nammatumakuru

    Subscribe to Updates

    Get the latest creative news from FooBar about art, design and business.

    What's Hot

    SSLC, PUC ಓದಿದವರಿಗೆ ಯಾದಗಿರಿ ಜಿಲ್ಲಾ ನ್ಯಾಯಾಲಯದಲ್ಲಿ ಉದ್ಯೋಗಾವಕಾಶ: ಅರ್ಜಿ ಸಲ್ಲಿಸಲು  ಸೆ.30 ಕೊನೆಯ ದಿನಾಂಕ

    August 29, 2026

    Toxic: ಯಶ್– ಗೀತೂ ಮೋಹನ್ ದಾಸ್ ಶ್ರಮವನ್ನು ಕೊಂಡಾಡಿದ ಹಾಲಿವುಡ್ ಆಕ್ಷನ್ ನಿರ್ದೇಶಕ ಜೆಜೆ ಪೆರ್ರಿ

    August 29, 2026

    ಆಯಾ ಕಾಲಕ್ಕೆ ಏನೇನು ಆಗಬೇಕೋ ಅದು ಆಗುತ್ತದೆ: ರಾಜ್ಯಾಧ್ಯಕ್ಷ ಆಯ್ಕೆ ವಿಚಾರಕ್ಕೆ ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿಕೆ

    August 29, 2026
    Facebook Twitter Instagram
    ಟ್ರೆಂಡಿಂಗ್
    • SSLC, PUC ಓದಿದವರಿಗೆ ಯಾದಗಿರಿ ಜಿಲ್ಲಾ ನ್ಯಾಯಾಲಯದಲ್ಲಿ ಉದ್ಯೋಗಾವಕಾಶ: ಅರ್ಜಿ ಸಲ್ಲಿಸಲು  ಸೆ.30 ಕೊನೆಯ ದಿನಾಂಕ
    • Toxic: ಯಶ್– ಗೀತೂ ಮೋಹನ್ ದಾಸ್ ಶ್ರಮವನ್ನು ಕೊಂಡಾಡಿದ ಹಾಲಿವುಡ್ ಆಕ್ಷನ್ ನಿರ್ದೇಶಕ ಜೆಜೆ ಪೆರ್ರಿ
    • ಆಯಾ ಕಾಲಕ್ಕೆ ಏನೇನು ಆಗಬೇಕೋ ಅದು ಆಗುತ್ತದೆ: ರಾಜ್ಯಾಧ್ಯಕ್ಷ ಆಯ್ಕೆ ವಿಚಾರಕ್ಕೆ ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿಕೆ
    • ಬೋರ್ ವೆಲ್ ಮೋಟರ್ ಆನ್ ಆಗುತ್ತಿದ್ದಂತೆಯೇ ಬಾಂಬ್ ಸ್ಫೋಟ; ಮತ್ತೊಂದು ಸಜೀವ ಬಾಂಬ್ ಪತ್ತೆ, ರೈತ ಅಪಾಯದಿಂದ ಪಾರು
    • ತಿಪಟೂರು ತಾಲೂಕನ್ನು ಕೂಡಲೇ ಬರಪೀಡಿತ ಪ್ರದೇಶವೆಂದು ಘೋಷಿಸಿ: ರಾಜ್ಯ ಸರ್ಕಾರಕ್ಕೆ ರೈತ ಸಂಘದ ಎಚ್ಚರಿಕೆ
    • ಸಿಸಿಟಿ ಕಾಮಗಾರಿ ಪರಿಶೀಲಿಸಿದ ಸಚಿವ ಈಶ್ವರ ಬಿ. ಖಂಡ್ರೆ; ಕೂಲಿಕಾರ್ಮಿಕರೊಂದಿಗೆ ಮಣ್ಣು ಎತ್ತಿ ಕೆಲಸ ಮಾಡಿದ ಸಚಿವರು
    • ಮಧುಗಿರಿ: ಸೇವಾ ನಿವೃತ್ತ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ ಬೀಳ್ಕೊಡುಗೆ
    • (ಬಳ್ಳಿ ಕಾಡು ಹಣ್ಣು ) ಬ್ಲ್ಯಾಕ್ ಬೆರಿ ಬೀಜಗಳ ರಹಸ್ಯ ಮತ್ತು ಅವುಗಳ ಅದ್ಭುತ ಆರೋಗ್ಯ ಪ್ರಯೋಜನಗಳು….
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಕೊರಟಗೆರೆ ಕ್ಷೇತ್ರದ ಅಭಿವೃದ್ದಿಗೆ 2573.67 ಕೋಟಿ ಅನುದಾನ ಬಳಕೆ: ಡಾ.ಜಿ.ಪರಮೇಶ್ವರ್
    ಕೊರಟಗೆರೆ February 7, 2023

    ಕೊರಟಗೆರೆ ಕ್ಷೇತ್ರದ ಅಭಿವೃದ್ದಿಗೆ 2573.67 ಕೋಟಿ ಅನುದಾನ ಬಳಕೆ: ಡಾ.ಜಿ.ಪರಮೇಶ್ವರ್

    By adminFebruary 7, 2023No Comments3 Mins Read
    g parameshwar

    ಕೊರಟಗೆರೆ: ಕಳೆದ ಐದು ವರ್ಷಗಳಲ್ಲಿ ಕೊರಟಗೆರೆ ವಿಧಾನಸಭಾ ಕ್ಷೇತ್ರದ ಶಾಸಕನಾಗಿ ಕುಡಿಯುವ ನೀರು, ರಸ್ತೆ, ಆರೋಗ್ಯ,ವಸತಿ ನಿರ್ಮಾಣ ಹಾಗೂ ಎತ್ತಿನ ಹೊಳೆ ಯೊಜನೆಯೂ ಸೇರಿದಂತೆ ವಿವಿಧ ಯೋಜನೆಗಳ ಅಡಿಯಲ್ಲಿ 2573.67 ಕೋಟಿ ರೂ.ಗಳ ಅನುದಾನದ ತಂದು 4080 ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ಮಾಜಿ ಡಿಸಿಎಂ ಹಾಗೂ ಕೊರಟಗೆರೆ ಶಾಸಕ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

    ಇಂದು ತಮ್ಮ ಐದು ವರ್ಷಗಳ ಸಾಧನೆಯ ದಾಖಲೆಗಳನ್ನು ಒಳಗೊಂಡ ಹೆಜ್ಜೆ ಗುರುತು ಎಂಬ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು,ಇದರಲ್ಲಿ ವಸತಿ ಯೋಜನೆಗಾಗಿ 95.75 ಕೋಟಿ, ಗಂಗಾ ಕಲ್ಯಾಣಕ್ಕೆ 1.53 ಕೋಟಿ, ಸಾಲ ಸೌಲಭ್ಯಕ್ಕೆ5.76 ಕೋಟಿ, ಇತರೆ ಇಲಾಖೆಗಳಿಂದ 95.21 ಕೋಟಿ ನೀಡಲಾಗಿದೆ. ಇದುವರೆಗೂ 19,501 ಜನರಿಗೆ ಸರಕಾರದ ಸೌಲಭ್ಯಗಳು ದೊರೆತಿವೆ. ಎತ್ತಿನ ಹೊಳೆ ಯೋಜನೆಯಡಿ 7 ಕಾಮಗಾರಿಗಳನ್ನು ಕೈಗೊಂಡು 1279.31 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ. ಪ್ರತಿ ಗ್ರಾಮ ಪಂಚಾಯಿತಿ, ಪ್ರತಿ ಗ್ರಾಮಕ್ಕೂ ಒಂದಿಲೊಂದು ಯೋಜನೆಯ ಮೂಲಕ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಈ ಸಾಧನೆಯ ಪುಸ್ತಕವನ್ನು ಪ್ರತಿ ಮನೆಗೆ ತಲುಪಿಸುವ ಕೆಲಸವನ್ನು ಮಾಡಲಿದ್ದೇನೆ ಎಂದರು.

    2018ರ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಬಾರದ ಹಿನ್ನೆಲೆಯಲ್ಲಿ ಜೆಡಿಎಸ್ ಜೊತೆ ಸೇರಿ ಮೈತ್ರಿ ಸರಕಾರ ರಚಿಸಲಾಯಿತು. ಕೊರಟಗೆರೆ ಜನರ ಆಶೀರ್ವಾದದಿಂದ ಸದರಿ ಸರಕಾರದಲ್ಲಿ ಉಪ ಮುಖ್ಯಮಂತ್ರಿಯಂತಹ ಉನ್ನತ ಹುದ್ದೆಯಲ್ಲಿ ಕೆಲಸ ಮಾಡುವಂತಹ ಸೌಭಾಗ್ಯವನ್ನು ಕೊರಟಗೆರೆ ಕ್ಷೇತ್ರದ ಜನತೆ ಒದಗಿಸಿಕೊಟ್ಟರು. ಅದಕ್ಕಾಗಿ ಕೊರಟಗೆರೆ ಕ್ಷೇತ್ರದ ಮತದಾರರಿಗೆ ಅಭಿನಂದನೆ ಸಲ್ಲಿಸುತ್ತೇನೆ.

    ಸಾಧ್ಯವಾದಷ್ಟು ಮಟ್ಟಿಗೆ ಜನರ ನಿರೀಕ್ಷೆಗೆ ಅನುಗುಣವಾಗಿ ಸರಕಾರದಿಂದ ಅನುದಾನ ತಂದು, ಜನರಿಗೆ ಮೂಲಭೂತ ಸೌಕರ್ಯ ಸೇರಿದಂತೆ ಸರಕಾರದ ಸವಲತ್ತು ಒದಗಿಸಲು ಶಕ್ತಿ ಮೀರಿ ಶ್ರಮಿಸಿರುವುದಾಗಿ ಡಾ.ಜಿ.ಪರಮೇಶ್ವರ್ ನುಡಿದರು.

    ಶಿಕ್ಷಣಕ್ಕೆ ಒತ್ತು ನೀಡುವ ಉದ್ದೇಶದಿಂದ ಏಕಲವ್ಯ ಶಾಲೆ, ಮುರಾರ್ಜಿ ದೇಸಾಯಿ,ಇಂದಿರಾಗಾಂಧಿ ವಸತಿಶಾಲೆ,ಅಂಬೇಡ್ಕರ್ ವಸತಿ ಶಾಲೆಯ ಮೂಲಕ ಸಾವಿರಾರು ಜನ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯುವಂತೆ ಮಾಡಿದ್ದೇನೆ.ನಮ್ಮ ತಾಲೂಕಿನ ಏಕಲವ್ಯ ಶಾಲೆಯಲ್ಲಿ ಕಲಿತ ನಾಲ್ವರು ಮಕ್ಕಳು ಐಐಟಿಗೆ ವ್ಯಾಸಾಂಗ ಮಾಡಲು ಆಯ್ಕೆಯಾಗಿರುವುದು ಸಂತೋಷದ ವಿಚಾರವಾಗಿದೆ.ಜನರಿಗೆ ಮನೆ ಬಾಗಿಲಲ್ಲಿಯೇ ಗುಣಮಟ್ಟದ ಆರೋಗ್ಯ ಸೇವೆ ದೊರಕಿಸಲು ಸುಮಾರು 12.50 ಕೋಟಿ ವೆಚ್ಚದಲ್ಲಿ ತೋವಿನಕೆರೆ ಆಸ್ಪತ್ರೆಯನ್ನು ಮೇಲ್ದರ್ಜೆಗೆರಿಸಲಾಗಿದೆ.ಇದರ ಜೊತೆಗೆ ಪಟ್ಟಣದಲ್ಲಿ ತಾಯಿ ಮತ್ತು ಮಗು ಆಸ್ಪತ್ರೆ ತೆರೆಯಲು ಪ್ರಸ್ತಾವನೆ ಸಲ್ಲಿಸಿದ್ದು,ಮಂಜೂರಾತಿಯ ಹಂತದಲ್ಲಿದೆ.ಶುದ್ದ ಕುಡಿಯುವ ನೀರು ಒದಗಿಸಲು ಜಲಜೀವನ್ ಮೀಷನ್ ಅಡಿಯಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಇದಕ್ಕೆ ಕುಡಿಯುವ ನೀರಿನ ಲಭ್ಯತೆಗಾಗಿ ಎತ್ತಿನಹೊಳೆ ಯೋಜನೆಯ ಮೂಲಕ ಕ್ಷೇತ್ರದ ಸುಮಾರು 190 ಕೆರೆಗಳನ್ನು ತುಂಬಿಸಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಡಾ.ಜಿ.ಪರಮೇಶ್ವರ್ ನುಡಿದರು.

    ಎಲ್ಲರಿಗೂ ಸೂರು ಒದಗಿಸುವ ಉದ್ದೇಶದಿಂದ ವಸತಿ ಸಚಿವರೊಂದಿಗೆ ಮಾತನಾಡಿ, ಸುಮಾರು 10 ಸಾವಿರ ಮನೆಗಳನ್ನು ಈ ಹಿಂದೆಯೇ ಮಂಜೂರು ಮಾಡಿಸಲಾಗಿತ್ತು. ಮತ್ತೆ ಹೆಚ್ಚುವರಿಯಾಗಿ 5,000 ಮನೆಗಳ ನಿರ್ಮಾಣಕ್ಕೆ ಮಂಜೂರಾತಿ ದೊರೆತಿದೆ. ಹೆಚ್ಚುವರಿ ಮನೆಗಳನ್ನು ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಹಂಚಿಕೆ ಮಾಡಲು ಅಗತ್ಯ ಕ್ರಮ ಕೈಗೊಂಡಿದ್ದೇನೆ.

    ನಾನು ಹೈ.ಫೈ,ವೈಟ್ ಕಾಲರ್ ರಾಜಕಾರಣಿ ಎಂಬ ವಿರೋಧಪಕ್ಷಗಳ ಟೀಕೆ ಟಿಪ್ಪಣಿಗಳಿಗೆ ತಲೆ ಕಡೆಸಿಕೊಳ್ಳದೆ, ವಿದ್ಯಾವಂತನಾಗಿ,ಜನರೊಂದಿಗೆ ಸದಾಕಾಲ ಬೆರತು ಕೆಲಸ ಮಾಡುತ್ತಾ ಬಂದಿದ್ದು,ನನ್ನ ಐದು ವರ್ಷಗಳ ರಿಪೊರ್ಟ್ ಕಾರ್ಡನ್ನು ಇಂದು ಜನರ ಮುಂದಿಟ್ಟಿದ್ದೇನೆ.ಪ್ರತಿ ಗ್ರಾ.ಪ.ವಾರು ಹೆಜ್ಜೆಯ ಗುರುತು ಕಿರು ಹೊತ್ತಿಗೆ ತಯಾರಾಗಿದ್ದು, ಪ್ರತಿ ಮನೆಗೂ ತಲುಪಿಸುವ ಕೆಲಸವನ್ನು ಮಾಡಲಿದ್ದೇನೆ ಎಂದು ಡಾ.ಜಿ.ಪರಮೇಶ್ವರ್ ಸ್ಪಷ್ಟ ಪಡಿಸಿದರು.

    ನನ್ನ ಇದುವರೆಗಿನ ಕಾರ್ಯಕ್ರಮಗಳಲ್ಲದೆ ಮುಂದೆಯೂ ಕೊರಟಗೆರೆ ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಚಿಂತನೆ ನಡೆಸಿದ್ದು,ಕಲಾವಿದರೇ ಹೆಚ್ಚಾಗಿರುವ ಈ ಊರಿನಲ್ಲಿ ಒಂದು ಸಾಂಸ್ಕೃತಿಕ ಭವನ ನಿರ್ಮಾಣದ ಗುರಿ ಇದೆ.ಅಲ್ಲದೆ ತೋಟಗಾರಿಕಾ ಕ್ಷೇತ್ರದಲ್ಲಿ ತೋಟಗಾರಿಕಾ ಪಿತಾಮಹ ಡಾ.ಎಂ.ಹೆಚ್.ಮರಿಗೌಡರ ಹೆಸರಿನಲ್ಲಿ ಸಂಶೋಧನಾ ಕೇಂದ್ರ ಸ್ಥಾಪನೆಯ ಗುರಿ ಹೊಂದಲಾಗಿದೆ.ಸಾಂಸ್ಕೃತಿಕ ಭವನಕ್ಕೆ ನಾನು ಡಿ.ಸಿ.ಎಂ. ಆಗಿದ್ದಾಗ ಸುಮಾರು ೧೬ ಕೋಟಿ ರೂ ವೆಚ್ಚದ ಯೋಜನೆ ಸಿದ್ದಪಡಿಸಿ, ಜಾಗವನ್ನು ಗುರುತಿಸಲಾಗಿತ್ತು.ಸರಕಾರದ ಬದಲಾವಣೆಯಿಂದ ಅದು ಸಾಧ್ಯವಾಗಲಿಲ್ಲ. ಮುಂದಿನ ದಿನಗಳಲ್ಲಿ ಅದು ಕೈಗೂಡಲಿದೆ ಎಂಬ ವಿಶ್ವಾಸವನ್ನು ಡಾ.ಜಿ.ಪರಮೇಶ್ವರ್ ವ್ಯಕ್ತಪಡಿಸಿದರು.

    ರಾಜ್ಯಸರಕಾರದ ಇತ್ತೀಚಿನ ನಡವಳಿಕೆಯನ್ನು ಗಮನಿಸಿದರೆ ಆರ್ಥಿಕವಾಗಿ ದಿವಾಳಿಯಾಗಿರುವ ಸೂಚನೆಗಳು ಕಂಡು ಬರುತ್ತಿದೆ.ಶಾಲಾ ಮಕ್ಕಳಿಗೆ ಶೂ, ಸಮವಸ್ತ್ರ ಪುಸ್ತಕಗಳನ್ನು ನೀಡಿಲ್ಲ. ಹೈಕೋರ್ಟ್ ಸಹ ಇವರ ನಡವಳಿಕೆಗೆ ಛೀಮಾರಿ ಹಾಕಿದೆ.

    ತುಮಕೂರು ವಿವಿಗೆ ಅನುದಾನ ನೀಡಿಲ್ಲ. ಎಸ್ಸಿಪಿ ಮತ್ತು ಟಿ.ಎಸ್ಪಿ ಅನುದಾನದಲ್ಲಿ ಹಾಸ್ಟೆಲ್ ಕಟ್ಟಡ ನಿರ್ಮಿಸಿರುವುದನ್ನು ಬಿಟ್ಟರೆ, ಬೇರೆ ಕಟ್ಟಡ ಇದುವರೆಗೂ ತಲೆ ಎತ್ತಿಲ್ಲ.ತುಮಕೂರು ರಾಯದುರ್ಗ, ತುಮಕೂರು-ದಾವಣಗೆರೆ ರೈಲ್ವೆ ಯೋಜನೆ ನೆನೆಗುದಿಗೆ ಬಿದ್ದಿವೆ. ಇದಕ್ಕೆ ಹಣಕಾಸಿನ ಕೊರತೆಯೇ ಕಾರಣ. ಸರಕಾರ ಈ ಸಾಲಿನ ಬಜೆಟ್‌ನಲ್ಲಿ ಈ ಎಲ್ಲಾ ಯೋಜನೆಗಳಿಗೆ ಹೆಚ್ಚುವರಿ ಹಣ ಮಂಜೂರು ಮಾಡಬೇಕು, ಹಾಗೆಯೇ ಸರಕಾರದ ಹಣಕಾಸಿನ ಪರಿಸ್ಥಿತಿಯ ಬಗ್ಗೆ ಜನರಿಗೆ ತಿಳಿಸಬೇಕೆಂದು ಡಾ.ಜಿ.ಪರಮೇಶ್ವರ್ ಆಗ್ರಹಿಸಿದರು.

    ವರದಿ: ಮಂಜುಸ್ವಾಮಿ.ಎಂ.ಎನ್. ಕೊರಟಗೆರೆ.

    admin
    • Website

    Related Posts

    ಕೊರಟಗೆರೆ: ಕಟ್ಟಡ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ

    August 25, 2026

    ಕೊರಟಗೆರೆ: ಯಾವೊಬ್ಬ ಮತದಾರರನ್ನೂ ಪಟ್ಟಿಯಿಂದ ಕೈ ಬಿಡದಂತೆ; ಚುನಾವಣಾ ನೋಂದಣಾಧಿಕಾರಿ ಸೋಮಪ್ಪ ಕಡಕೋಳ ಸೂಚನೆ

    August 25, 2026

    ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಗೊರವನಹಳ್ಳಿ ಮಹಾಲಕ್ಷ್ಮಿ ಅಮ್ಮನ ದರ್ಶನಕ್ಕೆ ಆಗಮಿಸಿದ ಭಕ್ತಸಾಗರ

    August 22, 2026

    Comments are closed.

    Our Picks

    ನೇಪಾಳದಲ್ಲಿ ಭೀಕರ ಪ್ರವಾಹದ ಅಬ್ಬರ: ಮತ್ತೊಂದು ಜಲಪ್ರಳಯದ ಭೀತಿ ಸೃಷ್ಟಿ

    August 28, 2026

    ಕಾವೇರಿ ನೀರು ವಿವಾದ: ಸುಪ್ರೀಂ ಕೋರ್ಟ್ ವಿಚಾರಣೆ ಬಳಿಕ ಮುಂದಿನ ನಡೆ ಕುರಿತು ನಿರ್ಧಾರ — ಸಚಿವ ರಾಮಲಿಂಗಾರೆಡ್ಡಿ

    August 13, 2026

    ಇತಿಹಾಸದಲ್ಲೇ ಪ್ರಥಮ: 80ನೇ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪುಕೋಟೆಯ ಮೇಲೆ ಮೊಳಗಲಿದೆ ‘ವಂದೇ ಮಾತರಂ’

    August 11, 2026

    ನಕಲಿ ಐಡಿ ಬಳಸಿ 25 ಮಹಿಳೆಯರ ಮದುವೆ: ‘ವಂಚಕನಿಗೆ ಮಗಳನ್ನು ಕೊಟ್ಟು ಮೋಸಹೋದೆ’ ಎಂದ ಬಿಜೆಪಿ ಶಾಸಕ!

    August 9, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಉದ್ಯೋಗ

    SSLC, PUC ಓದಿದವರಿಗೆ ಯಾದಗಿರಿ ಜಿಲ್ಲಾ ನ್ಯಾಯಾಲಯದಲ್ಲಿ ಉದ್ಯೋಗಾವಕಾಶ: ಅರ್ಜಿ ಸಲ್ಲಿಸಲು  ಸೆ.30 ಕೊನೆಯ ದಿನಾಂಕ

    August 29, 2026

    ಯಾದಗಿರಿ: ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಖಾಲಿ ಇರುವ ವಿವಿಧ ದರ್ಜೆಯ 24 ಹುದ್ದೆಗಳ ಭರ್ತಿಗೆ ಅರ್ಹ ಮತ್ತು ಆಸಕ್ತ…

    Toxic: ಯಶ್– ಗೀತೂ ಮೋಹನ್ ದಾಸ್ ಶ್ರಮವನ್ನು ಕೊಂಡಾಡಿದ ಹಾಲಿವುಡ್ ಆಕ್ಷನ್ ನಿರ್ದೇಶಕ ಜೆಜೆ ಪೆರ್ರಿ

    August 29, 2026

    ಆಯಾ ಕಾಲಕ್ಕೆ ಏನೇನು ಆಗಬೇಕೋ ಅದು ಆಗುತ್ತದೆ: ರಾಜ್ಯಾಧ್ಯಕ್ಷ ಆಯ್ಕೆ ವಿಚಾರಕ್ಕೆ ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿಕೆ

    August 29, 2026

    ಬೋರ್ ವೆಲ್ ಮೋಟರ್ ಆನ್ ಆಗುತ್ತಿದ್ದಂತೆಯೇ ಬಾಂಬ್ ಸ್ಫೋಟ; ಮತ್ತೊಂದು ಸಜೀವ ಬಾಂಬ್ ಪತ್ತೆ, ರೈತ ಅಪಾಯದಿಂದ ಪಾರು

    August 29, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.