Author: admin

ಕೊರಟಗೆರೆ: ತಾಲೂಕಿನ ಹುಲಿಕುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗುಡಿಸಲಿನಲ್ಲಿ ವಾಸವಾಗಿದ್ದ ಸುಮಾರು 20 ಅಲೆಮಾರಿ ಕುಟುಂಬಗಳಿಗೆ ಅಗತ್ಯವಿರುವ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ವಿದ್ಯಾಕುಮಾರಿ ತಿಳಿಸಿದರು. ಹುಲಿಕುಂಟೆ ಸಮೀಪ ಹಂದಿ ಜೋಗರು ವಾಸವಿರುವ ಸ್ಥಳಕ್ಕೆ ಭೇಟಿ ನೀಡಿ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಹಂದಿ ಜೋಗರಿಗೆ ಈಗಾಗಲೇ ಸುಸಜ್ಜಿತ ರಸ್ತೆ ನಿರ್ಮಿಸಲಾಗಿದ್ದು ನಿವೇಶನಗಳನ್ನ ಅಭಿವೃದ್ಧಿಪಡಿಸಿ ಹಕ್ಕು ಪತ್ರಗಳನ್ನು ವಿತರಿಸಲು ಕ್ರಮ ವಹಿಸಲಾಗಿದೆ. ಕುಡಿಯುವ ನೀರಿನ ಸೌಲಭ್ಯಕ್ಕಾಗಿ ಬೋರ್ವೆಲ್ ಕೊರೆಸಲಾಗಿದೆ ಅಲ್ಲದೆ ರಾಜೀವ್ ಗಾಂಧಿ ವಸತಿ ನಿಗಮದಿಂದ ಮನೆ ನಿರ್ಮಿಸಿಕೊಡಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು. ಅಲೆಮಾರಿ ನಿವಾಸಿಗಳ ಮನವಿಯನ್ನು ಆಲಿಸಿದ ಅವರು ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಲು ಮುರಾರ್ಜಿ ಅಥವಾ ಹಾಸ್ಟೆಲ್ ಗಳಿಗೆ ತಮ್ಮ ಮಕ್ಕಳನ್ನು ಸೇರಿಸಿ ಶಿಕ್ಷಣದ ಕಡೆ ಹೆಚ್ಚು ಒತ್ತು ನೀಡಿ, ಮಕ್ಕಳು ವಿದ್ಯಾವಂತರಾದರೆ ನಿಮ್ಮ ಜೀವನ ಮಟ್ಟ ಸುಧಾರಣೆಯಾಗುತ್ತದೆ ಎಂದ ಅವರು ಆರೋಗ್ಯ ಕಾಪಾಡಿಕೊಂಡು…

Read More

ಹಣ ಕೊಡಲಿಲ್ಲ ಅಂತ ರಾಡ್ ನಿಂದ ಹೊಡೆದು ಗೆಳೆಯನನ್ನು ಕೊಂದು ಮೃತದೇಹವನ್ನು ಪೊಲೀಸ್ ಠಾಣೆಗೆ ತಂದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಹಿಮದಗುಂಡಿಯಲ್ಲಿ ಈ ಘಟನೆ ನಡೆದಿದ್ದು, ಮಹೇಶಪ್ಪ ಎಂಬಾತನನ್ನು ಕೊಲೆ ಮಾಡಿರುವ ರಾಜಶೇಖರ್ ಮೃತದೇಹವನ್ನು ಕಾರಿನಲ್ಲಿ ತಂದು ರಾಮಮೂರ್ತಿನಗರ ಪೊಲೀಸ್ ಠಾಣೆ ಪೊಲೀಸರಿಗೆ ಶರಣಾಗಿದ್ದಾನೆ. ಮಹೇಶಪ್ಪ ಸುಮಾರು 1.5 ಕೋಟಿ ರೂ. ಹಣ ಪಡೆದಿದ್ದು, ಹಿಂತಿರುಗಿಸಿರಲಿಲ್ಲ. ಆದ್ದರಿಂದ ರಾಜಶೇಖರ್ ಸೋಮವಾರ ರಾತ್ರಿ ಮಹೇಶಪ್ಪನನ್ನು ಕಾರಿನಲ್ಲಿ ಕರೆದುಕೊಂಡು ಬಂದು ಹಿಮದಗುಂಡಿ ಬಳಿ ಮಾತನಾಡಿದ್ದಾರೆ. ಕಾರಿನಲ್ಲಿ ಕುಳಿತುಕೊಂಡು ಮಾತನಾಡುತ್ತಿದ್ದಾಗ ರಾಜಶೇಖರ್ ಹಣ ಹಿಂತಿರುಗಿಸುವಂತೆ ಕೇಳಿದ್ದಾನೆ. ಆದರೆ ರಾಜಶೇಖರ್ ನಿರಾಕರಿಸಿದ್ದರಿಂದ ಸಿಟ್ಟಿನಿಂದ ಮಹೇಶಪ್ಪನ ತಲೆಗೆ ರಾಡ್ ನಿಂದ ಹೊಡೆದಿದ್ದಾರೆ. ರಾಡ್ ನಿಂದ ಹೊಡೆದ ನಂತರ ಇಬ್ಬರು ಕಾರಿನಲ್ಲಿಯೇ ಮಲಗಿದ್ದಾರೆ. ಬೆಳಿಗ್ಗೆ ಎದ್ದಾಗ ಮಹೇಶಪ್ಪ ಮೃತಪಟ್ಟಿರುವುದು ತಿಳಿದು ರಾಜಶೇಖರ್ ಆಘಾತಕ್ಕೆ ಒಳಗಾಗಿದ್ದಾನೆ. ಮುಂದೇನು ಮಾಡಬೇಕು ಅಂತ ಗೊತ್ತಾಗದೇ ನೇರ ಪೊಲೀಸ್ ಠಾಣೆಗೆ ಕಾರಿನಲ್ಲಿ ಶವದೊಂದಿಗೆ ಬಂದು ಶರಣಾಗಿದ್ದಾನೆ. ಮಹೇಶಪ್ಪ ಈ ಹಿಂದೆ ಕೂಡ ಸಾಲ ಕೊಡಿಸ್ತೀನಿ…

Read More

ತಾಯಿ ಜೊತೆ ಸ್ಕೂಟರ್ ನಲ್ಲಿ ಹೋಗುತ್ತಿದ್ದ 15 ವರ್ಷದ ಬಾಲಕಿ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಮೃತಪಟ್ಟ ಘಟನೆ ಬೆಂಗಳೂರಿನಲ್ಲಿ ಮಂಗಳವಾರ ಸಂಭವಿಸಿದೆ. ಲಾವ್ಯಶ್ರೀ (15) ಮೃತಪಟ್ಟ ಬಾಲಕಿ. ಸೋದರ ಯಾಶ್ವಿನ್ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಟಿಸಿ ಪಾಳ್ಯದಿಂದ ಭಟ್ಟರಹಳ್ಳಿ ಮಾರ್ಗದಲ್ಲಿ ಸ್ಕೂಟರ್ ನಲ್ಲಿ ತಾಯಿ ಪ್ರಿಯದರ್ಶಿನಿ ಮತ್ತು ಮಕ್ಕಳು ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಭಟ್ಟರಹಳ್ಳಿ ಸಿಗ್ನಲ್ ಬಳಿ ಸ್ಕೀಡ್ ಆಗಿ ಸ್ಕೂಟರ್ ಕೆಳಗೆ ಬಿದ್ದಿದ್ದು, ಪ್ರಿಯದರ್ಶನಿ ಮತ್ತು ಯಾಶ್ವಿನ್ ಎಡಗಡೆ ಬಿದ್ದು ಗಾಯಗೊಂಡರೆ, ಬಲಗಡೆ ಬಿದ್ದ ಲಾವ್ಯಶ್ರೀ ಮೇಲೆ ಬಿಎಂಟಿಸಿ ಬಸ್ ಹರಿದಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಕೆಆರ್ ಪುರಂ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Reporting by Antony begur ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಪತ್ನಿಯನ್ನು ಮಚ್ಚಿನಿಂದ ಕೊಚ್ಚಿ ಕೊಂದು ಪತಿ ಪರಾರಿಯಾಗಿರುವ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲದಲ್ಲಿ ನಡೆದಿದೆ. ನೆಲಮಂಗಲ ತಾಲೂಕಿನ ಭೂಸಂದ್ರ ಗ್ರಾಮದ ಗಂಡನ ಮನೆಯಲ್ಲಿ ವಾಸವಾಗಿದ್ದ ಶ್ರುತಿ (24) ಕೊಲೆಯಾದ ಗೃಹಿಣಿ. ತರಬನಹಳ್ಳಿ ನಿವಾಸಿಯಾಗಿರುವ ಶೃತಿಯನ್ನು ಪತಿ ಕೃಷ್ಣಮೂರ್ತಿ ಕೊಲೆಗೈದಿದ್ದಾನೆ. ಮದುವೆಯಾಗಿ ಒಂದೂವರೆ ವರ್ಷದ ಹಿಂದೆಯಷ್ಟೇ ಇಬ್ಬರ ಮದುವೆ ಆಗಿತ್ತು. ತರಬನಹಳ್ಳಿ ನಿವಾಸಿಯಗಿರುವ ಶೃತಿಯನ್ನು ಪತಿ ಕೃಷ್ಣಮೂರ್ತಿ ಕೊಲೆಗೈದಿದ್ದಾನೆ. ಬಳಿಕ ಭೂಸಂದ್ರ ಗ್ರಾಮದ ತನ್ನ ನಿವಾಸದಿಂದ ನಾಪತ್ತೆಯಾಗಿದ್ದಾನೆ. ಸದ್ಯ ಮೃತ ಶೃತಿ ಕುಟುಂಬದವರು ವರದಕ್ಷಿಣೆ ಕಿರುಕುಳ ಆರೋಪ ಮಾಡುತ್ತಿದ್ದಾರೆ. ಮೃತ ಶೃತಿ ದೇಹದ ತುಂಬಾ ಗಂಭೀರವಾದ ಗಾಯದ ಗುರುತುಗಳು ಪತ್ತೆಯಾಗಿವೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Reporting by Antony begur ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಸೋದರತ್ತೆ ಹೃದಯಾಘಾತದಿಂದ ಸಾವಿನ ಸುದ್ದಿ ಕೇಳಿ ಅಳಿಯ ಹೃದಯಾಘಾತದಿಂದ ಮೃತಪಟ್ಟ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಲಿಂಗನಮಕ್ಕಿಯಲ್ಲಿ ಸಂಭವಿಸಿದೆ. ಸೋದರತ್ತೆ ಲಕ್ಷಮ್ಮ (58) ಮತ್ತು ಅಳಿಯ ಗುಲ್ಫತ್ ಸಿಂಗ್ (45) ಮೃತಪಟ್ಟ ದುರ್ದೈವಿಗಳು. ಬೆಂಗಳೂರಿನ ಸಂಬಂಧಿಕರ ಮನೆಗೆ ಹೊರಟ್ಟಿದ್ದ ಲಕ್ಷ್ಮಮ್ಮ ಹೊರಟ್ಟಿದ್ದರು. ದಾರಿಮಧ್ಯೆದಲ್ಲಿ ಬಸ್ ನಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಬಸ್ ನಿರ್ವಾಹಕ ಲಕ್ಷ್ಮಮ್ಮ ಸಾವಿನ ಸುದ್ದಿಯನ್ನು ಸಂಬಂಧಿಕರಿಗೆ ಅವರಿಗೆ ಕರೆ ಮಾಡಿ ತಿಳಿಸಿದ್ದಾರೆ. ನಡೆದು ಬರುತ್ತಿದ್ದ ಗುಲ್ಫತ್ ಸಿಂಗ್ ಗೆ ಸಂಬಂಧಿಕರು ಕರೆ ಮಾಡಿ ವಿಷಯ ತಿಳಿಸಿದ್ದು, ವಿಷಯ ಕೇಳಿದ ಸ್ವಲ್ಪ ಹೊತ್ತಿನಲ್ಲೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Reporting by Antony begur ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ನಿನ್ನೆ, ಅಂದರೆ ಸೋಮವಾರ ಬೆಂಗಳೂರು ನಗರ ನವೆಂಬರ್ ೨೦೧೨ರಿಂದ ಈವರೆಗಿನ ಅತ್ಯಂತ ತಣ್ಣನೆಯ ದಿನವಾಗಿತ್ತಂತೆ. ಸೋಮವಾರದ ತಾಪಮಾನ ೧೩.೯ ಡಿಗ್ರಿ ಸೆಲ್ಸಿಯಸ್‌ ಗೆ ಇಳಿದಿತ್ತು, ಎನ್ನುತ್ತದೆ ಹವಾಮಾನ ಇಲಾಖೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದಾಖಲಿಸಲಾಗಿರುವ ಕನಿಷ್ಠ ತಾಪಮಾನ ೧೪.೭ ಡಿಗ್ರಿ ಸೆಲ್ಸಿಯಸ್ ಆಗಿದ್ದರೆ, ಹೆಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ದಾಖಲಾಗಿರುವ ಕನಿಷ್ಠ ತಾಪಮಾನ ೧೨.೫ ಡಿಗ್ರಿ ಸೆಲ್ಸಿಯಸ್. ಹವಾಮಾನ ಇಲಾಖೆಯ ಅಧಿಕಾರಿಗಳ ಪ್ರಕಾರ, ಸೋಮವಾರ ‘ನಾರ್ಮಲ್’ಗಿಂತ ತಾಪಮಾನ ಕೆಳಗಿಳಿತ್ತು. “ಬೆಂಗಳೂರಿನಲ್ಲಿ ಸಾಮಾನ್ಯವಾಗಿ ನವೆಂಬರ್ ತಿಂಗಳಲ್ಲಿ ಸಾಮಾನ್ಯ ತಾಪಮಾನ ೧೮ ರಿಂದ ೨೦ ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಆದರೆ, ಸೋಮವಾರದಂದು ಇದು ಸುಮಾರು ೫.೧ ಡಿಗ್ರಿ ಸೆಲ್ಸಿಯಸ್‌ ನಷ್ಟು ಕಡಿಮೆಯಾಯಿತ್ತು. ಈ ಮಟ್ಟದ ತಾಪಮಾನ ಬೆಂಗಳೂರು ನಗರದಲ್ಲಿ ನವೆಂಬರ್ ೧೯, ೨೦೧೨ರಲ್ಲಿ ದಾಖಲಾಗಿತ್ತು,” ಎಂದಿದ್ದಾರೆ. ಇದು ದಕ್ಷಿಣ ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ಸಮುದ್ರದ ಒತ್ತಡದಿಂದಲೂ ಆಗಿದೆ. “ಬಂಗಾಳ ಕೊಲ್ಲಿಯಲ್ಲಿನ ಒತ್ತಡ ತಮಿಳುನಾಡಿನ ಕರಾವಳಿಯ ಕಡೆಗೆ ಚಲಿಸುತ್ತಿದೆ. ಆ ಪಥದಲ್ಲಿ ತೇವಾಂಶವನ್ನೆಲ್ಲಾ ಸೆಳೆದುಕೊಳ್ಳುತ್ತದೆ. ಇದರಿಂದಾಗಿ…

Read More

ಸಿಎಂ ಬಸವರಾಜ ಬೊಮ್ಮಾಯಿ ಎಸ್ಕಾರ್ಟ್ ವಾಹನ ಪಲ್ಟಿಯಾಗಿ ಸಿಪಿಐ ಸೇರಿ ಹಲವರು ಗಾಯಗೊಂಡಿರುವ ಘಟನೆ ಚಿತ್ರದುರ್ಗ ಜಿಲ್ಲೆ ಹಿರಿಯೂರಿನಲ್ಲಿ ನಡೆದಿದೆ. ಹಿರಿಯೂರಿನ ವಾಣಿವಿಲಾಸ ಸಾಗರ ಜಲಾಶಯಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಬಾಗಿನ ಅರ್ಪಿಸಿ ಬರುವ ವೇಳೆ ಹಿರಿಯೂರಿನ ತಾಲ್ಲೂಕು ಕಚೇರಿ ಬಳಿ ಎಸ್ಕಾರ್ಟ್ ವಾಹನ ಪಲ್ಟಿಯಾಗಿದೆ. ಎಸ್ಕಾರ್ಟ್ ನಲ್ಲಿದ್ದ ಸಿಇಎನ್ ಸಿಪಿಐ ರಮಾಕಾಂತ್ ಇದ್ದ ಸೇರಿ ಹಲವರಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. Reporting by Antony begur ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ವೋಟರ್ ಐಡಿ ಪರಿಷ್ಕರಣೆಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿಯ 15 ಆರ್ ಓಗಳಿಗೆ ಹಲಸೂರು ಗೇಟ್ ಠಾಣಾ ಪೊಲೀಸರು ನೋಟಿಸ್ ನೀಡಿದ್ದಾರೆ. ಪ್ರಕರಣ ಸಂಬಂಧ ವೈಯಕ್ತಿಕ ಮಾಹಿತಿ ಸಂಗ್ರಹಿಸಿದ ವಿಚಾರವನ್ನ ಬಿಬಿಎಂಪಿ ಆರ್ ಓಗಳು ತಿಳಿದಿದ್ದರು. ಈ ಸಂಬಂಧ ಹಲಸೂರು ಗೇಟ್ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ಇದೀಗ 15 ಆರ್.ಓಗಳಿಗೆ ಪೊಲೀಸರು ನೋಟಿಸ್ ನೀಡಿದ್ದು, ಹಂತ, ಹಂತವಾಗಿ ಆರ್ ಓಗಳ ವಿಚಾರಣೆ ನಡೆಸಲಿದ್ದಾರೆ. ಪ್ರಕರಣ ಸಂಬಂದ ನಿನ್ನೆಯಷ್ಟೆ ಬಿಬಿಎಂಪಿ ಮೂವರು ಆರ್ ಒಗಳನ್ನು ಅಮಾನತು ಮಾಡಿದೆ. Reporting by Antony begur ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಸ್ಟಾರ್ ಆಟಗಾರ ಲಿಯೊನೆಲ್ ಮೆಸ್ಸಿ ಗೋಲಿನ ಖಾತೆ ತೆರೆದರೂ ಮಾಜಿ ಚಾಂಪಿಯನ್ ಅರ್ಜೆಂಟೀನಾ ತಂಡ 2-1 ಗೋಲುಗಳಿಂದ ಸೌದಿ ಅರೆಬಿಯಾ ವಿರುದ್ಧದ ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯ ಆರಂಭಿಕ ಪಂದ್ಯದಲ್ಲೇ ಆಘಾತ ಅನುಭವಿಸಿದೆ. ಮಂಗಳವಾರ ನಡೆದ ಸಿ ಗುಂಪಿನ ಪಂದ್ಯದಲ್ಲಿ ಅರ್ಜೆಂಟೀನಾ ತಂಡ 1-2 ಗೋಲುಗಳಿಂದ ಸೌದಿ ಅರೆಬಿಯಾ ವಿರುದ್ಧ ಸೋಲುಂಡಿತು. ಈ ಮೂಲಕ ಟೂರ್ನಿಯ ಆರಂಭಿಕ ಹಂತದಲ್ಲೇ ಅಚ್ಚರಿ ಫಲಿತಾಂಶ ಹೊರಬಿದ್ದಿದೆ. ಅರ್ಜೆಂಟೀನಾ ಪರ ಲಿಯೊನೆಲ್ ಮೆಸ್ಸಿ (10ನೇ ನಿಮಿಷ) ಪೆನಾಲ್ಟಿಯಲ್ಲಿ ಗೋಲಿನ ಖಾತೆ ತೆರೆದು ಶುಭಾರಂಭ ಮಾಡಿದರು. ಆದರೆ ಸೌದಿ ಅರೆಬಿಯಾ ಎರಡನೇ ಹಂತದಲ್ಲಿ ತಿರುಗಿಬಿದ್ದು ಎರಡು ಗೋಲು ಬಾರಿಸಿ ಮುನ್ನಡೆ ಸಾಧಿಸಿ ಅಚ್ಚರಿ ಮೂಡಿಸಿತು. ಸೌದಿ ಅರೆಬಿಯಾ ಪರ ಸಲಾಹ್ ಅಲ್ಶೆಹರಿ (48ನೇ ನಿಮಿಷ) ಮತ್ತು ಸಲೀಂ ಅಲ್ದಾಸರಿ (53ನೇ ನಿಮಿಷ) ಗೋಲು ಸಿಡಿಸಿದರು. ಸೌದಿ ಅರೆಬಿಯಾಗೆ ಹೋಲಿಸಿದರೆ ಅರ್ಜೆಂಟೀನಾ ಪಂದ್ಯದ ಮೇಲೆ ಪೂರ್ಣ ಹಿಡಿತ ಸಾಧಿಸಿತ್ತು. ಅರ್ಜೆಂಟೀನಾ 14 ಬಾರಿ ಗುರಿ ಇಟ್ಟರೆ, ಸೌದಿ ಕೇವಲ…

Read More

ಆರಂಭಿಕ ಡೆವೊನ್ ಕಾನ್ವೆ ಮತ್ತು ಗ್ಲೆನ್ ಫಿಲಿಪ್ಸ್ ಅವರ ಅರ್ಧಶತಕಗಳ ನೆರವಿನಿಂದ ನ್ಯೂಜಿಲೆಂಡ್ ತಂಡ ಮೂರನೇ ಟಿ-20 ಪಂದ್ಯದಲ್ಲಿ ಭಾರತ ತಂಡಕ್ಕೆ 161 ರನ್ ಗುರಿ ಒಡ್ಡಿದೆ. ನೇಪಿಯಾರ್ ಮೈದಾನದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಲು ನಿರ್ಧರಿಸಿದ ನ್ಯೂಜಿಲೆಂಡ್ ತಂಡ ಮೊಹಮದ್ ಸಿರಾಜ್ ಮತ್ತು ಅರ್ಷದೀಪ್ ಸಿಂಗ್ ಅವರ ಮಾರಕ ದಾಳಿಗೆ ತತ್ತರಿಸಿ 19.4 ಓವರರ್ ಗಳಲ್ಲಿ 160 ರನ್ ಗೆ ಆಲೌಟಾಗಿದೆ. ನ್ಯೂಜಿಲೆಂಡ್ ತಂಡ ಆರಂಭದಲ್ಲೇ ಫಿನ್ ಆಲೆನ್ (3) ಮತ್ತು ನಂತರ ಬಂದ ಮಾರ್ಕ್ ಚಾಂಪ್ ಮನ್ (12) ಕಳೆದುಕೊಂಡು ಆರಂಭಿಕ ಆಘಾತಕ್ಕೆ ಒಳಗಾಗಿತ್ತು. ಡೆವೊನ್ ಕಾನ್ವೆ ಮತ್ತು ಗ್ಲೆನ್ ಫಿಲಿಪ್ಸ್ ಮೂರನೇ ವಿಕೆಟ್ ಗೆ 74 ರನ್ ಜೊತೆಯಾಟದ ಮೂಲಕ ತಂಡವನ್ನು ಆಧರಿಸಿದರು. ಡೆವೊನ್ ಕಾನ್ವೆ 49 ಎಸೆತಗಳಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡ 59 ರನ್ ಸಿಡಿಸಿ ಔಟಾದರೆ, ಫಿಲಿಪ್ಸ್ 33 ಎಸೆತಗಳಲ್ಲಿ 5 ಬೌಂಡರಿ ಮತ್ತು…

Read More