Author: admin

ತುರುವೇಕೆರೆ: ಕೊಬ್ಬರಿಗೆ ಕನಿಷ್ಠ ಬೆಲೆಗೆ ಕೃಷಿ ರೈತ ಬಂಧು ವೇದಿಕೆಯ ರಾಜ್ಯಾಧ್ಯಕ್ಷ ಟಿ. ಹೊನ್ನೇಗೌಡ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು. ಪಟ್ಟಣದಲ್ಲಿರುವ   ಪ್ರವಾಸಿ ಮಂದಿರದಲ್ಲಿ ಇಂದು ಕರೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು,  ಸಂಕಷ್ಟದಲ್ಲಿರುವ ರೈತರ ನೆರವಿಗೆ ಸರ್ಕಾರ ಒತ್ತು ನೀಡಬೇಕು ಎಂದು ಒತ್ತಾಯಿಸಿದರು. ತೆಂಗು ಬೆಳೆಗಾರರ ನೆರವಿಗೆ ಬಂದು ರೈತರನ್ನು ಸರ್ಕಾರ ಕಾಪಾಡಬೇಕು. ಇನ್ನೂ ರೈತರಿಗೆ ದುಬಾರಿ ಬೆಲೆಯಾಗಿರುವ ಗೊಬ್ಬರ, ಡೀಸೆಲ್ ಮತ್ತು ಕೃಷಿ ಪರಿಕರಗಳ ನಿರ್ವಹಣೆ ಕಷ್ಟವಾಗಿದ್ದು, ಕೂಡಲೇ ಸರ್ಕಾರ ರೈತರ ನೆರವಿಗೆ ಧಾವಿಸಬೇಕು ಎಂದು ಅವರು ಒತ್ತಾಯಿಸಿದರು. ಜೊತೆಗೆ ವ್ಯವಸಾಯೋತ್ಪನ್ನ ಮಾರುಕಟ್ಟೆಯಲ್ಲಿ ದಳ್ಳಾಳಿಗಳಿಂದ ಆಗುತ್ತಿರುವ ಕಿರುಕುಳಗಳನ್ನು ತಪ್ಪಿಸಲು ಕೂಡಲೇ ನಫೆಡ್ ತೆರೆದು ರೈತರಿಗೆ ಅನುಕೂಲ ಮಾಡಿಕೊಡಬೇಕು, ಕೊಬ್ಬರಿ ಬೆಲೆಯನ್ನು ಈ ಕೂಡಲೇ ಕನಿಷ್ಠ ಪ್ರತಿ ಕ್ವಿಂಟಾಲ್ ಗೆ 15,000 ನಿಗದಿಪಡಿಸಬೇಕು ಇಲ್ಲವಾದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುವ ಸಂಭವವಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು. ರೈತರ ಸಮಸ್ಯೆಗೆ ಕೂಡಲೇ ಸ್ಪಂದಿಸಿ ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ನಮ್ಮ ಸಂಘಟನೆಯ ವತಿಯಿಂದ ಉಗ್ರ…

Read More

ಕೊರಟಗೆರೆ: ದೇಶದಲ್ಲಿ ಸಿದ್ದಗಂಗಾ ಮಠದ ಡಾ.ಶ್ರೀ ಶಿವಕುಮಾರ ಮಹಾಸ್ವಾಮಿಗಳು ದಾಸೋಹ ಭಂಡಾರವಾದರೆ, ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು ಜ್ಞಾನ ಭಂಡಾರವಾಗಿದ್ದರು. ಈ ಮಹಾನ್ ಗುರುಗಳು ಜಗತ್ತಿನಲ್ಲಿ ಎಲ್ಲರಿಗೂ ಸರ್ವಕಾಲದ ಆದರ್ಶವಾಗಿದ್ದಾರೆ ಎಂದು ಶ್ರೀ ಕ್ಷೇತ್ರ ಸಿದ್ದರಬೆಟ್ಟದ ಶ್ರೀ ವೀರಭದ್ರಶೀವಾಚಾರ್ಯ ಸ್ವಾಮೀಜಿ ತಿಳಿಸಿದರು. ಅವರು ಪಟ್ಟಣದ ಸಜ್ಜನರ ಬೀದಿಯ ಬಸವೇಶ್ವರ ದೇವಾಲಯದಲ್ಲಿ ನಡೆದ ಡಾ.ಶ್ರೀ ಶಿವಕುಮಾರ ಸ್ವಾಮಿಗಳ 4 ನೇ ಪುಣ್ಯಸ್ಮರಣೆ ಮತ್ತು ಶ್ರೀ ಸಿದ್ದೇಶ್ವರ ಸ್ವಾಮಿಗಳ ಸ್ಮರಣೆ ಕಾರ್ಯಕ್ರಮದಲ್ಲಿ ದಿವ್ಯಸಾನಿದ್ಯ ವಹಿಸಿ ಮಾತನಾಡಿ, ತುಮಕೂರಿನ ಸಿದ್ದಗಂಗಾ ಮಠದಲ್ಲಿ ಉದ್ದಾನ ಶ್ರೀಗಳಿಂದ ಪ್ರಾರಂಭವಾದ ದಾಸೋಹ ಶಿವಕುಮಾರ ಸ್ವಾಮಿಗಳ ಪೀಠಾಧ್ಯಕ್ಷ ಕಾಲದಲ್ಲಿ ದಿನಕ್ಕೆ ಸಾವಿರಾರು ಮಂದಿಗೆ ದಾಸೋಹ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾ ದಾನ ನಡೆಯುತ್ತಿದ್ದು ಇದು ಸಾಮಾನ್ಯ ಕಾರ್ಯವಲ್ಲ, ದೇಶದಲ್ಲೇ ಇದೊಂದು ಮಹತ್ತರ ಧಾರ್ಮಿಕ ಕಾರ್ಯವಾಗಿದ್ದು ಶಿವಕುಮಾರ ಸ್ವಾಮಿಗಳ ಸಾಧನೆ ಅತಿ ಎತ್ತರದು, ಇದರೋಂದಿಗೆ ರೈತರಿಗೆ ನೆರವಾಗಲೂ ಸಿದ್ದಾಗಂಗಾ ಜಾತ್ರೆಯಲ್ಲಿ ಕೃಷಿ ಮೇಳವನ್ನು ಮಾಡಿಕೊಂಡು ಬರುತ್ತಿದ್ದರು ಅವರ ಪುಣ್ಯಸ್ಮರಣೆಯ ದಿನದಂದು ಸರ್ಕಾರವೂ ಸೇರಿದಂತೆ ಎಲ್ಲರೂ…

Read More

ರಾಜಸ್ಥಾನದ ಬಿಕಾನೇರ್ ಜಿಲ್ಲೆಯಲ್ಲಿ ದಂಪತಿಗಳು ತಮ್ಮ ಮೂರೂವರೆ ತಿಂಗಳ ಮಗುವನ್ನು ಕಾಲುವೆಗೆ ಎಸೆದು ಕೊಂದಿದ್ದಾರೆ. ಮೂವರು ಮಕ್ಕಳನ್ನು ಹೊಂದಿರುವ ದಂಪತಿ ಆರ್ಥಿಕ ಸಂಕಷ್ಟದಿಂದ ಮಗುವನ್ನು ಕೊಂದಿದ್ದಾರೆ ಎಂದು ಛತ್ತರಗಢ ಪೊಲೀಸರು ಹೇಳಿದ್ದಾರೆ. ಆರೋಪಿಗಳಾದ ಕನ್ವರ್‌ಲಾಲ್ (35) ಮತ್ತು ಅವರ ಪತ್ನಿ ಗೀತಾದೇವಿ (33) ಅವರನ್ನು ಬಂಧಿಸಲಾಗಿದೆ. ಭಾನುವಾರ ಸಂಜೆ 5.30ರ ಸುಮಾರಿಗೆ ದಂಪತಿ ಬೈಕ್‌ನಲ್ಲಿ ಬಂದು ಮಗುವನ್ನು ಕಾಲುವೆಗೆ ಎಸೆದಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳೀಯರು ಕಿರುಚಿಕೊಂಡ ನಂತರ ದಂಪತಿ ಪರಾರಿಯಾಗಿದ್ದಾರೆ. ಮಗುವನ್ನು ರಕ್ಷಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ದಂಪತಿ ಪತ್ತೆಗೆ ತನಿಖೆ ಆರಂಭಿಸಿದ್ದಾರೆ. ಘಟನೆ ನಡೆದ ಸ್ಥಳದಿಂದ 20 ಕಿ.ಮೀ ದೂರದಲ್ಲಿ ಬೈಕ್ ವಶಪಡಿಸಿಕೊಳ್ಳಲಾಗಿದೆ. ಹೆಚ್ಚಿನ ತನಿಖೆಯಲ್ಲಿ, ದಂಪತಿಯನ್ನು ಕೊಲ್ಯಾಡ್ ತಹಸಿಲ್‌ನ ದಿಯಾತ್ರಾ ಗ್ರಾಮದಿಂದ ಬಂಧಿಸಲಾಯಿತು. ಮುಂದಿನ ಕ್ರಮಕ್ಕಾಗಿ ಪ್ರಕರಣವನ್ನು ಛತ್ತರಗಢ ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ಬಿಕಾನೇರ್ ಪೊಲೀಸ್ ವರಿಷ್ಠಾಧಿಕಾರಿ ಯೋಗೇಶ್ ಯಾದವ್ ರಾಜಸ್ಥಾನ ಥಾಕ್ ತಿಳಿಸಿದ್ದಾರೆ. ಮೂರೂವರೆ ತಿಂಗಳ ಮಗುವನ್ನು ಹೊರತುಪಡಿಸಿ, ದಂಪತಿಗೆ…

Read More

ಭಾರತೀಯ ಗಣರಾಜ್ಯೋತ್ಸವದ ಸಂದರ್ಭದಲ್ಲಿ ವಿಮಾನಯಾನ ಸಂಸ್ಥೆಗಳು ವಿಶೇಷ ವಿಮಾನ ಟಿಕೆಟ್ ದರಗಳನ್ನು ಘೋಷಿಸಿವೆ. ಗೋ ಫಸ್ಟ್ ಏರ್‌ಲೈನ್ ದೇಶೀಯ ಮತ್ತು ಅಂತಾರಾಷ್ಟ್ರೀಯ ಟಿಕೆಟ್ ದರಗಳಲ್ಲಿ ಆಕರ್ಷಕ ರಿಯಾಯಿತಿಯನ್ನು ಘೋಷಿಸಿದೆ. ಗೋ ಫಸ್ಟ್ ಏರ್‌ಲೈನ್ ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನ ಟಿಕೆಟ್ ದರ 55 ಸೌದಿ ರಿಯಾಲ್ ಮತ್ತು ಅಂತಾರಾಷ್ಟ್ರೀಯ ಟಿಕೆಟ್ ದರ 470 ರಿಯಾಲ್ ಆಗಿದೆ. ಜನವರಿ 23 ಮತ್ತು 26 ರ ನಡುವೆ ಟಿಕೆಟ್ ಕಾಯ್ದಿರಿಸುವವರಿಗೆ ಈ ಪ್ರಯೋಜನ ಲಭ್ಯವಿದೆ. ಫೆಬ್ರವರಿ 12 ರಿಂದ ಸೆಪ್ಟೆಂಬರ್ 30 ರವರೆಗೆ ಪ್ರಯಾಣದ ಸಮಯ ಮಿತಿಯೂ ಇರುತ್ತದೆ ಎಂದು GoFirst ಏರ್‌ಲೈನ್ ಮಿಡಲ್ ಈಸ್ಟ್ ಕಾರ್ಯಾಚರಣೆಗಳ ಮುಖ್ಯಸ್ಥ ಜಲೀಲ್ ಖಾಲಿದ್ ಹೇಳಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಬೆಂಗಳೂರು: ಕೋವಿಡ್ ನಿಂದ ಕಳೆದೆರಡು ವರ್ಷಗಳಿಂದ ಸರಳವಾಗಿ ಗಣರಾಜ್ಯೋತ್ಸವ ಆಚರಿಸಲಾಗಿತ್ತು. ಆದರೆ ಈ ಬಾರಿ ಜನವರಿ 26ರಂದು ಅದ್ಧೂರಿಯಾಗಿ ಗಣರಾಜ್ಯೋತ್ಸವ ಆಚರಣೆಗೆ ಬೆಂಗಳೂರಿನಲ್ಲಿ ಭರ್ಜರಿ ಸಿದ್ಧತೆ ನಡೆಸಲಾಗುತ್ತಿದೆ. ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಕಾರ್ಯಕ್ರಮ ಹಿನ್ನೆಲೆ ಬೆಂಗಳೂರಲ್ಲಿ ಭದ್ರತೆಗೆ 1,200ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ. ಭದ್ರತೆಗಾಗಿ 9 ಡಿಸಿಪಿ, 16 ಎಸಿಪಿ, 45 ಇನ್ಸ್​​ಪೆಕ್ಟರ್​ಗಳು, 101 ಪಿಎಸ್​​ಐ, 14 ಮಹಿಳಾ ಪಿಎಸ್​​ಐ, 83 ಎಎಸ್​ಐ, 577 ಹೆಡ್​​ ಕಾನ್ಸ್​​ಟೇಬಲ್ಸ್, 77 ಮಹಿಳಾ ಸಿಬ್ಬಂದಿ, ಮಫ್ತಿಯಲ್ಲಿ 172 ಪೊಲೀಸ್​ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಹೆಚ್ಚುವರಿ ಭದ್ರತೆಗೆ 10 KSRP ತುಕಡಿ, ಸಿಎಆರ್ ತುಕಡಿ ನಿಯೋಜಿಸಲಾಗಿದೆ. ಮಾಣೆಕ್​ ಷಾ ಮೈದಾನದ ಸುತ್ತಮುತ್ತ 56 ಸಿಸಿ ಕ್ಯಾಮರಾ ಅಳವಡಿಸಲಾಗಿದೆ. 3 ಅಗ್ನಿಶಾಮಕ ವಾಹನಗಳು, 2 ಆಂಬುಲೆನ್ಸ್, 1 ಕ್ಷಿಪ್ರ ಕಾರ್ಯಾಚರಣೆ ಪಡೆ, 1 ಡಿಸ್ವಾಟ್, 1 ಆರ್ ಐವಿ, 1 ಗರುಡಾ, ಮೈದಾನದ ಆಯಾಕಟ್ಟಿನಲ್ಲಿ 100 ಸಿಸಿಟಿವಿ ಅಳವಡಿಸಲಾಗಿದೆ. 4 ಬ್ಯಾಗೇಜ್ ಸ್ಕ್ಯಾನರ್, 20…

Read More

ಬೆಂಗಳೂರು:  ಕೆಲಸಕ್ಕೆ ತೆರಳುತ್ತಿದ್ದ ವೇಳೆ ದ್ವಿಚಕ್ರ ವಾಹನಕ್ಕೆ ಖಾಸಗಿ ಬಸ್​ ಡಿಕ್ಕಿಯಾಗಿ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.ಯಶವಂತಪುರದ ಸತ್ವ ಅಪಾರ್ಟ್​​ಮೆಂಟ್​ ಬಳಿ ಈ ಘಟನೆ ನಡೆದಿದೆ. ವಿನುತಾ ಮೃತಪಟ್ಟ ಮಹಿಳೆ. ವಿನುತ ಖಾಸಗಿ ಕಂಪನಿಯಲ್ಲಿ ಅಕೌಂಟೆಂಟ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಈ ನಡುವೆ ಇಂದು ಕೆಲಸಕ್ಕೆ ದ್ವಿಚಕ್ರವಾಹನದಲ್ಲಿ ತೆರಳುತ್ತಿದ್ದ ವೇಳೆ ಫೋನ್ ಬಂತು ಎಂದು ಗಾಡಿ ಸೈಡಿಗೆ ಹಾಕಿ ವಿನುತಾ ಮಾತನಾಡುತ್ತಿದ್ದರು. ಈ ವೇಳೆ ಹಿಂದೆಯೇ ಬಸ್ ನಿಲ್ದಾಣದಲ್ಲಿ ಜನರನ್ನು ಹತ್ತಿಸಿ ಕೊಳ್ಳುತ್ತಿದ್ದ ಬಸ್ ಚಾಲಕ ಏಕಾಏಕಿ ಬಸ್ ಚಾಲನೆ ಮಾಡಿದ್ದಾನೆ.ಈ ಸಮಯದಲ್ಲಿ ಬಸ್ ಸ್ಕೂಟಿಗೆ ಡಿಕ್ಕಿ ಹೊಡೆದಿದ್ದು ಮಹಿಳೆ ವಿನುತಾ ತಲೆ ಮೇಲೆ ಬಸ್ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತ ಸಂಭವಿಸಿದೆ. ಸ್ಥಳಕ್ಕೆ ಯಶವಂತರಪುರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ತುಮಕೂರು: ಕೊರಟಗೆರೆ ತಾಲ್ಲೂಕಿನ ತಹಶೀಲ್ದಾರ್ ರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ನಾಹೀದಾ ಜಮ್ ಜಮ್ (ಕೆ.ಎ.ಎಸ್) ರವರು ಅಸಿಸ್ಟೆಂಟ್ ಕಮಿಷನರ್ ಆಗಿ ಮುಂಬಡ್ತಿ ಹೊಂದಿದ್ದು. ಪ್ರಸ್ತುತ ಸರ್ಕಾರದ ಆದೇಶದಂತೆ  ತುಮಕೂರಿನ ವಿಶ್ವ ವಿದ್ಯಾನಿಲಯದ  ನೂತನ ಕುಲ ಸಚಿವರಾಗಿ ಸೋಮವಾರ ಅಧಿಕಾರ ಸ್ವೀಕರಿಸಿದರು. ಕೊರಟಗೆರೆ ತಾಲ್ಲೂಕಿನಲ್ಲಿ ಸರಿ ಸುಮಾರು ಒಂದೂವರೆ ವರ್ಷಗಳ ಕಾಲ ಮತ್ತು ಶಿರಾ ತಾಲ್ಲೂಕಿನಲ್ಲಿ ಜನ ಸಾಮಾನ್ಯರಲ್ಲಿ ಸಾಮಾನ್ಯರಾಗಿ ದಕ್ಷತೆಯಿಂದ ಪ್ರಾಮಾಣಿಕವಾಗಿ ಜನಪರ ಕಾಳಜಿಯೊಂದಿಗೆ ಬಡವರ, ನಿರಾಶ್ರಿತರ ವೃದ್ಧರ, ರೈತರ ಪರವಾಗಿ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿ ಕೊರಟಗೆರೆ ತಾಲೂಕಿನಲ್ಲಿ ಮನೆ ಮಾತಾಗಿದ್ದ ಜನಸ್ನೇಹಿ ಅಧಿಕಾರಿ ನಾಹೀದಾಜಮ್ ಜಮ್ ಇದೀಗ ತುಮಕೂರಿನ ವಿಶ್ವ ವಿದ್ಯಾನಿಲಯದ ಕುಲ ಸಚಿವರಾಗಿದ್ದಾರೆ. ತುಮಕೂರು ಜಿಲ್ಲೆಯ ಶಿರಾ ಹಾಗೂ ಕೊರಟಗೆರೆ ತಾಲ್ಲೂಕಿನಲ್ಲಿ ಇವರು ಅತ್ಯುತ್ತಮವಾದ ಕೆಲಸವನ್ನು ಮಾಡಿದ್ದಾರೆ. ತಾಲ್ಲೂಕು ಕಚೇರಿಗೆ ಅಲೆದಾಡಿ ಕೆಲಸಗಳು ಆಗದೆ ಜನರು ಹಿಂತಿರುಗುತ್ತಿದ್ದ ಸಮಯದಲ್ಲಿ ಬಂದಂತಹ ಇವರು ಜನಸ್ನೇಹಿ ಅಧಿಕಾರಿಯಾಗಿ ಜನರ ಕಷ್ಟಕ್ಕೆ ಸ್ಪಂದಿಸಿ ಜನರ ಮನಸ್ಸಿನಲ್ಲಿ ಸ್ಥಾನಪಡೆದುಕೊಂಡಿದ್ದರು. ತಾಲ್ಲೂಕು ದಂಡಾಧಿಕಾರಿಯಾಗಿ  ಬಂದಾಗಿನಿಂದಲೂ ಇಲ್ಲಿಯವರೆಗೂ …

Read More

ನನ್ನ ಅವಧಿಯಲ್ಲಿ ಒಂದೇ ಒಂದು ಪೈಸೆ ಲಂಚ ತೆಗೆದುಕೊಂಡರೇ ತೋರಿಸಲಿ. ನಾನು ರಾಜಕೀಯ ನಿವೃತ್ತಿ ಪಡೆದು ಸನ್ಯಾಸತ್ವ ಸ್ವೀಕರಿಸುತ್ತೇನೆ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಸವಾಲು ಹಾಕಿದರು. ಕೋಲಾರದ ಟಮಕ ಬಳಿ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ  ಸಿಎಂ ಸಿದ್ಧರಾಮಯ್ಯ, ಹೈಕಮಾಂಡ್ ಒಪ್ಪಿಗೆ ಕೊಟ್ಟರೆ ನಾನು ಕೋಲಾರದಲ್ಲಿ ಸ್ಪರ್ಧೆ ಮಾಡ್ತೇನೆ. ನಾನು ಈಗಾಗಲೇ ಹೇಳಿರುವಂತೆ ಪಕ್ಷದ ಹೈಕಮಾಂಡ್​ ಸೂಚಿಸಿದರೆ ಕೋಲಾರದಿಂದ ಸ್ಪರ್ಧಿಸುತ್ತೇನೆ ಎಂದು ಸ್ಪಷ್ಟನೆ ನೀಡಿದರು. ಹಾಗೆಯೇ ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಅಲೆ ಕಾಣುತ್ತಿದೆ. ಹೀಗಾಗಿ ಬಿಜೆಪಿಯವರು ಹೆದರಿಕೊಂಡು ವಾರಕ್ಕೊಂದು ಸಲ ಮೋದಿಯವರನ್ನು ಕರೆಸುತ್ತಿದ್ದಾರೆ. ಮೋದಿ ಮತ್ತೆ ನಮಗೆ ಅಧಿಕಾರ ಕೊಡಸ್ತಾರೆ ಅನ್ನೋ ಭರವಸೆಯಲ್ಲಿದ್ದಾರೆ. ಬಿಜೆಪಿಯುವರಿಗೆ ಮೋದಿಯೇ ಬಂಡವಾಳ. 100 ಸಾರಿ ಮೋದಿ ಅಮಿತ್ ಶಾ ಬಂದು ಕ್ಯಾಂಪ್ ಮಾಡಿದರೂ ಕೂಡ ಕಾಂಗ್ರೆಸ್ ಅಧಿಕಾರಕ್ಕೆ ಬರುವುದನ್ನ ತಡೆಯಲು ಸಾಧ್ಯವಿಲ್ಲ ಎಂದು ಸಿದ್ಧರಾಮಯ್ಯ ಟಾಂಗ್ ನೀಡಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್…

Read More

ತುರುವೇಕೆರೆ: ತಾಲೂಕಿನ ಮುತ್ತುಗದಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಲಕ್ಷ್ಮಣ ಮತ್ತು ಉಪಾಧ್ಯಕ್ಷರಾಗಿ ಆನಂದಕುಮಾರ್ ಆಯ್ಕೆಯಾದರು. 13 ಸದಸ್ಯರ ಬಲವುಳ್ಳ ಸಂಘದಲ್ಲಿ  ತಡ ದಿನವಾದ ಸೋಮವಾರ ನೂತನ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಲಕ್ಷ್ಮಣ ಮತ್ತು ಚಂದ್ರಯ್ಯನವರು ಸ್ಪರ್ಧಿಸಿದ್ದು, 12 ಮತಗಳನ್ನು ಲಕ್ಷ್ಮಣ ಪಡೆದುಕೊಂಡರು. 1 ಮತವನ್ನು ಚಂದ್ರಯ್ಯನವರು ಪಡೆದುಕೊಂಡರು. ಉಪಾಧ್ಯಕ್ಷ ಸ್ಥಾನಕ್ಕೆ ಆನಂದ್ ಕುಮಾರ್ ಅವಿರೋಧ ಆಯ್ಕೆಯಾದರು. ಸಹಕಾರ ಇಲಾಖೆಯ ತುರುವೇಕೆರೆ ವಿಭಾಗದ ಚುನಾವಣಾಧಿಕಾರಿಗಳಾದ ಶಿವಕುಮಾರ್ ರವರು ಲಕ್ಷ್ಮಣರವರು ಅಧಿಕ ಮತಗಳಿಂದ ಆಯ್ಕೆಯಾಗಿದ್ದಾರೆ ಎಂದು ಅಧಿಕೃತವಾಗಿ ಘೋಷಿಸಿದರು, ನೂತನ ಅಧ್ಯಕ್ಷ ಲಕ್ಷ್ಮಣನವರ ಆಯ್ಕೆ ಘೋಷಣೆಯಾಗುತ್ತಿದ್ದಂತೆ ತಮ್ಮ ಬೆಂಬಲಿಗರು ಅಭಿಮಾನಿಗಳು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಈ ವೇಳೆ ಮಾತನಾಡಿದ ನೂತನ ಅಧ್ಯಕ್ಷ ಲಕ್ಷ್ಮಣರವರು  ನನ್ನ ಆಯ್ಕೆಗೆ ಸಹಕರಿಸಿದ ಎಲ್ಲಾ ಸದಸ್ಯರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಮತ್ತು ಸಂಘದ ವತಿಯಿಂದ ರೈತರಿಗೆ ಮತ್ತು ಸಾರ್ವಜನಿಕರಿಗೆ ಅನುಕೂಲವಾಗುವ ಕೆಲಸಗಳು ಹಾಗೂ ಸರ್ಕಾರದಿಂದ ದೊರೆಯುವ ಎಲ್ಲಾ ಸೌಲಭ್ಯಗಳನ್ನು‌…

Read More

ಬೆಳಗಾವಿ : ಫೆಬ್ರುವರಿ 2. 2023 ರಿಂದ ಫೆ.8 ರ ವೆರೆಗೆ ನಡೆಯಲಿರುವ ಯಲ್ಲಮ್ಮಾದೇವಿ ಜಾತ್ರೆ, ಫೆ.4 ರಿಂದ 8 ರ ವರೆಗೆ ನಡೆಯಲಿರುವ ಚನ್ನಬಸವೇಶ್ವರ ಉಳವಿ ಜಾತ್ರೆ ಹಾಗೂ ಫೆ.5 ರಿಂದ 8ರ ವರೆಗೆ ನಡೆಯಲಿರುವ ಭಾವೇಶ್ವರಿ ದೇವಿ ಮೋಹನಗಾ ದಡ್ಡಿ ಜಾತ್ರೆ ಅಂಗವಾಗಿ ಬೆಳಗಾವಿ ಕೇಂದ್ರ/ನಗರ ಮತ್ತು ಬೈಲಹೊಂಗಲ ಬಸ್ ನಿಲ್ದಾಣಗಳಿಂದ ಹೆಚ್ಚಿನ ಬಸ್ ಸೌಲಭ್ಯ ಕಲ್ಪಿಸಲಾಗಿದೆ. ಸಾರ್ವಜನಿಕ ಪ್ರಯಾಣಿಕರಿಗೆ ಉತ್ತಮ ಸಾರಿಗೆ ಸೌಲಭ್ಯ ಒದಗಿಸುವ ದೃಷ್ಠಿಯಿಂದ ಸದರಿ ಜಾತ್ರಾ ಅವಧಿಯಲ್ಲಿ ಬೆಳಗಾವಿ ಕೇಂದ್ರ/ನಗರ ಬಸ್ ನಿಲ್ದಾಣ, ಬೈಲಹೊಂಗಲ ಬಸ್ ನಿಲ್ದಾಣ, ಯಲ್ಲಮ್ಮನ ಗುಡ್ಡ, ಉಳವಿ, ಹಾಗೂ ದಡ್ಡಿಯಲ್ಲಿ ಜಾತ್ರಾ ಬಿಂದು ಸ್ಥಾಪಿಸಿ ಕೆ.ಎಸ್.ಟಿ ಪೇದೆ ರವರನ್ನು ನಿಯೋಜಿಸಿ, ವಾಹನಗಳ ಸುಗಮ ಕಾರ್ಯಾಚರಣೆಗೆ ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕ ಪ್ರಯಾಣಿಕರು ತಂಡಗಳ ರೂಪದಲ್ಲಿ ಪ್ರಯಾಣಿಸಲು ಇಚ್ಚಿಸಿದಲ್ಲಿ, ಸಾಂಧರ್ಬಿಕ ಒಪ್ಪಂದದ ಮೇಲೆ ವಾಹನಗಳನ್ನು ಒದಗಿಸಲಾಗುವುದು. ಈ ಕುರಿತು ಹೆಚ್ಚಿನ ಮಾಹಿತಿಗಾಗಿ  ಮೋಬೈಲ್  ಸಂ -7760991625 (ಘ.ವ್ಯ ಬೆಳಗಾವಿ-1) & 7760991627(ಘ.ವ್ಯ ಬೆಳಗಾವಿ-3)…

Read More