Subscribe to Updates
Get the latest creative news from FooBar about art, design and business.
- ತುಮಕೂರು | ನವೆಂಬರ್ 21—22ರಂದು ವಿಜ್ಞಾನ ವಸ್ತು ಪ್ರದರ್ಶನ
- ಸಾಲಬಾಧೆ: ರೈತ ಸಾವಿಗೆ ಶರಣು
- ನವೆಂಬರ್ 22: ತಲ್ಲಣಿಸದಿರು ಮನವೆ ಕಾರ್ಯಕ್ರಮ
- ವೈ.ಎನ್.ಹೊಸಕೋಟೆಯಲ್ಲಿ ಸಾಂಪ್ರದಾಯಿಕ ಗೋವಿನ ಹಬ್ಬ
- ವಿಜೃಂಭಣೆಯಿಂದ ನೆರವೇರಿದ ಬೇಲದಕುಪ್ಪೆ ಶ್ರೀಮಹದೇಶ್ವರಸ್ವಾಮಿ ದೇವಸ್ಥಾನ ಜಾತ್ರಾ ಮಹೋತ್ಸವ
- ಸರ್ಕಾರಿ ಶಾಲೆಗಳು ಬೇಡವಾಗಿದೆ, ಕಾರಣ ಅರಿಯಬೇಕಿದೆ: ಶಾಸಕ ಎಂ.ಟಿ.ಕೃಷ್ಣಪ್ಪ
- ಸಾಹಿತಿಗಳು ಸರ್ಕಾರದ ಆಶ್ರಯ ಪಡೆಯುವುದನ್ನು ನಿಲ್ಲಿಸಬೇಕು: ಬಂಜಗೆರೆ ಜಯಪ್ರಕಾಶ್
- ದುಪ್ಪಟ್ಟು ಹಣ ಲಾಭ ಗಳಿಸುವ ಆಮಿಷಕ್ಕೆ ಬಲಿಯಾಗಿ 14 ಲಕ್ಷ ರೂ. ಕಳೆದುಕೊಂಡ ಹೊಟೇಲ್ ಸಿಬ್ಬಂದಿ!
Author: admin
ದಾದಾ ಸಾಹೇಬ್ ಫಾಲ್ಕೆ ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದ ನಂತರ ದುಲ್ಕರ್ ಸಲ್ಮಾನ್ ಧನ್ಯವಾದ ಹೇಳಿದರು. ದುಲ್ಕರ್ ಸಲ್ಮಾನ್ ತಮ್ಮ ಫೇಸ್ ಬುಕ್ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ. ಹಿಂದಿಯಲ್ಲಿ ಇದು ನನ್ನ ಮೊದಲ ಪ್ರಶಸ್ತಿ. ಮತ್ತು ನಕಾರಾತ್ಮಕ ಪಾತ್ರದಲ್ಲಿ ಅತ್ಯುತ್ತಮ ನಟನಿಗಾಗಿ ನನ್ನ ಮೊದಲ ಗೆಲುವು. ಈ ಗೌರವಕ್ಕಾಗಿ ದಾದಾಸಾಹಿಬ್ ಫಾಲ್ಕೆ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ತೀರ್ಪುಗಾರರಿಗೆ ಧನ್ಯವಾದಗಳು. ನಿರ್ದೇಶಕ ಬಾಲ್ಕಿ ಸರ್ ಮತ್ತು ಚುಪ್ ಚಿತ್ರದ ಸಹನಟರಿಗೂ ಧನ್ಯವಾದಗಳು. ಚುಪ್‌ನಲ್ಲಿ ನನಗೆ ಉತ್ತಮ ಅನುಭವವನ್ನು ನೀಡಿದ ಬಾಲ್ಕಿ ಸರ್, ನನ್ನ ಸ್ನೇಹಿತರು, ಎಲ್ಲಾ ಬೆಂಬಲಿಗರು ಮತ್ತು ಹೋಪ್ ಪ್ರೊಡಕ್ಷನ್‌ನಲ್ಲಿರುವ ಎಲ್ಲರಿಗೂ ಧನ್ಯವಾದಗಳು. ಇದು ನಿಮ್ಮೆಲ್ಲರಿಗಾಗಿ ಎಂದು ದುಲ್ಕರ್ ಸಲ್ಮಾನ್ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ದುಲ್ಕರ್ ಸಲ್ಮಾನ್ ಅವರ ಫೇಸ್ ಬುಕ್ ಪೋಸ್ಟ್ ಹೀಗಿದೆ: ವಿಶೇಷ ಎನಿಸಿತು! ಹಿಂದಿಯಲ್ಲಿ ನನ್ನ ಮೊದಲ ಪ್ರಶಸ್ತಿ. ಮತ್ತು ನಕಾರಾತ್ಮಕ ಪಾತ್ರದಲ್ಲಿ ಅತ್ಯುತ್ತಮ ನಟನಿಗಾಗಿ ನನ್ನ ಮೊದಲ ಗೆಲುವು. ಈ ಗೌರವಕ್ಕಾಗಿ ಅಭಿಷೇಕ್ ಮಿಶ್ರಾ ಮತ್ತು ದಾದಾಸಾಹಿಬ್ ಫಾಲ್ಕೆ…
ಇಬ್ಬರು ಅಧಿಕಾರಿಗಳಾದ ಡಿ.ರೂಪಾ ಮೌದ್ಗಿಲ್ ಮತ್ತು ರೋಹಿಣಿ ಸಿಂಧೂರಿನಡುವಿನಕಿತ್ತಾಟದಿಂದಮುಜುಗರ ಕ್ಕೀಡಾಗಿರುವ ರಾಜ್ಯ ಸರ್ಕಾರ ಇದೀಗ ಇಬ್ಬರು ಅಧಿಕಾರಿಗಳಿಗೆ ನೋಟಿಸ್ ನೀಡಿದೆ. ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಅಧಿಕಾರಿ ಡಿ. ರೂಪಾ ಮೌದ್ಗಿಲ್ ಅವರಿಗೆ ನೋಟಿಸ್ ನೀಡಿರುವ ಸಿಬ್ಬಂದಿ ಆಡಳಿತ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಜೇಮ್ಸ್ ತಾರಕನ್, ಬಹಿರಂಗ ಹೇಳಿಕೆ ನೀಡದಂತೆ, ಫೇಸ್ ಬುಕ್ ಪೋಸ್ಟ್ ಹಾಕದಂತೆ ಇಬ್ಬರಿಗೆ ಸೂಚನೆ ನೀಡಿದ್ದಾರೆ. ಇಬ್ಬರ ಕಿತ್ತಾಟದಿಂದ ಸರ್ಕಾರಕ್ಕೆ ಮುಜುಗರ ಉಂಟಾಗಿದೆ ಇದು ಭಾರತೀಯ ಸರ್ವಿಸ್ ನಿಯಮ ಉಲ್ಲಂಘನೆಯಾಗಿದೆ. ನಿಮಗೆ ಆರೋಪ ಮಾಡಲು ಸೂಕ್ತ ವೇದಿಕೆ ಇದೆ. ಸಕ್ಷಮ ಪ್ರಾಧಿಕಾರದ ಮುಂದೆ ಆರೋಪ ಮಾಡಬಹುದು. ಆದರೆ ಮಾಧ್ಯಮದ ಮುಂದೆ ಆರೋಪ ಮಾಡಿದ್ದೀರಾ..? ಹೀಗಾಗಿ ಮಾಧ್ಯಮದ ಮುಂದೆ ಹೋಗಬಾರದು ಇಬ್ಬರು ಅಧಿಕಾರಿಗಳು ಅಖಿಲ ಭಾರತ ಸೇವಾ ನಿಯಮಕ್ಕೆ ಬದ್ಧರಾಗಿರುವಂತೆ ರಾಜ್ಯ ಸರ್ಕಾರ ಸೂಚನೆ ನೀಡಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್…
ದಾಳಿಂಬೆ ಸೇವನೆಯಿಂದ ಆರೋಗ್ಯಕ್ಕೆ ಆಗುವ ಲಾಭಗಳ ಬಗ್ಗೆ ಅನೇಕರಿಗೆ ಅರಿವಿದೆ ಆದರೆ ದಾಳಿಂಬೆಯ ಸಿಪ್ಪೆಯಲ್ಲಿ ಹಲವಾರು ಪ್ರಯೋಜನಗಳಿವೆ . ಆರೋಗ್ಯ ಮತ್ತು ಸೌಂದರ್ಯವನ್ನು ಸುಧಾರಿಸಲು ನಾವು ದಾಳಿಂಬೆ ಸಿಪ್ಪೆಯನ್ನು ಬಳಸಬಹುದು. ಈಗ ದಾಳಿಂಬೆಯ ಸಿಪ್ಪೆಯವನ್ನು ಎಸೆಯುವ ಮೊದಲು, ಈ ಕೆಳಗಿನವುಗಳನ್ನು ಪ್ರಯತ್ನಿಸಿ. ನೀವು ಕೆಮ್ಮು ಮತ್ತು ಗಂಟಲು ನೋವಿನಿಂದ ಬಳಲುತ್ತಿರುವಾಗ, ದಾಳಿಂಬೆಯ ಸಿಪ್ಪೆಯನ್ನು ಒಣಗಿಸಿ ಪುಡಿಮಾಡಿ ನೀರಿಗೆ ಸೇರಿಸಿ ಕುಡಿಯಬಹುದು. ಒಣಗಿಸಿ ಪುಡಿಮಾಡಿದ ದಾಳಿಂಬೆಯ ಸಿಪ್ಪೆಯನ್ನು ನೀರು ಅಥವಾ ಹಾಲಿನೊಂದಿಗೆ ಫೇಸ್ ಪ್ಯಾಕ್ ಆಗಿ ಹಚ್ಚುವುದರಿಂದ ಮೊಡವೆಗಳನ್ನು ತಡೆಯುತ್ತದೆ. ದಾಳಿಂಬೆ ಸಿಪ್ಪೆಯೊಂದಿಗೆ ತೆಂಗಿನ ಎಣ್ಣೆಯನ್ನು ಪ್ರತಿದಿನ ಕೂದಲಿಗೆ ಹಚ್ಚುವುದರಿಂದ ತಲೆಹೊಟ್ಟು ಮತ್ತು ಕೂದಲು ಉದುರುವುದು ಕಡಿಮೆಯಾಗುತ್ತದೆ. ಒಣಗಿದ ದಾಳಿಂಬೆ ಸಿಪ್ಪೆಯನ್ನು ಸೇವಿಸುವುದರಿಂದ ರೋಗಗಳ ಅಪಾಯವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಬಹುದು ಎಂದು ಕೆಲವು ಅಧ್ಯಯನಗಳು ಸೂಚಿಸುತ್ತವೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಭೂವೈಜ್ಞಾನಿಕ ಸಮೀಕ್ಷೆಗಳು ದೇಶದ ಭೂಪ್ರದೇಶ ಮತ್ತು ಜಲಾನಯನದ ಬಗ್ಗೆ ಹೆಚ್ಚಿನದನ್ನು ಬಹಿರಂಗಪಡಿಸಬಹುದು. ಆದರೆ ಅಂತಹ ಮಹತ್ತರವಾದ ಬಹಿರಂಗಪಡಿಸುವಿಕೆ ಇನ್ನೂ ನಡೆದಿದೆಯೇ ಎಂದು ಹೇಳುವುದು ಕಷ್ಟ. ಒಂದು ದಿನ ನಿಮ್ಮ ದೇಶವು ಇನ್ನೂ ಯಾರಿಗೂ ತಿಳಿದಿಲ್ಲದ 7,000 ದ್ವೀಪಗಳಿಂದ ಆವೃತವಾಗಿದೆ ಎಂಬ ಸುದ್ದಿಯನ್ನು ನೀವು ಹೇಗೆ ಹೀರಿಕೊಳ್ಳುತ್ತೀರಿ? ಪ್ರಸ್ತುತ ಸಮೀಕ್ಷೆಯು 1987 ರ ನಂತರ ಸ್ಥಳೀಯ ಜಲಗಳ ಸರ್ಕಾರದ ಮೊದಲ ಸಮೀಕ್ಷೆಯನ್ನು ಅನುಸರಿಸುತ್ತದೆ. ಅಧಿಕೃತ ದ್ವೀಪಗಳ ಸಂಖ್ಯೆಯು 6,852 ರಿಂದ 14,125 ಕ್ಕೆ ದ್ವಿಗುಣಗೊಳ್ಳುವ ನಿರೀಕ್ಷೆಯಿದೆ. ಡಿಸೆಂಬರ್ 2021 ರಲ್ಲಿ ಸಂಸತ್ತಿನ ಚರ್ಚೆಯ ಸಂದರ್ಭದಲ್ಲಿ ಅಂಕಿಅಂಶಗಳ ವಿವಾದದ ನಂತರ ಸಮೀಕ್ಷೆಗೆ ಆದೇಶಿಸಲಾಗಿದೆ. ಈ ಅಂಕಿಅಂಶಗಳು ಹಳೆಯದಾಗಿವೆ ಮತ್ತು ಪ್ರಸ್ತುತ ದ್ವೀಪಗಳ ಸಂಖ್ಯೆಯು ತುಂಬಾ ಭಿನ್ನವಾಗಿರಬಹುದು ಎಂದು ಸೂಚಿಸಲಾಗಿದೆ. ದ್ವೀಪಗಳ ಸಂಖ್ಯೆಯ ನಿಖರವಾದ ತಿಳುವಳಿಕೆಯು ರಾಷ್ಟ್ರೀಯ ಹಿತಾಸಕ್ತಿಯ ಪ್ರಮುಖ ಆಡಳಿತಾತ್ಮಕ ವಿಷಯವಾಗಿದೆ ಎಂದು ಅಂದಿನ ಲಿಬರಲ್ ಡೆಮೋಕ್ರಾಟ್ ಶಾಸಕರು ಹೇಳಿದರು. ಹೊಸ ಸಮೀಕ್ಷೆಯನ್ನು ಜಪಾನ್‌ನ ಜಿಯೋಸ್ಪೇಷಿಯಲ್ ಇನ್ಫರ್ಮೇಷನ್ ಅಥಾರಿಟಿ ನಡೆಸಿದೆ. ಇದು ದೇಶದ ವಿಸ್ತೀರ್ಣವನ್ನು…
ವೇತನ ಪರಿಷ್ಕರಣೆ ಮಾಡುವಂತೆ ಸಾರಿಗೆ ನೌಕರರು ಬೇಡಿಕೆ ಇಟ್ಟಿದ್ದಾರೆ. ಹಣಕಾಸು ಇತಿಮಿತಿಯಲ್ಲಿ ವೇತನ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು. ವೋಲ್ವೋ, ಅಂಬಾರಿ ಬಸ್ ಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಸಾರಿಗೆ ನೌಕರರ 7ರಿಂದ 8 ಬೇಡಿಕೆ ಈಡೇರಿಸಲಾಗಿದೆ. ಈಗ ವೇತನ ಪರಿಷ್ಕರಣೆಯ ಬೇಡಿಕೆ ಇಟ್ಟಿದ್ದಾರೆ. ಹಣಕಾಸು ಇತಿಮಿತಿಯಲ್ಲಿ ಇದಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ. ಶಾಲೆ ಆರಂಭವಾದಾಗ ಎಲ್ಲಾ ತಾಲ್ಲೂಕುಗಳಲ್ಲಿ 4 ರಿಂದ 5 ಮಿನಿಬಸ್ ಓಡಾಡುತ್ತಿರಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ದುಡಿಯುವ ಮಹಿಳೆಯರಿಗೆ, ವಿದ್ಯಾರ್ಥಿನಿಯರಿಗೆ ಏಪ್ರಿಲ್ 1ರಿಂದ ಉಚಿತ ಬಸ್ ಪಾಸ್ ನೀಡುವಂತೆ ಸಾರಿಗೆ ಅಧಿಕಾರಿಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಬೆಂಗಳೂರು: ಸಮ್ಮಿಶ್ರ ಸರ್ಕಾರ ಹೇಗೆ ರಚನೆಯಾಯ್ತು ಎಂದು ಎಲ್ಲರಿಗೂ ಗೊತ್ತಿದೆ. ಸವಾಲಿನ ಸಂದರ್ಭದಲ್ಲಿ ನಾನು ಸಿಎಂ ಆಗಿದ್ದೇನೆ. ನಾವು ಆತ್ಮಸ್ಥೈರ್ಯದಿಂದ ಕೆಲಸ ಮಾಡಿದ್ದೇವೆ. ನಾವು ಒಂದು ದಿನವೂ ಸರಕಾರಿ ನೌಕರರಿಗೆ ಸಂಬಳ ನಿಲ್ಲಿಸಲಿಲ್ಲ. ತೆರಿಗೆ ಸುಧಾರಣೆಯಲ್ಲಿ ಗಣನೀಯ ಸುಧಾರಣೆ ಆಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಬಜೆಟ್ ಅಧಿವೇಶನ ಪ್ರಾರಂಭವಾಗಿದ್ದು, ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉತ್ತರ ನೀಡಿದ್ದು ವಿಧಾನಸಭೆಯಲ್ಲಿ ಮಾತನಾಡಿ ಬಿಎಸ್ ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ ರಚನೆಯಾದಾಗ ಪ್ರವಾಹ ಬಂದಿತ್ತು. ಬಳಿಕ ಕೊರೊನಾ ಬಂದಾಗ ಜೀವನ ನಡೆಸಲು ಸಮಸ್ಯೆಯಾಗಿತ್ತು. ಆಕ್ಸಿಜನ್ ಪೂರೈಕೆ ಮಾಡಲು ಸೂಕ್ತ ಕ್ರಮ ತೆಗೆದುಕೊಂಡೆವು. ಒಂದು ದಿನವೂ ಆಕ್ಸಿಜನ್ ಕೊರತೆಯಾಗದಂತೆ ಕ್ರಮ ಕೈಗೊಂಡಿದ್ದೇವೆ ಕೊರೊನಾ ಲಸಿಕೆ ನೀಡುವಾಗ ಅಪನಂಬಿಕೆಯ ಮಾತುಗಳು ಬಂದವು. ಆದರೆ ನಾವು ನೀಡಿದ ಲಸಿಕೆ ದೊಡ್ಡ ಪ್ರಮಾಣದಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದ್ದಾರೆ. ಉತ್ತಮವಾಗಿ ತೆರಿಗೆ ಸಂಗ್ರಹ ಹಿನ್ನೆಲೆ ಉತ್ತಮ ಬಜೆಟ್ ಕೊಟ್ಟಿದ್ದೇವೆ. ರೈತರು…
ಮಾಜಿ ಶಾಸಕ ಹಾಗೂ ಕಾಂಗ್ರೆಸ್ಸಿನ ಹಿರಿಯ ನಾಯಕರಾದ ಫಿರೋಜ್ ಶೇಠ ಅವರು ತಮ್ಮ ರಾಜಕೀಯ ಹಾಗೂ 2023ರ ರಾಜ್ಯ ವಿಧಾನಸಭಾ ಚುನಾವಣೆ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡರು.ಸರ್ ನೀವು ಈ ಚುನಾವಣೆಯನ್ನು ಯಾವ ರೀತಿ ನೋಡುತ್ತೀರಿ? ಇದೊಂದು ಬದಲಾವಣೆಯ ಸಮಯ ಇಲ್ಲಿ ಹಲವಾರು ರಾಜಕೀಯ ಬದಲಾವಣೆ ನಡೆಯುತ್ತಾ ಇದೆ ಈ ಕ್ಷೇತ್ರದಲ್ಲಿ ಜನ ಅದನ್ನು ಅನುಭವಿಸುತ್ತಿದ್ದಾರೆ. ನಾನುಬೆಳಗಾವಿ ನಗರ ಮತ್ತು ಉತ್ತರ ಕ್ಷೇತ್ರಕೆ10 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದೇನೆ .ಬಡಜನರ ಸೇವೆ ನನಗೆ ಆಶೀರ್ವಾದ ಇದೆ ನಾನು ಇನ್ನಷ್ಟು ಹೆಚ್ಚು ಬಡ ಜನರ ಸೇವೆ ಮಾಡಲು ಹೆಚ್ಚುಕನಾಗಿದ್ದೇನೆ. ಸರ್ ಈ ಕ್ಷೇತ್ರ ಜಾತಿ ಧರ್ಮ ಆಧಾರಗಳ ಮೇಲೆ ವಿಭಾಗವಾಗಿದೆಯೆ? ಹೌದು ಅನ್ನುವಕ್ಕಿಂತ ಇದರಲ್ಲಿ ಕೆಲವು ಬದಲಾವಣೆಗಳು ಆಗಿದೆ ಮಾತ್ರ ನಿಜ ,ನಾವು ಎಲ್ಲರೂ ಜೊತೆ ಸಮಬಾಳು ಸಮಭಾಗ ಸಮಪಾಲು ಮತ್ತು ಗೌರವದೊಂದಿಗೆ ಜೀವನ ನಡೆಸಬೇಕೆಂದು ನಮ್ಮೆಲ್ಲರ ಬಯಕೆಯಾಗಿದೆ ಇಲ್ಲಿ ಧರ್ಮ ಜಾತಿ ಮತ ಯಾವುದು ಲೆಕ್ಕಕ್ಕಿಲ್ಲ ನಾವು ಎಲ್ಲರೊಂದಿಗೆ ಇದ್ದೇನೆ ಆದ್ದರಿಂದ…
ಶ್ರೀ ಶಿವಲಿಂಗೇಶ್ವರ ದೇವಸ್ಥಾನ ಮಹಾಪ್ರಸಾದ ಉತ್ಸವ ಸಮಿತಿ ವತಿಯಿಂದ ಮಹಾಶಿವರಾತ್ರಿಯ ನಿಮಿತ್ತ 7ನೇ ಮಹಾಪ್ರಸಾದ ಕಾರ್ಯಕ್ರಮವನ್ನು ಆಶ್ರಯ ಕಾಲೋನಿ ಗಣೇಶ ನಗರ್ ದಲ್ಲಿ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಜಿ ಶಾಸಕ ಕಾಂಗ್ರೆಸ್ ಮುಖಂಡ ಫಿರೋಜ್ ಶೇಠ ಭಾಗವಹಿಸಿದ್ದ ಈ ಕಾರ್ಯಕ್ರಮ ಅಲಾರ ವಾಡ್ ಆಶ್ರಯ ಕಾಲೋನಿ ಗಣೇಶ ನಗರ್ ಶ್ರೀ ಶಿವಲಿಂಗೇಶ್ವರ ದೇವಸ್ಥಾನ ಮಹಾಪ್ರಸಾದ ಉತ್ಸವದ ವತಿಯಿಂದ ಏಳು ವರ್ಷ ಗಳಿಂದ ಮಹಾಪ್ರಸಾದ ಹಾಗೂ ಜಾತ್ರಾ ಮಹೋತ್ಸವ ಹಮ್ಮಿಕೊಳ್ಳಲಾಗುತ್ತಿದೆ. ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿತ್ತು ಮಾಜಿ ಶಾಸಕರನ್ನು ಮಹಿಳೆಯರು ತಲೆಯ ಮೇಲೆ ಕುಂಭ ಕೊಡ ಹೊತ್ತುಕೊಂಡು ಮೆರವಣಿಗೆ ಮೂಲಕ ಸ್ವಾಗತ ಮಾಡಿದರು. ಮಂದಿರದ ಆವರಣದಲ್ಲಿ ಧ್ವಜಾರೋಹನ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಮಾಜಿ ಶಾಸಕ ಇಲ್ಲಿ ಎಲ್ಲಾ ಜಾತಿಯ ಎಲ್ಲಾ ಧರ್ಮದ ಜನರಲ್ಲಿದ್ದಾರೆ. ಶ್ರೀ ಶಿವಲಿಂಗೇಶ್ವರ ದೇವಸ್ಥಾನ ಮಹಾಪ್ರಸಾದ ನಿಮಿತ್ತ ನಾವೆಲ್ಲರೂ ಇಲ್ಲಿ ಯಾವುದೇ ಜಾತಿ ,ಮತ ,ಧರ್ಮಗಳ ಭೇದವಿಲ್ಲದೆ ಈ ಆಚರಣೆಯಲ್ಲಿ ಎಲ್ಲರೂ ಭಾಗವಹಿಸಿದ್ದಾರೆ. ನಾವು ಈ ದೇಶ ಅಖಂಡತೆಯನ್ನು…
ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಅಭಿವೃದ್ದಿ ಕಾಮಗಾರಿಗಳಿಗೆ ಪೂಜೆ ಸರಣಿ ಮುಂದುವರಿದಿದ್ದು, ಸೋಮವಾರವೂ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಹತ್ತಾರು ಕಾಮಗಾರಿಗಳಿಗೆ ಚಾಲನೆ ನೀಡಿದರು. ಭಾನುವಾರ ಹಲವಾರು ಅಭಿವೃದ್ಧಿ ಕಾಮಗಾರಿಗಳಿಗೆ ಅವರು ಪೂಜೆ ಮೂಲಕ ಚಾಲನೆ ನೀಡಿದ್ದರು. ಸೋಮವಾರ ಸಹ ಬೆಳಗ್ಗೆಯಿಂದಲೇ ವಿವಿಧ ಗ್ರಾಮಗಳಿಗೆ ತೆರಳಿ ಸುಮಾರು 5.42 ಕೋಟಿ ರೂ ವೆಚ್ಚದ ಕಾಮಗಾರಿಗಳಿಗೆ ಪೂಜೆ ನೆರವೇರಿಸಿ ಚಾಲನೆ ನೀಡಿದರು. ಅಂಬೇವಾಡಿ ಗ್ರಾಮಕ್ಕೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವ ದೃಷ್ಟಿಯಿಂದ ಜಲಜೀವನ್ ಮಿಷನ್ ಯೋಜನೆಡಿಯಲ್ಲಿ 2.26 ಕೋಟಿ ರೂ, ಬಿಡುಗಡೆಯಾದ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಕಾಮಗಾರಿಗಳಿಗೆ ಲಕ್ಷ್ಮೀ ಹೆಬ್ಬಾಳಕರ್ ಭೂಮಿ ಪೂಜೆಯನ್ನು ಕೈಗೊಂಡು ಚಾಲನೆಯನ್ನು ನೀಡಿದರು. ಈ ಸಮಯದಲ್ಲಿ ಗ್ರಾಮದ ಹಿರಿಯರು, ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ್, ಅಮೂಲ್ ಭಾತ್ಕಂಡೆ, ಪುಂಡಲೀಕ್ ಬಾಂದುರ್ಗೆ, ವಿಕ್ರಂ ತೆರಳೆ, ಸಂಗೀತಾ ಅಂಬೇಕರ್, ಯಲ್ಲಪ್ಪ ಲೋಹಾರ್, ರಾಜು ಕೋಚೇರಿ, ಪ್ರಸಾದ ತೆರಳೆ, ಮನೋಹರ್ ಸಾವಂತ್, ಸುಭಾಷ ನಾಯ್ಕ್, ಜ್ಯೋತಿಬಾ ಶಹಾಪೂರಕರ್, ದತ್ತು ಚೌಗುಲೆ, ರಾಮಣ್ಣ ತೆರಳೆ…
ಹಾಸನ: ಹೊಳೆನರಸೀಪುರ ತಾಲ್ಲೂಕಿನ ಸರ್ಕಾರಿ ಪ್ರಾಥಮಿಕ ಶಾಲೆ ಕೋಟೆಯಲ್ಲಿ ಲಯನ್ಸ್ ಕ್ಲಬ್ ಹೊಳೆನರಸೀಪುರ ಇವರ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಡಾ.ಎಸ್.ಆರ್.ಚಂದ್ರಶೇಖರ್ ವಾಕ್ ಮತ್ತು ಶ್ರವಣ ಸಂಸ್ಥೆ ಹೆಣ್ಣೂರು ಮುಖ್ಯ ರಸ್ತೆ ಬೆಂಗಳೂರು ಇವರ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಮುಖ್ಯ ಶಿಕ್ಷಕರಾದ ದವಲತ್ ರಾವ್ ಇವರ ಅಧ್ಯಕ್ಷತೆ ವಹಿಸಿದ್ದರು. ಶಿಬಿರದಲ್ಲಿ ಬುದ್ಧಿ ಮಾಂದ್ಯ, ಸೀಳು ತುಟಿ, ಪಾರ್ಶ್ವವಾಯು, ಧ್ವನಿ ತೊಂದರೆ, ಕಿವಿ ಸೋರುವಿಕೆ, ಕಲಿಕಾ ತೊಂದರೆ, ವಾಕ್, ಶ್ರವಣ, ದೋಷವುಳ್ಳ ಇಂತಹ ಮಕ್ಕಳಿಗೆ ಆರೋಗ್ಯ ತಪಾಸಣೆ ನಡೆಸಲಾಯಿತು. ಈ ಸಂದರ್ಭದಲ್ಲಿ ಕ್ಲಬ್ ನ ಅಧ್ಯಕ್ಷೆ ಹರಿನಾಕ್ಷಿ ಬಿ.ಎಲ್., ಕಾರ್ಯದರ್ಶಿ ಲೀನಾಕ್ ಲಿದ್, ಮಹಮದ್ ಖಾಲಿದ್, ವಲಯ ಅಧ್ಯಕ್ಷರು ಮತ್ತು ಸದಸ್ಯರು ತಾಲ್ಲೂಕು ಅಂಗವಿಕಲ ಇಲಾಖೆಯವರಾದ ಕೆ.ಬಿ.ಹರೀಶ್, ಬಿ.ಆರ್.ಸಿ.ಕೇಂದ್ರದಿಂದ ವಿಶ್ವನಾಥ್, ಎಚ್.ಓಂಗಿರಪ್ಪ, ಪ್ರಶಾಂತ್, ಜ್ಯೋತಿಲಕ್ಷ್ಮೀ ಶಾಲೆಯ ಶಿಕ್ಷಕರು. ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ವರದಿ: ಮಂಜು, ಶ್ರವಣೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ…