Author: admin

ಕುಣಿಗಲ್: ಪಟ್ಟಣದ ಕುಂಬಾರಗುಂಡಿ ಸ್ಮಶಾನದಲ್ಲಿ  ವರ್ಷದ ಹಿಂದೆ ವಿದ್ಯುತ್ ಚಿತಾಗಾರ ಉದ್ಘಾಟನೆಗೊಂಡಿತ್ತು. ಆದ್ರೆ, ಇದು ಉದ್ಘಾಟನೆಗಿಂತ ಮೊದಲೇ ಶಿಥಿಲಾವಸ್ಥೆ ತಲುಪಿದ್ದು,  ಕಾರ್ಯಾರಂಭಗೊಳ್ಳುವ ಮುನ್ನವೇ ಚಿತಾಗಾರ ಶಿಥಿಲಾವಸ್ಥೆಗೆ ತಲುಪಿರುವುದಕ್ಕೆ ಯಾರು ಹೊಣೆ ಅನ್ನೋ ಪ್ರಶ್ನೆ ಕೇಳಿ ಬಂದಿದೆ. ವರದಿಗಳ ಪ್ರಕಾರ, ಸಂಸದ ಡಿ.ಕೆ. ಸುರೇಶ್ ಅವರ ಸಂಸದರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ವಿದ್ಯುತ್ ಚಿತಾಗಾರ ನಿರ್ಮಾಣವಾಗಿತ್ತು. ಆದರೆ ಎರಡು ವರ್ಷ ಕಳೆದಿದ್ದರೂ, ಯಂತ್ರೋಪಕರಣ ಅಳವಡಿಕೆ ಮತ್ತು ವಿದ್ಯುತ್ ಸಂಪರ್ಕ ಸಾಧ್ಯವಾಗಿರಲಿಲ್ಲ, ಕಳೆದ ವರ್ಷ ಶಾಸಕ ಡಾ.ರಂಗನಾಥ್ ಅಧ್ಯಕ್ಷತೆಯಲ್ಲಿ ಉದ್ಘಾಟನೆ ಮಾಡಲಾಗಿತ್ತು. ಆದರೆ,  ನಿರ್ವಹಣೆ ಕೊರತೆಯಿಂದಾಗಿ ಚಿತಾಗಾರ ಕಾರ್ಯಾರಂಭ ತಡವಾಗಿದ್ದು, ಪುರಸಭೆಯಿಂದ ನಿರ್ವಹಣೆ ಟೆಂಡ‌ ಕರೆಯಲಾಗಿದ್ದು, ಗುತ್ತಿಗೆ ಪಡೆದವರು ಅರ್ಹ ಸಿಬ್ಬಂದಿಗೆ ತರಬೇತಿ ನೀಡಿ ಕಾರ್ಯಾರಂಭ ಮಾಡದ ಕಾರಣ ಮತ್ತೆ ಸ್ಥಗಿತಗೊಂಡಿದೆ. ಈಗಾಗಲೇ ಎರಡು ಬಾರಿ ಚಿತಾಗಾರದ ಬಾಗಿಲು ಮೀಟಿ ಒಳ ನುಸುಳಿದ ಕಿಡಿಗೇಡಿಗಳು ಸಾಮಗ್ರಿ ಕಳವು ಮಾಡಿದ್ದಾರೆ. ಕಿಟಕಿ ಗಾಜುಗಳನ್ನು ನಿರಂತರವಾಗಿ ಒಡೆದು ಹಾಕಲಾಗುತ್ತಿದ್ದು, ಪುರಸಭೆಯಿಂದ ಅಳವಡಿಕೆ ಕಾರ್ಯ ಮುಂದುವರೆದಿದೆ. ಕುಲುಮೆ ಅಳವಡಿಕೆ ಮತ್ತು…

Read More

ಕೊರಟಗೆರೆ : ಇತ್ತೀಚಿಗೆ ನಡೆದ ದೃಷ್ಠಿ ಚೇತನ ಮಹಿಳಾ ಟಿ20 ವಿಶ್ವಕಪ್ ನಲ್ಲಿ ಗೆದ್ದು ಸಾಧನೆ ಮಾಡಿದ ತಂಡದ ಆಟಗಾರ್ತಿ ಕಾವ್ಯಗೆ ತಾಲ್ಲೂಕಿನ ಜಟ್ಟಿ ಅಗ್ರಹಾರ ಗ್ರಾಮ ಪಂಚಾಯಿತಿಯಲ್ಲಿ ಗ್ರಾ.ಪಂ ಹಾಗೂ ತಾಲ್ಲೂಕು ಆಡಳಿತ ವತಿಯಿಂದ ತಹಶೀಲ್ದಾರ್ ಕೆ. ಮಂಜುನಾಥ್ ಹಾಗೂ ಇಓ ಅಪೂರ್ವ ಸಿ ಸನ್ಮಾನಿಸಿ ಗೌರವಿಸಿದರು. ಇದೇ ಸಂದರ್ಭದಲ್ಲಿ ತಹಶೀಲ್ದಾರ್ ಕೆ.ಮಂಜುನಾಥ್ ಮಾತನಾಡಿ, ಕೊರಟಗೆರೆ ವಿಧಾನಸಭಾ ಕ್ಷೇತ್ರದ ಕೋರಾ ಹೋಬಳಿಯ ನಾಯಕನಪಾಳ್ಯ ಗ್ರಾಮದ ಬಡ ಕುಟುಂಬದಲ್ಲಿ ಜನಿಸಿದ ಕಾವ್ಯ ಅವರ ಸಾಧನೆ ಇಡೀ ದೇಶವೇ ಮೆಚ್ಚುವಂತ ಸಾಧನೆ ಮಾಡಿದ್ದಾರೆ. ವಿಶೇಷ ಚೇತನರು ಆಗಿದ್ದರೂ ಸಹ ನಾವು ಕೂಡ ಸಾಧನೆ ಮಾಡಬಹುದು ಎಂದು ತೋರಿಸಿಕೊಟ್ಟಿದ್ದಾರೆ. ಇವರನ್ನ ಸ್ಪೂರ್ತಿಯಾಗಿ ಇಟ್ಟುಕೊಂಡು ಮಹಿಳೆಯರು ಹಾಗೂ ಇವತ್ತಿನ ಹೆಣ್ಣು ಮಕ್ಕಳು ವಿವಿಧ ರಂಗ ಕ್ಷೇತ್ರಗಳಲ್ಲಿ ಆರಿಸಿಕೊಂಡು ತಮ್ಮ ಕ್ಷೇತ್ರಗಳಲ್ಲಿ ಸಾಧನೆ ಮಾಡಬಹುದಾಗಿದೆ ಎಂದು ತಿಳಿಸಿದರು. ನಮ್ಮ ಜಿಲ್ಲೆಯಲ್ಲಿ ಇಬ್ಬರು ವಿಶೇಷ ಚೇತನರು ಸಾಧನೆ ಮಾಡಿ ನಮ್ಮ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಇಂತಹ ಪ್ರತಿಭೆಗಳನ್ನ ಗುರಿತಿಸುವುದು…

Read More

ತುಮಕೂರು: ನಗರೀಕರಣ, ಕೈಗಾರಿಕೀಕರಣದ ಹೆಸರಿನಲ್ಲಿ ಜಲಮೂಲ, ನದಿಪಾತ್ರ ಬರಿದು ಮಾಡಿದರೆ ಮನುಕುಲ ಸೇರಿದಂತೆ ಇಡೀ ಜೀವ ಸಂಕುಲವೇ ಅಪಾಯಕ್ಕೆ ಸಿಲುಕಲಿದೆ ಎಂದು ಜಲಸಂಪನ್ಮೂಲ ಇಲಾಖೆ ನಿವೃತ್ತ ಕಾರ್ಯದರ್ಶಿ ಕೆ.ಜೈಪ್ರಕಾಶ್ ಎಚ್ಚರಿಸಿದರು. ನಗರದ ಸಿದ್ಧಗಂಗಾ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಈಚೆಗೆ ಎಂಜಿನಿಯರುಗಳ ಸಂಸ್ಥೆ (ಐಇಐ) ಸಹಯೋಗದಲ್ಲಿ ಉತ್ತಮ ಜಗತ್ತು ರೂಪಿಸಲು ಸ್ಮಾರ್ಟ್‌ ಎಂಜಿನಿಯರಿಂಗ್ ಹಾಗೂ ರಾಜ್ಯದ ನೀರಿನ ಪರಿಸ್ಥಿತಿ ಕುರಿತು ಮಾತನಾಡಿದರು. ಜನಸಂಖ್ಯೆ ಬೆಳೆಯುತ್ತಲೇ ಸಾಗಿದ್ದು, ನೀರಿಗೆ ಬೇಡಿಕೆ ಹೆಚ್ಚುತ್ತಿದೆ. ಇರುವ ಜಲಮೂಲವನ್ನು ಮಾಲಿನ್ಯ ರಹಿತವಾಗಿ ಸಂರಕ್ಷಿಸಿ ಸದ್ಬಳಕೆ ಮಾಡಿಕೊಳ್ಳಬೇಕು. ಈ ದಿಸೆಯಲ್ಲಿ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುವ ಎಂಜಿನಿಯರುಗಳ ಪಾತ್ರ ಪ್ರಮುಖವಾಗಿದೆ. ನೀರಿನ ಸಂರಕ್ಷಣೆ ವಿಚಾರದಲ್ಲಿ ಎಚ್ಚರಿಕೆಯಿಂದ ಯೋಜನೆ ರೂಪಿಸಿ ಕಾರ್ಯ ರೂಪಕ್ಕೆ ತರಬೇಕು ಎಂದರು. ಎಸ್‌ ಐಟಿ ಸಿಇಒ ಶಿವಕುಮಾರಯ್ಯ, ಪ್ರಾಂಶುಪಾಲ ಪ್ರೊ.ಎಸ್.ವಿ.ದಿನೇಶ್, ಐಇಐ ಅಧ್ಯಕ್ಷ ಆರ್.ಸುರೇಶ್, ಸಿವಿಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಪ್ರೊ.ಪವನ್ ಕುಮಾರ್, ಆನಂದ್, ಮಾದವ್, ಗಣೇಶ್, ತಿರುಮಲೇಶ್‌ ಉಪಸ್ಥಿತರಿದ್ದರು. ಪವನ್‌ಕುಮಾರ್ ಯಮ್ಮಿ ಸ್ವಾಗತಿಸಿ, ರೂಪ ನಿರೂಪಿಸಿ ಎನ್.ಚಕ್ರವರ್ತಿ ವಂದಿಸಿದರು.…

Read More

ತುರುವೇಕೆರೆ: ಪಟ್ಟಣಕ್ಕೆ ಗುರುವಾರ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಭೇಟಿ ನೀಡಿ ವಿವಿಧ ಇಲಾಖೆಗಳ ಕಾರ್ಯವೈಖರಿ ಪರಿಶೀಲಿಸಿದರು. ನಂತರ ಜನರ ಸಮಸ್ಯೆ ಆಲಿಸಿದರು. ತಾಲ್ಲೂಕಿನ ಕಳ್ಳನಕೆರೆ ನಿವಾಸಿ ನಂಜಮ್ಮ ಅವರಿಗೆ ಶ್ರವಣದೋಷ ಇರುವುದು ಗಮನಿಸಿದ ಅವರು, ಕೂಡಲೇ ಶ್ರವಣ ದೋಷ ಮಿಷನ್ ಒದಗಿಸುವಂತೆ ತಹಶೀಲ್ದಾರ್‌ ಗೆ ಸೂಚಿಸಿದರು. ಮಾಯಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಸ್ವಚ್ಛತೆ ಹಾಗೂ ಮೂಲ ಸೌಕರ್ಯ ಪರಿಶೀಲಿಸಿದರು. ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು. ರೋಗಿಗಳಿಗೆ ಅಗತ್ಯ ಔಷಧಿಗಳನ್ನು ಸಮರ್ಪಕವಾಗಿ ಒದಗಿಸಬೇಕು. ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ತುರ್ತು ಪರಿಸ್ಥಿತಿಯಲ್ಲಿ ತಕ್ಷಣ ಚಿಕಿತ್ಸೆ ಲಭ್ಯವಾಗುವಂತೆ 24 ಗಂಟೆ ಅರೋಗ್ಯ ಕೇಂದ್ರ ಕಾರ್ಯನಿರ್ವಹಿಸಬೇಕು ಎಂದು ವೈದ್ಯಾಧಿಕಾರಿ ಡಾ.ಸ್ವರೂಪಗೆ ಸೂಚಿಸಿದರು. ತುಮಕೂರು ಉಪ ವಿಭಾಗಾಧಿಕಾರಿ ಸಪ್ತಶ್ರೀ, ಡಿಡಿಎಲ್‌ಆರ್ ಭಾವನ, ತಹಶೀಲ್ದಾರ್ ಎನ್.ಎ.ಕುಂಞ ಅಹಮದ್‌ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿ ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್…

Read More

ಪಾವಗಡ: ತಾಲ್ಲೂಕು ಕೋಟಗುಡ್ಡ ಸಹನಾ ಶಾಲೆಯ ವಿದ್ಯಾರ್ಥಿಗಳು  ತಾಲ್ಲೂಕು ಮಟ್ಟದ  ಪ್ರತಿಭಾಕಾರಂಜಿಯಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಫಲಿತಾಂಶ ಈ ಕೆಳಗಿನಂತಿದೆ: HPS ವಿಭಾಗ ಪ್ರಥಮ ಸ್ಥಾನ: 1) ನಯನ — ಪ್ರಬಂಧ ಸ್ಪರ್ಧೆ 2) ನೇಹಾ — ಅಭಿನಯ ಗೀತೆ ದ್ವಿತೀಯ ಸ್ಥಾನ 1) ಕೃಪಾ  D N — ಕಂಠಪಾಠ ಕನ್ನಡ ಪ್ರೌಢ ಶಾಲಾ ವಿಭಾಗ  ಪ್ರಥಮ ಸ್ಥಾನ: 1) ದೀಪ್ತಿ  ರೆಡ್ಡಿ T N– ಕನ್ನಡ ಭಾಷಣ 2) ಸಂತೋಷ್ —  ಕ್ವಿಝ್ 3) ಪ್ರಮೋದ್  – ಕ್ವಿಝ್ 4) ದಯಿತ — ಚರ್ಚಾಸ್ಪರ್ಧೆ 5) ಚಂದನ ಕುಮಾರಿ — ಹಿಂದಿ ಭಾಷಣ 6) ಚೈತ್ರ — ಆಂಗ್ಲ ಭಾಷಣ 7) ಚರಣ್ ಕುಮಾರ್ — ಕವನ / ಪದ್ಯ ವಾಚನ ದ್ವಿತೀಯ  ಸ್ಥಾನ: 1) ನವ್ಯ ಶ್ರೀ — ಪ್ರಬಂಧ 2) ಶ್ರಾವಣಿ. S G — ಚಿತ್ರಕಲೆ  ತೃತೀಯ…

Read More

ಬೆಂಗಳೂರು: ಮೆಟ್ರೋ ರೈಲು ಹಳಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ  ನೇರಳೆ ಮಾರ್ಗದ ಕೆಂಗೇರಿ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ. ವಿಜಯಪುರ ಮೂಲದ ಶಾಂತಗೌಡ ಪಾಟೀಲ್ (38) ಆತ್ಮಹತ್ಯೆಗೆ ಶರಣಾದ ವ್ಯಕ್ತಿಯಾಗಿದ್ದು, ಶುಕ್ರವಾರ ಬೆಳಗ್ಗೆ ಮೆಟ್ರೋ ಬರುತ್ತಿದ್ದಂತೆಯೇ ವ್ಯಕ್ತಿ ಟ್ರ್ಯಾಕ್‌ ಗೆ ಹಾರಿದ್ದು, ಪರಿಣಾಮ ಮೆಟ್ರೋ ಹರಿದು ವ್ಯಕ್ತಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಘಟನಾ ಸ್ಥಳಕ್ಕೆ ಕೆಂಗೇರಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮೆಟ್ರೋ ಸಿಬ್ಬಂದಿ ಘಟನೆಯ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಮತ್ತು ವೈದ್ಯಕೀಯ ಸಿಬ್ಬಂದಿ ಟ್ರ‍್ಯಾಕ್ ಮೇಲಿದ್ದ ಶವವನ್ನು ತೆರವುಗೊಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

Read More

ತುಮಕೂರು: ಶಿಕ್ಷಣದೊಂದಿಗೆ ಜೀವನ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಮೂಲಕವೇ ವಿದ್ಯಾರ್ಥಿಗಳು ಭವಿಷ್ಯವನ್ನು ಸುಂದರಗೊಳಿಸಬಹುದು ಎಂದು ತುಮಕೂರು ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದ ಅಧ್ಯಕ್ಷರಾದ ಡಾ.ಸುರೇಶ್ ಬಿ.ಕೆ. ಹೇಳಿದರು. ನಗರದ ಶ್ರೀ ಸಿದ್ದಾರ್ಥ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ಎಂ.ಕಾಂ. ವತಿಯಿಂದ ಗುರುವಾರ ಆಯೋಜಿಸಿದ್ದ 13ನೇ ಪದವಿ ಪ್ರಧಾನ ಸಮಾರಂಭದಲ್ಲಿ ಅತಿಥಿಗಳಾಗಿ ಭಾಗವಹಿಸಿ 42 ಮಂದಿ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಿದ ನಂತರ ಮಾತನಾಡಿದರು. “ಪದವಿ ಪಡೆದುಕೊಂಡ ನಂತರ ಹೊರಜಗತ್ತಿಗೆ ಕಾಲಿಡುವ ಈ ಹಂತದಲ್ಲಿ ಯಾವ ಕಾಲೇಜಿನಲ್ಲಿ ಕಲಿತಿದ್ದೀರಿ ಎಂಬುದರ ಜೊತೆಗೆ ಯಾವ ಮೌಲ್ಯಗಳನ್ನು ಜೀವನದಲ್ಲಿ ಅನುಸರಿಸುತ್ತೀರಿ ಎಂಬುದು ಅತ್ಯಂತ ಮಹತ್ವದ್ದಾಗಿದೆ. ಸಮಾಜದಲ್ಲಿ ಮಾದರಿ ಜೀವನ ರೂಪಿಸಿಕೊಳ್ಳುತ್ತಾ ಕಾರ್ಯನಿರ್ವಹಿಸಬೇಕು” ಎಂದರು. ಸಾಹೇ ವಿಶ್ವವಿದ್ಯಾನಿಲಯದ ಕುಲಸಚಿವರಾದ ಅಶೋಕ್ ಮೆಹ್ತಾ ಮಾತನಾಡಿ, “13ನೇ ಪದವಿ ಪ್ರಧಾನ ದಿನವನ್ನು ಆಚರಿಸುತ್ತಿರುವುದು ಶ್ಲಾಘನೀಯ. ಇಂದಿನ ಸಮಾಜಕ್ಕೆ ಹೊಂದಿಕೊಂಡು ಬದುಕುವುದನ್ನು ಕಲಿಯಬೇಕು. ಹಿಂದೆ ನಡೆದದ್ದಲ್ಲ, ಮುಂದೆ ನಡೆಯಲಿರುವುದನ್ನಲ್ಲ– ಪ್ರಸ್ತುತತೆಗೆ ಹೆಚ್ಚಿನ ಪ್ರಾಧಾನ್ಯ ನೀಡಬೇಕು” ಎಂದು ಸಲಹೆ ನೀಡಿದರು. ಈ ವೇಳೆ ಕಾಲೇಜಿನ…

Read More

ಚೇಳೂರು: ಗ್ರಾಮದ ಮಹಾಲಕ್ಷ್ಮಿ ಬ್ಯಾಂಕರ್ ಮತ್ತು ಜ್ಯುವೆಲ್ಲರ್ಸ್ ಗೆ ಕಳ್ಳರು ನುಗ್ಗಿ ಕಳ್ಳತನಕ್ಕೆ ಯತ್ನಿಸಿರುವ ಘಟನೆ ಡಿಸೆಂಬರ್ 4ರಂದು ಬೆಳಗ್ಗೆ 9:30ರ ಸುಮಾರಿಗೆ ನಡೆದಿದೆ. ಮಾಲಿಕ ಸುನೀಲ್ ಅಂಗಡಿಯ ಬಾಗಿಲು ತೆರೆದು ಪೂಜೆ ಮಾಡಿ, ವ್ಯಾಪಾರ ಆರಂಭಕ್ಕೆ ಸಿದ್ಧತೆ ನಡೆಸುತ್ತಿದ್ದರು. ಈ ವೇಳೆ ಏಕಾಏಕಿ ನಾಲ್ವರು ಅಂಗಡಿಗೆ ನುಗ್ಗಿ ಚಾಕು ತೋರಿಸಿದ್ದು, ನಂತರ ಹಲ್ಲೆ ನಡೆಸಿ, ಕೈಕಾಲು ಕಟ್ಟಿ ಹಾಕಲು ಯತ್ನಿಸಿದ್ದಾರೆ. ಕಳ್ಳರ ಪೈಕಿ ಒಬ್ಬಾತ ಅಂಗಡಿಯಿಂದ ಹೊರಗೆ ನಿಂತು ಯಾರಾದರೂ ಬರುತ್ತಾರೆಯೇ ಎಂದು ನೋಡುತ್ತಿದ್ದ. ಕಳ್ಳರ ನಡೆ ಕಂಡು ಭಯಭೀತರಾದ ಮಾಲಿಕ ಸುನೀಲ್ ಜೋರಾಗಿ ಕಿರುಚಿಕೊಂಡಿದ್ದು ಈ ವೇಳೆ ಅಂಗಡಿ ಸುತ್ತಮುತ್ತಲಿದ್ದ ಜನರು ಓಡಿ ಬಂದಿದ್ದಾರೆ. ಈ ವೇಳೆ ಕಳ್ಳರು ತಾವು ಬಂದಿದ್ದ ಕಾರಿನಲ್ಲಿ ಸ್ಥಳದಿಂದ ಪರಾರಿಯಾಗಿದ್ದಾರೆ. ಪೊಲೀಸರ ಭಯವೇ ಇಲ್ಲದೇ ಕಳ್ಳರು ಹಾಡಹಗಲೇ ಈ ಕೃತ್ಯ ನಡೆಸಿರುವುದು ಸಾರ್ವಜನಿಕರನ್ನು ಬೆಚ್ಚಿಬೀಳಿಸಿದೆ. ನಗರ ಪ್ರದೇಶದಲ್ಲೇ ಅದೂ, ಹಗಲು ಹೊತ್ತಿನಲ್ಲೇ ಈ ರೀತಿಯಾಗಿ ಕಳ್ಳರು ಕಳ್ಳತನಕ್ಕಿಳಿದರೆ, ಇನ್ನೂ ಹಳ್ಳಿಗಳ ಪರಿಸ್ಥಿತಿ ಏನು…

Read More

ಉನ್ನತ ಶಿಕ್ಷಣ ಇಲಾಖೆಯ ಆದೇಶ ಹಾಗೂ ಮಾರ್ಗಸೂಚಿಗಳ ಪ್ರಕಾರ GFGC ತುಮಕೂರು (ಲೀಡ್ ಕಾಲೇಜು) ಉದ್ಯೋಗ ಮೇಳವನ್ನು ಆಯೋಜಿಸಿದೆ.ತುಮಕೂರು ಜಿಲ್ಲೆಯ ಎಲ್ಲಾ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಪ್ರಾಂಶುಪಾಲರು, KJK ಸಂಯೋಜಕರು ಹಾಗೂ ಪ್ಲೇಸ್ಮೆಂಟ್ ಸೆಲ್ ಸಂಯೋಜಕರು ಈ ಮಾಹಿತಿಯನ್ನು ಸಂಬಂಧಿತ ವಿದ್ಯಾರ್ಥಿಗಳಿಗೆ ತಿಳಿಸಲು ವಿನಂತಿಸಲಾಗಿದೆ. 2022–2023 ಮತ್ತು 2023–-2024 ರಲ್ಲಿ ಕಲಿಕೆಯ ಜೊತೆ ಕೌಶಲ್ಯ (KJK) ಕೋರ್ಸ್ ಮುಗಿದಿರುವ ವಿದ್ಯಾರ್ಥಿಗಳಿಗೆ ನೋಂದಣಿ ಲಿಂಕ್ ಕಳುಹಿಸಬೇಕು. ಗಮನಕ್ಕೆ: ಅರ್ಹ ವಿದ್ಯಾರ್ಥಿಗಳಿಗೆ ತಕ್ಷಣ ಮಾಹಿತಿ ನೀಡಬೇಕು. • ವಿದ್ಯಾರ್ಥಿಗಳು ಲಿಂಕ್ ಮೂಲಕ ಬೇಗನೇ ನೋಂದಣಿ ಮಾಡಿಕೊಳ್ಳುವಂತೆ ಪ್ರೋತ್ಸಾಹಿಸಬೇಕು. • ಈ ಮಾಹಿತಿಯನ್ನು ಕಾಲೇಜಿನ ಸೂಚನಾ ಫಲಕ, ಕಾಲೇಜಿನ ವಾಟ್ಸಪ್ ಗುಂಪು, KJK ವಿದ್ಯಾರ್ಥಿ ಗುಂಪು ಮತ್ತು ಟೆಲಿಗ್ರಾಂ ಗುಂಪುಗಳಲ್ಲಿ ಪ್ರಕಟಿಸಬೇಕು. • ಉದ್ಯೋಗ ಮೇಳಕ್ಕೆ ಬೇಕಾದ ದಾಖಲೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಬೇಕು. • KJK ವಿದ್ಯಾರ್ಥಿಗಳ ಹಾಜರಾತಿ ಮತ್ತು ಭಾಗವಹಿಸುವಿಕೆ ಇಲಾಖೆ ಮಾರ್ಗಸೂಚಿಗಳ ಪ್ರಕಾರ ಗಮನಿಸಲಾಗುತ್ತದೆ. • ಯಾವುದೇ ಮಾಹಿತಿ /…

Read More

ಬೀದರ್:  ಔರಾದ್ ರಾಷ್ಟ್ರೀಯ ಹೆದ್ದಾರಿ ರಸ್ತೆಯ ಬೇರಾಳ ಬಿಳಿ ಭಾಲ್ಕಿ ಸಾರಿಗೆ ಘಟಕದ ಬಸ್ ಹಾಳಾಗಿದ್ದು,  ಇದರಿಂದಾಗಿ ವಿದ್ಯಾರ್ಥಿಗಳು ಬಸ್ ಇಲ್ಲದೇ ಪರದಾಡಿದ ಘಟನೆ ಬುಧವಾರ ನಡೆದಿದೆ., ಭಾಲ್ಕಿ ಘಟಕದಿಂದ ಔರಾದ್ ತಾಲೂಕು ಘಟಕದ ಸಾರಿಗೆ ಬಸ್ಸು ನಿನ್ನೆ ಹಾಳಾಗಿದ್ದು, ಇಂದು ಮುಂಜಾನೆ ಕೂಡ ಬಂದಿಲ್ಲ, ಹಾಗಾಗಿ ವಿದ್ಯಾರ್ಥಿಗಳು ಪರದಾಡಿದ್ದಾರೆ. ಶಾಲಾ ಕಾಲೇಜಿಗೆ  ಸರಿಯಾದ ಸಮಯಕ್ಕೆ  ತಲುಪಲು ಸಾಧ್ಯವಾಗದೇ ವಿದ್ಯಾರ್ಥಿಗಳು ತೊಂದರೆಗೀಡಾದರು. ನಿನ್ನೆ ಹಾಳಾದ ಬಸ್ಸು ಇಂದು ಬೆಳಿಗ್ಗೆ ಕೂಡ ಬಸ್ ಬಂದಿಲ್ಲ. ಸಾರಿಗೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ವಿದ್ಯಾರ್ಥಿಗಳು ತುಂಬಾ ತೊಂದರೆ ಅನುಭವಿಸಿದ್ದಾರೆ ಎಂದು ತೀವ್ರ ಆಕ್ರೋಶ ವ್ಯಕ್ತವಾಯ್ತು. ಭಾಲ್ಕಿ ಘಟಕದಿಂದ ಔರಾದ್ ಘಟಕ ತಲುಪಲು ಸುಮಾರು ಒಂದು ತಾಸು ಬೇಕು. ಆದರೆ ಬಸ್ ಗಳ ಕೊರತೆಯಿಂದ ವಿದ್ಯಾರ್ಥಿಗಳು ಗಂಟೆಗಟ್ಟಲೆ ತಡವಾಗಿ ಶಾಲಾ—ಕಾಲೇಜುಗಳಿಗೆ ತಲುಪುತ್ತಿದ್ದಾರೆ. ಇದರಿಂದಾಗಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೀವ್ರ ತೊಂದರೆಯಾಗುತ್ತಿದೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡರು. ತಕ್ಷಣವೇ ಬಸ್ ವ್ಯವಸ್ಥೆಯನ್ನು ಸರಿಪಡಿಸಬೇಕು. ಈ ಸಂಬಂಧ ಕೆಎಸ್ ಆರ್ ಟಿಸಿ ಹಿರಿಯ…

Read More