Author: admin

ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಬಳಕೆಗೆ ಉತ್ತೇಜನ ನೀಡಲು ಕ್ರಮ ಕೈಗೊಂಡಿರುವ ಕೇಂದ್ರ ಸರ್ಕಾರ, ಔಷಧಿ ಸಿಂಪಡಣೆ, ಸರಕು ಸಾಗಾಣಿಕೆ ಸೇರಿದಂತೆ ಹಲವು ಕೃಷಿ ಕೆಲಸಗಳಿಗೆ ಬಳಕೆಯಾಗುವ ಡ್ರೋನ್ಗಳ ಖರೀದಿಗೆ ಆರ್ಥಿಕ ನೆರವು ಘೋಷಣೆ ಮಾಡಿದೆ. ಭಾರತದಲ್ಲಿ ಕರಾರುವಾಕ್ಕಾದ ಆಧುನಿಕ ಕೃಷಿ ಪದ್ಧತಿಯ ಉತ್ತೇಜನಕ್ಕೆ ಬಲ ನೀಡುವ ಭಾಗವಾಗಿ, ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವು ಕೃಷಿ ವಲಯದ ಪಾಲುದಾರರಿಗೆ ಡ್ರೋನ್ ತಂತ್ರಜ್ಞಾನವನ್ನು ಕೈಗೆಟುಕುವ ಬೆಲೆಗೆ ಸಿಗುವಂತೆ ಮಾಡಲು ಪ್ರಮುಖ ಮಾರ್ಗ ಸೂಚಿಗಳನ್ನು ಪ್ರಕಟಿಸಿದೆ.ಕೃಷಿ ಯಾಂತ್ರೀಕರಣ ಉಪಮಿಷನ್ (ಎಸ್‍ಎಂಎಎಂ)ನ ಮಾರ್ಗಸೂಚಿಗಳಿಗೆ ತಿದ್ದುಪಡಿ ಮಾಡಲಾಗಿದೆ. ಇದರಿಂದ ಕೃಷಿ ಡ್ರೋನ್ ವೆಚ್ಚದ ಶೇ.100ವರೆಗೆ ಅಥವಾ 10 ಲಕ್ಷ ರೂ. ಇವೆರಡರಲ್ಲಿ ಯಾವುದು ಕಡಿಮೆಯೋ ಅದನ್ನು ಅನುದಾನವಾಗಿ ನೀಡಲು ನಿರ್ಧರಿಸಿದೆ.ಕೃಷಿ ಯಂತ್ರೋಪಕರಣಗಳ ತರಬೇತಿ ಮತ್ತು ಪರೀಕ್ಷಾ ಸಂಸ್ಥೆಗಳು, ಐಸಿಎಆರ್ ಸಂಸ್ಥೆಗಳು, ಕೃಷಿ ವಿಜ್ಞಾನ ಕೇಂದ್ರಗಳು ಮತ್ತು ರಾಜ್ಯ ಕೃಷಿ ವಿಶ್ವವಿದ್ಯಾನಿಲಯಗಳಿಗೆ ನೀಡಲಾಗುತ್ತದೆ. ಈ ಸಂಸ್ಥೆಗಳು ರೈತರ ಹೊಲಗಳಲ್ಲಿ ಡ್ರೋನ್ ತಂತ್ರಜ್ಞಾನದ ದೊಡ್ಡ ಪ್ರಮಾಣದ ಪ್ರಾತ್ಯಕ್ಷಿಕೆಗಳನ್ನು ನಡೆಸಲು…

Read More

ತುರುವೇಕೆರೆ: ತಾಲೂಕಿನ ಮಾಯಸಂದ್ರ ಹೋಬಳಿಯ ಚಿಕ್ಕಬೀರನಕೆರೆ ಗ್ರಾಮದ ರೈತಪುಟ್ಟಸ್ವಾಮಿಯವರಿಗೆ ಸೇರಿದ ತೋಟದ ಪಂಪ್ ಹೌಸ್ ನಲ್ಲಿ, ವಿದ್ಯುತ್ ಅವಘಡದಿಂದ 4,000ಕ್ಕೂ ಹೆಚ್ಚು ಕೊಬ್ಬರಿ ಗಳು ಬೆಂಕಿಗಾಹುತಿಯಾಗಿವೆ. ರೈತ ಪುಟ್ಟಸ್ವಾಮಿ ತಂದೆ ಬೆಟ್ಟಯ್ಯ ನವರು  ತಮ್ಮ ತೋಟದ ಸಾವಿರಾರು ಕೊಬ್ಬರಿಗಳನ್ನು ತಮ್ಮ ತೋಟದ ಪಂಪ್ ಹೌಸ್ ನಲ್ಲಿ ಶೇಖರಿಸಿದರು. ಭಾನುವಾರ ಬೆಳಗಿನ ಜಾವದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಪಂಪ್ ಹೌಸ್ ನಲ್ಲಿದ್ದ ಸಾವಿರಾರು ಕೊಬ್ಬರಿಗಳು ಸೇರಿದಂತೆ ಹಲವಾರು ವಸ್ತುಗಳು ಸೇರಿದಂತೆ ಮೇಲ್ಛಾವಣಿಯ ಭಾಗವು ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ. ಈ ಸಂಬಂಧ ರೈತ ಪುಟ್ಟಸ್ವಾಮಿ ಅವರು ಸ್ಥಳೀಯ ಕಂದಾಯ ಇಲಾಖೆ ಮತ್ತು ತೋಟಗಾರಿಕೆ ಇಲಾಖೆ ಸೇರಿದಂತೆ ಬೆಸ್ಕಾಂ ಇಲಾಖೆಗೆ ದೂರು ನೀಡಿದ್ದು, ಸೂಕ್ತ ಪರಿಹಾರಕ್ಕಾಗಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ವರದಿ:  ಸಚಿನ್, ಮಾಯಸಂದ್ರ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ…

Read More

ಚಿತ್ರದುರ್ಗ:  ನೇತಾಜಿ ಸುಭಾಸ್ ಚಂದ್ರ ಬೋಸ್ ರವರ 126 ನೇ ಜನ್ಮದಿನಾಚರಣೆಯನ್ನು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ನೇತಾಜಿ ಸುಭಾಸ್ ಚಂದ್ರ ಬೋಸ್  ಯುವಕರ ಸಂಘದ ವತಿಯಿಂದ  ಆಚರಿಸಲಾಯಿತು. ಸಂಘದ ಅಧ್ಯಕ್ಷರಾದ ಟೈಲರ್ ಮಂಜುನಾಥ್ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಿತು. ಟೈಲರ್ ಮಂಜುನಾಥ್ ಅವರು ನೇತಾಜಿ ಸುಭಾಸ್ ಚಂದ್ರಬೋಸ್ ಅವರ ಅಪ್ಪಟ ಅಭಿಮಾನಿಯಾಗಿದ್ದು, ಪ್ರತೀ ವರ್ಷವೂ ಸುಭಾಸ್ ಚಂದ್ರಬೋಸ್ ಅವರ ಜನ್ಮ ದಿನಾಚರಣೆಯ ಸಂದರ್ಭದಲ್ಲಿ  ಕಾರ್ಯಕ್ರಮವನ್ನು ಆಯೋಜಿಸಿ, ಸುಭಾಸ್ ಚಂದ್ರ ಭೋಸ್ ಅವರ ಕುರಿತು ವಿಶೇಷ ಅಭಿಮಾನ ಮೆರೆಯುತ್ತಾರೆ. ವೃತ್ತಿಯಲ್ಲಿ ಟೈಲರ್   ಆಗಿರುವ ಮಂಜುನಾಥ್ ಅವರು ನೇತಾಜಿ ಸುಭಾಸ್ ಚಂದ್ರ ಬೋಸ್ ಜಯಂತಿಯನ್ನು 22 ವರ್ಷಗಳಿಂದಲೂ ಆಯೋಜಿಸುತ್ತಿದ್ದಾರೆ. ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಮಂಜುನಾಥ್ ಅವರು, ನೇತಾಜಿ ಸುಭಾಸ್  ಚಂದ್ರ ಬೋಸ್ ಅವರ ತ್ಯಾಗ,  ಬಲಿದಾನ  ಅವರು ಕಟ್ಟಿರುವಂತಹ ಇಂಡಿಯನ್ ಆರ್ಮಿ,  ಅವರು ಭಾರತ ದೇಶಕ್ಕೆ  ನೀಡಿರುವಂತಹ ಕೊಡುಗೆಗಳು ಅಮೂಲ್ಯವಾದದ್ದು , ಶ್ರೇಷ್ಠವಾದದು, ಅವರನ್ನು ಯಾರೂ  ಸಹ ಮರೆಯಲು ಸಾಧ್ಯವಿಲ್ಲ ಎಂದರು. ನಂತರ, ಸುಭಾಸ್…

Read More

ತಿಪಟೂರು:  ತಾಲ್ಲೂಕಿನ ಕಸಬಾ ಹೋಬಳಿಯ ಬೆನ್ನಾಯಕನಹಳ್ಳಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ವತಿಯಿಂದ ಕಸಬಾ ಹೋಬಳಿ ಘಟಕದ ಉದ್ಘಾಟನೆ, ಕಾರ್ಮಿಕರಿಗೆ ಸುರಕ್ಷತಾ ಕಿಟ್ ಮತ್ತು ಯುವಿುನಿಟಿ ಕಿಟ್ ವಿತರಣಾ ಕಾರ್ಯಕ್ರಮ ನಡೆಯಿತು.  ಶ್ರೀ ಕೆಂಪಾಂಬ ದೇವಾಲಯದ ಧರ್ಮದರ್ಶಿ ಪ್ರಭುಸ್ವಾಮಿ, ಗ್ರಾ.ಪಂ. ಸದಸ್ಯ ಬಿ.ಬಿ. ಬಸವರಾಜ್ ಮತ್ತು ಕಾರ್ಮಿಕ ಸಂಘದ ಅಧ್ಯಕ್ಷ ಸರ್ವೇಶಚಾರ್ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಜಯಕರ್ನಾಟಕ ಜನಪರ ವೇದಿಕೆ ಅಧ್ಯಕ್ಷ ಬಿ.ಟಿ.ಕುಮಾರ್ , ಗ್ರಾ.ಪಂ. ಸದಸ್ಯರಾದ ನರಸಿಂಹಯ್ಯ,  ಉಮಾಶಂಕರ್, ಕಸಬಾ ಹೋಬಳಿ ಅಧ್ಯಕ್ಷ ಗಿರೀಶ್, ಮುಖಂಡ ಯತೀಶ್,  ಸಂಘಟನೆಯ ಪದಾಧಿಕಾರಿಗಳಾದ ನಿಂಗಯ್ಯ ಯೋಗೀಶ್ ಆಚಾರ್, ಭರತ್ ಮತ್ತು ಬಸವರಾಜ್ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು. ವರದಿ:  ಆನಂದ್ ತಿಪಟೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಪಾವಗಡ: ಪಾವಗಡ ಪಟ್ಟಣದ ವಾರ್ಡ್ ನಂಬರ್ 22ರಲ್ಲಿ ಇರುವ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ಹೋಗಿದ್ದು, ಸಂಬಂಧ ಪಟ್ಟವರ ನಿರ್ಲಕ್ಷ್ಯದಿಂದಾಗಿ ಇನ್ನೂ ಸರಿಪಡಿಸದೇ  ಬೇಜವಾಬ್ದಾರಿ ಮೆರೆಯಲಾಗಿದೆ ಎಂಬ ಆಕ್ರೋಶ ಕೇಳಿ ಬಂದಿದೆ. ಪಾವಗಡ ತಾಲ್ಲೂಕಿನ ಶಾಸಕರಾದ ವೆಂಕಟರಮಣಪ್ಪ ಅವರು ನಾಲ್ಕು ತಿಂಗಳ ಹಿಂದೆ ಈ ನೀರಿನ ಘಟಕವನ್ನು ಉದ್ಘಾಟಿಸಿದ್ದರು. ಆದರೆ ಇದೀಗ ಕೆಲವೇ ತಿಂಗಳುಗಳಲ್ಲಿ ನೀರಿನ ಘಟಕ ಕೆಟ್ಟು ಹೋಗಿದ್ದು, ಈ ಬಗ್ಗೆ ಪುರಸಭೆ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಇಲ್ಲಿನ ಸಾರ್ವಜನಿಕರು ದೂರಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಗುಬ್ಬಿ: ವಿದ್ಯುತ್ ಸ್ಪರ್ಶಿಸಿ  ಹಾರ್ಡ್ ವೇರ್ ಅಂಗಡಿಯೊಂದು ಬೆಂಕಿಗಾಹುತಿಯಾದ ಘಟನೆ ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಎಂ.ಎನ್.ಕೋಟೆ ಗ್ರಾಮದಲ್ಲಿ ನಡೆದಿದೆ. ಎಂ.ಎನ್.ನಿವಾಸಿ ಪ್ರಕಾಶ್ ಸಿರಿವೆ ಮಾಲಿಕತ್ವದ ಎಂ.ಎನ್.ಕೋಟೆ ಗ್ರಾಮದ ‘ಮಾತೃ ಶ್ರೀ ಹಾರ್ಡ್ ವೇರ್’ ಬೆಂಕಿಗಾಹುತಿಯಾಗಿರುವ ಅಂಗಡಿಯಾಗಿದೆ. ಬೆಂಕಿಯ ಕೆನ್ನಾಲಿಗೆ  ಕಟ್ಟಡಕ್ಕೆ ಬಳಸಲಾಗುವ ವಿವಿಧ ಸಾಮಗ್ರಿ ಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಅಂಗಡಿಯಲ್ಲಿದ್ದ ಸುಮಾರು 25 ಲಕ್ಷಕ್ಕೂ ಅಧಿಕ ಬೆಲೆಯ ವಸ್ತುಗಳು  ಬೆಂಕಿಗಾಹುತಿಯಾಗಿವೆ. ನಿನ್ನೆ ರಾತ್ರಿ ಸುಮಾರು 9 ಗಂಟೆಯ ಸಮಯದಲ್ಲಿ ಈ ಘಟನೆ ನಡೆದಿದ್ದು, ಘಟನಾ ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಘಟನೆ ಸಂಬಂಧ ಚೇಳೂರು ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ತುಮಕೂರು: ಸುಭಾಷ್ ಚಂದ್ರ ಬೋಸ್ ಅವರನ್ನು 125ನೇ ಜನ್ಮ ಜಯಂತಿಯನ್ನು  ಡಾ.ಶಿವಕುಮಾರ ಸ್ವಾಮೀಜಿ ಸರ್ಕಲ್ ನ ನಂದಿನಿ ಡೈರಿ ಬಳಿ ಆಚರಿಸಲಾಯಿತು. ಜ್ಯೋತಿ ಬೆಳಗಿಸಿ, ಡಾ.ಭಾಸ್ಕರ್ ಅವರು ಗೀತಾ ವಚನಗಳನ್ನು ಹೇಳುವುದರ ಮೂಲಕ “ನುಡಿದವನ ನುಡಿನಮನಗಳನ್ನು ಸಲ್ಲಿಸಲಾಯಿತು.  ಹಿರಿಯ ಪತ್ರಕರ್ತರು ಭಾಸ್ಕರಾಚಾರ್ಯ ಹಾಗೂ ಮಂಜು ಮತ್ತು ಚಂದನ್ ವಿದ್ಯಾರ್ಥಿ ಮುಖಂಡರಾದ ಎನ್.ವೀರೇಶ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಸುಭಾಷ್ ಚಂದ್ರ ಬೋಸ್ ಅವರ ಕಿರು ಪುಸ್ತಕವನ್ನು ಕಾಣಿಕೆಯಾಗಿ ನೀಡಲಾಯಿತು. ಕರ್ನಾಟಕ ಸಂಪಾದಕರು ಮತ್ತು ವರದಿಗಾರರ ಸಂಘ ತಿಪಟೂರು ಘಟಕದ ಅಧ್ಯಕ್ಷರಾದ ಗಣೇಶ್  ಹಾಗೂ ಗಣ್ಯಾತಿಗಣ್ಯರು ಉಪಸ್ಥಿತರಿದ್ದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ತುರುವೇಕೆರೆ:  ತಾಲೂಕಿನ ತುರುವೇಕೆರೆ ಪಟ್ಟಣ ಪಂಚಾಯಿತಿ ನೂತನ ಪಟ್ಟಣದ ಪ್ರಥಮ ಪ್ರಜೆಯಾಗಿ ಚಾಲೆಂಜಿಂಗ್  ಚಿದಾನಂದ್ ಆಯ್ಕೆಯಾಗಿದ್ದಾರೆ. ತುರುವೇಕೆರೆ ಪಟ್ಟಣಪಂಚಾಯ್ತಿ ನಿಕಟ ಪೂರ್ವ ಅಧ್ಯಕ್ಷರಾಗಿದ್ದ ,ಅಂಜನ್ ಕುಮಾರ್ ರವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಇಂದು ಚುನಾವಣೆ ನಡೆದಿದ್ದು, ಈ ಸ್ಥಾನಕ್ಕೆ ಯಾವೊಬ್ಬ ಅಭ್ಯರ್ಥಿಯು ನಾಮಪತ್ರ ಸಲ್ಲಿಕೆ ಮಾಡಲಿಲ್ಲ ಏಕೈಕ ಅಭ್ಯರ್ಥಿ ಚಿದಾನಂದ್  ಅರ್ಜಿಸಲ್ಲಿಸಿದ್ದು, ಅಂತಿಮವಾಗಿ ಚಿದಾನಂದ್  ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗುತ್ತಿದ್ದಂತೆಯೇ ಚಿದಾನಂದ್ ರವರಿಗೆ ಬೆಂಬಲಿಗರು ಹಾರ ಹಾಕಿ ಅಭಿನಂದಿಸಿದರು. ಇದೇ ವೇಳೆ ಪಟಾಕಿ ಸಿಡಿಸಿ, ಜೈಕಾರ ಹಾಕಿ ಸಂಭ್ರಮಿಸಿದರು. ಅಧ್ಯಕ್ಷರಾಗಿ ಆಯ್ಕೆಯಾದ ಚಿದಾನಂದ್ ಮಾತನಾಡಿ,   ನನ್ನ ಅವಿರೋಧ ಆಯ್ಕೆಗೆ ಶ್ರಮಿಸಿದ  ಲೋಕಸಭಾ ಸದಸ್ಯರಿಗೂ, ಶಾಸಕರಿಗೆ ಪಟ್ಟಣ ಪಂಚಾಯಿತಿ, ಉಪಾಧ್ಯಕ್ಷ ರಿಗೂ , ಸರ್ವಸದಸ್ಯರಿಗೂ ಬೆಂಬಲಿಗರಿಗೂ ಅಭಿನಂದನೆ ಸಲ್ಲಿಸಿದರು . ನಂತರ ಬೆಂಬಲಿಗರೊಂದಿಗೆ ತೆರೆದ ವಾಹನದಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯನ್ನು ನಡೆಸಲಾಯಿತು. ನೂತನ ಅಧ್ಯಕ್ಷರ ಮೇಲೆ ಹಾಲಿನ ಅಭಿಷೇಕ ಮಾಡಲಾಯಿತು. ರಸ್ತೆ ಮದ್ಯೆ ಜೆ.ಸಿ.ಬಿ.ಯಂತ್ರದ ಮೇಲಿಂದ  ಹೂ ಮಳೆ ಸುರಿಸಿ…

Read More

ಚಿತ್ರದುರ್ಗ: ಹಿರಿಯೂರು ತಾಲ್ಲೂಕಿನ ಧರ್ಮಪುರ ಹೋಬಳಿ ಬ್ಯಾಡರಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮನೆಯೊಂದಕ್ಕೆ ಬೆಂಕಿ ಹತ್ತಿಕೊಂಡ ಘಟನೆ ನಡೆದಿದ್ದು, ಪರಿಣಾಮವಾಗಿ ಮನೆ ಸಂಪೂರ್ಣವಾಗಿ ಸುಟ್ಟು ಹೋಗಿದ್ದು, ಅಪಾರ ನಷ್ಟ ಸಂಭವಿಸಿದೆ. ಬ್ಯಾಡರಹಳ್ಳಿ ಗ್ರಾಮದ ನಿವಾಸಿ ಭಾಗ್ಯಮ್ಮನವರು ಹಾಗೂ ಕುಟುಂಬಸ್ಥರು ಶನಿವಾರ ಮಸ್ಕಲ್ ಮಟ್ಟಿ ಗ್ರಾಮದಲ್ಲಿನ ಮಗಳ ಮನೆಗೆ  ಮೊಮ್ಮಗಳ ನಾಮಕರಣ ದ ಶುಭಕಾರ್ಯಕ್ಕೆ ತೆರಳಿದಾಗ ಈ ದುರ್ಘಟನೆ ನಡೆದಿದ್ದು, ಮನೆಯಲ್ಲಿದ್ದ ಬೆಳೆ ಬಾಳುವ ವಸ್ತುಗಳು ಸುಟ್ಟು ಹೋಗಿದ್ದು, ಸುಮಾರು 8 ಲಕ್ಷ ಬೆಲೆ ಬಾಳುವ ವಸ್ತುಗಳು ಬೆಂಕಿಗಾಹುತಿಯಾಗಿವೆ ಎನ್ನಲಾಗಿದೆ. ಘಟನೆ ಹಿನ್ನೆಲೆಯಲ್ಲಿ ಬ್ಯಾಡರಹಳ್ಳಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು , ಗ್ರಾ. ಪಂ. ಅಧ್ಯಕ್ಷರು , ಉಪಾಧ್ಯಕ್ಷರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸರ್ಕಾರದಿಂದ ಆದಷ್ಟು ಬೇಗ ಪರಿಹಾರ ಒದಗಿಸುವುದಾಗಿ  ತಿಳಿಸಿದರು. ಇನ್ನೂ ಸಂತ್ರಸ್ತ ಮಹಿಳೆ ಕೂಲಿ ಕೆಲಸ ಮಾಡಿಕೊಂಡು ಬದುಕುತ್ತಿದ್ದಾರೆ. ಅವರ ಕುಟುಂಬ ಈ ಘಟನೆಯಿಂದ ತೀವ್ರವಾಗಿ ನಷ್ಟಕ್ಕೊಳಗಾಗಿದ್ದು, ಸಂಕಷ್ಟದಲ್ಲಿದೆ. ಸರ್ಕಾರ ಈ ಕುಟುಂಬಕ್ಕೆ ತಕ್ಷಣವೇ ಪರಿಹಾರ ಒದಗಿಸುವ ಮೂಲಕ…

Read More

ಕೊರಟಗೆರೆ: ಗೊರವನಹಳ್ಳಿ ಸಮೀಪವಿರುವ ಎಂಎಸ್ ಐಎಲ್  ಮದ್ಯದಂಗಡಿಯಲ್ಲಿ ರಾತ್ರಿ ಯಾರೂ ಇಲ್ಲದ ಸಮಯದಲ್ಲಿ ಕಳ್ಳರು ಬಾಗಿಲನ್ನು ಒಡೆದು ಐವತ್ತು ಸಾವಿರ ನಗದು ಹಾಗೂ ಮದ್ಯದ ಬಾಟಲಿಗಳನ್ನು ದೋಚಿಕೊಂಡು  ಪರಾರಿಯಾಗಿದ್ದಾರೆ .  ಘಟನೆ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯ ಅಧಿಕಾರಿ ಪಿ ಎಸ್ ಐ ನಾಗರಾಜ್, ಪಿ ಎಸ್ ಐ ಮಂಜುಳಾ  ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ಕೈಗೊಂಡಿದ್ದಾರೆ . ವರದಿ: ಮಂಜುಸ್ವಾಮಿ.ಎಂ.ಎನ್., ಕೊರಟಗೆರೆ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More