Author: admin

ನಟಿ ಶ್ರುತಿ ಹರಿಹರನ್ ಅವರು ನಟ ಅರ್ಜುನ್ ಸರ್ಜಾ ವಿರುದ್ಧ ಮಾಡಿರುವ ಮೀಟೂ ಕೇಸ್ ಸಂಬಂಧ ಜನವರಿ 2022ರಂದು ಕಬ್ಬನ್ ಪಾರ್ಕ್ ಪೊಲೀಸರು ಸೂಕ್ತ ಸಾಕ್ಷಿಗಳಿಲ್ಲ ಎಂದು ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದ್ದರು. ಇದೀಗ ಈ ರಿಪೋರ್ಟ್ ವಿರುದ್ಧ ಶ್ರುತಿ ಮತ್ತೆ ಕೋರ್ಟ್ ಮೆಟ್ಟಿಲೇರಿದ್ದಾರೆ. ಶ್ರುತಿ ಹರಿಹರನ್ ಅವರಿಗೆ ವಿಸ್ಮಯ ಚಿತ್ರದ ಶೂಟಿಂಗ್ ವೇಳೆ ನಟ ಅರ್ಜುನ್ ಸರ್ಜಾ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಮೀಟೂ ವೇದಿಕೆಯಲ್ಲಿ ಅವರು ಹೇಳಿಕೊಂಡಿದ್ದರು. ಶ್ರುತಿ ಅವರ ಮಾಡಿರುವ ಆರೋಪದ ಬಗ್ಗೆ ಕೆಲ ಸಂಘಟನೆಗಳು ಹಾಗೂ ಕಲಾವಿದರು ವಿರೋಧ ವ್ಯಕ್ತಪಡಿಸಿದ್ದರೆ, ಇನ್ನು ಸಾಕಷ್ಟು ಸಂಖ್ಯೆಯ ಹೋರಾಟಗಾರರು, ಕಲಾವಿದರು ಶ್ರುತಿ ಪರವಾಗಿ ಬೆಂಬಲ ವ್ಯಕ್ತಪಡಿಸಿದ್ದರು. ಇದೀಗ ಕೋರ್ಟ್ ನಲ್ಲಿ ಅರ್ಜಿ ವಿಚಾರಣೆಯ ಬಳಿಕ ಕಬ್ಬನ್ ಪಾರ್ಕ್ ಪೊಲೀಸರು ಘಟನೆಯ ಬಗ್ಗೆ ಸಾಕ್ಷ್ಯ ನೀಡುವಂತೆ ಶ್ರುತಿ ಹರಿಹರನ್ ಅವರಿಗೆ ನೋಟಿಸ್ ನೀಡಿದೆ ಎಂದು ವರದಿಯಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493…

Read More

ಬೆಂಗಳೂರು ಗ್ರಾಮಾಂತರ ಉಸ್ತುವಾರಿ ಡಾ.ಕೆ.ಸುಧಾಕರ್ ಗೆ ನೀಡಿದ್ದರೂ, ವಿಧಾನಸಭೆ ಚುನಾವಣೆಯಲ್ಲಿ ಆತನೂ ಸೋತ, ನಮ್ಮನ್ನೂ ಸೋಲಿಸಿದ’ ಎಂದು ಮಾಜಿ ಸಚಿವ ಎಂ.ಟಿ.ಬಿ.ನಾಗರಾಜ್,ಬಿಜೆಪಿ ಆತ್ಮವಲೋಕನಸಭೆಯಲ್ಲಿ ಸುಧಾಕರ್ ವಿರುದ್ಧ ಆರೋಪ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಉಸ್ತುವಾರಿ ಸ್ಥಾನದ ಜವಾಬ್ದಾರಿಯನ್ನು ಡಾ.ಕೆ.ಸುಧಾಕರ್ ಸಮರ್ಥವಾಗಿ ನಿಭಾಯಿಸಲಿಲ್ಲ. ನನ್ನ,ಚಿಂತಾಮಣಿ ಬಿಜೆಪಿ ಅಭ್ಯರ್ಥಿ ಸೋಲಿಗೆ ಅವರೇ ಕಾರಣ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮಾತಿಗೆ ಗೌರವ ನೀಡಿ ನಾನು ಬಿಜೆಪಿ ಸೇರಿದ್ದೆ. ಆದರೆ ಕಾಂಗ್ರೆಸ್‌ ನಲ್ಲಿರುವಾಗ ಮೂರು ಬಾರಿ ಗೆದ್ದಿದ್ದ ನಾನು ಬಿಜೆಪಿ ಸೇರಿದ ನಂತರ ಎರಡು ಬಾರಿಯೂ ಸೋಲನ್ನು ಅನುಭವಿಸಿದೆ’ ಎಂದು ಅಳಲು ತೋಡಿಕೊಂಡರು ಎಂದು ಮೂಲಗಳು ತಿಳಿಸಿವೆ. ಈ ಹಿಂದೆ ಪ್ರತಿಪಕ್ಷದಲ್ಲಿದ್ದ ಕಾಂಗ್ರೆಸ್‌ ನ ಶೇ.40 ಪರ್ಸೆಂಟ್ ಕಮಿಷನ್ ಆರೋಪಕ್ಕೆ ಪ್ರತಿಯಾಗಿ ಬಿಜೆಪಿ ಏನೂ ಮಾಡಲಿಲ್ಲ.ನಾವು ಕೇವಲ ಸಿದ್ದರಾಮಯ್ಯರಿಗೆ ಮಾತ್ರ ಬೈದೆವು. ವಿಧಾನಸಭೆ ಚುನಾವಣೆ ವೇಳೆ ಬಿಪಿಎಲ್ ಪಡಿತರ ಚೀಟಿದಾರರಿಗೆ ಅಕ್ಕಿ ವಿತರಣೆ ಕಡಿಮೆ ಮಾಡಿದ್ದು ಸೋಲಿಗೆ ಪ್ರಮುಖ ಕಾರಣ. ಆದರೆ, ಇದೇ ವೇಳೆ ಕಾಂಗ್ರೆಸ್ ಪಕ್ಷದ 10…

Read More

ಕೇಂದ್ರ ಸರ್ಕಾರ ದೇಶದಲ್ಲಿ 50 ಹೊಸ ವೈದ್ಯಕೀಯ ಕಾಲೇಜುಗಳನ್ನು ಮಂಜೂರು ಮಾಡಿದೆ. ಕೇಂದ್ರ ಸರ್ಕಾರವು ತೆಲಂಗಾಣಕ್ಕೆ ಗರಿಷ್ಠ ಸಂಖ್ಯೆಯ ವೈದ್ಯಕೀಯ ಕಾಲೇಜುಗಳನ್ನು ಮಂಜೂರು ಮಾಡಿದೆ.ಕೇರಳ ರಾಜ್ಯಕ್ಕೆ 12 ವೈದ್ಯಕೀಯ ಕಾಲೇಜುಗಳನ್ನು ಮಂಜೂರು ಮಾಡಲಾಗಿದೆ. ತಮಿಳುನಾಡು ಮತ್ತು ಕರ್ನಾಟಕಕ್ಕೆ ತಲಾ ಮೂರು ವೈದ್ಯಕೀಯ ಕಾಲೇಜುಗಳನ್ನು ಮಂಜೂರು ಮಾಡಿದ್ದರೂ ಕೇರಳಕ್ಕೆ ಒಂದನ್ನೂ ನೀಡಿಲ್ಲ. ಸದ್ಯ ಮಂಜೂರಾದ ಕಾಲೇಜುಗಳಲ್ಲಿ 30 ಸರ್ಕಾರಿ ಕಾಲೇಜುಗಳು ಹಾಗೂ 20 ಖಾಸಗಿ ಕಾಲೇಜುಗಳು. ಆಂಧ್ರಪ್ರದೇಶದಲ್ಲಿ ಐದು, ಅಸ್ಸಾಂ ಮತ್ತು ಗುಜರಾತ್‌ನಲ್ಲಿ ಮೂರು, ಹರಿಯಾಣ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ತಲಾ ಎರಡು, ಮಹಾರಾಷ್ಟ್ರದಲ್ಲಿ ನಾಲ್ಕು, ಮಧ್ಯಪ್ರದೇಶದಲ್ಲಿ ಒಂದು, ನಾಗಾಲ್ಯಾಂಡ್‌ನಲ್ಲಿ 1, ಒಡಿಶಾದಲ್ಲಿ ಎರಡು, ರಾಜಸ್ಥಾನದಲ್ಲಿ ಐದು, ಬಂಗಾಳದಲ್ಲಿ ಎರಡು ಮತ್ತು ಯುಪಿಯಲ್ಲಿ ಒಂದು.ಅದೇ ಸಮಯದಲ್ಲಿ, ಕೇರಳ ಸರ್ಕಾರವು ವಯನಾಡಿನಲ್ಲಿ ವೈದ್ಯಕೀಯ ಕಾಲೇಜು ಮಂಜೂರು ಮಾಡುವಂತೆ ಕೇಂದ್ರಕ್ಕೆ ಅಧಿಕೃತವಾಗಿ ಮನವಿ ಮಾಡಿತು. ಈ ಬೇಡಿಕೆಯೂ ಹೆಚ್ಚುತ್ತಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್…

Read More

ಗರ್ಭಪಾತಕ್ಕೆ ಅನುಮತಿ ಕೋರಿ 17 ವರ್ಷದ ಬಾಲಕಿ ಸಲ್ಲಿಸಿರುವ ಅರ್ಜಿಯನ್ನು ಪರಿಗಣಿಸುವಾಗ ಮನುಸ್ಮೃತಿಯನ್ನು ಓದಲು ಗುಜರಾತ್ ಹೈಕೋರ್ಟ್ ಸಲಹೆ ನೀಡಿದೆ. ಹೆಣ್ಣುಮಕ್ಕಳು 14-15ನೇ ವಯಸ್ಸಿನಲ್ಲಿ ಮದುವೆಯಾಗುವುದು ಮತ್ತು 17ನೇ ವಯಸ್ಸಿನಲ್ಲಿ ಹೆರಿಗೆಯಾಗುವುದು ಸಹಜ ಎಂದು ಗುಜರಾತ್ ಹೈಕೋರ್ಟ್ ಹೇಳಿದೆ. 17ನೇ ವಯಸ್ಸಿನಲ್ಲಿ ಗರ್ಭಿಣಿಯಾಗುವುದು ಈ ಹಿಂದೆ ಬಹಳ ಸಹಜ ಸಂಗತಿಯಾಗಿದ್ದು, ಮನುಸ್ಮೃತಿ ಓದಿಲ್ಲದಿದ್ದರೆ ಓದಿ ಎಂದು ಕೋರ್ಟ್ ಸಲಹೆ ನೀಡಿದೆ. ಅತ್ಯಾಚಾರಕ್ಕೊಳಗಾದ ಏಳು ತಿಂಗಳ ಗರ್ಭಿಣಿಯಾಗಿರುವ 17 ವರ್ಷದ ಬಾಲಕಿಯ ಗರ್ಭಪಾತಕ್ಕೆ ಅನುಮತಿ ನೀಡುವಂತೆ ಅರ್ಜಿಯಲ್ಲಿ ಕೋರಲಾಗಿತ್ತು. ಬಾಲಕಿಯ ಪರವಾಗಿ ಹಾಜರಾದ ಸಿಕಂದರ್ ಸೈದ್, ಹೆರಿಗೆಯ ದಿನಾಂಕ ಆಗಸ್ಟ್ 18 ಆಗಿರುವುದರಿಂದ ಈ ವಿಷಯವನ್ನು ಶೀಘ್ರವಾಗಿ ನಿರ್ಧರಿಸುವಂತೆ ನ್ಯಾಯಾಲಯವನ್ನು ಕೋರಿದರು. ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಸಮೀರ್ ಜೆ ದವೆ ಅವರು 17ನೇ ವಯಸ್ಸಿನಲ್ಲಿ ಗರ್ಭಿಣಿಯಾಗುವುದು ಸಹಜ. ಹುಡುಗಿಯರು ಹುಡುಗರಿಗಿಂತ ಮೊದಲು ಪ್ರಬುದ್ಧತೆಯನ್ನು ಪಡೆಯುತ್ತಾರೆ ಎಂದು ನ್ಯಾಯಾಲಯ ಹೇಳಿದೆ. ಬಾಲಕಿಯನ್ನು ಪರೀಕ್ಷಿಸಿ ವರದಿ ಸಲ್ಲಿಸುವಂತೆ ರಾಜ್‌ಕೋಟ್‌ನ ವೈದ್ಯಕೀಯ ಅಧೀಕ್ಷಕರಿಗೆ ನ್ಯಾಯಾಲಯ ಸೂಚಿಸಿದೆ.ಹೆಣ್ಣು ಮತ್ತು…

Read More

ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾದ ಯುವಕನ ವಿರುದ್ಧ ಸುಳ್ಳು ಲೈಂಗಿಕ ಆರೋಪಗಳನ್ನು ಮಾಡಿ ಹಣ ಸುಲಿಗೆ ಮಾಡಿದ ದೂರಿನ ಮೇಲೆ ಐಟಿ ಉದ್ಯೋಗಿಯೊಬ್ಬರನ್ನು ಬಂಧಿಸಲಾಗಿದೆ. ಬಿಹಾರದ ಗುರ್‌ಗಾಂವ್‌ ನಲ್ಲಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಬಿಹಾರ ಮೂಲದ ಬಿನೀತಾ ಕುಮಾರಿ (30) ಮತ್ತು ಆಕೆಯ ಸ್ನೇಹಿತ ಹರಿಯಾಣ ಮೂಲದ ಮಹೇಶ್ ಫೋಗಟ್ ಅವರನ್ನು ಬಂಧಿಸಲಾಗಿದೆ. ಬಿನೀತಾ ಕುಮಾರಿ ನಗರದ ಐಟಿ ಕಂಪನಿಯೊಂದರಲ್ಲಿ ಉದ್ಯೋಗಿ. ಮಹೇಶ್ ಎನ್ ಜಿಒ ಒಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಡೇಟಿಂಗ್ ಆಪ್ ಮೂಲಕ ಇವರಿಬ್ಬರು ಭೇಟಿಯಾಗಿದ್ದರು. ನಂತರ ದೂರುದಾರ ಯುವಕನಿಗೆ ಮೋಸ ಮಾಡಲು ನಿರ್ಧರಿಸಿದ್ದಾರೆ. ಮೇ 28ರಂದು ಯುವತಿಯು ಯುವಕನನ್ನು ನಗರದ ಹೋಟೆಲ್‌ಗೆ ಕರೆಸಿಕೊಂಡು ಬಿಯರ್ ನೀಡಿ ಬಳಿಕ ಬಲವಂತವಾಗಿ ಕುಡಿಸಿದ್ದಾಳೆ. ಅನುಮಾನಗೊಂಡ ಯುವಕ ಬಿಯರ್ ನಿರಾಕರಿಸಿ ಅಲ್ಲಿಂದ ವಾಪಸಾಗಿದ್ದಾನೆ. ನಂತರ ಬಿನೀತಾ ಯುವಕನಿಗೆ ದೂರವಾಣಿ ಕರೆ ಮಾಡಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಪೊಲೀಸರಿಗೆ ದೂರು ನೀಡುವುದಾಗಿ ಬೆದರಿಕೆ ಹಾಕಿದ್ದಾಳೆ. ಬಳಿಕ 5 ಲಕ್ಷ ನೀಡಿದರೆ…

Read More

ಬೆಂಗಳೂರು: ರಾಜ್ಯ ಸರ್ಕಾರ ಘೋಷಿಸಿರುವ ಗ್ಯಾರಂಟಿ ಯೋಜನೆಗಳಲ್ಲಿ ಗೃಹಜ್ಯೋತಿ ಯೋಜನೆ ಆಗಸ್ಟ್‌ 1 ರಂದು ಹಾಗೂ ಗೃಹ ಲಕ್ಷ್ಮಿ ಯೋಜನೆಗೆ ಆಗಸ್ಟ್‌ 17- 18 ರಂದು ಚಾಲನೆ ನೀಡಲು ತಯಾರಿ ನಡೆಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು. ಅವರು ಇಂದು ಗೃಹ ಜ್ಯೋತಿ ಯೋಜನೆ ಹಾಗೂ ಗೃಹ ಲಕ್ಷ್ಮಿ ಯೋಜನೆ ಕುರಿತು ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಸುದೀರ್ಘ ಸಭೆ ನಡೆಸಿ ಚರ್ಚಿಸಿದರು. ಎಲ್ಲ ಗ್ಯಾರಂಟಿ ಯೋಜನೆಗಳಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಅತ್ಯಂತ ಸರಳಗೊಳಿಸಬೇಕು. ಅನಗತ್ಯ ಮಾಹಿತಿ, ದಾಖಲೆಗಳನ್ನು ಕೇಳಬಾರದು ಎಂದು ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದರು. ಜೊತೆಗೆ ಅರ್ಜಿಗಳನ್ನು ತಿರಸ್ಕರಿಸಿದಲ್ಲಿ, ಅದು ಸಕಾರಣವಾಗಿರಬೇಕು. ಕುಂಟು ನೆಪ ನೀಡಿ ತಿರಸ್ಕರಿಸುವಂತಿಲ್ಲ ಎಂದು ಸ್ಪಷ್ಟ ಎಚ್ಚರಿಕೆ ನೀಡಿದರು. ಎಲ್ಲ ಗ್ಯಾರಂಟಿ ಯೋಜನೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅರ್ಜಿಗಳು ಸಲ್ಲಿಕೆಯಾಗುವ ಕಾರಣ, ಅಪಾರ ಪ್ರಮಾಣದ ದತ್ತಾಂಶ ಸಲ್ಲಿಕೆಗೆ ಅನುಗುಣವಾಗಿ ಸೇವಾ ಸಿಂಧು ಪೋರ್ಟಲ್‌ ನ ಸಾಮರ್ಥ್ಯ ವೃದ್ಧಿಸುವಂತೆ ಇ-ಆಡಳಿತ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಗೃಹ ಜ್ಯೋತಿ: ಗೃಹ…

Read More

ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯಡಿ ಮನೆಯೊಡತಿಗೆ 2000 ರೂ ಮಾಸಿಕ ಧನ ನೀಡುವ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ. ಬಿಪಿಎಲ್ ಕಾರ್ಡ್ ಇಲ್ಲದ ಮಹಿಳೆಯರಿಗೂ ಯೋಜನೆ ನೀಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ. ಬೆಂಗಳೂರಿನ ಶಕ್ತಿ ಭವನದಲ್ಲಿ ನಡೆದ ಉನ್ನತ ಮಟ್ಟದ ಸಭೆ ಬಳಿಕ ಮಾತನಾಡಿದ ಸಚಿವರು, ಆನ್ ಲೈನ್ ಹಾಗೂ ನಾಡಕಚೇರಿಯಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶವಿದೆ. ವೋಟರ್ ಐಡಿ ಸಂಖ್ಯೆ ಬೇಡ ಎಂದು ಸಿಎಂ ಹೇಳಿದ್ದಾರೆ ಎಂದರು. ಪತಿ, ಪತ್ನಿ ಇಬ್ಬರಲ್ಲಿ ಒಬ್ಬರು ತೆರಿಗೆ ಪಾವತಿದಾರರಾದರೂ ಆ ಕುಟುಂಬಕ್ಕೆ ಗೃಹಲಕ್ಷ್ಮಿ ಯೋಜನೆ ಅನ್ವಯವಾಗುವುದಿಲ್ಲ ಎಂದು ಹೇಳಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ತುಮಕೂರು: ಲಸಿಕೆ ಹಾಕಿದ ಒಂದು ಗಂಟೆಯೊಳಗೆ ಮಗು ಸಾವನ್ನಪ್ಪಿದ ಘಟನೆ ತುಮಕೂರು ಜಿಲ್ಲೆಯ  ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹೊಯ್ಸಳಕಟ್ಟೆ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ನಡೆದಿದ್ದು, ವೈದ್ಯರ ನಿರ್ಲಕ್ಷ್ಯದ ಆರೋಪ ಕೇಳಿ ಬಂದಿದೆ. ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಸೋಮನಹಳ್ಳಿ ಮೂಲದ ಮಧು ಮತ್ತು ಶೃತಿ ದಂಪತಿಯ ಮಗು ಮೃತಪಟ್ಟ ಮಗುವಾಗಿದೆ. ಚುಚ್ಚು ಮದ್ದು ಪಡೆದು ಮನೆಗೆ ತೆರಳುವ ಮಾರ್ಗ ಮಧ್ಯದಲ್ಲೇ ಮಗು ಸಾವನ್ನಪ್ಪಿದೆ. ಘಟನೆ ಹಿನ್ನೆಲೆಯಲ್ಲಿ  ವೈದ್ಯರ ನಿರ್ಲಕ್ಷ್ಯದಿಂದ ಮಗು ಸಾವು ಸಂಭವಿಸಿದೆ ಎಂದು ಆರೋಪಿಸಿ ಮಗುವಿನ ಕುಟುಂಬಸ್ಥರು ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಚಿಕ್ಕನಾಯಕನಹಳ್ಳಿ ಜೆಡಿಎಸ್ ಶಾಸಕ ಸುರೇಶ್ ಬಾಬು ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದು, ಈ ಬಗ್ಗೆ  ಕೂಡಲೇ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ವೈದ್ಯರ ಹಾಗೂ ಸಿಬ್ಬಂದಿ ಸೇರಿ ಐವರ ವಿರುದ್ಧ ಮಗುವಿನ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಡಾ.ಮಧು, ಸಿಬ್ಬಂದಿಗಳಾದ ಸಾನಿಯಾ, ಮಮತಾ, ಶೋಭಾ, ಲಕ್ಷ್ಮೀದೇವಿ, ಚಂದ್ರಪ್ರಭಾ ವಿರುದ್ಧ ಹುಳಿಯಾರು ಪೊಲೀಸ್  ಠಾಣೆಯಲ್ಲಿ ದೂರು…

Read More

ತುಮಕೂರು: ಕೆಲವರು ನನ್ನ ಲೋಕಸಭಾ ಚುನಾವಣೆ ಸ್ಪರ್ಧೆ ಬಗ್ಗೆ ಮಾತನಾಡುತ್ತಿದ್ದಾರೆ. ನಾನು ನಿಂತ್ಕೋತಿನೋ ಇಲ್ಲವೋ ಇನ್ನು ತೀರ್ಮಾನ ಮಾಡಿಲ್ಲ ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್ ತಿಳಿಸಿದ್ದಾರೆ. ಕುಣಿಗಲ್ ತಾಲೂಕಿನ ಗಿರಿಗೌಡನ ಪಾಳ್ಯದಲ್ಲಿ ನಡೆದ ಮತದಾರರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು ನಾನು ಇನ್ನೂ ಗೊಂದಲದಲ್ಲಿ ಇದ್ದೀನಿ. ಯಾಕಂದ್ರೆ ನನಗೆ ರಾಜಕಾರಣ ಬೇಕೋ ಬೇಡ್ವೊ ಅನ್ನಿಸಿಬಿಟ್ಟಿದೆ ಎಂದರು. ಮುಂದಿನ ದಿನದಲ್ಲಿ ನಿಮ್ಮ ಸಲಹೆ ಪಡೆಯುತ್ತೇನೆ. ನನ್ನ ಗುರಿ ಇರೋದು ನಿಮ್ಮಗಳ ಸೇವೆ ಮಾಡೋದು. ಕುಣಿಗಲ್ ತಾಲೂಕನ್ನ ಒಂದು ಮಾದರಿ ತಾಲೂಕನ್ನಾಗಿ ಮಾಡಬೇಕೆನ್ನುವಂಥದ್ದು ನನ್ನ ಆಶಯ ಎಂದರು. ಸರ್ಕಾರದ ಯೋಜನೆಗಳು ಜನರಿಗೆ ತಲುಪಬೇಕಾದರೆ ಗ್ರಾಮ ಪಂಚಾಯಿತಿ ಸದಸ್ಯರು ಸಮವಹಿಸಿದರೆ ಮಾತ್ರ ಸಾಧ್ಯವಿದೆ ಶೇಕಡ 95 ರಷ್ಟು ಯೋಜನೆಗಳು ಗ್ರಾಮ ಪಂಚಾಯಿತಿ ಸದಸ್ಯರ ಇಚ್ಛಾಶಕ್ತಿಯಿಂದ ತಲುಪಲು ಸಾಧ್ಯವಿದೆ ಎಂದು ಹೇಳಿದರು. ಕಾಂಗ್ರೆಸ್ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಜನಪ್ರತಿನಿಧಿಗಳು ಗುತ್ತಿಗೆ ವಿಷಯದಲ್ಲೂ ಅಥವಾ ಮತ್ತೆ ಯಾವುದೋ ವಿಷಯದಲ್ಲಿಯೂ ಕಿತ್ತಾಡಿಕೊಂಡಿದ್ದರೆ ಮತ್ತೊಂದೆಡೆ ಜೆಡಿಎಸ್ ಹಾಗೂ…

Read More

ಬೆಂಗಳೂರು:  ರಾಜ್ಯದಲ್ಲಿ ಬಡವರು, ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರು ಭಯದ ವಾತಾವರಣದಲ್ಲಿ ಬದುಕುವ ಸನ್ನಿವೇಶ ಸೃಷ್ಟಿಯಾಗಿತ್ತು. ಇದನ್ನು ನಮ್ಮ ಸರ್ಕಾರ ಬದಲಾಯಿಸಿ, ಈ ವರ್ಗಗಳ ಜನರಲ್ಲಿ ಸುರಕ್ಷತೆಯ ಭಾವ ಮೂಡಿಸಲು ಕೆಲಸ ಮಾಡಲಿದೆ. ಈಗಾಗಲೇ ಕೆಲಸ ಪ್ರಾರಂಭವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು. ಅವರು ಇಂದು ತಮ್ಮನ್ನು ಭೇಟಿಯಾದ ಎದ್ದೇಳು ಕರ್ನಾಟಕ ಸಂಘಟನೆಯ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿದರು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಸಮಾಜದಲ್ಲಿ ಭೀತಿಯ ವಾತಾವರಣ ಸೃಷ್ಟಿಸುವವರು, ಸಾಮಾಜಿಕ ಜಾಲತಾಣಗಳ ಮೂಲಕ ಸಾಮರಸ್ಯ ಕದಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಪೊಲೀಸ್‌ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದ್ದೇನೆ. ಇನ್ನು ಮುಂದೆ ರಾಜ್ಯದಲ್ಲಿ ಅನೈತಿಕ ಪೊಲೀಸ್‌ಗಿರಿಗೆ ಅವಕಾಶವಿಲ್ಲ ಎಂದು ತಿಳಿಸಿದರು. ನಮ್ಮ ಸರ್ಕಾರವು ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲಿದೆ. ಚುನಾವಣೆ ಸಂದರ್ಭದಲ್ಲಿ ಭರವಸೆ ನೀಡಿದ 5 ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಲಾಗುವುದು. ಇದಕ್ಕೆ ವಾರ್ಷಿಕ 59,000 ಕೋಟಿ ರೂ. ಹಣಕಾಸಿನ ಅಗತ್ಯವಿದ್ದು, ಪ್ರಸಕ್ತ ವರ್ಷದ ಬಾಕಿ ಉಳಿದ ತಿಂಗಳುಗಳಿಗೆ…

Read More