Author: admin

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಆಶಯ ಎಲ್ಲಾರಿಗೂ ಎಲ್ಲೆಡೆ ಶಿಕ್ಷಣ ಎಂಬುದು, ಅದರ ಅನ್ವಯ ಕೆಲಸದ ಜೊತೆ ಶಿಕ್ಷಣ ಪಡೆಯಬೇಕೆಂಬ ಆಸೆಯಿರುವ ವ್ಯಕ್ತಿಗಳಿಗೆ ಅನುಕೂಲಕರವಾಗುವಂತೆ ಕೆಲಸದ ನಡುವೆ ಕಾಲೇಜಿಗೆ ಹಾಜರಾಗಲು ಸಾಧ್ಯವಾಗದಿರುವವರು ಕರಾಮುವಿ  ಮೂಲಕ ಪದವಿಗಳನ್ನು ಪಡೆದುಕೊಳ್ಳಬಹುದು. 18 ವರ್ಷದಿಂದ 80 ವರ್ಷ ವಯೋಮಾನದ ವರಗಿನ  10+2 (ಪದವಿ ಪೂರ್ವ)., 10+2+3 (ಸ್ನಾತಕ ಪದವಿ) ವಿದ್ಯಾರ್ಹತೆ ಹೊಂದಿರುವ ಎಲ್ಲಾ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗ ಮಾಡಿಕೊಂಡು ಕರಾಮುವಿಯಲ್ಲಿ ಪ್ರವೇಶಾತಿ ಪಡೆಯಬಹುದು. ಕರಾಮುವಿಯು ಪ್ರಸಕ್ತ 2022-23ನೇ (ಜನವರಿ ಆವೃತ್ತಿ) ಶೈಕ್ಷಣಿಕ ಸಾಲಿನ ಪ್ರವೇಶಾತಿ ಆರಂಭವಾಗಿದ್ದು, ಸ್ನಾತಕ/ ಸ್ನಾತಕೋತ್ತರ ಕೋರ್ಸ್ ಗಳಾದ ಬಿ.ಎ/ಬಿ.ಕಾಂ/ಬಿ.ಬಿ.ಎ/ಬಿ.ಸಿ.ಎ/ಬಿ.ಎಲ್.ಐ.ಎಸ್ಸಿ ಹಾಗೂ ಬಿ.ಎಸ್ಸಿ(General, IT, Home Science)., ಎಂ.ಎ/ಎಂ.ಸಿ.ಜೆ/ಎಂ.ಕಾಂ(Dual Specialization)., ಎಂ.ಎಲ್.ಐ.ಎಸ್ಸಿ., ಎಂ.ಎಸ್ಸಿ., ಎಂ.ಬಿ.ಎ(AICTE Approved)., ಪಿ.ಜಿ. ಡಿಪ್ಲೋಮಾ., ಡಿಪ್ಲೋಮಾ., ಸರ್ಟಿಫಿಕೇಟ್ ಪ್ರೋಗ್ರಾಮ್ ಗಳಿಗೆ  ಪ್ರವೇಶಾತಿ ಆರಂಭಗೊಂಡಿದೆ. “ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮಾತ್ರ ರಾಜ್ಯದಲ್ಲಿ ದೂರ ಶಿಕ್ಷಣ ನೀಡುವ ಏಕ ಮಾತ್ರ ವಿಶ್ವವಿದ್ಯಾನಿಲಯವಾಗಿರುತ್ತದೆ”. ಕೆಎಸ್‌ಒಯು ವಿಶ್ವವಿದ್ಯಾಲಯ ಧನಸಹಾಯ ಅಯೋಗದ…

Read More

ತಿಪಟೂರು: ತಾಲೂಕಿನ ಕಸಬಾ ಹೋಬಳಿಯ ಹೊಸಹಳ್ಳಿಯ ಶ್ರೀ ಬೀರಲಿಂಗೇಶ್ವರ ಸ್ವಾಮಿಯವರ ನೂತನ ದೇವಾಲಯ ಪ್ರವೇಶ ಮತ್ತು ಗೋಪುರದ ಕಳಶ ಪ್ರತಿಷ್ಠಾಪನಾ ಮಹೋತ್ಸವ ಹಾಗೂ ಧಾರ್ಮಿಕ ಸಮಾರಂಭ ಫೆಬ್ರವರಿ 28ರಿಂದ  ಮಾರ್ಚ್ 1ರವರೆಗೆ  ಹಮ್ಮಿಕೊಳ್ಳಲಾಗಿದೆ ಎಂದು ಗ್ರಾಪಂ ಸದಸ್ಯ ಹೆಚ್.ಎಸ್. ವಿಶ್ವನಾಥ್  ತಿಳಿಸಿದರು. ನಗರದ ಪ್ರವಾಸಿ ಮಂದಿರದಲ್ಲಿ ಕರೆದಿದ್ದ, ಪತ್ರಿಕಾಗೋಷ್ಠಿಯಲ್ಲಿ ಕುರಿತು ಮಾತನಾಡಿದ ವಿಶ್ವನಾಥ್, ಕೆರಗೋಡಿ-ರಂಗಪುರ ಸುಕ್ಷೇತ್ರಾ  ಧ್ಯಕ್ಷರಾದ ಶ್ರೀ ಗುರು ಪರದೇಶಿಕೇಂದ್ರ ಮಹಾಸ್ವಾಮೀಜಿರವರು, ಕನಕ ಗುರು ಪೀಠ ಕಾಗಿನೆಲೆ ಶ್ರೀ ಗುರು ರೇವಣಸಿದ್ದೇಶ್ವರ ಸಿಂಹಾಸನ ನಿರಂಜನಂದ ಪುರಿ ಮಹಾಸ್ವಾಮೀಜಿಯವರು ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗಡೆಯವರ ಕೃಪಾಶೀರ್ವಾದದೊಂದಿಗೆ ಕಾರ್ಯಕ್ರಮ ನೆರವೇರಲಿದೆ ಎಂದರು. ಧಾರ್ಮಿಕ ಸಮಾರಂಭದಲ್ಲಿ ಸಚಿವರು, ಮಾಜಿ ಸಚಿವರು, ಶಾಸಕರು ಚುನಾಯಿತ ಜನಪ್ರತಿನಿಧಿಗಳು, ಜನಾಂಗದ ಮುಖಂಡರುಗಳು ವಿವಿಧ ಪಕ್ಷದ ಮುಖಂಡರುಗಳು,ನೌಕರವರ್ಗ ಸೇರಿದಂತೆ ಗ್ರಾಮಸ್ಥರು ಹಾಗೂ  ಸುತ್ತಮುತ್ತಲ ಗ್ರಾಮಸ್ಥರು ಭಾಗವಹಿಸಲಿದ್ದು, ಮೂರು ದಿನಗಳ ಕಾಲ ದಾಸೋಹದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ದೇವಾಲಯದ ಗೌರವಾಧ್ಯಕ್ಷರಾದ ನಿವೃತ್ತ ಪ್ರಾಂಶುಪಾಲ ಹೆಚ್.ಎಸ್.…

Read More

ಧಾರವಾಡ : ದಿನನಿತ್ಯದ ಆಹಾರದಲ್ಲಿ ಸಂಪೂರ್ಣ ಪೋಷಕಾಂಶಗಳು ಲಭ್ಯವಾಗದೇ ಇರುವ ಕಾರಣದಿಂದಾಗಿ, ಹೆಚ್ಚಾಗಿ ಮಹಿಳೆಯರು ಹಾಗೂ ಮಕ್ಕಳು ಅಪೌಷ್ಠಿಕತೆಗೆ ಬಲಿಯಾಗುತ್ತಾರೆ. ಈ ನಿಟ್ಟಿನಲ್ಲಿ ಜನಸಾಮಾನ್ಯರಲ್ಲಿನ ಅಪೌಷ್ಠಿಕತೆ ಹೋಗಲಾಡಿಸಿ, ಆರೋಗ್ಯ ವೃದ್ಧಿಸುವ ಉದ್ದೇಶದಿಂದ ಸಾರ್ವಜನಿಕ ವಿತರಣಾ ಪದ್ಧತಿಯ ಅನ್ನಭಾಗ್ಯ ಯೋಜನೆಯಡಿ ವಿತರಣೆ ಮಾಡಲಾಗುವ ಪ್ರತಿ 50 ಕೆ.ಜಿ. ಅಕ್ಕಿಯ ಚೀಲದಲ್ಲಿ ಅರ್ಧ ಕೆ.ಜಿ.ಯಷ್ಟು ಪೋಷಕಾಂಶ (ವಿಟಾಮಿನ್ ಎ ಮತ್ತು ಡಿ, ಐರನ್, ಫೋಲಿಕ್ ಆಸಿಡ್, ಬಿಕಾಂಪ್ಲೇಕ್ಸ, ಜಿಂಕ್ ಹಾಗೂ ಐಯೋಡಿನ್) ಭರಿತ ಸಾರವರ್ಧಿತ ಅಕ್ಕಿಯನ್ನು ಬೆರೆಸಿ ನ್ಯಾಯಬೆಲೆ ಅಂಗಡಿಯಲ್ಲಿ ಅಕ್ಕಿಯನ್ನು ವಿತರಣೆ ಮಾಡಲಾಗುತ್ತಿದೆ. ಸಾರವರ್ಧಿತಗೊಳಿಸಿರುವ (ಪೋರ್ಟಿಫೈಡ್) ಅಕ್ಕಿಯಲ್ಲಿ ಕೆಲವೊಂದು ಅಕ್ಕಿಯ ಕಾಳುಗಳು ಹೊಳಪಿನಿಂದ ನೋಡಲು ಪ್ಲಾಸ್ಟಿಕ್ ರೀತಿಯಲ್ಲಿ ಕಾಣಿಸುತ್ತಿದ್ದು, ಸಾರ್ವಜನಿಕರು ಆತಂಕಗೊಳ್ಳಬಾರದು. ವಿತರಣೆ ಮಾಡಲಾಗುತ್ತಿರುವ ಸಾರವರ್ಧಿತ ಅಕ್ಕಿಯನ್ನು ಉಪಯೋಗಿಸಿ, ಆರೋಗ್ಯವಂತರಾಗಲು ತಿಳಿಸಿದ್ದಾರೆ. ಸಾರ್ವಜನಿಕ ವಿತರಣಾ ಪದ್ಧತಿಯಡಿ ಬಿಡುಗಡೆ ಮಾಡುವ ಅಕ್ಕಿಯನ್ನು ಸ್ವಂತಕ್ಕೆ ಉಪಯೋಗಿಸತಕ್ಕದ್ದು, ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವುದು ಕಂಡುಬಂದಲ್ಲಿ ಅಂತಹ ಕುಟುಂಬಕ್ಕೆ ನೀಡಿದ ಬಿಪಿಎಲ್ ಪಡಿತರ ಚೀಟಿಯನ್ನು ರದ್ದುಪಡಿಸಲಾಗುವುದೆಂದು ಎಂದು ಆಹಾರ, ನಾಗರಿಕ…

Read More

ಹಿರಿಯ ನಟ ಅನಂತ್ ನಾಗ್ ಬಿಜೆಪಿ ಸೇರ್ಪಡೆಯಾಗುತ್ತಾರೆ ಎಂದು ನಿನ್ನೆ ಸುದ್ದಿ ಹಬ್ಬಿತ್ತು. ಆದರೆ ಈ ಸುದ್ದಿಗೆ ಸ್ವತಃ ನಟ ಆನಂತ್ ನಾಗ್ ಅವರೇ ತೆರೆ ಎಳೆದಿದ್ದಾರೆ. ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿ ಸ್ಪಷ್ಟನೆ ನೀಡಿರುವ ನಟ ಅನಂತ್ ನಾಗ್, ನಾನು ಯಾವುದೇ ರಾಜಕೀಯ ಪಕ್ಷ ಸೇರಲ್ಲ, ಬಿಜೆಪಿಯನ್ನೂ ಸೇರಲ್ಲ, ಯಾವುದೇ ಪಕ್ಷಕ್ಕೆ ಹೋಗಲ್ಲ. ರಾಜಕೀಯದಲ್ಲಿ ಸಕ್ರಿಯವಾಗಿರಲು ಆಸಕ್ತಿ ಇಲ್ಲ ಎಂದಿದ್ದಾರೆ. ನಿನ್ನೆ ಸಂಜೆ ಅನಂತ್ ನಾಗ್ ಬಿಜೆಪಿ ಸೇರಲಿದ್ದಾರೆ ಎನ್ನಲಾಗಿತ್ತು. ನಂತರ ಬಿಜೆಪಿ ಸೇರ್ಪಡೆ ಕಾರ್ಯಕ್ರಮ ಮುಂದೂಡಿಕೆಯಾಗಿದೆ ಎಂದು ವರದಿಯಾಗಿತ್ತು. ಇದೀಗ ಇದೆಲ್ಲದಕ್ಕೂ ಅನಂತ್ ನಾಗ್ ಅವರೇ ತೆರೆ ಎಳೆದಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ನಮ್ಮ ಸಣ್ಣ ಯಶಸ್ಸಿನಿಂದ ಹೆಚ್ಚು ಸಂತೋಷವಾಗಿರುವವರು ಪ್ರೀತಿಸುವವರು ಜಗತ್ತಿನಲ್ಲಿ ತಾಯಿ ಒಬ್ಬರೆ.   ಭಾರತೀಯ ಮಹಿಳಾ ರಾಷ್ಟ್ರೀಯ ಫುಟ್ಬಾಲ್ ತಂಡದ ಸ್ಟ್ರೈಕರ್ ಸಂಧ್ಯಾ ರಂಗನಾಥನ್ ಅವರು ತಮ್ಮ ತಾಯಿಯ ಬಗ್ಗೆ ಪೋಸ್ಟ್ ಮಾಡಿರುವುದು ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದೆ. ಸಂಧ್ಯಾ ರಂಗನಾಥನ್ ಅವರು ಟ್ವಿಟ್ಟರ್‌ ನಲ್ಲಿ ಹೃದಯಸ್ಪರ್ಶಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಸಂಧ್ಯಾ ತನ್ನ ತಾಯಿಯೊಂದಿಗೆ ಪೋಸ್ ನೀಡುತ್ತಿರುವ ಚಿತ್ರವನ್ನು ಲಗತ್ತಿಸಲಾಗಿದೆ. ಶೀರ್ಷಿಕೆಯಲ್ಲಿ, ಸಂಧ್ಯಾ ತನ್ನ ತಾಯಿಯನ್ನು ಹೀರೋ ಎಂದು ಬಣ್ಣಿಸಿದ್ದಾರೆ. ಇಂದು ನಾನು ಭಾರತೀಯ ಮಹಿಳಾ ರಾಷ್ಟ್ರೀಯ ಫುಟ್ಬಾಲ್ ತಂಡದ ಸ್ಟ್ರೈಕರ್ ಆಗಲು ನನ್ನ ತಾಯಿಯೇ ಕಾರಣ. ಇಬ್ಬರು ಹೆಣ್ಣುಮಕ್ಕಳ ಒಂಟಿ ತಾಯಿಯಾಗುವುದು ಎಂದಿಗೂ ಸುಲಭವಲ್ಲ. ಆದರೆ ಅವರು ನಮ್ಮ ಜೀವನವನ್ನು ಅತ್ಯುತ್ತಮವಾಗಿಸಲು ಶ್ರಮಿಸಿದರು. ನನ್ನ ಬೆಂಬಲದ ಪ್ರಬಲ ಮೂಲ. ಕೊನೆಗೂ ನಾನು ದೇಶಕ್ಕಾಗಿ ಆಡುವುದನ್ನು ನೋಡುವ ಅದೃಷ್ಟ ಅಮ್ಮನಿಗೆ ಸಿಕ್ಕಿತು. ಅದರಲ್ಲಿ ಬಹಳ ಸಂತೋಷ ಮತ್ತು ಹೆಮ್ಮೆ ಇದೆ. ನನ್ನ ತಾಯಿಯೇ ನನ್ನ ಹೀರೋ’ ಎಂದು ಸಂಧ್ಯಾ ಟ್ವೀಟ್…

Read More

ಸಿರಾ: ಆದಿಶಕ್ತಿ ಶ್ರೀ ಕೊಲ್ಲಾಪುರದಮ್ಮನವರು ಸಿರಾ ತಾಲೂಕಿನ ದೊಡ್ಡ ಹುಲಿಕುಂಟೆ ಗ್ರಾಮದ ಕೊಲ್ಲಾಪುರದಮ್ಮನ ಕಟ್ಟೆಯಲ್ಲಿ ನೂತನ ದೇವಾಲಯವನ್ನು ಪ್ರವೇಶಿಸುವ ಹಿನ್ನೆಲೆಯಲ್ಲಿ  ಚಿತ್ರ ಕಲಾವಿದ, ಸಾಹಿತಿ, ಗಾಯಕ, ನಿರ್ದೇಶಕ ಕಲಾಕಾರ್ ಹುಲಿಕುಂಟೆ ಅವರು ಸಂಭ್ರಮ ವ್ಯಕ್ತಪಡಿಸಿದ್ದಾರೆ. ಐತಿಹಾಸಿಕ ಹೋಬಳಿ ಕೇಂದ್ರವಾದ ಸಿರಾ ತಾಲೂಕಿನ ದೊಡ್ಡ ಹುಲಿಕುಂಟೆ ಗ್ರಾಮದ ಕೊಲ್ಲಾಪುರದಮ್ಮನ ಕಟ್ಟೆಯಲ್ಲಿ ನೂತನ ದೇವಾಲಯವನ್ನು ಪ್ರವೇಶಿಸುವ ಸುವರ್ಣಮಯ ಅಮೃತಘಳಿಗೆ ಅತೀವ ಸಂತಸವನ್ನು ನೀಡಿದೆ ಎಂದು ಅವರು ಹೇಳಿದರು. ಈ ಸುಂದರ ಕ್ಷಣಕ್ಕಾಗಿ ಕಾಯುತ್ತಿರುವ ಸಮಸ್ತ ಭಕ್ತ ಮಹಾಶಯರುಗಳಿಗೂ ಹಾಗೂ ಸಮಸ್ತ ಲೋಕಕ್ಕೆ ಸನ್ಮಂಗಲವನ್ನುಂಟು ಮಾಡಲಿ ಎಂದು ಹಾರೈಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಈ ಹಿಂದೆ ಸಿದ್ದರಾಮಯ್ಯ ಮೀನು ತಿಂದು ಧರ್ಮಸ್ಥಳಕ್ಕೆ ಹೋಗಿದ್ದು ದೊಡ್ಡ ವಿವಾದವಾಗಿತ್ತು. ಇದೀಗ ಇಂಥದ್ದೇ ವಿವಾದದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸಿಲುಕಿದ್ದು ಈ ಬಗ್ಗೆ ಶಾಸಕ ಸಿ.ಟಿ ರವಿ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ಮಂಡ್ಯದಲ್ಲಿ ಮಾತನಾಡಿರುವ ಅವರು, ನಾನು ಮಾಂಸಾಹಾರ ಸೇವಿಸಿದ್ದು ನಿಜ, ಆದರೆ ದೇವಸ್ಥಾನದೊಳಗೆ ಮಾತ್ರ ಹೋಗಿಲ್ಲ. ದೇವಸ್ಥಾನದ ಬಾಗಿಲು ಹಾಕಿದ್ದರಿಂದ ಹೊರಗಿನಿಂದಲೇ ದೇವರಿಗೆ ನಮಸ್ಕಾರ ಮಾಡಿ ಹಿಂತಿರುಗಿದ್ದೇನೆ ಎಂದು ಹೇಳಿದರು. ಅಲ್ಲದೆ ನಾನು ಹುಟ್ಟಿರೋದೇ ಮಾಂಸ ತಿನ್ನೋ ಜಾತಿಯಲ್ಲಿ. ಮಾಂಸ ತಿಂದು ದೇವಸ್ಥಾನಕ್ಕೆ ಹೋಗ್ತೇನೆ ಏನೀವಾಗ ಎಂದು ಹೇಳಲ್ಲ ಎನ್ನುವ ಮೂಲಕ ಸಿದ್ಧರಾಮಯ್ಯಗೆ ಸಿಟಿ ರವಿ ಟಾಂಗ್ ನೀಡಿದರು. ಫೆಬ್ರವರಿ 19 ರಂದು ಭಾನುವಾರ ಉತ್ತರ ಕನ್ನಡ ಜಿಲ್ಲೆಗೆ ಶಾಸಕ ಸಿ.ಟಿ.ರವಿ ಭೇಟಿ ನೀಡಿದ್ದರು. ಭಟ್ಕಳದ ಶಿರಾಲಿಯಲ್ಲಿರುವ ಶಾಸಕ ಸುನಿಲ್ ನಾಯ್ಕ್ ಮನೆಯಲ್ಲಿ ಸಿ.ಟಿ.ರವಿ ಬಾಡೂಟ ಸವಿದಿದ್ದರು. ನಂತರ ಭಟ್ಕಳ ನಗರದ ಹಳೇ ಬಸ್ ನಿಲ್ದಾಣ ಸಮೀಪ ಇರುವ ನಾಗಬನ ಹಾಗೂ ಕರಿಬಂಟ ಹನುಮ…

Read More

ತಜಕಿಸ್ತಾನದಲ್ಲಿ ಭೂಕಂಪ 6.8ರಷ್ಟು ತೀವ್ರತೆ ದಾಖಲಾಗಿದೆ. ಸ್ಥಳೀಯ ಕಾಲಮಾನ ಬೆಳಗ್ಗೆ 5:37ಕ್ಕೆ ಭೂಕಂಪ ಸಂಭವಿಸಿದೆ. ಅಫ್ಘಾನಿಸ್ತಾನ ಮತ್ತು ಚೀನಾದ ಗಡಿಗಳನ್ನು ಹಂಚಿಕೊಂಡಿರುವ ಗೊರ್ನೊ-ಬಡಾಖ್‌ನ ಪೂರ್ವ ಪ್ರದೇಶವು ಕೇಂದ್ರಬಿಂದುವಾಗಿದೆ. ಮೊದಲ ಕಂಪನದ 20 ನಿಮಿಷಗಳಲ್ಲಿ 5 ರ ತೀವ್ರತೆಯ ಎರಡನೇ ನಂತರದ ಆಘಾತ ಮತ್ತು 4.6 ರ ತೀವ್ರತೆಯ ಮೂರನೇ ನಂತರದ ಆಘಾತವು ವರದಿಯಾಗಿದೆ. ಪಾಮಿರ್ ಪರ್ವತಗಳಿಂದ ಆವೃತವಾಗಿರುವ ಪ್ರದೇಶದಲ್ಲಿ ಭೂಕಂಪ ಸಂಭವಿಸಿದೆ. ಇಲ್ಲಿ ಸಾರೆಸ್ ನದಿಯೂ ಇದೆ. ಸಾರೆಸ್ ನದಿಯ ಹಿಂದೆ ನೈಸರ್ಗಿಕ ಅಣೆಕಟ್ಟು ಇದೆ. ಈ ಅಣೆಕಟ್ಟು ಒಡೆದರೆ ದೊಡ್ಡ ಅಪಾಯ ಎದುರಾಗಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ನೈಸರ್ಗಿಕ ವಿಕೋಪಗಳು ಮುಂದುವರಿಯುವ ಪ್ರದೇಶಗಳಲ್ಲಿ ತಜಕಿಸ್ತಾನ್ ಒಂದಾಗಿದೆ. ಇದು ಹಲವು ಬಾರಿ ಪ್ರವಾಹ, ಭೂಕುಸಿತ ಮತ್ತು ಭಾರೀ ಹಿಮಪಾತವನ್ನು ಅನುಭವಿಸಿದ ಪ್ರದೇಶವಾಗಿದೆ. ಫೆಬ್ರವರಿ 15 ರಂದು ಸಂಭವಿಸಿದ ಹಿಮಪಾತದಲ್ಲಿ 9 ಜನರು ಸಾವನ್ನಪ್ಪಿದ್ದರು ಎಂದು ವರದಿಯಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್…

Read More

ಬೆಳಗಾವಿ : ಇದೇ ಫೆ.27 ರಂದು ಬೆಳಗಾವಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮಾನ್ಯ ಪ್ರಧಾನಮಂತ್ರಿಗಳು ಕಿಸಾನ್ ಸಮ್ಮಾನ್ ನಿಧಿಯನ್ನು ನೇರವಾಗಿ ರೈತರ ಖಾತೆಗೆ ವರ್ಗಾವಣೆ ಮಾಡಲಿದ್ದಾರೆ ಎಂದು ಕೃಷಿ ಇಲಾಖೆಯ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ ಹೇಳಿದರು. ಮಾನ್ಯ ಪ್ರಧಾನಮಂತ್ರಿಗಳ ಕಾರ್ಯಕ್ರಮ ನಡೆಯಲಿರುವ ಬಿ.ಎಸ್.ಯಡಿಯೂರಪ್ಪ ಮಾರ್ಗದಲ್ಲಿರುವ ಮಾಲಿನಿ ಸಿಟಿಯಲ್ಲಿ ವೇದಿಕೆ ನಿರ್ಮಾಣ ಮತ್ತಿತರ ಸಿದ್ಧತೆಗಳನ್ನು ಗುರುವಾರ(ಫೆ.23) ಪರಿಶೀಲಿಸಿ ಶೋಭಾ ಕರಂದ್ಲಾಜೆ   ಮಾತನಾಡಿದರು. ಇದು ಸಂಪೂರ್ಣ ರೈತರ ಕಾರ್ಯಕ್ರಮವಾಗಿದೆ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಹಾಗೂ ವಿಶೇಷವಾಗಿ ರೈತ ಮಹಿಳೆಯರನ್ನು ಸೇರಿಸಲಾಗುವುದು ಎಂದು ತಿಳಿಸಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಲಂಡನ್‌ನ ಮೇಯರ್ ಸಾದಿಕ್ ಖಾನ್ ಅವರು ಮುಂದಿನ ಶೈಕ್ಷಣಿಕ ವರ್ಷಕ್ಕೆ ಲಂಡನ್‌ನ ಎಲ್ಲಾ ಪ್ರಾಥಮಿಕ ಶಾಲಾ ಮಕ್ಕಳಿಗೆ ಉಚಿತ ಊಟವನ್ನು ಒದಗಿಸುವ ತುರ್ತು ಯೋಜನೆಯನ್ನು ಘೋಷಿಸಿದ್ದಾರೆ. £130 ಮಿಲಿಯನ್ ಯೋಜನೆಯು ಸೆಪ್ಟೆಂಬರ್‌ನಲ್ಲಿ ಪ್ರಾರಂಭವಾಗುತ್ತದೆ. ಈ ಯೋಜನೆಯು ಆಹಾರದ ಅಭದ್ರತೆಯಿಂದ ಬಳಲುತ್ತಿರುವ ಬ್ರಿಟನ್‌ನಲ್ಲಿರುವ 4 ಮಿಲಿಯನ್ ಮಕ್ಕಳಲ್ಲಿ 2,70,000 ಜನರಿಗೆ ಪರಿಹಾರವನ್ನು ನೀಡುತ್ತದೆ. ಹೆಚ್ಚುತ್ತಿರುವ ಜೀವನ ವೆಚ್ಚದ ಈ ಪರಿಸ್ಥಿತಿಯಲ್ಲಿ ಸರ್ಕಾರದಿಂದ ಏನಾದರೂ ಸಹಾಯ ಹಸ್ತವಿದೆ ”ಎಂದು ಇಬ್ಬರು ಮಕ್ಕಳೊಂದಿಗೆ ಐಟಿ ವೃತ್ತಿಪರ ಸುಹಾಸ್ ಬರ್ಹಟೆ ಹೇಳುತ್ತಾರೆ . “ಜೀವನದ ವೆಚ್ಚದ ಬಿಕ್ಕಟ್ಟು ಉಳಿಯಲು ಇಲ್ಲಿದೆ, ಆದ್ದರಿಂದ ಯೋಜನೆಯು ಒಂದು ವರ್ಷದವರೆಗೆ ಇರುತ್ತದೆ ಎಂಬುದು ನಿರಾಶಾದಾಯಕವಾಗಿದೆ” ಎಂದು ಅವರು ಹೇಳಿದರು. ಫುಡ್ ಫೌಂಡೇಶನ್‌ನ ಅಭಿಯಾನಗಳು ಮತ್ತು ಸಂವಹನಗಳ ನಿರ್ದೇಶಕ ಜೋ ರಾಲಿಂಗ್, ಈ ಯೋಜನೆಯು ‘ಫೀಡ್ ದಿ ಫ್ಯೂಚರ್’ ಅಭಿಯಾನದ ನಿರಂತರ ಪ್ರಯತ್ನಗಳ ಫಲಿತಾಂಶವಾಗಿದೆ ಎಂದು  ಹೇಳಿದರು . ನಾವು ಅತ್ಯಂತ ಸಂತಸಗೊಂಡಿದ್ದೇವೆ. ಬ್ರಿಟನ್‌ನಲ್ಲಿ ಆಹಾರದ ಅಭದ್ರತೆಯನ್ನು ಎದುರಿಸಲು ಇನ್ನೂ ಹೆಚ್ಚಿನದನ್ನು ಮಾಡಬೇಕಾಗಿದೆ. ಇದೊಂದು…

Read More