Subscribe to Updates
Get the latest creative news from FooBar about art, design and business.
- ವಿಜೃಂಭಣೆಯಿಂದ ನೆರವೇರಿದ ಬೇಲದಕುಪ್ಪೆ ಶ್ರೀಮಹದೇಶ್ವರಸ್ವಾಮಿ ದೇವಸ್ಥಾನ ಜಾತ್ರಾ ಮಹೋತ್ಸವ
- ಸರ್ಕಾರಿ ಶಾಲೆಗಳು ಬೇಡವಾಗಿದೆ, ಕಾರಣ ಅರಿಯಬೇಕಿದೆ: ಶಾಸಕ ಎಂ.ಟಿ.ಕೃಷ್ಣಪ್ಪ
- ಸಾಹಿತಿಗಳು ಸರ್ಕಾರದ ಆಶ್ರಯ ಪಡೆಯುವುದನ್ನು ನಿಲ್ಲಿಸಬೇಕು: ಬಂಜಗೆರೆ ಜಯಪ್ರಕಾಶ್
- ದುಪ್ಪಟ್ಟು ಹಣ ಲಾಭ ಗಳಿಸುವ ಆಮಿಷಕ್ಕೆ ಬಲಿಯಾಗಿ 14 ಲಕ್ಷ ರೂ. ಕಳೆದುಕೊಂಡ ಹೊಟೇಲ್ ಸಿಬ್ಬಂದಿ!
- ಎರಡು ಲಾರಿಗಳ ನಡುವೆ ಅಪಘಾತ: ಲಾರಿಯಿಂದ ಚೆಲ್ಲಿದ ಗೋದಿ ಕಂಡವರ ಪಾಲು!
- ಮಧುಗಿರಿ: ಸೊಳ್ಳೆಗಳ ವಿಪರೀತ ಕಾಟಕ್ಕೆ ಬಳಲಿ ಬೆಂಡಾದ ಜನ
- ಮಧುಗಿರಿ: ಬಿಜೆಪಿ ಒಬಿಸಿ ಮೋರ್ಚಾ ಸಭೆ
- ಬೀದರ್ | ಕಬ್ಬು ಬೆಲೆ ನಿಗದಿಗೆ ಆಗ್ರಹಿಸಿ ರೈತನಿಂದ ಉರುಳು ಸೇವೆ
Author: admin
ಸಿನಿಮಾ ರಂಗದಲ್ಲಿ ಲೈಂಗಿಕ ಕಿರುಕುಳದ ವಿಚಾರಕ್ಕೆ ಸಂಬಂಧಿಸಿದಂತೆ ಲೇಡಿ ಸೂಪರ್ ಸ್ಟಾರ್ ಎಂದು ಕರೆಯಲ್ಪಡುವ ನಟಿ ನಯನತಾರಾ ಮಾತನಾಡಿದ್ದು, ಈ ಬಗ್ಗೆ ಪತ್ರಿಕೆಯೊಂದರ ಸಂದರ್ಶನದ ವೇಳೆ ಅವರು ವಿಷಯ ಬಹಿರಂಗ ಮಾಡಿದ್ದಾರೆ. ದೊಡ್ಡ ಚಲನ ಚಿತ್ರವೊಂದರಲ್ಲಿ ನಟಿಸಲು ಆಫರ್ ನೀಡಿದ ಡೈರೆಕ್ಟರ್ ವೋರ್ವ, ಅವಕಾಶಕ್ಕೆ ಪ್ರತಿಯಾಗಿ ತನ್ನೊಂದಿಗೆ ದೈಹಿಕವಾಗಿ ಸಹಕರಿಸಬೇಕು ಎಂದು ಕೇಳಿದ್ದು, ಆತನ ಮಾತನ್ನು ತಿರಸ್ಕರಿಸಿದ ನಯನತಾರಾ, ಖಡಕ್ ಆಗಿ ಪ್ರತ್ಯುತ್ತರ ನೀಡಿದ್ದರಂತೆ! ನನಗೆ ನನ್ನ ನಟನಾ ಸಾಮರ್ಥ್ಯದ ಬಗ್ಗೆ ವಿಶ್ವಾಸವಿದೆ. ಚಿತ್ರದಲ್ಲಿ ಪಾತ್ರ ನೀಡುವ ವಿಚಾರದಲ್ಲಿ ಬೇರೆ ಯಾವುದನ್ನೂ ನನ್ನಿಂದ ನಿರೀಕ್ಷೆ ಮಾಡಬೇಡಿ ಎಂದು ನೇರವಾಗಿ ಹೇಳಿರುವುದಾಗಿ ನಯನತಾರಾ ಹೇಳಿದರು. ಸದ್ಯ ನಟಿ ನಯನತಾರಾ ಜವಾನ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಶಾರುಖ್ ಖಾನ್ ಜೊತೆಗೆ ವಿಜಯ್ ಸೇತುಪತಿ, ದೀಪಿಕಾ ಪಡುಕೋಣೆ, ಪ್ರಿಯಾಮಣಿ, ಸೋನಿಯಾ ಮಲ್ಹೋತ್ರಾ ಸುನೀಲ್ ಗ್ರೋವರ್ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್…
ಪಾವಗಡ: ತಾಲ್ಲೂಕಿನ ವೈ.ಎನ್.ಹೊಸಕೋಟೆ ಕ್ಲಸ್ಟರ್ ವ್ಯಾಪ್ತಿಯಲ್ಲಿನ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಆಯ್ದ 120 ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸಿ ವಿವಿಧ ಕೌಶಲ್ಯಗಳನ್ನು ವಿಶೇಷವಾಗಿ ಕಲಿಸಿ, ನಲಿಯುತ್ತಾ ಕಲಿಯುತ್ತಾ ಪ್ರತಿಭೆಯನ್ನು ಪ್ರದರ್ಶಿಸುವ ಹಬ್ಬವೇ ಕಲಿಕಾ ಹಬ್ಬ ಎಂದು ಶಿಕ್ಷಕರ ಸಂಘದ ಗೌರವಾಧ್ಯಕ್ಷ ಐ.ಎ.ನಾರಾಯಣಪ್ಪ ತಿಳಿಸಿದರು. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ವೈ.ಎನ್.ಹೊಸಕೋಟೆ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬದಲ್ಲಿ ಮಾತನಾಡಿದ ಅವರು, ಅವಕಾಶಗಳು ಎಲ್ಲರಿಗೂ ದೊರೆಯುವುದಿಲ್ಲ. ದೊರೆತಾಗ ಸದ್ವಿನಿಯೋಗ ಮಾಡಿಕೊಂಡು ಬೆಳೆಯಬೇಕು. ಇಲ್ಲಿ ಕಲಿತ ಕೌಶಲ್ಯವನ್ನು ನಿಮ್ಮ ಇನ್ನಿತರೆ ಸಂಗಡಿಗರಿಗೂ ಕಲಿಸಿ ಅವರೊಂದಿಗೆ ನೀವು ಪ್ರಗತಿ ಕಾಣಬೇಕು. ಶಿಕ್ಷಕರು ಈ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಶಂಕರಪ್ಪ, ಕಲಿಕೆ ನಿರಂತರ ಪ್ರಕ್ರಿಯೆ. ವಿದ್ಯೆಯನ್ನು ಕಲಿತು ಹಂಚಿದಷ್ಟು ಅದು ದ್ವಿಗುಣವಾಗುತ್ತದೆ. ಹಾಗಾಗಿ ಇಲ್ಲಿ ಕಲಿತ ವಿದ್ಯಾರ್ಥಿಗಳು ಸಹಪಾಠಿಗಳಿಗೂ ಕಲಿಸಬೇಕು ಎಂದರು. ಶಿಕ್ಷಕರ ಸಂಘದ ರಾಜ್ಯ ನಿರ್ದೇಶಕ ರಾಮಾಂಜಿ ಮಾತನಾಡಿ, ಈ ಕಲಿಕಾ ಹಬ್ಬದಲ್ಲಿ…
ತುರುವೇಕೆರೆ: ತಾಲೂಕು ಕಸಬಾ ಹೋಬಳಿ ಎನ್.ಮಾವಿನಹಳ್ಳಿ ಗ್ರಾಮ ನಿವಾಸಿ ಮೂಡಲಗಿರಿಯಪ್ಪ ಎಂಬ ವ್ಯಕ್ತಿಯೊಬ್ಬರು ತನ್ನ ಎರಡು ಮೂತ್ರಪಿಂಡಗಳ ವೈಫಲ್ಯದಿಂದ ತೀವ್ರ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾರೆ. ಸುಮಾರು 2 ವರ್ಷಗಳಿಂದಲೂ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇದೀಗ ಚಿಕಿತ್ಸೆ ವೆಚ್ಚ ಭರಿಸಲಾಗದೇ ಅವರು ಕಂಗಾಲಾಗಿದ್ದು, ದಾನಿಗಳಿಂದ ಸಹಾಯ ಹಸ್ತಚಾಚಿದ್ದಾರೆ. ಮೂಡಲಗಿರಿಯಪ್ಪನವರಿಗೆ ಅವರ ಪತ್ನಿ ಮೂತ್ರಪಿಂಡ ದಾನ ಮಾಡಲು ಮುಂದಾಗಿದ್ದಾರೆ. ಮೂತ್ರಪಿಂಡ ಅಳವಡಿಸಲು ಸುಮಾರು 10 ಲಕ್ಷಕ್ಕೂ ಅಧಿಕ ಖರ್ಚಾಗಲಿದ್ದು, ಕೂಲಿ ಮಾಡಿ ಜೀವನ ಸಾಗಿಸುತ್ತಿರುವ ಇವರ ಬಳಿಯಲ್ಲಿ ಅಷ್ಟೊಂದು ಹಣವನ್ನು ಹೊಂದಿಸುವುದು ಕಷ್ಟಕರವಾಗಿದೆ. ಹೀಗಾಗಿ ದಂಪತಿಯು ಸಹೃದಯರ ನೆರವು ಕೇಳಿದ್ದು, ಸಾರ್ವಜನಿಕರು ತಮ್ಮಿಂದಾದ ಸಹಾಯವನ್ನು ಮಾಡುವ ಮೂಲಕ ಒಂದು ಕುಟುಂಬದ ಆಧಾರವಾಗಿರುವ ವ್ಯಕ್ತಿಯನ್ನು ಉಳಿಸಿಕೊಳ್ಳಲು ನೆರವು ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ನೆರವು ನೀಡುವವರು ಸಂತ್ರಸ್ತರ ಬ್ಯಾಂಕ್ ವಿವರಗಳಿಗೆ ನೆರವನ್ನು ನೇರವಾಗಿ ನೀಡಬಹುದು. ವಿವರ ಹೀಗಿದೆ: SBI ಖಾತೆ ಸಂಖ್ಯೆ: 64 11 9 2009 74 IFSC ಕೋಡ್ SBIN 0 0…
ಜಾತ್ಯಾತೀತ ಜನತಾದಳ ಉತ್ತರ ಕರ್ನಾಟಕದಲ್ಲಿ ತನ್ನದೇಯಾದ ಶಕ್ತಿಯನ್ನು ಹೊಂದಿದೆ ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸಲು ಚುನಾವಣೆಯಲ್ಲಿ ತೊಡಗಿಕೊಳ್ಳುವಂತೆ ಮಾಡಲು ನಾನು ಬಂದಿದ್ದೇನೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿದ್ದಾರೆ. ಖಾನಾಪುರ್ ಪಟ್ಟಣದಲ್ಲಿ ಜೆಡಿಎಸ್ ಅಭ್ಯರ್ಥಿ ನಾಸಿರ್ ಭಗವಾನ್ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಟಿಕೆಟ್ ಹಂಚಿಕೆಯ ಕುರಿತು ಪಕ್ಷದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿದೆ ಪ್ರಶ್ನೆಗೆ ಉತ್ತರಿಸಿದವರು ಹಾಸನದಲ್ಲಿ ಭವಾನಿ ರೇವಣ್ಣ ಅಭ್ಯರ್ಥಿ ಕುರಿತು ಈಗಾಗಲೇ ರೇವಣ್ಣ ಅವರು ಉತ್ತರ ನೀಡಿದ್ದಾರೆ ಪಕ್ಷದಲ್ಲಿ ಯಾವುದೇ ರೀತಿಯ ಗೊಂದಲ ಇಲ್ಲ ಮಾಜಿ ಪ್ರಧಾನ ಮಂತ್ರಿಗಳು ದೇವೇಗೌಡರು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ನಾನು ಒಮ್ಮತದ ನಿರ್ಣಯದಿಂದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು ಎಂದು ಸ್ಪಷ್ಟ ಪಡಿಸಿದರು. ಬೆಳಗಾವಿಯಲ್ಲಿ ಭಾರತೀಯ ಜನತಾ ಪಕ್ಷದ ಸಂಕಲ್ಪ ಯಾತ್ರೆಯ ಸಂದರ್ಭದಲ್ಲಿ ಕೇಂದ್ರ ಸಚಿವ ಪ್ರಲಾದ್ ಜೋಶಿ ಪಂಚ ರತ್ನ ಯಾತ್ರೆಗೆ ಟೀಕಿಸುತ್ತ ಜೆಡಿಎಸ್ ಪಂಚರತ್ನ ಯಾತ್ರೆ ಅಲ್ಲ ನವಗ್ರಹಗಳ ಯಾತ್ರೆ ಪ್ರಾರಂಭಿಸಬೇಕು ಎಂದು ಟಾಂಗ್ ನೀಡಿದರು. ಅದಕ್ಕೆ ಪ್ರತಿ…
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2023-24ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಿದ್ದು ಈ ಕುರಿತು ಹೆಚ್.ಡಿ .ಕುಮಾರಸ್ವಾಮಿ ಟೀಕಿಸಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್.ಡಿ. ಕುಮಾರಸ್ವಾಮಿ, ಜನರನ್ನುಮರುಳು ಮಾಡಲು ಕೇಂದ್ರ ಸರ್ಕಾರ ಬಜೆಟ್ ಘೋಷಣೆ ಮಾಡಿದೆ. ಕೇಂದ್ರ ಬಜೆಟ್ ನಿಂದ ರಾಜ್ಯದಲ್ಲಿ ಮುಂದೆ ಬರುವ ಸರ್ಕಾರದ ತೀರ್ಮಾನ ಮಾಡುತ್ತದೆ. ಈಗ ಬಜೆಟ್ ಘೋಷಣೆ ಆದ್ರೂ ಹಣಕಾಸು ಬಿಡುಗಡೆ ಏಪ್ರಿಲ್ ಮೇಲೆ ಆಗುತ್ತದೆ. ಇದೊಂದು ಕರ್ನಾಟಕ ಕೇಂದ್ರಿತ ಚುನಾವಣಾ ಬಜೆಟ್ ಎಂದರು. ರಾಜ್ಯದಲ್ಲಿ ಚುನಾವಣೆ ಕೆಲವೇ ತಿಂಗಳು ಇದೆ. ಬಜೆಟ್ ನಲ್ಲಿ ಘೋಷಣೆ ಮಾಡಿದ ಎಲ್ಲ ಯೋಜನೆಗಳು ಜಾರಿ ಆಗಬೇಕಲ್ಲ ..? ಎಂದು ಪ್ರಶ್ನಿಸಿದ ಹೆಚ್.ಡಿ ಕುಮಾರಸ್ವಾಮಿ, ಭದ್ರಾ , ಮಹಾದಾಯಿ , ಕೃಷ್ಣ ಯೋಜನೆಗೆ ಏನೇ ಘೋಷಣೆ ಮಾಡಿದರೂ ಮೊದಲೇ ಘೋಷಣೆ ಮಾಡಬೇಕಿತ್ತು. ಇಂದಿನ ಕಾರ್ಯಕ್ರಮ ಜಾರಿಗೆ ತರಲು ಮುಂದಿನ ಸರ್ಕಾರ ಬರಬೇಕು. ಕೇಂದ್ರದ ಘೋಷಣೆ, ಘೋಷಣೆ ಆಗಿಯೇ ಉಳಿಯತ್ತೆ ಎಂದು ಟೀಕಿಸಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು…
ದೆಹಲಿಯಲ್ಲಿ ಡ್ರಗ್ಸ್ ಖರೀದಿಸಲು ಹಣ ನೀಡಲು ನಿರಾಕರಿಸಿದ ಯುವಕನೊಬ್ಬ ತನ್ನ ತಂದೆಯನ್ನು ಕೊಂದಿದ್ದಾನೆ. ನಿನ್ನೆ ವಾಯುವ್ಯ ದೆಹಲಿಯ ಸುಭಾಷ್ ಪ್ಲೇಸ್ ನಲ್ಲಿ ಈ ಘಟನೆ ನಡೆದಿದೆ. ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ನವದೆಹಲಿಯ ಶಕುರ್ ಪುರ್ ಗ್ರಾಮದ ಸುರೇಶ್ ಕುಮಾರ್ ಕೊಲೆಯಾದವರು.ದೆಹಲಿಯ ಸುಭಾಷ್ ಪ್ಲೇಸ್‌ನಲ್ಲಿ ವಿವಾದ ನಡೆಯುತ್ತಿದೆ ಎಂಬ ಮಾಹಿತಿ ಪಡೆದ ದೆಹಲಿ ಪೊಲೀಸರು ಸ್ಥಳಕ್ಕೆ ತಲುಪಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸ್ ಅಧಿಕಾರಿಗಳು ಸುರೇಶ್ ಗಾಯಗೊಂಡು ನೆಲದ ಮೇಲೆ ಬಿದ್ದಿರುವುದನ್ನು ನೋಡಿದ್ದಾರೆ. ದೇಹದಾದ್ಯಂತ ಗಾಯಗಳು ಮತ್ತು ರಕ್ತದ ಕಲೆಗಳಿದ್ದವು. ನಂತರ ಅವರನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಲ್ಲಿ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಹಣದ ವಿಚಾರದಲ್ಲಿ ಮಗ ಅಜಯ್ ಜೊತೆಗಿನ ವಾಗ್ವಾದವು ಹಲ್ಲೆ ನಡೆಸಿ ತಂದೆ ಸುರೇಶ್ ಅವರ ಸಾವಿಗೆ ಕಾರಣವಾಯಿತು ಎಂದು ವಾಯುವ್ಯ ದೆಹಲಿಯ ಉಪ ಪೊಲೀಸ್ ಆಯುಕ್ತ ಉಷಾ ರಂಗನಾನಿ ಹೇಳಿದ್ದಾರೆ. ಡ್ರಗ್ಸ್ ಖರೀದಿಸಲು ಹಣ ಕೊಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ನಡೆದ ಜಗಳದಲ್ಲಿ ಸುರೇಶ್‌ಗೆ ಮಗ ಥಳಿಸಿದ್ದಾನೆ. ಮಗ…
ಅಮೆರಿಕ :ಕೆರೊಲಿನಾ ಮಾಜಿ ಗವರ್ನರ್ ನಿಕ್ಕಿ ಹ್ಯಾಲೆ ಅವರು ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದಾರೆ. ಭಾರತೀಯ ಮೂಲದ ನಿಕ್ಕಿ ಹ್ಯಾಲೆ ಈ ತಿಂಗಳು ಡೊನಾಲ್ಡ್ ಟ್ರಂಪ್ ವಿರುದ್ಧ ಪ್ರಚಾರ ಆರಂಭಿಸಲಿದ್ದಾರೆ. ಫೆಬ್ರವರಿ 15 ರಂದು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿ ನಿಕ್ಕಿ ಹ್ಯಾಲಿಯನ್ನು ಘೋಷಿಸಲಾಗುತ್ತದೆ. ನಿಕ್ಕಿ ಹ್ಯಾಲೆ ಅವರ ಈ ಘೋಷಣೆ ಟ್ರಂಪ್ ಸ್ಪರ್ಧಿಸಿದರೆ ಸ್ಪರ್ಧಿಸುವುದಿಲ್ಲ ಎಂಬ ಅವರ ಹಿಂದಿನ ನಿಲುವಿಗೆ ತಿರುಗುಬಾಣವಾಗಿದೆ. ನಿಕ್ಕಿ ಹ್ಯಾಲೆ ಅವರು 2017 ರಿಂದ ಒಂದು ವರ್ಷ ಟ್ರಂಪ್ ನೇತೃತ್ವದಲ್ಲಿ ವಿಶ್ವಸಂಸ್ಥೆಗೆ ಯುಎಸ್ ರಾಯಭಾರಿಯಾಗಿದ್ದರು. ನಿಮ್ರತಾ ನಿಕ್ಕಿ ರಾಂಧವಾ ಜನಿಸಿದ ನಿಕ್ಕಿ ಹ್ಯಾಲೆ, ಭಾರತೀಯ ಪಂಜಾಬಿ ಸಿಖ್ ಮೂಲದವರು. ತಂದೆ ಅಜಿತ್ ಸಿಂಗ್ ರಾಂಧವಾ ಮತ್ತು ತಾಯಿ ರಾಜ್ ಕೌರ್ ಪಂಜಾಬ್‌ನ ಅಮೃತಸರದಿಂದ ದಕ್ಷಿಣ ಕೆರೊಲಿನಾಕ್ಕೆ ವಲಸೆ ಬಂದರು ಎನ್ನಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
2023 ರ ಅಂತ್ಯದ ವೇಳೆಗೆ ದೇಶದಲ್ಲಿ ಹೈಡ್ರೋಜನ್ ರೈಲು ಓಡಲು ಪ್ರಾರಂಭಿಸುತ್ತದೆ. ಎಂದು ಕೇಂದ್ರ ರೈಲ್ವೆ ಸಚಿವೆ ಅಶ್ವಿನಿ ವೈಷ್ಣವಿ ಸ್ಪಷ್ಟಪಡಿಸಿದ್ದಾರೆ. ಕಲ್ಕಾ-ಶಿಮ್ಲಾದಂತಹ ಸಾಂಸ್ಕೃತಿಕ ಪರಂಪರೆಯ ನಗರಗಳಲ್ಲಿ ಮೊದಲು ರೈಲು ಓಡಾಟ ಆರಂಭಿಸಲಿದೆ ಎಂದು ಅಡೆಮ್ ಸ್ಪಷ್ಟಪಡಿಸಿದ್ದಾರೆ. ಈ ವರ್ಷದ ಬಜೆಟ್ ಹಸಿರು ಬೆಳವಣಿಗೆಯ ವಿಷಯವನ್ನು ಆಧರಿಸಿದೆ. ಹಾಗಾಗಿ ಈ ಯೋಜನೆಗೆ ರೈಲ್ವೆಯೂ ಕೊಡುಗೆ ನೀಡಲಿದೆ ಎಂದು ರೈಲ್ವೆ ಸಚಿವರು ತಿಳಿಸಿದ್ದಾರೆ. ಕಳೆದ ತಿಂಗಳು, ರೈಲ್ವೆ ಸಚಿವರು ಉತ್ತರ ರೈಲ್ವೆ ನಿಲ್ದಾಣದ ಕಾರ್ಯಾಗಾರದಲ್ಲಿ ಹೈಡ್ರೋಜನ್ ಇಂಧನದಿಂದ ಚಲಿಸುವ ರೈಲನ್ನು ನಿರ್ಮಿಸುತ್ತಿದ್ದಾರೆ ಮತ್ತು ಹರಿಯಾಣದ ಸೋನಿಪತ್-ಜಿಂದ್‌ನಲ್ಲಿ ಅದನ್ನು ಪರೀಕ್ಷಿಸಲಾಗುವುದು ಎಂದು ರೈಲ್ವೆ ಸಚಿವರು ಹೇಳಿದ್ದರು. ಡಿಸೆಂಬರ್ 2023 ರ ವೇಳೆಗೆ, ಎಲ್ಲಾ ಪಾರಂಪರಿಕ ಮಾರ್ಗಗಳನ್ನು ಹೈಡ್ರೋಜನ್ ರೈಲು ಆವರಿಸುವ ನಿರೀಕ್ಷೆಯಿದೆ. ಈ ಬಾರಿ ರೈಲ್ವೆಗೆ ಬಜೆಟ್‌ನಲ್ಲಿ ಮೀಸಲಿಟ್ಟಿರುವುದು ಇತಿಹಾಸದಲ್ಲೇ ಅತಿ ಹೆಚ್ಚು. ರೈಲ್ವೆಗೆ 2.42 ಲಕ್ಷ ಕೋಟಿ ಮೀಸಲಿಡಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493…
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಕೇಂದ್ರ ಬಜೆಟ್ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಟೀಕೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಇಂದು ಮಾತನಾಡಿದ ಡಿ.ಕೆ ಶಿವಕುಮಾರ್ , ಇದು ಎಲೆಕ್ಷನ್ ಬಜೆಟ್. ಮುಂದಿನ ಚುನಾವಣೆ ಗುರಿಯಾಗಿಟ್ಟುಕೊಂಡು ಬಜೆಟ್ ಮಂಡನೆ ಮಾಡಿದ್ದಾರೆ. ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆಗಳ ಬಗ್ಗೆಯಾದರೂ ಹೇಳಬೇಕಿತ್ತು. ನಾವು ಲೆಕ್ಕಚಾರ ಹಾಕಿ ಪ್ರಣಾಳಿಕೆಯನ್ನ ಸಿದ್ದಪಡಿಸಿದ್ದೇವೆ ಎಂದರು. ಬೆಂಗಳೂರು ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಮೇಕೆದಾಟು ಯೋಜನೆಗೆ ಸಾವಿರ ಕೋಟಿ ಕೊಟ್ಟಿದ್ದೇವೆ ಅಂತಾರೆ. ಆದರೆ ಯಾಕೆ ಇನ್ನೂ ಕಾಮಗಾರಿ ಆರಂಭ ಮಾಡಿಲ್ಲ. ಬರೀ ಭರವಸೆಗಳ ಮೇಲೆ ಸರ್ಕಾರ ನಡೆಯುತ್ತಿದೆ ಎಂದು ಡಿ.ಕೆ ಶಿವಕುಮಾರ್ ಹೇಳಿದರು. ತಮ್ಮ ವಿರುದ್ದ ರಮೇಶ್ ಜಾರಕಿಹೊಳಿ ಆಡಿಯೋ ಬಿಡುಗಡೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಡಿ.ಕೆ ಶಿವಕುಮಾರ್, ಸಚಿವ ಸ್ಥಾನ ಸಿಗದಿದ್ದಕ್ಕೆ ರಮೇಶ್ ಹತಾಶರಾಗಿದ್ದಾರೆ. ರಮೇಶ್ ಜಾರಕಿಹೊಳಿ ಮಾತುಗಳನ್ನ ಕೇಳಿದರೇ ಅಯ್ಯೋ ಅನ್ನಿಸುತ್ತೆ. ತನಿಖೆ ಮಾಡಿಸಲು ರಮೇಶ್ ಜಾರಕಿಹೊಳಿಯನ್ನು ಯಾರು ತಡೆದಿದ್ದಾರೆ. ನಾನೇನು ಪ್ರತಿಕ್ರಿಯೆ ಕೊಡಲ್ಲ…
ಬೆಳಗಾವಿ: ರಾಜ್ಯದ ಮಹತ್ವಾಕಾಂಕ್ಷಿ ನೀರಾವರಿ ಯೋಜನೆಯಾದ ಭದ್ರಾ ಮೇಲ್ದಂಡೆ ಯೋಜನೆಗೆ ಬಜೆಟ್‍ನಲ್ಲಿ 5ಸಾವಿರದ 300 ಕೋಟಿ ರೂ.ಗಳ ಅನುದಾನ ನೀಡಿರುವುದರೊಂದಿಗೆ ರಾಜ್ಯದ ರೈತರಿಗೆ ಕೇಂದ್ರ ಸರ್ಕಾರ ಅಭಯ ನೀಡಿದೆ ಎಂದು ಜಿಲ್ಲಾ ಅಧ್ಯಕ್ಷ ಸಂಜಯ ಪಾಟೀಲ ಅವರು ಕೇಂದ್ರ ಸರ್ಕಾರದ ಬಜೆಟ್‍ನ್ನು ಸ್ವಾಗತಿಸಿದ್ದಾರೆ. ಬುಧವಾರ ಕೇಂದ್ರ ಸರ್ಕಾರ ಮಂಡಿಸಿರುವ ಅಮೃತ ಕಾಲ ಬಜೆಟ್ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, 2023-24ನೇ ಸಾಲಿನ ಬಜೆಟ್ ಕೃಷಿ, ಶಿಕ್ಷಣ, ಆರೋಗ್ಯ, ಕೈಗಾರಿಕೆ, ತಂತ್ರಜ್ಞಾನ, ಕೌಶಲ್ಯ ಅಭಿವೃದ್ಧಿ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಪೂರಕವಾಗಿದ್ದು, ರಾಗಿ ಸೇರಿದಂತೆ ಸಿರಿಧಾನ್ಯಗಳ ಬೆಳೆ ಪದ್ಧತಿ ಸುಧಾರಣೆಗಾಗಿ ಕ್ರಮ ವಹಿಸಲಾಗಿದೆ. ಸಂಶೋಧನೆ ನಡೆಸಲು ಹಾಗೂ ಉತ್ತಮ ಬೆಳೆ ಪದ್ಧತಿಯ ದಾಖಲಾತಿಗಾಗಿ ‘ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಮಿಲೆಟ್ ರೀಸರ್ಚ್’ ಸಂಸ್ಥೆಗೆ ಅಗತ್ಯ ನೆರವು ನೀಡಲಾಗಿದೆ. ತೋಟಗಾರಿಕೆ ಬೆಳೆಗಳ ಇಳುವರಿ ಹೆಚ್ಚಳ ಹಾಗೂ ಬೆಳೆಪದ್ಧತಿ ಸುಧಾರಣೆಗಾಗಿ ‘ಶುದ್ಧ ಸಸಿ ಕಾರ್ಯಕ್ರಮ’, ಕೃಷಿ ಕ್ಷೇತ್ರದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಪರಿಚಯ ಮಾಡುವ ಗುರಿ, ಯುವ ಉದ್ಯಮಿಗಳಿಂದ…