ಕಲಾಮಂದಿರ, ವರಮಹಾಲಕ್ಷ್ಮಿ ಸಿಲ್ಕ್ಸ್, ಕೆಎಲ್‍ಎಂ ಫ್ಯಾಷನ್ ಮಾಲ್‍ನ ಮಾತೃಸಂಸ್ಥೆ ಸಾಯಿ ಸಿಲ್ಕ್ಸ್ ಕಲಾಮಂದಿರ ಐಪಿಓ ಮೂಲಕ ನಿಧಿಯನ್ನು ಸಂಗ್ರಹಿಸಲು ಸೆಬಿ ಅನುಮತಿಯನ್ನು ಪಡೆದಿದೆ. ಕಂಪನಿಯು ರೂ. 1200 ಕೋಟಿಯನ್ನು ಮಾರುಕಟ್ಟೆಯಿಂದ ಸಂಗ್ರಹಿಸುವ ಸಲುವಾಗಿ 2022ರ ಜುಲೈ ಮಧ್ಯಭಾಗದಲ್ಲಿ ಡಿಆರ್‌ಎಚ್‌ಪಿ ಸಲ್ಲಿಸಿತ್ತು.
ಎಸ್‍ಎಸ್‍ಎಲ್‍ಕೆ ದಕ್ಷಿಣ ಭಾರತದಲ್ಲಿ ಮಹಿಳೆಯರ ಉಡುಗೆಗಳ ಮುಖ್ಯವಾಗಿ ಸೀರೆಗಳ ಅತಿ ದೊಡ್ಡ ಚಿಲ್ಲರೆ ವ್ಯಾಪಾರಿಗಳಲ್ಲಿ ಒಂದಾಗಿದೆ.ವೈವಿಧ್ಯಮಯ ಉಡುಗೆ ಉತ್ಪನ್ನಗಳ ಮೂಲಕ ಭಾರತದ ವಿಶಿಷ್ಟ ಸಂಸ್ಕೃತಿ, ಸಂಪ್ರದಾಯಗಳು ಮತ್ತು ಪರಂಪರೆಯನ್ನು ಹರಡುವ ಎಸ್‍ಎಸ್‍ಕೆಎಲ್ ನಾಲ್ಕು ವಿಭಿನ್ನ ಸ್ವರೂಪದ ಮಳಿಗೆಗಳಾದ ಕಲಾಮಂದಿರ, ಮಂದಿರ, ವರಮಹಾಲಕ್ಷ್ಮಿ ಸಿಲ್ಕ್ಸ್ ಮತ್ತು ಕೆಎಲ್‍ಎಂ ಫ್ಯಾಶನ್ ಮಾಲ್ ಮತ್ತು ಇ-ಕಾಮರ್ಸ್ ಚಾನೆಲ್‍ಗಳ ಮೂಲಕ ಕಾರ್ಯನಿರ್ವಹಿಸುತ್ತದೆ. ತನ್ನದೇ ಆದ ವೆಬ್‍ಸೈಟ್ ಮತ್ತು ಇತರ ಆನ್‍ಲೈನ್ ಇ- ಕಾಮರ್ಸ್ ಮಾರುಕಟ್ಟೆ ಸ್ಥಳಗಳನ್ನು ಒಳಗೊಂಡಿದೆ.
ಎಥ್ನಿಕ್ ವೇರ್ ಮಾರಾಟದಲ್ಲಿ ತನ್ನ ಅನುಭವವನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ, ಎಸ್‍ಎಸ್‍ಕೆಎಲ್ ತನ್ನ ಮಳಿಗೆಗಳ ಶ್ರೇಣಿಯನ್ನು ನಾಲ್ಕು ಫಾಮ್ರ್ಯಾಟ್‍ಗಳಿಗೆ ವಿಸ್ತರಿಸಿದೆ, ಪ್ರತಿಯೊಂದೂ ಆಯಾ ಗುರಿಯ ವಿಭಾಗಗಳಿಗೆ ವಿವಿಧ ಉತ್ಪನ್ನಗಳನ್ನು ಒದಗಿಸುತ್ತಿದೆ ಮತ್ತು ವಿಭಿನ್ನ ಗುರಿ ವಿಭಾಗಗಳ ಬೇಡಿಕೆಯನ್ನು ಪೂರೈಸಲು ತನ್ನ ಉತ್ಪನ್ನ ಶ್ರೇಣಿಯನ್ನು ವಿಸ್ತರಿಸುವುದನ್ನು ಮುಂದುವರಿಸಿದೆ.
ಕಂಪನಿಯು 2022ನೇ ಹಣಕಾಸು ವರ್ಷದಲ್ಲಿ ರೂ. 1129 ಕೋಟಿ ಆದಾಯ ಮತ್ತು 21.22% ರಿಟರ್ನ್ಸ್ ಆನ್ ಈಕ್ವಿಟಿ ಮತ್ತು 21.71% ರ ರಿಟರ್ನ್ಸ್ ಆನ್ ಕ್ಯಾಪಿಟಲ್ ಎಂಪ್ಲಾಯ್ಡ್‍ನೊಂದಿಗೆ ರೂ. 57.69 ಕೋಟಿ ತೆರಿಗೆ ಬಳಿಕದ ಲಾಭವನ್ನು ಘೋಷಿಸಿದೆ. ಸಾಯಿ ಸಿಲ್ಕ್ಸ್ ಕಲಾಮಂದಿರವು ಐಪಿಓ ಮೂಲಕ ಹಣವನ್ನು ಸಂಗ್ರಹಿಸಲು ಮಾರುಕಟ್ಟೆಗಳನ್ನು ಟ್ಯಾಪ್ ಮಾಡಿದ ಮೊದಲ ದೊಡ್ಡ ಸೀರೆ ಚಿಲ್ಲರೆ ವ್ಯಾಪಾರಿಯಾಗಿದೆ. ಕಳೆದ ತಿಂಗಳು ಅಣ್ಣಾನಗರದಲ್ಲಿ ತನ್ನ 50ನೇ ಮಳಿಗೆಯನ್ನು ತೆರೆಯುವ ಮೂಲಕ ಕಂಪನಿಯು ಇತ್ತೀಚೆಗೆ 50 ಮಳಿಗೆಗಳ ಮೈಲಿಗಲ್ಲನ್ನು ತಲುಪಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy