Author: admin

ವೋಟರ್ ಐಡಿ ಪರಿಷ್ಕರಣೆಯಲ್ಲಿ ಅಕ್ರಮ ನಡೆದಿದ್ದು ಎಂದು ಆರೋಪಿಸಿದ್ದ ಕಾಂಗ್ರೆಸ್ ನಾಯಕರಿಗೆ ಸಚಿವ ಅಶ್ವಥ್ ನಾರಾಯಣ್ ತಿರುಗೇಟು ನೀಡಿದ್ದಾರೆ. ಈ ಕುರಿತು ಸುದ್ಧಿಗೋಷ್ಠಿ ನಡೆಸಿ ಮಾತನಾಡಿ ಸ್ಪಷ್ಟನೆ ನೀಡಿರುವ ಸಚಿವ ಅಶ್ವತ್ ನಾರಾಯಣ್, ಕಾಂಗ್ರೆಸ್ ನಿಂದ ಸುಳ್ಳು, ಆಧಾರ ರಹಿತ ಆರೋಪ. ಈ ಸಂಸ್ಥೆಗಳಿಗೂ ಸರ್ಕಾರಕ್ಕೂ ಯಾವುದೇ ಸಂಬಂಧ ಇಲ್ಲ. ಕೈ ನಾಯಕರು ಏನೋ ಹೇಳಿಕೆ ಕೊಡಬೇಕಿತ್ತು ಕೊಟ್ಟಿದ್ದಾರೆ. ಯಾರು ಏನು ತಪ್ಪು ಮಾಡಿದ್ದಾರೋ ಗೊತ್ತಿಲ್ಲ. ಯಾರೇ ತಪ್ಪು ಮಾಡಿದ್ದರೇ ತಪ್ಪು ತಪ್ಪೇ ಈ ರೀತಿ ಸರ್ವೆ ಚುನಾವಣಾ ಆಯೋಗದ ಅಡಿ ನಡೆಯುತ್ತೆ ಎಂದರು. ಕಾಂಗ್ರೆಸ್ ನಾಯಕರು ಭ್ರಷ್ಠಚಾರದಲ್ಲಿ ತುಂಬು ತುಳುಕಿದ್ದಾರೆ. ಈ ರೀತಿ ಆರೋಪ ಮಾಡಲು ಕಾಂಗ್ರೆಸ್ ನಾಯಕರಿಗೆ ನೈತಿಕತೆ ಇಲ್ಲ. ಹೊಂಬಾಳೆ ಸಂಸ್ಥೆ ಇದಕ್ಕೂ ಯಾವುದೇ ಸಂಬಂಧ ಇಲ್ಲ. ಇವರಂತೂ ಒಳ್ಳೆಯದು ಮಾಡಲ್ಲ. ಒಳ್ಳೆಯದನ್ನು ಮಾಡಲು ಬಿಡಲ್ಲ. ತನಿಖೆ ಮಾಡಿಸಲು ಹೇಳಲು ನಾವು ಯಾರು..? ಇದು ಚುನಾವಣಾ ಆಯೋಗಕ್ಕೆ ಸಂಬಂಧಿಸಿದ ವಿಚಾರ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ಹೋಗಿ…

Read More

ಈ ವರ್ಷ ಬಂಡೀಪುರ ಹುಲಿ ಮೀಸಲಿನ ರಾಜ್ಯದ ಮೊಟ್ಟ ಮೊದಲ ‘ಪ್ರಾಜೆಕ್ಟ್ ಟೈಗರ್’ಗೆ ಸುರ್ವಣ ಮಹೋತ್ಸವದ ಸಂಭ್ರಮವಾಗಿದೆ. ಈ 50 ವರ್ಷಗಳಲ್ಲಿ, ಈ ಯೋಜನೆಯು ಇಡೀ ದೇಶಕ್ಕೆ ಮಾದರಿಯಾಗಿ ವಿಕಸನಗೊಂಡಿದೆ. ೧೯೭೨ರಲ್ಲಿ ಹುಲಿಗಳ ಸಂತತಿಯನ್ನು ಸಂರಕ್ಷಿಸಲು ದೇಶದಾದ್ಯಂತ ಹುಲಿ ಮೀಸಲು ಪ್ರದೇಶಗಳಲ್ಲಿ ‘ಪ್ರಾಜೆಕ್ಟ್ ಟೈಗರ್’ ಯೋಜನೆಯನ್ನು ಅನುಷ್ಠಾನಗೊಳಿಸಲಾಯಿತು. ನವೆಂಬರ್ ೧೬, ೧೯೭೩ರಂದು ಕರ್ನಾಟಕದ ಅಂದಿನ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರು ಬಂಡೀಪುರದಲ್ಲಿ ಈ ‘ಪ್ರಾಜೆಕ್ಟ್ ಟೈಗರ್’ ಗೆ ಚಾಲನೆ ನೀಡಿದ್ದರು. ಈ ಯೋಜನೆಯ ಉದ್ಘಾಟನೆಯ ಸಮಯದಲ್ಲಿ ಬಂಡೀಪುರದಲ್ಲಿ ಕೇವಲ ೧೨ ಹುಲಿಗಳಿದ್ದವು. ೨೦೨೦ರಲ್ಲಿ ನಡೆಸಿದಂತಹ ಹುಲಿಗಳ ಗಣತಿಯ ಪ್ರಕಾರ ಪ್ರಸ್ತುತ ಬಂಡೀಪುರ ಇಡೀ ದೇಶದಲ್ಲಿಯೇ ಎರಡನೇ ಅತೀ ಹೆಚ್ಚಿನ, ಅಂದರೆ ೧೪೩ ಹುಲಿಗಳು ಹಾಗೂ ೨೦೦ ಚಿರತೆಗಳನ್ನು ಹೊಂದಿರುವ ಮೀಸಲು ಪ್ರದೇಶವಾಗಿ ರೂಪುಗೊಂಡಿದೆ. ಬಂಡೀಪುರದ ‘ಪ್ರಾಜೆಕ್ಟ್ ಟೈಗರ್’ನ ನಿರ್ದೇಶಕ ಡಾ. ರಮೇಶ್ ಕುಮಾರ್ ಅವರ ಪ್ರಕಾರ, ಬಂಡೀಪುರ ದೇಶದಲ್ಲಿಯೇ ಅತೀ ಹೆಚ್ಚಿನ ಸಂಖ್ಯೆಯ ಆನೆಗಳನ್ನು (೩,೦೪೬) ಹೊಂದಿವೆ. ಜೊತೆಗೆ ಇಲ್ಲಿ…

Read More

ಪೊಲೀಸ್ ವಿಚಾರಣೆಗೆ ಹೆದರಿ ತನ್ನ ಮೂರು ವರ್ಷದ ಮಗಳನ್ನು ಕೊಂದು ಟೆಕ್ಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದೆ. ಬೆಂಗಳೂರಿನ ಬಾಗಲೂರು ರಾಗಾ ಅಪಾರ್ಟ್ಮೆಂಟ್‌ನಲ್ಲಿ ವಾಸವಿದ್ದ ಗುಜರಾತ್ ಮೂಲದ ವ್ಯಕ್ತಿ ರಾಹುಲ್ ಹಾಗೂ ಮೂರು ವರ್ಷದ ಮಗು ಜಿಯಾ ಶವ ಕೋಲಾರ ತಾಲ್ಲೂಕು ಕೆಂದಟ್ಟಿ ಗ್ರಾಮದ ಕೆರೆಯಲ್ಲಿ ಕಳೆದ ರಾತ್ರಿ ಪತ್ತೆಯಾಗಿದೆ. ಕೆರೆಯ ದಡದಲ್ಲೇ ನೀಲಿ ಬಣ್ಣದ I-20 ಕಾರು ಸಹ ಪತ್ತೆಯಾಗಿದೆ. ಇದರಿಂದ ಅನುಮಾನಗೊಂಡ ಸ್ಥಳೀಯರು ಕೋಲಾರ ಗ್ರಾಮಾಂತರ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಪರಿಶೀಲನೆ ನಡೆಸಿದಾಗ ತಂದೆ-ಮಗಳ ಶವ ಪತ್ತೆಯಾಗಿದೆ. ಸ್ಥಳಕ್ಕೆ ಬಂದ ಪತ್ನಿ ಭವ್ಯ, ಪತಿ ಹಾಗೂ ಮಗು ಜಿಯಾಳನ್ನು ಗುರುತಿಸಿದ್ದಾರೆ. ಬುಧವಾರ ಬೆಳಗ್ಗೆ ಮಗುವನ್ನು ಶಾಲೆಗೆ ಬಿಟ್ಟು ಬರೋದಾಗಿ ರಾಹುಲ್ ಹೇಳಿ ಹೋಗಿದ್ದರು. ಬಳಿಕ ಫೋನ್ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. 2-3 ವರ್ಷಗಳ ಹಿಂದೆಯಷ್ಟೇ ರಾಹುಲ್ – ಭವ್ಯ ದಂಪತಿ ಗುಜರಾತ್‌ನಿಂದ (Gujarat) ಬೆಂಗಳೂರಿನಲ್ಲಿ ಬಂದು ನೆಲೆಸಿದ್ದರು. ಕಳೆದ 6 ತಿಂಗಳಿನಿಂದ ರಾಹುಲ್ ಕೆಲಸವಿಲ್ಲದೆ…

Read More

ಕಲಾಮಂದಿರ, ವರಮಹಾಲಕ್ಷ್ಮಿ ಸಿಲ್ಕ್ಸ್, ಕೆಎಲ್‍ಎಂ ಫ್ಯಾಷನ್ ಮಾಲ್‍ನ ಮಾತೃಸಂಸ್ಥೆ ಸಾಯಿ ಸಿಲ್ಕ್ಸ್ ಕಲಾಮಂದಿರ ಐಪಿಓ ಮೂಲಕ ನಿಧಿಯನ್ನು ಸಂಗ್ರಹಿಸಲು ಸೆಬಿ ಅನುಮತಿಯನ್ನು ಪಡೆದಿದೆ. ಕಂಪನಿಯು ರೂ. 1200 ಕೋಟಿಯನ್ನು ಮಾರುಕಟ್ಟೆಯಿಂದ ಸಂಗ್ರಹಿಸುವ ಸಲುವಾಗಿ 2022ರ ಜುಲೈ ಮಧ್ಯಭಾಗದಲ್ಲಿ ಡಿಆರ್‌ಎಚ್‌ಪಿ ಸಲ್ಲಿಸಿತ್ತು. ಎಸ್‍ಎಸ್‍ಎಲ್‍ಕೆ ದಕ್ಷಿಣ ಭಾರತದಲ್ಲಿ ಮಹಿಳೆಯರ ಉಡುಗೆಗಳ ಮುಖ್ಯವಾಗಿ ಸೀರೆಗಳ ಅತಿ ದೊಡ್ಡ ಚಿಲ್ಲರೆ ವ್ಯಾಪಾರಿಗಳಲ್ಲಿ ಒಂದಾಗಿದೆ.ವೈವಿಧ್ಯಮಯ ಉಡುಗೆ ಉತ್ಪನ್ನಗಳ ಮೂಲಕ ಭಾರತದ ವಿಶಿಷ್ಟ ಸಂಸ್ಕೃತಿ, ಸಂಪ್ರದಾಯಗಳು ಮತ್ತು ಪರಂಪರೆಯನ್ನು ಹರಡುವ ಎಸ್‍ಎಸ್‍ಕೆಎಲ್ ನಾಲ್ಕು ವಿಭಿನ್ನ ಸ್ವರೂಪದ ಮಳಿಗೆಗಳಾದ ಕಲಾಮಂದಿರ, ಮಂದಿರ, ವರಮಹಾಲಕ್ಷ್ಮಿ ಸಿಲ್ಕ್ಸ್ ಮತ್ತು ಕೆಎಲ್‍ಎಂ ಫ್ಯಾಶನ್ ಮಾಲ್ ಮತ್ತು ಇ-ಕಾಮರ್ಸ್ ಚಾನೆಲ್‍ಗಳ ಮೂಲಕ ಕಾರ್ಯನಿರ್ವಹಿಸುತ್ತದೆ. ತನ್ನದೇ ಆದ ವೆಬ್‍ಸೈಟ್ ಮತ್ತು ಇತರ ಆನ್‍ಲೈನ್ ಇ- ಕಾಮರ್ಸ್ ಮಾರುಕಟ್ಟೆ ಸ್ಥಳಗಳನ್ನು ಒಳಗೊಂಡಿದೆ. ಎಥ್ನಿಕ್ ವೇರ್ ಮಾರಾಟದಲ್ಲಿ ತನ್ನ ಅನುಭವವನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ, ಎಸ್‍ಎಸ್‍ಕೆಎಲ್ ತನ್ನ ಮಳಿಗೆಗಳ ಶ್ರೇಣಿಯನ್ನು ನಾಲ್ಕು ಫಾಮ್ರ್ಯಾಟ್‍ಗಳಿಗೆ ವಿಸ್ತರಿಸಿದೆ, ಪ್ರತಿಯೊಂದೂ ಆಯಾ ಗುರಿಯ ವಿಭಾಗಗಳಿಗೆ ವಿವಿಧ ಉತ್ಪನ್ನಗಳನ್ನು…

Read More

ಖಾಸಗಿ ಎನ್‌ಜಿಒ ಚಿಲುಮೆ ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ವಿರುದ್ಧ ಮತದಾರರ ಪಟ್ಟಿ ನವೀಕರಣ ಕಾರ್ಯಾಚರಣೆಗೆ ಬಿಬಿಎಂಪಿ ನೀಡಿದ್ದ ಆದೇಶ ದುರುಪಯೋಗದ ಆರೋಪ ಕೇಳಿ ಬಂದಿದೆ. ಖಾಸಗಿ ಎನ್‌ಜಿಒ ಚಿಲುಮೆ ತಮ್ಮ ಏಜೆಂಟರನ್ನು ಸರ್ಕಾರಿ ಅಧಿಕಾರಿಗಳಂತೆ ಬಿಂಬಿಸಿ ರಹಸ್ಯವಾಗಿ ಮತದಾರರ ವೈಯಕ್ತಿಕ, ಸೂಕ್ಷ್ಮ ಮಾಹಿತಿ‌ಗಳನ್ನು ಸಂಗ್ರಹಿಸಿದೆಎಂಬ ಆರೋಪ ಕೇಳಿ ಬಂದಿದೆ. ಹಲವು ತಿಂಗಳಿಂದ ಈ ಅಕ್ರಮ ಸರ್ವೆ ನಡೆದಿದೆ ಎನ್ನಲಾಗುತ್ತಿದೆ. ಕರ್ನಾಟಕ ವಿಧಾನಸಭಾ ಚುನಾವಣೆಗೆ ಮುನ್ನ ಮತದಾರರ ಪಟ್ಟಿಯನ್ನು ಪರಿಷ್ಕರಿಸಲು ಚುನಾವಣಾ ಆಯೋಗದ ವಿಶೇಷ ಮತದಾರರ ಜಾಗೃತಿ ಅಭಿಯಾನ ನಡೆಸಲು ಚಿಲುಮೆ ಸಂಸ್ಥೆಗೆ ಬಿಬಿಎಂಪಿ ಅನುಮತಿ ನೀಡಿತ್ತು. ಆದರೆ ಚಿಲುಮೆ ಸಂಸ್ಥೆ ಆದೇಶವನ್ನು ದುರುಪಯೋಗಪಡಿಸಿಕೊಂಡಿದೆ. ನೂರಾರು ಏಜೆಂಟರಿಗೆ ನಕಲಿ ಐಡಿ-ಕಾರ್ಡ್‌ಗಳನ್ನು ನೀಡಿದೆ ಎನ್ನಲಾಗಿದ್ದು ಆ ಐಡಿ ಕಾರ್ಡುಗಳಲ್ಲಿ ಏಜೆಂಟರನ್ನ ಬಿಬಿಎಂಪಿಯ ಬೂತ್ ಮಟ್ಟದ ಅಧಿಕಾರಿಗಳು ಎಂದು ಉಲ್ಲೇಖಿಸಲಾಗಿದೆ ಎಂಬ ದೂರುಗಳು ಕೇಳಿ ಬಂದಿವೆ. ಬಿಎಲ್‌ಒ ಆಗಬೇಕಾದ್ರೆ ಅವರು ಸರ್ಕಾರಿ, ಅರೆ-ಸರ್ಕಾರಿ ಅಥವಾ ನಿವೃತ್ತ ಸರ್ಕಾರಿ ನೌಕರರಾಗಿರಬೇಕು. ಬಿಎಲ್‌ಒಗಳು ತಮ್ಮನ್ನು ನಿಯೋಜಿಸಲಾದ…

Read More

ಪ್ರಿಯಕರನೊಬ್ಬ ಪ್ರೇಯಸಿ ಜತೆ ಏಕಾಂತದಲ್ಲಿದ್ದಾಗ ದಿಢೀರನೇ ಬಂದ ಆಕೆಯ ಪತಿಯಿಂದ ತಪ್ಪಿಸಿಕೊಳ್ಳಲು ಸಾರ್ವಜನಿಕ ಪ್ರವೇಶ ನಿಷೇಧಿತ ಎಚ್‌ಎಎಲ್‌ ವಿಮಾನ ನಿಲ್ದಾಣ ಆವರಣಕ್ಕೆ ನುಗ್ಗಿ ಈಗ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾನೆ. ಅಸ್ಸಾಂ ಮೂಲದ ಮುಕುಂದ ಖೌಂದ್‌ (36) ಬಂಧಿತನಾಗಿದ್ದು, ಕೆಂಪೇಗೌಡ ಪ್ರತಿಮೆ ಅನಾವರಣಕ್ಕೆ ಪ್ರಧಾನಿ ಆಗಮನದ ಹಿಂದಿನ ದಿನ ಈ ಘಟನೆ ನಡೆದಿದ್ದು, ಪ್ರಧಾನಿ ಕಾರ್ಯಕ್ರಮದ ವೇಳೆ ಯಾವುದೇ ಭದ್ರತಾ ಲೋಪವಾಗಿಲ್ಲ ಎಂದು ವೈಟ್‌ಫೀಲ್ಡ್‌ ಡಿಸಿಪಿ ಎಸ್‌.ಗಿರೀಶ್‌ ತಿಳಿಸಿದ್ದಾರೆ. ಎಚ್‌ಎಎಲ್‌ ಸಮೀಪದ ಯಮಲೂರಿನಲ್ಲಿ ಬಿಪುಲ್‌ ದೌಲಿ ಹಾಗೂ ಪೂರ್ವಿ ದೌಲಿ ದಂಪತಿ ವಾಸವಾಗಿದ್ದರು. ಆರೋಪಿಯು ಪ್ರಿಯತಮೆ ಪೂರ್ವಿ ಭೇಟಿಗೆ ನ.9ರಂದು ಅಸ್ಸಾಂ ನಿಂದ ಆಗಮಿಸಿ ಆಕೆಯ ಮನೆಯಲ್ಲಿದ್ದ. ಆ ಸಮಯದಲ್ಲೇ ಆಕೆಯ ಪತಿ ಮನೆಗೆ ಬಂದಿದ್ದಾನೆ. ಭಯಗೊಂಡ ಪ್ರಿಯಕರ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಕುಡಿದ ಮತ್ತಿನಲ್ಲಿದ್ದ ಇಬ್ಬರ ಮಧ್ಯೆ ಜಗಳವಾಗಿದೆ. ಕೊನೆಗೆ ಆರೋಪಿ ಅಲ್ಲಿಂದ ತಪ್ಪಿಸಿಕೊಂಡು ಯಮಲೂರಿನ ಹತ್ತಿರದ ಎಚ್‌ಎಎಲ್‌ ವಿಮಾನ ನಿಲ್ದಾಣದ ಆವರಣದ ಗೋಡೆ ಜಿಗಿದು ನುಗ್ಗಿದ್ದಾನೆ. ಎಚ್‌ಎಎಲ್‌ ವಿಮಾನ ನಿಲ್ದಾಣದ…

Read More

ಮತದಾರರ ಮಾಹಿತಿ ಕಳ್ಳತನ ಪ್ರಕರಣದ ಹಿಂದೆ ಸಿಎಂ ಬಸವರಾಜ ಬೊಮ್ಮಾಯಿ ಇದ್ದಾರೆ, ಹೀಗಾಗಿ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ. ಎನ್‌ಜಿ ಚಿಲುಮೆಗೆ 20-08-2022ರಲ್ಲಿ ಬಿಬಿಎಂಪಿ ಮತದಾರರ ಪಟ್ಟಿ ಪರಿಷ್ಕರಣೆ ಆದೇಶ ನೀಡಿದ್ದರು. ಇದೊಂದು ಸಿಎಂ ಮತ್ತು ಬಿಬಿಎಂಪಿ ಎಲೆಕ್ಷನ್ ಕಮಿಷನರ್ ಸೇರಿ ಮಾಡಿದ ಸಂಚು ಅನಿಸುತ್ತದೆ. ಜಾಹೀರಾತು ನೀಡದೆ ಖಾಸಗಿ ಕಂಪನಿಗೆ ಮತದಾರರ ಪಟ್ಟಿ ಸಂಸ್ಕರಣೆ ಮಾಡಿ ಡಿಲಿಷನ್ ಅಡಿಷನ್ ಮಾಡ್ತಾರೆ. ಚಿಲುಮೆ ಸಂಸ್ಥೆಯವರಿಗೆ ಅನುಭವವೂ ಇಲ್ಲ. ಬೂತ್ ಲೆವೆಲ್ ಆಫೀಸರ್ ಅಂತ ಅವರಿಗೆ ಐಡಿ ಕಾರ್ಡ್ ನೀಡಿದ್ದಾರೆ. ಪೀಪಲ್ಸ್ ರೆಪ್ರೆಸೆಂಟೇಷನ್ ಆ್ಯಕ್ಟ್ ಪ್ರಕಾರ ಸರ್ಕಾರಿ ನೌಕರರು ಅಲ್ಲದಿರುವವರು ಯಾರೂ ಬಿಎಲ್ಓ ಆಗುವುದಕ್ಕೆ ಸಾಧ್ಯವಿಲ್ಲ. ಈ ಕೃಷ್ಣಪ್ಪ ರವಿಕುಮಾರ್ ಅಕ್ರಮವಾಗಿ ಐಡಿ ಕಾರ್ಡ್ ಕೊಟ್ಟು ನೇಮಕ ಮಾಡಿಕೊಂಡಿದ್ದಾರೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಭ್ರಷ್ಟಾಚಾರ ಕೇವಲ ಗುತ್ತಿಗೆದಾರರ ವಿಷಯದಲ್ಲಿ ಮಾತ್ರ ನಡೆಯುತ್ತಿಲ್ಲ. ಚುನಾವಣೆಯನ್ನು ವಾಮ ಮಾರ್ಗದಲ್ಲಿ ಗೆಲ್ಲಬೇಕು ಅಂತ ಬೊಮ್ಮಾಯಿ ಏನೆಲ್ಲ ಆಟ…

Read More

ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಇಂದು ಮಹತ್ವದ ಸಂಪುಟ ಸಭೆ ನಡೆಯಲಿದ್ದು, ಸಂಜೆ 4 ಗಂಟೆಗೆ ಮುಖ್ಯಮಂತ್ರಿ ಬೊಮ್ಮಾಯಿ ಸಂಪುಟ ಸಭೆ ನಡೆಸಲಿದ್ಧಾರೆ. ಹಲವು ಮಹತ್ವದ ನಿರ್ಧಾರ ಮಾಡುವ ಸಂಪುಟ ಸಭೆಯಾಗಿದೆ. ಎಸಿ ಎಸ್ಟಿ ಮೀಸಲು ಹೆಚ್ಚಳ ಅನುಷ್ಠಾನ ಸಂಬಂಧ ನಿರ್ಧಾರ ಹಾಗೂ ಬೆಂಗಳೂರು ಸಬ್​ ಅರ್ಬನ್​​​ ರೈಲು ಯೋಜನೆ ಕುರಿತು ಚರ್ಚೆ, ಬೆಳಗಾವಿ ಚಳಿಗಾಲದ ಅಧಿವೇಶನದ ಬಗ್ಗೆಯೂ ಸಮಾಲೋಚನೆ ಮತ್ತು ಹಿಂದುಳಿದ ವರ್ಗಗಳ ಆಯೋಗದ ಸಮಿತಿ ವರದಿ ಸಂಬಂಧವೂ ಚರ್ಚಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಕಲಬುರಗಿ: ಆಸ್ತಿ ವಿಚಾರಕ್ಕೆ ಯುವಕನೋರ್ವನನ್ನು ಹತ್ಯೆ ಮಾಡಲಾದ ಘಟನೆ ಜಿಲ್ಲೆಯ ಕಾಳಗಿ ಪೊಲೀಸ್ ಠಾಣೆ ವ್ಯಾಪ್ತಿಯ ಅರಣಕಲ್ ಕಿಣ್ಣಿ ತಾಂಡದಲ್ಲಿ ನಡೆದಿದೆ. ಅರಣಕಲ್ ಕಿಣ್ಣಿ ತಾಂಡದ ನಿವಾಸಿ 23 ವರ್ಷದ ಆನಂದ ಜೀವಲು ಸಾವಿಗೀಡಾದ ಯುವಕ.ಆಸ್ತಿ ವಿಚಾರವಾಗಿ ಘಟನೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಕಾಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು ತನಿಖೆ ನಡೆಯುತ್ತಿದೆ. ಕಲಬುರಗಿ ನಗರದ ರೋಜಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಿದ್ಯಾರ್ಥಿಯೋರ್ವನ ಮೇಲೆ ಹಾಡಹಗಲೇ ದಾಳಿ ನಡೆಸಿ, ಕೊಲೆ ಮಾಡಲಾಗಿತ್ತು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಬೆಳಗಾವಿ: ಹಿಂದೂ ಎನ್ನುವುದನ್ನು ಅಶ್ಲೀಲ ಎಂದು ಕರೆದಾಗ ತಕ್ಕ ಉತ್ತರ ಕೊಡಲೇಬೇಕಾಗಿತ್ತು. ನನ್ನ ವಯಕ್ತಿಕವಾಗಿ ಟೀಕೆ ಮಾಡಿದ್ರೆ ಸುಮ್ಮನಿರುತ್ತೇನೆ. ಜಾತಿ ಹಿಡಿದು ಟೀಕೆ ಮಾಡಿದ್ರೂ ಸಹ ಸುಮ್ಮನಿರುತ್ತೇನೆ. ಆದರೆ ಹಿಂದೂ ಧರ್ಮದ ಕುರಿತು ಮಾತಾಡಿದರೇ ಸುಮ್ಮನಿರಲ್ಲ, ತಾಕತ್ತಿದ್ದರೆ ಬಹಿರಂಗ ಚರ್ಚೆಗೆ ಬನ್ನಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿಗೆ ಚಕ್ರವರ್ತಿ ಸೂಲಿಬೆಲೆ ಸವಾಲ್ ಹಾಕಿದ್ದಾರೆ. ಹುಕ್ಕೇರಿ ತಾಲೂಕಿನ ಸತೀಶ್ ಜಾರಕಿಹೊಳಿ ಕ್ಷೇತ್ರ ಯಮಕನಮರಡಿಯಲ್ಲಿ ನಡೆದ ನಾನು ಹಿಂದೂ ಸಮಾವೇಶದಲ್ಲಿ ಮಾತನಾಡಿದ ಸೂಲಿಬೆಲೆ, ನನ್ನ ಧರ್ಮ ಮತ್ತು ತಾಯಿಯ ಬಗ್ಗೆ ಮಾತಾಡಿದವರ ಕ್ಷೇತ್ರಕ್ಕೆ ಹೋಗಬೇಕು ಅನಿಸಿತು. ಅದಕ್ಕೆ ಯಮಕನಮರಡಿಗೆ ಬಂದಿದ್ದೇನೆ. ಡಿಕ್ಷನರಿ ನೋಡಿಕೊಂಡು ಮಾತಾಡುವ ಪುಣ್ಯಾತ್ಮರಿಗೆ ಯಾವ ಡಿಕ್ಷನರಿ ಅಂತ ಮರೆತು ಹೋಗಿದೆ. ಹಿಂದೂ ಸಮಾಜ ತಿರುಗಿಬಿದ್ದರೇ ಏನಾಗುತ್ತೆ ಅನ್ನೋದು ಯಮಕನಮರಡಿಯಲ್ಲಿ ಪ್ರೂವ್ ಆಗಿದೆ ಎಂದು ವಾಗ್ದಾಳಿ ಮಾಡಿದರು. ಹಿಂದೂ ಈಗ ಜಾಗೃತನಾಗಿದ್ದಾನೆ, ಮೊದಲಿನಂತೆ ಇಲ್ಲ. ನಾನು ಕ್ರಿಶ್ಚಿಯನ್​ರು ಅನೇಕರ ಮತಾಂತರ ಮಾಡೋದನ್ನು ನೋಡಿದ್ದೇನೆ. ಹಿಂದೂ ಧರ್ಮ ಯಾರೂ ಯಾರನ್ನೂ ನಂಬಿ ಅಂತ…

Read More