೆಗೆ ಈಗಾಗಲೆ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ಆದರೆ ಇತ್ತ ಎಸ್ಕಾಂ ಗ್ರಾಹಕರಿಗೆ ವಿದ್ಯುತ್ ಬಿಲ್ ದರ ಏರಿಕೆ ಬಿಸಿ ತಟ್ಟಿದೆ. ಹೆಚ್ಚಿನ ವಿದ್ಯುತ್ ಬಿಲ್ ಬರುತ್ತಿದ್ದು ಗ್ರಾಹಕರು ಕಂಗಾಲ ಆಗಿದ್ದಾರೆ. ಜೆಸ್ಕಾಂ ಸಿಬ್ಬಂದಿ ಓರ್ವ ಗ್ರಾಹಕರಿಗೆ ನಾಲ್ಕು ಲಕ್ಷಕ್ಕೂ ಅಧಿಕ ವಿದ್ಯುತ್ ಬಿಲ್ ನೀಡಿದ್ದಾರೆ. ಹೌದು ಬಳ್ಳಾರಿಯ ಇಂದಿರಾ ನಗರ ನಿವಾಸಿಯಾಗಿರುವ ಮಹೇಶ್ ಅವರ ಸಿಂಗಲ್ ಬೆಡ್ ರೂಮ್ ಮನೆಗೆ ಈ ತಿಂಗಳು 4,25,852 ರೂ. ಬಿಲ್ ಬಂದಿದೆ. ಇದನ್ನು ಕಂಡ ಗ್ರಾಹಕ ಮಹೇಶ್ ಹೌಹಾರಿದ್ದಾರೆ. ಈ ಬಗ್ಗೆ ಮಾತನಾಡಿದ ಮಹೇಶ್ ಶನಿವಾರ ಚೆಸ್ಕಾಂ ಸಿಬ್ಬಂದಿ ಮನಗೆ ಬಂದು ಬಿಲ್ ಕೊಟ್ಟು ಹೋಗಿದ್ದಾರೆ. ಪ್ರತಿ ತಿಂಗಳು ನಮ್ಮಮನೆಗೆ 1,700 ರೂ. ರೂ ಬರುತ್ತಿತ್ತು. ಆದರೆ ಈ ಬಾರಿ ಇಷ್ಟೊಂದು ಬಿಲ್ ಬಂದಿದೆ ಎಂದು ಗಾಬರಿಯಾಗಿದ್ದಾರೆ. ಇನ್ನು ಇಷ್ಟೊಂದು ವಿದ್ಯುತ್ ಬಿಲ್…
ಹುಬ್ಬಳ್ಳಿಯ ಆನಂದನಗರದ ಬ್ಯಾಹಟ್ಟಿ ಪ್ರದೇಶದಲ್ಲಿ ಪತ್ನಿ ತಲೆಗೆ ಕೊಡಲಿಯಿಂದ ಹೊಡೆದು ಬರ್ಬರವಾಗಿ ಹತ್ಯೆಗೈದ ಘಟನೆ ನಡೆದಿದೆ. ಮಂಜುಳಾ ಕೊಲೆಯಾದ ಮಹಿಳೆ. ಪತ್ನಿ ಕೊಂದು ಪತಿ ಭೀಮಪ್ಪ ಮುತ್ತಲಗಿ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾನೆ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತ್ನಿ ಕೊಂದು ಪೊಲೀಸರಿಗೆ ಶರಣಾಗಿದ್ದಾನೆ. ಸ್ಥಳಕ್ಕೆ ದಕ್ಷಿಣ ಉಪ ವಿಭಾಗದ ಎಸಿಪಿ ಆರ್.ಕೆ.ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಜೈನಮುನಿ ಕಾಮಕುಮಾರನಂದಿ ಮಹಾರಾಜರ ಬರ್ಬರ ಹತ್ಯೆ ಪ್ರಕರಣವನ್ನು ಬಿಜೆಪಿ ಸದಸ್ಯ ಅಭಯ್ ಪಾಟೀಲ್ ಸಂಬಂಧಿಸಿ ವಿಧಾನಸೌಧದಲ್ಲಿ ಪ್ರಸ್ತಾಪಿಸಿದ್ದು ಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಒತ್ತಾಯಿಸಿದ್ದಾರೆ. ಜೈನಮುನಿಗಳ ಕೊಲೆ ಹಲವು ಸಂಶಯಗಳಿಗೆ ಕಾರಣವಾಗಿದೆ. ತನಿಖೆ ಪೂರ್ಣವಾಗದೆ ಮಾಹಿತಿ ಸೋರಿಕೆ ಆಗಿದೆ. ಪ್ರಕರಣದ ಮೊದಲನೇ ಆರೋಪಿ ಹೆಸರನ್ನು ಮಾತ್ರ ಹೇಳುತ್ತಿದ್ದಾರೆ. ಎರಡನೇ ಆರೋಪಿಯ ಹೆಸರು ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ ಎಂದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ತುಮಕೂರು: ನಿನ್ನ ತಂದೆ– ತಾಯಿಗೆ ಅಪಘಾತವಾಗಿದೆ ಎಂದು ಹೇಳಿ, ಬಾಲಕಿಯನ್ನು ಕಾರಿನಲ್ಲಿ ಕರೆದೊಯ್ದು ಸಂಬಂಧಿಕನೇ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕ ಜಿಲ್ಲಾ ಸತ್ರ ನ್ಯಾಯಾಲಯ ಎಫ್ ಟಿಎಸ್ ಸಿ ಪೋಕ್ಸೋ ನ್ಯಾಯಾಲವು ಅಪರಾಧಿಗೆ 10 ವರ್ಷಗಳ ಕಾಲ ಜೈಲು ಶಿಕ್ಷೆ ಹಾಗೂ 1 ಲಕ್ಷ 50 ಸಾವಿರ ರೂಪಾಯಿ ದಂಡ ವಿಧಿಸಿದೆ. ದಿನಾಂಕ 24/06/21ರಂದು ರಾತ್ರಿ 1 ಗಂಟೆಯ ವೇಳೆಗೆ ಚಿಕ್ಕನಾಯಕನಹಳ್ಳಿ ತಾಲ್ಲೂಕು ಹುಳಿಯಾರು ಪೊಲೀಸ್ ಠಾಣಾ ಸರಹದ್ದಿನ ಹೊಯ್ಸಳ ಕಟ್ಟೆಯಲ್ಲಿ ಇರುವ ನೊಂದ ಬಾಲಕಿಯ ಮನೆಗೆ ಬಂದ ಅಪರಾಧಿ, ಬಾಲಕಿಯ ಸಂಬಂಧಿಕ ಸಯ್ಯದ್ ಸಾದತ್ ನಿನ್ನ ತಂದೆ ತಾಯಿಗೆ ಅಪಘಾತವಾಗಿದೆ ಎಂದು ನಂಬಿಸಿ ತನ್ನ ಇನ್ನೋವಾ ಕಾರಿನಲ್ಲಿ ಬಾಲಕಿಯನ್ನು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕು ಪಟ್ರೇಹಳ್ಳಿ ಗ್ರಾಮದ ಬಳಿ ಇರುವ ಫಾರೆಸ್ಟ್ ಸಮೀಪದ ಶ್ರೀ ತಂಗಮಲೈ ಮುರುಗನ್ ದೇವಸ್ಥಾನದ ಬಳಿಯ ಪ್ರವಾಸೋದ್ಯಮ ಇಲಾಖೆ ಯೋಜನೆಯಡಿಯಲ್ಲಿರುವ ತಂಗುದಾಣ ಕಟ್ಟಡದ ಮುಂಭಾಗದಲ್ಲಿ ನೊಂದ ಬಾಲಕಿಯ ಮೇಲೆ ಹಲವಾರು ಬಾರಿ ಲೈಂಗಿಕ…
ಕೊರಟಗೆರೆ: ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕು ಹೊಳವನಹಳ್ಳಿ ಹೋಬಳಿ ಬೈಚಾಪುರ ಗ್ರಾಪಂ ವ್ಯಾಪ್ತಿಯ ರೆಡ್ಡಿಹಳ್ಳಿಯ ಸಮೀಪದ ಗೋಮುಖ ಗೋಶಾಲೆಯಲ್ಲಿ ದುರ್ಘಟನೆ ನಡೆಯುತ್ತಿದೆ. ಮಧುಗಿರಿ ಪುರುವಾರ ಹೋಬಳಿ ಸುಣ್ಣವಾಡಿ ಗ್ರಾಮದ ಸರ್ವೇ.೧೫ರ ಸರಕಾರಿ ಗೋಮಾಳದ ಜಮೀನಿನಲ್ಲಿ ದಾರಿಯಿದೆ. ಕೊರಟಗೆರೆ ತಾಲೂಕಿನ ರೆಡ್ಡಿಯಲ್ಲಿ ಗ್ರಾಮದ ಸರ್ವೇ ನಂ.೪೩/೮ರ ೧ಎಕರೇ ೩೧ಗುಂಟೆ ಜಮೀನಿನಲ್ಲಿ ಗೋಮುಖ ಗೋಶಾಲೆ ಇದೆ. ಗೋಮುಖ ಗೋಶಾಲೆಯು ೨೦೨೩ರ ಮಾ.೯ರಂದು ಪ್ರಾರಂಭ ಆಗಿದೆ. ಗೋಶಾಲೆಯಲ್ಲಿ ಪ್ರಸ್ತುತ ಒಟ್ಟು ೩೫ಎಮ್ಮೆ ಮತ್ತು ೧೪ಹಸು ಸೇರಿ ಒಟ್ಟು ೪೯ರಾಸುಗಳಿವೆ. ಪಾವಗಡ, ಮಧುಗಿರಿ, ಮಡಕಶಿರಾದ ಪೊಲೀಸ್ ಇಲಾಖೆಯಿಂದ ಚಿನ್ನಮಲ್ಲಣ್ಣಹಳ್ಳಿಯ ಸುರಭಿ ಗೋಶಾಲೆ ಮೂಲಕ ರೆಡ್ಡಿಯಲ್ಲಿಯ ಗೋಮುಖ ಗೋಶಾಲೆಗೆ ಹಸ್ತಾಂತರ ಆಗಿವೆ. ಗೋಶಾಲೆಗೆ ಪರವಾಗಿ ನೀಡಬೇಕಾದ ವೇಳೆ ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆ ನಡೆಸದ ಪರಿಣಾಮ ಸಮಸ್ಯೆಯು ದ್ವೀಗುಣವಾಗಲು ಕಾರಣವಾಗಿದೆ. ದೂರು ನೀಡಿದ್ರು ಪ್ರಯೋಜನಾ ಆಗಿಲ್ಲ: ತುಮಕೂರು ಜಿಲ್ಲಾಧಿಕಾರಿ, ಪೊಲೀಸ್ ಉಪಅಧೀಕ್ಷರ ಕಚೇರಿ, ಮಧುಗಿರಿ ಕಂದಾಯ ಮತ್ತು ಕೊರಟಗೆರೆ ಪೊಲೀಸ್ ಠಾಣೆಗೆ ಜು.೧ರಂದು ಶನಿವಾರವೇ ಗೋಮುಖ ಗೋಶಾಲೆಯ ಟ್ರಸ್ಟ್…
ಭಾರತೀಯ ವಾಯುಪಡೆಯ ಸಾಫ್ಟ್ ವೇರ್ ಡೆವಲಪ್ ಮೆಂಟ್ ಇನ್‌ಸ್ಟಿಟ್ಯೂಟ್ ನ (ಎಸ್‌ಡಿಐ) ಕಮಾಂಡೆಂಟ್ ಆಗಿ ಏರ್ ವೈಸ್ ಮಾರ್ಷಲ್ ಕೆ. ಎನ್. ಸಂತೋಷ್ ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ಬೆಂಗಳೂರಿನವರೇ ಆಗಿರುವ ಸಂತೋಷ್ ಅವರು, ಮಂಡ್ಯದ ಪಿಇಎಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ವ್ಯಾಸಂಗ ಮಾಡಿದ್ದರು. ನಂತರ, ಡಿಫೆನ್ಸ್ ಸರ್ವಿಸಸ್ ಸ್ಟಾಫ್ ಕಾಲೇಜಿನಲ್ಲಿ ‘ಯುದ್ಧ ನಿರ್ವಹಣೆ ಮತ್ತು ರಕ್ಷಣಾ ಅಧ್ಯಯನ’ದಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದರು. ಎಸ್ ಡಿಐನ ಆರಂಭಿಕ ದಿನಗಳಿಂದಲೂ ಸೇವೆ ಸಲ್ಲಿಸುತ್ತಿದ್ದು, ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದಾರೆ. ಯುದ್ಧ ಮುಂಚೂಣಿ ಕೇಂದ್ರದಲ್ಲಿ ಮುಖ್ಯ ಎಂಜಿನಿಯರ್ ಆಗಿ, ವಾಯು ಸೇನಾ ಮುಖ್ಯಾಲಯದಲ್ಲಿ ಎಸ್ ಯು-30 ಯೋಜನಾ ನಿರ್ದೇಶಕರಾಗಿ, ಯುದ್ಧ ಸಂಬಂಧಿತ ನೆಟ್ ವರ್ಕ್ ಪ್ರಧಾನ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಮಾಸ್ಕೋದ ಭಾರತೀಯ ದೂತಾವಾಸದಲ್ಲಿ ವೈಮಾನಿಕ ಸಾಫ್ಟ್ ವೇರ್ ವಿಶೇಷ ತಜ್ಞರಾಗಿಯೂ ಕೆಲಸ ಮಾಡಿದ್ದರು ಎಂದು ಪ್ರಕಟಣೆ ತಿಳಿಸಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.…