Author: admin

ವಿಪಕ್ಷ ನಾಯಕ ಸಿದ್ದರಾಮಯ್ಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿರುವ ಸಚಿವ ಅಶ‍್ವಥ್ ನಾರಾಯಣ್ ವಿರುದ್ದ ರಾಜ್ಯಪಾಲರಿಗೆ ದೂರು ನೀಡಲಾಗಿದೆ. ಕಲಬುರಗಿ ಜಿಲ್ಲೆ ಆಳಂದ ಮಾಜಿ ಶಾಸಕ ಬಿ.ಆರ್.ಪಾಟೀಲ್ ಅವರು ಸಚಿವ ಅಶ್ವಥ್ ನಾರಾಯಣ್ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಅಶ್ವತ್ಥ್ ನಾರಾಯಣ ಅವರು ಸಿದ್ದರಾಮಯ್ಯರ ಕೊಲೆಗೆ ಪ್ರಚೋದನೆ ನೀಡಿದ್ದಾರೆ. ಸಂವಿಧಾನ‌ ಬದ್ಧವಾಗಿ ಕಾರ್ಯ ನಿರ್ವಹಿಸುವುದಾಗಿ ಪ್ರಮಾಣ ವಚನ ಸ್ವೀಕರಿಸಿದ ಮೂಲ ತಳಹದಿಯನ್ನೇ ಉಲ್ಲಂಘಿಸಿದ್ದಾರೆ. ಶಾಂತಿ ಸುವ್ಯವಸ್ಥೆಯನ್ನು ಕದಡುವ ಮೂಲಕ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡಿದ್ದಾರೆ. ಐಪಿಸಿ ಸೆಕ್ಷನ್ 353, 504, 506ರ ಅಡಿಯಲ್ಲಿ ಅಪರಾಧವೆಸಗಿದ್ದಾರೆ. ಕೂಡಲೇ ಅಶ್ವತ್ಥ್ ನಾರಾಯಣರನ್ನು ಸಚಿವ ಸಂಪುಟದಿಂದ ವಜಾಗೊಳಿಸಿಬೇಕು. ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವಂತೆ  ಕಲಬುರಗಿ ಎಸ್ ಪಿ ಮೂಲಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿ​ಗೆ ದೂರು ನೀಡಿದ್ದಾರೆ. ಸಿದ್ದರಾಮಯ್ಯ ವಿರುದ್ಧ ವಿವಾದಾತ್ಮಕ ಹೇಳಿಕೆ ಖಂಡಿಸಿ ಸಚಿವ ಅಶ‍್ವಥ್ ನಾರಾಯಣ್ ವಿರುದ್ದ ಕೊಲೆ ಯತ್ನ ಪ್ರಕರಣ ದಾಖಲಿಸಬೇಕು ಎಂದು ಮಲ್ಲೇಶ್ವರಂ ಪೊಲೀಸ್…

Read More

ಟಿಪ್ಪು ಹೊಡೆದಂತೆ ಸಿದ್ಧರಾಮಯ್ಯರನ್ನು ಹೊಡೆದು ಹಾಕೋಣ ಎಂಬ ಸಚಿವ ಅಶ್ವಥ್ ನಾರಾಯಣ್ ಹೇಳಿಕೆಗೆ ಸ್ವಪಕ್ಷೀಯ ನಾಯಕರೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾತನಾಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, ಸಿದ್ದರಾಮಯ್ಯ ರಾಜಕೀಯ ವಿರೋಧಿ ಮಾತ್ರ ಶತ್ರು ಅಲ್ಲ. ಸಚಿವ ಅಶ್ವಥ್ ನಾರಾಯಣ್ ಮಾತುಗಳನ್ನ ಒಪ್ಪುವುದಿಲ್ಲ. ಸಿದ್ಧರಾಮಯ್ಯಗೆ ಭಗವಂತ ದೀರ್ಘಾಯಿಷ್ಯ ಕೊಡಲಿ ಎಂದು ಪ್ರಾರ್ಥಿಸಿದರು. ಹಾಗೆಯೇ ಕಾಂಗ್ರೆಸ್ ವಿರುದ್ದ ವಾಗ್ದಾಳಿ ಮುಂದುವರೆಸಿದ ಶಾಸಕ ಸಿ.ಟಿ ರವಿ, ದೇಶ ಒಡೆದಿದ್ದು ಕಾಂಗ್ರೆಸ್ ನವರು.ಜಾತಿವಾರು ವಿಭಜನೆ ಮಾಡಿದ್ದ ಕಾಂಗ್ರೆಸ್. ಭಾಷೆ ಆಧಾರದಲ್ಲಿ ದೇಶ ವಿಭಜನೆ ಮಾಡಿದ್ರು. ಭ‍್ರಷ್ಟಾಚಾರದ ಬೀಜ ಬಿತ್ತಿದ್ದು ಕಾಂಗ್ರೆಸ್ ನವರು ಎಂದು ಹೇಳಿದರು. ಅಶ್ವಥ್ ನಾರಾಯಣ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಬಿಜೆಪಿ ಶಾಸಕ ಎಂ.ಪಿ ರೇಣುಕಾಚಾರ್ಯ ಅಶ್ವಥ್ ನಾರಾಯಣ್ ಹಾಗೆ ಮಾತನಾಡಿದ್ರೆ ನಾವು ಖಂಡಿಸುತ್ತೇವೆ. ವಿರೋಧ ಪಕ್ಷದವರಿಗೆ ನಾವು ಗೌರವ ಕೊಡುತ್ತೇವೆ ಎಂದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.…

Read More

ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಕೊಂಡಜ್ಜಿ ಗ್ರಾಮದಲ್ಲಿ ಖಾಸಗಿ ಲೇಔಟ್ ನಿರ್ಮಾಣಕ್ಕೆ ಪರವಾನಗಿ ನೀಡಲು ಮೂರು ಲಕ್ಷಕ್ಕೆ ಲಂಚಕ್ಕೆ ಬೇಡಿಕೆ ಇಟ್ಟು, ಅದನ್ನು ಪಡೆಯುವಾಗ ಅಧಿಕಾರಿಗಳಿಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಯೋಜನಾ ಪ್ರಾಧಿಕಾರದ ಸಹಾಯಕ ನಿರ್ದೇಶಕ ಮಂಜು ಕೆ.ಆರ್ ಹಾಗೂ ನಗರ ಯೋಜನಾಧಿಕಾರಿ ಭರತ್ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಗಳಾಗಿದ್ದು, ದಾವಣಗೆರೆ ನಗರದ ನಗರ ಯೋಜನಾ ಪ್ರಾಧಿಕಾರದ ಕಚೇರಿಯಲ್ಲಿ ಹಣ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಖಾಸಗಿ ಲೇಔಟ್ ನಿರ್ಮಾಣಕ್ಕೆ ಶ್ರೀನಿವಾಸ್ ಎಂಬುವರು ಅರ್ಜಿ ಸಲ್ಲಿಸಿದ್ದರು. ಪರವಾನಗಿ ನೀಡಲು ಮೂರು ಲಕ್ಷ ಲಂಚಕ್ಕೆ ಅಧಿಕಾರಿಗಳಿಬ್ಬರು ಬೇಡಿಕೆ ಇಟ್ಟಿದ್ದರು. ಮುಂಗಡವಾಗಿ 1 ಲಕ್ಷ ಹಣವನ್ನು ಪಡೆದಿದ್ದರು. ನಂತರ ಶ್ರೀನಿವಾಸ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಅಂತೆಯೇ ಬಾಕಿ 2 ಲಕ್ಷ ಹಣ ನೀಡುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ಲಂಚ ಸ್ವೀಕರಿಸುತ್ತಿದ್ದಂತ ಕೆ.ಆರ್ ಮಂಜು ಹಾಗೂ ಭರತ್ ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆಸಿದ್ದಾರೆ.…

Read More

ಗೋಕಾಕ್: ಕೊಟ್ಟ ಸಾಲ ಕೇಳಿದ್ದಕ್ಕೆ ವೈದ್ಯರು ಉದ್ಯಮಿಯನ್ನು ಹತ್ಯೆಗೈದಿರುವ ಪ್ರಕರಣ ಗೋಕಾಕ ತಾಲ್ಲೂಕನ್ನೆ ಬೆಚ್ಚಿಬೀಳಿಸಿತ್ತು ಪ್ರಕರಣದ ಕುರಿತು ಆರು ದಿನಗಳ ಕಾಲ ಎಡೆಬಿಡದೆ ತನಿಖೆ ನಡೆಸಿದ ಪೊಲೀಸರು ಶವ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದು ಮೂರನೆಯ ಕೊಲೆ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕೃತ್ಯ ನಡೆದ ಸ್ಥಳದಿಂದ 10ಕಿಮೀ ಅಂತರದಲ್ಲಿ ಪಂಚನಾಯಕನಟ್ಟಿ ಬಳಿ ಬಾವಿಯೊಂದರಲ್ಲಿ ರಾಜು ಝಂವರ(52)ಶವ ಪತ್ತೆಯಾಗಿದೆ. ಕೊಲೆ ಪ್ರಕರಣದ ಪ್ರಮುಖ ಆರೋಪಿ,ಡಾ ಸಚೀನ್ ಶಂಕರ ಶಿರಗಾವಿ,.(36) ಚನ್ನಮ್ಮ ನಗರ ಗೋಕಾಕ್,ಡಾ.ಶಿವಾನಂದ ಕಾಡಗೌಡ ಪಾಟೀಲ ಸಿಟಿ ಹಾಸ್ಪಿಟಲ್ ಗೋಕಾಕ್ ಈ ಇಬ್ವರು ಆರೋಪಿಗಳನ್ಬು ಈ ಹಿಂದೆಯೇ ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದ ಪೋಲಿಸರು ಈಗ ಮೂರನೇಯ ಆರೋಪಿಯಾದ,ಇರ್ಷಾದ್ ಅಹ್ಮದ ತ್ರಾಸಗರ್(25) ಎಂಬಾತನನ್ನು ಬಂಧಿಸಿದ್ದಾರೆ. ಕಳೆದ ಒಂದು ವಾರದಿಂದ ಬೃಹತ್ ಕಾಲುವೆ ಸುತ್ತ, ಹೊಲ ಗದ್ದೆಗಳಲ್ಲಿ ಪೊಲೀಸರು ತಿರುಗಾಡಿ ಮೃತ ಉದ್ಯಮಿಯ ದೇಹಕ್ಕಾಗಿ ಹುಡುಕಾಟ ನಡೆಸಿದ್ದರು. ಇದೀಗ ಪೊಲೀಸರು ಪ್ರಕರಣವನ್ನು ಬೇದಿಸಿದ್ದು ಕೋಲೆಗೆ ಪ್ರಮುಖ ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ತಪಾಸಣೆಗೈದ ಪೊಲೀಸರಿಗೆ…

Read More

ಬೆಂಗಳೂರು: ಸರ್ಕಾರದ ಇಲಾಖೆಯಲ್ಲಿ ಗುತ್ತಿಗೆ ಆಧಾರದ ನೇಮಕಾತಿಗೂ ಮೀಸಲಾತಿ ಜಾರಿ ಮಾಡುತ್ತೇವೆ ಅಂತ ಸಿಎಂ ಬಸವರಾಜ್ ಬೊಮ್ಮಾಯಿ  ಘೋಷಣೆ ಮಾಡಿದ್ದಾರೆ. ವಿಧಾನ ಪರಿಷತ್ ಕಲಾಪದ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಛಲವಾದಿ ನಾರಾಯಣಸ್ವಾಮಿ ಪ್ರಶ್ನೆ ಕೇಳಿದರು. ಗುತ್ತಿಗೆ ಆಧಾರದಲ್ಲಿ ಆಗೋ ನೇಮಕಾತಿ ಮೀಸಲಾತಿ ಜಾರಿ ಮಾಡಿ. ಕೇವಲ ಸರ್ಕಾರ ಹುದ್ದೆಗೆ ಮಾತ್ರ ಮೀಸಲಾತಿ ಜಾರಿ ಮಾಡಿದರೆ ಸಾಲದು. ಸರ್ಕಾರಿ ಇಲಾಖೆಗೆ ಗುತ್ತಿಗೆ ಆಧಾರದ ನೇಮಕಾತಿಗೂ ಮೀಸಲಾತಿ ಜಾರಿ ಮಾಡುವಂತೆ ಒತ್ತಾಯ ಮಾಡಿದರು. ಇದಕ್ಕೆ ಉತ್ತರ ನೀಡಿದ ಸಿಎಂ ಬೊಮ್ಮಾಯಿ, ಈಗಾಗಲೇ ಎಲ್ಲಾ ಸರ್ಕಾರಿ ಹುದ್ದೆ ನೇಮಕಾತಿಯಲ್ಲಿ ಮೀಸಲಾತಿ ಜಾರಿ ಆಗಿದೆ. ಹೊಸ ನೇಮಕಾತಿಯಲ್ಲಿ ಮೀಸಲಾತಿ ಕೊಟ್ಟೆ ಕೊಡುತ್ತೇವೆ. ಎಲ್ಲಾ ನೇಮಕಾತಿಯಲ್ಲಿ ಸಂವಿಧಾನದ ಪ್ರಕಾರ ಮೀಸಲಾತಿ ಕೊಡ್ತೀವಿ. ಇದರಲ್ಲಿ ಎರಡು ಮಾತಿಲ್ಲ ಎಂದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1 ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ:…

Read More

ತುಮಕೂರು: ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಮಂಜೂರಾಗಿದ್ದ 5 ಲಕ್ಷ ರೂ. ಹಣವನ್ನು ದುರ್ಬಳಕೆ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಕೋಳಾಲ ಗ್ರಾಮ ಪಂಚಾಯತ್ ನ ಪಿಡಿಓ ಕೋಮಲ ಅವರನ್ನು ಜಿಲ್ಲಾ ಪಂಚಾಯತ್ ಸಿಇಓ ಅವರು ಅಮಾನತು ಮಾಡಿ ಆದೇಶಿಸಿದ್ದಾರೆ. ಕೋಳಾಲ ಪಂಚಾಯತ್ ನ ಪಿಡಿಓ ಕೋಮಲ ಅವರು,  ಅಂಗನವಾಡಿ ಕಟ್ಟಡಕ್ಕಾಗಿ ಮಂಜೂರಾದ  5 ಲಕ್ಷ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ. ಅವರ ನಡೆಯನ್ನು ಪ್ರಶ್ನಿಸಿ ವಕೀಲರೊಬ್ಬರು  ಮಾಹಿತಿ ಕಲೆ ಹಾಕಿದಾಗ ಹಣ ಬಂದಿಲ್ಲ, ಎಂದು ಅದೂ ಇದು ಸಬೂಬು ಹೇಳಿದ್ದಾರೆ. ಈ ಬಗ್ಗೆ ವಕೀಲರು ಮಾಹಿತಿ ಹಕ್ಕಿನಡಿಯಲ್ಲಿ ಮಾಹಿತಿ ಪಡೆದುಕೊಂಡಾಗ ಮಂಜೂರಾದ ಹಣವನ್ನು ದುರ್ಬಳಕೆ ಮಾಡಿಕೊಂಡಿರುವುದು ತಿಳಿದು ಬಂದಿದೆ. ಈ ಬಗ್ಗೆ ಅಂಗನವಾಡಿ ಕಟ್ಟಡ ಕಟ್ಟಿಲ್ಲ ಎಂದು ಜಿಲ್ಲಾ ಪಂಚಾಯತ್ ಸಿಓ ಅವರ ಗಮನಕ್ಕೆ ತಂದಾಗ ಅವರು ಅವರು ತಂಡ ರಚಿಸಿ ವಿಚಾರಣೆ ನಡೆಸುತ್ತಾರೆ. ಈ ವೇಳೆ ಅವರು ಹಣ ದುರ್ಬಳಕೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ವಕೀಲರ ತಂಡವಾದ ಹಂದ್ರಾಳು ನಾಗಭೂಷಣ್ ,…

Read More

ಬೆಳಗಾವಿ: ಕಾಂಗ್ರೆಸ್ ಮುಖಂಡ ಹಾಗೂ ಕಾಂಗ್ರೆಸ್ ಪಕ್ಷದ ದಕ್ಷಿಣ ಮತಕ್ಷೇತ್ರದ ಆಕಾಂಕ್ಷಿ ಎಸ್.ಎಂ ಬೆಳವಟ್ಕರ್ ಯಳ್ಳೂರ ಗ್ರಾಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಗ್ರಾಮದ ಅನೇಕ ಸಮಸ್ಯೆಗಳನ್ನು ಪ್ರಸ್ತಾಪಿಸುತ್ತಾ ಪ್ರಮುಖವಾಗಿ ಯಳ್ಳೂರ ಗ್ರಾಮದಲ್ಲಿ ಹೊಸದಾಗಿ ರಸ್ತೆಗಳ ನಿರ್ಮಾಣ ವಾಗುತ್ತಿಲ್ಲ ಯಾಕೆ ? ಕ್ಷೇತ್ರದಲ್ಲಿ ಅನೇಕ ಅವೈಜ್ಞಾನಿಕವಾಗಿ ರಸ್ತೆ ನಿರ್ಮಾಣವಾಗುತ್ತಿರುವುದು ನಾವು ನೋಡ್ತಾ ಇದ್ದೇವೆ. ಎಂದರು. ವಡಗಾಂವ ನಿಂದ ಗ್ರಾಮಕ್ಕೆ ಬರುವ ರಸ್ತೆಯ ಸ್ಥಿತಿ ನಿಮ್ಮೆಲ್ಲರಿಗೂ ಗೊತ್ತಿರುವಂತೆ  ಅನಗೋಳ ದಲ್ಲಿ ಅವೈಜ್ಞಾನಿಕವಾಗಿ ರಸ್ತೆ ನಿರ್ಮಾಣಗೊಳ್ಳುತ್ತಿರುವುದು ನಿಮಗೆ ಗೊತ್ತಿರುವ ವಿಷಯ. ಬೆಳಗಾವಿ ಸ್ಮಾರ್ಟ್ ಸಿಟ ಎಂದು ಪ್ರಸಿದ್ಧಿ ಪಡೆಯುತ್ತಾ ಇದೆ ಆದರೆ, ಈ ಎಲ್ಲಾ ವಿಷಯಗಳನ್ನು ನಾವು ಗಮನಿಸಿದರೆ ಸ್ಮಾರ್ಟ್ ಸಿಟಿ ಅನ್ನುವಂತ ನಗರಕ್ಕೆ ಇದು ಶೋಭೆ ತರುವಂತದ್ದಲ್ಲ ಎಂದರು. ಗ್ರಾಮಗಳಲ್ಲಿ 8 ರಿಂದ10 ದಿನಗಳ ನಂತರ ನೀರು ಪೂರೈಕೆ ಆಗ್ತಾ ಇದೆ .ಶಾಸಕರು ಭ್ರಮೆಯಲ್ಲಿ, ಇದ್ದಾರೆ ಈ ಕಡೆ ಗ್ರಾಮಸ್ಥರ ಆಸ್ತಿ ಹೊಲಗದ್ದೆಗಳನ್ನು ಸಂರಕ್ಷಿಸಬೇಕು ಅಂತ ಪರಿಸ್ಥಿತಿ ನಿರ್ಮಾಣ ಆಗಿದೆ ಸರ್ಕಾರಿ ಆಧೀನದಲ್ಲಿರುವಂತಹ…

Read More

ಬಾಗಲಕೋಟೆ: ಹದಿಹರೆಯದಲ್ಲಿ ಸಾಧಿಸುವ ಹಠದೊಂದಿಗೆ ಹೆಜ್ಜೆ ಹಾಕಬೇಕು. ಸಾಧಕರಾಗಲು ನಿರಂತರ ಅಭ್ಯಾಸ ಅವಶ್ಯಕ. ಈ ಸಮಯದಲ್ಲಿ ತೆಗೆದುಕೊಳ್ಳುವ ನಿರ್ಣಯಗಳು ನಿಮ್ಮ ಬದುಕನ್ನು ರೂಪಿಸಬಲ್ಲವು ಎಂದು ಗುಣದಾಳದ ಕಲ್ಯಾಣ ಹೀರೆಮಠದ ಡಾ. ವಿವೇಕಾನಂದ ದೇವರು ಹೇಳಿದರು. ನಗರದ ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಪ್ರತಿಭಾ ಪುರಸ್ಕಾರ ಹಾಗೂ ದ್ವೀತಿಯ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಕಾರ್ಯಕ್ರಮದಲ್ಲಿ ಸಾನಿಧ್ಯ ಮತ್ತು ಗೌರವ ಅತಿಥಿಗಳಾಗಿ ಮಾತನಾಡಿದರು. ನಮ್ಮದು ಸನಾತನ ಪರಂಪರೆ ಎಂದುಕೊಳ್ಳುವುದೆ ಹೆಮ್ಮೆ. ಜೀವನದಲ್ಲಿ ಏನಾದರೂ ಸಾಧಿಸುವ ಹಠ, ಚಲ ಬರುವುದೇ ಹದಿಹರೆಯದ ವಯಸ್ಸಿನಲ್ಲಿ. ಇಲ್ಲಿ ಹಚ್ಚಿದ ದೀಪ ನಮ್ಮ ಬದುಕಿನ ಉದ್ದಕ್ಕೂ ಕರೆದುಕೊಂಡು ಹೋಗುತ್ತದೆ. ಪದವಿ ಯಾವುದೆ ಇರಲಿ ಕಲಿಕೆಯಲ್ಲಿ ನಿಷ್ಟೆ ಪ್ರಾಮಾಣಿಕತೆ ಅವಶ್ಯ. ಜಾತಿಯತೆ, ರಾಜಕೀಯ, ಸಮುದಾಯ ಗಲಬೆಗಳನ್ನು ಮೆಟ್ಟಿ ಏಕತೆ ಸಾರುವ ಶಕ್ತಿ ನಿಮ್ಮಲ್ಲಿದೆ ಅದನ್ನು ಅರಿತುಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ವಿದ್ಯಾರ್ಥಿ ಜೀವನ ಬಂಗಾರದಂತೆ ಅದನ್ನು ಮೌಲ್ಯಯುತವಾಗಿ ಬಳಸಿಕೊಳ್ಳಬೇಕು. ಮೂಬೈಲ್ ಮತ್ತು ಕಂಪ್ಯೂಟರ್ ಬಲೆಗೆ…

Read More

ಸಿನಿಮಾ ನಟರನ್ನ ರಾಜಕೀಯದತ್ತ ಸೆಳೆಯುವ ಕಾರ್ಯ ಸಾಮಾನ್ಯವಾಗಿದೆ. ಅದರಂತೆಯೇ ಸ್ಯಾಂಡಲ್ ವುಡ್ ಹೀರೋ ಸುದೀಪ್ ಅವರನ್ನು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಆಹ್ವಾನಿಸಿದ್ದವು ಎಂಬ ಸುದ್ದಿ ಹರಿದಾಡುತ್ತಿತ್ತು ಅದಕ್ಕೆ ಕುದ್ದಾಗಿ ಕಿಚ್ಚ ಸುದೀಪ್ ಹೇಳಿಕೆ ನೀಡುವುದರ ಮೂಲಕ ತೆರೆ ಎಳೆದಿದ್ದಾರೆ. ನಟ ಸುದೀಪ್ ರಾಜಕೀಯದತ್ತ ಕರೆತರಲು ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವರು ಸುದೀಪ್ ಮನೆಗೆ ಭೇಟಿ ನೀಡಿದ್ದರು. ರಮ್ಯಾ ಮೂಲಕವೂ ಅವರನ್ನು ಕರೆತರುವ ಪ್ರಯತ್ನ ನಡೆದಿತ್ತು ಎಂಬ ಮಾತುಗಳು ಕೇಳಿಬರುತ್ತಿತ್ತು. ಇತ್ತ ಬಿಜೆಪಿಯಿಂದ ಸಚಿವ ಕೆ.ಸುಧಾಕರ್ ಸೇರಿದಂತೆ ಹಲವರು ಸುದೀಪ್ ಅವರನ್ನು ಮಾತನಾಡಿಸುವ ಪ್ರಯತ್ನ ಮಾಡಿದರು. ರಾಜಕಾರಣಿಗಳು ಭೇಟಿಯಾದ ಸಂದರ್ಭದಲ್ಲೂ ಇದು ರಾಜಕೀಯ ಭೇಟಿ ಅಲ್ಲವೆಂದೇ ಹೇಳುತ್ತಿದ್ದರು. ಆದರೆ, ಕಿಚ್ಚ ಸುದೀಪ್ ಇದರ ಕುರಿತು ಮೊದಲ ಭಾರಿಗೆ ಪ್ರತಿಕ್ರಯಿಸಿದ್ದು ಎರಡೂ ಪಕ್ಷಗಳು ತಮ್ಮನ್ನು ಸಂಪರ್ಕಿಸಿರುವುದು ನಿಜವೆಂದು ತಿಳಿಸಿದ್ದಾರೆ. ‘ಮನೆಗೆ ಬಂದಿರುವ ವಿಚಾರವನ್ನು ತೇಲಿಸಲು ಹೋಗುವುದಿಲ್ಲ. ರಾಜಕಾರಣಿಗಳು ಮನೆಗೆ ಬಂದಿದ್ದಾರೆ ಅಂದರೆ, ಕಾರಣ ರಾಜಕಾರಣವೇ ಇರುತ್ತದೆ ಎಂದಿದ್ದಾರೆ ರಾಜಕೀಯದತ್ತ ನಾನು ಹೋಗುವುದಾರೆ ಅದನ್ನು…

Read More

ಅಗರ್ತಲಾ: ತ್ರಿಪುರಾ ವಿಧಾನ ಸಭೆಗೆ ಇಂದು ಚುನಾವಣೆ ನಡೆಯುತ್ತಿದ್ದು 60 ಸದಸ್ಯರ ಬಲ ಹೊಂದಿರುವ ವಿಧಾನ ಸಭೆ ಚುನಾವಣೆಗೆ 3,328 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಅದರಲ್ಲಿ 1,100 ಸೂಕ್ಷ್ಮ ಮತ್ತು 28 ನಿರ್ಣಾಯಕ ಮತಗಟ್ಟೆಗಳಿದೆ. ಇಂದು ನಡೆಯುವ ಚುನಾವಣೆಯಲ್ಲಿ 28.13 ಲಕ್ಷ ಮತದಾರರು ತಮ್ಮ ಹಕ್ಕು ಚಲಾಯಿಸಲು ಅರ್ಹರಾಗಿದ್ದು, ಒಟ್ಟು 259 ಅಭ್ಯರ್ಥಿಗಳು ಚುನಾವಣಾ ಅಖಾಡದಲ್ಲಿದ್ದಾರೆ. ಮಾರ್ಚ್ 2ರಂದು ಮತ ಎಣಿಕೆ ನಡೆಯಲಿದೆ. ಈ ಬಾರಿ 55 ಸ್ಥಾನಗಳಲ್ಲಿ ಬಿಜೆಪಿ ಸ್ಪರ್ಧಿಸಿದ್ದು ತನ್ನ ಮಿತ್ರ ಪಕ್ಷ ಇಂಡಿಜಿನಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರ ಪಕ್ಷಕ್ಕೆ ಐದು ಸ್ಥಾನಗಳನ್ನು ಬಿಟ್ಟು ಕೊಟ್ಟಿದೆ. ಕಾಂಗ್ರೆಸ್ ಎಡ ಪಕ್ಷಗಳ ಜೊತೆಗೆ ಮೈತ್ರಿ ಮಾಡಿಕೊಂಡಿದ್ದು ಸಿಪಿಐ(ಐ) 47ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದ್ದು ಕಾಂಗ್ರೆಸ್ 13 ಸ್ಥಾನಗಳಲ್ಲಿ ಸ್ಪರ್ಧಿಸಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More