Author: admin

ಬೆಳಗಾವಿ:ಬೆಳಗಾವಿಯ ೧೮ ವಿಧಾನಸಭಾ ಮತಕ್ಷೇತ್ರದ ಮತ ಎಣಿಕೆಗೆ ಬೆಳಗಾವಿಯ ಆರ್ ಪಿಡಿ ಕಾಲೇಜಿನಲ್ಲಿ ಸಕಲ ಸಿದ್ಧತೆ ಮಾಡಲಾಗಿದ್ದು, ಮಧ್ಯಾಹ್ನದ ವೇಳೆಗೆ ಎಲ್ಲ ಫಲಿತಾಂಶ ಬರುವ ಸಾಧ್ಯತೆ ಇದೆ ಎಂದು ಜಿಲ್ಲಾ ಚುನಾವಣಾ ಅಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದರು. ಶುಕ್ರವಾರ ನಗರದ ಆರ್ ಪಿಡಿ ಕಾಲೇಜನಲ್ಲಿ ಸ್ಥಾಪನೆ ಮಾಡಲಾದ ಸ್ಟ್ರಾಂಗ್ ರೂಂ ಬಳಿ ಸುದ್ದಿಗಾರರೊಂದಿಗೆ ಮಾತ‌ನಾಡಿದ ಅವರು, ರಾಜ್ಯದಲ್ಲಿ ಅತಿ ದೊಡ್ಡ ಮತ ಏಣಿಕೆ ಕೇಂದ್ರ ಆರ್ ಪಿಡಿ ಕಾಲೇಜಿನಲ್ಲಿ ಮಾಡಲಾಗಿದೆ. ಮೊದಲಿಗೆ ೮ ಗಂಟೆಗೆ ಪೋಸ್ಟಲ್ ಬ್ಯಾಲೆಟ್ ಪೇಪರ್ ಕೌಂಟಿಗ್ ಮಾಡಲಾಗುವುದು. ೮.೩೦ರಿಂದ ಇವಿಎಂ ಮತ ಎಣಿಕೆ ಪ್ರಾರಂಭವಾಗುತ್ತದೆ. ಒಂದು ಟೇಬಲ್ ನಲ್ಲಿ ೫೦೦ ಮತಗಳನ್ನು ಎಣಿಕೆ ಮಾಡಲು ಸಾಧ್ಯವಾಗುತ್ತದೆ. ಮಧ್ಯಾಹ್ನದವರೆಗೆ ಎಲ್ಲ ಫಲಿತಾಂಶ ಹೊರ ಬರುವ ಸಾಧ್ಯತೆ ಇದೆ ಎಂದರು. ಮೂರು ಹಂತದಲ್ಲಿ ಭದ್ರತೆ ವ್ಯವಸ್ಥೆ ಮಾಡಲಾಗಿದೆ. ಗುರುತಿನ ಚೀಟಿ ಇಲ್ಲದೆ ಯಾರಿಗೂ ಒಳಗಡೆ ಬಿಡುವುದಿಲ್ಲ. ಸುಮಾರು ೫ ಸಾವಿರ ಜನ ಇರುವುದರಿಂದ ಏಜೆಂಟರಿಗೂ ಗುರುತಿನ ಚೀಟಿ…

Read More

ಈ ಹಿಂದೆ ಮಂಗನ ಜ್ವರ ಎಂದು ಕರೆಯಲ್ಪಡುವ ಎಂ ಪಾಕ್ಸ್ ಅನ್ನು ವಿಶ್ವ ಆರೋಗ್ಯ ಸಂಸ್ಥೆಯು ಸಾಂಕ್ರಾಮಿಕ ರೋಗಗಳ ಪಟ್ಟಿಯಿಂದ ತೆಗೆದುಹಾಕಿದೆ. ಕಳೆದ ವರ್ಷ 100 ಕ್ಕೂ ಹೆಚ್ಚು ದೇಶಗಳಿಗೆ ಹರಡಿದಾಗ ಎಂ ಪಾಕ್ಸ್ ಅನ್ನು ಸಾಂಕ್ರಾಮಿಕ ರೋಗವೆಂದು ಪಟ್ಟಿ ಮಾಡಲಾಗಿದೆ. ಎಂ.ಪಾಕ್ಸ್ ಪ್ರಕರಣಗಳು ಕಡಿಮೆಯಾದ ಕಾರಣ ರೋಗವನ್ನು ಸಾಂಕ್ರಾಮಿಕ ಪಟ್ಟಿಯಿಂದ ತೆಗೆದುಹಾಕಲಾಗಿದೆ. WHO ಡೈರೆಕ್ಟರ್ ಜನರಲ್ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಕಳೆದ ವರ್ಷ ಜುಲೈನಲ್ಲಿ M.pox ಅನ್ನು ಸಾಂಕ್ರಾಮಿಕ ರೋಗವೆಂದು ಪಟ್ಟಿ ಮಾಡಿದರು. ಕಳೆದ ಮೂರು ತಿಂಗಳಲ್ಲಿ ಎಂ ಪಾಕ್ಸ್ ಪೀಡಿತರ ಸಂಖ್ಯೆಯಲ್ಲಿ ಭಾರಿ ಇಳಿಕೆಯಾಗಿದ್ದು, ಈ ಬಗ್ಗೆ ಭಯಪಡುವ ಅಗತ್ಯವಿಲ್ಲ ಎಂದು ತಜ್ಞರ ಸಮಿತಿ ಸೂಚಿಸಿದೆ ಎಂದು ತಿಳಿಸಿದರು. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಮಾನವರಲ್ಲಿ ಮಂಕಿಪಾಕ್ಸ್ ಸೋಂಕಿನ ಮೊದಲ ಪ್ರಕರಣಗಳು 1970 ರಲ್ಲಿ ವರದಿಯಾಗಿದೆ. ಅಂದಿನಿಂದ 11 ಆಫ್ರಿಕನ್ ದೇಶಗಳಲ್ಲಿ ವೈರಸ್ ದೃಢಪಟ್ಟಿದೆ. ಈ ರೋಗವು ಆಫ್ರಿಕಾದ ಕಾಡು ಪ್ರಾಣಿಗಳಿಂದ ಮನುಷ್ಯರಿಗೆ ಹರಡಿತು. ಸೋಂಕಿತ ವ್ಯಕ್ತಿ ಕೆಮ್ಮಿದಾಗ…

Read More

ಬೆಂಗಳೂರು: ಈ ಬಾರಿ ನಮ್ಮ ಕಾರ್ಯಕರ್ತ ಒಬ್ಬರು ಮುಖ್ಯಮಂತ್ರಿ ಆಗುತ್ತಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಇನ್ನು ತಾವು ಮುಖ್ಯಮಂತ್ರಿಯಾಗುವ ವಿಚಾರವಾಗಿ ಮಾತನಾಡಿದ ಅವರು ‘ ಸಿಎಂ ಸ್ಥಾನದ ವಿಚಾರ ಬಂದಾಗ ನಾನು ರಾಜ್ಯಕ್ಕೆ ಬರುವ ಪ್ರಶ್ನೆ ಇಲ್ಲ. ನನಗೆ ಮೋದಿ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ನಾನು ಅಲ್ಲೇ ಖುಷಿಯಾಗಿ ಇದ್ದೇನೆ. ಮತಗಟ್ಟೆ ಸಮೀಕ್ಷೆ ಸುಳ್ಳಾಗುತ್ತದೆ. ನಾವು ಬಹುಮತದ ಸರ್ಕಾರ ಮಾಡುವ ವಿಶ್ವಾಸ ಇದ್ದು, ಬೂತ್ ಮಟ್ಟದ ಕಾರ್ಯಕರ್ತರ ವರದಿ ಪ್ರಕಾರ 120 ಕ್ಕೂ ಹೆಚ್ಚು ಸೀಟುಗಳಲ್ಲಿ ಮುಂದೆ ಇದ್ದೇವೆ. ಪ್ರಧಾನಿ ಮೋದಿ ರೋಡ್ ಶೋ ಮತದಾರರ ಮೇಲೆ ಪರಿಣಾಮ ಆಗಿದೆ ಎಂದಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಮೈಸೂರಿನ ದೊರೆ ಟಿಪ್ಪು ಸುಲ್ತಾನನ ಚಿನ್ನಾಭರಣದ ಖಡ್ಗವನ್ನು ಬ್ರಿಟನ್ ಹರಾಜು ಹಾಕಲು ಹೊರಟಿದೆ. ಇದೇ ತಿಂಗಳ 23ರಂದು ನಡೆಯಲಿರುವ ಹರಾಜಿನಲ್ಲಿ ಚಿನ್ನದ ಕತ್ತಿ 15ರಿಂದ 20 ಕೋಟಿ ರೂ.ವರೆಗೆ ಬೆಲೆ ಬಾಳುವ ನಿರೀಕ್ಷೆಯಿದೆ. ಕತ್ತಿಯ ಮೇಲೆ ಬಹಳಷ್ಟು ವರ್ಣಚಿತ್ರಗಳನ್ನು ಬಳಸಲಾಗುತ್ತದೆ. ರಾಜಸ್ಥಾನದ ಮೇವಾರ್‌ನಲ್ಲಿ ಕೋಫ್ಟಗಿರಿ ಶೈಲಿಯ ಕಲೆಯು ಜನಪ್ರಿಯವಾಗಿತ್ತು.ಸುಖೇಲ ಖಡ್ಗವು ಉಕ್ಕಿನಿಂದ ಮಾಡಲ್ಪಟ್ಟಿದೆ ಮತ್ತು 100 ಸೆಂ.ಮೀ ಉದ್ದವಾಗಿದೆ. ಹಿಡಿತದ ನಂತರ ಒಂದು ಬದಿಯಲ್ಲಿ ಹರಿತವಾಗಿರುವ ಕತ್ತಿಯು ತುದಿಯನ್ನು ತಲುಪುವ ಹೊತ್ತಿಗೆ ಎರಡು ಅಂಚಾಗುತ್ತದೆ. ಕರ್ನಾಟಕದ ದೇವನಹಳ್ಳಿಯಲ್ಲಿ ಮೈಸೂರು ಸೈನ್ಯಾಧಿಕಾರಿಯಾಗಿದ್ದ ಹೈದರ್ ಅಲಿಯವರ ಮಗ ಟಿಪ್ಪು ಸುಲ್ತಾನ್ 1799 ರಲ್ಲಿ ಮೈಸೂರು ಬಳಿಯ ಶ್ರೀರಂಗಪಟ್ಟಣದಲ್ಲಿ ಬ್ರಿಟಿಷರೊಂದಿಗಿನ ಯುದ್ಧದಲ್ಲಿ ನಿಧನರಾದರು. ನಂತರ ಶ್ರೀರಂಗಪಟ್ಟಣದ ಅರಮನೆಯಲ್ಲಿ ದೊರೆತ ಖಡ್ಗವನ್ನು ಬ್ರಿಟಿಷ್ ಸೇನೆಯು ಮೇಜರ್ ಜನರಲ್ ಡೇವಿಡ್ ಬೇರ್ಡ್ ಅವರಿಗೆ ನೀಡಲಾಯಿತು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಚಿಕ್ಕೋಡಿ: ನನಗೆ 1 ಲಕ್ಷ 20 ಸಾವಿರ ಮತಗಳು ನನಗೆ ಬರುವ ನಿರೀಕ್ಷೆ ಇದೆ. 40 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ನಾನು ಗೆಲ್ಲುತ್ತೇನೆ ಎಂದು ಅಥಣಿ ಕೈ ಅಭ್ಯರ್ಥಿ, ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಹೇಳಿದ್ದಾರೆ. ಅಥಣಿ ಸ್ವಗೃಹದಲ್ಲಿ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ಸೇರಿದ ಮೇಲೆ ಈ ಬಾರಿ ಉತ್ಸಾಹ ಹುಮ್ಮಸ್ಸಿನಿಂದ ಚುನಾವಣೆ ಎದುರಿಸಿದ್ದೇನೆ. ಕಾಂಗ್ರೆಸ್ ವೋಟ್ ಬ್ಯಾಂಕ್ ಜೊತೆಗೆ ಬಿಜೆಪಿ ತೊರೆದು ನನ್ನ ಬೆಂಬಲಿಗರು ಬಂದಿದ್ದಾರೆ ಎಂದರು. ಎಕ್ಸಿಟ್ ಪೋಲ್‍ ಗಳಲ್ಲಿ ಕಾಂಗ್ರೆಸ್ ಮುನ್ನೆಡೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಕರ್ನಾಟಕದಲ್ಲಿ 35 ವರ್ಷಗಳಿಂದ ಸತತವಾಗಿ ಒಂದೇ ಸರ್ಕಾರ ಎರಡು ಬಾರಿ ಅಧಿಕಾರಕ್ಕೆ ಬಂದಿಲ್ಲ. ಬಿಜೆಪಿ ಪಕ್ಷದಲ್ಲಿ ಪ್ರಾಮಾಣಿಕರು ನಿಷ್ಠಾವಂತರಿಗೆ ನಿರ್ಲಕ್ಷ್ಯ ಆಗಿದೆ. ವ್ಯಾಪಾರೀಕರಣದಿಂದ ಬಿಜೆಪಿ ಪಕ್ಷಕ್ಕೆ ಬಹಳ ದೊಡ್ಡ ಹಾನಿಯಾಗಿದೆ. ಕಾಂಗ್ರೆಸ್ ನಾಯಕರು ಒಗ್ಗಟ್ಟಿನ ಪ್ರದರ್ಶನ ಮಾಡಿದ್ದಾರೆ. 5 ಗ್ಯಾರಂಟಿ ಯೋಜನೆಗಳಿಂದ ಬಡವರು, ಕಾರ್ಮಿಕರಿಗೆ ಬಹಳಷ್ಟು ಆಶಾ ಕಿರಣ ಮೂಡಿದೆ. ಬಡವರು ಕಾರ್ಮಿಕರು ಹಾಗೂ ಮಧ್ಯಮ…

Read More

ಶಿವಮೊಗ್ಗ: ರಾಜ್ಯದಲ್ಲಿ ಸಮೀಕ್ಷೆಗಳು ಏನೇ ಹೇಳಲಿ, 115 ಸ್ಥಾನ ಪಡೆದು ನಾವು ಸರ್ಕಾರ ರಚನೆ ಮಾಡುತ್ತೇವೆ ಎಂದು ಮಾಜಿ‌ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು. ಜಿಲ್ಲೆಯ ಶಿಕಾರಿಪುರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಸರ್ಕಾರ ರಚನೆ ಮಾಡುವ ವಿಶ್ವಾಸ ನನಗೆ ಇದೆ. ಮತದಾನದ ನಂತರ ರಾಜ್ಯದ ಉದ್ದಗಲಕ್ಕೂ ನಮ್ಮ ಎಲ್ಲಾ ಮುಖಂಡರೊಂದಿಗೆ ನಾನು ಮಾತನಾಡಿದ್ದೇನೆ. ಎಲ್ಲರ ಅಭಿಪ್ರಾಯ ಸಂಗ್ರಹ ಮಾಡಿದ್ದೇನೆ. ಆ ಆಧಾರದ ಮೇಲೆ ಸರ್ಕಾರ ರಚನೆ ಮಾಡುವ ವಿಶ್ವಾಸ ಇದೆ ಎಂದರು. ನಾನು ಪ್ರಚಾರಕ್ಕೆ ಹೋದಂತಹ ವೇಳೆ ಸಿಕ್ಕಂತಹ ಜನ ಬೆಂಬಲ ಎಸ್‌ಸಿ, ಎಸ್‌ಟಿಗೆ ಕೊಟ್ಟಂತಹ ಮೀಸಲಾತಿ ಗಮನಿಸಿದಾಗ ಈ ಸಮೀಕ್ಷೆಗಳಿಗೆ ಆಧಾರ ಇರುವುದಿಲ್ಲ. ನಿಶ್ಚಿತವಾಗಿ 115ಕ್ಕೂ ಹೆಚ್ಚು ಸ್ಥಾನ ಪಡೆದು ಸ್ವಂತ ಶಕ್ತಿ ಮೇಲೆ ಸರ್ಕಾರ ರಚನೆ ಮಾಡುತ್ತೇವೆ. ಕಾಂಗ್ರೆಸ್‌ನವರು ಏನೇ ಹೇಳಲಿ ಅದಕ್ಕೆ ನಾನು ಟೀಕೆ ಮಾಡುವುದಿಲ್ಲ. ಸಮೀಕ್ಷೆಗಳು ಕಾಂಗ್ರೆಸ್ ಪರವಾಗಿ ಕೊಟ್ಟಿರುವುದು ನಿಜ. ಒಂದೆರೆಡು ಸಮೀಕ್ಷೆಗಳು ನಮ್ಮ ಪರವಾಗಿಯೂ ಇವೆ ಎಂದು ಹೇಳಿದರು. ಈ…

Read More

ತುರುವೇಕೆರೆ: ತಾಲೂಕಿನ ಲೋಕಮ್ಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಕೋಳಘಟ್ಟ ಗ್ರಾಮದ ದಲಿತ ಕಾಲೋನಿಯು, 20 ವರ್ಷಕ್ಕೂ ಹೆಚ್ಚು ದಿನದಿಂದ ಮೂಲಸೌಕರ್ಯದಿಂದ ವಂಚಿತವಾಗಿಯೇ ಉಳಿದಿದೆ. ಈ ದಲಿತ ಕಾಲೋನಿಯಲ್ಲಿ ಸುಮಾರು 35ಕ್ಕೂ ಹೆಚ್ಚು ಮನೆಗಳಿದ್ದು, ಈ ಮನೆಗಳಿಗೆ ಅಚ್ಚುಕಟ್ಟಾದ ಚರಂಡಿ ವ್ಯವಸ್ಥೆ ಇಲ್ಲದೆ ಅವೈಜ್ಞಾನಿಕವಾಗಿ ನಿರ್ಮಿಸಿರುವ ಚರಂಡಿ ವ್ಯವಸ್ಥೆಯಿಂದ ನೀರು ಸರಾಗವಾಗಿ ಹರಿಯದೆ ನಿಂತಲ್ಲೇ ನಿಲ್ಲುತ್ತಿದೆ ನಿಂತ ನೀರು, ರೋಗಕಾರಕ ಸೊಳ್ಳೆಗಳ ಆವಾಸಸ್ಥಾನವಾಗಿ ಗ್ರಾಮಸ್ಥರುಗಳು ವಿವಿಧ ಕಾಯಿಲೆಯಿಂದ ಬಳಲುತ್ತಿದ್ದು ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ, ಇದಕ್ಕೆ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ದೂರನ್ನು ಸಲ್ಲಿಸಿದ್ದರು ಕೂಡ ಯಾವುದೇ ಪ್ರಯೋಜನವಾಗಿಲ್ಲ,  ಪಂಚಾಯಿತಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ದಲಿತರ ಕಾಲೋನಿಗೆ ಭೇಟಿಕೊಟ್ಟು ಕೇವಲ ಆಶ್ವಾಸನೆಯನ್ನು ಕೊಟ್ಟು ಹಿಂದಿರುಗುತ್ತಿದ್ದಾರೆ. ಆದರೆ ಯಾವುದೇ ಅಭಿವೃದ್ಧಿಯನ್ನು ಕೂಡ ಇಲ್ಲಿ ಮಾಡಿಲ್ಲ. ದಲಿತರನ್ನು ಮೂಲ ಸೌಕರ್ಯದಿಂದ ದೂರ ತಳ್ಳುತ್ತಿದ್ದಾರೆಯೇ ಎನ್ನುವ ಪ್ರಶ್ನೆ ಇದೀಗ ಕೇಳಿ ಬಂದಿದೆ. ಇಲ್ಲಿ ಗಮನಿಸಬಹುದಾದ ವಿಷಯ ಏನೆಂದರೆ, ಈ ಜಾಗದಲ್ಲಿ ದಲಿತರು ಬಹಳ ವರ್ಷದಿಂದ ಇಲ್ಲಿಯೇ…

Read More

ರಾಜಸ್ಥಾನದ ಅಶೋಕ್ ಗೆಹ್ಲೋಟ್ ಸರ್ಕಾರದ ವಿರುದ್ಧ ಮಾಜಿ ಉಪಮುಖ್ಯಮಂತ್ರಿ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಘೋಷಿಸಿರುವ ‘ಜನಸಂಘರ್ಷ್ ಯಾತ್ರೆ’ ಇಂದು ಆರಂಭವಾಗಿದೆ. ಐದು ದಿನಗಳ ಪ್ರಯಾಣವು ಅಜ್ಮೀರ್‌ನಿಂದ ಪ್ರಾರಂಭವಾಗುತ್ತದೆ. ರಾಜ್ಯದಲ್ಲಿ ಭ್ರಷ್ಟಾಚಾರ ಮತ್ತು ಪೇಪರ್ ಸೋರಿಕೆಯಂತಹ ಸಮಸ್ಯೆಗಳನ್ನು ಎತ್ತಲು “ಜನಸಂಘರ್ಷ್ ಯಾತ್ರೆ” 125 ಕಿ.ಮೀ.ಸಚಿನ್ ಪೈಲಟ್ ಗುರುವಾರ ಬೆಳಗ್ಗೆ ರೈಲಿನಲ್ಲಿ ಜೈಪುರದಿಂದ ಹೊರಡಲಿದ್ದಾರೆ. ರೈಲಿನಲ್ಲಿ ಯುವಕರೊಂದಿಗೆ ಮಾತನಾಡುತ್ತಾ ಅಜ್ಮೀರ್ ತಲುಪಿ. ಅಶೋಕ್ ಉದ್ಯಾನದ ಬಳಿ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು ಜೈಪುರಕ್ಕೆ ಕಾಲ್ನಡಿಗೆಯಲ್ಲಿ ತೆರಳಲಿದ್ದಾರೆ. ಪೈಲಟ್ ಮನೆಯಲ್ಲಿ ಜನಸಂಘರ್ಷ ಪಾದಯಾತ್ರೆಗೆ ಮುಖಂಡರು ಸಿದ್ಧತೆ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಂತೆಯೇ ಪೈಲಟ್‌ನ ಪ್ರಯಾಣವು ಕಾಂಗ್ರೆಸ್‌ನಲ್ಲಿನ ಒಡಕನ್ನು ಬಹಿರಂಗಗೊಳಿಸಿದೆ. ಪೈಲಟ್ ಶಿಬಿರ ಇದನ್ನು ಭ್ರಷ್ಟಾಚಾರದ ವಿರುದ್ಧದ ಪ್ರಯಾಣ ಎಂದು ಕರೆದರೆ, ಗೆಲೋಟ್ ಶಿಬಿರವು ಅದನ್ನು ಅಶಿಸ್ತು ಎಂದು ಬಣ್ಣಿಸಿದೆ. ರಾಹುಲ್ ಗಾಂಧಿಯಿಂದ ಹಿಡಿದು ಪ್ರಿಯಾಂಕಾ ಗಾಂಧಿ ಮತ್ತು ಸೋನಿಯಾ ಗಾಂಧಿವರೆಗೆ ಎರಡು ಗುಂಪುಗಳನ್ನು ಸಮನ್ವಯಗೊಳಿಸಲು ಹಲವು ಬಾರಿ ಪ್ರಯತ್ನಗಳು…

Read More

ಚಿಕ್ಕಮಗಳೂರು:  ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಅನಾರೋಗ್ಯದಿಂದ ತಡರಾತ್ರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಬುಧವಾರ ಮಧ್ಯರಾತ್ರಿ ಆರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಿಕ್ಕಮಗಳೂರು ನಗರದ ಆಶ್ರಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಿ.ಟಿ ರವಿ ಅವರಿಗೆ ಕಿಡ್ನಿಯಲ್ಲಿ ಕಲ್ಲು ಕಾಣಿಸಿಕೊಂಡಿತ್ತು. ಕಳೆದ 15 ದಿನಗಳಿಂದಲೂ ಆಸ್ಪತ್ರೆ ಸೇರಿದ್ದ ಅವರು, ಲಿಂಗಾಯತ ಸಮಾವೇಶಕ್ಕೂ ಗೈರಾಗಿ, ವೀಡಿಯೋ ಮೂಲಕ ಮತಯಾಚನೆ ಮಾಡಿದ್ದರು. ಚುನಾವಣೆ ಮುಗಿಯುತ್ತಿದ್ದಂತೆ ಚಿಕಿತ್ಸೆಗಾಗಿ ಮತ್ತೆ ಆಸ್ಪತ್ರೆ ಸೇರಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಪ್ರಧಾನಿ ನರೇಂದ್ರ ಮೋದಿ ಅಮೆರಿಕಕ್ಕೆ ಹೊರಟ್ಟಿದ್ದು ,ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಮತ್ತು ಅವರ ಪತ್ನಿ ಜಿಲ್ ಬಿಡೆನ್ ಅವರು ಜೂನ್ 22 ರಂದು ಶ್ವೇತಭವನದಲ್ಲಿ ನರೇಂದ್ರ ಮೋದಿ ಅವರಿಗೆ ಔತಣಕೂಟವನ್ನು ಏರ್ಪಡಿಸಲಿದ್ದಾರೆ ಎಂದು ಶ್ವೇತಭವನದ ಹೇಳಿಕೆಯ ಮೂಲಕ ಪ್ರಕಟಿಸಲಾಗಿದೆ. ಬಿಡೆನ್ ಅವರ ಆಹ್ವಾನದ ಮೇರೆಗೆ ಮೋದಿ ಅಧಿಕೃತ ಭೇಟಿಗಾಗಿ ಅಮೆರಿಕಕ್ಕೆ ಬರುತ್ತಿದ್ದಾರೆ. ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವೂ ಮೋದಿಯವರ ಅಮೆರಿಕ ಭೇಟಿಯನ್ನು ದೃಢಪಡಿಸಿದೆ. ಭಾರತದೊಂದಿಗಿನ ಬಾಂಧವ್ಯವನ್ನು ಬಲಪಡಿಸುವುದು ಮತ್ತು ಭಾರತದ ರಕ್ಷಣಾ ಕ್ಷೇತ್ರ ಸೇರಿದಂತೆ ರಷ್ಯಾದ ನಿರಂತರ ಪಾಲ್ಗೊಳ್ಳುವಿಕೆಗೆ ಪರ್ಯಾಯವನ್ನು ಒದಗಿಸುವುದು ಯುಎಸ್ ನ ಕ್ರಮವಾಗಿದೆ. ತಂತ್ರಜ್ಞಾನ, ಕೈಗಾರಿಕೆ ಮತ್ತು ವ್ಯಾಪಾರದಂತಹ ವಿವಿಧ ಕ್ಷೇತ್ರಗಳಲ್ಲಿ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಹಕಾರವನ್ನು ಬಲಪಡಿಸುವ ಕುರಿತು ಮೋದಿ-ಬಿಡೆನ್ ಸಭೆಯಲ್ಲಿ ಚರ್ಚಿಸಲಾಗುವುದು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More