Author: admin

ಮಕ್ಕಳನ್ನು ನೋಡಲು ಬಿಡಲಿಲ್ಲ ಅಂತ ಮಡದಿ ಮಕ್ಕಳನ್ನೂ ಸೇರಿಸಿ ಮನೆಗೆ ಪಾಪಿ ಪತಿ ಬೆಂಕಿ ಹಚ್ಚಿದ ಘಟನೆ ಹಾಸನ ತಾಲ್ಲೂಕಿನ ದೊಡ್ಡಬೀಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ಗೀತಾ, ಚಿರಂತನ್ (7), ನಂದನ್ (5) ಗಾಯಗೊಂಡಿದ್ದು ಹಾಸನದ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮನೆಯೊಳಗಿದ್ದ ಪೀಠೋಪಕರಣಗಳು ಭಸ್ಮವಾಗಿವೆ. ತಾಯಿ-ಮಕ್ಕಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜಮೀನು ವಿಚಾರಕ್ಕೆ ಪತಿ ಅಂಕನಹಳ್ಳಿಯ ರಂಗಸ್ವಾಮಿ ಹಾಗೂ ಗೀತಾಳ ನಡುವೆ ಜಗಳವಾಗಿತ್ತು. ಈ ಸಂಬಂಧ ಗೊರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ನಾಲ್ಕು ತಿಂಗಳಿನಿಂದ ಪತಿಯಿಂದ ಪ್ರತ್ಯೇಕವಾಗಿ ಪತ್ನಿ ತನ್ನ ಇಬ್ಬರು ಮಕ್ಕಳೊಂದಿಗೆ ವಾಸವಿದ್ದರು. ರಂಗಸ್ವಾಮಿ ಆಗಾಗ್ಗೆ ಬಂದು ಮಕ್ಕಳನ್ನು ನೋಡಿಕೊಂಡು ಹೋಗುತ್ತಿದ್ದ. ನಿನ್ನೆ ಮಕ್ಕಳನ್ನು ನೋಡಲು ಬಂದಾಗ ಇದಕ್ಕೆ ಪತ್ನಿ ಗೀತಾ ವಿರೋಧ ವ್ಯಕ್ತಪಡಿಸಿದ್ದಾಳೆ. ಇದಕ್ಕೆ ಕೋಪಗೊಂಡ ಆತ ಪೆಟ್ರೋಲ್ ಬಂಕ್‌ನಿಂದ ಪೆಟ್ರೋಲ್ ತಂದು ಮಧ್ಯರಾತ್ರಿ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಸ್ಥಳೀಯರ ನೆರವಿನಿಂದ ಪ್ರಾಣಾಪಾಯದಿಂದ ಗೀತಾ ಹಾಗೂ ಮಕ್ಕಳು ಪಾರಾಗಿದ್ದಾರೆ. ಬೆಂಕಿಯ ಕೆನ್ನಾಲಿಗೆಗೆ…

Read More

ಉತ್ತರ ಕೊರಿಯಾದ ಸರ್ವೋಚ್ಚ ನಾಯಕ ಕಿಮ್ ಜಾಂಗ್ ಉನ್ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ತನ್ನ ಮಗಳೊಂದಿಗೆ ಕಾಣಿಸಿಕೊಂಡಿದ್ದಾರೆ. ರಾಜ್ಯ ಏಜೆನ್ಸಿ ಹಂಚಿಕೊಂಡಿರುವ ಚಿತ್ರಗಳಲ್ಲಿ ಕಿಮ್ ಜಾಂಗ್ ಉನ್ ತಮ್ಮ ಮಗಳೊಂದಿಗೆ ಕೈ ಹಿಡಿದುಕೊಂಡು ಪಕ್ಕದಲ್ಲಿ ನಿಂತಿರುವುದು ಕಾಣಿಸಿಕೊಂಡಿದೆ. ಕೆಲವು ಫೋಟೋಗಳಲ್ಲಿ ಅವರು ಕ್ಷಿಪಣಿ ಉಡಾವಣೆ ಹಾಗೂ ಮಿಲಿಟರಿ ಕಾರ್ಯಗಳನ್ನು ನೋಡುತ್ತಿರುವುದು ಕಂಡುಬಂದಿದೆ. ಕಿಮ್ ಜಾಂಗ್ ಉನ್ ತನ್ನ ವೈಯಕ್ತಿಕ ಜೀವನದ ಬಗ್ಗೆ ಹಲವು ವಿಚಾರಗಳು ಇನ್ನು ಕೂಡಾ ರಹಸ್ಯವಾಗಿಯೇ ಇದೆ. 2013ರಲ್ಲಿ ಮಾಜಿ ಬಾಸ್ಕೆಟ್‌ಬಾಲ್ ತಾರೆ ಡೆನ್ನಿಸ್ ರಾಡ್‌ಮನ್ ಬ್ರಿಟಿಷ್ ದಿನಪತ್ರಿಕೆಯೊಂದರಲ್ಲಿ ಕಿಮ್‌ಗೆ ‘ಜು ಎ’ ಹೆಸರಿನ ಮಗುವಿದೆ ಎಂದು ತಿಳಿಸಿದ್ದರು. ರಾಡ್‌ಮನ್ ಕಿಮ್ ಅವರ ಕುಟುಂಬದೊಂದಿಗೆ ಸಮಯ ಕಳೆದಿದ್ದು, ಕಿಮ್ ಅವರನ್ನು ಒಬ್ಬ ಒಳ್ಳೆಯ ತಂದೆ ಎಂದು ಹೇಳಿದ್ದಾರೆ. ಶುಕ್ರವಾರ ಉತ್ತರ ಕೊರಿಯಾದಲ್ಲಿ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆಯ ವೇಳೆ ಕಿಮ್ ಜಾಂಗ್ ಉನ್ ಅವರೊಂದಿಗೆ ಕಾಣಿಸಿಕೊಂಡ ಬಾಲಕಿಯ ಹೆಸರನ್ನು ರಾಜ್ಯ ಮಾಧ್ಯಮ ಬಹಿರಂಗಪಡಿಸಿಲ್ಲ. ಉತ್ತರ ಕೊರಿಯಾ ನಿನ್ನೆ ಪ್ಯೊಂಗ್ಯಾಂಗ್…

Read More

ಟೇಕಾಫ್ ಆಗುತ್ತಿದ್ದ ವಿಮಾನವೊಂದು ಅಗ್ನಿಶಾಮಕ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟಿರುವ ಘಟನೆ ಪೆರುವಿನ ಜಾರ್ಜ್ ಚಾವೆಜ್‌ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇಯಲ್ಲಿ ಸಂಭವಿಸಿದೆ. ದುರ್ಘಟನೆಯ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದು, ಅಗ್ನಿಶಾಮಕ ದಳದ ಇಬ್ಬರು ಸಿಬ್ಬಂದಿ ಮೃತಪಟ್ಟಿದ್ದಾರೆ. ವೀಡಿಯೋದಲ್ಲಿ ಅಗ್ನಿಶಾಮಕ ಟ್ರಕ್ ರನ್‌ವೇಯಲ್ಲಿ ವೇಗವಾಗಿ ಸಾಗುತ್ತಿರುವುದು ಕಂಡುಬಂದಿದ್ದು, ಎದುರುಗಡೆ ಲ್ಯಾಂಡ್ ಆಗುತ್ತಿದ್ದ ವಿಮಾನವನ್ನು ಕಂಡ ಅಗ್ನಿಶಾಮಕ ಟ್ರಕ್‌ನಲ್ಲಿದ್ದವರು ಅಪಘಾತವನ್ನು ತಪ್ಪಿಸಲು ವಾಹನವನ್ನು ಯೂ ಟರ್ನ್ ಹೊಡೆದಿದ್ದಾರೆ. ಅಪಘಾತವನ್ನು ತಪ್ಪಿಸಲು ಸಾಧ್ಯವಾಗದೇ ವಿಮಾನ ವೇಗವಾಗಿ ಬಂದು ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತಕ್ಕೊಳಗಾದ ಲತಮ್ ಏರ್‌ಲೈನ್ಸ್‌ನ ಎ320 ಏರ್‌ಬಸ್‌ನಲ್ಲಿ 102 ಪ್ರಯಾಣಿಕರಿದ್ದರು. ಡಿಕ್ಕಿ ಸಂಭವಿಸಿದ ಪರಿಣಾಮ ವಿಮಾನದ ರೆಕ್ಕೆ, ಹಿಂಭಾಗಕ್ಕೆ ಬೆಂಕಿ ತಗುಲಿದೆ. ಸದ್ಯ ಎಲ್ಲಾ ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. ಘಟನೆಯ ಬಳಿಕ ವಿಮಾನ ನಿಲ್ದಾಣದ ಎಲ್ಲಾ ಕಾರ್ಯಾಚರಣೆ ಸ್ಥಗಿತಗೊಂಡಿದೆ. ಅಪಘಾತದ ಕಾರಣದ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ವಿಮಾನದಲ್ಲಿ ಪ್ರಯಾಣಿಸುತ್ತಿದ್ದವರಿಗೆ ಎಲ್ಲಾ ರೀತಿಯ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಏರ್‌ಪೋರ್ಟ್…

Read More

ಚಿಲುಮೆ ಕಚೇರಿಯಲ್ಲಿ ಹಣದ ಅವ್ಯವಹಾರ ನಡೆಯುತ್ತಿದೆ. ಬ್ಲ್ಯಾಕ್ ಮನಿ ವೈಟ್ ಮಾಡುವ ದಂಧೆ ನಡೆಯುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗಂಭೀರ ಆರೋಪ ಮಾಡಿದರು. ಈ ಕುರಿತು ಇಂದು ಮಾತನಾಡಿದ ಡಿ.ಕೆ ಶಿವಕುಮಾರ್, ವೂಟರ್ ಐಡಿ ಅಕ್ರಮ ಸಂಬಂಧ ಈವರೆಗೆ ಸರ್ಕಾರ ಯಾರನ್ನೂ ಬಂಧಿಸಿಲ್ಲ. ಈ ಸಂಬಂಧ ಮಧ್ಯಾಹ್ನ 3 ಗಂಟೆಗೆ ಸುದ್ಧಿಗೋಷ್ಠಿ ನಡೆಸುತ್ತೇವೆ ಚಿಲುಮೆ ಕಚೇರಿಯಲ್ಲಿ ಹಣದ ಅವ್ಯವಹಾರ ಕೂಡ ನಡೆದಿದೆ. ನೋಟ್ ಕೌಂಟಿಂಗ್ ಮಷಿನ್ ಕೂಡ ಅದೇ ಕಚೇರಿಯಲ್ಲಿದೆ. ಬ್ಲ್ಯಾಕ್ ಮನಿಯನ್ನ ವೈಟ್ ಮಾಡುವ ದಂಧೆ ನಡೆಯುತ್ತಿದೆ . ಇಂಧು ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಜಲಮಂಡಳಿ ಹಾಗೂ ಬಿಬಿಎಂಪಿ ಸೇರಿದಂತೆ ವಿವಿಧ ಸರಕಾರಿ ಇಲಾಖೆಗಳಿಂದ ಬಾಕಿ ಇರುವ ಸುಮಾರು 236 ಕೋಟಿ ರೂ. ಪಾವತಿಸುವಂತೆ ಬೆಸ್ಕಾಂ ನೋಟಿಸ್ ಜಾರಿ ಮಾಡಿದ್ದು, ಬಿಲ್ ಪಾವತಿಸದೇ ಇದ್ದರೆ ವಿದ್ಯುತ್ ಪೂರೈಕೆ ಕಡಿತ ಮಾಡುವುದಾಗಿ ಎಚ್ಚರಿಸಿದೆ. ಬೆಸ್ಕಾಂನ ಇಂದಿರಾನಗರ, ಕೋರಮಂಗಲ, ಶಿವಾಜಿನಗರ, ಮಲ್ಲೇಶ್ವರಂ ಮತ್ತು ವೈಟ್ ಫೀಲ್ಡ್ ವಿಭಾಗಗಳಿಗೆ (ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಲಿ) ಬಿಡ್ಲ್ಯೂಎಸ್‍ಎಸ್‍ಬಿ ಮತ್ತು ಬಿಬಿಎಂಪಿ ನೀರು ಸರಬರಾಜು ವಿಭಾಗ ಸೇರಿ ಮತ್ತಿತರ ಸರ್ಕಾರಿ ಕಚೇರಿಗಳು 236 ಕೋಟಿ ರೂ.ಗಳಿಗೂ ಅಧಿಕ ವಿದ್ಯುತ್ ಶುಲ್ಕ ಬಾಕಿ ಇರಿಸಿಕೊಂಡಿದೆ. ಬೆಸ್ಕಾಂನ 5 ವಿಭಾಗಗಳೂ ಬಿಡ್ಲ್ಯೂಎಸ್‍ಎಸ್‍ಬಿ ಮತ್ತು ಬಿಬಿಎಂಪಿಗೆ ಬಿಲ್ ಪಾವತಿಸಲು ಕೋರಿ ಪ್ರತ್ಯೇಕ ನೋಟಿಸ್ ಜಾರಿ ಮಾಡಿದ್ದು, ಬಿಲ್ ಪಾವತಿಗೆ ಗಡುವು ನೀಡಿದೆ. ಬೆಸ್ಕಾಂನ ಶಿವಾಜಿನಗರ ವಿಭಾಗಗಳ ವ್ಯಾಪ್ತಿಗೆ ಬರುವ ಪಿಳ್ಳಣ್ಣ ಗಾರ್ಡ್‍ನ್, ಬಂಬೂ ಬಜಾರ್, ಕಾಕ್ಸ್ ಟೌನ್, ಬಾಣಸವಾಡಿ ಮತ್ತು ನಾಗವಾರ ಉಪ ವಿಭಾಗಗಳಿಗೆ ಬಿಡ್ಲ್ಯೂಎಸ್‍ಎಸ್‍ಬಿ ಮತ್ತು ಬಿಬಿಎಂಪಿ ನೀರು ಸರಬರಾಜು ವಿಭಾಗ ಕ್ರಮವಾಗಿ 27.54…

Read More

ಬಿಹಾರದ ಖಗಾರಿಯಾ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಅರಿವಳಿಕೆ ನೀಡದೆ 23 ಮಹಿಳೆಯರಿಗೆ ಆಪರೇಷನ್ ಮಾಡಿದ್ದಾರೆ. ಖಗಾರಿಯಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರು ಅಲೌಲಿ ಬ್ಲಾಕ್‌ನಲ್ಲಿರುವ ಪಿಎಚ್‌ಸಿಯಲ್ಲಿ ನಡೆದ ಘಟನೆಯ ಕುರಿತು ತನಿಖೆಗೆ ಆದೇಶಿಸಿದ್ದಾರೆ ಮತ್ತು ಸಿವಿಲ್ ಸರ್ಜನ್‌ಗೆ ತನಿಖೆಯನ್ನು ಶೀಘ್ರ ಪೂರ್ಣಗೊಳಿಸಲು ಸೂಚಿಸಿದ್ದಾರೆ. ಗರ್ಭಧಾರಣೆಯನ್ನು ತಡೆಯುವ ಟ್ಯೂಬೆಕ್ಟಮಿ ಮಾಡಲು ಮೊದಲು ಹೊಟ್ಟೆಯನ್ನು ತೆರೆಯಬೇಕು ಮತ್ತು ಫಾಲೋಪಿಯನ್ ಟ್ಯೂಬ್‌ಗಳನ್ನು ಬಹಿರಂಗಪಡಿಸಬೇಕು. ಅಂಡಾಶಯದಲ್ಲಿ ಮೊಟ್ಟೆಯ ಹಾದಿಯನ್ನು ಮುಚ್ಚಲು ಅವುಗಳನ್ನು ನೈಲಾನ್ ದಾರದಿಂದ ಕಟ್ಟಲಾಗುತ್ತದೆ. ಬಿಹಾರದಲ್ಲಿ ಈ ಶಸ್ತ್ರಚಿಕಿತ್ಸೆಯನ್ನು ಮಹಿಳೆಯರಿಗೆ ಅರಿವಳಿಕೆ ನೀಡದೆ ಮಾಡಲಾಗಿದೆ. ಟ್ಯೂಬೆಕ್ಟಮಿ ಕಾರ್ಯವಿಧಾನವು ಫಾಲೋಪಿಯನ್ ಟ್ಯೂಬ್‌ಗಳ ಶಸ್ತ್ರಚಿಕಿತ್ಸೆಯ ಕ್ಲಿಪಿಂಗ್ ಅನ್ನು ಒಳಗೊಂಡಿರುತ್ತದೆ. ಖಾಸಗಿ ಸಂಸ್ಥೆಯು ನಡೆಸುತ್ತಿರುವ ಸರ್ಕಾರಿ ಪ್ರಾಯೋಜಿತ ಅಭಿಯಾನದ ಭಾಗವಾಗಿ ಮಹಿಳೆಯರು ಆಸ್ಪತ್ರೆಗೆ ಆಗಮಿಸಿದ್ದರು ಎಂದು ತಿಳಿದು ಬಂದಿದೆ. ಸಿಬ್ಬಂದಿ ಕೈ, ಕಾಲುಗಳನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದರು. ಅಸಹನೀಯ ನೋವನ್ನು ಅನುಭವಿಸಿದೆ, ಭಯಾನಕ ಘಟನೆಯನ್ನು ನಾನು ನೆನಪಿಸಿಕೊಳ್ಳಲು ಬಯಸುವುದಿಲ್ಲ. ನಾನು ನೋವಿನಿಂದ ಕಿರುಚುತ್ತಿದ್ದೆ, ವೈದ್ಯರು ಕೆಲಸವನ್ನು…

Read More

ರಾತ್ರಿ ಊಟ ಸೇವಿಸಿದ ಬಳಿಕ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 26 ವಿದ್ಯಾರ್ಥಿನೀಯರು ಅಸ್ವಸ್ಥರಾಗಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಚಿಕ್ಕಮಗಳೂರು ಜಿಲ್ಲೆ ತರೀಕೆರೆ ಪಟ್ಟಣದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ರಾತ್ರಿ ಊಟ ಸೇವಿಸಿದ ಬಳಿಕ 26 ವಿದ್ಯಾರ್ಥಿನೀಯರು ಅಸ್ವಸ್ಥರಾಗಿದ್ದು ಇವರನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಳಪೆ ಗುಣಮಟ್ಟ ಆಹಾರ ಸೇವನೆಯಿಂದ ಅಸ್ವಸ್ಥರಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲು ಸೇರಿರುವ ಆಮ್ ಆದ್ಮಿ ಪಕ್ಷದ ಸಚಿವ ಸತ್ಯೇಂದ್ರ ಜೈನ್ ತಿಹಾರ್ ಜೈಲಿನಲ್ಲಿ ಮಸಾಜ್ ಮಾಡಿಸಿಕೊಳ್ಳುತ್ತಿರುವ ವಿಡಿಯೋವನ್ನು ಬಿಜೆಪಿ ಬಿಡುಗಡೆ ಮಾಡಿದೆ. ಸತ್ಯೇಂದ್ರ ಜೈನ್‌ಗೆ ವಿಐಪಿ ಟ್ರೀಟ್​ಮೆಂಟ್ ನೀಡಿದ್ದಕ್ಕಾಗಿ ತಿಹಾರ್ ಜೈಲಿನ ಸೂಪರಿಂಟೆಂಡೆಂಟ್ ಅಜಿತ್ ಕುಮಾರ್ ಅವರನ್ನು ಅಮಾನತುಗೊಳಿಸಿದ ಕೆಲವು ದಿನಗಳ ನಂತರ ಇದೀಗ ಬಿಜೆಪಿ ಹಳೆಯ ವಿಡಿಯೋವೊಂದನ್ನು ಬಿಡುಗಡೆ ಮಾಡಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ಸತ್ಯೇಂದ್ರ ಜೈನ್‌ಗೆ ತಿಹಾರ್ ಜೈಲಿನಲ್ಲಿ ವಿಐಪಿ ಚಿಕಿತ್ಸೆ ನೀಡಲಾಗಿದ್ದು, ತಲೆಗೆ ಮಸಾಜ್, ಪಾದಕ್ಕೆ ಮಸಾಜ್ ಮತ್ತು ಬೆನ್ನಿಗೆ ಮಸಾಜ್‌ ಮಾಡುತ್ತಿರುವುದನ್ನು ಸಿಸಿಟಿವಿಯ ವಿಡಿಯೋದಲ್ಲಿ ನೋಡಬಹುದು. ಆಪ್ ದೆಹಲಿ ಸಚಿವರಿಗೆ ಜೈಲಿನಲ್ಲಿ ಐಷಾರಾಮಿ ವ್ಯಸ್ಥೆ ಕಲ್ಪಿಸಿಕೊಟ್ಟಿರುವುದಕ್ಕೆ ಸಂಬಂಧಿಸಿದ ಪುರಾವೆಗಳನ್ನು ಇಡಿ ಈಗಾಗಲೇ ನ್ಯಾಯಾಲಯಕ್ಕೆ ಸಲ್ಲಿಸಿದೆ. 58 ವರ್ಷದ ದೆಹಲಿ ಸರ್ಕಾರದ ಸಚಿವ ಸತ್ಯೇಂದ್ರ ಜೈನ್ ಅವರನ್ನು ಮೇ 30ರಂದು ಬಂಧಿಸಲಾಗಿತ್ತು. ಈ ವಿಡಿಯೋವನ್ನು ಟ್ವೀಟ್ ಮಾಡಿರುವ ಬಿಜೆಪಿ, “ಜೈಲಿನಲ್ಲಿ ವಿವಿಐಪಿ ಚಿಕಿತ್ಸೆ! ಕೇಜ್ರಿವಾಲ್ ಇಂತಹ ಮಂತ್ರಿಯನ್ನು…

Read More

ಜಮ್ಮು ಕಾಶ್ಮೀರದ ಕುಪ್ವಾರಾದಲ್ಲಿ ಸಂಭವಿಸಿದ ಹಿಮಪಾತದಿಂದ ಮೂವರು ಯೋಧರು ಮೃತಪಟ್ಟಿದ್ದು, ಹಲವಾರು ಮಂದಿ ನಾಪತ್ತೆಯಾಗಿದ್ದಾರೆ. ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿನ ಮಚಿಲ್ ಸೆಕ್ಟರ್ ಬಳಿ ಹಿಮಪಾತ ಸಂಭವಿಸಿದ್ದು, ಮೂವರು ಯೋಧರ ಮೃತದೇಹ ಪತ್ತೆಹಚ್ಚಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಲೈಂಗಿಕ ದೌರ್ಜನ್ಯ ಎಸಗಿ ಒಂದು ವರುಷದ ಮಗುವನ್ನು ಕೊಲೆ ಮಾಡಿದ ಅಪರಾಧಿ ಯಶವಂತಪುರದ ನಿವಾಸಿ ಮೂರ್ತಿ ಅಲಿಯಾಸ್‌ ಹಲ್ಲುಜ್ಜನಿಗೆ (25) ತ್ವರಿತಗತಿಯ ವಿಶೇಷ ನ್ಯಾಯಾಲಯವು (ಎಫ್‌ಟಿಎಸ್‌ಸಿ) ಮರಣ ದಂಡನೆ ವಿಧಿಸಿದೆ. ಮೃತ ಮಗುವಿನ ಕುಟುಂಬಕ್ಕೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ (ಡಿಎಲ್‌ಎಸ್‌ಎ) 5 ಲಕ್ಷ ಪರಿಹಾರ ನೀಡುವಂತೆಯೂ ನ್ಯಾಯಾಧೀಶೆ ಕೆ.ಎನ್‌.ರೂಪಾ ಆದೇಶಿಸಿದ್ದಾರೆ. ಘಟನೆ ನಡೆದ ಮರು ದಿನವೇ ರಾಜಗೋಪಾಲನಗರ ಠಾಣೆಯ ಪೊಲೀಸರು ಅಪರಾಧಿಯನ್ನು ಬಂಧಿಸಿದ್ದರು. ಆಗ ಅಪರಾಧಿಗೆ 18 ವರ್ಷವಾಗಿತ್ತು. ಅಪರಾಧಿ ಮೂರ್ತಿ ಕೊಲೆಯಾದ ಮಗುವಿನ ತಂದೆಯ ಪರಿಚಯಸ್ಥ. 2015ರ ಸೆ.12ರಂದು ಮಧ್ಯಾಹ್ನ ಉಲ್ಲಾಸ್ ಚಿತ್ರಮಂದಿರದ ಬಳಿ ಮಗುವಿನ ತಂದೆಗೆ ಮೂರ್ತಿ ಸಿಕ್ಕಿದ್ದ. ಮಗುವಿಗೆ ತಿಂಡಿ ಕೊಡಿಸಲು ಮೂವರು ರಾಜಗೋಪಾಲ ನಗರದ ಮುಖ್ಯರಸ್ತೆಗೆ ತೆರಳಿದ್ದರು. ತಿಂಡಿ ತರುವವರೆಗೆ ಮಗುವನ್ನು ನೋಡಿಕೊಳ್ಳುವಂತೆ ಮೂರ್ತಿಗೆ ತಿಳಿಸಿದ್ದ ತಂದೆ ರಸ್ತೆಯ ಪಕ್ಕದಲ್ಲೇ ನಿಲ್ಲಿಸಿದ್ದರು. ತಿಂಡಿ ತರುವಷ್ಟರಲ್ಲಿ ಮಗುವನ್ನು ಮೂರ್ತಿ ಕರೆದೊಯ್ದಿದ್ದ. ಆಟೊದಲ್ಲಿ ಗೊರಗುಂಟೆಪಾಳ್ಯದ ಏರ್‌ಫೋರ್ಸ್‌ನ ಮುಖ್ಯ ಎಂಜಿನಿಯರ್‌ಕಚೇರಿಯ ನಿರ್ಜನ ಪ್ರದೇಶಕ್ಕೆ ಮಗುವನ್ನು ಕರೆದೊಯ್ದು ಬಾಯಿ ಮುಚ್ಚಿ…

Read More