Author: admin

ಬೆಳಗಾವಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಮಂಗಳವಾರ ಮಧ್ಯರಾತ್ರಿ 12.30ಕ್ಕೆ ಕರೆ ಮಾಡಿ ತಮಗೆ ಬ್ಲ್ಯಾಕ್ ಮೇಲ್ ಮಾಡಿದ್ದಾರೆ ಎನ್ನುವ ಮಾಜಿ ಸಚಿವ ರಮೇಶ ಜಾರಕಿಹೊಳಿ ಆರೋಪಕ್ಕೆ ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ತೀವ್ರ ಸಿಡಿಮಿಡಿ ಗೊಂಡಿದ್ದಾರೆ. ಬುಧವಾರ ಸಂಜೆ ತಮ್ಮನ್ನು ಭೇಟಿ ಮಾಡಿದ ಮಾಧ್ಯಮಗಳ ಜೊತೆ ಮಾತನಾಡಿದ ಅವರು ರಮೇಶ ಜಾರಕಿಹೊಳಿ ಅವರ ಗೋಕಾಕ ಕ್ಷೇತ್ರ ಸೇರಿದಂತೆ ಅವರ ಉಸ್ತುವಾರಿಯ ನಾಲ್ಕೂ ಕ್ಷೇತ್ರಗಳಲ್ಲಿ ಬಿಜೆಪಿ ಸೋಲುತ್ತದೆ ಎನ್ನುವುದು ಗೊತ್ತಾಗಿ ಅವರು ಹತಾಶರಾಗಿದ್ದಾರೆ, ಅವರಿಗೆ ಹುಚ್ಚು ಹಿಡಿದಿದೆ ಎಂದು ಕಿಡಿಕಾರಿದರು. ರಮೇಶ ಜಾರಕಿಹೊಳಿ ಉದ್ದಟತನದ ಮಾತುಗಳನ್ನಾಡಿದ್ದಾರೆ. ಅವರಿಗೆ ತಲೆ ಕೆಟ್ಟಿದೆ. ಅಥಣಿ, ಬೆಳಗಾವಿ ಗ್ರಾಮೀಣ, ಕಾಗವಾಡ ಮತ್ತು ಗೋಕಾಕದಲ್ಲಿ ಬಿಜೆಪಿ ಸೋಲುತ್ತದೆ ಎಂದು ಹತಾಶರಾಗಿದ್ದಾರೆ ಎಂದರು. ರಾತ್ರಿ 12.30ಕ್ಕೆ ಫೋನ್ ಮಾಡಿ ಬ್ಲ್ಯಾಕ್ ಮಾಡಿದ್ದಾರೆ ಎಂದು ಡಿ.ಕೆ.ಶಿವಕುಮಾರ ಅವರ ಮೇಲೆ ಆರೋಪ ಮಾಡಿದ್ದಾರೆ. ಮಾನ ಮರ್ಯಾದೆ ಇದ್ದರೆ ಆರೋಪಕ್ಕೆ ಪೂರಕವಾಗಿ ಅವರು ಫೋನ್ ಕರೆಯ ಸ್ಕ್ರೀನ್ ಶಾಟ್, ಕಾಲ್ ರೆಕಾರ್ಡ್ ರಿಲೀಸ್ ಮಾಡಲಿ.…

Read More

ಬಿಜೆಪಿಯ ಹಿರಿಯ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಸುಬ್ರಮಣಿಯನ್ ಸ್ವಾಮಿ ಅವರು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಹೊಗಳಿದ್ದಾರೆ. ಮಮತಾ ಭಾರತದ ಪ್ರಧಾನಿಯಾಗಬೇಕಿತ್ತು. ಅಧಿಕಾರದಲ್ಲಿರುವವರಿಂದ ಬೆದರಲಾಗದ ಮಮತಾ ಮುಖ್ಯಮಂತ್ರಿಯಾಗಿದ್ದಾರೆ ಎಂದು ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ. ಮಮತಾ ಬ್ಯಾನರ್ಜಿ ದೇಶದ ಪ್ರಧಾನಿಯಾಗಬೇಕು. ಇತರ ನಾಯಕರು ಇಂದು ಕೇಂದ್ರೀಯ ಸಂಸ್ಥೆಗಳಿಗೆ ಹೆದರಿ ಸರ್ಕಾರವನ್ನು ಹೆಚ್ಚು ಟೀಕಿಸುವುದಿಲ್ಲ. ಅವರಿಗೆ ಇಡಿ ಮತ್ತು ಸಿಬಿಐ ಭಯವಿದೆ. ಇದು ದೇಶದ ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ. ಆದರೆ ಮಮತಾ ಬ್ಯಾನರ್ಜಿ ಧೈರ್ಯಶಾಲಿ. ಅವರು ಎಡಪಕ್ಷಗಳ ವಿರುದ್ಧ ಹೇಗೆ ನಿಲುವು ತಳೆದರು ಎಂಬುದನ್ನು ಕಲಿಯೋಣ. ಇಂದಿನ ಪರಿಸ್ಥಿತಿಯಲ್ಲಿ ಯಾರಿಗೂ ಹೆದರದ ಏಕೈಕ ನಾಯಕಿ ಮಮತಾ ಬ್ಯಾನರ್ಜಿ ಎಂದು ಹೇಳಿದರು. ಯಾರಿಗೂ ಹೆದರದ, ಆಡಳಿತ ಪಕ್ಷದ ಮಿತ್ರರಲ್ಲದ ಉತ್ತಮ ಪ್ರತಿಪಕ್ಷ ದೇಶಕ್ಕೆ ಬೇಕು. ದೇಶಕ್ಕೆ ಬಲಿಷ್ಠ ಪ್ರತಿಪಕ್ಷದ ಅಗತ್ಯವಿದೆ, ಅದನ್ನು ಆಡಳಿತ ಪಕ್ಷದ ಜನರು ಬ್ಲ್ಯಾಕ್‌ ಮೇಲ್ ಮಾಡಲು ಸಾಧ್ಯವಿಲ್ಲ ಎಂದು ಸ್ವಾಮಿ ಹೇಳಿದರು.…

Read More

ಅಮೃತಸರದ ಗೋಲ್ಡನ್  ಟೆಂಪಲ್ ಬಳಿ ನಡೆದ ಸ್ಫೋಟಕ್ಕೆ ಸಂಬಂಧಿಸಿದಂತೆ ಸಂಚು ರೂಪಿಸಿದ್ದ ಐವರನ್ನು ಬಂಧಿಸಲಾಗಿದೆ. ಸದ್ಯ ಬಾಂಬ್ ಎಸೆದ ವ್ಯಕ್ತಿ ಸೇರಿದಂತೆ 5 ಮಂದಿಯನ್ನು ಬಂಧಿಸಲಾಗಿದೆ. ನಿನ್ನೆ ರಾತ್ರಿ ಅಮೃತಸರದಲ್ಲಿ ಸ್ಫೋಟ ಸಂಭವಿಸಿದೆ. ವಿವಿಧ ರೀತಿಯ ಪಟಾಕಿಗಳಲ್ಲಿ ಬಳಸುವ ಪೊಟಾಶಿಯಂ ಕ್ಲೋರೇಟ್ ಬಳಸಿ ಸ್ಫೋಟ ನಡೆಸಲಾಗಿದೆ ಎಂಬುದು ಪ್ರಾಥಮಿಕ ಮಾಹಿತಿ. ಮೊನ್ನೆ ಮೇ 6 ಮತ್ತು 8ರಂದು ಗೋಲ್ಡನ್ ಟೆಂಪಲ್ ಬಳಿ ಸ್ಫೋಟ ಸಂಭವಿಸಿತ್ತು. ಮಧ್ಯರಾತ್ರಿ 12.30ರ ಸುಮಾರಿಗೆ ಸ್ಫೋಟ ಸಂಭವಿಸಿದೆ. ವರದಿಗಳ ಪ್ರಕಾರ, ತನಗೆ ಯಾವುದೇ ಸಂಘಟನೆಯೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಪ್ರಮುಖ ಆರೋಪಿ ಹೇಳಿಕೆ ನೀಡಿದ್ದಾನೆ. ಕೆಲವು ಬೇಡಿಕೆಗಳನ್ನು ಸರಕಾರದ ಗಮನಕ್ಕೆ ತರುವುದು ಉದ್ದೇಶವಾಗಿತ್ತು ಎಂದು ವರದಿಯಲ್ಲಿ ವಿವರಿಸಲಾಗಿದ್ದು, ಆರೋಪಿಗಳು ಹೇಳಿಕೆ ನೀಡಿದ್ದಾರೆ. ಆರೋಪಿಯಿಂದ ಡ್ರಗ್ ಇಂಜೆಕ್ಷನ್ ಕೂಡ ವಶಪಡಿಸಿಕೊಳ್ಳಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಭೂಮಿ ವಸತಿ ಕೊಡದೇ ನಮ್ಮ ಓಟು ಕೊಡೆವು ಎಂಬ ಘೋಷಣೆಯೊಂದಿಗೆ ಹೋರಾಟ ನಡೆಸುತ್ತಿದ್ದ ಅಲೆಮಾರಿ ಸಮುದಾಯವು ಮತದಾನದ ದಿನವಾದ ಮೇ 10ರಂದು ತಮ್ಮ ಜವಾಬ್ದಾರಿಯನ್ನು ಅರಿತು ಮತಚಲಾಯಿಸಿದ್ದಾರೆ. ಭೂಮಿ ವಸತಿ ಕೊಡದೇ ನಮ್ಮ ಓಟು ಕೊಡೆವು ಎಂಬ ಬ್ಯಾನರ್ ನ್ನು ನಮ್ಮ ಗುಡಿಸಲಿಗೆ ಹಾಕಿಕೊಂಡು, ಮತ ಕೇಳಲು ಬಂದ ಪ್ರತಿಯೊಬ್ಬರ ಜನಪ್ರತಿನಿಧಿಗೂ ನಮ್ಮ ಕಷ್ಟಗಳನ್ನು ಹೇಳಿಕೊಂಡಿದ್ದೇವೆ. ಹಣ, ಹೆಂಡ, ಕುಕ್ಕರ್ ಮತ್ತಿತರ ಆಮಿಷಗಳಿಗೆ ಬಲಿಯಾಗದೇ ಮತಗಟ್ಟೆಗೆ ತೆರಳಿ ಮತ ಚಲಾಯಿಸಿದ್ದೇವೆ ಎಂದು ಇಲ್ಲಿನ ಮುಖಂಡರು ಹೇಳಿದರು. ಪ್ರತಿ ವರ್ಷವೂ ಚುನಾವಣೆ ಬರ್ತಿದೆ ಮತ ಹಾಕಿಸಿಕೊಳ್ಳುತ್ತಲೇ ಇದ್ದಾರೆ. ಆದರೆ ಯಾವುದೇ ಪಕ್ಷದವರು ನಮಗೆ ಯಾವುದೇ ಮೂಲಭೂತ ಸೌಕರ್ಯಗಳನ್ನು ಮಾಡಿಕೊಟ್ಟಿಲ್ಲ. ಈ ಬಾರಿಯೂ ನಾವು ನಮ್ಮ ಜವಾಬ್ದಾರಿಯನ್ನು ಅರಿತು ಮತದಾನ ಮಾಡುತ್ತೇವೆ. ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳು ನಮಗೆ ಮನೆ ಹಕ್ಕು ಪತ್ರ ಹಾಗೂ ಮೂಲಭೂತ ಸೌಕರ್ಯ ಒದಗಿಸುವಂತೆ ಗ್ರಾಮದ ಯುವತಿಯೊಬ್ಬರು ಮನವಿ ಮಾಡಿಕೊಂಡರು. ಬದಲಾವಣೆ ಜಗದ ನಿಯಮ ಅದರಂತೆ ತುಮಕೂರು ಜಿಲ್ಲೆ ತುಮಕೂರು ತಾಲೂಕು…

Read More

(ಬೆಳಿಗ್ಗೆ 07 :00 ಘಂಟೆಯಿಂದ ಸಂಜೆ 05:00 ರವರೆಗೆ) ಐದನೇ ಸುತ್ತು ಸಂಜೆ 05:00  ಗಂಟೆಯವರೆಗೆ ನಡೆದ  ಶೇಕಡಾವಾರು ಮತದಾನ ವಿವರ’:- 128- ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರ – ಶೇ. 78.83 129- ತಿಪಟೂರು ವಿಧಾನಸಭಾ ಕ್ಷೇತ್ರ – ಶೇ. 76.68 130 -ತುರುವೇಕೆರೆ  ವಿಧಾನಸಭಾ ಕ್ಷೇತ್ರ –  ಶೇ. 79.58 131-ಕುಣಿಗಲ್  ವಿಧಾನಸಭಾ ಕ್ಷೇತ್ರ – ಶೇ. 81.12 132-ತುಮಕೂರು ನಗರ ವಿಧಾನಸಭಾ ಕ್ಷೇತ್ರ  – ಶೇ61.53 133-ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರ   -ಶೇ. 76.38 134-ಕೊರಟಗೆರೆ  ವಿಧಾನಸಭಾ ಕ್ಷೇತ್ರ – ಶೇ 75.54 135-ಗುಬ್ಬಿ ವಿಧಾನಸಭಾ ಕ್ಷೇತ್ರ – ಶೇ 77.18 136- ಶಿರಾ ವಿಧಾನಸಭಾ ಕ್ಷೇತ್ರ – ಶೇ 72.78 137-ಪಾವಗಡ  ವಿಧಾನಸಭಾ ಕ್ಷೇತ್ರ – ಶೇ 77.89 138 – ಮಧುಗಿರಿ  ವಿಧಾನಸಭಾ ಕ್ಷೇತ್ರ -ಶೇ 74.87 ಜಿಲ್ಲೆಯಲ್ಲಿ ಸಂಜೆ 05:00 ಗಂಟೆಯವರೆಗೆ  ನಡೆದಿರುವ ಐದನೇ ಸುತ್ತಿನ ಸರಾಸರಿ  ಮತದಾನ  ಒಟ್ಟು  ಶೇ. 75.24 ನಮ್ಮತುಮಕೂರು.ಕಾಂನ…

Read More

ತುಮಕೂರು ಜಿಲ್ಲೆಯ 11  ವಿಧಾನಸಭಾ ಕ್ಷೇತ್ರವಾರು ಚುನಾವಣೆ: 2023 ಮತದಾನ ವಿವರ (ಬೆಳಿಗ್ಗೆ 07 :00 ಘಂಟೆಯಿಂದ ಮಧ್ಯಾಹ್ನ 03:00 ರವರಗೆ) ನಾಲ್ಕನೇ ಸುತ್ತು  ಮಧ್ಯಾಹ್ನ 03:00  ಗಂಟೆಯವರೆಗೆ ನಡೆದ  ಶೇಕಡಾವಾರು ಮತದಾನ ವಿವರ: 128- ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರ = ಶೇ. 61.45 129- ತಿಪಟೂರು ವಿಧಾನಸಭಾ ಕ್ಷೇತ್ರ – ಶೇ. 59.44 130 -ತುರುವೇಕೆರೆ  ವಿಧಾನಸಭಾ ಕ್ಷೇತ್ರ –  ಶೇ. 62.66 131-ಕುಣಿಗಲ್  ವಿಧಾನಸಭಾ ಕ್ಷೇತ್ರ – ಶೇ. 64.64 132-ತುಮಕೂರು ನಗರ ವಿಧಾನಸಭಾ ಕ್ಷೇತ್ರ  – ಶೇ49.20 133-ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರ   -ಶೇ. 59.09 134-ಕೊರಟಗೆರೆ  ವಿಧಾನಸಭಾ ಕ್ಷೇತ್ರ – ಶೇ 50.25 135-ಗುಬ್ಬಿ ವಿಧಾನಸಭಾ ಕ್ಷೇತ್ರ – ಶೇ 59.36 136- ಶಿರಾ ವಿಧಾನಸಭಾ ಕ್ಷೇತ್ರ – ಶೇ 54.48 137-ಪಾವಗಡ  ವಿಧಾನಸಭಾ ಕ್ಷೇತ್ರ – ಶೇ 60.80 138 – ಮಧುಗಿರಿ  ವಿಧಾನಸಭಾ ಕ್ಷೇತ್ರ -ಶೇ 57.58 ಜಿಲ್ಲೆಯಲ್ಲಿ ಮಧ್ಯಾಹ್ನ 03:00…

Read More

ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಬೆಳ್ಳಂ ಬೆಳಿಗ್ಗೆ ತಮ್ಮ ಮತ ಚಲಾವಯಿಸುವುದರ ಮೂಲಕ ಎಲ್ಲರಿಗೂ ಖಡ್ಡಾಯ ಮತ ಚಲಾವಣೆ ಮಾಡಲು ಸಂದೇಶ ನೀಡಿದ್ದಾರೆ. ಬೆಳಗಾವಿ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಅವರು ವಿಶ್ವೇಶ್ವರಯ್ಯ ನಗರದ ಸರಕಾರಿ ಶಾಲೆಯ ಮತಗಟ್ಟೆಯಲ್ಲಿ ತಮ್ಮ ಮತವನ್ನು ಚಲಾಯಿಸಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಸಿಇಒ ಎಲೋನ್ ಮಸ್ಕ್ ಶೀಘ್ರದಲ್ಲೇ ಕರೆಗಳು ಮತ್ತು ಟ್ವಿಟರ್‌ನಲ್ಲಿ ಎನ್‌ಕ್ರಿಪ್ಟ್ ಮಾಡಿದ ಸಂದೇಶಗಳನ್ನು ಮಾಡಲಿದ್ದಾರೆ. ಪ್ರತಿಯೊಂದಕ್ಕೂ ಟ್ವಿಟ್ಟರ್ ಅನ್ನು ಅಪ್ಲಿಕೇಶನ್ ಮಾಡುವುದು ಗುರಿಯಾಗಿದೆ ಎಂದು ಮಸ್ಕ್ ಹೇಳಿದರು. ಮಸ್ಕ್ ಅವರು ತಮ್ಮ ಟ್ವಿಟರ್ ಹ್ಯಾಂಡಲ್ ಮೂಲಕ ಘೋಷಣೆ ಮಾಡಿದ್ದಾರೆ. ವೀಡಿಯೊ ಮತ್ತು ಧ್ವನಿ ಚಾಟ್‌ಗಳು ಶೀಘ್ರದಲ್ಲೇ ಈ ಪ್ಲಾಟ್‌ಫಾರ್ಮ್‌ಗೆ ಬರಲಿವೆ. ಹಾಗಾಗಿ ನಿಮ್ಮ ಫೋನ್ ನಂಬರ್ ನೀಡದೆ ಜಗತ್ತಿನ ಯಾರೊಂದಿಗೂ ಮಾತನಾಡಬಹುದು.’- ಮಸ್ಕ್ ಟ್ವೀಟ್ ಮಾಡಿದ್ದಾರೆ.Instagram ಮತ್ತು Facebook ನಂತಹ ಸಾಮಾಜಿಕ ಮಾಧ್ಯಮಗಳು ಮೇಲಿನ ಎಲ್ಲಾ ಸೌಲಭ್ಯಗಳನ್ನು ಹೊಂದಿವೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಮಹೇಂದ್ರ ಸಿಂಗ್ ಧೋನಿ ತಮಿಳುನಾಡಿನ ದತ್ತುಪುತ್ರ ಎಂದು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಹೇಳಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುವುದನ್ನು ಮುಂದುವರಿಸುವಂತೆ ತಮಿಳುನಾಡು ಮುಖ್ಯಮಂತ್ರಿ ಮನವಿ ಮಾಡಿದ್ದಾರೆ. ಕ್ರೀಡಾ ಇಲಾಖೆಯ ಅಡಿಯಲ್ಲಿ ಆರಂಭವಾದ ತಮಿಳುನಾಡು ಚಾಂಪಿಯನ್‌ಶಿಪ್ ಫೌಂಡೇಶನ್‌ನ ಉದ್ಘಾಟನಾ ಸಮಾರಂಭದಲ್ಲಿ ಧೋನಿ ಸ್ಟಾಲಿನ್ ಅವರ ಪ್ರಾಮಾಣಿಕತೆಗೆ ಸಾಕ್ಷಿಯಾದರು. ಚೆನ್ನೈನ ಲೀಲಾ ಪ್ಯಾಲೇಸ್‌ನಲ್ಲಿ ನಡೆದ ಸಮಾರಂಭದಲ್ಲಿ ಸ್ಟಾಲಿನ್ ಮತ್ತು ಧೋನಿ ಅವರಲ್ಲದೆ, ಸಚಿವರಾದ ಉದಯನಿಧಿ ಸ್ಟಾಲಿನ್, ತಂಗಮ್ ತೆನ್ನರಾಶ್ ಮತ್ತು ಇತರ ಗಣ್ಯರು ಭಾಗವಹಿಸಿದ್ದರು. ಚಿಕ್ಕ ಕುಟುಂಬದಿಂದ ಕಠಿಣ ಪರಿಶ್ರಮದಿಂದ ಅವರು ರಾಷ್ಟ್ರೀಯ ಐಕಾನ್ ಆದರು. ಕ್ರಿಕೆಟ್ ಮಾತ್ರವಲ್ಲದೆ ಎಲ್ಲಾ ಕ್ರೀಡೆಗಳಲ್ಲಿ ತಮಿಳುನಾಡಿನಿಂದ ಅನೇಕ ಧೋನಿಗಳನ್ನು ನಾವು ಸೃಷ್ಟಿಸಬೇಕು ಎಂದು ಸ್ಟಾಲಿನ್ ಹೇಳಿದ್ದಾರೆ. ಇತ್ತೀಚೆಗೆ ನಾನು ಧೋನಿ ಬ್ಯಾಟಿಂಗ್ ವೀಕ್ಷಿಸಲು ಎರಡು ಬಾರಿ ಚೆಪಾಕ್ ಸ್ಟೇಡಿಯಂಗೆ ಹೋಗಿದ್ದೆ. ತಮಿಳುನಾಡಿನ ಎಲ್ಲರಂತೆ ನಾನು ಧೋನಿಯ ದೊಡ್ಡ ಅಭಿಮಾನಿ. ನಮ್ಮ ತಮಿಳುನಾಡಿನ ದತ್ತುಪುತ್ರ CSK ಗಾಗಿ ಆಟ ಮುಂದುವರಿಯಲಿ ಎಂದು ನಾನು ಭಾವಿಸುತ್ತೇನೆ – ಸ್ಟಾಲಿನ್ ಹೇಳಿದರು.…

Read More

ಬೆಳಗಾವಿ ಜಿಲ್ಲೆಯಲ್ಲಿ ಬೆಳಿಗ್ಗೆಯಿಂದ ಮತದಾನ ಪ್ರಕ್ರಿಯೆಗೆ ಜನತೆ ಉತ್ತಮವಾಗಿ ಸ್ಪಂದಿಸುತ್ತಿದ್ದು ಇಲ್ಲಿಯವರೆಗೂ ಪ್ರತಿಶತ 9% ರಷ್ಟು ಮತದಾನ ಪ್ರಕ್ರಿಯೆ ಜರುಗಿದೆ. ರಾಜ್ಯದ ಅತಿದೊಡ್ಡ ಜಿಲ್ಲೆಯಾದ ಬೆಳಗಾವಿಯಲ್ಲಿ ಮತದಾನ ಪ್ರಕ್ರಿಯೆ ಜೋರಾಗಿದೆ. ಕೇವಲ ನಗರದಲ್ಲಿ ಮಾತ್ರವಲ್ಲದೆ ಗ್ರಾಮೀಣ ಕ್ಷೇತ್ರಗಳಲ್ಲಿ ಬೆಳಿಗ್ಗೆಯಿಂದ ಮತದಾರರು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದ್ದು ಜಿಲ್ಲೆಯಾದ್ಯಂತ ಶೆ.9% ರಷ್ಟು ಮತದಾನ ಪ್ರಕ್ರಿಯೆ ನಡೆದಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More