Subscribe to Updates
Get the latest creative news from FooBar about art, design and business.
- ಬೀದರ್ | ಹೆದ್ದಾರಿಯಲ್ಲಿ ಬೈಕ್ ಗೆ ಕಾರು ಡಿಕ್ಕಿ: ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ, ಓರ್ವ ಗಂಭೀರ ಗಾಯ
- ವೈದ್ಯರು – ಸಮಾಜದ ಜೀವನಾಡಿ
- ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ: ಸರ್ವರೂ ಪಾಲ್ಗೊಳ್ಳುವಂತೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಕರೆ
- SIR ಪ್ರಕ್ರಿಯೆಯಲ್ಲಿ ಭಾಗವಹಿಸಿದ ಸಿಎಂ ಡಿ.ಕೆ. ಶಿವಕುಮಾರ್!
- 10ನೇ ತರಗತಿ ವಿದ್ಯಾರ್ಥಿಗೆ ಅಮಾನತು ಶಿಕ್ಷೆ: ಮರುಪ್ರವೇಶಕ್ಕೆ ನಿರಾಕರಣೆ, ನೊಂದು ಶಾಲೆಯಲ್ಲೇ ತಾಯಿ ವಿಷ ಸೇವನೆ..!
- ಚಪ್ಪಲಿ ಎಸೆತ ಪ್ರಕರಣ: ಸಿದ್ದರಾಮಯ್ಯ ಮುಂದೆ ಕಣ್ಣೀರು ಹಾಕಿದ ಶಾಸಕ ಪ್ರದೀಪ್ ಈಶ್ವರ್!
- ದಲಿತರಿಂದ ಮಲಗುಂಡಿ ಸ್ವಚ್ಛಗೊಳಿಸಿದ ಕೃತ್ಯ: ಡಿಸಿಎಂ ಪರಮೇಶ್ವರ್ ರಾಜೀನಾಮೆಗೆ ಬಿಜೆಪಿ ಎಸ್ ಸಿ ಮೋರ್ಚಾ ಒತ್ತಾಯ
- ಸಮಸ್ಯೆಯನ್ನು ಆಲಿಸಲು ಪ್ರತಿನಿತ್ಯ ಪೋತಿ ಖಾತೆ ಅಭಿಯಾನ: ಜಿಲ್ಲಾಧಿಕಾರಿ ಶುಭ ಕಲ್ಯಾಣ್
Author: admin
(ಬೆಳಿಗ್ಗೆ 07 :00 ಘಂಟೆಯಿಂದ ಸಂಜೆ 05:00 ರವರೆಗೆ) ಐದನೇ ಸುತ್ತು ಸಂಜೆ 05:00 ಗಂಟೆಯವರೆಗೆ ನಡೆದ ಶೇಕಡಾವಾರು ಮತದಾನ ವಿವರ’:- 128- ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರ – ಶೇ. 78.83 129- ತಿಪಟೂರು ವಿಧಾನಸಭಾ ಕ್ಷೇತ್ರ – ಶೇ. 76.68 130 -ತುರುವೇಕೆರೆ ವಿಧಾನಸಭಾ ಕ್ಷೇತ್ರ – ಶೇ. 79.58 131-ಕುಣಿಗಲ್ ವಿಧಾನಸಭಾ ಕ್ಷೇತ್ರ – ಶೇ. 81.12 132-ತುಮಕೂರು ನಗರ ವಿಧಾನಸಭಾ ಕ್ಷೇತ್ರ – ಶೇ61.53 133-ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರ -ಶೇ. 76.38 134-ಕೊರಟಗೆರೆ ವಿಧಾನಸಭಾ ಕ್ಷೇತ್ರ – ಶೇ 75.54 135-ಗುಬ್ಬಿ ವಿಧಾನಸಭಾ ಕ್ಷೇತ್ರ – ಶೇ 77.18 136- ಶಿರಾ ವಿಧಾನಸಭಾ ಕ್ಷೇತ್ರ – ಶೇ 72.78 137-ಪಾವಗಡ ವಿಧಾನಸಭಾ ಕ್ಷೇತ್ರ – ಶೇ 77.89 138 – ಮಧುಗಿರಿ ವಿಧಾನಸಭಾ ಕ್ಷೇತ್ರ -ಶೇ 74.87 ಜಿಲ್ಲೆಯಲ್ಲಿ ಸಂಜೆ 05:00 ಗಂಟೆಯವರೆಗೆ ನಡೆದಿರುವ ಐದನೇ ಸುತ್ತಿನ ಸರಾಸರಿ ಮತದಾನ ಒಟ್ಟು ಶೇ. 75.24 ನಮ್ಮತುಮಕೂರು.ಕಾಂನ…
ತುಮಕೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರವಾರು ಚುನಾವಣೆ: 2023 ಮತದಾನ ವಿವರ (ಬೆಳಿಗ್ಗೆ 07 :00 ಘಂಟೆಯಿಂದ ಮಧ್ಯಾಹ್ನ 03:00 ರವರಗೆ) ನಾಲ್ಕನೇ ಸುತ್ತು ಮಧ್ಯಾಹ್ನ 03:00 ಗಂಟೆಯವರೆಗೆ ನಡೆದ ಶೇಕಡಾವಾರು ಮತದಾನ ವಿವರ: 128- ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರ = ಶೇ. 61.45 129- ತಿಪಟೂರು ವಿಧಾನಸಭಾ ಕ್ಷೇತ್ರ – ಶೇ. 59.44 130 -ತುರುವೇಕೆರೆ ವಿಧಾನಸಭಾ ಕ್ಷೇತ್ರ – ಶೇ. 62.66 131-ಕುಣಿಗಲ್ ವಿಧಾನಸಭಾ ಕ್ಷೇತ್ರ – ಶೇ. 64.64 132-ತುಮಕೂರು ನಗರ ವಿಧಾನಸಭಾ ಕ್ಷೇತ್ರ – ಶೇ49.20 133-ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರ -ಶೇ. 59.09 134-ಕೊರಟಗೆರೆ ವಿಧಾನಸಭಾ ಕ್ಷೇತ್ರ – ಶೇ 50.25 135-ಗುಬ್ಬಿ ವಿಧಾನಸಭಾ ಕ್ಷೇತ್ರ – ಶೇ 59.36 136- ಶಿರಾ ವಿಧಾನಸಭಾ ಕ್ಷೇತ್ರ – ಶೇ 54.48 137-ಪಾವಗಡ ವಿಧಾನಸಭಾ ಕ್ಷೇತ್ರ – ಶೇ 60.80 138 – ಮಧುಗಿರಿ ವಿಧಾನಸಭಾ ಕ್ಷೇತ್ರ -ಶೇ 57.58 ಜಿಲ್ಲೆಯಲ್ಲಿ ಮಧ್ಯಾಹ್ನ 03:00…
ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಬೆಳ್ಳಂ ಬೆಳಿಗ್ಗೆ ತಮ್ಮ ಮತ ಚಲಾವಯಿಸುವುದರ ಮೂಲಕ ಎಲ್ಲರಿಗೂ ಖಡ್ಡಾಯ ಮತ ಚಲಾವಣೆ ಮಾಡಲು ಸಂದೇಶ ನೀಡಿದ್ದಾರೆ. ಬೆಳಗಾವಿ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಅವರು ವಿಶ್ವೇಶ್ವರಯ್ಯ ನಗರದ ಸರಕಾರಿ ಶಾಲೆಯ ಮತಗಟ್ಟೆಯಲ್ಲಿ ತಮ್ಮ ಮತವನ್ನು ಚಲಾಯಿಸಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಸಿಇಒ ಎಲೋನ್ ಮಸ್ಕ್ ಶೀಘ್ರದಲ್ಲೇ ಕರೆಗಳು ಮತ್ತು ಟ್ವಿಟರ್‌ನಲ್ಲಿ ಎನ್‌ಕ್ರಿಪ್ಟ್ ಮಾಡಿದ ಸಂದೇಶಗಳನ್ನು ಮಾಡಲಿದ್ದಾರೆ. ಪ್ರತಿಯೊಂದಕ್ಕೂ ಟ್ವಿಟ್ಟರ್ ಅನ್ನು ಅಪ್ಲಿಕೇಶನ್ ಮಾಡುವುದು ಗುರಿಯಾಗಿದೆ ಎಂದು ಮಸ್ಕ್ ಹೇಳಿದರು. ಮಸ್ಕ್ ಅವರು ತಮ್ಮ ಟ್ವಿಟರ್ ಹ್ಯಾಂಡಲ್ ಮೂಲಕ ಘೋಷಣೆ ಮಾಡಿದ್ದಾರೆ. ವೀಡಿಯೊ ಮತ್ತು ಧ್ವನಿ ಚಾಟ್‌ಗಳು ಶೀಘ್ರದಲ್ಲೇ ಈ ಪ್ಲಾಟ್‌ಫಾರ್ಮ್‌ಗೆ ಬರಲಿವೆ. ಹಾಗಾಗಿ ನಿಮ್ಮ ಫೋನ್ ನಂಬರ್ ನೀಡದೆ ಜಗತ್ತಿನ ಯಾರೊಂದಿಗೂ ಮಾತನಾಡಬಹುದು.’- ಮಸ್ಕ್ ಟ್ವೀಟ್ ಮಾಡಿದ್ದಾರೆ.Instagram ಮತ್ತು Facebook ನಂತಹ ಸಾಮಾಜಿಕ ಮಾಧ್ಯಮಗಳು ಮೇಲಿನ ಎಲ್ಲಾ ಸೌಲಭ್ಯಗಳನ್ನು ಹೊಂದಿವೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಮಹೇಂದ್ರ ಸಿಂಗ್ ಧೋನಿ ತಮಿಳುನಾಡಿನ ದತ್ತುಪುತ್ರ ಎಂದು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಹೇಳಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುವುದನ್ನು ಮುಂದುವರಿಸುವಂತೆ ತಮಿಳುನಾಡು ಮುಖ್ಯಮಂತ್ರಿ ಮನವಿ ಮಾಡಿದ್ದಾರೆ. ಕ್ರೀಡಾ ಇಲಾಖೆಯ ಅಡಿಯಲ್ಲಿ ಆರಂಭವಾದ ತಮಿಳುನಾಡು ಚಾಂಪಿಯನ್‌ಶಿಪ್ ಫೌಂಡೇಶನ್‌ನ ಉದ್ಘಾಟನಾ ಸಮಾರಂಭದಲ್ಲಿ ಧೋನಿ ಸ್ಟಾಲಿನ್ ಅವರ ಪ್ರಾಮಾಣಿಕತೆಗೆ ಸಾಕ್ಷಿಯಾದರು. ಚೆನ್ನೈನ ಲೀಲಾ ಪ್ಯಾಲೇಸ್‌ನಲ್ಲಿ ನಡೆದ ಸಮಾರಂಭದಲ್ಲಿ ಸ್ಟಾಲಿನ್ ಮತ್ತು ಧೋನಿ ಅವರಲ್ಲದೆ, ಸಚಿವರಾದ ಉದಯನಿಧಿ ಸ್ಟಾಲಿನ್, ತಂಗಮ್ ತೆನ್ನರಾಶ್ ಮತ್ತು ಇತರ ಗಣ್ಯರು ಭಾಗವಹಿಸಿದ್ದರು. ಚಿಕ್ಕ ಕುಟುಂಬದಿಂದ ಕಠಿಣ ಪರಿಶ್ರಮದಿಂದ ಅವರು ರಾಷ್ಟ್ರೀಯ ಐಕಾನ್ ಆದರು. ಕ್ರಿಕೆಟ್ ಮಾತ್ರವಲ್ಲದೆ ಎಲ್ಲಾ ಕ್ರೀಡೆಗಳಲ್ಲಿ ತಮಿಳುನಾಡಿನಿಂದ ಅನೇಕ ಧೋನಿಗಳನ್ನು ನಾವು ಸೃಷ್ಟಿಸಬೇಕು ಎಂದು ಸ್ಟಾಲಿನ್ ಹೇಳಿದ್ದಾರೆ. ಇತ್ತೀಚೆಗೆ ನಾನು ಧೋನಿ ಬ್ಯಾಟಿಂಗ್ ವೀಕ್ಷಿಸಲು ಎರಡು ಬಾರಿ ಚೆಪಾಕ್ ಸ್ಟೇಡಿಯಂಗೆ ಹೋಗಿದ್ದೆ. ತಮಿಳುನಾಡಿನ ಎಲ್ಲರಂತೆ ನಾನು ಧೋನಿಯ ದೊಡ್ಡ ಅಭಿಮಾನಿ. ನಮ್ಮ ತಮಿಳುನಾಡಿನ ದತ್ತುಪುತ್ರ CSK ಗಾಗಿ ಆಟ ಮುಂದುವರಿಯಲಿ ಎಂದು ನಾನು ಭಾವಿಸುತ್ತೇನೆ – ಸ್ಟಾಲಿನ್ ಹೇಳಿದರು.…
ಬೆಳಗಾವಿ ಜಿಲ್ಲೆಯಲ್ಲಿ ಬೆಳಿಗ್ಗೆಯಿಂದ ಮತದಾನ ಪ್ರಕ್ರಿಯೆಗೆ ಜನತೆ ಉತ್ತಮವಾಗಿ ಸ್ಪಂದಿಸುತ್ತಿದ್ದು ಇಲ್ಲಿಯವರೆಗೂ ಪ್ರತಿಶತ 9% ರಷ್ಟು ಮತದಾನ ಪ್ರಕ್ರಿಯೆ ಜರುಗಿದೆ. ರಾಜ್ಯದ ಅತಿದೊಡ್ಡ ಜಿಲ್ಲೆಯಾದ ಬೆಳಗಾವಿಯಲ್ಲಿ ಮತದಾನ ಪ್ರಕ್ರಿಯೆ ಜೋರಾಗಿದೆ. ಕೇವಲ ನಗರದಲ್ಲಿ ಮಾತ್ರವಲ್ಲದೆ ಗ್ರಾಮೀಣ ಕ್ಷೇತ್ರಗಳಲ್ಲಿ ಬೆಳಿಗ್ಗೆಯಿಂದ ಮತದಾರರು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದ್ದು ಜಿಲ್ಲೆಯಾದ್ಯಂತ ಶೆ.9% ರಷ್ಟು ಮತದಾನ ಪ್ರಕ್ರಿಯೆ ನಡೆದಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಇಮ್ರಾನ್ಖಾನ್ನನ್ನು ಇಸ್ಲಾಮಾಬಾದ್ನಲ್ಲಿ ಬಂಧಿಸಲಾಗಿದೆ, ಇಸ್ಲಾಮಾಬಾದ್‌ನಲ್ಲಿ ಪಾಕಿಸ್ತಾನ ರೇಂಜರ್ಸ್ ಇಮ್ರಾನ್ ಖಾನ್‌ರನ್ನು ವಶಕ್ಕೆ ಪಡೆದುಕೊಂಡಿದೆ. ಪಾಕಿಸ್ತಾನದ ಸೇನೆಯನ್ನು ಸಾರ್ವಜನಿಕವಾಗಿ ಟೀಕೆ ಮಾಡಿದ ಕೆಲವೇ ದಿನಗಳಲ್ಲಿ ಇಮ್ರಾನ್ ಖಾನ್‌ರನ್ನು ಬಂಧಿಸಲಾಗಿದೆ. ಅಲ್ ಖಾದಿರ್ ಟ್ರಸ್ಟ್ ಪ್ರಕರಣದಲ್ಲಿ ಇಮ್ರಾನ್ ನನ್ನು ಬಂಧಿಸಲಾಗಿದೆ, ವಿಶ್ವವಿದ್ಯಾಲಯಕ್ಕೆ ಕೋಟ್ಯಂತರ ರೂಪಾಯಿ ಮೌಲ್ಯದ ಭೂಮಿಯನ್ನು ಅಕ್ರಮವಾಗಿ ವಶಪಡಿಸಿಕೊಂಡಿದ್ದರು ಎಂದು ಉದ್ಯಮಿ ಮಲ್ಲಿಕ್ ರಿವಾಜ್ ಹೇಳಿದ್ದರು.ಇ ಮ್ರಾನ್ ಮತ್ತು ಅವರ ಪತ್ನಿ ತಮ್ಮ ಹೆಸರಿಗೆ ಕೋಟ್ಯಂತರ ರೂಪಾಯಿ ಮೌಲ್ಯದ ಭೂಮಿಯನ್ನು ಪಡೆದಿದ್ದಾರೆ. ನಂತರ ರಿಯಾಜ್ ಮತ್ತು ಅವರ ಮಗಳ ನಡುವಿನ ಸಂಭಾಷಣೆಯ ಆಡಿಯೋ ಸೋರಿಕೆಯಾಗಿದೆ. ಇದರಲ್ಲಿ ಇಮ್ರಾನ್ ಪತ್ನಿ ಬುಶ್ರಾ ಬೀಬಿ ತನಗೆ ಐದು ಕ್ಯಾರೆಟ್ ವಜ್ರದ ಉಂಗುರ ಬೇಕೆಂದು ನಿರಂತರವಾಗಿ ಕೇಳುತ್ತಿದ್ದಳು ಎಂದು ರಿಯಾಜ್ ಪುತ್ರಿ ಹೇಳಿದ್ದಾಳೆ. ರಾಜಧಾನಿಯ ನ್ಯಾಯಾಲಯಕ್ಕೆ ಸೇರಿದ ಮಹಿಳಾ ನ್ಯಾಯಾಧೀಶರಿಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಇಸ್ಲಾಮಾಬಾದ್‌ನ ಸೆಷನ್ಸ್ ನ್ಯಾಯಾಲಯವು ಖಾನ್‌ಗೆ ಜಾಮೀನು ರಹಿತ ಬಂಧನ ವಾರಂಟ್…
ರೈಲು ಪ್ರಯಾಣದ ವೇಳೆ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ ಟಿಕೆಟ್ ಪರೀಕ್ಷಕನನ್ನು ಬಂಧಿಸಲಾಗಿದೆ. ಇಂದು ಬೆಳಗ್ಗೆ ನಿಲಂಬೂರ್ ಕೊಚುವೇಲಿ ರಾಜ್ಯ ರಾಣಿ ಎಕ್ಸ್‌ಪ್ರೆಸ್‌ನಲ್ಲಿ ಈ ಘಟನೆ ನಡೆದಿದೆ. ತಿರುವನಂತಪುರದ ಟಿಕೆಟ್ ಪರೀಕ್ಷಕ ನಿತೀಶ್ ಅವರನ್ನು ಕೊಟ್ಟಾಯಂ ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ತಪಾಸಣೆ ನಡೆಸಿದಾಗ ಆತ ಪಾನಮತ್ತನಾಗಿದ್ದ ಎಂದು ತಿಳಿದುಬಂದಿದೆ. ನಿಲಂಬೂರಿನಿಂದ ಕೊಚುವೇಲಿಗೆ ತೆರಳಲು ಮಹಿಳೆ ರೈಲು ಹತ್ತಿದ್ದಾರೆ. ಯುವತಿ ಒಬ್ಬಳೇ ಇದ್ದುದರಿಂದ ಆಕೆಯನ್ನು ಬಿಡಿಸಲು ಬಂದ ತಂದೆ ಟಿಕೆಟ್ ಪರೀಕ್ಷಕನಿಗೆ ಮಗಳತ್ತ ಗಮನ ಹರಿಸುವಂತೆ ಹೇಳಿದ್ದಾನೆ.ಬಳಿಕ ರಾತ್ರಿ ಒಂದು ಗಂಟೆ ಸುಮಾರಿಗೆ ಟಿಕೆಟ್ ಪರೀಕ್ಷಕ ನಿಧೀಶ್ ಒಂಟಿಯಾಗಿದ್ದ ಮಹಿಳೆಯ ಬಳಿ ಬಂದು ಅವಾಚ್ಯವಾಗಿ ಮಾತನಾಡಲು ಆರಂಭಿಸಿದ್ದಾನೆ. ಇನ್ನೊಂದು ಕಂಪಾರ್ಟ್‌ಮೆಂಟ್‌ಗೆ ಹೋಗುವಂತೆಯೂ ಹೇಳಿದರು. ಮಹಿಳೆ ನಿರಾಕರಿಸಿದಾಗ ಆಲುವಾದಲ್ಲಿ ಬಲವಂತವಾಗಿ ಆಕೆಯ ಕೈ ಹಿಡಿದಿದ್ದಾನೆ. ಮತ್ತೆ ಕಿರುಕುಳ ನೀಡಲು ಯತ್ನಿಸಿದಾಗ ಮಹಿಳೆ ತಿರುವನಂತಪುರಂ ರೈಲ್ವೆ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ದೂರು ನೀಡಿದ್ದಾಳೆ. ಬಂಧನದ ಬಳಿಕ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಆತ ಕುಡಿದಿರುವುದು ಪತ್ತೆಯಾಗಿದೆ.ರೈಲಿನಲ್ಲಿ…
ತುರುವೇಕೆರೆ: ರಾಯಸಂದ್ರದಿಂದ ಕೆ.ಕೊಪ್ಪ ಗ್ರಾಮದ ಮತಗಟ್ಟೆಗೆ ಸಂಪರ್ಕಿಸುವ 1/2 ಕಿಲೋಮೀಟರ್ ರಸ್ತೆ, ನಿನ್ನೆ ರಾತ್ರಿ ಸುರಿದ ಭಾರೀ ಮಳೆಯಿಂದ ಕೆಸರುಮಯವಾಗಿದ್ದು, ಇದರಿಂದಾಗಿ ಇಲ್ಲಿನ ಸಾರ್ವಜನಿಕರು ತೀವ್ರವಾಗಿ ಸಮಸ್ಯೆಗೀಡಾಗಿದ್ದು, ಚುನಾವಣೆ ಬಹಿಷ್ಕಾರ ಮಾಡುವ ಎಚ್ಚರಿಕೆ ನೀಡಿದ್ದಾರೆ. ಸಾಮಾಜಿಕ ಹೋರಾಟಗಾರ ರಾಯಸಂದ್ರ ಶಶಿಧರ್, ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ತುರುವೇಕೆರೆ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 56 ರಲ್ಲಿ ಇಲ್ಲಿನ ನಾಗರಿಕರು ಪ್ರತಿಭಟನೆ ನಡೆಸುತ್ತಿದ್ದಾರೆ. ವೈಜ್ಞಾನಿಕವಾಗಿ ಮತಗಟ್ಟೆಯನ್ನ ಗುರುತಿಸಿರುವ ಚುನಾವಣಾ ಆಯೋಗ ಮತ್ತು ಚುನಾವಣಾ ಅಧಿಕಾರಿಗಳ ಮೇಲೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತ ಚಲಾವಣೆ ಮಾಡಲು ಸುಮಾರು ಏಳು ಕಿಲೋಮೀಟರ್ ಗಳ ಬದಲಿ ರಸ್ತೆಯಾದ ಶ್ರೀ ರಾಮಪುರ ಮಾರ್ಗವಾಗಿ ಕೊಪ್ಪವನ್ನು ತಲುಪಬೇಕಾಗಿದೆ. ವಯಸ್ಸಾದ ನಾಗರಿಕರಿಗೆ ಮತಗಟ್ಟೆ ತಲುಪಲು ಅರಸಹಾಸ ನಡೆಸಿ ಹೆಸರಿನಲ್ಲೇ ನಡೆದುಹೋಗುವ ಪರಿಸ್ಥಿತಿ ಉಂಟಾಗಿದೆ . ಸ್ಥಳಕ್ಕೆ ಚುನಾವಣಾ ಅಧಿಕಾರಿಗಳು ಬರುವವರೆಗೂ ಯಾವೊಬ್ಬ ಮತದಾರರನ್ನು ಮತ ಚಲಾವಣೆ ಮಾಡಲು ಬಿಡುವುದಿಲ್ಲ ಎಂದು ಪ್ರತಿಭಟನೆ ನಡೆಸುತ್ತಿದ್ದಾರೆ. ವರದಿ: ಸುರೇಶ್ ಬಾಬು ಎಂ. ತುರುವೇಕೆರೆ ನಮ್ಮತುಮಕೂರು.ಕಾಂನ…
ಬಾಗಲಕೋಟೆ: ಮುಧೋಳ ವಿಧಾನಸಭಾ ಕ್ಷೇತ್ರದ ಚೌಡಾಪುರ ಗ್ರಾಮದ ಮತಗಟ್ಟೆ ಬಳಿ ರಾತ್ರಿ ವಾಮಾಚಾರ ಮಾಡಿರುವ ಆರೋಪ ಕೇಳಿಬಂದಿದೆ. ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ವಿರುದ್ದ ವಾಮಾಚಾರ ಮಾಡಲು ಇಬ್ಬರು ವ್ಯಕ್ತಿಗಳು ಚೀಲದಲ್ಲಿ ವಾಮಾಚಾರದ ವಸ್ತುಗಳನ್ನು ತಂದಿದ್ದರು. ಎನ್ನಲಾಗುತ್ತಿದೆ. ಈ ವೇಳೆ ಗ್ರಾಮದ ಕೆಲವರು ನೋಡಿ, ವಾಮಾಚಾರ ಮಾಡಿಸಲು ಬಂದಿದ್ದವರನ್ನು ತರಾಟೆಗೆ ತೆಗೆದುಕೊಂಡು ಕಳಿಸಿದ್ದಾರೆ. ಗೋವಿಂದ ಕಾರಜೋಳ ಅವರಿಗೆ ಮತಗಳು ಬಾರದಿರಲಿ ಎಂದು ವಾಮಚಾರ ಮಾಡಿಸಲು ಬಂದಿದ್ರು ಎನ್ನುವ ಆರೋಪ ಕೇಳಿಬಂದಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy