Author: admin

ತುರುವೇಕೆರೆ: ತಾಲೂಕಿನ ದಬ್ಬೆಘಟ್ಟ ಹೋಬಳಿ ಅರೇಮಲ್ಲೇನಹಳ್ಳಿಯಲ್ಲಿರುವ. ಕಿತ್ತೂರುರಾಣಿ ವಸತಿ ಶಾಲೆಯ ಕ್ರೀಡಾಂಗಣದಲ್ಲಿ 74ನೇ ಗಣರಾಜ್ಯೋತ್ಸವ  ಕಾರ್ಯಕ್ರಮ ನಡೆಸಲಾಯಿತು. ಧ್ವಜಾರೋಹಣವನ್ನು ಜಮ್ಮು ಮತ್ತು ಕಾಶ್ಮೀರ ವಲಯದ ಮಾಜಿ ಯೋಧ ಯೋಗಾನಂದ ಸ್ವಾಮಿ ನೆರವೇರಿಸಿದರು. ಧ್ವಜಾರೋಹಣವಾದ ನಂತರ ಶಾಲಾ ಮಕ್ಕಳಿಂದ ಪಥಸಂಚಲನ  ನಡೆಸಲಾಯಿತು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರೋ ಬ್ರಿಕ್ಸ್  ಸಹ ಆಯೋಜಿಸಲಾಗಿತ್ತು. ಇನ್ನು ಈ ಕಾರ್ಯಕ್ರಮದಲ್ಲಿ ಅರೆ ಮಲ್ಲೇನಹಳ್ಳಿಯ ವಸತಿ ಶಾಲೆಯ ಪ್ರಾಂಶುಪಾಲರಾದ ಪರಣ್ಣ ಮಣೆ ಚೆಂಡೂರು ವಸತಿ ಶಾಲೆಯ ಗದಗಯ್ಯ ಹಿರೇಮಠ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು  ಈ ಕಾರ್ಯಕ್ರಮದಲ್ಲಿ ಎರಡೂ ಶಾಲೆಯ ಶಿಕ್ಷಕ ವೃಂದ ಹಾಗೂ ಮಕ್ಕಳು ಹಾಜರಿದ್ದರು. ವರದಿ: ಸುರೇಶ್ ಬಾಬು ಎಂ., ತುರುವೇಕೆರೆ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1

Read More

ಎಲ್ಲರೂ ಉತ್ತಮವಾದ ದೇಹವನ್ನು ಹೊಂದಲು ಇಷ್ಟಪಡುತ್ತಾರೆ. ದೇಹದಲ್ಲಿ ಬೊಜ್ಜು ಬಾರದಂತೆ ತಡೆಯಲು ಕೆಲವರು ಇನ್ನಿಲ್ಲದ ಕಸರತ್ತನ್ನು ನಡೆಸುತ್ತಾರೆ. ಆದರೆ ತಮ್ಮ ದಿನಚರಿಗಳಲ್ಲಿ ಬದಲಾವಣೆ ಮಾಡಿಕೊಳ್ಳದೇ ದೇಹಕ್ಕೆ ಕಸರತ್ತು ನೀಡಿದರೆ ಯಾವುದೇ ಪ್ರಯೋಜನವಿಲ್ಲ. ಹೌದು..! ನಮ್ಮ ದೇಹ ಬೊಜ್ಜು ಮುಕ್ತವಾಗಬೇಕಾದರೆ, ನಾವು  ವ್ಯಾಯಾಮವನ್ನು ಮಾಡಬೇಕು, ಕೇವಲ ವ್ಯಾಯಾಮ ಮಾಡಿದರೆ ಸಾಲದು ನಮ್ಮ ಆಹಾರದಲ್ಲೂ ನಿಯಂತ್ರಣ ಇರಬೇಕು. ದೇಹದಲ್ಲಿ ಕೊಲೆಸ್ಟ್ರಾಲ್ ಉತ್ಪಾದನೆ ಮಾಡುವ ಆಹಾರಗಳನ್ನು ಸೇವಿಸಲೇ ಬಾರದು. ಅದರ ಜೊತೆಗೆ ನಮ್ಮ ದಿನಚರಿಯನ್ನು ಕೂಡ ಬದಲಾವಣೆ ಮಾಡಬೇಕು. ತಡವಾಗಿ ಮಲಗುವುದು ಮತ್ತು ಬೆಳಗ್ಗೆ ತಡವಾಗಿ ಏಳುವುದು ನಮ್ಮ ದೇಹಕ್ಕೆ ಉತ್ತಮವಲ್ಲ, ಆದಷ್ಟು ಬೇಗನೇ ಮಲಗಿ ಬೇಗನೇ ಏಳುವ ಅಭ್ಯಾಸವನ್ನು ರೂಢಿಸಿಕೊಳ್ಳಿ.  ಹೆಚ್ಚು ಹೊತ್ತು ಆಲಸ್ಯದಿಂದ ಮಲಗಿಕೊಳ್ಳುವುದು  ಉತ್ತಮ ಅಭ್ಯಾಸವಲ್ಲ, ಇದು ನಮ್ಮ ದೇಹದ ಆರೋಗ್ಯಕ್ಕೂ ಹಾನಿ ಮಾಡುತ್ತದೆ. ನಮ್ಮ ದೇಹದ ಚಯಾಪಚಯ ವ್ಯವಸ್ಥೆ ಇದರಿಂದ ಕೆಡುತ್ತದೆ. ನಮ್ಮ ದೇಹಕ್ಕೆ ದಿನಕ್ಕೆ 7 ಲೋಟ ನೀರು ಬೇಕಾಗುತ್ತದೆ.  ನೀರು ಕುಡಿಯದೇ ಇದ್ದರೆ, ಹೊಟ್ಟೆಯ ಸುತ್ತ ಕೊಬ್ಬು…

Read More

ತುಮಕೂರು: ಕುರುಬ ಸಮುದಾಯದ ಪ್ರಭಾವಿ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಅಶ್ವಥ್ ನಾರಾಯಣ್ ರವರು ಕಾಂಗ್ರೆಸ್ ಪಕ್ಷದ ಮುಖಂಡರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಕಾಂಗ್ರೆಸ್ ಪಕ್ಷವನ್ನು ತೊರೆದು ಬಿ ಎಸ್ ಪಿ ಪಕ್ಷವನ್ನು ಸೇರ್ಪಡೆಯಾಗಿದ್ದಾರೆ. ಬಿಎಸ್ ಪಿ ಪಕ್ಷದ ಹಿರಿಯ ಮುಖಂಡರ ನೇತೃತ್ವದಲ್ಲಿ ಪಕ್ಷ ಸೇರ್ಪಡೆಯಾದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರಿಗೆ ಯಾವುದೇ ಮನ್ನಣೆ ನೀಡುತ್ತಿಲ್ಲ, ಹಾಗಾಗಿ ಪಕ್ಷದ ಮುಖಂಡರ ನೀತಿಯಿಂದ ಬೇಸತ್ತು ಬಿ ಎಸ್ ಪಿ ಪಕ್ಷದ ತತ್ವ ಸಿದ್ಧಾಂತಗಳನ್ನ ಒಪ್ಪಿ ಬಿಎಸ್ಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದು, ಇದುವರೆಗೂ ತುಮಕೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಮೂರನೇ ಸ್ಥಾನದಲ್ಲಿದ್ದು ಕುರುಬ ಸಮುದಾಯಕ್ಕೆ ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಉತ್ತಮ ಸ್ಥಾನಮಾನ ಸಿಗುತ್ತಿಲ್ಲ ಎಂದರು. ಇನ್ನು ತಿಪಟೂರು ತಾಲೂಕಿನಲ್ಲಿ ಒಂದು ಲಕ್ಷದ ಮೂವತ್ತು ಸಾವಿರಕ್ಕೂ ಹೆಚ್ಚು ಅಹಿಂದ ಮತಗಳು ಇದ್ದು ತಿಪಟೂರಿನಲ್ಲಿ ನಮ್ಮ ಸಮುದಾಯಕ್ಕೆ ಯಾವುದೇ ಸ್ಥಾನಮಾನ ಸಿಕ್ಕಿಲ್ಲ, ಇನ್ನು ತಿಪಟೂರು ತಾಲೂಕಿನ ಅಹಿಂದ…

Read More

ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ‘ಏರೋ ಇಂಡಿಯಾ-2023’ ಪ್ರದರ್ಶನ ನಡೆಯಲಿರುವ ಹಿನ್ನೆಲೆ 22 ದಿನಗಳ ಕಾಲ ಮಾಂಸ ಮಾರಾಟಕ್ಕೆ BBMP ನಿಷೇಧ ವಿಧಿಸಿದೆ. ಫೆಬ್ರುವರಿ 13 ರಿಂದ 17ರವರೆಗೆ ವೈಮಾನಿಕ ಪ್ರದರ್ಶನ ನಡೆಯಲಿದೆ. ಜನವರಿ 30ರಿಂದ ಫೆಬ್ರುವರಿ 20ರವರೆಗೆ ಯಲಹಂಕ ವಲಯದ ವ್ಯಾಪ್ತಿಯಲ್ಲಿ ಮಾಂಸ ಮಾರಾಟಕ್ಕೆ ಬ್ರೇಕ್ ಹಾಕಲಾಗಿದೆ. ಹೋಟೆಲ್, ರೆಸ್ಟೋರೆಂಟ್/ಡಾಬಾಗಳಲ್ಲಿ ಮಾಂಸಾಹಾರ ತಯಾರಿಕೆ & ಮಾರಾಟವನ್ನೂ ನಿಷೇಧಿಸಿದೆ. ಆದೇಶ ಉಲ್ಲಂಘಿಸಿದರೆ ಕ್ರಮ ಜರುಗಿಸುವುದಾಗಿ BBMP ಎಚ್ಚರಿಸಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಮುಂದಿನ ತಿಂಗಳು ಆಫ್ರಿಕಾದಿಂದ 12 ಚಿರತೆಗಳು ಭಾರತಕ್ಕೆ ಬರಲಿವೆ ಎಂದು ಕೇಂದ್ರ ಪರಿಸರ ಸಚಿವಾಲಯ ತಿಳಿಸಿದೆ. ಚೀತಾ ಸ್ಥಳಾಂತರ ಯೋಜನೆಯ ಭಾಗವಾಗಿ 12 ಚಿರತೆಗಳು ದೇಶಕ್ಕೆ ಬರಲಿವೆ. ಮುಂಬರುವ ವರ್ಷಗಳಲ್ಲಿ 100ಕ್ಕೂ ಹೆಚ್ಚು ಚಿರತೆಗಳನ್ನು ಭಾರತಕ್ಕೆ ಕಳುಹಿಸುವುದಾಗಿ ದಕ್ಷಿಣ ಆಫ್ರಿಕಾ ಘೋಷಿಸಿದೆ. ಮುಂದಿನ ಎಂಟರಿಂದ ಹತ್ತು ವರ್ಷಗಳ ಕಾಲ ಪ್ರತಿ ವರ್ಷ 12 ಚಿರತೆಗಳಿಗೆ ಪುನರ್ವಸತಿ ಕಲ್ಪಿಸಲು ನಿರ್ಧರಿಸಲಾಗಿದೆ. ಈ ಮೂಲಕ ಚಿರತೆಗಳಿಗೆ ಸುರಕ್ಷಿತ ಮತ್ತು ಪ್ರಾಯೋಗಿಕ ಸ್ಥಳವನ್ನು ಸಿದ್ಧಪಡಿಸಲಾಗುವುದು’ ಎಂದು ಪರಿಸರ ಸಚಿವಾಲಯ ತಿಳಿಸಿದೆ. 2020 ರಲ್ಲಿ, ಸುಪ್ರೀಂ ಕೋರ್ಟ್ ಆಫ್ರಿಕನ್ ಚಿರತೆಗಳು ಮತ್ತು ಇತರ ಜಾತಿಗಳನ್ನು ಇತರ ದೇಶಗಳಿಂದ ಖರೀದಿಸಬಹುದು ಮತ್ತು ಅವುಗಳ ಸಂರಕ್ಷಣೆಗಾಗಿ ಸುರಕ್ಷಿತ ಧಾಮವನ್ನು ಸ್ಥಾಪಿಸಬಹುದು ಎಂದು ನಿರ್ದೇಶಿಸಿತು. ಕಳೆದ ಆಗಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾದಿಂದ ಚಿರತೆಗಳನ್ನು ಭಾರತಕ್ಕೆ ತರಬೇಕಿತ್ತು. ಆದರೆ ಸುದೀರ್ಘ ಒಪ್ಪಂದದ ಮಾತುಕತೆಗಳಿಂದಾಗಿ ಚಿರತೆಗಳನ್ನು ಭಾರತಕ್ಕೆ ತಲುಪಿಸುವುದು ವಿಳಂಬವಾಯಿತು. ಕಳೆದ ಸೆಪ್ಟೆಂಬರ್‌ನಲ್ಲಿ ನಮೀಬಿಯಾದಿಂದ ಎಂಟು ಚಿರತೆಗಳನ್ನು ಭಾರತಕ್ಕೆ ತರಲಾಗಿತ್ತು. ಪ್ರಧಾನ ಮಂತ್ರಿಯವರ ಜನ್ಮದಿನದಂದು ಮಧ್ಯಪ್ರದೇಶಕ್ಕೆ…

Read More

ಒಂದು ವರ್ಷದ ಮಗುವನ್ನುಅಪಹರಿಸಿ ಹಣದ ಡಿಮ್ಯಾಂಡ್ ಮಾಡಿ, ಬಳಿಕ 1 ಲಕ್ಷ ರೂ.ಗೆ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಭಿವಂಡಿ ನಗರದಲ್ಲಿ ನಡೆದಿದ್ದು, ಇದೀಗ ಮಗುವನ್ನು ರಕ್ಷಿಸಿರುವ ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಿದ್ದಾರೆ. ಡಿಸೆಂಬರ್ 26 ರಂದು ನಗರದ ಕಾಮತ್‌ಘರ್ ಪ್ರದೇಶದಿಂದ ಮಗುವನ್ನು ಅಪಹರಿಸಿದ್ದ ಇಬ್ಬರು ಮಹಿಳೆಯರು ಮತ್ತು ಒಬ್ಬ ಪುರುಷನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ನಡೆಸಿದ ತನಿಖೆಯಲ್ಲಿ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಅಲ್ಲದೇ ಮಗುವನ್ನು ಮಾರಾಟ ಮಾಡಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆ. ಮಗುವನ್ನು ರಕ್ಷಿಸಿ ಪೋಷಕರಿಗೆ ಒಪ್ಪಿಸಲಾಗಿದೆ. ಆರೋಪಿಗಳ ವಿರುದ್ಧ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಪಾಕಿಸ್ತಾನದ ರೂಪಾಯಿ ಮೌಲ್ಯ ತೀವ್ರವಾಗಿ ಕುಸಿದಿದೆ. ಪಾಕಿಸ್ತಾನದ ರೂಪಾಯಿ ಪ್ರಸ್ತುತ ಇತಿಹಾಸದಲ್ಲಿ ಅದರ ಅತ್ಯಂತ ಕಡಿಮೆ ವಿನಿಮಯ ದರದಲ್ಲಿದೆ. ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಉಲ್ಬಣಗೊಳ್ಳುತ್ತಿದ್ದಂತೆ, ಬಿಕ್ಕಟ್ಟನ್ನು ಪರಿಹರಿಸಲು ದೇಶವು ವೆಚ್ಚ ಕಡಿತದ ಯೋಜನೆಗಳನ್ನು ರೂಪಿಸುತ್ತಿದೆ. ಡಾಲರ್ ಎದುರು ಪಾಕಿಸ್ತಾನ ರೂಪಾಯಿ ವಿನಿಮಯ ದರ 255 ರೂ.ಗೆ ಕುಸಿದಿದೆ. ನಿನ್ನೆ 24 ರೂಪಾಯಿ ಕುಸಿತ ದಾಖಲಾಗಿದೆ. ಅಂತರಾಷ್ಟ್ರೀಯ ಹಣಕಾಸು ನಿಧಿಯ ಸೂಚನೆಯಂತೆ ಮಾರುಕಟ್ಟೆ ನಿರ್ಬಂಧಗಳನ್ನು ಸಡಿಲಿಸಿದ ನಂತರ ರೂಪಾಯಿ ಮೌಲ್ಯ ತೀವ್ರವಾಗಿ ಕುಸಿಯಿತು. IMF ನಿಂದ ತುರ್ತು ಸಹಾಯವನ್ನು ಕೋರಿದ ನಂತರ ಸರ್ಕಾರವು ನಿರ್ಬಂಧಗಳನ್ನು ತೆಗೆದುಹಾಕಿತು. ಬಿಕ್ಕಟ್ಟು ಉಲ್ಬಣಗೊಂಡ ನಂತರ ಸರ್ಕಾರ ತುರ್ತು ಸಭೆ ನಡೆಸಿತು. ಸಂಸದರ ವೇತನವನ್ನು ಕಡಿತಗೊಳಿಸುವುದು ವಿದ್ಯುತ್ ಮತ್ತು ನೈಸರ್ಗಿಕ ಅನಿಲದ ಬೆಲೆಗಳನ್ನು ಹೆಚ್ಚಿಸುವಂತಹ ಕಠಿಣ  ಕ್ರಮಗಳನ್ನು ದೇಶವು ಕೈಗೊಳ್ಳುತ್ತಿದೆ. ಸೇನೆ ಮತ್ತು ಸರ್ಕಾರಿ ಅಧಿಕಾರಿಗಳಿಗೆ ಮಂಜೂರು ಮಾಡಿರುವ ಭೂಮಿಯನ್ನು ವಾಪಸ್ ಪಡೆಯಲಾಗುವುದು. ಗುಪ್ತಚರ ಸಂಸ್ಥೆಗಳಿಗೆ ಹಣಕಾಸಿನ ವಿವೇಚನೆಯನ್ನು ಮೊಟಕುಗೊಳಿಸಲಾಗುವುದು. ವಿದ್ಯುತ್ ಸರಬರಾಜು ಜಾಲದಲ್ಲಿನ ದೋಷದಿಂದಾಗಿ ನಿನ್ನೆ ದೇಶದಲ್ಲಿ…

Read More

32 ವರ್ಷಗಳ ನಂತರ ಕಾಶ್ಮೀರದಲ್ಲಿ ಥಿಯೇಟರ್‌ಗಳು ಹೌಸ್‌ಫುಲ್ ಆಗಿವೆ ಎಂದು ಐನಾಕ್ಸ್ ಮೂವೀಸ್ ಹೇಳಿದೆ. ಅವರು ಟ್ವಿಟರ್‌ನಲ್ಲಿ ಅಧಿಕೃತ ಘೋಷಣೆ ಮಾಡಿದ್ದಾರೆ. ಥಿಯೇಟರ್ ಚೈನ್ ಐನಾಕ್ಸ್ ಕಾಶ್ಮೀರದಲ್ಲಿ ಥಿಯೇಟರ್‌ಗಳ “ಹೌಸ್‌ಫುಲ್” ಬೋರ್ಡ್ ಅನ್ನು ಹಂಚಿಕೊಂಡಿದೆ. 32 ವರ್ಷಗಳ ನಂತರ ಕಾಶ್ಮೀರದಲ್ಲಿ ರಂಗಭೂಮಿ ಹೌಸ್‌ಫುಲ್ ಆಯಿತು. ಇದಕ್ಕೆ ಶಾರುಖ್ ಧನ್ಯವಾದ ಎಂದು ಕೂಡ ಟ್ವಿಟರ್ ಪೋಸ್ಟ್ ನಲ್ಲಿ ಹೇಳಲಾಗಿದೆ. ಜನವರಿ 27 ರಂದು 2:30 ಮತ್ತು 6 ಗಂಟೆಗೆ ಶ್ರೀನಗರದ ಶಿವಪೋರಾದ ಐನಾಕ್ಸ್ ಥಿಯೇಟರ್‌ನಲ್ಲಿ ಪಠಾಣ್ ಆರು ಪ್ರದರ್ಶನಗಳನ್ನು ಹೊಂದಿದ್ದರು. ಅವುಗಳಲ್ಲಿ ಐದು ಬೇಗನೆ ಮಾರಾಟವಾಗಿವೆ . ಜನವರಿ 28 ಮತ್ತು 29 ರ ವಾರಾಂತ್ಯವು ಇದೇ ರೀತಿಯ ಬುಕಿಂಗ್‌ಗಳನ್ನು ತೋರಿಸುತ್ತದೆ ಎಂದು ಹೇಳಲಾಗಿದೆ. ಶ್ರೀನಗರದ ಚಿತ್ರಮಂದಿರಗಳಲ್ಲಿ ಬಿಡುಗಡೆಯ ದಿನದಂದು ಎಲ್ಲಾ ಶೋಗಳು ಹೌಸ್ ಫುಲ್ ಆಗಿದ್ದವು. ಕಾಶ್ಮೀರವು ಪಠಾಣ್ ಮತ್ತು ಶಾರುಖ್ ಖಾನ್‌ಗೆ ಅಸಾಧಾರಣ ಪ್ರೀತಿಯನ್ನು ತೋರಿಸುತ್ತಿದೆ ಎಂದು ಐನಾಕ್ಸ್ ಶ್ರೀನಗರ ವಿಶೇಷ ಟ್ವೀಟ್ ಅನ್ನು ಪೋಸ್ಟ್ ಮಾಡಿದೆ. ಶಾರುಖ್ ಖಾನ್…

Read More

ಕಳೆದ ದಿನ ಜಪಾನ್‌ನ ಟೆಲಿಸ್ಕೋಪ್ ಕ್ಯಾಮೆರಾದಲ್ಲಿ ಬಹಳ ವಿಚಿತ್ರ ಮತ್ತು ನಿಗೂಢ ಚಿತ್ರ ಸೆರೆಹಿಡಿಯಲ್ಪಟ್ಟಿತು. ಸ್ಪಷ್ಟವಾದ ರಾತ್ರಿ ಆಕಾಶದಲ್ಲಿ ವಿಚಿತ್ರವಾದ ನೀಲಿ ಸುರುಳಿಯಾಕಾರದ ವಸ್ತುವು ಪ್ರಜ್ವಲಿಸಿತು. ಈ ವಸ್ತುವು ನಿಧಾನವಾಗಿ ಚಲಿಸುತ್ತಿದೆ ಮತ್ತು ಈ ಬೆಳಕಿನ ಸುಳಿಯು ಹಾರುತ್ತಿದೆ ಎಂಬ ಆವಿಷ್ಕಾರವು ಅನೇಕ ಚರ್ಚೆಗಳು ಮತ್ತು ತನಿಖೆಗಳಿಗೆ ಕಾರಣವಾಯಿತು. ಜಪಾನ್‌ನ ರಾಷ್ಟ್ರೀಯ ಖಗೋಳ ವೀಕ್ಷಣಾಲಯದ ಅಡಿಯಲ್ಲಿ ಸುಬಾರು ಟೆಲಿಸ್ಕೋಪ್‌ನ ಅಧಿಕೃತ ಖಾತೆಯಿಂದ ಯೂಟ್ಯೂಬ್‌ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ ವಿಚಿತ್ರ ವಸ್ತುವಿದೆ. ಅನೇಕ ನೆಟಿಜನ್‌ಗಳು ಇದು ಅನ್ಯಲೋಕದ ಹಾರುವ ತಟ್ಟೆ ಎಂದು ಹೇಳಿದ್ದರೂ, ಜಪಾನ್‌ನ ರಾಷ್ಟ್ರೀಯ ಖಗೋಳ ವೀಕ್ಷಣಾಲಯವು ಈ ಘಟನೆಯು ಸ್ಪೇಸ್‌ಎಕ್ಸ್ ಉಡಾವಣೆಯ ಸಮಯದಲ್ಲಿ ಹೊರಹಾಕಲ್ಪಟ್ಟ ಘನೀಕೃತ ರಾಕೆಟ್ ಇಂಧನವಾಗಿದೆ ಎಂದು ಹೇಳಿದೆ. ಎಲೋನ್ ಮಸ್ಕ್ ಒಡೆತನದ ಸ್ಪೇಸ್‌ಎಕ್ಸ್ ಸ್ಥಳೀಯ ಕಾಲಮಾನದ ಪ್ರಕಾರ ಜನವರಿ 18 ರ ಬುಧವಾರ ಬೆಳಿಗ್ಗೆ 7:24 ಕ್ಕೆ ನ್ಯಾವಿಗೇಷನ್ ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಉಡಾಯಿಸಿತು. ಇದಾದ ಕೂಡಲೇ ಜಪಾನಿನ ದೂರದರ್ಶಕದಲ್ಲಿ ವಿಚಿತ್ರ ದೃಶ್ಯವೊಂದು ದಾಖಲಾಗಿದೆ. ಸ್ಪೇಸ್‌ಎಕ್ಸ್ ಫಾಲ್ಕನ್ 9…

Read More

ಹಲವು ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ ಐದು ದಿನ ಪೂರೈಸಿ, ಮುಂದುವರೆಯುತ್ತಿದೆ. ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಸ್ವಾತಂತ್ರ್ಯ ಉದ್ಯಾನದಲ್ಲಿ ಸ್ಥಳದ ಕೊರತೆಯ ಕಾರಣಕ್ಕೆ ಗಾಂಧಿ ನಗರದ ರಸ್ತೆಗೆ ಬಂದು ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆ ಆರಂಭಿಸಿದ್ದಾರೆ. ಚಳಿಯನ್ನೂ ಲೆಕ್ಕಿಸದೆ ಅಹೋರಾತ್ರಿ ಧರಣಿ ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳ್ಳುವ ಸಾಧ್ಯತೆ ಇದೆ. ಅಂಗನವಾಡಿ ಕಾರ್ಯಕರ್ತೆಯರ ಧರಣಿ ವಿಚಾರವಾಗಿ ಸರಣಿ ಟ್ವಿಟ್ ಮಾಡಿರುವ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ, ‘ಮುಷ್ಕರ ನಿರತ ಅಂಗನವಾಡಿ ಕಾರ್ಯಕರ್ತರನ್ನು ರಾಜ್ಯದ ಬಿಜೆಪಿ ಸರ್ಕಾರ ಸಂಪೂರ್ಣವಾಗಿ ನಿರ್ಲಕ್ಷಿಸಿರುವುದು ಅತ್ಯಂತ ಖಂಡನೀಯ. ಸಿಎಂ ಬೊಮ್ಮಾಯಿ ಅವರು ತಕ್ಷಣ ಅಂಗನವಾಡಿ ಕಾರ್ಯಕರ್ತರನ್ನು ಕರೆದು ಅವರ ಬೇಡಿಕೆಗಳ ಈಡೇರಿಕೆ ಬಗ್ಗೆ ಚರ್ಚಿಸಬೇಕು’ ಎಂದು ಆಗ್ರಹಿಸಿದ್ದಾರೆ. ‘ಅಂಗನವಾಡಿ ಕಾರ್ಯಕರ್ತರು ಮಳೆ, ಚಳಿ, ಗಾಳಿ ಎನ್ನದೆ ಬೀದಿಯಲ್ಲಿ ಠಿಕಾಣಿ ಹೂಡಿ ಮುಷ್ಕರದಲ್ಲಿ ತೊಡಗಿದ್ದಾರೆ. ಈಗಾಗಲೇ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಇದಾದ ನಂತರವೂ ರಾಜ್ಯ ಬಿಜೆಪಿ ಸರ್ಕಾರ ಹಠಕ್ಕೆ ಬಿದ್ದು ಅಂಗನವಾಡಿ…

Read More