Subscribe to Updates
Get the latest creative news from FooBar about art, design and business.
- ನ.19ರಂದು ಎಲ್.ಜಿ.ಹಾವನೂರು ಪ್ರತಿಮೆ ಅನಾವರಣ
- ತುಮಕೂರು | ನವೆಂಬರ್ 18ರಂದು ನಗರದಲ್ಲಿ ಸಹಕಾರ ಸಪ್ತಾಹ
- ತುಮಕೂರು | ನ.30ರಂದು ರಾಪಿಡ್ ಚೆಸ್ ಟೂರ್ನಮೆಂಟ್
- ಕಬ್ಬು ಬೆಳೆಗಾರರ ಸಮಸ್ಯೆ ಸೇರಿ ಹಲವು ಸಮಸ್ಯೆ ಬಗ್ಗೆ ಪ್ರಧಾನಿಗಳ ಜತೆ ಸಿಎಂ ಚರ್ಚೆ: ಸಚಿವ ಪರಮೇಶ್ವರ್
- ಆಗ್ನೆಯ ಪದವೀಧರರ ಮತದಾರರರ ನೋಂದಣಿ: ನ.25ರಿಂದ ಡಿ.10ರವರೆಗೆ ಮುಂದೂಡಿಕೆ
- ಮಹಿಳೆಯ ಸಾವಿನ ಬಗ್ಗೆ ಅನುಮಾನ: ಪುತ್ರನಿಂದ ದೂರು
- ವಿವಿಧ ಬ್ಯಾಂಕ್ ಗಳ ನಿಷ್ಕ್ರಿಯ ಖಾತೆಗಳಲ್ಲಿದೆ 110.45 ಕೋಟಿ ಹಣ!
- ಎಗ್ಗಿಲ್ಲದೆ ನಡೆಯುತ್ತಿದೆ ಗಣಿಗಾರಿಕೆ: ಅರಣ್ಯ ಇಲಾಖೆ ನಿದ್ರಾವಸ್ಥೆಗೆ ಜಾರಿದೆ: ಅಧಿಕಾರಿಗಳಿಗೆ ಉಪಲೋಕಾಯುಕ್ತರಿಂದ ತರಾಟೆ
Author: admin
ಅಣ್ಣೋ… ಶಿವಣ್ಣೋ ಅನ್ನೋ ಅಭಿಮಾನಿಗಳ ಕೂಗು, ವಾಹನದ ಮೇಲೆ ನಿಂತು ಅಭಿಮಾನಿಗಳ ಕೈ ಸ್ಪರ್ಶಿಸಿ ಅಭಿಮಾನಿಗಳನ್ನು ಸಂತೈಸುತ್ತಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಈ ದೃಶ್ಯ ಕಂಡು ಬಂದಿದ್ದು, ಸರಗೂರಿನ ಶಂಕರ ಚಿತ್ರದ ಮಂದಿರದ ಆವರಣದಲ್ಲಿ. ಇಂದು ಸರಗೂರಿನ ಶಂಕರ ಚಿತ್ರದ ಮಂದಿರದ ಆವರಣಕ್ಕೆ ಭೇಟಿ ನೀಡಿದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿಮಾನಿ ದೇವ್ರುಗಳೊಂದಿಗೆ ಶಿವರಾಜ್ ಕುಮಾರ್ ಮನಸ್ಸು ಬಿಚ್ಚಿ ಬೆರೆತರು. ಶಿವರಾಜ್ ಕುಮಾರ್ ಅವರ ವೇದ ಚಿತ್ರ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇದೇ ವೇಳೆ ಚಿತ್ರದ ಪ್ರಚಾರಕ್ಕೆ ಆಗಮಿಸಿದ ಶಿವರಾಜ್ ಕುಮಾರ್ ಅವರಿಗೆ ಸರಗೂರಿನಲ್ಲಿ ಅಭಿಮಾನಿಗಳು ಅದ್ದೂರಿಯ ಸ್ವಾಗತ ನೀಡಿದರು. ತಮ್ಮ ನೆಚ್ಚಿನ ನಟನನ್ನು ಕಂಡು ಸಂತಸದಿಂದ ಜೈಕಾರ ಹಾಕಿದ್ರು. ವರದಿ: ಮಲಾರ ಮಹದೇವಸ್ವಾಮಿ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz
ಪಾವಗಡ: ತಾಲ್ಲೂಕಿನ ಯ.ನಾ.ಹೊಸಕೋಟೆ ಗ್ರಾಮದ ದೊಡ್ಡಹಳ್ಳಿಗೆ ಮುಖ್ಯ ರಸ್ತೆಯನ್ನು ಸಂಪರ್ಕಿಸುವ ನೂರಾರು ಜನರು ಪ್ರತಿನಿತ್ಯ ಸಂಚರಿಸುವ ರಸ್ತೆಯಲ್ಲೇ ನೀರು ಹರಿದು ಹೋಗುತ್ತಿದ್ದು, ಸಾರ್ವಜನಿಕರು ಪರದಾಡುವಂತಾಗಿದೆ. ಈ ರಸ್ತೆಯಲ್ಲಿ ಪ್ರತಿನಿತ್ಯ ಶಾಲೆಗೆ ತೆರಳುವ ಪುಟಾಣಿ ಮಕ್ಕಳು, ವೃದ್ಧರು, ಮಹಿಳೆಯರು ಸೇರಿದಂತೆ ಎಲ್ಲಾ ನಾಗರಿಕರು ನಡೆದುಕೊಂಡು ಹೋಗುತ್ತಿದ್ದು, ನೀರಿನ ಮೇಲೆ ಹಾಕಿರುವ ಕಲ್ಲುಗಳ ಮೇಲೆ ಕಾಲು ಇಟ್ಟುಕೊಂಡು ನರಕದ ದಾರಿ ಹಾದು ಹೋಗುವಂತೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿನ ಸಮಸ್ಯೆಯ ಬಗ್ಗೆ ವೈ ಎನ್ ಹೊಸಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷರ ಗಮನಕ್ಕೆ ತರಲಾಗಿತ್ತು. ಪಂಚಾಯತ್ ಅಭಿವೃದ್ಧಿ ಅಧಿಕಾರಿ(ಪಿಡಿಒ) ಶ್ರೀರಾಮ ನಾಯ್ಕ ಅವರು ಎರಡು ಬಾರಿ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಹೋದರೂ, ಇನ್ನೂ ಕೂಡ ನರಕದ ದಾರಿಗೆ ಮುಕ್ತಿ ಸಿಕ್ಕಿಲ್ಲ. ಸುಮಾರು 2 ತಿಂಗಳುಗಳಿಂದ ಇದೇ ರೀತಿಯ ಸ್ಥಿತಿ ಇದ್ದು, ಇಲ್ಲಿಂದ ನಿತ್ಯ ಸಂಚರಿಸುವ ಜನರು ಅಧಿಕಾರಿ ವರ್ಗಗಳಿಗೆ, ಜನ ಪ್ರತಿನಿಧಿಗಳಿಗೆ ಹಿಡಿಶಾಪ ಹಾಕಿಕೊಂಡು ತೆರಳುತ್ತಿದ್ದಾರೆ. ಯಾರಾದರೂ ಸಾರ್ವಜನಿಕರು ಬಿದ್ದು, ಪ್ರಾಣ ಕಳೆದುಕೊಂಡ ಬಳಿಕ…
ಮಂಜುಸ್ವಾಮಿ.ಎಂ.ಎನ್. ಕೊರಟಗೆರೆ: ಕನ್ನಡದಲ್ಲಿ ಈಗಾಗಲೇ ಧ್ವನಿ ಇಲ್ಲದವರ ಕುರಿತ ಸಿನಿಮಾಗಳು ಮೂಡಿಬಂದು ಸಾಕಷ್ಟು ಸದ್ದುಮಾಡಿವೆ. ಕಾಡೇ ನಮ್ಮ ಬದುಕು ಅಂದುಕೊಂಡು ಬದುಕುತ್ತಿರುವ ಬಡಜನರ ಬದುಕಿನ ಚಿತ್ರಣವನ್ನು ಸಾಕಷ್ಟು ಚಿತ್ರಗಳು ತೋರಿಸಿವೆ. ಅಂತಹ ಸಿನಿಮಾಗಳ ಸಾಲಿಗೆ ಈಗ ಅಡವಿ ಎಂಬ ಸಿನಿಮಾ ಕೂಡ ಸೇರಿದೆ. ಈಗಾಗಲೇ ಸದ್ದಿಲ್ಲದೆಯೇ ಆ ಸಿನಿಮಾದ ಚಿತ್ರೀಕರಣ ಪೂರೈಸಿದೆ. ಆ ಸಿನಿಮಾ ಕುರಿತ ಒಂದು ವಿಶೇಷ ವರದಿ ಇದು… ಕನ್ನಡ ಬೆಳ್ಳಿತೆರೆಗೆ ಬರಲು ಸಿದ್ದವಾಗಿರುವ ಅಡವಿ ಎಂಬ ಸಿನಿಮಾ ಒಂದರ್ಥದಲ್ಲಿ ಕಾಡು ಮಕ್ಕಳ ಕರುಳಿನ ಕೂಗು.. ನೊಂದ ಹೃದಯಗಳ ಆರ್ತನಾದ. ಅನಾದಿ ಕಾಲದಿಂದಲೂ ಅರಣ್ಯದಲ್ಲಿ ವಾಸಿಸುತ್ತಿರುವ ಆದಿವಾಸಿ ಬುಡಕಟ್ಟು ಜನರ ಸಾಮಾಜಿಕ ಜನಜೀವನ, ಕಾಡಿನ ಸಂಸ್ಕೃತಿ, ದೈವಾಚರಣೆ, ಆರ್ಥಿಕತೆ ಮತ್ತು ಆಳುವ ನಾಗರಿಕ ವರ್ಗಗಳ ವಿರುದ್ದದ ಸಂಘರ್ಷವನ್ನು ತುಂಬಾನೇ ಪರಿಣಾಮಕಾರಿಯಾಗಿ ಅಡವಿ ಜನರ ಭೂಮಿ, ವಸತಿ, ಶಿಕ್ಷಣ ಮತ್ತು ಆರೋಗ್ಯದ ಸಮಸ್ಯೆಯನ್ನು ಗಂಭೀರವಾಗಿ ಚಿತ್ರೀಕರಣ ಮಾಡಲಾಗಿದೆ. ಕಲೆಯೇ ತನ್ನ ದೈವ ಅಂದುಕೊಂಡು ಸದಾ ಹೋರಾಟದ ಹಾದಿಯಲ್ಲಿ ದಿನ ಸವೆಸುತ್ತಿರುವ…
ಕೊರಟಗೆರೆ: ಒಂದೇ ವಾರದಲ್ಲಿ ಎರಡು ಚಿರತೆಗಳು ಸೆರೆ ಪಟ್ಟಣದ ಜನರ ನಿದ್ದೆ ಕೆಡಿಸಿದ್ದ ಚಿರತೆ ಇಂದು ಮುಂಜಾನೆ ಪಟ್ಟಣದ ಬಸವನ ಬೆಟ್ಟ ಸಮೀಪ ಇರುವ ಗಂಗಾಧರೇಶ್ವರ ಕೆರೆಯ ಹಿಂಭಾಗದಲ್ಲಿ ತಿಮ್ಮಣ್ಣ ಎನ್ನುವರ ಜಮೀನಿನಲ್ಲಿ ಅರಣ್ಯ ಇಲಾಖೆ ಇಟ್ಟಂತಹ ಬೋನಿಗೆ ಬಿದ್ದಿದೆ. ಚಿರತೆಯನ್ನು ನೋಡಲು ಪಟ್ಟಣದ ಜನರು ತಂಡೋಪ ತಂಡವಾಗಿ ಬರುತ್ತಿರುವುದನ್ನು ಕಂಡು ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ದೂರದಿಂದಲೇ ಚಿರತೆಯನ್ನು ನೋಡಿ ತೆರಳುವಂತೆ ಮನವಿ ಮಾಡಿಕೊಂಡರು. ಇನ್ನು ನಾಲ್ಕು ಚಿರತೆ ಇದೆ. ಅವುಗಳನ್ನೂ ಹಿಡಿದು ಸ್ಥಳಾಂತರ ಮಾಡುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಗ್ರಾಮಸ್ಥರು ಇದೇ ವೇಳೆ ಮನವಿ ಮಾಡಿಕೊಂಡರು. ಅನೇಕ ಬಾರಿ ಗ್ರಾಮಗಳಿಗೆ ನುಗ್ಗುತ್ತಿರುವ ಚಿರತೆಗಳಿಂದಾಗಿ ಜನರು ಮೂಕ ಪ್ರಾಣಿಗಳನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಅಳವತ್ತುಕೊಂಡರು. ಚಿರತೆ ಬೂನಿಗೆ ಬಿದ್ದಿರುವ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಚಿರತೆಯನ್ನು ಹಿಡಿದಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ನಿಟ್ಟುಸಿರು ಬಿಟ್ಟಿದ್ದಾರೆಯಾದರೂ, ಇನ್ನಷ್ಟು ಚಿರತೆಗಳಿರುವ ಬಗ್ಗೆ…
ಹೆಚ್.ಡಿ.ಕೋಟೆ ಪಟ್ಟಣದ ಅಂಬೇಡ್ಕರ್ ಭವವನದಲ್ಲಿ ಆದಿಕರ್ನಾಟಕ ಮಹಾಸಭಾ ವತಿಯಿಂದ ಅದ್ಯಕ್ಷ ಹೆಚ್.ಸಿ.ನರಸಿಂಹಮೂರ್ತಿ ರವರ ನೇತೃತ್ವದಲ್ಲಿ ಅದ್ದೂರಿಯಾಗಿ ನಡೆದ ಭೀಮಕೋರೆಗಾಂವ್ ವಿಜಯೋತ್ಸವ ಆಚರಿಸಲಾಯಿತು. ಕಾರ್ಯಕ್ರಮವನ್ನು ಗೌರವ ಅಧ್ಯಕ್ಷ ಚಂದ್ರಶೇಖರ ಮೂರ್ತಿ ಹಾಗೂ ವೇದಿಕೆಯ ಗಣ್ಯರು ದೀಪಬೆಳಗಿಸಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಪ್ರಸ್ತಾವಿಕ ಮಾತುಗಳನ್ನಾಡಿದ ಹೆಚ್.ಸಿ.ನರಸಿಂಹಮೂರ್ತಿ, ಮೊದಲ ಬಾರಿಗೆ ಸಮಾಜದ ಎಲ್ಲಾ ಹಿರಿಯರ ಮತ್ತು ಯುವಕರ ಬೆಂಬಲದಿಂದ ವಿಜಯೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ನಮ್ಮ ಪೂರ್ವಜರು ಎಷ್ಟು ಪರಾಕ್ರಮಶಾಲಿಗಳು ಎಂಬುದನ್ನು ಅರಿಯಲು ನಾವು ಅದರ ಬಗ್ಗೆ ತಿಳಿದಿರುವ ಸಂಪನ್ಮೂಲ ವ್ಯಕ್ತಿಯನ್ನು ಕರೆಸಿ ಅದರ ಬಗ್ಗೆ ಮಾಹಿತಿ ತಿಳಿಯ ಬೇಕೆಂಬ ಅಭಿಲಾಷೆಯಿಂದ ಕಾರ್ಯಕ್ರಮ ಅಯೋಜಿಸಲಾಗಿದೆ ಎಂದು ಹೇಳಿದರು. ಕಾರ್ಯಕ್ರಮಕ್ಕೆ ಮುಖ್ಯ ಭಾಷಣಕಾರರಾಗಿ ಆಗಮಿಸಿದ M.T. ಡಾ.ಕೃಷ್ಣಮೂರ್ತಿ ಮಾತನಾಡಿ, ನಮ್ಮ ಪೂರ್ವಜರು ಸ್ವಾಭಿಮಾನದ ನೆಲೆಯನ್ನು ಕಂಡುಕೊಳ್ಳಲು ಎಷ್ಟು ಹೋರಾಟಮಾಡಿದೆ ಎಂಬುವುದಕ್ಕೆ ಕೋರೆಗಾಂವ್ ಯುದ್ದ ನಿದರ್ಶನ. ಬ್ರಾಹ್ಮಣರ ಒಡೆದಾಳುವ ನೀತಿಯಿಂದ, ಅವರ ಗೊಡ್ಡು ಸಂಪ್ರದಾಯಗಳ ಆಚರಣೆಯಿಂದ ಹೊರಬರಲು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುವುದಕ್ಕೆ ಯುದ್ಧ…
ವಿಜಯಪುರ : ಸಿದ್ದೇಶ್ವರ ಸ್ವಾಮೀಜಿಗಳ ಆರೋಗ್ಯ ಸ್ಥಿರ ವಾಗಿದೆ ಎಂದು ವೈದ್ಯ ಮೂಲಿಮನಿ ಮಾಹಿತಿ ನೀಡಿದ್ದಾರೆ.ಆದರೆ ಸಿದ್ದೇಶ್ವರ ಶ್ರೀಗಳ ನಾಡಿಮಿಡಿತದಲ್ಲಿ ಸ್ವಲ್ಪ ಏರುಪೇರು ಆಗಿದೆ. ಉಸಿರಾಟದಲ್ಲಿ ಸ್ವಲ್ಪ ಸಮಸ್ಯೆ ಆಗುತ್ತಿದೆ. ಹೀಗಾಗಿ ಆಕ್ಸಿಜನ್ ಕೊಡಲಾಗುತ್ತಿದೆ. ಪಲ್ಸ್, ಬಿಪಿ, ಸ್ವಲ್ಪ ಕಡಿಮೆಯಾಗಿದೆ. ಅವರು ಬೆಳಗ್ಗೆಯಿಂದಲೂ ಆಹಾರವನ್ನು ಸೇವಿಸಿಲ್ಲ ಎಂದು ಹೇಳಿದರು. ಇನ್ನು ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿಯಾಗಿದ್ದು, ಸಿದ್ದೇಶ್ವರ ಸ್ವಾಮೀಜಿಗಳ ಆರೋಗ್ಯ ವಿಚಾರಿಸಿದ್ದಾರೆ. ಶ್ರೀಗಳ ಆರೋಗ್ಯ ವಿಚಾರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಸಿದ್ದೇಶ್ವರ ಶ್ರೀಗಳು ಒಬ್ಬ ಮಹಾನ್ ಸಂತ, ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ನಾನು ವೈದ್ಯರ ಜೊತೆಗೆ ಮಾತನಾಡಿದ್ದೇನೆ. ಅವರೂ ಶ್ರೀಗಳ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ. ಆದಷ್ಟು ಬೇಗ ಶ್ರೀಗಳು ಗುಣಮುಖರಾಗಲೆಂದು ನಾನು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ನವದೆಹಲಿ: 500 ಮತ್ತು 1,000 ರೂಪಾಯಿ ಮುಖಬೆಲೆಯ ನೋಟುಗಳನ್ನು ನಿಷೇಧಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ಬಗ್ಗೆ ಸುಪ್ರೀಂ ಕೋರ್ಟ್ ಇಂದು ಮಹತ್ವದ ತೀರ್ಪನ್ನು ಪ್ರಕಟಿಸಿದೆ. ಕೇಂದ್ರ ಸರ್ಕಾರದ ನೋಟ್ ಬ್ಯಾನ್ ಸಿಂಧುತ್ವವವನ್ನು ಎತ್ತಿಹಿಡಿದಿದೆ. ಇಂತಹ ವಿಚಾರದಲ್ಲಿ ಸುಪ್ರೀಂಕೋರ್ಟ್ ಮಧ್ಯಪ್ರವೇಶಿಸುವುದಿಲ್ಲ. ಇದು ಆರ್. ಬಿಐ ಮತ್ತು ಸರ್ಕಾರದ ನಡುವಿನ ವಿಷಯ. ನಿರ್ಧಾರವನ್ನು ಸಂಸತ್ ತೆಗೆದುಕೊಳ್ಳಲಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ. 2016 ರಲ್ಲಿ ನೋಟು ಅಮಾನ್ಯೀಕರಣದ ಬಗ್ಗೆ ಕೇಂದ್ರ ಸರ್ಕಾರದ ಅಧಿಸೂಚನೆಯ ವಿರುದ್ಧ ನ್ಯಾಯಾಲಯದಲ್ಲಿ 50 ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದವು. ಡಿಸೆಂಬರ್ 7 ರಂದು, ನ್ಯಾಯಪೀಠವು ಸರ್ಕಾರ ಮತ್ತು ಅರ್ಜಿದಾರರ ವಾದಗಳನ್ನು ಆಲಿಸಿದ ನಂತರ ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ನೋಟು ಅಮಾನನೀಕರಣ ನಿರ್ಧಾರವು ನಿರಂಕುಶ, ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಾಯ್ದೆಯಡಿ ಸೂಚಿಸಲಾದ ಅಧಿಕಾರಗಳ ದುರುಪಯೋಗವಾಗಿದೆ ಎಂದು ಅರ್ಜಿದಾರರು ವಾದಿಸಿದ್ದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.…
ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಕಿಶನ್ ಯೋಜನೆ ಅಡಿಯಲ್ಲಿ ವರ್ಷಕ್ಕೆ 6000 ರೂ. 4 ತಿಂಗಳಿಗೊಮ್ಮೆ 12 ಕಂತುಗಳಲ್ಲಿ ರೂ.2000 ನೀಡಲಾಗಿದ್ದು, 13ನೇ ಕಂತು ಶೀಘ್ರ ನೀಡುವುದಾಗಿ ಘೋಷಿಸಿದ್ದಾರೆ. ಈ ಮೊತ್ತವನ್ನು ಯಾವಾಗ ವಿತರಿಸಲಾಗುತ್ತದೆ, ಈ ಮೊತ್ತವನ್ನು ಪಡೆಯಲು ನಾವು ದಾಖಲೆಗಳನ್ನು ಹೇಗೆ ಸಲ್ಲಿಸಬಹುದು ಮತ್ತು ತಪ್ಪು ಮಾಹಿತಿಯನ್ನು ಹೇಗೆ ಸರಿಪಡಿಸುವುದು ಎಂಬುದನ್ನು Plantix ಅಪ್ಲಿಕೇಶನ್ ಮೂಲಕ ಕಂಡುಹಿಡಿಯಬಹುದು. ಇದಲ್ಲದೇ ರೈತರಿಗೆ ಬೆಳೆಗೆ ಸಂಬಂಧಿಸಿದಂತೆ ಸಂದೇಹ ಹಾಗೂ ಸಲಹೆಗಳನ್ನು ನೀಡಲಾಗುವುದು. ಬೆಳೆಗಳಿಗೆ ಹಾನಿಯಾದರೆ ಅದನ್ನು ಹೇಗೆ ಗುಣಪಡಿಸಬೇಕು ಎಂಬ ಬಗ್ಗೆಯೂ ಮಾಹಿತಿ ನೀಡಲಾಗುತ್ತದೆ. ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ನೀವು ಈ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದು. http://bitly.ws/ypRJ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಮಧ್ಯಪ್ರದೇಶದ ಇಂದೋರ್‌ನಲ್ಲಿ ಹಾರ್ನ್ ಮಾಡಿದ್ದಕ್ಕೆ ಯುವಕನೊಬ್ಬನನ್ನು ಇರಿದು ಕೊಂದ ಘಟನೆ ನಡೆದಿದೆ. ಯುವಕನನ್ನು ನಡುರಸ್ತೆಯಲ್ಲೇ ಓಡುವಂತೆ ಮಾಡಿ ಚಾಕುವಿನಿಂದ ಇರಿದು ಕೊಂದಿದ್ದಾರೆ. ಈ ಘಟನೆ ಅಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಶನಿವಾರ ರಾತ್ರಿ ಪವಾರ್ ಗ್ವಾನ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಪವಾರ್ ಗ್ವಾನ್‌ನಲ್ಲಿರುವ ಟೀ ಸ್ಟಾಲ್‌ನಲ್ಲಿ ರಾಂಗ್ ಸೈಡ್‌ಗೆ ಸೇರಿದ ಕೆಲವು ದುಷ್ಕರ್ಮಿಗಳು ಯುವಕರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ಆರೋಪಿಗಳು ರಸ್ತೆಯಲ್ಲೇ ನಿಂತು ಟೀ ಕುಡಿಯುತ್ತಿದ್ದಾರೆ. ವಾಗ್ವಾದದ ನಂತರ, ಐವರು ದುಷ್ಕರ್ಮಿಗಳು ಯುವಕನಿಗೆ ಇರಿದಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಈ ಘಟನೆ ಅಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಘಟನೆ ಬಳಿಕ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಸಿಸಿಟಿವಿ ಕ್ಯಾಮೆರಾಗಳ ಆಧಾರದ ಮೇಲೆ ಪೊಲೀಸರು ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಶ್ವಾಸಕೋಶಗಳು ನಮ್ಮ ದೇಹದಲ್ಲಿ ಸ್ವಯಂ ಶುಚಿಗೊಳಿಸುವ ಅಂಗವಾಗಿದೆ. ಆದರೆ ಕೊಳಕು ಸಮಸ್ಯೆಗಳನ್ನು ಉಂಟುಮಾಡುತ್ತದೆ. ಆದಾಗ್ಯೂ, ಈ ರಸಗಳು ಶ್ವಾಸಕೋಶದ ಕಾರ್ಯವನ್ನು ಸುಧಾರಿಸುತ್ತದೆ ಮತ್ತು ಅವುಗಳನ್ನು ಆರೋಗ್ಯಕರವಾಗಿ ಮಾಡಬಹುದು ಎಂದು ವೈದ್ಯಕೀಯ ತಜ್ಞರು ಸೂಚಿಸುತ್ತಾರೆ. ನಿಂಬೆ ರಸವನ್ನು ಬೆಳಿಗ್ಗೆ ಬೆಚ್ಚಗಿನ ನೀರಿನಿಂದ ನಿಯಮಿತವಾಗಿ ತೆಗೆದುಕೊಳ್ಳಬೇಕು. ದಾಳಿಂಬೆ ಜ್ಯೂಸ್, ಸೇಬು, ಅನಾನಸ್, ಟೊಮೇಟೊ ಮುಂತಾದ ಹಣ್ಣಿನ ರಸಗಳನ್ನು ಸೇವಿಸುವುದರಿಂದ ಶ್ವಾಸಕೋಶವನ್ನು ಆರೋಗ್ಯವಾಗಿಡಬಹುದು ಎನ್ನುತ್ತಾರೆ ತಜ್ಞರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy