Subscribe to Updates
Get the latest creative news from FooBar about art, design and business.
- 2028ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಖಚಿತ: ಮಾಜಿ ಜಿ.ಪಂ. ಸದಸ್ಯ ಜಿ. ನಾರಾಯಣ್ ಘೋಷಣೆ
- ಬಳ್ಳಾರಿ: ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ; ಕಾಲೇಜು ವಿದ್ಯಾರ್ಥಿಗಳಿಂದ ಬೃಹತ್ ಜಾಗೃತಿ ಜಾಥಾ
- ಕೊರಟಗೆರೆ: 8,589 ಪಿಂಚಣಿದಾರರಿಗೆ ಪಿಂಚಣಿ ತಾತ್ಕಾಲಿಕ ಸ್ಥಗಿತ: ದಾಖಲೆ ಸಲ್ಲಿಸಿ– ತಹಶೀಲ್ದಾರ್ ಮಂಜುನಾಥ್ ಕೆ.
- ತುಮಕೂರು: ಸಂಶೋಧನಾ ಸಹಾಯಕರ ಹುದ್ದೆಗೆ ಅರ್ಜಿ ಆಹ್ವಾನ: ಯಾರೆಲ್ಲ ಅರ್ಜಿ ಸಲ್ಲಿಸಬಹುದು?
- ತಲೆಗೆ ಬಿದ್ದ ಏಟು: ಜು.5ರಂದು ಕೃತಿ ಬಿಡುಗಡೆ
- ನಾಯಿಯನ್ನು ಹೊತ್ತೊಯ್ದು ಆತಂಕ ಸೃಷ್ಟಿಸಿದ್ದ ಚಿರತೆ; ಅರಣ್ಯ ಇಲಾಖೆ ಬೋನಿಗೆ ಸೆರೆ
- ತುಮಕೂರಿನ ಹಿರಿಯ ಪತ್ರಕರ್ತ ಎಂ.ಈಶ್ವರ್ ಅನಾರೋಗ್ಯದಿಂದ ನಿಧನ
- ರೈತರು ಬೆಳೆ ವಿಮೆಗೆ ನೋಂದಾಯಿಸಿಕೊಳ್ಳುವಂತೆ ಕೃಷಿ ಇಲಾಖೆ ಮನವಿ
Author: admin
ಸಣ್ಣ-ಮಧ್ಯಮ ಹಾಗೂ ಸೂಕ್ಷ್ಮ ಕೈಗಾರಿಕೆಗಳ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಇಂಧನ, ಕೈಗಾರಿಕೆ ಹಾಗೂ ಕಾಸಿಯಾ ಜೊತೆಗೆ ಪ್ರತ್ಯೇಕವಾಗಿ ಸಭೆ ಕರೆದು ಚರ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಕೆ. ಎನ್. ನರಸಿಂಹಮೂರ್ತಿ ಅವರ ನೇತೃತ್ವದ ನಿಯೋಗದ ಜತೆಗೆ ಚರ್ಚಿಸಿದ ಬಳಿಕ ಈ ವಿಷಯ ತಿಳಿಸಿದರು. ನಮ್ಮ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನವೇ ಕೆ. ಇ. ಆರ್. ಸಿ ವಿದ್ಯುತ್ ಬೆಲೆ ಏರಿಸಿದೆ. ರಾಜಕೀಯ ಉದ್ದೇಶಕ್ಕೆ ಬಿಜೆಪಿ ತನ್ನ ತಪ್ಪನ್ನು ನಮ್ಮ ಸರ್ಕಾರದ ಮೇಲೆ ಹೇರುತ್ತಿದೆ ಎನ್ನುವ ಸತ್ಯ ನಿಮಗೂ ಗೊತ್ತಿದೆ ಎಂದು ಮುಖ್ಯಮಂತ್ರಿ ಗಳು ಸ್ಪಷ್ಟಪಡಿಸಿದರು. ಹಿಂದಿನ ಸರ್ಕಾರ 11000 ಕೋಟಿ ರೂ. ಗಳ ಮೊತ್ತವನ್ನು ಎಸ್ಕಾಂ ಗಳಿಗೆ ಬಾಕಿ ಉಳಿಸಿದೆ. ಅವರು ಉಳಿಸಿ ಹೋದ ಹೊರೆಯನ್ನು ನಾವು ಭರಿಸಬೇಕಿದೆ. ಹಿಂದಿನ ಬಿಜೆಪಿ ಸರ್ಕಾರದ ಆರ್ಥಿಕ ಅಶಿಸ್ತಿನಿಂದ ಆಗಿರುವ ಅನಾಹುತಗಳನ್ನು ನಾವು ಸರಿಪಡಿಸಬೇಕಿದೆ ಎಂದು ಹೇಳಿದರು. ವಿದ್ಯುತ್ ದರ ಏರಿಸಿದ ಕೆ. ಇ. ಆರ್.…
ಎಲೆಕ್ಟ್ರಿಕ್ ಕಾರುಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಅಮೆರಿಕದ ಟೆಸ್ಲಾ ಕಂಪನಿಯು ರಾಜ್ಯದಲ್ಲಿ ಉತ್ಪಾದನಾ ಘಟಕ ಸ್ಥಾಪಿಸುವ ಬಗ್ಗೆ ಪರಿಗಣಿಸಬೇಕು. ಕಂಪನಿ ಘಟಕ ಸ್ಥಾಪಿಸಲು ನಿರ್ಧರಿಸಿದರೆ ಸರ್ಕಾರ ಎಲ್ಲಾ ರೀತಿಯ ಸಹಕಾರ ನೀಡಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಕೋರಿದ್ದಾರೆ. ಟೆಸ್ಲಾ ಕಂಪನಿಯು ತನ್ನ ಉದ್ಯಮವನ್ನು ಭಾರತದಲ್ಲಿ ವಿಸ್ತರಿಸಲು ಇಷ್ಟಪಡುವುದಾದರೆ ಕರ್ನಾಟಕ ರಾಜ್ಯವು ಅದಕ್ಕೆ ಪ್ರಶಸ್ತ ತಾಣವಾಗಿದೆ ಎಂದು ಅವರು ಟ್ವಿಟ್ ಮಾಡಿದ್ದಾರೆ. ಈ ಕಂಪನಿಯು ಎಲೆಕ್ಟ್ರಿಕ್ ಕಾರುಗಳ ಜೊತೆಗೆ ಸೌರಫಲಕಗಳು ಮತ್ತಿತರ ಪರ್ಯಾಯ ಇಂಧನ ಉತ್ಪನ್ನಗಳನ್ನು ತಯಾರಿಸುತ್ತದೆ. ಅಲ್ಲದೇ, ಸ್ಪೇಸ್- ಎಕ್ಸ್ ಕಂಪನಿ ಮೂಲಕ ಉಪಗ್ರಹ ಅಂತರ್ಜಾಲ ಸೇವೆ (ಸ್ಟಾರ್ ಲಿಂಕ್) ಒದಗಿಸುತ್ತಿದೆ. ಈ ಕಂಪನಿಗಳನ್ನು ಮುನ್ನಡೆಸುತ್ತಿರುವ ಉದ್ಯಮಿ ಎಲಾನ್ ಮಸ್ಕ್ ಅವರು ಕರ್ನಾಟಕದಲ್ಲಿ ಯಾವುದೇ ಉದ್ಯಮ ಸ್ಥಾಪಿಸುವುದಾದರೆ ಸಹಕಾರ ಕೊಡಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಈ ಬಗ್ಗೆ ಉತ್ಸುಕರಾಗಿದ್ದಾರೆ ಎಂದು ಪಾಟೀಲ ತಿಳಿಸಿದ್ದಾರೆ. ಕರ್ನಾಟಕ ರಾಜ್ಯವು ತಂತ್ರಜ್ಞಾನ ಮತ್ತು ತಯಾರಿಕಾ ಕ್ಷೇತ್ರದಲ್ಲಿ 5.0 ಪ್ರಮಾಣೀಕೃತ ಮಟ್ಟ…
ಅಪಾರ್ಟ್‌ಮೆಂಟ್ ಮೇಲಿಂದ ಬಿದ್ದು ಮಹಿಳೆ ಸಾವನ್ನಪ್ಪಿದ ಘಟನೆ ಬೆಂಗಳೂರಿನ ಯಲಹಂಕದಲ್ಲಿ ನಡೆದಿದೆ. ಅಮೃತಾ ಶರ್ಮಾ ಮೃತ ಯುವತಿ ಆಗಿದ್ದು, ಲಖನೌ ಮೂಲದ ಮಹಿಳೆ ಕುಟುಂಬದ ಜೊತೆ ಖಾಸಗಿ ಅಪಾರ್ಟೆಂಟ್ ನಲ್ಲಿ ವಾಸವಿದ್ದರು. ಯಲಹಂಕ ಬಳಿಯ ನಾಗೇನಹಳ್ಳಿಯಲ್ಲಿ ಅಪಾರ್ಟ್ ಮೆಂಟ್ ನಲ್ಲಿ ಘಟನೆ ನಡೆದಿದ್ದು, ಅಪಾರ್ಟ್‌ಮೆಂಟ್ 10ನೇ ಮಹಡಿಯಿಂದ ಬಿದ್ದ ಮಹಿಳೆ ಸಾವನ್ನಪ್ಪಿದ್ದಾಳೆ. ನಿನ್ನೆ ರಾತ್ರಿ ಹತ್ತು ಗಂಟೆ ಸುಮಾರಿಗೆ ಘಟನೆ ನಡೆದಿದೆ. ಕಿಚನ್ ಗೆ ಅಟ್ಯಾಚ್ ಆದ ಬಾಲ್ಕನಿಯಿಂದ ಹಾರಿದ ಮಹಿಳೆಯನ್ನು ಸ್ಥಳೀಯರೇ ಅಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೇ ಅಮೃತಾ ಶರ್ಮಾ ಮೃತಪಟ್ಟಿದ್ದು, ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಭಾನುವಾರ ಮಹಾರಾಷ್ಟ್ರಕ್ಕೆ ಸಿಎಂ ಸಿದ್ದರಾಮಯ್ಯ ತೆರಳಲಿದ್ದಾರೆ. ಬೆಳಗ್ಗೆ ವಿಶೇಷ ವಿಮಾನ ಮೂಲಕ ಮಹಾರಾಷ್ಟ್ರದ ಕೊಲ್ಲಾಪುರಕ್ಕೆ ಪ್ರಯಾಣಿಸಲಿದ್ದು, ಅಲ್ಲಿಂದ ರಸ್ತೆ ಮೂಲಕ ಸಾಂಗ್ಲಿಗೆ ತೆರಳಲಿದ್ದಾರೆ. ಸಾಂಗ್ಲಿಯಲ್ಲಿ ಮಹಾರಾಷ್ಟ್ರ ಕಾಂಗ್ರೆಸ್ ಪಕ್ಷ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿಯಾಗಲಿದ್ದಾರೆ. ಬಳಿಕ ಪುಣೆಗೆ ತೆರಳಲಿರುವ ಸಿಎಂ ಸಿದ್ದರಾಮಯ್ಯ ಪುಣೆಯಲ್ಲಿ ಅಹಲ್ಯಾದೇವಿ ಹೋಲ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಸಾಂಗ್ಲಿ ಮತ್ತು ಪುಣೆಯಲ್ಲಿನ ಕಾರ್ಯಕ್ರಮ ಮುಗಿಸಿ ಭಾನುವಾರ ರಾತ್ರಿ ಬೆಂಗಳೂರಿಗೆ ಸಿಎಂ ಸಿದ್ದರಾಮಯ್ಯ ವಾಪಸ್ ಆಗಲಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಡಿಸಿಎಂ ಡಿ ಕೆ ಶಿವಕುಮಾರ್ ಅವರು ಗೃಹಲಕ್ಷ್ಮಿ ಯೋಜನೆ ಜಾರಿ ಸಂಬಂಧ ವಿಧಾನಸೌಧದಲ್ಲಿ ಇಂದು ಉನ್ನತ ಮಟ್ಟದ ಸಭೆ ನಡೆಸಿದರು. ಸಚಿವರಾದ ಕೃಷ್ಣ ಬೈರೇಗೌಡ, ಪ್ರಿಯಾಂಕ್ ಖರ್ಗೆ, ಲಕ್ಷ್ಮೀ ಹೆಬ್ಬಾಳ್ಕರ್, ಐಎಎಸ್ ಅಧಿಕಾರಿಗಳಾದ ಪೊನ್ನುರಾಜ್, ಅಂಜುಮ್ ಪರ್ವೇಜ್, ಮಂಜುಳಾ, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್ ಮತ್ತಿತರರು ಭಾಗವಹಿಸಿದ್ದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಯಾದಗಿರಿ: ಜಗತ್ತಿನ ಜನ ವಿಶ್ವಾಸದಿಂದ ಭಾರತದ ಕಡೆ ನೋಡ್ತಿದ್ದಾರೆ. ಯುಕ್ರೇನ್ ಯುದ್ಧದಲ್ಲಿ ಸಿಲುಕಿದ್ದ 25 ಸಾವಿರ ವಿದ್ಯಾರ್ಥಿಗಳನ್ನ ಭಾರತಕ್ಕೆ ಕರೆತರಲಾಯ್ತು, ಜಗತ್ತಿಗೆ ಯೋಗವನ್ನ ಪರಿಚಯಿಸಿದವ್ರು ನರೇಂದ್ರ ಮೋದಿ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು. ಯಾದಗಿರಿಯಲ್ಲಿ ಮಾತನಾಡಿದ ಅವರು ‘ಅರಬ್ ದೇಶದಲ್ಲಿ 25 ಎಕರೆ ಜಾಗ ತೆಗೆದುಕೊಂಡು ಗಣಪತಿ ದೇವಸ್ಥಾನ ಮಾಡಲಾಗುತ್ತಿದೆ. ಜನವರಿ 24ಕ್ಕೆ ಭವ್ಯ ರಾಮ ಮಂದಿರ ಉದ್ಘಾಟನೆ ಆಗುತ್ತೆ, ನರೇಂದ್ರ ಮೋದಿ ಅವರು ಸಾಂಸ್ಕೃತಿಕ ಭಾರತ ನಿರ್ಮಾಣ ಮಾಡುತ್ತಿದ್ದಾರೆ ಎಂದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಬೆಳಗಾವಿ: ಮಾರಿಹಾಳ ಗ್ರಾಮದಲ್ಲಿ ಬೆಂಕಿ ಆಕಸ್ಮಿಕದಿಂದ 2 ಮನೆಗಳು ಸುಟ್ಟು ಹೋಗಿದ್ದು, ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಕ್ಷಣ ಸ್ಪಂದಿಸಿ, ಸಂತ್ರಸ್ತರ ನೆರವಿಗೆ ಮುಂದಾಗಿದ್ದಾರೆ. ಗುರುಪುತ್ರ ಹಿರವಣ್ಣವರ ಹಾಗೂ ಸಿದ್ದಪ್ಪ ಹಿರವಣ್ಣವರ ಇವರ ಮನೆಗಳು ಆಕಸ್ಮಿಕ ಬೆಂಕಿ ಅನಾಹುತದಿಂದ ಸುಟ್ಟು, ಮನೆಯಲ್ಲಿದ್ದ ದಿನಬಳಕೆಯ ವಸ್ತುಗಳು, ಬಂಗಾರ, ಬೆಳ್ಳಿ ಧವಸ ಧಾನ್ಯಗಳು, ಕಾಗದ ಪತ್ರಗಳು ಸುಟ್ಟು ಹೋಗಿವೆ. ಸುದ್ದಿ ತಿಳಿದ ಕೂಡಲೇ ಪುತ್ರ, ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ್ ಹಾಗೂ ಸ್ಥಳೀಯ ಜನಪ್ರತಿನಿಧಿಗಳನ್ನು ಸ್ಥಳಕ್ಕೆ ಕಳಿಸಿದ ಲಕ್ಷ್ಮೀ ಹೆಬ್ಬಾಳಕರ್, ಸಾಂತ್ವನ ಹೇಳಿದ್ದಲ್ಲದೆ ವಯಕ್ತಿಕವಾಗಿ ಹಾಗೂ ಸರಕಾರದಿಂದ ತಕ್ಷಣ ನೆರವು ನೀಡುವ ಭರವಸೆ ನೀಡಿದರು. ಈ ಸಮಯದಲ್ಲಿ ಬಸವರಾಜ ಮ್ಯಾಗೋಟಿ, ಯುವರಾಜ ಕದಂ, ಈರಣ್ಣ ಹಿರವಣ್ಣವರ, ಗುಡದಪ್ಪ ಗೊರವ್, ಶಂಕರಗೌಡ ನಿರವಾಣಿ, ಗಿರಿಜಾ ಪಾಟೀಲ, ಗುರು ಅಕ್ಕತಂಗೇರಹಾಳ, ಬಾಳೇಶ್ ಕರವಿನಕೊಪ್ಪ, ಅಶೋಕ ಸಾಳುಂಕೆ, ಬಸವರಾಜ ಚೌಗುಲಾ ಹಾಗೂ ಮುಂತಾದವರು ಉಪಸ್ಥಿತರಿದ್ದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು…
ಬೆಂಗಳೂರು: ಕಾಂಗ್ರೆಸ್ ಗ್ಯಾರಂಟಿಗಳಿಗೆ ವಾರಂಟಿಯಿಲ್ಲ, ಈಗಾಗಲೇ ಕಾಂಗ್ರೆಸ್ ವಾಂತಿ ಮಾಡಿಕೊಳ್ಳುವ ಸ್ಥಿತಿಗೆ ಬಂದು ನಿಂತಿದೆ ಎಂದು ಜಿಲ್ಲಾ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ. ‘ರಾಜ್ಯ, ಹಣಕಾಸಿನ ಮುಗ್ಗಟ್ಟಿನಲ್ಲಿದೆ ಈಗಾಗಲೇ ಅರ್ಧ ದಿವಾಳಿಯಾಗಿದೆ. ಮುಂದೆ ಸಂಬಳ ನೀಡಲು ಸಹ ಸರ್ಕಾರ ಬ್ಯಾಂಕ್ ನಿಂದ ಸಾಲ ಮಾಡಬೇಕು, ಬ್ಯಾಂಕ್ ಕೂಡ ಸಾಲ ಕೊಡಲ್ಲ. ನೀವು ಗ್ಯಾರಂಟಿ ಕೊಡ್ತಿವಿ ಅಂದಿದ್ದು, ಅದನ್ನ ನೀವು ಎಲ್ಲಿಂದಲಾದರೂ ತಂದು ಕೊಡಿ ಎಂದಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L2Uvw2cNJZO5mXqIX4WA7h ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA
ಡಾ ಜಿ ಪರಮೇಶ್ವರ ಅವರು ಗೃಹ ಖಾತೆಯ ಕೆಲಸಗಳನ್ನು ಮರಿ ಖರ್ಗೆಗೆ ಲೀಸ್ ಕೊಟ್ಟಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್, ನಳೀನ್ ಕಟೀಲ್ಲೆ ಕನಿಷ್ಠ ಕಾಮನ್ ಸೆನ್ಸ್ ಇಲ್ಲ ಎಂದು ಹರಿಹಾಯ್ದಿದೆ. ಈ ವಿಚಾರವಾಗಿ ಟ್ವಿಟ್ ಮಾಡಿರುವ ಕಾಂಗ್ರೆಸ್, ‘ಬಿಜೆಪಿಗರ ಇತ್ತೀಚಿನ ಮಾತು ಕೃತಿ ಗಮನಿಸಿದರೆ ನಮ್ಮ ಸರ್ಕಾರ ಉಚಿತ ಮಾನಸಿಕ ಚಿಕಿತ್ಸೆಯ ಯೋಜನೆಯನ್ನೂ ರೂಪಿಸಬೇಕಾದೀತು’ ಎಂದು ವಾಗ್ದಾಳಿ ನಡೆಸಿದೆ. ಚುನಾವಣೆಯಲ್ಲಿ ಬಿಜೆಪಿಯ ಹೀನಾಯ ಸೋಲಿಗೆ ಕಾರಣನಾದ ನಾಮಕಾವಸ್ಥೆ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರಿಗೆ ಕನಿಷ್ಠ ಕಾಮನ್ ಸೆನ್ಸ್ ಇಲ್ಲ, ಇನ್ನು ಸಂಸದೀಯ ನಿಯಮಗಳ ಬಗ್ಗೆ ಅರಿವಿರಲು ಹೇಗೆ ಸಾಧ್ಯ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ಪ್ರಿಯಾಂಕ್ ಖರ್ಗೆ ಅವರು ಕಲಬುರ್ಗಿಯ ಉಸ್ತುವಾರಿ ಸಚಿವರು, ಅಲ್ಲಿನ ವ್ಯವಸ್ಥೆಯನ್ನು ಸರಿಪಡಿಸುವುದು ಅವರ ಹೊಣೆಗಾರಿಕೆ, ಅಲ್ಲಿನ ಅಧಿಕಾರಿಗಳನ್ನು ಸರಿದಾರಿಗೆ ತರುವುದು ಅವರದ್ದೇ ಜವಾಬ್ದಾರಿ. ಇಷ್ಟು ಸಾಮಾನ್ಯ ತಿಳುವಳಿಕೆ ಇಲ್ಲದಿರುವುದಕ್ಕಾಗಿಯೇ ಕಟೀಲ್ ಅವರನ್ನು…
ಪರಮೇಶ್ವರ್ ತಮ್ಮ ಗೃಹ ಖಾತೆಯನ್ನು ಪ್ರಿಯಾಂಕ ಖರ್ಗೆಗೆ ಲೀಸ್ ಕೊಟ್ಟಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದ್ದಾರೆ. ಈ ಬಗ್ಗೆ ಟ್ವಿಟ್ ಮಾಡಿರುವ ನಳೀನ್ ಕುಮಾರ್ ಕಟೀಲ್, ಗೃಹ ಸಚಿವರಾದ ಪರಮೇಶ್ವರ್ ಅವರಿಗೆ ಕೆಲಸದ ಒತ್ತಡ ಜಾಸ್ತಿಯಾಗಿದೆಯೋ?ಅಥವಾ ತಮ್ಮ ಖಾತೆಯ ಮೇಲೆ ಬೇಸರವೋ ತಿಳಿಯುತ್ತಿಲ್ಲ. ತಮ್ಮ ಗೃಹಖಾತೆಯ ಕೆಲಸಗಳನ್ನು ಪ್ರಿಯಾಂಕ ಖರ್ಗೆ ಅವರಿಗೆ ಲೀಸ್‌ಗೆ ಕೊಟ್ಟಿದ್ದಾರೋ. ಪೊಲೀಸ್ ಅಧಿಕಾರಗಳಿಗೆ ಮರಿ ಖರ್ಗೆಯವರು ಕ್ಲಾಸ್ ತಗೊತಿದ್ದಾರೆ ಎಂದರೆ ನನ್ನ ಊಹೆ ನಿಜ ಅಲ್ಲವೇ ಸಿದ್ದರಾಮಯ್ಯನವರೇ ಎಂದು ಪ್ರಶ್ನೆ ಮಾಡಿದ್ದಾರೆ. ಪ್ರಿಯಾಂಕ ಖರ್ಗೆ ಅವರೇ ಪೊಲೀಸ್ ಅಧಿಕಾರಿಗಳನ್ನು ಕಂಟ್ರೋಲ್ ಮಾಡುವ ಕೆಲಸ ಬಿಟ್ಟು, ದನಕಳ್ಳರ ಮೇಲೆ ಕಠಿಣ ಕ್ರಮ ಕೈಗೊಳ್ಳಿ, ಅಕ್ರಮ ಕಸಾಯಿಖಾನೆಗಳ ಮೇಲೆ ಕ್ರಮ ಕೈಗೊಳ್ಳಿ, ಲವ್ ಜಿಹಾದ್ ಮಾಡುವವರ ಮೇಲೆ ಕ್ರಮ ಕೈಗೊಳ್ಳಿ, ಅಶಾಂತಿ ದೂತರ ಮೇಲೆ ಕ್ರಮ ಕೈಗೊಳ್ಳಿ. ಹಿಂದೂಪರ ಕಾರ್ಯಕರ್ತರ ಮೇಲೆ ಟಾರ್ಗೆಟ್ ಮಾಡೋದು ಬೇಡ ಎಂದು ಸರಣಿ ಟ್ವಿಟ್ ಮೂಲಕ ಕಾಂಗ್ರೆಸ್ ಸರ್ಕಾರದ ವಿರುದ್ಧ…