ಮುಜರಾಯಿ ಇಲಾಖೆ ವ್ಯಾಪ್ತಿಗೊಳಪಡುವ ದೇವಸ್ಥಾನಗಳ ವಾರ್ಷಿಕ ನಿರ್ವಹಣಾ ವೆಚ್ಚವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಧಾರ್ಮಿಕ ದತ್ತಿ,ಹಜ್ ಹಾಗೂ ವಕ್ಫ್ ಸಚಿವರಾದ ಶಶಿಕಲಾ ಜೊಲ್ಲೆ ಹೇಳಿದರು
ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿಂದು ಲಿಂಗಸುಗೂರು ಶಾಸಕ ಡಿ.ಎಸ್. ಹೂಲಗೇರಿಯವರ ಪರವಾಗಿ ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ ಅವರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿದರು, ಮುಜರಾಯಿ ಇಲಾಖೆಗೆ ಅನುದಾನ ಬಹಳ ಕಡಿಮೆಯಿದ್ದು, ಪರಿಶಿಷ್ಟ ಜಾತಿ ಉಪಯೋಜನೆ ಹಾಗೂ ಗಿರಿಜನ ಉಪಯೋಜನೆ ಸೇರಿದಂತೆ ಇಲಾಖೆಯ ಕಾರ್ಯಕ್ರಮಗಳಿಗೆ ಅನುದಾನ ಹೆಚ್ಚಿಸಲು ಪ್ರಯತ್ನಿಸಲಾಗುವುದು ಎಂದರು.
… ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ ಮಾತನಾಡಿ, ಮುಜರಾಯಿ ದೇವಸ್ಥಾನಗಳಿಗೆ 50 ಸಾವಿರ ರೂ., 1 ಲಕ್ಷ ರೂ., 2 ಲಕ್ಷ ರೂ.ಹೀಗೆ ಕನಿಷ್ಠ ಪ್ರಮಾಣದ ಅನುದಾನ ನೀಡಿದರೆ ನಿರ್ವಹಣೆ ಮಾಡುವುದು ಹೇಗೆ?, ವಾರ್ಷಿಕ ಅನುದಾನವನ್ನು ಕನಿಷ್ಟ 25 ಲಕ್ಷ ರೂ.ಗಳಿಗೆ ಹೆಚ್ಚಳ ಮಾಡಬೇಕೆಂದು ಆಗ್ರಹಿಸಿದರು.ಪ್ರಶ್ನೆಗೆ ಒದಗಿಸಿರುವ ಲಿಖಿತ ಉತ್ತರದಲ್ಲಿ ದೇವಸ್ಥಾನಗಳ ಹೆಸರು ಹಾಗೂ ಮಾಹಿತಿ ಆಂಗ್ಲಭಾಷೆಯಲ್ಲಿದೆ. ಗ್ರಾಮಗಳ ಹೆಸರುಗಳು ಕೂಡ ತಪ್ಪಾಗಿವೆ ಅದನ್ನು ಸರಿಪಡಿಸಬೇಕು ಎಂದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy