Author: admin

ಬೆಂಗಳೂರಿನ ಕೆಂಗೇರಿಯ ಲಾಡ್ಜ್ ಒಂದರಲ್ಲಿ ಜನವರಿ 30 ರಂದು ಬಿಎಂಟಿಸಿ ಚಾಲಕನೋರ್ವ ಅನುಮಾನಾಸ್ಪದ ಸಾವು ಪ್ರಕರಣ ಸಂಬಂಧ ತನಿಖೆ ಕೈಗೊಂಡ ಪೊಲೀಸರಿಗೆ ಸ್ಪೋಟಕ ಮಾಹಿತಿ ದೊರೆತಿದೆ. ಕೊಲೆಯೋ ಆತ್ಮಹತ್ಯೆಯೋ ಎಂಬ ಅನುಮಾನಕ್ಕೆ ತೆರೆ ಬಿದ್ದಿದ್ದು, ವಿವಾಹಿತಳ ಹಿಂದೆ ಬಿದ್ದ ಚಾಲಕ ಪುಟ್ಟೇಗೌಡ (28) ಆಕೆ ಸಂಬಂಧ ನಿರಾಕರಿಸಿದಾಗ ಬೇಸತ್ತು ಆತ್ಮಹತ್ಯೆಗೆ (Suicide) ಶರಣಾಗಿದ್ದಾನೆ ಎಂಬುದು ಗೊತ್ತಾಗಿದೆ. ಮೃತ ಚಾಲಕ ಪುಟ್ಟೇಗೌಡ ಓರ್ವ ಆಂಟಿಯನ್ನು ಪ್ರೀತಿಸುತ್ತಿದ್ದ. ಕೇವಲ ಆರು ತಿಂಗಳ ಹಿಂದಷ್ಟೇ ಪರಿಚಿತಳಾದ ಆಕೆಯೊಂದಿಗೆ ಪ್ರೀತಿ ಚಿಗುರಿತ್ತು. ಇಬ್ಬರು ಅಕ್ಕಪಕ್ಕದ ಊರಿನವರಾಗಿದ್ದರಿಂದ ಓಡಾಟ ಹೆಚ್ಚಾಗಿತ್ತು. ಇತ್ತೀಚೆಗೆ ಮಹಿಳೆಯನ್ನು ತನ್ನ ಜೊತೆಯಲ್ಲೇ ಇರುವಂತೆ ಪುಟ್ಟೇಗೌಡ ಒತ್ತಾಯ ಮಾಡ್ತಿದ್ದ. ಆದರೆ ಆಕೆ ನನಗೆ ಇಬ್ಬರು ಮಕ್ಕಳಿದ್ದಾರೆ, ಜೊತೆಯಲ್ಲಿರಲು ಸಾಧ್ಯವಿಲ್ಲ ಎಂದು ಮಹಿಳೆ ಹೇಳಿದ್ದಳು. ಈ ಮಧ್ಯೆ ಜನವರಿ 30 ರಂದು ಕೆಲಸಕ್ಕೆ ಬಂದಿದ್ದ ಪುಟ್ಟೇಗೌಡ ನೇರವಾಗಿ ಮಹಿಳೆಯೊಂದಿಗೆ ಸಲುಗೆಯಿಂದಲೇ ಮಾತನಾಡುತ್ತ ಕೆಂಗೇರಿ ಲಾಡ್ಜ್​​ಗೆ ಮಹಿಳೆಯನ್ನು ಕರೆದೊಯ್ದಿದ್ದ. ಇಬ್ಬರು ಲಾಡ್ಜ್​​ನಲ್ಲಿ ಸುಮಾರು ಗಂಟೆಗಳ ಕಾಲ ಕಳೆದಿದ್ದರು. ನಂತರ…

Read More

ಕೊರಟಗೆರೆ: ಕಳೆದ ಐದು ವರ್ಷಗಳಲ್ಲಿ ಕೊರಟಗೆರೆ ವಿಧಾನಸಭಾ ಕ್ಷೇತ್ರದ ಶಾಸಕನಾಗಿ ಕುಡಿಯುವ ನೀರು, ರಸ್ತೆ, ಆರೋಗ್ಯ,ವಸತಿ ನಿರ್ಮಾಣ ಹಾಗೂ ಎತ್ತಿನ ಹೊಳೆ ಯೊಜನೆಯೂ ಸೇರಿದಂತೆ ವಿವಿಧ ಯೋಜನೆಗಳ ಅಡಿಯಲ್ಲಿ 2573.67 ಕೋಟಿ ರೂ.ಗಳ ಅನುದಾನದ ತಂದು 4080 ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ಮಾಜಿ ಡಿಸಿಎಂ ಹಾಗೂ ಕೊರಟಗೆರೆ ಶಾಸಕ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ಇಂದು ತಮ್ಮ ಐದು ವರ್ಷಗಳ ಸಾಧನೆಯ ದಾಖಲೆಗಳನ್ನು ಒಳಗೊಂಡ ಹೆಜ್ಜೆ ಗುರುತು ಎಂಬ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು,ಇದರಲ್ಲಿ ವಸತಿ ಯೋಜನೆಗಾಗಿ 95.75 ಕೋಟಿ, ಗಂಗಾ ಕಲ್ಯಾಣಕ್ಕೆ 1.53 ಕೋಟಿ, ಸಾಲ ಸೌಲಭ್ಯಕ್ಕೆ5.76 ಕೋಟಿ, ಇತರೆ ಇಲಾಖೆಗಳಿಂದ 95.21 ಕೋಟಿ ನೀಡಲಾಗಿದೆ. ಇದುವರೆಗೂ 19,501 ಜನರಿಗೆ ಸರಕಾರದ ಸೌಲಭ್ಯಗಳು ದೊರೆತಿವೆ. ಎತ್ತಿನ ಹೊಳೆ ಯೋಜನೆಯಡಿ 7 ಕಾಮಗಾರಿಗಳನ್ನು ಕೈಗೊಂಡು 1279.31 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ. ಪ್ರತಿ ಗ್ರಾಮ ಪಂಚಾಯಿತಿ, ಪ್ರತಿ ಗ್ರಾಮಕ್ಕೂ ಒಂದಿಲೊಂದು ಯೋಜನೆಯ ಮೂಲಕ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಈ ಸಾಧನೆಯ ಪುಸ್ತಕವನ್ನು ಪ್ರತಿ…

Read More

ಇಂದು ಕಾಂಗ್ರೆಸ್ ಮುಖಂಡರಾದ ಶಶಿಧರ್ ಟೂಡಾ ಅವರು ತಮ್ಮ ಹುಟ್ಟು ಹಬ್ಬದ ಪ್ರಯುಕ್ತ ತಿಪಟೂರು ತಾಲ್ಲೂಕಿನ ಹಾಲ್ಕುರಿಕೆ ಮತ್ತು ಕೆ.ಬಿ. ಕ್ರಾಸ್ ನ ನೂತನ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿದರು. ಈ ವೇಳೆ ಆರೋಗ್ಯ ಸಖಿಯರು, ಪಕ್ಷದ ಕಾರ್ಯಕರ್ತರು ಹಾಗೂ ಗ್ರಾಮಸ್ಥರೆಲ್ಲರೂ ಸೇರಿ ಶಶಿಧರ್ ಅವರ ಹುಟ್ಟುಹಬ್ಬವನ್ನು ನಮ್ಮ ಆರೋಗ್ಯ ಕೇಂದ್ರದಲ್ಲಿ ವಿಶೇಷವಾಗಿ ಮತ್ತು ಸರಳವಾಗಿ ಆಚರಿಸಿದರು. ತಿಪಟೂರು ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ ನಮ್ಮ ಆರೋಗ್ಯ ಕೇಂದ್ರ ಮತ್ತು ಉದ್ಯೋಗ ಕೌಶಲ್ಯ ತರಬೇತಿ ಕೇಂದ್ರಗಳಂತಹ ಮಹಿಳೆಯರನ್ನು ಒಳಗೊಳ್ಳುವ ಯೋಜನೆಗಳು ಮತ್ತು ಅಭಿವೃದ್ಧಿ ಕಾರ್ಯಗಳು ಮುಂಬರುವ ದಿನಗಳಲ್ಲಿ ಮತ್ತಷ್ಟು ಬರಲಿ ಎಂದು ತಿಪಟೂರಿನ ಜನತೆ ನಿರೀಕ್ಷಿಸುತ್ತಿದ್ದಾರೆ ಎಂದು ಅವರು ಇದೇ ವೇಳೆ ಹೇಳಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ಸಿನ ಪ್ರಮುಖ ಮುಖಂಡರು, ಆರೋಗ್ಯ ಕೇಂದ್ರದ ಆರೋಗ್ಯ ಸಖಿಯರಾದ ಗೀತಾ, ಸಹನ, ಶ್ರೀ ಲಕ್ಷ್ಮಿ, ಉಮಾದೇವಿ, ಮಂಜುಳಾ, ಪ್ರಿಯ, ನಿವೇದಿತಾ, ರೂಪ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ವರದಿ: ಆನಂದ್ ತಿಪಟೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು…

Read More

ಬೆಂಗಳೂರ: ನಮ್ಮ ಕ್ಲಿನಿಕ್ ಒಂದು ಕ್ರಾಂತಿಕಾರಿ ಹೆಜ್ಜೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.  ಅವರು ಇಂದು ಮಹಾಲಕ್ಷ್ಮೀ ಲೇಔಟ್ ನ ರಾಣಿ ಅಬ್ಬಕ್ಕದೇವಿ ಆಟದ ಮೈದಾನದಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ 108 ನಮ್ಮ ಕ್ಲಿನಿಕ್‍ಗಳ ಲೋಕಾರ್ಪಣೆ ಮಾಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ಶಿಕ್ಷಣಕ್ಕೆ ಅತಿ ಹೆಚ್ಚಿನ ಮಹತ್ವ ನೀಡಲಾಗಿದೆ. ರಸ್ತೆಗಳ ನಿರ್ಮಾಣವಾಗಿದೆ. ಬಹಳಷ್ಟು  ಅಭಿವೃದಿಯಾಗುತ್ತಿರುವುದನ್ನು ಬಿಂಬಿಸುವ ಮೂಲಕ ಬೆಂಗಳೂರು ಬ್ರಾಂಡ್ ನ್ನು ಹೆಚ್ಚಿಸುವ ಕೆಲಸ ಮಾಡಬೇಕೆಂದು ಕರೆ ನೀಡಿದ ಮುಖ್ಯಮಂತ್ರಿಗಳು, ಮೊದಲೆಲ್ಲಾ ಕೇವಲ ಸಮಾಲೋಚನೆ ನೀಡುವ ವೈದ್ಯರಿದ್ದರು.  ಈಗ ಪ್ರಾಥಮಿಕ ಚಿಕಿತ್ಸೆ ಪಡೆದು ಗುಣಮುಖರಾಗುವ ಅವಕಾಶ ದೊರೆಯುತ್ತದೆ ಎಂದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1

Read More

ಮೂಡಿಗೆರೆ : ಮೂಡಿಗೆರೆ ತಾಲೂಕಿನ ಬಿಳಗುಳ ಕೊಲ್ಲಿಬ್ಯೆಲ್ ಸಮೀಪದ ಲಕ್ಷ್ಮಣಗೌಡ ಎಂಬುವವರ ಸುಮಾರು 10ವರ್ಷದಿಂದ ಪಾಳುಬಿದ್ದ ಕಾಫಿ ತೋಟದಲ್ಲಿ.  ದುಷ್ಕರ್ಮಿಗಳು ಕಾಡು ಹಂದಿ ಬೇಟೆಗಾಗಿ ಹಾಕಿದ್ದ ಉರುಳಿಗೆ ಸುಮಾರು ಮೂರು ವರ್ಷದ ಚಿರತೆ ಸಿಲುಕಿ ಸಾವನ್ನಪ್ಪಿರುವ ಘಟನೆ ಸೋಮವಾರ ತಡರಾತ್ರಿ ವೇಳೆ ನಡೆದಿದೆ. ಕಡೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಕೆಲವೆ ಅಡಿ ದೂರದ ಅಂತರದಲ್ಲಿ ಚಿರತೆಯು ಉರುಳಿಗೆ ಬಿದ್ದಿದ್ದು ಈ ವೇಳೆ ಕೂಗಾಟವನ್ನು ಕೇಳಿ ದಾರಿಯಲ್ಲಿ ಹೋಗುವ ಪ್ರಯಾಣಿಕರು ಗಮನಿಸಿ ಅರಣ್ಯ ಇಲಾಖೆಗೆ ಮಾಹಿತಿ ತಿಳಿಸಿದ್ದು,  ರಾತ್ರಿಯೇ ತೆರಳಿದ ಅಧಿಕಾರಿಗಳು ಚಿರತೆಯನ್ನು ಬದುಕಿಸಲು ಪ್ರಯತ್ನಪಟ್ಟಿದ್ದು ಉರುಳು ಕುತ್ತಿಗೆ ಬಲವಾಗಿ ಸಿಲುಕಿದ್ದ ಕಾರಣ  ಮೃತಪಡುವ ಹಂತಕ್ಕೆ ತಲುಪಿದ್ದು. ರಕ್ಷಣೆ ಮಾಡುವ ವೇಳೆಗೆ ಮೃತಪಟ್ಟಿದೆ.  ಈ ಸಂಬಂಧ ತೋಟದ ಮಾಲೀಕರು ಮತ್ತು ಉರುಳು ಹಾಕಿದ ದುಷ್ಕರ್ಮಿಗಳ ವಿರುದ್ಧ ಮುಖದಮ್ಮೆ ದಾಖಲಿಸಿದ್ದು. ಮೂಡಿಗೆರೆ ಅರಣ್ಯ ಇಲಾಖೆಗೆ ಶವ ಸ್ಥಳಾಂತರಿಸಿ ಮರಣೋತ್ತರ ಪರೀಕ್ಷೆಯ ನಂತರ ಚಿರತೆಯ ಶವವನ್ನು ಅಗ್ನಿಸ್ಪರ್ಷ ಮೂಲಕ ಸಂಸ್ಕಾರ ನಡೆಸಲು ತಿರ್ಮಾನಿಸಲಾಗಿದೆ.  ನಮ್ಮತುಮಕೂರು.ಕಾಂನ…

Read More

ಬೆಂಗಳೂರು: ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಕರ್ನಾಟಕ್ಕೆ ಬಂದ ಬೆನ್ನಲ್ಲೆ ಬಿಜೆಪಿ ಚುನಾವಣೆ ಗೆಲ್ಲುವ ಭರಾಟೆಯಲ್ಲಿದ್ದರೆ ಜೆಡಿಎಸ್ ಟ್ವಿಟ್ ಮೂಲಕ ಬಿಜೆಪಿ ಕಾಲೆಳೆಸಿದೆ. ರಾಜ್ಯ ಸರಕಾರದ ಆಡಳಿತ ಕಾರ್ಯವೈಖರಿ ವಿರುದ್ಧ ಟ್ವಿಟ್ ದಾಳಿ ನಡೆಸಿ ರಾಜ್ಯ ಬಿಜೆಪಿ ​ಸರ್ಕಾರ ನಪುಂಸಕ ಸರ್ಕಾರ ಎಂದು ಜೆಡಿಎಸ್ ಟ್ವೀಟ್ ಮಾಡುವುದರ ಮೂಲಕ ಸರಕಾರ ಕಾಲೆಳೆದಿದೆ. ರಾಜ್ಯಕ್ಕೆ ಪ್ರಧಾನಿ ಬಂದಾಗ ಸ್ವಾಗತಿಸಿ, ಚುನಾವಣೆ ಗೆಲ್ಲುವ ಉತ್ಸಾಹದಲ್ಲಿದ್ದಾರೆ. ರಾಜ್ಯದಲ್ಲಿ ಬರಗಾಲ, ಪ್ರವಾಹದ ವೇಳೆ ಮಾಯವಾಗುವ ಪ್ರಧಾನಿಯವರು ಚುನಾವಣೆ ಹತ್ತಿರ ಬಂದ ತಕ್ಷಣ ಪ್ರತ್ಯಕ್ಷರಾಗುತ್ತಾರೆ. ಆರ್ಥಿಕತೆಗೆ ಬೆನ್ನೆಲುಬಾಗಿರುವ ಪ್ರಮುಖ ರಾಜ್ಯಗಳಲ್ಲೊಂದಾದ ಕರ್ನಾಟಕ. ಕರ್ನಾಟಕದ ಸಮಸ್ಯೆಗಳಿಗೆ ಕುರುಡಾಗಿ ವರ್ತಿಸುವವರು. ಈಗ ಮತ ಕೇಳಲು ಯಾವ ಮುಖ ಹೊತ್ತು ಬರುತ್ತಾರೆ. ಆದಾಯ, ಕಾರ್ಪೊರೇಟ್​ ತೆರಿಗೆ, ಜಿಎಸ್​ಟಿಯಿಂದ ಕೇಂದ್ರದ ಖಜಾನೆ ತುಂಬಿಸಿಕೊಳ್ಳಲು ಮಾತ್ರ ಕರ್ನಾಟಕ ಬೇಕು. ನಮ್ಮಿಂದ ಸಂಗ್ರಹವಾದ ತೆರಿಗೆಯಲ್ಲಿ ಕನಿಷ್ಠ ಪಾಲು ಸಿಗುವುದೇ ಕನಸಾಗಿದೆ ಎಂದು ಟ್ವೀಟ್ ಮೂಲಕ ಆಕ್ರೋಶ ಹೊರ ಹಾಕಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು…

Read More

ದಾವಣಗೆರೆ ಜಿಲ್ಲೆಯ ಹರಿಹರ (Harihar) ತಾಲ್ಲೂಕಿನ ಭಾನುವಳ್ಳಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದಾಗಲೇ ಇಂಗ್ಲೀಷ್ ಶಿಕ್ಷಕ ವಿಜಯ್ ಕುಮಾರ್ (54) ಹೃದಯಾಘಾತದಿಂದ  ಸಾವನ್ನಪ್ಪಿದ ಘಟನೆ ನಡೆದಿದೆ. ಬೆಳಿಗ್ಗೆ ಶಾಲೆಯಲ್ಲಿ ಪ್ರಾರ್ಥನೆ ಮುಗಿಸಿ ತರಗತಿಯಲ್ಲಿ ಪಾಠ ಮಾಡುವಾಗ ವಿಜಯ್ ಕುಮಾರ್ ಅವರು ಹೃದಯಾಘಾತದಿಂದ (Heart attack) ಸಾವನ್ನಪ್ಪಿದ್ದಾರೆ. ಶಿಕ್ಷಕ ವಿಜಯ್ ಕುಮಾರ್ ಮೂಲತಃ ದಾವಣಗೆರೆ ತಾಲ್ಲೂಕು ಮಹಾದೇವಿಪುರದ ನಿವಾಸಿಯಾಗಿದ್ದಾರೆ. ಹೃದಯಾಘಾತವಾದ ತಕ್ಷಣ ಸಹ ಶಿಕ್ಷಕರು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದದಿದ್ದಾರೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಶಿಕ್ಷಕ ಸಾವನ್ನಪ್ಪಿದ್ದಾರೆ. ಶಿಕ್ಷಕರ ಮೃತದೇಹದ ಬಳಿ ಮಕ್ಕಳು ಗೋಳಾಡುತ್ತಿರುವ ದೃಶ್ಯ ಮನಕಲುಕುವಂತಿತ್ತು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಬೆಳಗಾವಿ: ಭಾರಿ ಕುತೂಹಲ ಮೂಡಿಸಿದ್ದ ಬೆಳಗಾವಿ ಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಆಯ್ಕೆ ಪೂರ್ಣಗೊಂಡಿದ್ದು ಎರಡು ಸ್ಥಾನಗಳು ಬಿಜೆಪಿ ತೆಕ್ಕೆ ಸೇರಿವೆ. ಮಹಾಪೌರ ಸ್ಥಾನಕ್ಕೆ ಶೋಭಾ ಸುಮ್ನಾಚೆ ಅವಿರೋಧವಾಗಿ ಆಯ್ಕೆಗೊಂಡರೆ, ರೇಷ್ಮಾ ಪಾಟೀಲ್ ಉಪ ಮೇಯರ್ ಆಗಿ ಚುನಾಯಿತಗೊಂಡಿದ್ದಾರೆ. ದಕ್ಷಿಣ ಮತ್ತು ಉತ್ತರ ಮತಕ್ಷೇತ್ರದ ಶಾಸಕರಗಳ ಮೇಲೆ ವಿರೋಧಪಕ್ಷಗಳು ಮಹಾನಗರ ಪಾಲಿಕೆ ಚುನಾವಣೆಯು ಮುಕ್ತಾಯಗೊಂಡ ನಂತರದಿಂದ ಆರೋಪಗಳು ಟೀಕೆಗಳು ಇಬ್ಬರು ಶಾಸಕರುಗಳ ಮೇಲೆ ಸಾಮಾನ್ಯವಾಗಿತ್ತು. ಒಂದು ಹಂತದಲ್ಲಿ ಭಾರತೀಯ ಜನತಾ ಪಕ್ಷದ ಮಹಾನಗರ ಸದಸ್ಯರುಗಳು ಅಸಮಾಧಾನಗೊಂಡು ಆಪರೇಷನ್ ಹಸ್ತ ಅಥವಾ ಬೇರೆಯಾಗುವ ಚರ್ಚೆಯು ಕೂಡ ಗುಸು-ಗುಸು ಆಗಿ ನಡೆದಿತ್ತು. ಎಲ್ಲವನ್ನೂ ಬಹು ಜಾನ್ಮೆಯಿಂದ ಮತ್ತು ತಾಳ್ಮೆಯಿಂದ ನಿಭಾಯಿಸಿದ ಇಬ್ಬರು ಶಾಸಕರುಗಳು ಬೆಳಗಾವಿ ಮಹಾನಗರ ಪಾಲಿಕೆಯನ್ನು ತನ್ನ ರಾಜಕೀಯ ಇಚ್ಛಾಶಕ್ತಿಯಿಂದ ಹಿಡಿದು ಇಟ್ಟಿದ್ದರು. ಇದರಲ್ಲಿ ಪ್ರಮುಖ ಪಾತ್ರ ದಕ್ಷಿಣ ಮತ ಕ್ಷೇತ್ರದ ಶಾಸಕ ಅಭಯ್ ಪಾಟೀಲ್ ಇಲ್ಲಿ ಪ್ರಮುಖ ಪತ್ರ ವಹಿಸಿದ್ದರು. ಮೊದಲ ಬಾರಿಗೆ ಭಾರತೀಯ ಜನತಾ ಪಕ್ಷ ಮಹಾನಗರ ಪಾಲಿಕೆಯಲ್ಲಿ ಆಡಳಿತ…

Read More

ಗೋವಿಂದ ಪೈ, ಕುವೆಂಪು ಅವರ ಬಳಿಕ ರಾಷ್ಟ್ರಕವಿ ಗೌರವಕ್ಕೆ ಪಾತ್ರರಾದ ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ(ಜಿ.ಎಸ್.ಶಿವರುದ್ರಪ್ಪ) ಅವರು  07-02-1926 ರಂದು  ಶಿವಮೊಗ್ಗದ ಶಿಕಾರಿಪುರದ ಈಸೂರಿನಲ್ಲಿ ಜನಿಸಿದರು. ನವೆಂಬರ್ 1, 2006ರಂದು ಕವಿ ಜಿ.ಎಸ್.ಶಿವರುದ್ರಪ್ಪ ಅವರನ್ನು ರಾಷ್ಟ್ರಕವಿ ಎಂದು ಘೋಷಿಸಲಾಯಿತು. ತಮ್ಮ ತಂದೆಯಿಂದ ಸಾಹಿತ್ಯದ ಆಸಕ್ತಿ ಹತ್ತಿಸಿಕೊಂಡ ಶಿವರುದ್ರಪ್ಪನವರು ಹೊನ್ನಾಳಿ, ಕೋಟೆಹಾಳಗಳಲ್ಲಿ ಪ್ರಾಥಮಿಕ ಶಿಕ್ಷಣವನ್ನು, ರಾಮಗಿರಿ, ಬೆಲಗೂರಲ್ಲಿ ಮಾಧ್ಯಮಿಕ ಶಿಕ್ಷಣವನ್ನು, ದಾವಣಗೆರೆ, ತುಮಕೂರುಗಳಲ್ಲಿ ಪ್ರೌಢಶಾಲಾ, ಇಂಟರ್ ಮೀಡಿಯಟ್ ಶಿಕ್ಷಣವನ್ನೂ ಮುಗಿಸಿದರು. ಮೈಸೂರು ವಿಶ್ವವಿದ್ಯಾನಿಲಯದ ಮಹಾರಾಜ ಕಾಲೇಜಿನಲ್ಲಿ ಬಿ.ಎ. ಆನರ್ಸ್ (1949) ಪದವಿ ಪಡೆದರು. ಜಿ.ಎಸ್.ಶಿವರುದ್ರಪ್ಪ ಅವರ ಕವನಗಳು: ಸಾಮಗಾನ, ಚೆಲುವು-ಒಲವು, ದೇವಶಿಲ್ಪ,ದೀಪದ ಹೆಜ್ಜೆ, ಕಾರ್ತಿಕ, ಅನಾವರಣ, ತೆರೆದ ದಾರಿ, ಗೋಡೆ, ಕಾಡಿನ ಕತ್ತಲಲ್ಲಿ, ಪ್ರೀತಿ ಇಲ್ಲದ ಮೇಲೆ, ಚಕ್ರಗತಿ, ವ್ಯಕ್ತಮಧ್ಯ, ಅಗ್ನಿಪರ್ವ, ತೀರ್ಥವಾಣಿ, ಜಾರಿದ ಹೊವು,ಸಮಗ್ರ ಕಾವ್ಯ, ಎದೆತುಂಬಿ ಹಾಡಿದೆನು ಮೇರಾ ದಿಯಾ ಮತ್ತು ಇತರ ಕವನಗಳು ವಿಮರ್ಶೆಗಳು: ಪರಿಶೀಲನ, ವಿಮರ್ಶೆಯ ಪೂರ್ವ ಪಶ್ಚಿಮ, ಸೌಂದರ್ಯ ಸಮೀಕ್ಷೆ. (ಇದು ಅವರ ಪಿಹೆಚ್‌ಡಿ ಮಹಾ ಪ್ರಬಂಧ),…

Read More

ಕೊರಟಗೆರೆ: ನ್ಯಾಯದಿಂದ ವಂಚಿತರಾದ, ಆರ್ಥಿಕವಾಗಿ ಹಿಂದುಳಿದವರಿಗೆ ಲೋಕ ಆದಾಲತ್ ಮೂಲಕ ನ್ಯಾಯ ಒದಗಿಸಿಕೊಡುವ ವ್ಯವಸ್ಥೆ ಇದೆ ಎಂದು ಜೆಎಂಎಫ್‍ಸಿ ಸಿವಿಲ್ ನ್ಯಾಯಧೀಶರಾದ ಜೆ.ಎನ್.ಶ್ರೀನಾಥ್ ತಿಳಿಸಿದರು. ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಇವರ ಸಂಯುಕ್ತಶ್ರಾಯದಲ್ಲಿ ಕೊರಟಗೆರೆ ಕಾನೂನು ಸೇವಾ ಸಮಿತಿ ವತಿಯಿಂದ ಕೊರಟಗೆರೆ ಜೆಎಂಎಫ್‍ಸಿ ನ್ಯಾಯಲಯದಲ್ಲಿ ಲೋಕಾ ಆದಾಲತ್ (ಜನತಾ ನ್ಯಾಯಲಯ) ಏರ್ಪಡಿಸಲಾದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಆರ್ಥಿಕವಾಗಿ ಬಲಿಷ್ಠರಾಗಿರುವವರು ದುರ್ಬಲರನ್ನು ದುರುಪಯೋಗ ಪಡಿಸಿಕೊಳ್ಳುತ್ತಾರೆ, ಕಾನೂನಿನ ಅರಿವು ಇಲ್ಲದೇ ಸಾರ್ವಜನಿಕರು ಅನೇಕ ಬಾರಿ ಮೋಸ ಹೋಗುತ್ತಾರೆ, ಇಂತಹ ಸಂದರ್ಭದಲ್ಲಿ ಅನ್ಯಾಯಕ್ಕೆ ಒಳಗಾದವರಿಗೆ ಕಾನೂನು ಸೇವೆಗಳ ಪ್ರಾಧಿಕಾರ ನ್ಯಾಯ ಒದಗಿಸಿ ಕೊಡುವಲ್ಲಿ ನೆರವಾಗುತ್ತದೆ ಎಂದು ಹೇಳಿದರು. ರಾಜ್ಯದ ಎಲ್ಲಾ ನ್ಯಾಯಲಯಗಳಲ್ಲಿ ಫೆ.11 ರಂದು ರಾಷ್ಟ್ರೀಯ ಲೋಕ ಆದಾಲತ್‍ಗಳನ್ನು ಏರ್ಪಡಿಸಲಾಗಿದ್ದು ಇದರಲ್ಲಿ ಚೆಕ್‍ಬೌನ್ಸ್, ಕೌಟುಂಬಿಕ ಆಸ್ತಿ ವಿವಾದಗಳು ಮತ್ತು ಜಗಳಗಳು, ಮೋಟಾರ್ ವಾಹನಗಳು, ಅಪಘಾತದ ವಿಮಾ ಪ್ರಕರಣಗಳು, ಸೇರಿದಂತೆ ಜನತಾ ನ್ಯಾಯಲಯಕ್ಕೆ ಒಳಪಡುವ ಹಲವು ಅರ್ಜಿಗಳನ್ನು ಇತ್ಯರ್ಥಗೊಳಿಸಿಕೊಳ್ಳಬಹುದಾಗಿದೆ ಎಂದರು. ಲೋಕ…

Read More