Subscribe to Updates
Get the latest creative news from FooBar about art, design and business.
- ಸರ್ಕಾರಿ ಶಾಲೆಗಳು ಬೇಡವಾಗಿದೆ, ಕಾರಣ ಅರಿಯಬೇಕಿದೆ: ಶಾಸಕ ಎಂ.ಟಿ.ಕೃಷ್ಣಪ್ಪ
- ಸಾಹಿತಿಗಳು ಸರ್ಕಾರದ ಆಶ್ರಯ ಪಡೆಯುವುದನ್ನು ನಿಲ್ಲಿಸಬೇಕು: ಬಂಜಗೆರೆ ಜಯಪ್ರಕಾಶ್
- ದುಪ್ಪಟ್ಟು ಹಣ ಲಾಭ ಗಳಿಸುವ ಆಮಿಷಕ್ಕೆ ಬಲಿಯಾಗಿ 14 ಲಕ್ಷ ರೂ. ಕಳೆದುಕೊಂಡ ಹೊಟೇಲ್ ಸಿಬ್ಬಂದಿ!
- ಎರಡು ಲಾರಿಗಳ ನಡುವೆ ಅಪಘಾತ: ಲಾರಿಯಿಂದ ಚೆಲ್ಲಿದ ಗೋದಿ ಕಂಡವರ ಪಾಲು!
- ಮಧುಗಿರಿ: ಸೊಳ್ಳೆಗಳ ವಿಪರೀತ ಕಾಟಕ್ಕೆ ಬಳಲಿ ಬೆಂಡಾದ ಜನ
- ಮಧುಗಿರಿ: ಬಿಜೆಪಿ ಒಬಿಸಿ ಮೋರ್ಚಾ ಸಭೆ
- ಬೀದರ್ | ಕಬ್ಬು ಬೆಲೆ ನಿಗದಿಗೆ ಆಗ್ರಹಿಸಿ ರೈತನಿಂದ ಉರುಳು ಸೇವೆ
- ನ.19ರಂದು ಎಲ್.ಜಿ.ಹಾವನೂರು ಪ್ರತಿಮೆ ಅನಾವರಣ
Author: admin
ಸರಗೂರು: ಶಿವಾರ್ಚಕರಿಗೆ ಸರಕಾರ ನೀಡುತ್ತಿರುವ ಸಂಭಾವನೆಯು ತುಂಬಾ ಕಡಿಮೆಯಾಗಿದ್ದು, ಇದರಿಂದ ಜೀವನ ನಿರ್ವಹಣೆಯೂ ಕಷ್ಟಕರವಾಗಿರುವುದು ನೋವಿನ ಸಂಗತಿಯಾಗಿದೆ ಎಂದು ಶಾಸಕ ಅನಿಲ್ ಚಿಕ್ಕಮಾದು ಬೇಸರವ್ಯಕ್ತಪಡಿಸಿದರು. ಪಟ್ಟಣದ ಕೋಟೆ-ಸರಗೂರು ಮುಖ್ಯ ರಸ್ತೆಯಲ್ಲಿರುವ ಸೌಜನ್ಯ ಗ್ಯಾಸ್ ಪ್ಯಾಕ್ಟರಿ ಪಕ್ಕದ ತಾಲೂಕು ಶಿವಾರ್ಚಕರ ಸಂಘದ ನಿವೇಶನದಲ್ಲಿ ಬುಧವಾರ ಕೋಟೆ–ಸರಗೂರು ತಾಲೂಕು ಶಿವಾರ್ಚಕರ ಸಂಘದಿಂದ ನಡೆದ ಸಂಘದ ವಾರ್ಷಿಕ ಮಹಾಸಭೆ, ನಾಮಫಲಕ ಅನಾವರಣ, 2023ನೇ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ, ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಶಿವಾರ್ಚಕರಿಗೆ ಹೆಚ್ಚಿನ ಸಂಭಾವನೆ ಸೇರಿದಂತೆ ಸರಕಾರದಿಂದ ಸಿಗುವ ಮೂಲ ಸೌಲಭ್ಯಗಳು ಸಮರ್ಪಕವಾಗಿ ಸಿಗಬೇಕು. ಈ ನಿಟ್ಟಿನಲ್ಲಿ ಇಲಾಖೆ ಕ್ರಮವಹಿಸಬೇಕು. ಇವರು ದೇವಸ್ಥಾನದ ಆರತಿ ತಟ್ಟೆಯಲ್ಲಿನ ಬಿಡಿಗಾಸಿನಿಂದ ತಕ್ಕಮಟ್ಟಿಗೆ ಜೀವನ ನಡೆಸುತ್ತಿದ್ದು, ಸರಕಾರ ಇತ್ತ ಗಮನಹರಿಸಬೇಕು ಎಂದು ಸಲಹೆ ನೀಡಿದರು. ಮೈಸೂರು ಮಹಾರಾಜ ಸಂಸ್ಕೃತ ಪಾಠಶಾಲೆಯ ನಿವೃತ್ತ ಪ್ರಾಧ್ಯಾಪಕ ಪ್ರೊ.ಮಲ್ಲಣ್ಣ ಪ್ರಸ್ತಾವಿಕವಾಗಿ ಮಾತನಾಡಿ, ಇಲ್ಲಿನ ಶಿವಾರ್ಚಕರ ಸಂಘವೂ ರಾಜ್ಯದಲ್ಲೇ ಎರಡನೇ ಸ್ಥಾನ ಪಡೆದಿದ್ದು, ಆರ್ಚಕರ ಪುಣ್ಯನಿಧಿಯಿಂದ ಆರ್ಚಕರ ಪಾಠಶಾಲೆ, ಸಮುದಾಯ…
ಮಧುಗಿರಿ: ಮಿಡಿಗೇಶಿ ಹೋಬಳಿಯ ಹೊಸಕೆರೆ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಕಾರೇನಹಳ್ಳಿ ಗ್ರಾಮದಲ್ಲಿ ಸುಮಾರು 10 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಅಲ್ಪಸಂಖ್ಯಾತರ ಮುರಾರ್ಜಿ ಶಾಲೆಯ ಸುಸಜ್ಜಿತವಾದ ಕಟ್ಟಡವನ್ನು ಶಾಸಕ ಎಂ.ವಿ.ವೀರಭದ್ರಯ್ಯ ಲೋಕಾರ್ಪಣೆ ಮಾಡಿದರು. ಇದೇ ವೇಳೆ ಮಖ್ಯಮಂತ್ರಿಗಳ ಅಮೃತ ನಗೋರೋತ್ಥಾನ ಯೋಜನೆಯಡಿಯಲ್ಲಿ ಮಧುಗಿರಿ ಪುರಸಭೆ ಪಟ್ಟಣದ ವ್ಯಾಪ್ತಿಯಲ್ಲಿ ಬರುವ ಸುಮಾರು 6 ಕೋಟಿ ವೆಚ್ಚದ ರಸ್ತೆ ಚರಂಡಿ ಮತ್ತು ಇತರೆ ಅಭಿವೃದ್ಧಿ ಕಾಮಗಾರಿಗೆ ಶಾಸಕರು ಗುದ್ದಲಿ ಪೂಜೆ ನೆರವೇರಿಸಿದರು.ಈ ಸಂದರ್ಭದಲ್ಲಿ ಪುರಸಭಾ ಅಧ್ಯಕ್ಷರು ಹಾಗೂ ಸದಸ್ಯರು ಹಾಜರಿದ್ದರು. ವರದಿ: ದೊಡ್ಡೇರಿ ಮಹಾಲಿಂಗಯ್ಯ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಕೊರಟಗೆರೆ : ಪುಂಡರಿಂದ ಪ್ರತಿನಿತ್ಯ ರಾಗಿಂಗ್ ಮತ್ತು ವಿನಾಕಾರಣ ಹಾರನ್ ಕಿರಿಕಿರಿ ಕಡಿವಾಣಕ್ಕೆ ಕೊರಟಗೆರೆ ಪಿಎಸ್ ಐ ಚೇತನ್ ಗೌಡ ಮಫ್ತಿಯಲ್ಲಿ ಪಿಲ್ಡಿಗಿಳಿದ್ದಾರೆ. ಶಾಲಾ-ಕಾಲೇಜು ಪ್ರಾರಂಭಕ್ಕೂ ಮುನ್ನಾ ಮತ್ತು ಮುಕ್ತಾಯದ ನಂತರವು ಸಾವಿರಾರು ವಿದ್ಯಾರ್ಥಿಗಳ ನಡುವೆ ಕಾಣದಂತೆ ಕಾವಲು ಕಾಯುವ ರೀತಿಯಲ್ಲಿಯೇ ಪೊಲೀಸರ ಕಾರ್ಯಚರಣೆ ನಡೆದಿದೆ. ಕೊರಟಗೆರೆ ಪಟ್ಟಣದ ಸರಕಾರಿ ಬಸ್ ನಿಲ್ದಾಣ, ಸಂತೇಮೈದಾನ, ಬಾಲಕಿಯರ ಪ್ರೌಢಶಾಲೆ, ಪ್ರಥಮದರ್ಜೆ ಕಾಲೇಜು, ಸರಕಾರಿ ಪದವಿಪೂರ್ವ ಕಾಲೇಜು, ಖಾಸಗಿ ಬಸ್ ನಿಲ್ದಾಣ, ಟೀ ಅಂಗಡಿ ಮತ್ತು ಸಾರ್ವಜನಿಕ ಪ್ರದೇಶದಲ್ಲಿ ಕೆಲಸವೇ ಇಲ್ಲದೇ ವಿನಾಕಾರಣ ತಿರುಗಾಡುವ ಪುಂಡರಿಗೆ ಬಿಸಿಮುಟ್ಟಿಸುವ ಕೆಲಸವನ್ನು ಪಿಎಸ್ ಐ ಚೇತನ್ ಗೌಡ ನೇತೃತ್ವರ ಪೊಲೀಸರ ತಂಡ ಮಾಡಿದೆ. ದ್ವಿಚಕ್ರ ವಾಹನ ಸವಾರರು ರಸ್ತೆಯಲ್ಲಿ ಬೈಕ್ ವಿಲಿಂಗ್ ಮಾಡೋದು, ವಿದ್ಯಾರ್ಥಿಗಳಿಗೆ ರಸ್ತೆ ಬೀಡದೇ ಅಡ್ಡಾದಿಡ್ಡಿ ವಾಹನ ಚಲಾಯಿಸುವುದು, ಹೆಣ್ಣು ಮಕ್ಕಳನ್ನು ಹಿಂದೆಯಿಂದ ಚುಡಾಯಿಸುವುದು, ಜೋರಾಗಿ ಹಾರನ್ ಹೊಡೆದು ಕಿರಿಕಿರಿ ಉಂಟು ಮಾಡೋದು, ರಸ್ತೆಯ ಮಧ್ಯೆ ಕಾದು ಕುಳಿತು ಸಮಸ್ಯೆ ಸೃಷ್ಟಿಸೋದು ಸೇರಿದಂತೆ ಹತ್ತಾರು…
ಮಂಡ್ಯ: ಚಿನ್ನಾಭರಣ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಮನೆಗೆಲಸದ ಮಹಿಳೆಯೊಬ್ಬರನ್ನು ಬಂಧಿಸಿರುವ ಘಟನೆ ನಡೆದಿದೆ. ಸಾವಿತ್ರಿ ಮಹದೇವ್(45) ಬಂಧಿತ ಮಹಿಳೆಯಾಗಿದ್ದು, ಇತ್ತೀಚೆಗೆ ಹಲಗೂರು, ಮಂಡ್ಯ, ಕೆ.ಎಂ. ದೊಡ್ಡಿ ವ್ಯಾಪ್ತಿಗಳಲ್ಲಿ ಕಳವು ನಡೆದಿತ್ತು. ಈ ಸಂಬಂಧ ಸಬ್ ಇನ್ಸ್ ಪೆಕ್ಟರ್ ರವಿ ಕುಮಾರ್ ಅವರು ತಂಡ ರಚಿಸಿ ತನಿಖೆ ನಡೆಸಿದ್ದು, ಆರೋಪಿ ಮಹಿಳೆಯನ್ನು ಬಂಧಿಸಿದ್ದಾರೆ. ಬಂಧಿತ ಮಹಿಳೆಯಿಂದ ಪೊಲೀಸರು 7 ಲಕ್ಷ ರೂ. ಬೆಲೆಬಾಳುವ 123 ಗ್ರಾಮ್ ಚಿನ್ನ ವಶಪಡಿಸಿಕೊಂಡಿದ್ದಾರೆ. ಮಹಿಳೆಯನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಮಂಡ್ಯ ಜಿಲ್ಲಾ ಪೊಲೀಸ್ ಅಭಿಕ್ಷಕರದ ಯತೀಶ್, DSP ನವೀನ್ ಕುಮಾರ್, ಸಿಪಿಐ ಶ್ರೀಧರ್ ರವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು. ರಿಯಾಜ್ ಪಾಷಾ, ನಾಗೇಂದ್ರ, ಸಿದ್ದರಾಜು, ಜಯಕುಮಾರ್, ಮಹೇಶ್, ಸಿದ್ದೇಗೌಡ, ಮಲ್ಲಿಕಾರ್ಜುನ ಚಳುಕಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ವರದಿ: ಶ್ರೀನಿವಾಸ್ ಮಂಡ್ಯ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ…
ಕೇರಳ : ಮಧ್ಯ ತಿರುವಾಂಕೂರಿನ ಪ್ರಮುಖ ರೈತ ಹೋರಾಟಗಳಲ್ಲಿ ಒಂದಾದ ಸೂರನಾಡ್ ಕ್ರಾಂತಿಯ ಎಪ್ಪತ್ಮೂರು ವರ್ಷಗಳು. ಕೇರಳ ರಚನೆಗೂ ಮುನ್ನ ಜನ್ಮಿ ಆಡಳಿತದ ವಿರುದ್ಧ ಸೂರನಾಡಿನ ಕ್ರಾಂತಿ ಇತಿಹಾಸ ಪುಸ್ತಕಗಳಲ್ಲಿ ಜ್ವಲಂತ ನೆನಪು. ಸೂರನಾಡ್ ಮಧ್ಯ ತಿರುವಾಂಕೂರಿನ ರಾಜಕೀಯ ಇತಿಹಾಸದ ಮೇಲೆ ಕಾಲವು ಬರೆದ ಕೆಂಪು ಅಧ್ಯಾಯವಾಗಿದೆ.ಸೂರನಾಡ್ ಕ್ರಾಂತಿಯು ಒಂದು ದೇಶ ಮತ್ತು ಅದರ ಹತಾಶ ಜನರು ಸ್ಥಳೀಯ ಆಡಳಿತದ ವಿರುದ್ಧ ತಮ್ಮ ಪ್ರಾಣವನ್ನು ರಕ್ಷಿಸುವ ನೆನಪುಗಳನ್ನು ಹೇಳಬೇಕಾಗಿದೆ. ಜನ್ಮಿ ಆಡಳಿತದ ವಿರುದ್ಧಸೂರನಾಟೆಯ ರೈತರು ಮತ್ತು ಕಾರ್ಮಿಕರಲ್ಲಿ ರೂಪುಗೊಂಡ ಪ್ರತಿಭಟನೆಯು ಶೀಘ್ರವಾಗಿ ಬಲವನ್ನು ಪಡೆಯಿತು. ಜನನ ನಿಷೇಧದ ಅಂಗವಾಗಿ ಮೀನು ಮಾರಾಟಕ್ಕೆ ಸಂಬಂಧಿಸಿದ ಮುಷ್ಕರದಲ್ಲಿ ಸಬ್ ಇನ್ಸ್‌ಪೆಕ್ಟರ್ ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ. ಇದರ ಬೆನ್ನಲ್ಲೇ ಸ್ಥಳಕ್ಕೆ ಆಗಮಿಸಿದ ತಿರುಕೊಚ್ಚಿಯ ಪ್ರಧಾನಿ ಪರವೂರು ಟಿ.ಕೆ.ನಾರಾಯಣಪಿಳ್ಳ ಅವರು ಕೇರಳದ ಭೂಪಟದಲ್ಲಿ ಸೂರನಾಡು ಎಂಬ ನಾಡು ಇರಬಾರದು ಎಂದು ಘೋಷಿಸಿದರು. ನಂತರ ನಡೆದ ರಕ್ತಸಿಕ್ತ ಹೋರಾಟ ಮತ್ತು ಪೊಲೀಸ್ ದೌರ್ಜನ್ಯವು ಏಳು ದಶಕಗಳಿಗೂ ಹೆಚ್ಚು ಕಾಲದ…
ಈ ಬಾರಿ ಜೆಡಿಎಸ್ ಅಧಿಕಾರಕ್ಕೆ ಬರದಿದ್ದರೇ 2028ಕ್ಕೆ ಜೆಡಿಎಸ್ ವಿಸರ್ಜನೆ ಮಾಡುತ್ತೇನೆ ಎಂದು ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ಸಿಂದಗಿಯಲ್ಲಿ ಮಾತನಾಡಿದ ಹೆಚ್.ಡಿ. ಕುಮಾರಸ್ವಾಮಿ, ಈ ಬಾರಿ ಅಧಿಕಾರಕ್ಕೆ ಬರದಿದ್ದರೇ 2028ಕ್ಕೆ ಜೆಡಿಎಸ್ ವಿಸರ್ಜನೆ ಮಾಡುತ್ತೇನೆ. 2028ರ ಬಳಿಕ ನಿಮ್ಮ ಬಳಿ ಮತ ಕೇಳಲು ಬರಲ್ಲ. ನಮ್ಮ ತಪ್ಪಿನಿಂದ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದೇವೆ . ಹೆಚ್.ಡಿ. ದೇವೆಗೌಡರ ಮೇಲೆ ನೀವು ಇಟ್ಟಿರುವ ಪ್ರೀತಿಯನ್ನ ಮರೆತಿಲ್ಲ. ಪಂಚರತ್ನ ಯೋಜನೆಗೆ ಜಾತಿ ಧರ್ಮ ಇಲ್ಲ. ಈ 5 ಕಾರ್ಯಕ್ರಮಗಳು ಜಾರಿಯಾದರೇ ರಾಮರಾಜ್ಯವಾಗುತ್ತದೆ ಎಂದು ಹೇಳಿದರು. ಬಿಜೆಪಿಯವರು ರಾಜ್ಯದ ಜನರ ಹಣವನ್ನ ಲೂಟಿ ಮಾಡಿದ್ದಾರೆ. ಕಾಂಗ್ರೆಸ್ ಬಿಜೆಪಿ ರೈತರಿಗೆ ಯಾವುದೇ ಯೋಜನೆ ಜಾರಿ ಮಾಡಿಲ್ಲ ಎಂದು ಹೆಚ್.ಡಿ ಕುಮಾರಸ್ವಾಮಿ ಕಿಡಿಕಾರಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ನ್ಯೂಜಿಲೆಂಡ್ : ಪ್ರಧಾನಿ ಜೆಸಿಂತಾ ಅರ್ಡೆರ್ನ್ ರಾಜೀನಾಮೆ ನೀಡಲು ಸಿದ್ಧತೆ ನಡೆಸಿದ್ದಾರೆ. ಮುಂದಿನ ತಿಂಗಳು ರಾಜೀನಾಮೆ ನೀಡುವುದಾಗಿ ಸ್ವತಃ ಜೆಸಿಂತಾ ಘೋಷಿಸಿದ್ದಾರೆ. ಜೆಸಿಂತಾ ಅರ್ಡೆರ್ನ್ ಅವರ ರಾಜೀನಾಮೆ ಘೋಷಣೆ ಅಕ್ಟೋಬರ್ 14 ರಂದು ನ್ಯೂಜಿಲೆಂಡ್‌ನಲ್ಲಿ ನಡೆಯಲಿದೆ. ಇನ್ನು ಒಂದು ಚುನಾವಣೆಯನ್ನು ಎದುರಿಸುವ ಶಕ್ತಿ ತನಗಿಲ್ಲ ಮತ್ತು ಪ್ರಧಾನಿಯ ಅವಧಿ ಅವರಿಂದ ಸಾಕಷ್ಟು ಕಸಿದುಕೊಂಡಿದೆ ಎಂದು ವಿವರಿಸುವ ಮೂಲಕ ಜೆಸಿಂತಾ ರಾಜೀನಾಮೆ ಘೋಷಣೆಯನ್ನು ವಿವರಿಸಿದ್ದಾರೆ. ಜೆಸಿಂತಾ ಅರ್ಡೆರ್ನ್ ಅವರು ಲೇಬರ್ ಪಕ್ಷದ ನಾಯಕಿ ಸ್ಥಾನದಿಂದ ಕೆಳಗಿಳಿಯುವುದಾಗಿ ಘೋಷಿಸಿದ್ದಾರೆ. ತಾನು ಯಾವುದೇ ಭವಿಷ್ಯದ ಯೋಜನೆಗಳನ್ನು ನಿರ್ಧರಿಸಿಲ್ಲ ಮತ್ತು ಪ್ರಸ್ತುತ ತನ್ನ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಲು ಬಯಸುತ್ತೇನೆ ಎಂದು ಜೆಸಿಂತಾ ಹೇಳಿದರು. 2017 ರಲ್ಲಿ, 37 ವರ್ಷ ವಯಸ್ಸಿನ ಜೆಸಿಂತಾ ಅವರು ನ್ಯೂಜಿಲೆಂಡ್ ಪ್ರಧಾನಿಯಾಗಿ ಆಯ್ಕೆಯಾದಾಗ ವಿಶ್ವದ ಅತ್ಯಂತ ಕಿರಿಯ ಪ್ರಧಾನಿಯಾದರು. ಜೆಸಿಂತಾ ಅವರು ಅಧಿಕಾರದಲ್ಲಿದ್ದಾಗ ತಾಯಿಯಾದ ಎರಡನೇ ವಿಶ್ವ ನಾಯಕಿಯಾಗಿದ್ದಾರೆ. ನ್ಯೂಜಿಲೆಂಡ್‌ನಲ್ಲಿ ನಡೆದ ಅನೇಕ ಘಟನೆಗಳನ್ನು ಉಲ್ಲೇಖಿಸಿ ಜಗತ್ತು ಜೆಸಿಂತಾ ಅವರ ಆದರ್ಶಪ್ರಾಯ…
ಬೆಳಗಾವಿ: 2022-23ನೇ ಸಾಲಿನಲ್ಲಿ ನಶಿಸಿ ಹೋಗುತ್ತಿರುವ ತಳ ಸಮುದಾಯದ ವಿಶಿಷ್ಟ ಮುನ್ನೆಲೆಗೆ ತರಲು ಜಿಲ್ಲೆಯ 50 ಜನ ಪುರುಷ/ಮಹಿಳಾ ಅಭ್ಯರ್ಥಿಗಳಿಗೆ 20 ದಿನಗಳ ಕಾಲ ತರಬೇತಿ ನೀಡಲಾಗುವುದು, ಆಸಕ್ತ ಅಭ್ಯರ್ಥಿಗಳು ಜನ್ಮ ದಿನಾಂಕ ದಾಖಲೆ, ಆಧಾರ ಕಾರ್ಡ್, ಜಾತಿ ಪ್ರಮಾಣ ಪತ್ರದೊಂದಿಗೆ ಜನವರಿ 21-2023 ರೊಳಗಾಗಿ ಅರ್ಜಿ ಸಲ್ಲಿಸಬೇಕು. 2022-23ನೇ ಸಾಲಿನಲ್ಲಿ ಸಾಮಾಜಿಕ ಅರಿವು ಸಾಂಸ್ಕ್ರತಿಕ ಕಾರ್ಯಕ್ರಮದಲ್ಲಿ ನೀಡಬಯಸುವ ಜಿಲ್ಲೆಯ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಆಸಕ್ತ ಕಲಾತಂಡಗಳು ಜನ್ಮ ದಿನಾಂಕ ದಾಖಲೆ, ಆಧಾರ ಕಾರ್ಡ್, ಜಾತಿ ಪ್ರಮಾಣ ಪತ್ರದೊಂದಿಗೆ ಜನವರಿ 21-2023 ರೊಳಗಾಗಿ ಅರ್ಜಿ ಸಲ್ಲಿಸಬೇಕು. ಹಾಗೂ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0831-2474649 ಗೆ ಸಂಪರ್ಕಿಸಬಹುದು ಎಂದು ಕನ್ನಡ ಮತ್ತು ಸಂಸ್ಕ್ರತಿಕ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಬೆಳಗಾವಿ : ಲೈಂಗಿಕ ದೌರ್ಜನ್ಯ, ಅಪೌಷ್ಟಿಕತೆ, ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿ, ಭಿಕ್ಷಾಟನೆ ಸೇರಿದಂತೆ ವಿವಿಧ ಬಗೆಯಲ್ಲಿ ಕಾನೂನು ಸಂಘರ್ಷಕ್ಕೊಳಗಾದ ಮಕ್ಕಳನ್ನು ಗುರುತಿಸಿ ಅವರನ್ನು ಮುಖ್ಯವಾಹಿನಿಗೆ ಕರೆತರಲು ಎಲ್ಲ ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ನಾಗಣ್ಣಗೌಡ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬುಧವಾರ(ಜ.18) ನಡೆದ ಬಾಲನ್ಯಾಯಾಲಯ ಕಾಯ್ದೆ, ಆರ್.ಟಿ.ಇ. ಕಾಯ್ದೆ, ಲೈಂಗಿಕ ದೌರ್ಜನ್ಯದಿಂದ ಮಕ್ಕಳ ಸಂರಕ್ಷಣಾ ಕಾಯ್ದೆ(ಪೋಕ್ಸೊ) ಅನುಷ್ಠಾನ ಕುರಿತು ಜಿಲ್ಲೆಯ ಎಲ್ಲ ಭಾಗೀದಾರರೊಂದಿಗೆ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೆಲವು ಶಾಲೆಗಳಲ್ಲಿ ಶಿಕ್ಷಕರಿಂದ ಲೈಂಗಿಕ ದೌರ್ಜನ್ಯ ಎಸಗುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ತಂದೆಯ ವಯಸ್ಸಿನ ವ್ಯಕ್ತಿಯಿಂದ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿರುವುದು ಖೇದಕರ. ಇಂತಹ ಸನ್ನಿವೇಶದಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಯ ಹೊಣೆ ನಮ್ಮೆಲ್ಲರ ಮೇಲಿದೆ. ಶಾಲೆಬಿಟ್ಟ ಮಕ್ಕಳನ್ನು ಶಾಲೆಗೆ ಸೇರಿಸುವರೆಗೆ ಸಂಬಂಧಿಸಿದ ಅಧಿಕಾರಿಗಳು ಗಮನಹರಿಸಬೇಕು. ಶಾಲಾಮಕ್ಕಳಲ್ಲಿ ಲೈಂಗಿಕ ದೌರ್ಜನ್ಯ ಕಂಡುಬಂದ…
ಗದಗ : ಮುಖ್ಯಮಂತ್ರಿ ಬೊಮ್ಮಾಯಿ ಅವರೇ ನಿಮ್ಮ ಪಾಪದ ಕೊಡ ತುಂಬಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ಧಾಳಿ ನಡೆಸಿದ್ದಾರೆ. ಗದಗನಲ್ಲಿ ನಡೆದ ಪ್ರಜಾಧ್ವನಿ ಯಾತ್ರೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಅಧಿಕಾರಕ್ಕೆ ಬರುವುದು ಲೂಟಿ ಹೊಡೆಯೋದಕ್ಕೆ ಅಲ್ಲ, ಬೊಮ್ಮಾಯಿ ಅವರೇ ನಿಮ್ಮ ಪಾಪದ ಕೊಡ ತುಂಬಿದೆ, ಮುಂದಿನ ದಿನಗಳಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದರು. ಒಂದು ವಿಶೇಷ ತನಿಖಾ ಆಯೋಗ ರಚನೆ ಮಾಡಿ ತಕ್ಕ ಪಾಠ ಕಲಿಸುವಂತೆ ಜನರಿಗೆ ಮನವಿ ಮಾಡುತ್ತೇನೆ, ಯಾರು ಲೂಟಿ ಹೊಡೆದಿದ್ದಾರೋ ಅವರಿಗೆ ಶಿಕ್ಷೆ ಕಾದಿದೆ ಎಂದು ಸಿದ್ದರಾಮಯ್ಯ ವಾಗ್ಧಾಳಿ ನಡೆಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy