Author: admin

ಬೆಂಗಳೂರು: ಫೆಬ್ರವರಿ 08, 2023:* ಬೆಂಗಳೂರಿನ ಆರ್ಚ್‌ಬಿಷಪ್ ವಿಶ್ರಾಂತ ಧರ್ಮಗುರು ಡಾ. ಇಗ್ನೇಷಿಯಸ್ ಪಾಲ್ ಪಿಂಟೋ (98) ಅವರು ಇಂದು ಮುಂಜಾನೆ 1:30 ಕ್ಕೆ ಹೊಸೂರು ರಸ್ತೆಯಲ್ಲಿರುವ ಬಡ ಹಿರಿಯ ನಾಗರಿಕರ ಲಿಟಲ್ ಸಿಸ್ಟರ್ಸ್ ಹೋಮ್‌ನಲ್ಲಿ ನಿಧನರಾದರು. ಬೆಂಗಳೂರಿನ ಮೆಟ್ರೋಪಾಲಿಟನ್ ಆರ್ಚ್ ಬಿಷಪ್ ಅತಿ ವಂದನೀಯ ಡಾ.ಪೀಟರ್ ಮಚಾಡೊ ಅವರು ಆರ್ಚ್ ಬಿಷಪ್ ಇಗ್ನೇಷಿಯಸ್ ಪಿಂಟೋ ಅವರ ದುಃಖದ ನಿಧನವನ್ನು ಖಚಿತಪಡಿಸಿದ್ದಾರೆ. ಆರ್ಚ್‌ಬಿಷಪ್ ಇಗ್ನೇಷಿಯಸ್ ಪಿಂಟೋ ಅವರು ಮೇ 18, 1925 ರಂದು ಜನಿಸಿದರು. ಅವರು ಸೆಮಿನರಿಗೆ ಸೇರಿದರು ಮತ್ತು ಆಗಸ್ಟ್ 24, 1952 ರಂದು ಬೆಂಗಳೂರಿನ ಆರ್ಚ್‌ಡಯಾಸಿಸ್‌ಗೆ ಪಾದ್ರಿಯಾಗಿ ನೇಮಕಗೊಂಡರು. ಬೆಂಗಳೂರಿನ ಆರ್ಚ್‌ಡಯೋಸಿಸ್‌ನ ಪಾದ್ರಿ ಮತ್ತು ವಿಕಾರ್ ಜನರಲ್ ಆಗಿ, ಅವರು ಪೋಪ್ ಜಾನ್ ಪಾಲ್ II ರ ಆರ್ಚ್‌ಡಯೋಸಿಸ್‌ಗೆ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದರು, ಅವರ ಅಪೊಸ್ಟೋಲಿಕ್ ಪತ್ರ “ಬೋನೆವೊಲೆಂಟಿಯಂ ಕ್ವಿಡೆಮ್ ನಾಸ್ಟ್ರಮ್” ಮೂಲಕ ಅವರನ್ನು ಚರ್ಚಿನ ಪ್ರಾಂತ್ಯದಲ್ಲಿ ಹೊಸದಾಗಿ ಸ್ಥಾಪಿಸಲಾದ ಶಿವಮೊಗ್ಗದ ಡಯಾಸಿಸ್‌ನ ಮೊದಲ ಬಿಷಪ್ ಆಗಿ…

Read More

ತುಮಕೂರು:  ಶ್ರೀ ಸಿದ್ಧಗಂಗಾಮಠದಲ್ಲಿ ಇಂದು(ಫೆ.8) ಸಂಜೆ  7 ಗಂಟೆಯಿಂದ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ—2023 ಆರಂಭವಾಗಲಿದ್ದು, ಇಂದು ಸಂಜೆ ವಸ್ತು ಪ್ರದರ್ಶನ ಉದ್ಘಾಟನಾ ಸಮಾರಂಭ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಸಮಾರಂಭದಲ್ಲಿ ಶ್ರೀಶ್ರೀ ಸಿದ್ದಲಿಂಗ ಮಹಾಸ್ವಾಮಿ ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಅಧ್ಯಕ್ಷತೆ ವಹಿಸಲಿದ್ದಾರೆ. ತುಮಕೂರು ಮಹಾನಗರ ಪಾಲಿಕೆ ಮೇಯರ್ ಎಂ.ಪ್ರಭಾವತಿ ಸುಧೀಶ್ವರ್ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ತುಮಕೂರು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಸಾಂಸ್ಕೃತಿ ಕಾರ್ಯಕ್ರಮಗಳನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯತ್ ಸಿಇಒ ಡಾ.ಕೆ.ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಾಪುರ್ ವಾಡ್, ಮಹಾನಗರ ಪಾಲಿಕೆ ಆಯುಕ್ತರಾದ ಸಿ.ಯೋಗಾನಂದ್, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಕೆ.ಎಂ.ಉಮೇಶ್ ಗೌಡ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1

Read More

ಬೆಳಗಾವಿ: ಪ್ರಜಾಪ್ರಭುತ್ವದ ಅಡಿಯಲ್ಲಿ 2 ಬಾರಿ ಮುಖ್ಯಮಂತ್ರಿಗಳಾಗಿ ರಾಜ್ಯವನ್ನಾಳಿದ ಕುಮಾರಸ್ವಾಮಿಯವರ ಬಾಯಿಯಲ್ಲಿ ಜಾತಿಯವಾಸನೆ ಅವರಿಗೆ ಶೋಭೆ ತರುವಂತದ್ದಲ್ಲ ಎಂದು ಬೆಳಗಾವಿ ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಸಂಜಯ ಪಾಟೀಲ ಅಕ್ರೋಶ ವ್ಯಕ್ತಪಡಿಸಿದ್ದಾರೆ ಮಂಗಳವಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ ಅವರು ಜಾತಿ ಮತ ಪಂಥ ಬಡವ ಬಲ್ಲಿದ ಎಂಬವದನ್ನು ಮೀರಿ ಜನಸಾಮಾನ್ಯರೆ ಸೇವೆ ಮಾಡುವ ಮೂಲಕ ಕೇಂದ್ರ ಸಚಿವರಾದ ಪ್ರಲ್ಲಾದ ಜೋಶಿಯವರು ಬಿಜೆಪಿಯಲ್ಲಿ ಅಗ್ರ ನಾಯಕರ ಪಂಕ್ತಿಯಲ್ಲಿ ಇದ್ದಾರೆ ಇದನ್ನು ಸಹಿಸದೆ ಹಾಗೂ ಸೋಲಿನ ಭಯದಲ್ಲಿ ಹತಾಷರಾಗಿ ಜಾತಿಯನ್ನು ವಿನಕಾರಣ ರಾಜಕೀಯದಲ್ಲಿ ಏಳೆದು ತಂದಿದ್ದಾರೆ. ರಾಜಕಾರಣದಲ್ಲಿ ಟೀಕೆಗಳು ಸಾಮಾನ್ಯ ಆದರೆ ಜಾತಿಗಳನ್ನು ನಿಂದಿಸುವದು ರಾಜಕಾರಣಕ್ಕೆ ಬಳಸಿಕೊಳ್ಳುವದು ಸರಿಯಾದ ಮಾರ್ಗವಲ್ಲ. ಜನಪ್ರತಿನಿಧಿಗಳು ಆದವರು ಇವುಗಳನೆಲ್ಲ ಮೀರಿ ಬೆಳೆಯಬೇಕು. ಅಭಿವ್ಯಕ್ತಿ ಸ್ವಾತಂತ್ರ್ಯ ಇದೆಯೆಂದು ಬಾಯಿ ಚಪಲಕ್ಕಾಗಿ ಇನ್ನೊಬ್ಬರನ್ನ ತೃಪ್ತಿ ಪಡಿಸುವ ಉದ್ದೇಶಕ್ಕಾಗಿ ಜಾತಿಯ ಹೆಸರಿನಲ್ಲಿ ಮಾತನಾಡವದು ಸರಿಯಲ್ಲ. ಒಂದು ಅಧಿಕಾರ ಅನುಭವಿಸಿದ ವ್ಯಕ್ತಿಗಳೆ ಇಂತಹ ಕಿಳುಮಟ್ಟಕ್ಕೆ ಇಳಿಯಬಾರದು. ಕೇಂದ್ರ ಸಚಿವ ಪ್ರಲ್ಲಾದ ಜೋಶಿ ಮೋದಿಜಿಯವರ ಜೋತೆಯಲ್ಲಿ ಉತ್ತಮ…

Read More

ಅಥಣಿ: ಶಾಲೆಗೆ ಹೋಗಿದ್ದ ಬಾಲಕ ಚಿಕ್ಕಪ್ಪನ ಜೊತೆ  ಟ್ರ್ಯಾಕ್ಟರ್ ನಲ್ಲಿ ಬರೋವಾಗ ಬಿದ್ದು ಟ್ರ್ಯಾಕ್ಟರ್ ಅಡಿಗೆ ಸಿಲುಕಿ ಸ್ಥಳದಲ್ಲೆ ಸಾವನ್ನಪ್ಪಿರುವ ದಾರುಣ ಘಟನೆ ಅಥಣಿ ತಾಲ್ಲೂಕಿನ ತೆವರಗಟ್ಟಿ ಗ್ರಾಮದಲ್ಲಿ ನಡೆದಿದೆ ಸುದರ್ಶನ ನಿಲಜಗಿ(7) ಮೃತ ಬಾಲಕನಾಗಿದ್ದು ಶಾಲೆಗೆಂದು ಹೋಗಿ ಶವವಾಗಿ ಬಂದಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ. ಚಿಕ್ಕಪ್ಪನ ಜತೆ ಟ್ರಾಕ್ಟರ್ ನಲ್ಲಿ ಮನೆಗೆ ಬರುತ್ತಿದ್ದ ಬಾಲಕ ಟ್ರ್ಯಾಕ್ಟರ್ ನಿಂದ ಇಳಿಯುವ ಸಂದರ್ಭದಲ್ಲಿ ಬಾಲಕನ ಬ್ಯಾಗ್ ಟ್ರ್ಯಾಕ್ಟರಿಗೆ ಸಿಲುಕಿ ಕೆಳಗೆ ಬಿದ್ದಿದ್ದಾನೆ. ಟ್ರ್ಯಾಕ್ಟರ್ ಅಡಿಗೆ ಸಿಲುಕಿ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಅಥಣಿ ಪೊಲೀಸ್ ಠಾಣಾ ವ್ಯಾಪಿಯಲ್ಲಿ ಘಟನೆ ದಾಖಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ಹೆಚ್ಚು ಹಿಂದೂಗಳ ಹತ್ಯೆಯಾಗಿದೆ ಎಂದು ಆರೋಪಿಸುತ್ತಿರುವ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಬಿಜೆಪಿ ಸರ್ಕಾರದ ಅವಧಿಯಲ್ಲೇ ಹೆಚ್ಚು ಹಿಂದೂಗಳ ಹತ್ಯೆಗಳಾಗಿವೆ ಎಂದು ಹೇಳಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಸಿದ್ಧರಾಮಯ್ಯ, ನಮ್ಮ ಕಾಲದಲ್ಲಿ ಹಿಂದೂಗಳಷ್ಟೇ ಅಲ್ಲ, ಅಲ್ಪಸಂಖ್ಯಾತರ ಕೊಲೆ ಆಗಿವೆ. ಅವುಗಳೆಲ್ಲ ಬೇರೆ ಬೇರೆ ವಿಚಾರಕ್ಕೆ ಆಗಿರುವ ಕೊಲೆಗಳಾಗಿವೆ. ನಮ್ಮ ಸರ್ಕಾರದ ಅವಧಿಯಲ್ಲಿ ನಡೆದ ಹಿಂದೂಗಳ ಹತ್ಯೆಯಾಗಲು ಆರ್​ಎಸ್​ಎಸ್​​, ಬಿಜೆಪಿಯವರೇ ಕಾರಣರಾಗಿದ್ದಾರೆ. ಪರೇಶ್​ ಮೇಸ್ತ ಕೊಲೆಯಾದಾಗ ದೊಡ್ಡ ಗಲಾಟೆ ಮಾಡಿದ್ದರು. ಆಗ ಮೇಸ್ತ ಪ್ರಕರಣವನ್ನ ಸಿಬಿಐಗೆ ಕೊಟ್ಟಿದ್ದೆ, ಆಮೇಲೆ ಏನಾಯ್ತು ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಪಾಕಿಸ್ತಾನದಲ್ಲಿ ಸ್ಪರ್ಧೆ ಮಾಡಿದರಷ್ಟೇ 150 ಸ್ಥಾನ ಗೆಲ್ಲುತ್ತದೆ ಎಂದು ಲೇವಡಿ ಮಾಡಿದ್ದ ಶಾಸಕ ಸಿ.ಟಿ.ರವಿಗೆ ಟಾಂಗ್ ಕೊಟ್ಟ ಸಿದ್ಧರಾಮಯ್ಯ, ಕರ್ನಾಟಕ ಪಾಕಿಸ್ತಾನದಲ್ಲಿ ಇದೆಯಾ?ಭಾರತದಲ್ಲಿದೆಯಾ? ಚುನಾವಣೆ ನಡೆಯುತ್ತಿರುವುದು ಪಾಕಿಸ್ತಾನದಲ್ಲಾ? ಕರ್ನಾಟಕದಲ್ಲಾ? ಪೆದ್ದು ಪೆದ್ದಾಗಿ ಮಾತನಾಡುತ್ತೀರಲ್ಲಾ ಎಂದು ಕಿಡಿಕಾರಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ…

Read More

ಪಾರ್ಟಿ ನೆಪದಲ್ಲಿ ಯುವತಿಯರನ್ನ ಕರೆಸಿಕೊಂಡು ಅತ್ಯಾಚಾರಕ್ಕೆ ಯತ್ನಿಸಿದ ಆರೋಪದ ಮೇಲೆ ಇಬ್ಬರನ್ನ ಬೆಂಗಳೂರಿನ ವಿವೇಕನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಫೆಬ್ರವರಿ 5 ರಂದು ಪಾರ್ಟಿ ನೆಪದಲ್ಲಿ ಆರೋಪಿಗಳು ಪರಿಚಯಸ್ತ ಯುವತಿಯರನ್ನಕರೆಸಿಕೊಂಡಿದ್ದರು ಅಂದು ಮಧ್ಯರಾತ್ರಿ 2.30ರವರೆಗೆ ಎಣ್ಣೆ ಪಾರ್ಟಿ ಮಾಡಿದ್ದರು. ಬಳಿಕ ನಶೆಯಲ್ಲಿದ್ದ ಜಮ್ಮು ಕಾಶ್ಮೀರ ಮೂಲದ ಯುವತಿ ಮೇಲೆ ಇಬ್ಬರು ಆರೋಪಿಗಳು ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಮತ್ತೊರ್ವ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು ಯುವತಿ ತಪ್ಪಿಸಿಕೊಂಡು ಹೋಗಿ ಬಾತ್​ ರೂಮ್​​ನಲ್ಲಿ ಲಾಕ್ ಮಾಡಿಕೊಂಡು ಅಡಗಿಕೊಂಡಿದ್ದಾಳೆ. ಬಳಿಕ ಮರುದಿನ ಕೋರಮಂಗಲ ಠಾಣೆಗೆ ತೆರಳಿ ಯುವತಿ ಮಾಹಿತಿ ನೀಡಿ ದೂರು ದಾಖಲಿಸಿದ್ದಾಳೆ. ಇದೀಗ ಇಬ್ಬರು ಆರೋಪಿಗಳನ್ನ ಬಂಧಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಕೇರಳ ಸಿಎಂ ಪಿಣರಾಯಿ ವಿಜಯನ್ ಅವರನ್ನ ಗಡಿ ಪ್ರದೇಶ ಅಭವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ ಭೇಟಿಯಾಗಿ ಕನ್ನಡ ಶಾಲೆಗಳಿಗೆ ಕನ್ನಡ ಶಿಕ್ಷಕರ ನೇಮಕಕ್ಕೆ ಮನವಿ ಮಾಡಿದರು. ಗಡಿ ಪ್ರದೇಶ ಅಭವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ ಹಾಗೂ ಮಂಜೇಶ್ವರ ಶಾಸಕ ಅಶ್ರಪ್ ಮತ್ತು ಕಾಸರಗೋಡು ಶಾಸಕ ನೆಲ್ಲಿಕುನ್ನುರ ಅವರು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನ ಭೇಟಿ ಮಾಡಿ ಕೇರಳದಲ್ಲಿ ಕನ್ನಡಿಗರ ಸಮಸ್ಯೆಗಳ ಕುರಿತು ಮತ್ತು ಕನ್ನಡ ಶಾಲೆಗಳಿಗೆ ಕನ್ನಡ ಶಿಕ್ಷಕರನ್ನು ನೇಮಕ ಮಾಡುವ ಬಗ್ಗೆ ಮತ್ತು ಕಾಸರಗೋಡು ಜಿಲ್ಲೆಯಲ್ಲಿ ಕನ್ನಡದ ಹೆಸರುಗಳ ಸ್ಥಳ ನಾಮಗಳನ್ನು ಮಲೆಯಾಳಂ ಭಾಷೆಗೆ ಬದಲಾಯಿಸಿದ್ದು ಅವುಗಳನ್ನು ಸ್ಥಗಿತಗೊಳಿಸಲು ವಿನಂತಿಸಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಇಂದು ನಗರದ ಫ್ರೀಡಂ ಪಾರ್ಕ್ ನಲ್ಲಿ ಸಾರಿಗೆ ನೌಕರರ ಮುಖಂಡ ಅನಂತ ಸುಬ್ಬುರಾವ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ. ಕಳೆದ  6 ವರ್ಷಗಳಿಂದ ಸಾರಿಗೆ ನೌಕರರ ವೇತನ ಹೆಚ್ಚಳ ಮಾಡದ ಹಿನ್ನೆಲೆ ಸರ್ಕಾರದ ಧೋರಣೆ ಖಂಡಿಸಿ ಇಂದು ಸಾರಿಗೆ ನೌಕರರು ಬೀದಿಗಿಳಿದು ಪ್ರತಿಭಟನೆಗೆ ಮುಂದಾಗಿದ್ದಾರೆ.ವೇತನ ಹೆಚ್ಚಳಕ್ಕೆ ಆಗ್ರಹಿಸಿ ಇಂದು ಸಾರಿಗೆ ನೌಕರರು ಧರಣಿ ಸತ್ಯಾಗ್ರಹ ಕೈಗೊಂಡಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಸಂಗಟಿಕೊಪ್ಪ ಗ್ರಾಮದ ಸಮೀಪ ಟ್ಯಾಂಕರ್ ಡಿಕ್ಕಿಯಾಗಿ ಕಾರಿನಲ್ಲಿದ್ದ ಮೂವರು ದುರ್ಮರಣಕ್ಕೀಡಾದ ಘಟನೆ ನಡೆದಿದೆ. ಮೃತರು ಹುಬ್ಬಳ್ಳಿ ಮೊಹಮ್ಮದ್ ಇಶಾನ್ , ಮೊಹಮದ್ ಸೈಫ್ , ಇಸ್ಮಾಯಿಲ್ ಎಂದು ತಿಳಿದು ಬಂದಿದೆ. ಈ ಮೂವರು ಸ್ನೇಹಿತರು ಕಾರ್​ನಲ್ಲಿ ಪ್ರಯಾಣ ಮಾಡುವಾಗ ಪ್ರವಾಸಕ್ಕೆ ಹೊರಟಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು. ಕಾರಿನಲ್ಲಿ 6 ಜನ ಸ್ನೇಹಿತರು ದೇವರ ದರ್ಶನಕ್ಕೆ ಕಾರವಾರಕ್ಕೆ ತೆರಳುತ್ತಿದ್ದರು. ಕಲಘಟಗಿ ಬಳಿ ಅಪಘಾತ ಸಂಭವಿಸಿದೆ. ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಓರ್ವ ಕಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಬೆಳಗಾವಿ: ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಸಂಘಟನೆಗಳೆಲ್ಲ ಬೆಳಗಾವಿಯ ಅಭಿವೃದ್ಧಿಗಾಗಿ ಒಗ್ಗೂಡಿರುವುದು ಅತ್ಯಂತ ಒಳ್ಳೆಯ ಬೆಳವಣಿಗೆ ಎಂದು ಆರ್ಟ್ ಆಫ್ ಲಿವಿಂಗ್ ನ ಶ್ರೀ ಶ್ರೀ ರವಿಶಂಕರ ಗುರೂಜಿ ಪ್ರಶಂಸಿಸಿದ್ದಾರೆ. ಮಂಗಳವಾರ ಇಲ್ಲಿಯ ಕೆಎಲ್ಇ ಸಂಸ್ಥೆಯ ಶತಮಾನೋತ್ಸವ ಸಭಾಭವನದಲ್ಲಿ ಫೆಡರೇಶನ್ ಆಫ್ ಅಸೋಸಿಯೇಶನ್ಸ್ ಆಫ್ ಬೆಳಗಾವಿ (ಎಫ್ಒಎಬಿ) ಲೋಗೋ ಲೋಕಾರ್ಪಣೆಗೊಳಿಸಿ ಅವರು ಆಶಿರ್ವಚನ ನೀಡುತ್ತಿದ್ದರು. ಬೆಳಗಾವಿ ಎಂದರೆ ಒಂದು ಮೂಲೆಯಲ್ಲಿರುವ ಪ್ರದೇಶ, ಬೇಡದ ಕಾರಣಕ್ಕೆ ಸುದ್ದಿಯಲ್ಲಿರುವ ಪ್ರದೇಶ ಎನ್ನುವ ಭಾವನೆ ಹೊರಗಡೆ ಇದೆ. ಆದರೆ ನಿಜ ಸ್ಥಿತಿ ಆ ರೀತಿಯ ಇಲ್ಲ. ಇಲ್ಲಿ ಉದ್ಯಮ ಸ್ನೇಹಿ ವಾತಾವರಣವಿದೆ. ಇಲ್ಲಿನ ಉದ್ಯಮಿಗಳು ಹಾಗೂ ಬೇರೆ ಬೇರೆ ಕ್ಷೇತ್ರಗಳಲ್ಲಿ ಕೆಲಸ ನಿರ್ವಹಿಸುತ್ತಿರುವವರೆಲ್ಲ ಸೇರಿ ಇಂತಹ ಒಂದು ಸಂಘಟನೆ ಕಟ್ಟಿಕೊಂಡು ಉತ್ತಮ ಕೆಲಸ ಮಾಡುತ್ತಿದ್ದಾರೆ. ಸಮಾಜದ ಉನ್ನತಿಗೆ ಇಂತಹ ಪ್ರಯತ್ನ ಶ್ಲಾಘನೀಯ ಎಂದು ಅವರು ಹೇಳಿದರು. ಬೆಳಗಾವಿಯ ಇತಿಹಾಸ, ಬೆಳಗಾವಿಯ ಅಂತರ್ ಶಕ್ತಿಗಳನ್ನೆಲ್ಲ ತಿಳಿದು ನಿಜವಾಗಿ ಸಂತೋಷವಾಗಿದೆ. ಇಷ್ಟೊಂದು ಉದ್ಯಮಿಗಳು ಇಲ್ಲಿಯ ನೆಲದಲ್ಲಿ ತಯಾರಾಗಿದ್ದಾರೆ ಎನ್ನುವುದೇ…

Read More