Author: admin

ತುಮಕೂರು: ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಪ್ರಪ್ರಥಮವಾಗಿ ಪ್ರಜಾಪ್ರಭುತ್ವದಲ್ಲಿ ಕಂಡು ಕೇಳರಿಯದಂತಹ, ಕುತೂಹಲವಾದಂತಹ ಕಾರ್ಯಕ್ರಮ ಎಂದು ತುಮಕೂರು ಸಂಸದ ಜಿ.ಎಸ್.ಬಸವರಾಜ ಹೇಳಿದ್ದಾರೆ. ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು,  ಮುಂದೆ ಕಾದು ನೋಡೋಣ ಯಾವ ರೀತಿಯ ಪರಿಣಾಮವಾಗುತ್ತೆ ಅಂತ ಎಂದು ಹೇಳಿದರು. ಈ ರಾಜ್ಯದ ಬಂಡವಾಳ 54 ಸಾವಿರ ಕೋಟಿ ಬೇಕಾಗುತ್ತದೆ ಎಂದು ಹೇಳುತ್ತಾರೆ. ಆದರೆ ಹಣ ಹೊಂದಿಸಲು ಯಾರ ತಲೆ ಬೋಳಿಸುತ್ತಾರೆ ಅನ್ನೋದಯ ಮುಖ್ಯ ಎಂದರು. ಈ ನಡುವೆ ಜನರಿಗೆ ಗ್ಯಾರೆಂಟಿ ಕೊಡುತ್ತೇನೆ ಅಂತಾ ಹೇಳಿದ್ದು ಒಳ್ಳೆಯದೆ. ಜನರು ಕೆಲಸ ಮಾಡದೇ ಸುಖವಾಗಿರುವಂತೆ ಮುಖ್ಯಮಂತ್ರಿಗಳು ಹೇಳಿದ್ದಾರೆ ಎಂದು ತಿಳಿಸಿದರು. ಸುಖವಾಗಿರಿ, ಚೆನ್ನಾಗಿರಿ, ಒಳ್ಳೆ ಡ್ರೆಸ್ ಹಾಕೊಳಿ, ಕೋಟ್ ಹಾಕೋಳಿ ಎಂದಿದ್ದಾರೆ. 3 ಸಾವಿರ ತೆಗೆದುಕೊಂಡು ನಿರುದ್ಯೋಗಿಯಾಗಿ, ಶಾಶ್ವತವಾಗಿ ನಿರುದ್ಯೋಗಿಯಾಗಿ ಎಂದು ಮುಖ್ಯ ಮಂತ್ರಿಗಳು ಘೋಷಣೆ ಮಾಡಿದ್ದಾರೆ ಎಂದರು. ನಿರುದ್ಯೋಗಿಗಳಿಗೆ ಅಪ್ರೆಂಟಿಸ್ ಟ್ರೈನಿಂಗ್ ಕೊಟ್ಟು ಸ್ವಯಂ ಉದ್ಯೋಗ ಮಾಡುವಂತೆ ಉತ್ತೇಜನ ಕೊಡಬೇಕಿತ್ತು ಎಂದು ಹೇಳಿದರು. ಇನ್ನು ಮುಂಬರುವ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ…

Read More

ತುಮಕೂರು: ನಾವು ಐದು ವರ್ಷದವರೆಗೂ ಘೋಷಣೆ ಮಾಡಲಾಗಿರುವಂತಹ ಈ ಐದು  ಗ್ಯಾರಂಟಿ ಯೋಜನೆಗಳನ್ನು ಮುಂದುವರೆಸುತ್ತೇವೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ತಿಳಿಸಿದ್ದಾರೆ. ತುಮಕೂರಿನಲ್ಲಿ ಮಾತನಾಡಿದ ಅವರು. ನಮ್ಮ ನಾಯಕರಾದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಚುನಾವಣೆ ವೇಳೆ ಗ್ಯಾರಂಟಿ ಭರವಸೆ ಕೊಟ್ಟಿದ್ರು. ಕೊಟ್ಟ ಭರವಸೆಯಂತೆ ನಮ್ಮ ಗ್ಯಾರಂಟಿಗಳಿಗೆ ನಿನ್ನೆ ಅನುಷ್ಠಾನಕ್ಕೆ ತೀರ್ಮಾನ ಆಗಿದೆ ಎಂದರು. ಅದರ ಪ್ರೋಸಿಜರ್ ಬಗ್ಗೆ ನಿನ್ನೆ ಚರ್ಚೆ ಆಗಿದೆ. ಅನುಷ್ಠಾನ ಮಾಡೋದಕ್ಕೆ ಆರಂಭ ಮಾಡುತ್ತೇವೆ ಸಂಪನ್ಮೂಲಗಳ ಕ್ತೋಡೀಕರಣ ಪ್ರಶ್ನೆ ಎಲ್ಲರೂ ಎತ್ತಿದ್ರು ಎಂದರು. ವಿರೋಧ ಪಕ್ಷದವರು ಇದನ್ನು ಒಂದು ಅಸ್ತ್ರವಾಗಿ ಪ್ರಯೋಗ ಮಾಡಿದ್ರು. ಹಣಕಾಸು ವ್ಯಯ ಆಗದೇ, ಜನರ ಹಿತಾಸಕ್ತಿ ಗಮನದಲ್ಲಿ ಇಟ್ಟುಕೊಂಡು ಗ್ಯಾರಂಟಿ ಜಾರಿ ಮಾಡುತ್ತೇವೆ. ಅನಾವಶ್ಯಕವಾದ ಯೋಜನೆ, ಕಾರ್ಯಕ್ರಮ ಇದ್ದರೆ ಅದನ್ನು ಸ್ಥಗಿತ ಮಾಡುತ್ತೇವೆ ಎಂದರು. ಎಲ್ಲಾ ಯೋಜನೆಗಳ ಡಿಪಿಆರ್ ಮಾಡುವಾಗ ಎಚ್ಚರಿಕೆಯಿಂದ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಭಿವೃದ್ಧಿ ಕುಂಟಿತವಾಗದ ರೀತಿಯಲ್ಲಿ ಗ್ಯಾರಂಟಿ ಜಾರಿ ಮಾಡುತ್ತೇವೆ ಎಂದರು. ನಿಗಮ ಮಂಡಳಿ ಅನಗತ್ಯ ಇದ್ದರೆ ಅದನ್ನು…

Read More

ರದ್ದುಗೊಳಿಸಿದ್ದ ಆದೇಶಕ್ಕೆ ನೀಡಿದ್ದ ತಡೆಯಾಜ್ಞೆಯನ್ನು ಹೈಕೋರ್ಟ್‌ ಶುಕ್ರವಾರ ಮತ್ತೆ ವಿಸ್ತರಿಸಿದೆ.ಹಾಗಾಗಿ, ಗಡಿಪಾರು ಭೀತಿಯಲ್ಲಿದ್ದ ನಟ ಚೇತನ್‌ಗೆ ಹೈಕೋರ್ಟ್‌ನಿಂದ ಮತ್ತೆ ರಿಲೀಫ್ ಸಿಕ್ಕಂತಾಗಿದೆ. ಚೇತನ್ ಕುಮಾರ್ ಸಲ್ಲಿಸಿದ್ದ ಅರ್ಜಿ ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠದ ಮುಂದೆ ವಿಚಾರಣೆಗೆ ಬಂದಿತು. ಕೆಲಕಾಲ ವಾದ ಆಲಿಸಿದ ನ್ಯಾಯಪೀಠ, ಕೇಂದ್ರ ಸರಕಾರ ಒಸಿಐ ರದ್ದು ಮಾಡಿ ಹೊರಡಿಸಿದ್ದ ಆದೇಶಕ್ಕೆ ನೀಡಿದ್ದ ತಡೆಯಾಜ್ಞೆ ವಿಸ್ತರಿಸಿದ್ದಲ್ಲದೆ, ಚೇತನ್ ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಸರಕಾರಕ್ಕೆ ಸೂಚನೆ ನೀಡಿ ವಿಚಾರಣೆಯನ್ನು ಮುಂದೂಡಿತು. 2022ರ ಜೂ.8ರಂದು ನೋಟಿಸ್ ಜಾರಿ: ಅರ್ಜಿದಾರರ ಪರ ವಕೀಲರು, ‘ನ್ಯಾಯಾಲಯ ವಿಧಿಸಿರುವ ಷರತ್ತುಗಳನ್ನು ಅರ್ಜಿದಾರರು ಪಾಲಿಸುತ್ತಿದ್ದಾರೆ. ಹಾಗಾಗಿ, ಹಿಂದೆ ನೀಡಿರುವ ತಡೆಯಾಜ್ಞೆಯನ್ನು ವಿಸ್ತರಿಸಬೇಕು ಎಂದು ಕೋರಿದರು.2018ರಲ್ಲಿ ಚೇತನ್‌ಗೆ ಓವರ್‌ಸ್ ಸಿಟಿಜನ್ ಆಫ್ ಇಂಡಿಯಾ (ಒಸಿಐ) ಕಾರ್ಡ್ ನೀಡಧಿಲಾಗಿತ್ತು. ಆದರೆ, ಅವರ ವಿರುದ್ಧ ಸಮುದಾಯಗಳ ನಡುವೆ ದ್ವೇಷ ಮೂಡಿಸುವ ಯತ್ನ ಮತ್ತು ಭಾರತ ವಿರೋಧಿ ಚಟುವಟಿಕೆ ಆರೋಪಗಳಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಚೇತನ್‌ಗೆ 2022ರ ಜೂ. 8ರಂದು ನೋಟಿಸ್ ನೀಡಿ ಉತ್ತರ…

Read More

ಬೆಂಗಳೂರು:ಜೂನ್ 03: ಕರ್ನಾಟಕ ವಕೀಲರ ಮಂಡಳಿ ಅಧ್ಯಕ್ಷ ಎಚ್.ಎಲ್.ವಿಶಾಲ ರಘು ಹಾಗೂ ಸದಸ್ಯರು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಸೌಹಾರ್ದಯುತ ಮಾತುಕತೆ ನಡೆಸಿದರು. ರಾಜಸ್ಥಾನದಲ್ಲಿ ವಕೀಲರ ರಕ್ಷಣಾ ಕಾಯ್ದೆಯನ್ನು ಜಾರಿಗೆ ತಂದಿದ್ದು, ರಾಜ್ಯದಲ್ಲಿ ಈ ಕಾಯ್ದೆಯನ್ನು ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಕಾಯ್ದೆಯ ಪ್ರತಿಯನ್ನು ತರಿಸಿಕೊಂಡು ಅಧ್ಯಯನ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು. ವಕೀಲರ ಸಂಘಕ್ಕೆ ಶಾಶ್ವತವಾದ ಸ್ಥಳವಿಲ್ಲವಾಗಿದ್ದು, ಪ್ರಸ್ತುತ ಪ್ರೆಸ್ ಕ್ಲಬ್ ಬಳಿ ಇರುವ ಸ್ಥಳದಲ್ಲಿಯೇ ಶಾಶ್ವತವಾಗಿ ಸ್ಥಳಾವಕಾಶ ಮಾಡಿಕೊಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆಂದು ರೂಪಿಸಲಾದ ಮುಖ್ಯಮಂತ್ರಿಗಳ 1ಲಕ್ಷ ಬೆಂಗಳೂರು ವಸತಿ ಯೋಜನೆ ಗೊಂದಲದ ಗೂಡಾಗಿದ್ದು, ನಿತ್ಯ ಹತ್ತಾರು ಮಂದಿ ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತಕಚೇರಿಗೆ ಭೇಟಿ ನೀಡಿ ಬರಿಗೈಯಲ್ಲಿ ಹಿಂತಿರುಗುತ್ತಿದ್ದಾರೆ. ಕಳೆದ 3 ವರ್ಷಗಳಿಂದ ಮುಖ್ಯಮಂತ್ರಿಗಳ 1 ಲಕ್ಷ ಬೆಂಗ ಳೂರು ವಸತಿ ಯೋಜನೆಯು ಅನುಷ್ಠಾನಗೊಂಡಿದ್ದು, ಆರಂಭದಲ್ಲಿ ಜನ ಸಾಮಾನ್ಯರಿಗೆ ಸ್ಪಂದಿಸಿ ಹಲವು ಪ್ಲಾಟ್‌ಗಳನ್ನು ಹಂಚಿಕೆ ಮಾಡಲಾಗಿದೆ. ಆದರೆ, ಕಳೆದ 4 ತಿಂಗಳುಗಳಿಂದ ಈ ಯೋಜನೆಯು ಜನ ಸಾಮಾನ್ಯರಿಗೆ ಸೂಕ್ತ ರೀತಿಯಲ್ಲಿ ತಲುಪುತ್ತಿಲ್ಲ. 2022ರ ಡಿಸೆಂಬರ್‌ನಲ್ಲಿ ಯೋಜನೆಯಡಿ ಪ್ಲಾ ಬೇಕಾಗಿರುವವರು ಅರ್ಜಿ ಸಲ್ಲಿಸಿ ಎಂದು ನಿಗಮ ಸೂಚಿಸಿತ್ತು. ಅದರಂತೆ ಸಾವಿರಾರು ಮಂದಿ ಅರ್ಜಿ ಸಲ್ಲಿಸಿದ್ದರು.ಇದೀಗ 2 ಬಿಎಚ್‌ಕೆ ಫ್ಲಾಟ್ ಬೇಕಾದ ಎಲ್ಲರೂ ತಾವು ಈ ಹಿಂದೆ ಸಲ್ಲಿಸಿರುವ ಅರ್ಜಿ ರದ್ದುಪಡಿಸಿ ಹೊಸ ಅರ್ಜಿ ಸಲ್ಲಿಸಬೇಕು.1 ಬಿಎಚ್‌ಕೆಗೆ ಅರ್ಜಿ ಸಲ್ಲಿಸಿರುವ ಕೆಲ ಫಲಾನುಭವಿಗಳು ಮತ್ತೊಮ್ಮೆ ಅರ್ಜಿ ಸಲ್ಲಿಸಬೇಕಾಗುತ್ತದೆ ಎಂದು ನಿಗಮದ ಅಧಿಕಾರಿಗಳು ಸೂಚಿಸಿದ್ದಾರೆ. ಇದೀಗ 700ಕ್ಕೂ ಅಧಿಕ ಫಲಾನುಭವಿಗಳು ರಾಜೀವ್ ಗಾಂಧಿ…

Read More

ಕುಸ್ತಿಪಟುಗಳನ್ನು ಬೆಂಬಲಿಸಿ 1983ರ ಕ್ರಿಕೆಟ್ ವಿಶ್ವಕಪ್ ವಿಜೇತ ತಂಡದ ಸದಸ್ಯರು ನೀಡಿರುವ ಹೇಳಿಕೆಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ತಂಡದ ಸದಸ್ಯ ಹಾಗೂ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಹೇಳಿದ್ದಾರೆ. ಕ್ರೀಡೆಯಲ್ಲಿ ರಾಜಕೀಯ ಬೆರೆಸಬಾರದು ಎಂದಿರುವ ರೋಜರ್ ಬಿನ್ನಿ, ಸದ್ಯ ಕುಸ್ತಿಪಟುಗಳ ಪ್ರತಿಭಟನೆಯ ಸನ್ನಿವೇಶದ ಕುರಿತು ಹೇಳಿಕೆ ನೀಡಿದ್ದಾರೆ ಎಂಬ ಮಾಧ್ಯಮ ವರದಿಗಳು ಸುಳ್ಳು ಎಂದು ಸುದ್ದಿಸಂಸ್ಥೆಗೆ ಸ್ಪಷ್ಟಪಡಿಸಿದ್ದಾರೆ. ಮಾಧ್ಯಮ ವರದಿಗಳಿಗೆ ವಿರುದ್ಧವಾಗಿ, ಕುಸ್ತಿಪಟುಗಳ ಪ್ರತಿಭಟನೆಗೆ ಸಂಬಂಧಿಸಿದಂತೆ ನಾನು ಯಾವುದೇ ಹೇಳಿಕೆ ನೀಡಿಲ್ಲ. ಸಮರ್ಥ ಅಧಿಕಾರಿಗಳು ಸಮಸ್ಯೆಯನ್ನು ಪರಿಹರಿಸಲು ಕೆಲಸ ಮಾಡುತ್ತಿದ್ದಾರೆ ಎಂದು ನಾನು ನಂಬುತ್ತೇನೆ. ಮಾಜಿ ಕ್ರಿಕೆಟಿಗನಾಗಿ, ಕ್ರೀಡೆಯನ್ನು ರಾಜಕೀಯದೊಂದಿಗೆ ಬೆರೆಸಬಾರದು ಎಂದು ನಾನು ಬಯಸುತ್ತೇನೆ. ರೋಜರ್ ಬಿನ್ನಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ನಿನ್ನೆ, 1983 ರ ವಿಶ್ವಕಪ್ ವಿಜೇತ ಭಾರತೀಯ ಕ್ರಿಕೆಟ್ ತಂಡದ ಸದಸ್ಯರು ವ್ರೆಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಲೈಂಗಿಕ ದೌರ್ಜನ್ಯದ ಆರೋಪದ ಮೇಲೆ ಬಂಧಿಸುವಂತೆ ಒತ್ತಾಯಿಸಿ ಪ್ರತಿಭಟನಾ ಕುಸ್ತಿಪಟುಗಳನ್ನು…

Read More

ತುಮಕೂರು: ನಗರದಿಂದ ಮೈದಾಳ, ಮಾದಗೊಂಡನಹಳ್ಳಿ ಮಾರ್ಗವಾಗಿ ಊರ್ಡಿಗೆರೆಯವರೆಗೂ ಸಂಚರಿಸುವ ಗ್ರಾಮೀಣ ಸಾರಿಗೆ ಬಸ್ ಸರಿಯಾದ ಸಮಯಕ್ಕೆ ಸಂಚರಿಸುತ್ತಿಲ್ಲ, ಈ ಬಗ್ಗೆ ಕ್ರಮವಹಿಸುವಂತೆ ಕೆಎಸ್ ಆರ್ ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಹೈಕೋರ್ಟ್ ವಕೀಲರಾದ ರಮೇಶ್ ನಾಯಕ್ ಎಲ್. ಮನವಿ ಮಾಡಿದ್ದಾರೆ. ಈ ಮಾರ್ಗದಲ್ಲಿ ಹಲವಾರು ದಶಕಗಳಿಂದ ಐದು ಟ್ರಿಪ್ ಬಸ್ ವ್ಯವಸ್ಥೆ ಇದ್ದು, ಬೆಳಗ್ಗೆ 8:15, 10 ಗಂಟೆ ಹಾಗೂ ಮಧ್ಯಾಹ್ನ 2 ಗಂಟೆ, ಸಂಜೆ 5 ಗಂಟೆ ಹಾಗೂ ರಾತ್ರಿ 8 ಗಂಟೆಯ ಬಸ್ ಗಳು ಸರಿಯಾದ ಸಮಯಕ್ಕೆ ಸಂಚರಿಸುತ್ತಿಲ್ಲ. ಇದರಿಂದಾಗಿ ಈ ಮಾರ್ಗದ ವಿದ್ಯಾರ್ಥಿಗಳು ಹಾಗೂ ಗ್ರಾಮೀಣ ಭಾಗದ ಬಡ ಜನರಿಗೆ ತೊಂದರೆಯಾಗುತ್ತಿದೆ, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ. ಬೆಳಗ್ಗೆ 7 ಗಂಟೆ, 8:15 ಗಂಟೆ, 10 ಗಂಟೆ, ಮಧ್ಯಾಹ್ನ 2 ಗಂಟೆ, ಸಂಜೆ 5 ಗಂಟೆ, ರಾತ್ರಿ 7 ಗಂಟೆ ಪ್ರತಿ ದಿನ ಈ ಸಮಯದಲ್ಲಿ ತುಮಕೂರಿನಿಂದ ಹೊರಟು ಮೈದಾಳ ಮಾರ್ಗವಾಗಿ ಊರ್ಡಿಗೆರೆಯಿಂದ…

Read More

ಸಿಂಗಾಪುರದ ಮಾರಿಯಮ್ಮನ ದೇವಸ್ಥಾನದಲ್ಲಿ ದೇವಾಲಯದ ಆಭರಣಗಳನ್ನು ಗಿರವಿ ಇಟ್ಟ ಭಾರತೀಯ ಪ್ರಧಾನ ಅರ್ಚಕನಿಗೆ ಆರು ವರ್ಷಗಳ ಜೈಲು ಶಿಕ್ಷೆ ಮುಖ್ಯ ಕಾರ್ಮಿ ಕಂದಸಾಮಿ ಸೇನಾಪತಿ ಎರಡು ಮಿಲಿಯನ್ ಸಿಂಗಾಪುರ್ ಡಾಲರ್ ಮೌಲ್ಯದ ಆಭರಣಗಳನ್ನು (ಸುಮಾರು 12 ಕೋಟಿ ರೂ.) ಗಿರವಿ ಇಟ್ಟರು. ಜನರಲ್ ವಿರುದ್ಧ ನಂಬಿಕೆ ದ್ರೋಹ ಮತ್ತು ಜವಾಬ್ದಾರಿ ದುರುಪಯೋಗದ ಆರೋಪಗಳನ್ನು ಹೊರಿಸಲಾಗಿದೆ. ಇದಲ್ಲದೇ ಇತರ ಆರು ಆರೋಪಗಳನ್ನೂ ವಿಚಾರಣೆ ವೇಳೆ ಪರಿಗಣಿಸಲಾಗಿತ್ತು. 2016 ರಿಂದ 2020 ರವರೆಗೆ, ಸೇನಾಪತಿ ಅನೇಕ ಬಾರಿ ತಿರುವಾಭರಣವನ್ನು ಗಿರವಿ ಇಟ್ಟಿದ್ದರು. ಆದರೆ ಲೆಕ್ಕ ಪರಿಶೋಧನೆಯ ವೇಳೆ ಸಾಲ ಮಾಡಿ ಆಭರಣಗಳನ್ನು ವಾಪಸ್ ತೆಗೆದುಕೊಂಡು ದೇವಸ್ಥಾನಕ್ಕೆ ತರುವುದು ವಾಡಿಕೆ. 2016ರಲ್ಲೇ 66 ಪವನ್ ಚಿನ್ನಾಭರಣಗಳನ್ನು 172 ಬಾರಿ ಗಿರವಿ ಇಟ್ಟಿದ್ದರು. 2016 ರಿಂದ 2020 ರವರೆಗೆ ಸೇನಾಪತಿ 14 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಪಡೆದಿದ್ದಾರೆ. ಮಾರ್ಚ್ 2020 ರಲ್ಲಿ, ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಆಡಿಟ್ ವಿಳಂಬವಾಯಿತು, ನಂತರ ಜೂನ್‌ನಲ್ಲಿ ಆಡಿಟ್ ನಡೆಸಲು ನಿರ್ಧರಿಸಲಾಯಿತು,…

Read More

ಅಮೆರಿಕದ ಹೂಡಿಕೆ ಸಂಸ್ಥೆ ಮಾರ್ಗನ್ ಸ್ಟಾನ್ಲಿ ವರದಿಯ ಪ್ರಕಾರ, ಭಾರತವು 2014 ರಿಂದ ವೇಗವಾಗಿ ಬೆಳೆಯುತ್ತಿದೆ. ವರದಿಯ ಪ್ರಕಾರ, ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದಲ್ಲಿ, ಭಾರತವು ವಿಶ್ವ ಭೂಪಟದಲ್ಲಿ ಪ್ರಮುಖ ಸ್ಥಾನವನ್ನು ಗಳಿಸಿದೆ ಮತ್ತು ಮುಂಬರುವ ವರ್ಷಗಳಲ್ಲಿ ಏಷ್ಯಾ ಮತ್ತು ಪ್ರಪಂಚದ ಬೆಳವಣಿಗೆಯಲ್ಲಿ ಪ್ರಮುಖ ಅಂಶವಾಗಲಿದೆ. ಮುಂದಿನ ದಶಕದಲ್ಲಿ ಭಾರತದ ಬೆಳವಣಿಗೆಯು 2007-11ರಲ್ಲಿ ಚೀನಾದ ಬೆಳವಣಿಗೆಯಂತೆಯೇ ಇರುತ್ತದೆ. ಜಿಡಿಪಿ ಮತ್ತು ಉತ್ಪಾದನಾ ವಲಯದ ಬೆಳವಣಿಗೆ ಭಾರತಕ್ಕೆ ಧನಾತ್ಮಕವಾಗಿರುತ್ತದೆ,’’ ಎಂದು ವರದಿ ಹೇಳಿದೆ. 2013ರಲ್ಲಿದ್ದ ಭಾರತಕ್ಕಿಂತ ಇಂದು ಭಾರತ ಭಿನ್ನವಾಗಿದೆ ಎಂದು ‘ಭಾರತವು ಒಂದು ದಶಕದಲ್ಲಿ ಹೇಗೆ ಪರಿವರ್ತನೆಯಾಯಿತು’ ಎಂಬ ಶೀರ್ಷಿಕೆಯ ವರದಿ ಹೇಳುತ್ತದೆ. 2014ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರ ವಹಿಸಿಕೊಂಡ ನಂತರ ಆಗಿರುವ 10 ಪ್ರಮುಖ ಬದಲಾವಣೆಗಳನ್ನೂ ವರದಿ ಒಳಗೊಂಡಿದೆ. ಕಾರ್ಪೊರೇಟ್ ತೆರಿಗೆಯಲ್ಲಿ ಸಮಾನತೆಯನ್ನು ತಂದರು. ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಹೂಡಿಕೆ ವೇಗಗೊಂಡಿದೆ. ಹತ್ತಕ್ಕೂ ಹೆಚ್ಚು ಕೇಂದ್ರ ಮತ್ತು ರಾಜ್ಯ ತೆರಿಗೆಗಳನ್ನು ಒಳಗೊಳ್ಳುವ ಮೂಲಕ ಏಕೀಕೃತ ತೆರಿಗೆ ವ್ಯವಸ್ಥೆಯನ್ನು ಜಿಎಸ್‌ಟಿ ಅಡಿಯಲ್ಲಿ…

Read More

ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಒಡಿಶಾ ರೈಲು ದುರಂತಕ್ಕೆ ಶೋಕಾಚರಣೆಯ ದಿನವನ್ನು ಘೋಷಿಸಿದ್ದಾರೆ. ಬಹನಾಗಾದಲ್ಲಿ ಸಂಭವಿಸಿದ ರೈಲು ಅಪಘಾತದ ಹಿನ್ನೆಲೆಯಲ್ಲಿ ಜೂನ್ 3 ರಂದು ರಾಜ್ಯಾದ್ಯಂತ ಶೋಕಾಚರಣೆಯನ್ನು ಘೋಷಿಸಲಾಗಿದೆ ಎಂದು ಒಡಿಶಾ ಸರ್ಕಾರದ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಟ್ವೀಟ್ ಮಾಡಿದೆ. ಅಲ್ಲದೆ, ಅಪಘಾತ ಸಂತ್ರಸ್ತರಿಗಾಗಿ ನಿನ್ನೆ ರಾತ್ರಿ 500 ಯೂನಿಟ್ ರಕ್ತ ಸಂಗ್ರಹಿಸಲಾಗಿದೆ ಎಂದು ಮುಖ್ಯ ಕಾರ್ಯದರ್ಶಿ ಪ್ರದೀಪ್ ಜೆನಾ ಮಾಹಿತಿ ನೀಡಿದ್ದಾರೆ. ಪ್ರಸ್ತುತ 900 ಯೂನಿಟ್ ರಕ್ತ ದಾಸ್ತಾನು ಇದೆ ಎಂದು ಮಾಹಿತಿ ನೀಡಿದರು. ಅಪಘಾತದಲ್ಲಿ ಗಾಯಗೊಂಡವರಿಗೆ ರಕ್ತದಾನ ಮಾಡಿದ ಸ್ವಯಂಸೇವಕರಿಗೆ ಕೃತಜ್ಞತೆ ಸಲ್ಲಿಸಿದರು. ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನರು ರಕ್ತದಾನ ಮಾಡಲು ಆಸ್ಪತ್ರೆಗಳಿಗೆ ಭೇಟಿ ನೀಡುತ್ತಿದ್ದಾರೆ. ಒಡಿಶಾದಲ್ಲಿ ನಿನ್ನೆ ಸಂಜೆ 7 ಗಂಟೆ ಸುಮಾರಿಗೆ ಸಂಭವಿಸಿದ ರೈಲು ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 233 ಕ್ಕೆ ತಲುಪಿದೆ. 900ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಐದು ರಕ್ಷಣಾ ತಂಡಗಳನ್ನು ಬಾಲಸೂರ್‌ಗೆ…

Read More