Author: admin

ಎಸ್.ಸಿ ಮತ್ತು ಎಸ್.ಟಿ ಮೀಸಲಾತಿ ಹೆಚ್ಚಳಕ್ಕೆ ಕೇಂದ್ರದ ಮೇಲೆ ಒತ್ತಡ ಹಾಕುವಂತೆ ಸರ್ಕಾರಕ್ಕೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಆಗ್ರಹಿಸಿದರು. ವಿಧಾನಸಭಾ ಕಲಾಪದಲ್ಲಿ ಮೀಸಲಾತಿ ವಿಚಾರ ಚರ್ಚೆಯಾಯಿತು. ಈ ವೇಳೆ ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ನೀವು ಅವರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದೀರಾ…? ಮೀಸಲಾತಿ ಹೆಚ್ಚಳದ ಬಗ್ಗೆ ಈವರೆಗೆ ಕೇಂದ್ರದ ಮೇಲೆ ಒತ್ತಡ ಹಾಕಿಲ್ಲ. ಮೀಸಲಾತಿ ಪ್ರಮಾಣ ಹೆಚ್ಚಳದ ಬಗ್ಗೆ ಕೇಂದ್ರದ ಮೇಲೆ ಒತ್ತಡ ಹಾಕಿ. ಎಸ್.ಸಿ ಎಸ್ ಟಿ ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ನಮ್ಮ ಬೆಂಬಲವಿದೆ. ಕಾಂಗ್ರೆಸ್ ಪಕ್ಷ ಮೀಸಲಾತಿ ಹೆಚ್ಚಳದ ಪರ ಇದೆ ಎಂದು ಒತ್ತಾಯಿಸಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ವಾರ್ಷಿಕ ಪರಿಶೋಧನಾ ವರದಿಯಲ್ಲಿ ಗಮನಕ್ಕೆ ಬಂದಿರುವಂತೆ ಬಿಬಿಎಂಪಿಯ ಅಧಿಕಾರಿಗಳು ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಗೆ ಸಿದ್ಧವಾಗುತ್ತಿರುವ ಪದವಿಪೂರ್ವ (ಪಿಯು) ವಿದ್ಯಾರ್ಥಿಗಳಿಗೆ ಹಾಗೂ ಟ್ಯಾಲಿ ಅಕೌಂಟಿಂಗ್ ಸಾಫ್ಟ್ ವೇರ್ ಅನ್ನು ಕಲಿತು ತಮ್ಮ ಅಕೌಂಟೆನ್ಸಿ ಕೌಶಲ್ಯಗಳನ್ನು ಉತ್ತಮಪಡಿಸಿಕೊಳ್ಳಲು ಉತ್ಸುಕರಾಗಿದ್ದಂತಹ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ತರಬೇತಿ ಏಜೆನ್ಸಿಯೊಂದನ್ನು ಆಯ್ಕೆ ಮಾಡುವಲ್ಲಿ ಅಗತ್ಯಕ್ಕಿಂತ ಹೆಚ್ಚು ವೇಗವನ್ನು ತೋರ್ಪಡಿಸಿರುವ ಸಂಗತಿ ಬಹಿರಂಗಗೊಂಡಿದೆ. ಈ ಪರಿಶೊಧನಾ ವರದಿಯಲ್ಲಿ ಬಿಬಿಎಂಪಿ ಕಾಲೇಜುಗಳಲ್ಲಿ ಕಲಿಯುತ್ತಿರುವ ಪಿಯು ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಬಿಬಿಎಂಪಿ ಆಯ್ಕೆ ಮಾಡಿರುವ ಸೇವಾ ಏಜೆನ್ಸಿ ಆಯ್ಕೆ ಪ್ರಕ್ರಿಯೆಯಲ್ಲಿ ಗಂಭೀರ ಲೋಪವೊಂದು ಬಹಿರಂಗಗೊಂಡಿದೆ. ಸಿಇಟಿ ಹಾಗೂ ಅಕೌಂಟಿಂಗ್ ಸಾಫ್ಟ್ ವೇರ್ ಟ್ಯಾಲಿಗಾಗಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಸಂಬಂಧಪಟ್ಟ ವಿಷಯದಲ್ಲಿ ಪರಿಣಿತಿಯನ್ನು ಹೊಂದಿರುವ ಸಂಸ್ಥೆಗಳನ್ನು ಗುರುತಿಸಿ ಆಯ್ಕೆ ಮಾಡುವ ಬದಲಿಗೆ, ಬಿಬಿಎಂಪಿಯು ಪೇಪರ್ ಪ್ಲೇಟುಗಳನ್ನು ತಯಾರಿಸಿ ವಿತರಣೆ ಮಾಡುವ ಎಸ್‌ ಆರ್ ಇಂಡಸ್ಟ್ರಿಸ್‌ಗೆ ಆ ಜವಾಬ್ದಾರಿಯನ್ನು ವಹಿಸಿರುವ ಸಂಗತಿ ಪರಿಶೋಧನಾ ವರದಿಯಲ್ಲಿ…

Read More

ಚಾಮರಾಜನಗರ: ಕ್ವಾರಿಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಆದ ಅಚಾನಕ್ ಘಟನೆಯಿಂದ ಮೂವರು ದುರ್ಮರಣಕ್ಕೀಡಾದ ಘಟನೆ ನಡೆದಿದೆ. ಬಿಸಲವಾಡಿ ಗ್ರಾಮದಲ್ಲಿ ನಡೆಯುತ್ತಿರುವ ಕ್ಚಾರಿಯೊಂದರಲ್ಲಿ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಸಂಬಂಧಿಸಿದ ಠಾಣಾ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಬಿಸಲವಾಡಿ ಗ್ರಾಮದಲ್ಲಿರುವ ಭಾಸ್ಕರ್ ಎಂಬುವವರ ಕ್ವಾರಿಯಲ್ಲಿ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಕ್ವಾರಿಯಲ್ಲಿ ಕೆಲಸ ಮಾಡುತ್ತಿರುವಾಗ ಸಡಿಲವಾದ್ದರಿಂದ ಕಲ್ಲು ಕುಸಿದು ಈ ಘಟನೆ ನಡೆದಿದೆ. ಬಂಡೆಯ ಮೇಲುಗಡೆ ನಿಂತು ಕುಳಿ ತೆಗೆಯುವಾಗ ಈ ಘಟನೆ ಸಂಭವಿಸಿದ್ದು ಮೃತರು ಹೊರರಾಜ್ಯದವರೊ ಅಥವಾ ಸ್ಥಳೀಯರೊ ಎಂಬುದನ್ನ ಇಲಾಖೆ ಖಾತ್ರಿಪಡಿಸಬೇಕಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಮುಜರಾಯಿ ಇಲಾಖೆ ವ್ಯಾಪ್ತಿಗೊಳಪಡುವ ದೇವಸ್ಥಾನಗಳ ವಾರ್ಷಿಕ ನಿರ್ವಹಣಾ ವೆಚ್ಚವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಧಾರ್ಮಿಕ ದತ್ತಿ,ಹಜ್ ಹಾಗೂ ವಕ್ಫ್ ಸಚಿವರಾದ ಶಶಿಕಲಾ ಜೊಲ್ಲೆ ಹೇಳಿದರು ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿಂದು ಲಿಂಗಸುಗೂರು ಶಾಸಕ ಡಿ.ಎಸ್. ಹೂಲಗೇರಿಯವರ ಪರವಾಗಿ ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ ಅವರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿದರು, ಮುಜರಾಯಿ ಇಲಾಖೆಗೆ ಅನುದಾನ ಬಹಳ ಕಡಿಮೆಯಿದ್ದು, ಪರಿಶಿಷ್ಟ ಜಾತಿ ಉಪಯೋಜನೆ ಹಾಗೂ ಗಿರಿಜನ ಉಪಯೋಜನೆ ಸೇರಿದಂತೆ ಇಲಾಖೆಯ ಕಾರ್ಯಕ್ರಮಗಳಿಗೆ ಅನುದಾನ ಹೆಚ್ಚಿಸಲು ಪ್ರಯತ್ನಿಸಲಾಗುವುದು ಎಂದರು. … ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ ಮಾತನಾಡಿ, ಮುಜರಾಯಿ ದೇವಸ್ಥಾನಗಳಿಗೆ 50 ಸಾವಿರ ರೂ., 1 ಲಕ್ಷ ರೂ., 2 ಲಕ್ಷ ರೂ.ಹೀಗೆ ಕನಿಷ್ಠ ಪ್ರಮಾಣದ ಅನುದಾನ ನೀಡಿದರೆ ನಿರ್ವಹಣೆ ಮಾಡುವುದು ಹೇಗೆ?, ವಾರ್ಷಿಕ ಅನುದಾನವನ್ನು ಕನಿಷ್ಟ 25 ಲಕ್ಷ ರೂ.ಗಳಿಗೆ ಹೆಚ್ಚಳ ಮಾಡಬೇಕೆಂದು ಆಗ್ರಹಿಸಿದರು.ಪ್ರಶ್ನೆಗೆ ಒದಗಿಸಿರುವ ಲಿಖಿತ ಉತ್ತರದಲ್ಲಿ ದೇವಸ್ಥಾನಗಳ ಹೆಸರು ಹಾಗೂ ಮಾಹಿತಿ ಆಂಗ್ಲಭಾಷೆಯಲ್ಲಿದೆ. ಗ್ರಾಮಗಳ…

Read More

ಸೈಬರ್ ಅಪರಾಧಗಳನ್ನು ಸಮರ್ಥವಾಗಿ ನಿಭಾಯಿಸಲು ಹಾಗೂ ಸೈಬರ್ ಕ್ರೈಂ ವಂಚನೆಗೊಳಗಾದವರ ನೆರವಿಗಾಗಿ ಸರ್ಕಾರವು ಬೆಂಗಳೂರು ನಗರದಲ್ಲಿ 8 ಹಾಗೂ ಪ್ರತಿ ಜಿಲ್ಲೆ ಹಾಗೂ ನಗರ ವ್ಯಾಪ್ತಿಯಲ್ಲಿ ವಿಶೇಷ ಸೈಬರ್ ಪೊಲೀಸ್ ಠಾಣೆಗಳನ್ನು ತೆರೆದು, ಸೈಬರ್ ಅಪರಾಧಗಳನ್ನು ಪತ್ತೆ ಹಚ್ಚಲು ಸೈಬರ್ ತಜ್ಞರನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಸೋಮವಾರ ವಿಧಾನ ಪರಿಷತ್ತಿನ ಕಲಾಪದ ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ಪಿ.ಆರ್.ರಮೇಶ್ ಹಾಗೂ ಟಿ.ಎ.ಶರವಣ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಅವರು ಉತ್ತರಿಸಿದರು.ರಾಜ್ಯದಲ್ಲಿ ಸೈಬರ್ ಅಪರಾಧ ಪತ್ತೆ ಹಚ್ಚುವ ನಿಟ್ಟಿನಲ್ಲಿ ಪೊಲೀಸ್ ಸೈಬರ್ ಸೆಲ್ ಆಧುನೀಕರಣಗೊಳಿಸಲಾಗಿದೆ. ಪೊಲೀಸರಿಗೆ ಆಧುನಿಕ ತರಬೇತಿ ನೀಡಲು ಸಿ.ಐ.ಡಿ ಘಟಕದಲ್ಲಿ ವಿಶೇಷ ತರಬೇತಿ ವಿಭಾಗವನ್ನು ಸ್ಥಾಪಿಸಲಾಗಿದೆ. ಒಟ್ಟು 3657 ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ, ಸರ್ಕಾರಿ ಅಯೋಜಕರು, ಇನ್ನಿತರೆ ಕಾನೂನು ಜಾರಿ ಸಂಸ್ಥೆಗಳಿಗೆ ತರಬೇತಿ ನೀಡಲಾಗಿದೆ. ರಾಜ್ಯದ ಗೃಹ ಇಲಾಖೆ ಗುಜರಾತಿನ ಅಹಮದಬಾದ್ ವಿಧಿ ವಿಜ್ಞಾನ ವಿಶ್ವವಿದ್ಯಾಲಯದೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಅಲ್ಲಿ ರಾಜ್ಯದ ಆಸಕ್ತ…

Read More

ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೊರೊನಾ ಪರೀಕ್ಷೆ ವೇಳೆಯಲ್ಲಿ 12 ಮಂದಿಗೆ ಪಾಸಿಟಿವ್ ವರದಿಯಾಗಿದೆ. ಇದರಲ್ಲಿ ಚೀನಾದಿಂದ ಬಂದಿರುವಂತ ವ್ಯಕ್ತಿಯೊಬ್ಬರು ಸಹ ಸೇರಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಬಿಎಫ್ 7 ಒಮಿಕ್ರಾನ್ ಉಪತಳಿಯ ಆಂತಕ ಹೆಚ್ಚಾಗಿದೆ. ಚೀನಾದಿಂದ ಬಂದ 35 ವರ್ಷದ ವ್ಯಕ್ತಿಯೊಬ್ಬನನ್ನು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೊರೊನಾ ಪತ್ತೆ ಪರೀಕ್ಷೆಗೆ ಒಳಪಡಿಸಲಾಗಿದೆ. ಅವರಿಗೆ ಕೋವಿಡ್ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಅವರನ್ನು ಕೂಡಲೇ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಕಳೆದ ಮೂರು ದಿನಗಳಿಂದ ಹೈರಿಸ್ಕ್ ದೇಶಗಳಿಂದ ಬಂದಂತ 12 ಜನರಲ್ಲಿ ಕೊರೋನಾ ದೃಢಪಟ್ಟಿದೆ. ಇವರಲ್ಲಿ ಐವರನ್ನು ಹೋಂ ಐಸೋಲೇಷನ್ ಮಾಡಲಾಗಿದೆ, ನಾಲ್ವರನ್ನು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಹೀಗಾಗಿ ಈಗ ಬೆಂಗಳೂರಿನಲ್ಲಿಯೂ ಬಿಎಫ್.7 ಕೊರೋನಾ ಆತಂಕ ಹೆಚ್ಚಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ನಾಗ್ಪುರ : ಗಡಿ ವಿವಾದ ಸಂಬಂಧ ಕರ್ನಾಟಕದ ಸಿಎಂ ಬಸವರಾಜ ಬೊಮ್ಮಾಯಿ ಪ್ರಚೋದನೆ ನೀಡುತ್ತಿದ್ದಾರೆ ಎಂದು ಮಹಾರಾಷ್ಟ್ರ ವಿಪಕ್ಷ ನಾಯಕ ಅಜಿತ್ ಪವಾರ್ ಆರೋಪಿಸಿದ್ದಾರೆ. ಇಂದು ಮಹಾರಾಷ್ಟ್ರ ವಿಧಾನಸಭೆಯಲ್ಲಿ ಗಡಿ ವಿವಾದ ವಿಚಾರದ ಚರ್ಚೆ ವೇಳೆ ಮಾತನಾಡಿದ ವಿಪಕ್ಷ ನಾಯಕ ಅಜಿತ್ ಪವಾರ್, ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ದೇಶಪೂರ್ವಕವಾಗಿ ಗಡಿ ವಿಚಾರದಲ್ಲಿ ಪ್ರಚೋದನೆ ನೀಡುತ್ತಿದ್ದಾರೆ ಎಂದರು. ಕರ್ನಾಟಕದ ಸಿಎಂ ನಮಗೆ ದ್ರೋಹ ಮಾಡಿದ್ರೂ ಸುಮ್ಮನಿದ್ದೇವೆ. ಗಡಿ ವಿವಾದದ ಬಗ್ಗೆ ಸರ್ಕಾರ ನಿರ್ಣಯ ಕೈಗೊಳ್ಳಬೇಕು. ಎಂಇಎಸ್ ನವರು ಕೊಲ್ಹಾಪುರಕ್ಕೆ ಬರುವ ಇಚ್ಛೆ ವ್ಯಕ್ತಪಡಿಸಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಚೀನಾದಿಂದ ವಾಪಸಾದ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಆಗ್ರಾ ಮೂಲದ ವ್ಯಕ್ತಿಯೊಬ್ಬರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ವ್ಯಕ್ತಿಯನ್ನು ಬಾಧಿಸಿದ ಕಾಯಿಲೆಯ ಪ್ರಕಾರವನ್ನು ಖಚಿತಪಡಿಸಲು ಕಾರ್ಯವಿಧಾನಗಳನ್ನು ಪ್ರಾರಂಭಿಸಲಾಗಿದೆ. ಲಕ್ನೋದ ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಜೀನೋಮ್ ಸೀಕ್ವೆನ್ಸಿಂಗ್ ಮೂಲಕ ಇದನ್ನು ಕಂಡುಹಿಡಿಯಲಾಯಿತು. ಉತ್ತರ ಪ್ರದೇಶ ಸರ್ಕಾರವು ವಿದೇಶದಿಂದ ಹಿಂದಿರುಗುವವರಿಗೆ 7 ದಿನಗಳ ಸ್ವಯಂ ಕ್ವಾರಂಟೈನ್‌ಗೆ ಆದೇಶಿಸಿದೆ. ಈ ಹಿಂದೆ, ಚೀನಾವನ್ನು ಬಿಕ್ಕಟ್ಟಿಗೆ ಸಿಲುಕಿಸಿದ ಕೋವಿಡ್‌ನ ಹೊಸ ರೂಪಾಂತರವನ್ನು ಭಾರತದಲ್ಲಿಯೂ ಬಿಎಫ್ 7 ಎಂದು ದೃಢಪಡಿಸಲಾಯಿತು. ಈ ಹಿನ್ನೆಲೆಯಲ್ಲಿ ದೇಶ ಕಟ್ಟೆಚ್ಚರ ವಹಿಸಿದೆ. ಸೆಲ್ ಹೋಸ್ಟ್ ಮತ್ತು ಮೈಕ್ರೋಬ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನವು ವುಹಾನ್‌ನಲ್ಲಿ ಮೊದಲು ಹರಡಿದ ವೈರಸ್‌ಗಿಂತ BF7 ರೂಪಾಂತರವು 4 ಪಟ್ಟು ಹೆಚ್ಚು ತಟಸ್ಥೀಕರಣ ಪ್ರತಿರೋಧವನ್ನು ಹೊಂದಿದೆ ಎಂದು ಹೇಳುತ್ತದೆ. ಇದರರ್ಥ ವ್ಯಾಕ್ಸಿನೇಷನ್ ಅಥವಾ ಸ್ವಾಧೀನಪಡಿಸಿಕೊಂಡ ಪ್ರತಿರಕ್ಷೆಯ ಮೂಲಕ ದೇಹವು ಈ ರೂಪಾಂತರದ ಸೋಂಕನ್ನು ಸುಲಭವಾಗಿ ತಡೆಯಲು ಸಾಧ್ಯವಿಲ್ಲ.ಅವು ಹೆಚ್ಚು ನಿರೋಧಕವಾಗಿದ್ದರೂ, ಅವು ಹೆಚ್ಚು ಅಪಾಯಕಾರಿ ಅಲ್ಲ…

Read More

ಕಮ್ಯುನಿಸ್ಟ್ ನಾಯಕ ಪುಷ್ಪ ಕಮಲ್ ಧಲ್ (ಪ್ರಚಂಡ) ನೇಪಾಳದ ಪ್ರಧಾನಿಯಾಗಿ ಇಂದು ಅಧಿಕಾರ ಸ್ವೀಕರಿಸಲಿದ್ದಾರೆ. ನೇಪಾಳದ ಪ್ರಧಾನಿಯಾಗಿ ಆಯ್ಕೆಯಾಗಿರುವ ಪ್ರಚಂಡ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಸ್ನೇಹವನ್ನು ಬಲಪಡಿಸಲು ನಾವು ಒಟ್ಟಾಗಿ ಕೆಲಸ ಮಾಡಬಹುದು ಎಂದು ಪ್ರಧಾನಿ ಹೇಳಿದರು. ಭಾರತ ಮತ್ತು ನೇಪಾಳ ನಡುವಿನ ಸಂಬಂಧವು ಸಾಂಸ್ಕೃತಿಕವಾಗಿ ಆಳವಾದದ್ದು. ಸ್ನೇಹವನ್ನು ಬಲಪಡಿಸಲು ಉಭಯ ದೇಶಗಳು ಒಟ್ಟಾಗಿ ಕೆಲಸ ಮಾಡಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ. ಪ್ರತಿಪಕ್ಷ ಕಮ್ಯುನಿಸ್ಟ್ ಲೆನಿನಿಸ್ಟ್ ಮತ್ತು ಪ್ರಚಂಡ ಅವರ ಕಮ್ಯುನಿಸ್ಟ್ ಪಾರ್ಟಿ ಆಫ್ ನೇಪಾಳ ಮಾವೋವಾದಿ ಕೇಂದ್ರದ ನಡುವಿನ ಸಮ್ಮಿಶ್ರ ಸರ್ಕಾರ ಈ ಬಾರಿ ಅಧಿಕಾರಕ್ಕೆ ಬರಲಿದೆ. ಕಮ್ಯುನಿಸ್ಟ್ ಪಾರ್ಟಿ ಆಫ್ ನೇಪಾಳ-ಮಾವೋವಾದಿ ಕೇಂದ್ರದ ಅಧ್ಯಕ್ಷ ಪ್ರಚಂಡ ಮೂರನೇ ಬಾರಿಗೆ ಪ್ರಧಾನಿ ಹುದ್ದೆಗೆ ಏರುತ್ತಿದ್ದಾರೆ. ಪ್ರಚಂಡ ಅವರು ಈ ಹಿಂದೆ 2008 ಮತ್ತು 2016ರಲ್ಲಿ ಪ್ರಧಾನಿಯಾಗಿದ್ದರು. ಸಂಸತ್ತಿನಲ್ಲಿ ಬಹುಮತ ಸಾಬೀತುಪಡಿಸಲು ಅಧ್ಯಕ್ಷರು ಈ ಹಿಂದೆ ಪಕ್ಷಗಳಿಗೆ ಆಹ್ವಾನ ನೀಡಿದ್ದರು. 275 ಸದಸ್ಯ ಬಲದ…

Read More

ನಾಯಕಿ ತ್ರಿಷಾ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರಲಿದ್ದಾರೆ ಎಂಬ ಪ್ರಚಾರದಲ್ಲಿ ಇರುವಂತ ವದಂತಿ ನಿಜವಲ್ಲ ಮತ್ತು ತನಗೂ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅವರ ಹೊಸ ಚಿತ್ರ ‘ರಾಂಗಿ’ ಇದೇ ತಿಂಗಳ 30 ರಂದು ಬಿಡುಗಡೆಯಾಗಲಿದೆ. ಈ ಸಿನಿಮಾದ ಪ್ರಚಾರದ ಭಾಗವಾಗಿ ನೀಡಿರುವ ಸಂದರ್ಶನದಲ್ಲಿ ತ್ರಿಶಾ ರಾಜಕೀಯ ಪ್ರವೇಶದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಚಿತ್ರರಂಗಕ್ಕೆ ಬಂದು 20 ವರ್ಷಗಳು ಕಳೆದಿದ್ದು, ಈ ಎರಡು ದಶಕಗಳಲ್ಲಿ ವಾಸ್ತವ ಅಂಶಗಳನ್ನು ಮಾತ್ರ ಪರಿಗಣಿಸಿ ಟೀಕೆಗಳತ್ತ ಗಮನ ಹರಿಸಿಲ್ಲ ಎಂದರು. ತಾನು ಕಾಂಗ್ರೆಸ್ ಪಕ್ಷ ಸೇರಲಿದ್ದೇನೆ ಎಂಬ ಪ್ರಚಾರ ನಡೆಯುತ್ತಿದ್ದು, ಅದರಲ್ಲಿ ಯಾವುದೇ ಸತ್ಯಾಂಶವಿಲ್ಲ,  ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು. ಅದೇ ಸಮಯದಲ್ಲಿ ನೀವು ಯಾವಾಗ ಮದುವೆಯಾದಿರಿ? ನಿಮ್ಮ ನೆಚ್ಚಿನ ನಟ ಯಾರು? ಅಂತಹ ಪ್ರಶ್ನೆಗಳನ್ನು ಸ್ವಲ್ಪ ಸಮಯದವರೆಗೆ ಕೇಳದಿರುವುದು ಉತ್ತಮ ಎಂದು ಅವರು ಸೂಚಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.…

Read More